ಕಾರ್ಕಳ
Karkala-Big Breaking: ಕಾರ್ಕಳ : ಅನುಮತಿ ಪಡೆಯದೆ ರಾತ್ರಿ 10ರ ನಂತರ ಯಕ್ಷಗಾನ ಪ್ರದರ್ಶನ : ತಡೆಯಲು ಬಂದ ಪೊಲೀಸರು : ಗ್ರಾಮಸ್ಥರಿಂದ ತೀವ್ರ ವಿರೋಧ
ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾರ್ಕಳ ಮುಂಡ್ಲಿ ಎಂಬಲ್ಲಿ ಅನುಮತಿ ಪಡೆಯದೇ ರಾತ್ರಿ 10 ಗಂಟೆಯ ಬಳಿಕ ನಡೆದ ಯಕ್ಷಗಾನ ಪ್ರದರ್ಶನಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಕಾರ್ಕಳ : ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾರ್ಕಳ ಮುಂಡ್ಲಿ ಎಂಬಲ್ಲಿ ಅನುಮತಿ ಪಡೆಯದೇ ರಾತ್ರಿ 10 ಗಂಟೆಯ ಬಳಿಕ ನಡೆದ ಯಕ್ಷಗಾನ ಪ್ರದರ್ಶನಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಮುಂಡ್ಲಿ ಗ್ರಾಮದಲ್ಲಿ ಶ್ರೀ ಈಶ್ವರ ಯಕ್ಷಗಾನ ಸಂಘದ ನೇತೃತ್ವದಲ್ಲಿ ಜ. 14ರಂದು ರಾತ್ರಿ ಯಕ್ಷಗಾನ ಪ್ರದರ್ಶನವಾಗುತ್ತಿತ್ತು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಅಜೆಕಾರು ಠಾಣಾ ಪೊಲೀಸರು ಧ್ವನಿವರ್ಧಕಕ್ಕೆ ಅನುಮತಿ ಪಡೆದಿಲ್ಲವಾದ್ದರಿಂದ ಯಕ್ಷಗಾನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.
ಗ್ರಾಮಸ್ಥರು ಪೊಲೀಸರ ವಿರುದ್ಧ ಈ ವೇಳೆ ಆಕ್ರೋಶಗೊಂಡಿದ್ದಾರೆ. ಪ್ರತಿಕ್ರಿಯಿಸಿದ ಪೊಲೀಸ್ ಉಪನಿರೀಕ್ಷಕ ಶುಭಕರ ಅವರು ನಾವು ಮೇಲಾಧಿಕಾರಿಗಳ ಆದೇಶದಂತೆ ಆಗಮಿಸಿದ್ದೇವೆ. ಧ್ವನಿವರ್ಧಕಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದಿಲ್ಲವಾದ್ದರಿಂದ ಯಕ್ಷಗಾನ ನಿಲ್ಲಿಸಬೇಕು ಎಂದರು. ಯಾವುದೇ ಗೊಂದಲವಿಲ್ಲದೆ ಸಾಮರಸ್ಯದಿಂದ ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಅಲ್ಲದೆ ಎಫ್‌ಐಆರ್ ಇಲ್ಲದೇ ಹೇಗೆ ನಿಲ್ಲಿಸುತ್ತೀರಿ ಎಂದು ಗ್ರಾಮಸ್ಥರು ಪೊಲೀಸರನ್ನು ಪ್ರಶ್ನಿಸಿದಾಗ ಎಫ್‌ಐಆರ್ ಮಾಡಿಕೊಂಡು ಬರುವುದಾಗಿ ಪೊಲೀಸರು ಸ್ಥಳದಿಂದ ನಿರ್ಗಮಿಸಿದ್ದಾರೆ.
ಎಲ್ಲರನ್ನೂ ಅರೆಸ್ಟ್ ಮಾಡಿಯೆಂದು ಸವಾಲು:
ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಯಕ್ಷಗಾನ ಮಂಡಳಿಯ ಅಧ್ಯಕ್ಷರನ್ನು ಅರೆಸ್ಟ್ ಮಾಡುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಅರೆಸ್ಟ್ ಮಾಡುವುದಾದರೆ ಅಧ್ಯಕ್ಷರೊಂದಿಗೆ ಗ್ರಾಮಸ್ಥರೆಲ್ಲರನ್ನೂ ಅರೆಸ್ಟ್ ಮಾಡಿಯೆಂದು ಸವಾಲು ಹಾಕಿದ ಘಟನೆಯೂ ನಡೆದಿದೆ.
ದೂರು ದಾಖಲು:
ಘಟನೆ ಸಂಬಂಧಿಸಿದಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನಲ್ಲಿ ಅಜೆಕಾರು ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ಶುಭಕರ ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಜಾರ್ಕಳ ಮುಂಡ್ಲಿ ಗ್ರಾಮದ ಗರಡಿ ಬಳಿ ಅನುಮತಿ ರಹಿತವಾಗಿ ಯಕ್ಷಗಾನ ನಡೆಸಲಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಿಂದ, ಪೊಲೀಸ್ ಇಲಾಖೆಯಿಂದ ಧ್ವನಿವರ್ಧಕಕ್ಕೆ ಪರವಾನಿಗೆ ಪಡೆದಿಲ್ಲ. ಶ್ರೀ ಈಶ್ವರ ಯಕ್ಷಗಾನ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ ಹಾಗೂ ಮಹಾಲಕ್ಷ್ಮೀ ಸೌಂಡ್ಸ್ ಮಾಲಕ ಅಪ್ಪು ಅವರು ಸೌಂಡ್ ಸಿಸ್ಟಂ ಬಳಸಿ ಅಪರಾಧವೆಸಗಿರುತ್ತಾರೆ ಎಂದು ದೂರು ದಾಖಲಿಸಿಕೊಳ್ಳಲಾಗಿದೆ.
ಗೊಂದಲ ಸೃಷ್ಠಿ:
ಯಕ್ಷಗಾನ ನಡೆಯುತ್ತಿದ್ದ ಸ್ಥಳಕ್ಕೆ ಸಂಜೆ ಸುಮಾರು 5.30ರ ವೇಳೆ ಪೊಲೀಸರು ಬಂದಿದ್ದ ವೇಳೆ ಯಕ್ಷಗಾನ ಪ್ರದರ್ಶನಕ್ಕೆ ಧ್ವನಿವರ್ಧಕದ ಅನುಮತಿ ಪಡೆದಿಲ್ಲವಾದ್ದರಿಂದ ಗ್ರಾಮಸ್ಥರು ಕಾರ್ಯಕ್ರಮ ನಡೆಸಲು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಗ್ರಾಮದ ಯಕ್ಷಗಾನ ಮಂಡಳಿಯ ಅಧ್ಯಕ್ಷ ಸದಾನಂದ ಶೆಟ್ಟಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ನೋಟೀಸ್ ನೀಡಿರುತ್ತಾರೆ. ಆದರೆ, ಎಫ್‌ಐಆರ್‌ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಪೊಲೀಸ್ ಉಪನಿರೀಕ್ಷಕರು ದೂರು ದಾಖಲಿಸಿರುವುದು ಎಂದಿದೆ. ಹಾಗಾದರೆ ದೂರು ನೀಡಿರುವವರು ಯಾರು..? ಪೊಲೀಸರು ಗ್ರಾಮಸ್ಥರಿಂದ ಆಕ್ಷೇಪ ಎಂದು ನೋಟೀಸ್ ಕೊಟ್ಟಿದ್ದೇಕೆ ಎಂದು ಊರಿನವರು ಹೇಳುತ್ತಿದ್ದಾರೆ.
ಅನುಮತಿಗೆ ಪಿಡಿಓ ವಿಳಂಬ:
ಧ್ವನಿವರ್ಧಕ ಬಳಕೆಯ ಅನುಮತಿಗಾಗಿ ಯಕ್ಷಗಾನ ಮಂಡಳಿಯ ಅಧ್ಯಕ್ಷರ ಮುಂದಾಳತ್ವದಲ್ಲಿ ಗ್ರಾಮಸ್ಥರು ಶಿರ್ಲಾಲು ಗ್ರಾಮ ಪಂಚಾಯತ್‌ಗೆ ಜ. 10ರಂದು ಹೋದಾಗ ಪಿಡಿಓ ಇರಲಿಲ್ಲ. ಶನಿವಾರ ಮತ್ತು ಆದಿತ್ಯವಾರ ರಜೆ ಇದ್ದ ಕಾರಣ ಸೋಮವಾರ ಅನುಮತಿ ನೀಡುವುದಾಗಿ ಪಿಡಿಒ ತಿಳಿಸಿರುತ್ತಾರೆ. ಅದೇ ದಿನ ಅಜೆಕಾರು ಪೊಲೀಸ್ ಠಾಣೆಗೆ ಅನುಮತಿಗಾಗಿ ಸಮಿತಿ ಅಧ್ಯಕ್ಷ ಸದಾನಂದ ಅವರು ಹೋದಾಗ ಪಿಡಿಓ ಅವರ ಅನುಮತಿ ಪತ್ರ ತಂದುಕೊಡುವಂತೆ ಠಾಣೆಯಲ್ಲಿ ತಿಳಿಸಿರುತ್ತಾರೆ.
ಆದರೆ, ಆನ್‌ಲೈನ್ ಮೂಲಕ ಪೊಲೀಸ್ ಇಲಾಖೆಗೆ ಸೌಂಡ್ಸ್ ಬಳಕೆಗೆ ಚಲನ್ ಪಾವತಿಯಾಗಿದೆ. ಇನ್ನು ಸೋಮವಾರ ಅನುಮತಿಗಾಗಿ ಪಿಡಿಓ ಅವರನ್ನು ಸಂಪರ್ಕಿಸಿದಾಗ ಅವರು ನಾನು ರಜೆ ಎಂದು ಪ್ರತಿಕ್ರಿಯಿಸಿರುತ್ತಾರೆ. ಪಿಡಿಓ ಅನುಮತಿ ನೀಡುವುದಿಲ್ಲವೆಂದೂ ಹಿಂಬರಹವನ್ನು ನೀಡದೆ ಹಾಗೆಯೇ ಅನುಮತಿಯನ್ನೂ ನೀಡದೆ ಇದ್ದು ಈ ಬಗ್ಗೆ ಗ್ರಾಮಸ್ಥರು ಹಾಗೂ ಯಕ್ಷಗಾನ ಆಯೋಜಕರು ಗೊಂದಲಕ್ಕೀಡಾಗಿದ್ದಾರೆ. ಆದರೂ ಯಕ್ಷಗಾನ ಸಂಪೂರ್ಣವಾಗಿ ಪ್ರದರ್ಶನಗೊಂಡಿದೆ.
ನಿಧನ ವಾರ್ತೆ
Karkala-ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು; ಸ್ನೇಹಿತನ ರಕ್ಷಣೆಗೆ ಧಾವಿಸಿ ಹರ್ಷನ್ ಸಾವು
ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನ ಸುಳಿಗೆ ಸಿಲುಕಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಸಮೀಪ ಸೆ.29ರಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಹಿರ್ಗಾನ ಗ್ರಾಮದ ರಾಜೀವ ನಗರ ನಿವಾಸಿಗಳಾದ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (22) ಎಂದು ಗುರುತಿಸಲಾಗಿದೆ.

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನ ಸುಳಿಗೆ ಸಿಲುಕಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಸಮೀಪ ಸೆ.29ರಂದು ಮಧ್ಯಾಹ್ನ ನಡೆದಿದೆ.
ಮೃತರನ್ನು ಹಿರ್ಗಾನ ಗ್ರಾಮದ ರಾಜೀವ ನಗರ ನಿವಾಸಿಗಳಾದ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (22) ಎಂದು ಗುರುತಿಸಲಾಗಿದೆ.
ಭರತ್ ಅವರು ಪೇಂಟಿಂಗ್ ಹಾಗೂ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದು, ಹರ್ಷನ್ ಮಂಗಳೂರಿನಲ್ಲಿ ಎಟಿಎಂ ಪಿನ್ ಜನರೇಟರ್ ಸಂಬಂಧಿತ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಭರತ್, ಹರ್ಷನ್, ವಿತೇಶ್ ಶೆಟ್ಟಿ ರಂಜಿತ್ ನಾಯಕ್, ಕೇತನ್ ನಾಯಕ್ ನದಿಗೆ ಈಜಲು ತೆರಳಿದ್ದು ಈ ವೇಳೆ ಭರತ್ ನೀರಿನ ಸುಳಿಗೆ ಸಿಲುಕಿ ಹೊರಬರಲು ಒದ್ದಾಡುತ್ತಿರುವುದನ್ನು ಗಮನಿಸಿದ ಹರ್ಷನ್, ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಈ ವೇಳೆ ಹರ್ಷನ್ ಕೂಡ ನೀರಿನ ಸುಳಿಗೆ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದ ಬಳಿಕ ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರು ಕಾರ್ಕಳ ನಗರ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯ ಆರಂಭಿಸಿದರು.
ಘಟನಾ ಸ್ಥಳಕ್ಕೆ ವಾಹನಗಳು ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಕಿ.ಮೀ. ದೂರ ನಡೆದುಕೊಂಡೇ ಸ್ಥಳಕ್ಕೆ ತೆರಳಬೇಕಾಯಿತು. ಬಳಿಕ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದ ತಂಡ ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಸಂಜೆ 6 ಗಂಟೆ ಸುಮಾರಿಗೆ ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಿ ನದಿಯಿಂದ ಮೇಲಕ್ಕೆತ್ತಿತು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಾದ ರೂಪೇಶ್, ಸುರೇಶ್, ದಿನೇಶ್, ನಿತ್ಯಾನಂದ, ಶಿವಾನಂದ ಹಾಗೂ ಸ್ಥಳೀಯರಾದ ರಂಜಿತ್ ಮತ್ತು ಕೇತನ್ ಭಾಗವಹಿಸಿದ್ದರು. ಎಎಸ್‌ಪಿ ಇಷಿತಾ ಗುಪ್ತ, ವೃತ್ತ ನಿರೀಕ್ಷಕ ರಾಘವೇಂದ್ರ ಹಾಗೂ ನಗರ ಠಾಣೆ ಎಸ್‌ಐ ಶಿವಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ಬಡ ಕುಟುಂಬ
ಮೃತ ಭರತ್ ಪೂಜಾರಿ ಬಡ ಕುಟುಂಬದವರಾಗಿದ್ದು, ತಂದೆ-ತಾಯಿಯೊಂದಿಗೆ ವಾಸಿಸುತ್ತಿದ್ದರು. ಕುಟುಂಬದ ಜವಾಬ್ದಾರಿ ಅವರ ಮೇಲಿತ್ತು ಎನ್ನಲಾಗಿದೆ. ಅವರು ಹೊಸ ಮನೆ ನಿರ್ಮಿಸುತ್ತಿದ್ದು, ಕಾಮಗಾರಿ ಈಗಾಗಲೇ ಸ್ಲ್ಯಾಬ್ ಹಂತ ತಲುಪಿತ್ತು. ಹರ್ಷನ್ ಆಚಾರ್ಯ ಅವರ ತಂದೆ ನಿಧನರಾಗಿದ್ದು, ತಾಯಿ ಹಾಗೂ ಅಕ್ಕನೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕಾರ್ಕಳ
Sunil Kumar-ಸ್ಥಳೀಯ ಕಂಬಳ ಕಡೆಗಣಿಸಿ ಮೈಸೂರು ಕಂಬಳಕ್ಕೆ 8 ಕೋಟಿ ಖರ್ಚು -ಸರ್ಕಾರದ ವಿರುದ್ಧ ಸುನಿಲ್ ಕುಮಾರ್ ಕಿಡಿ..! ಜಿಲ್ಲೆಯ ಕಂಬಳಕ್ಕೆ ತಲಾ 25 ಕೋಟಿ ಕೊಡಿ
ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆಯನ್ನು ಪರಿಚಯಿಸುವ ಸರ್ಕಾರದ ನಿರ್ಧಾರದ ಬಗ್ಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರ ಕೇವಲ ಹಠಕ್ಕೆ ಬೀಳದೆ, ತಜ್ಞರ ಮತ್ತು ಅನುಭವಸ್ಥರ ಅಭಿಪ್ರಾಯ ಪಡೆಯುವುದು ಅಗತ್ಯ ಎಂದು ಅವರು ಹೇಳಿದ್ದಾರೆ.
ಕಾರ್ಕಳ: ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆಯನ್ನು ಪರಿಚಯಿಸುವ ಸರ್ಕಾರದ ನಿರ್ಧಾರದ ಬಗ್ಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರ ಕೇವಲ ಹಠಕ್ಕೆ ಬೀಳದೆ, ತಜ್ಞರ ಮತ್ತು ಅನುಭವಸ್ಥರ ಅಭಿಪ್ರಾಯ ಪಡೆಯುವುದು ಅಗತ್ಯ ಎಂದು ಅವರು ಹೇಳಿದ್ದಾರೆ.
ಸಮಾಲೋಚನೆ ಅತ್ಯಗತ್ಯ:
ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯನ್ನು ಮೈಸೂರಿಗೆ ‘ರಫ್ತು’ ಮಾಡುವಾಗ ಅದರಿಂದಾಗುವ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಕಂಬಳವನ್ನು ಕೇವಲ ಪ್ರದರ್ಶನದ ವಸ್ತುವನ್ನಾಗಿ ನೋಡಬಾರದು. ಹೀಗಾಗಿ, ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲು ಕಂಬಳ ಆಯೋಜಕರು ಮತ್ತು ಕೋಣಗಳ ಮಾಲೀಕರ ಜೊತೆ ಸರ್ಕಾರ ವಿಸ್ತೃತವಾಗಿ ಚರ್ಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅನುದಾನದ ತಾರತಮ್ಯಕ್ಕೆ ಆಕ್ರೋಶ:
ಮೈಸೂರು ಕಂಬಳಕ್ಕಾಗಿ ಸುಮಾರು 8 ಕೋಟಿ ರೂಪಾಯಿ ಖರ್ಚು ಮಾಡಲು ಚಿಂತಿಸುತ್ತಿರುವ ಸರ್ಕಾರ, ಕರಾವಳಿಯ ಮೂಲ ಕಂಬಳಗಳನ್ನು ಕಡೆಗಣಿಸುತ್ತಿದೆ ಎಂದು ಸುನಿಲ್ ಕುಮಾರ್ ದೂರಿದ್ದಾರೆ. “ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವರ್ಷಾನುಗಟ್ಟಲೆ ನಡೆಯುತ್ತಿರುವ ಕಂಬಳಗಳಿಗೆ ತಲಾ 2.5 ಲಕ್ಷ ರೂಪಾಯಿ ನೀಡಲು ಈ ಸರ್ಕಾರ ಹಿಂದೇಟು ಹಾಕುತ್ತಿದೆ. ಮೈಸೂರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಬದಲು, ಕರಾವಳಿಯ 20 ಪ್ರಮುಖ ಜಿಲ್ಲಾಮಟ್ಟದ ಕಂಬಳಗಳಿಗೆ ತಲಾ 25 ಲಕ್ಷ ರೂಪಾಯಿ ಅನುದಾನ ನೀಡಲಿ” ಎಂದು ಅವರು ಸವಾಲು ಹಾಕಿದ್ದಾರೆ.
ಈ ಬಗ್ಗೆ ಈಗಾಗಲೇ ಸದನದಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತಲಾಗಿದ್ದು, ಸರ್ಕಾರ ಮೊದಲು ಸ್ಥಳೀಯ ಕಂಬಳಗಳ ವೈಭವ ಮತ್ತು ಅಸ್ತಿತ್ವವನ್ನು ಉಳಿಸಲು ಆದ್ಯತೆ ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅಪರಾಧ
Karkala-ಕಾರ್ಕಳ : ಪತಿ-ಇಬ್ಬರು ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ಹೋದ ವಿವಾಹಿತೆ: ಪೊಲೀಸ್ ಠಾಣೆಯಲ್ಲಿ “ತಪ್ಪಿನ ಅರಿವಾಗಿ” ವಾಪಸ್ಸು ಪತಿ ಮನೆಗೆ ತೆರಳಿದ ಮಹಿಳೆ
ಪತಿ ಹಾಗೂ ಇಬ್ಬರು ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ಕಾರ್ಕಳಕ್ಕೆ ಬಂದಿದ್ದ ವಿವಾಹಿತೆಯ ಪ್ರಕರಣವೊಂದು, ಪೊಲೀಸರ ಸಕಾಲಿಕ ಮಧ್ಯಸ್ಥಿಕೆ ಮತ್ತು ಸಮಾಲೋಚನೆಯಿಂದಾಗಿ ಸುಖಾಂತ್ಯ ಕಂಡಿದೆ.
ಕಾರ್ಕಳ: ಪತಿ ಹಾಗೂ ಇಬ್ಬರು ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ಕಾರ್ಕಳಕ್ಕೆ ಬಂದಿದ್ದ ವಿವಾಹಿತೆಯ ಪ್ರಕರಣವೊಂದು, ಪೊಲೀಸರ ಸಕಾಲಿಕ ಮಧ್ಯಸ್ಥಿಕೆ ಮತ್ತು ಸಮಾಲೋಚನೆಯಿಂದಾಗಿ ಸುಖಾಂತ್ಯ ಕಂಡಿದೆ.
ಮಹಿಳೆಯೊಬ್ಬರು ತನ್ನ ಸಂಸಾರವನ್ನು ಬಿಟ್ಟು ಪ್ರಿಯಕರನೊಡನೆ ಕಾರ್ಕಳದಲ್ಲಿ ವಾಸವಿದ್ದರು. ಈ ವಿಷಯ ತಿಳಿದ ಪತಿ ಹಾಗೂ ಕುಟುಂಬಸ್ಥರು ತಕ್ಷಣ ಕಾರ್ಕಳ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ನೆರವು ಕೋರಿದ್ದರು. ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಠಾಣೆಗೆ ಕರೆಸಿದರು.
ಈ ಸಂದರ್ಭದಲ್ಲಿ ಪೊಲೀಸರು ಮಹಿಳೆಗೆ ಸಂಸಾರದ ಮಹತ್ವ, ಮಕ್ಕಳ ಭವಿಷ್ಯ ಹಾಗೂ ಕುಟುಂಬದ ಜವಾಬ್ದಾರಿಗಳ ಕುರಿತು ಗಂಭೀರವಾಗಿ ಬುದ್ಧಿವಾದ ಹೇಳಿದರು. ಕುಟುಂಬಸ್ಥರು ಕೂಡ ಮಹಿಳೆಯನ್ನು ಮರಳಿ ಮನೆಗೆ ಬರುವಂತೆ ಮನವೊಲಿಸಿದರು. ಕೊನೆಗೆ ತನ್ನ ತಪ್ಪಿನ ಅರಿವಾದ ಮಹಿಳೆ, ಪ್ರಿಯಕರನ ಸಹವಾಸ ತೊರೆದು ಪತಿ ಮತ್ತು ಮಕ್ಕಳೊಂದಿಗೆ ಸಂಸಾರ ನಡೆಸಲು ಒಪ್ಪಿಕೊಂಡರು.
ಇಬ್ಬರ ನಡುವಿನ ಮನಸ್ತಾಪವು ಮಾತುಕತೆಯ ಮೂಲಕ ರಾಜಿಯಾಗಿ ಬಗೆಹರಿದ ಕಾರಣ, ಯಾವುದೇ ಕಾನೂನು ಕ್ರಮ ಅಥವಾ ಕೇಸು ದಾಖಲಾಗದೆ ಪ್ರಕರಣವು ಠಾಣೆಯಲ್ಲೇ ಇತ್ಯರ್ಥವಾಯಿತು. ಈ ಮೂಲಕ ವಿಭಜನೆಯ ಅಂಚಿನಲ್ಲಿದ್ದ ಕುಟುಂಬವೊಂದು ಮತ್ತೆ ಒಂದಾಗಿದೆ.
-
ಬಿಗ್ ನ್ಯೂಸ್19 hours agoಡಿಕೆಶಿ ಸರ್ಕಾರದಿಂದ ಜನತೆಗೆ ಬಿಗ್ ಶಾಕ್ – ರೈತರಿಗೆ ಬಂಪರ್ ಗಿಫ್ಟ್..! ಹಾಲಿನ ದರ 8 ರೂ. ಏರಿಕೆ : 6 ರೂ. ರೈತರಿಗೆ..! ನ.1 ರಿಂದ ಬಹುತೇಕ ಜಾರಿ
-
ನಿಧನ ವಾರ್ತೆ24 hours agoPuttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು
-
ಶಿಕ್ಷಣ23 hours agoPhilomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
-
ನಿಧನ ವಾರ್ತೆ24 hours agoDead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ
-
ನಿಧನ ವಾರ್ತೆ23 hours agoKerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು
-
ಬಿಗ್ ನ್ಯೂಸ್24 hours agoPuttur-ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ‘ಭಕ್ತರನ್ನು ಕಡೆಗಣಿಸಿ ಜೀರ್ಣೋದ್ಧಾರ ಸಮಿತಿ ರಚನೆ’ – ವಿಹಿಂಪ ಆಕ್ಷೇಪ
-
Uncategorized20 hours ago
ಶಿಕ್ಷೆಯ ವಿರುದ್ಧ ಹೈಕೋರ್ಟಿಗೆ ಅಪೀಲು; ನ್ಯಾಯಾಲಯಕ್ಕೆ ಗೈರು: ನೆಕ್ಕಿಲಾಡಿಯಲ್ಲಿ ಆರೋಪಿಯ ಬಂಧನ
-
ರಾಜಕೀಯ19 hours ago2027ರ ಜನವರಿ ಮೊದಲ ವಾರದಲ್ಲೇ ಜಿ.ಪಂ ಮತ್ತು ತಾ.ಪಂ ಚುನಾವಣೆ : ಸಚಿವ ಸಂಪುಟದಲ್ಲಿ ಚರ್ಚೆ..!


















