ಶಿಕ್ಷಣ
Aravind Chokkady-“ನಾವು ಯೋಚಿಸಿದಂತೆ ನಮ್ಮ ನಡತೆ ಇರುತ್ತದೆ”: ಅರವಿಂದ ಚೊಕ್ಕಾಡಿ
ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ನ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಮತ್ತು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ‘ಶ್ರೀರಾಮ ಸಭಾಭವನ’ದಲ್ಲಿ ‘ವಿದ್ಯಾ ಸ್ಫೂರ್ತಿ – 2024’ಯನ್ನು ಉದ್ಘಾಟಿಸಲಾಯಿತು.
ಪುತ್ತೂರು, ಡಿ. 06: ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ನ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಮತ್ತು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ‘ಶ್ರೀರಾಮ ಸಭಾಭವನ’ದಲ್ಲಿ ‘ವಿದ್ಯಾ ಸ್ಫೂರ್ತಿ – 2024’ಯನ್ನು ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶ್ರೀ ಅರವಿಂದ ಚೊಕ್ಕಾಡಿ ಮಾತನಾಡಿ “ನಾವು ಯೋಚಿಸಿದಂತೆ ನಮ್ಮ ನಡತೆ ಇರುತ್ತದೆ, ಎಷ್ಟು ಸಂಸ್ಕಾರ ಎನ್ನುವುದು ಯೋಚನೆ ಮತ್ತು ಯೋಜನೆಗಳಲ್ಲಿ ಕಾರ್ಯಗತವಾಗಬೇಕು. ವಿದ್ಯಾ ಸ್ಪೂರ್ತಿಯಂತಹ ಕಾರ್ಯಕ್ರಮ ಮಕ್ಕಳ ಬಹುವಿಧ ಚಿಂತನೆಯಲ್ಲಿ ಸಹಕರಿಸುತ್ತದೆ” ಎಂದು ಹೇಳಿದರು.

ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಂಚಾಲಕರಾದ ಶ್ರೀ ಟಿ ಎಸ್ ಸುಬ್ರಹ್ಮಣ್ಯ ಭಟ್ ಗೌರವ ಅತಿಥಿಗಳಾಗಿಯೂ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಕಾಂತ್ ರಾವ್ ಎಸ್ ಕೆ ಹಾಗು ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಶ್ರೀಶ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾ ಸ್ಫೂರ್ತಿ 2024ರ ಭಾಗವಾಗಿ ರಸಪ್ರಶ್ನೆ, ವಿಜ್ಞಾನ ರಂಗೋಲಿ, ಸ್ಪೆಲ್ಲ್ ಬೀ, ಆಶುಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಗಳಿದ್ದವು. ವಿವಿಧ ಶಾಲೆಗಳ ಸುಮಾರು ನೂರಕ್ಕೂ ಹೆಚ್ಚು ಜನ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಶಾಲಾ ಶಿಕ್ಷಕರಿಗಾಗಿ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಶಿಕ್ಷಣ
Vivekananda-ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ತಂಡದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಧನುಷ್ ಎಸ್, ಯಶಸ್ ಎಚ್ . ಸಿ ದ್ವಿತೀಯ ಪಿಯುಸಿ ಗಗನ್ ಕೆ.ಎನ್, ತೇಜಸ್ ಟಿ. ಆರ್, ಜಶ್ವಂತ್ ಗೌಡ, ಧನುಷ್ ಕೆ . ಎಚ್, ಆಕಾಶ್ ಭಾಗವಹಿಸಿರುತ್ತಾರೆ.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
ಶಿಕ್ಷಣ
Taekwondo Competition-ಟೇಕ್ವಾಂಡೋ ಸ್ಪರ್ಧೆ: ಸಂತ ಫಿಲೋಮಿನಾ ಪ ಪೂ ಕಾಲೇಜಿನ ಮೊಹಮ್ಮದ್ ಶಾಜ್ ಗೆ ಪ್ರಶಸ್ತಿ
ಸೆ 30 ರಂದು ಚಿಕ್ಕಮಗಳೂರು ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಜ್ಯೋತಿನಗರದಲ್ಲಿ ನಡೆದ ‘ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ 2026 – 27’ ಟೇಕ್ವಾಂಡೋ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಮೊಹಮ್ಮದ್ ಶಾಜ್ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.
ಪುತ್ತೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಮಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸೆ 30 ರಂದು ಚಿಕ್ಕಮಗಳೂರು ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಜ್ಯೋತಿನಗರದಲ್ಲಿ ನಡೆದ ‘ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ 2026 – 27’ ಟೇಕ್ವಾಂಡೋ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಮೊಹಮ್ಮದ್ ಶಾಜ್ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.
ಇವರು ಉಪ್ಪಿನಂಗಡಿ ನಿವಾಸಿ ಮೊಹಮ್ಮದ್ ಮುಸ್ತಫಾ ಮತ್ತು ಸೌಧ ದಂಪತಿಗಳ ಪುತ್ರ.
ಇವರಿಗೆ ಶಿಹಾಬ್ ಟಿ ತರಬೇತಿ ನೀಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.
ಶಿಕ್ಷಣ
Vivekananda-ರಾಷ್ಟ್ರಮಟ್ಟದ ಭೌತಶಾಸ್ತ್ರ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯ ಸಾಧನೆ..!
ಪುತ್ತೂರು: ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಇದರ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀಹರಿ ಶರ್ಮಾ ನೋಯ್ಡಾದ ಆಮಿಟಿ ಯುನಿವರ್ಸಿಟಿಯಲ್ಲಿ ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಕ್ಸ್ ಟೀರ‍್ಸ್ (ಐಎಪಿಟಿ) ಸಂಸ್ಥೆಯ ಸಹಯೋಗದೊಂದಿಗೆ ನಡೆದ ರಾಷ್ಟ್ರಮಟ್ಟದ ಭೌತಶಾಸ್ತ್ರ ಸ್ಪರ್ಧೆ National Competition for Innovative Experiments in Physics (NCIEP)ನಲ್ಲಿ “Electromagnetic Shock-Absorber for the Real-Time Landing of Reusable Spacecraft” ಎಂಬ ಭೌತಶಾಸ್ತ್ರದ ಮಾದರಿಯನ್ನು ಸ್ಪರ್ಧೆಯಲ್ಲಿ ಪ್ರಸ್ತುತಪಡಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಅಕ್ಟೋಬರ್ 4ರಿಂದ 6ರವರೆಗೆ ನಡೆದ 40ನೇ IAPT Annual Conventionನಲ್ಲಿ ಇವರು ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಭಾಗವಹಿಸಿದ್ದರು. ದೇಶದ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಐಐಟಿಗಳು ಹಾಗೂ ವಿಶ್ವವಿದ್ಯಾಲಯಗಳ ಒಟ್ಟು 118 ಮಾದರಿಗಳ ಪೈಕಿ 12ಮಾದರಿಗಳು ಸ್ಪರ್ಧೆಗೆ ಆಯ್ಕೆಯಾಗಿದ್ದವು.
ಕರ್ನಾಟಕದಿಂದ ಪ್ರಸ್ತುತಪಡಿಸಲು ಆಯ್ಕೆಯಾದ ಏಕೈಕ ಮಾದರಿ ಇವರದ್ದಾಗಿತ್ತು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ. ಶಿವಪ್ರಸಾದ್ ಕೆ.ಎಸ್. ಈ ಮಾದರಿ ತಯಾರಿಕೆಯಲ್ಲಿ ಮಾರ್ಗದರ್ಶನ ನೀಡಿರುದ್ದಾರೆ. ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
-
ನಿಧನ ವಾರ್ತೆ7 hours agoMumbai-ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ? ಸರಪಳಿಯಿಂದ ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ
-
ಮಂಗಳೂರು5 hours agoUjire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
-
ಅಂತರ ರಾಜ್ಯ7 hours agoArrested-ಕಾಸರಗೋಡು: ಮದುವೆಯ ನೆಪದಲ್ಲಿ ಹತ್ತಾರು ಯುವತಿಯರಿಗೆ ವಂಚನೆ: ಮದುವೆಯಾದ ಮೂರೇ ದಿನಕ್ಕೆ ಚಿನ್ನ, ಹಣದೊಂದಿಗೆ ಪರಾರಿ; ಆರೋಪಿ ಬಿಜು ಆಂಟನಿ ಬಂಧನ
-
ಅಂತರ ರಾಜ್ಯ6 hours agoJantar Mantar-ಸಿಜೆಪಿ ಪ್ರತಿಭಟನೆಗೆ ದೆಹಲಿಯಲ್ಲಿ ಬಿಗಿ ಭದ್ರತೆ – ಪಂಚರ್ ಆಗಲು ರಸ್ತೆಗಳಿಗೆ ತಡೆಬೇಲಿ..! ವಿಮಾನದಲ್ಲೇ ಅಭಿಜಿತ್ ದಿಪ್ಕೆ ಪೊಲೀಸ್ ವಶಕ್ಕೆ..! ಸಾವಿರಕ್ಕೂ ಮಿಕ್ಕಿ ಪ್ರತಿಭಟನಾಕಾರರೂ ವಶಕ್ಕೆ-ಸುಪ್ರೀಂ ಕೋರ್ಟ್ ವಕೀಲರಿಗೆ ತಡೆ..! ತೀವ್ರ ಅಡೆತಡೆಗಳ ನಡುವೆ ಜಂತರ್ ಮಂತರ್ ಗೆ ಹರಿದು ಬರುತ್ತಿರುವ ಜನಸಾಗರ
-
ರಾಜ್ಯ7 hours agoRobotic technology-ರೋಬೋಟಿಕ್ ತಂತ್ರಜ್ಞಾನದ ಅದ್ಭುತ: ಸ್ಪೇನ್ನಲ್ಲಿ ಕುಳಿತು ಕರ್ನಾಟಕದ ಮಹಿಳೆಗೆ ಹೃದಯ ಶಸ್ತ್ರಚಿಕಿತ್ಸೆ
-
Uncategorized8 hours agoCJP protest-ಇಂದು CJP ಪ್ರತಿಭಟನೆ : ದೆಹಲಿಗೆ ಬರಬೇಕಾಗಿದ್ದ 250 ರೈಲು ರದ್ದು, ಹಲವು ರೈಲಿನ ವೇಳಾಪಟ್ಟಿ ಬದಲಾವಣೆ : ಮೆಟ್ರೋ ಸಂಚಾರ ಸ್ಥಗಿತ – ಇಂಟರ್ ನೆಟ್ ಬಂದ್..! ‘ಹೆದರಿದ್ರಾ ಮೋದಿಜೀ..?’ ಎಂದ CJP
-
ಅಂತರ ರಾಜ್ಯ8 hours agoDhruv Rati-BIG BREAKING: ದೆಹಲಿಯ ಜಂತರ್ ಮಂತರ್ ನಲ್ಲಿ ಸಿಜೆಪಿ ಪ್ರತಿಭಟನೆ ಹಿನ್ನಲೆ – ಯೂಟ್ಯೂಬರ್ ಧ್ರುವ್ ರಾಠಿ ಪೊಲೀಸ್ ವಶಕ್ಕೆ?
-
ಅಂತರ ರಾಜ್ಯ6 hours agoBy-election results-ಉಪಚುನಾವಣೆ ಫಲಿತಾಂಶ: ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ, ತಮಿಳುನಾಡಿನಲ್ಲಿ ಟಿವಿಕೆ ಅಬ್ಬರ




















