Connect with us

ರಾಜಕೀಯ

PLD Bank-ಪುತ್ತೂರು ಪಿಎಲ್‌ಡಿ ಬ್ಯಾಂಕ್ ಅವಿರೋಧ ಆಯ್ಕೆ : 12ರಲ್ಲಿ ಸಹಕಾರ ಭಾರತಿ, 2ರಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಅವಕಾಶ : ಕಾಂಗ್ರೆಸ್ – ಬಿಜೆಪಿ ಮಾತುಕತೆ ಫಲಪ್ರದ : 3-2 ಹಂಚಿಕೆ : ಚುನಾವಣಾಧಿಕಾರಿ ನಾಮಪತ್ರ ತಿರಸ್ಕೃತ ಪ್ರಹಸನ ಬಳಿಕವೂ ಇಬ್ಬರ ನಾಮಪತ್ರ ತಿರಸ್ಕೃತ ಅಧಿಕೃತ..!

Published

on



Ad Widget

Ad Widget

Ad Widget

Ad Widget

ಪುತ್ತೂರು ಮತ್ತು ಕಡಬ ತಾಲೂಕಿನ 68 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ ಡಿ)ಬ್ಯಾಂಕ್‌ಗೆ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಯ – 14 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಸಹಕಾರ ಭಾರತಿ ಹಾಗೂ 2 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಘು ಎಸ್.ಎಂ.ರವರು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು:ಪುತ್ತೂರು ಮತ್ತು ಕಡಬ ತಾಲೂಕಿನ 68 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ ಡಿ)ಬ್ಯಾಂಕ್‌ಗೆ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಯ – 14 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಸಹಕಾರ ಭಾರತಿ ಹಾಗೂ 2 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಘು ಎಸ್.ಎಂ.ರವರು ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಅವಿರೋಧವಾಗಿ ಆಯ್ಕೆಯಾದವರು:

Ad Widget

Ad Widget <> Ad Widget

ನೆಲ್ಯಾಡಿ(ಸಾಮಾನ್ಯ) ಹಾಲಿ ಅಧ್ಯಕ್ಷ ಸಹಕಾರ ಭಾರತಿಯ ಭಾಸ್ಕರ ಎಸ್ ಗೌಡ ಇಚ್ಚಂಪಾಡಿ, ಪುತ್ತೂರು (ಸಾಮಾನ್ಯ)-ಸಹಕಾರ ಭಾರತಿಯ ಸುಜಾತ ರಂಜನ್ ರೈ ಬೀಡು, ಸಾಲಗಾರರಲ್ಲದ ಕ್ಷೇತ್ರದಿಂದ ಸಾಮಾನ್ಯ) ಸಹಕಾರ ಭಾರತಿಯ ಯುವರಾಜ್ ಪೆರಿಯತ್ತೋಡಿ, ಕೆದಂಬಾಡಿ(ಸಾಮಾನ್ಯ)- 6 ಸಹಕಾರ ಭಾರತಿಯ ಯತೀಂದ್ರ ಕೊಟ್ಟ ಬೆಟ್ಟಂಪಾಡಿ(ಸಾಮಾನ್ಯ) ಸಹಕಾರ ಭಾರತಿಯ ಪ್ರವೀಣ್ ರೈ ಪಂಜೊಟ್ಟು, ಅರಿಯಡ್ಕ(ಸಾಮಾನ್ಯ) -ಕಾಂಗ್ರೆಸ್ ಬೆಂಬಲಿತ ವಿಕ್ರಮ್ ರೈ ಸಾಂತ್ಯ, ಕೋಡಿಂಬಾಡಿ(ಸಾಮಾನ್ಯ)-ಸಹಕಾರ ಭಾರತಿಯ ಬಾಳಪ್ಪ ಯಾನೆ ಸುಂದರ ಪೂಜಾರಿ ಬಡಾವು, ಬೆಳಂದೂರು(ಮಹಿಳೆ)-ಸಹಕಾರ ಭಾರತಿಯ ಚಂದ್ರಾವತಿ ಅಭಿಕಾರ್ ಚಾರ್ವಾಕ, ಕಡಬ(ಮಹಿಳೆ) – ಸಹಕಾರ ಭಾರತಿಯ ಸ್ವಾತಿ ರೈ ಆರ್ತಿಲ, ನರಿಮೊಗರು(ಪರಿಶಿಷ್ಟ ಜಾತಿ)-ಸಹಕಾರ ಭಾರತಿಯ ಬಾಬು ಮುಗೇರ,ಬಲ್ಯ (ಹಿಂದುಳಿದ ವರ್ಗ ಎ)-ಸಹಕಾರಭಾರತಿಯ ರಾಜು ಮೋನುಪಿ.ಉಳಿವು, ಉಪ್ಪಿ ನಂಗಡಿ(ಸಾಮಾನ್ಯ) ಸಹಕಾರ ಭಾರತಿಯ ಕುಶಾಲಪ್ಪಗೌಡ ಅನಿಲ, ಅಲಂಕಾರು(ಪ.ಪಂಗಡ) -ಕಾಂಗ್ರೆಸ್ ಬೆಂಬಲಿತ ನಾರಾಯಣ ನಾಯ್ಕ ಏಣಿತ್ತಡ್ಕ, ಬಂಟ್ರ (ಹಿಂದುಳಿದ ವರ್ಗ ಬಿ)- ಸಹಕಾರ ಭಾರತಿಯಿಂದ ಚೆನ್ನಕೇಶವರವರು ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.



Ad Widget

ಜ.11ರಂದು ನೆಲ್ಯಾಡಿ(ಸಾಮಾನ್ಯ), ಸಾಲಗಾರರಲ್ಲದ ಕ್ಷೇತ್ರ (ಸಾಮಾನ್ಯ), ಬೆಳಂದೂರು(ಮಹಿಳೆ), ಕಡಬ(ಮಹಿಳೆ),ನರಿಮೊಗರು(ಪ.ಜಾತಿ)ಹಾಗೂ ಬಲ್ಯ(ಹಿಂದುಳಿದ ವರ್ಗ) ಕ್ಷೇತ್ರಗಳಲ್ಲಿ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣ ಅವಿರೋಧ ಆಯ್ಕೆ ಆಗಿತ್ತು. ಕೋಡಿಂಬಾಡಿ ವಲಯ (ಸಾಮಾನ್ಯ)ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜಶೇಖರ ಜೈನ್ ನೀರ್ಪಾಜೆ ಹೊಸಮನೆ, ಬಂಟ್ರ ವಲಯ(ಹಿಂದುಳಿದವರ್ಗ ಬಿ)ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಚಂದ್ರಶೇಖರ್ ಗೌಡ ಹಾಗೂ ಕೆದಂಬಾಡಿ ವಲಯ(ಸಾಮಾನ್ಯ) ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಶೋಕ್ ರೈ ದೇರ್ಲರವರ ನಾಮ ಪತ್ರ ಜ.12ರಂದು ತಿರಸ್ಕೃತಗೊಂಡಿದ್ದರಿಂದ ಕೋಡಿಂಬಾಡಿ ವಲಯ(ಸಾಮಾನ್ಯ)ದಿಂದ ಸಹಕಾರ ಭಾರತಿಯ ಬಾಳಪ್ಪ ಯಾನೆಸುಂದರ ಪೂಜಾರಿ, ಬಂಟ್ರಿ ವಲಯ(ಹಿಂದುಳಿದವರ್ಗ ಬಿ)ದಿಂದ ಸಹಕಾರ ಭಾರತಿಯ ಚೆನ್ನಕೇಶವ ಕೈಂತಿಲ ಹಾಗೂ ಕೆದಂಬಾಡಿ ವಲಯ(ಸಾಮಾನ್ಯ)ದಿಂದ ಸಹಕಾರ ಭಾರತಿಯ ಯತೀಂದ್ರ ಕೊಚ್ಚಿರವರು ಅವಿರೋಧವಾಗಿ ಆಯ್ಕೆಗೊಂಡರು.

Ad Widget

Ad Widget

ಜ.13ರಂದು ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿತ್ತು. ಅರಿಯಡ್ಕ ವಲಯ(ಸಾಮಾನ್ಯ)ದಿಂದ ನಾಮಪತ್ರ ಸಲ್ಲಿಸಿದ್ದ ಸಹಕಾರ ಭಾರತಿಯ ಹರೀಶ್ ರೈ ಜಾರತ್ತಾರು, ಉಪ್ಪಿನಂಗಡಿ ವಲಯ(ಸಾಮಾನ್ಯ)ದಿಂದ ಕಾಂಗ್ರೆಸ್ ಬೆಂಬಲಿತ ಶಶಿರಾಜ್ ರೈ, ಪುತ್ತೂರು ವಲಯ(ಸಾಮಾನ್ಯ) ಕಾಂಗ್ರೆಸ್ ಬೆಂಬಲಿತ ವಾಸುದೇವ ಮಯ್ಯ, ಬೆಟ್ಟಂಪಾಡಿ ದಲಯ(ಸಾಮಾನ್ಯ) ಕಾಂಗ್ರೆಸ್ ಬೆಂಬಲಿತ ಭಾಸ್ಕರ ಕರ್ಕೇರ ಹಾಗೂ ಆಲಂಕಾರು ವಲಯ(ಪರಿಶಿಷ್ಟ ಪಂಗಡ) ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಮ ನಾಯ್ಕರವರು ನಾಮ ಪತ್ರ ಹಿಂತೆಗೆದುಕೊಂಡ ಪರಿಣಾಮ ಈ ಕ್ಷೇತ್ರಗಳಿಗೂ ಅವಿರೋಧ ಆಯ್ಕೆ ನಡೆಯಿತು.

ಬ್ಯಾಂಕಿನ 14 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದ ಬಳಿಕ ಉಳಿದ 5 ಸ್ಥಾನಗಳಿಗೆ ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಬೆಂಬಲಿತರಾಗಿ ತಲಾ 5 ಮಂದಿ ಅಭ್ಯರ್ಥಿಗಳು ಇದ್ದರು.ಬಳಿಕದ ಬೆಳವಣಿಗೆಯಲ್ಲಿ, ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಮುಖಂಡರುಗಳ ನಡುವೆ ಮಾತುಕತೆ ನಡೆದು 5 ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಕಾಂಗ್ರೆಸ್ ಹಾಗೂ ಮೂರು ಸ್ಥಾನಗಳನ್ನು ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಬಿಟ್ಟುಕೊಡುವ ತೀರ್ಮಾನಕ್ಕೆ ಬರಲಾಯಿತು.ಅದರಂತೆ ಉಪ್ಪಿನಂಗಡಿ, ಬೆಟ್ಟಂಪಾಡಿ ಹಾಗೂ ಪುತ್ತೂರು ವಲಯದ ಸ್ಥಾನಗಳನ್ನು ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಮತ್ತು ಅರಿಯಡ್ಕ ಹಾಗೂ ಆಲಂಕಾರು ವಲಯ ಸ್ಥಾನಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೀಡಲಾಯಿತು.

22ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ: ನೂತನ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕೋಶಾಧಿಕಾರಿಯ ಆಯ್ಕೆ ಜ.22ರಂದು ನಡೆಯಲಿದೆ.

ಆದಿತ್ಯವಾರ ನಡೆದಿತ್ತು ಸಸ್ಪೆಂಡ್ ಪ್ರಹಸನ :

ಪುತ್ತೂರು: ಪುತ್ತೂರು ಪಿಎಲ್ ಡಿ ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ದಿಸಲು ಸಲ್ಲಿಸಲಾಗಿದ್ದ ನಾಮಪತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಇಬ್ಬರ ನಾಮಪತ್ರ ತಿರಸ್ಕಾರವಾಗಿದ್ದು ,ಈ ವಿಚಾರಕ್ಕೆ ಸಂಬಂದಿಸಿದಂತೆ ಶಾಸಕರು ಗರಂ ಆಗಿದ್ದು ಬ್ಯಾಂಕಿಗೆ ತೆರಳಿ ಚುನಾವಣಾ ಅಧಿಕಾರಿಯನ್ನು ತರಾಟೆಗೆ ಎತ್ತಿಕೊಂಡ ಘಟನೆ ಆದಿತ್ಯವಾರ ನಡೆದಿತ್ತು.

ಪಿಎಲ್ ಡಿ ಬ್ಯಾಂಕಿನ ಚುನಾವಣೆಗೆ ಒಟ್ಟು ಸಲ್ಲಿಕೆಯಾಗಿದ್ದ ನಾಮಪತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ರಾಜಶೇಖರ ಜೈನ್ ಮತ್ಗು ಅಶೋಕ್ ರೈ ದೇರ್ಲ ಎಂಬವರ ನಾಮಪತ್ರವನ್ನು ಚುನಾವಣಾ ಅಧಿಜಾರಿ ಎಆರ್ ಒ ರಘು ಎಂಬವರು ತಿರಸ್ಕೃತಗೊಳಿಸಿದ್ದರು. ಸಕಾರಣವಿಲ್ಲದೆ ಮತ್ತು ಉದ್ದೇಶಪೂರ್ವಕವಾಗಿ ನಮ್ಮ ನಾಮಪತ್ರವನ್ನು ತಿರಸ್ಕಾರ ಮಾಡಿದ್ದಾರೆ ಎಂದು ಇಬ್ಬರು ಅಭ್ಯರ್ಥಿಗಳು ಬ್ಲಾಕ್ ಅಧ್ಯಕ್ಷರಾದ ಕೆ ಪಿ ಆಳ್ವರ ಗಮನಕ್ಕೆ ತಂದಿದ್ದಾರೆ. ಕೆ ಪಿ ಆಳ್ವರು ಶಾಸಕರ ಗಮನಕ್ಕೆ ತಂದು ಬಳಿಕ ಶಾಸಕರು ಬ್ಯಾಂಕಿಗೆ ತೆರಳಿ ಚುನಾವಣಾ ಅಧಿಕಾರಿ ಅವರನ್ನು ತರಾಟೆಗೆ ಎತ್ಗಿಕೊಂಡರು. ಸಲ್ಲಿಸಲಾಗಿದ್ದ ನಾಮಪತ್ರವನ್ನು ಪರಿಶೀಲನೆ ಮಾಡುವ ವೇಳೆ ಅದು ಸರಿಯಾಗಿಯೇ ಇತ್ತು, ಯಾವುದೇ ಕಾರಣವಿಲ್ಲದೆ ದುರುದ್ದೇಶದಿಂದ ಅಧಿಕಾರಿ ಈ ಕೆಲಸ ಮಾಡಿದ್ದಾರೆ ಎಂದು ಶಾಸಕರು ನೇರ ಆರೋಪ ಮಾಡಿದರು.

ಅಧಿಕಾರಿ ಹೇಳಿದ ಕಾರಣ..
ನಾಮಪತ್ರ ಸಲ್ಲಿಸುವ ವೇಳೆ ಸ್ಪರ್ದಿಸುವ ಅಭ್ಯರ್ಥಿ ಯಾವ ಕೆಟಗರಿಯಲ್ಲಿ ಸ್ಪರ್ದೆ ಮಾಡುತ್ತಿದ್ದಾನೆ ಎಂಬ ವಿಚಾರವನ್ನು ನಾಮಪತ್ರದಲ್ಲಿ‌ ನಮೂದಿಸಬೇಕು, ನಮೂದಿಸಿದ ಬಳಿಕ ಉಳಿದ ಕೆಟಗರಿ ಹೆಸರನ್ನು ಅಳಿಸಬೇಕು, ಅಳಿಸದ ಕಾರಣ ನಾಮಪತ್ರ ತಿರಸ್ಕಾರ ಮಾಡಿದ್ದೇನೆ ಎಂದು‌ಶಾಸಕರಲ್ಲಿ ತಿಳಿಸಿದ್ದಾರೆ. ಆದರೆ ಕಾನೂನು ಪ್ರಕಾರ ಅಭ್ಯರ್ಥಿಯು ತಾನು ಸ್ಪರ್ಧಿಸುವ ವಿಭಾಗಕ್ಕೆ ರೈಟ್ ಗುರುತು ಹಾಕಬೇಕು ಎಂದು ಇದ್ದು ಉಳಿದ ಕೆಟಗರಿಯನ್ನು ಅಳಿಸಬೇಕೆಂಬ ನಿಯಮವಿರುವುದಿಲ್ಲ ಆದರೆ ಅಧಿಕಾರಿ ಈ ವಿಚಾರದಲ್ಲಜ ತಪ್ಪು ಮಾಡಿರುವುದು ಸಾಭೀತಾಗಿದೆ ಎಂದು ಶಾಸಕರು ಹೇಳಿದರು.

ಎಷ್ಟು ತಗೊಂಡಿದ್ದೀರಿ?
ನಾಮಪತ್ರ ತಿರಸ್ಕಾರ ಮಾಡಲು ಎಷ್ಟು ಲಂಚ‌ ತಗೊಂಡಿದ್ದೀರಿ ಎಂದು ಅಧಿಕಾರಿ ರಘು ಅವರನ್ನು ಪ್ರಶ್ನಿಸಿದ ಶಾಸಕ ಅಶೋಕ್ ರೈ ಅವರು ಪುತ್ತೂರಿನಲ್ಲಿ ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ಲಂಚ ತಗೊಂಡು ಮೋಸ ಮಾಡಲು ಬಿಡುವುದಿಲ್ಲ. ಉದ್ದೇಶಪೂರ್ವಕವಾಗಿ ಈ ಕೃತ್ಯ ಮಾಡಿದ್ದೀರಿ ಎಂದು ಮತ್ತೆ ಅಧಿಕಾರಿಯನ್ನು‌ತರಾಟೆಗೆ ಎತ್ತಿಕೊಂಡರು.

ನಿಮ್ಮ‌ಮೇಲೆ ದೂರು ಮೊದಲೇ ಇತ್ತು
ನಿಮ್ಮ‌ಮೇಲೆ‌ಮೊದಲೇ ನನಗೆ ದೂರು ಬಂದಿತ್ತು, ಸುದಾರಿಸಬಹುದು ಎಂದು ಸುಮ್ಮನಿದ್ದೆ ಈಗ ಬಣ್ಣ ಬಯಲಾಯಿತು ಎಂದು ಶಾಸಕರು ಅಧಿಕಾರಿಯ ಎಚ್ಚರಿಸಿದರು.

ನಮ್ಮ ನಾಮಪತ್ರ ಸರಿ ಇದೆ
ಸ್ಪರ್ಧಿಗಳಾದ ರಾಜಶೇಖರ್ ಜೈನ್ ಮಾತನಾಡಿ ನಮ್ಮ ಇಬ್ಬರ ನಾಮಪತ್ರ ಸರಿಯಾಗಿಯೇ ಇದೆ ಕಾರಣವಿಲ್ಲದೆ ತಿರಸ್ಕಾರ ಮಾಡಿದ್ದಾರೆ. ಇದಕ್ಕಾಗಿ ನಾವು ಶಾಸಕರಲ್ಲಿ ದೂರು ನೀಡಿರುವುದಾಗಿ ಹೇಳಿದರು.

ಸಸ್ಪೆಂಡ್ ಮಾಡ್ತೇನೆ
ಲಂಚ ತಗೊಂಡು‌,ಅನ್ಯಾಯ‌ಮಾಡಿದ‌ನಿಮ್ಮ‌ನ್ನು‌ ಸಸ್ಪೆಂಡ್ ಮಾಡಿಸ್ತೇನೆ.‌ನಿಮಗೆ ಬೇಕಾದ ಹಾಗೆ ಕಾನೂನು ಬದಲಾವಣೆ ಮಾಡುವ ಅಧಿಕಾರ ನಿಮಗಿಲ್ಲ ಎಂದು ಅಧಿಕಾರಿಗೆ ಶಾಸಕರು‌ ಆದಿತ್ಯವಾರ ಎಚ್ಚರಿಸಿದ ಪ್ರಹಸನ ನಡೆದಿತ್ತು.

ಪಿಎಲ್‌ಡಿ ಬ್ಯಾಂಕಿನ ಚುನಾವಣೆಯ ಸಮಯ ಅದೇ ಅಧಿಕಾರಿ ಫಲಿತಾಂಶ ಘೋಷಿಸಿದರು.

Ad Widget
Click to comment

Leave a Reply

ಸ್ಥಳೀಯ

Mysuru-ಮೈಸೂರು ಕಂಬಳಕ್ಕೆ ಆಗಮಿಸಲಿರುವ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿಗೆ ವ್ಯವಸ್ಥೆ – ಶಾಸಕರಾದ ಅಶೋಕ್ ರೈ ಮಂಥರ್ ಗೌಡ ನೇತೃತ್ವದಲ್ಲಿ ಸಭೆ

Published

on



Ad Widget

Ad Widget

Ad Widget

Ad Widget

ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಆಗಮಿಸುವ ಕೋಣಗಳಿಗೆ ಕುಶಾಲನಗರದಲ್ಲಿ ಸೂಕ್ತ ವಿಶ್ರಾಂತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿಟ್ಟಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

Ad Widget

Ad Widget

Ad Widget

Ad Widget

ಕುಶಾಲನಗರ: ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಆಗಮಿಸುವ ಕೋಣಗಳಿಗೆ ಕುಶಾಲನಗರದಲ್ಲಿ ಸೂಕ್ತ ವಿಶ್ರಾಂತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿಟ್ಟಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯು ಮೈಸೂರು ಕಂಬಳದ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಡಿಕೇರಿ ಶಾಸಕ ಮಂಥರ್ ಗೌಡ ಅವರ ನೇತೃತ್ವದಲ್ಲಿ ನಡೆಯಿತು.

Ad Widget

Ad Widget <> Ad Widget

ಕಂಬಳ ಕೋಣಗಳಿಗೆ ಪ್ರಯಾಣದ ಬಳಿಕ ವಿಶ್ರಾಂತಿ, ಆರೈಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.



Ad Widget

ಸಭೆಯಲ್ಲಿ ರಾಜ್ಯ ಕಂಬಳ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಗೂ ಮುರಳೀಧರ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

Ad Widget

Ad Widget

ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ಮೈಸೂರಿನಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ವಿವಿಧ ಭಾಗಗಳಿಂದ ಕಂಬಳ ಕೋಣಗಳು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.

Ad Widget
Continue Reading

ರಾಜಕೀಯ

U.T. Khader-₹86ರ ಔಷಧಕ್ಕೆ ₹4,528; ಆಸ್ಪತ್ರೆಗಳಲ್ಲಿ ದುಬಾರಿ ದರಕ್ಕೆ ಔಷಧಗಳ ಮಾರಾಟ – ಆಸ್ಪತ್ರೆಗಳಲ್ಲಿ ಲ್ಯಾಂಡಿಂಗ್ ಮತ್ತು ಮಾರಾಟ ದರ ಪಟ್ಟಿ ಪ್ರಕಟಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು : ಯು.ಟಿ ಖಾದರ್

Published

on



Ad Widget

Ad Widget

Ad Widget

Ad Widget

ಆಸ್ಪತ್ರೆಗಳಲ್ಲಿ ಮಾರಾಟವಾಗುತ್ತಿರುವ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ರಿಟಿಕಲ್‌ ಔಷಧಗಳ ಲ್ಯಾಂಡಿಂಗ್ ದರ ಮತ್ತು ಮಾರಾಟ ದರದ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಆಸ್ಪತ್ರೆಗಳಲ್ಲಿ ಮಾರಾಟವಾಗುತ್ತಿರುವ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ರಿಟಿಕಲ್‌ ಔಷಧಗಳ ಲ್ಯಾಂಡಿಂಗ್ ದರ ಮತ್ತು ಮಾರಾಟ ದರದ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಬರೊಬ್ಬರಿ ಶೇ.5000 ರಷ್ಟು ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಅಂಕಿ-ಅಂಶಗಳನ್ನು ಆರೋಗ್ಯ ಸಚಿವ ಯು.ಟಿ. ಖಾದರ್‌ ಬಿಚ್ಚಿಟ್ಟಿದ್ದಾರೆ

Ad Widget

Ad Widget <> Ad Widget

ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಅಧಿಕಾರಿಗಳು ವಿವಿಧ ಆಸ್ಪತ್ರೆಗಳಲ್ಲಿ ನಡೆಸಿದ ಪರಿಶೀಲನೆ ವೇಳೆ ಔಷಧಗಳನ್ನು ಲ್ಯಾಂಡಿಂಗ್ ದರಕ್ಕಿಂತ ಹಲವು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.



Ad Widget

ಪ್ರತಿ ಆಸ್ಪತ್ರೆ, ಫಾರ್ಮಾಸಿಗಳು ಔಷಧಗಳ ಲ್ಯಾಂಡಿಂಗ್ ದರ ಹಾಗೂ ಮಾರಾಟ ದರವನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ ಬಹಿರಂಗ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು. ದರ ನಿಯಂತ್ರಿಸಲು ರಾಜ್ಯಕ್ಕೆ ಅಧಿಕಾರ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

Ad Widget

Ad Widget

ಅಜಗಜಾಂತರ ವ್ಯತ್ಯಾಸ (ರೂಗಳಲ್ಲಿ)
ಔಷಧ- ಲ್ಯಾಂಡಿಂಗ್ ದರ – ಎಂಆರ್‌ಪಿ

ಗುಫೋಲ್-86- 4,528
ಗುಫಿಸೈಕ್ಲೈನ್-50 ಇಂಜೆಕ್ಷನ್ – 160-7,110
ಟೆರ್ಲಿಟಿಸ್-118-4,416
ಟ್ಯಾಕ್ಸೋಕೇರ್-120 ಎಂಜಿ-1,000-21,617
ಕ್ಯಾನ್‌ಮ್ಯಾಬ್ 440 ಎಂಜಿ-6,600-57,457
ಬೆವಾಟಸ್ 400 ಎಂಜಿ-5,850-62,690
ಸೈಟ್ಯಾಕ್ಸ್ 100 (ಕ್ಯಾನ್ಸರ್ ಔಷಧ)-342-3,836
ನೆಬ್ಯುಲೈಸರ್ ಮಾಸ್ಕ್-44.50-950
ಐವಿಸೆಟ್-14.75-295
ಪಾಲಿಸೇಫಿಟಿ ಪಿಆರ್‌ಒ ಕ್ಯಾನುಲಾ-33.21-548

Ad Widget
Continue Reading

ಅಂತರ ರಾಜ್ಯ

Shivraj Singh Chauhan-ಕರ್ನಾಟಕ ಸೇರಿ 5 ರಾಜ್ಯಗಳು ಬರಪೀಡಿತವೆಂದು ಘೋಷಣೆ : ಅ.3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ ಭೇಟಿ – ಶಿವರಾಜ್ ಸಿಂಗ್ ಚೌಹಾಣ್

Published

on



Ad Widget

Ad Widget

Ad Widget

Ad Widget

ಕೇಂದ್ರ ಸರಕಾರವು ಈವರೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಬರಪೀಡಿತವೆಂದು ಘೋಷಣೆ ಮಾಡಿದೆ ಹಾಗೂ ದೇಶದ ವಿವಿಧೆಡೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ 6.11 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿಭೂಮಿ ಹಾನಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಕೇಂದ್ರ ಸರಕಾರವು ಈವರೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಬರಪೀಡಿತವೆಂದು ಘೋಷಣೆ ಮಾಡಿದೆ ಹಾಗೂ ದೇಶದ ವಿವಿಧೆಡೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ 6.11 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿಭೂಮಿ ಹಾನಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಹೊಸದಿಲ್ಲಿಯಲ್ಲಿ ನಡೆದ ‘ರಬಿ (ಹಿಂಗಾರು ಬೆಳೆ) 2026-27’ ರಾಷ್ಟ್ರೀಯ ಕೃಷಿ ಸಮ್ಮೇಳನದ ವೇಳೆ ಮಾತನಾಡಿದ ಅವರು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಕೆಲವು ಭಾಗಗಳು ಹಾಗೂ ರಾಜಸ್ಥಾನದ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದರು.

Ad Widget

Ad Widget <> Ad Widget

ಕರ್ನಾಟಕ ಸರ್ಕಾರದ ಮನವಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ತಂಡವು ಅಕ್ಟೋಬರ್ 3ರಂದು ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಚೌಹಾಣ್ ತಿಳಿಸಿದರು.



Ad Widget

ದೇಶದ ಇತರ ಭಾಗಗಳಲ್ಲಿನ ಬರ ಪರಿಸ್ಥಿತಿಯನ್ನೂ ಶೀಘ್ರದಲ್ಲೇ ಪರಿಶೀಲಿಸಲಾಗುವುದು. ಬರಪೀಡಿತ ಪ್ರದೇಶಗಳಿಗೆ ತಾವು ವೈಯಕ್ತಿಕವಾಗಿ ಭೇಟಿ ನೀಡುವುದರ ಜೊತೆಗೆ, ಆಯಾ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಚಿವರು ಹೇಳಿದರು.

Ad Widget

Ad Widget

ರೈತರಿಗೆ ನೆರವಿನ ಭರವಸೆ
ಬರ ಪರಿಸ್ಥಿತಿಯ ನಡುವೆಯೂ ಕೃಷಿ ಚಟುವಟಿಕೆ ಮುಂದುವರಿಸುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಚೌಹಾಣ್ ಭರವಸೆ ನೀಡಿದರು. ಕೃಷಿಭೂಮಿ ಪಾಳು ಬೀಳದಂತೆ ನೋಡಿಕೊಳ್ಳುವುದು ಸರ್ಕಾರದ ತಕ್ಷಣದ ಉದ್ದೇಶವಾಗಿದೆ ಎಂದರು.

ನೀರಿನ ಲಭ್ಯತೆ ಹಾಗೂ ಮಣ್ಣಿನ ತೇವಾಂಶಕ್ಕೆ ಅನುಗುಣವಾಗಿ ಬೆಳೆ ಆಯ್ಕೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದ್ದು, ಕಡಿಮೆ ನೀರು ಅಗತ್ಯವಿರುವ ಬೆಳೆಗಳು ಹಾಗೂ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ತಳಿಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಲಾಗಿದೆ.

ಶೇ.12.3ರಷ್ಟು ಮಳೆ ಕೊರತೆ
ಎಲ್‌ನೀನೊ ಪರಿಣಾಮ ಸೇರಿದಂತೆ ಹವಾಮಾನ ವೈಪರೀತ್ಯಗಳಿಂದಾಗಿ ದೇಶದಲ್ಲಿ ಮುಂಗಾರು ಮಳೆಯ ಕೊರತೆ ಉಂಟಾಗಿದೆ. ಮುಂಗಾರು ಋತುವಿನ ಅಂತ್ಯದ ವೇಳೆಗೆ ದೇಶದಲ್ಲಿ ಸಾಮಾನ್ಯಕ್ಕಿಂತ ಸುಮಾರು ಶೇ.12.3ರಷ್ಟು ಮಳೆ ಕಡಿಮೆಯಾಗಿದೆ ಎಂದು ಸಚಿವರು ತಿಳಿಸಿದರು.

ಮಳೆ ಕೊರತೆಯ ಪರಿಣಾಮ 2026-27ರ ಖಾರಿಫ್‌ ಬೆಳೆಗಳ ಒಟ್ಟು ಬಿತ್ತನೆ ಪ್ರದೇಶದಲ್ಲಿ ಸುಮಾರು ಶೇ.1ರಷ್ಟು ಇಳಿಕೆ ಕಂಡುಬಂದಿದೆ. ಭತ್ತದ ಬಿತ್ತನೆ ಪ್ರದೇಶದಲ್ಲಿ 16.32 ಲಕ್ಷ ಹೆಕ್ಟೇರ್‌ಗಳಷ್ಟು ಇಳಿಕೆಯಾಗಿದ್ದು, ಜೋಳ, ಸೋಯಾಬೀನ್ ಮತ್ತು ಹತ್ತಿ ಬೆಳೆಗಳ ವಿಸ್ತೀರ್ಣದಲ್ಲೂ ಕುಸಿತವಾಗಿದೆ.

ಇದಕ್ಕೆ ವಿರುದ್ಧವಾಗಿ ಉದ್ದು, ಬಾಜ್ರಾ, ಜೋಳ, ಎಳ್ಳು, ಸೂರ್ಯಕಾಂತಿ, ಹೆಸರು ಮತ್ತು ತೊಗರಿ ಸೇರಿದಂತೆ ಕೆಲವು ದ್ವಿದಳ ಧಾನ್ಯಗಳು ಹಾಗೂ ಸಿರಿಧಾನ್ಯಗಳ ಬಿತ್ತನೆ ಪ್ರದೇಶದಲ್ಲಿ ಏರಿಕೆ ಕಂಡುಬಂದಿದೆ.

ಕೇಂದ್ರ ಸರ್ಕಾರವು ರಬಿ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಮತ್ತು ಬೀಜಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದು, ಬರಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬೆಳೆ ಯೋಜನೆ ರೂಪಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading