Connect with us

ಶಿಕ್ಷಣ

ನಿಮ್ಮ ಮಕ್ಕಳ ಮಾನಸಿಕ ಸಾಮರ್ಥ್ಯ/ ಗಣಿತ ಬಲಗೊಳಿಸಬೇಕೆ..? ಇಲ್ಲಿದೆ ಫುಲ್ ಡಿಟೈಲ್ಸ್ : 2025ನೇ ಸಾಲಿನ ಅಬಾಕಸ್, ವೇದಿಕ್ ಗಣಿತ ಮತ್ತು ಮಾನಸಿಕ ಸಾಮರ್ಥ್ಯದ ಆನ್ಲೈನ್ ತರಗತಿ ಪ್ರಾರಂಭಿಸಿದ ಪ್ರತಿಷ್ಠಿತ ತರಬೇತಿ ಕೇಂದ್ರ ವಿದ್ಯಾಮಾತ ಅಕಾಡೆಮಿ

Published

on



Ad Widget

Ad Widget

Ad Widget

Ad Widget

ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕೆನ್ನುವ ವಿದ್ಯಾರ್ಥಿಗಳಿಗೆ ಅವಕಾಶ : ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಭದ್ರ ಬುನಾದಿ ಹಾಕಲು ಬಾಲ್ಯದಲ್ಲೇ ಸಹಕಾರಿಯಾಗುವ ತರಬೇತಿ ಪ್ರಾರಂಭಿಸಿದ ವಿದ್ಯಾಮಾತಾ ಅಕಾಡೆಮಿ : 2025ನೇ ಸಾಲಿನ ಅಬಾಕಸ್, ವೇದಿಕ್ ಗಣಿತ ಮತ್ತು ಮಾನಸಿಕ ಸಾಮರ್ಥ್ಯದ ಆನ್ಲೈನ್ ತರಗತಿ ಪ್ರಾರಂಭಿಸಿದ ಪ್ರತಿಷ್ಠಿತ ತರಬೇತಿ ಕೇಂದ್ರ

Ad Widget

Ad Widget

Ad Widget

Ad Widget

ಕಳೆದ ಹಲವಾರು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ಯಶಸ್ಸು ಪಡೆದಿರುವ ಹಾಗೂ ವಿಶೇಷ ಕೌಶಲ್ಯಭರಿತ ತರಬೇತಿಗಳಾದ ಮಾನಸಿಕ ಸಾಮರ್ಥ್ಯ, ವೇದಿಕ್ ಗಣಿತ ಅಲ್ಲದೇ ಮಾನಸಿಕ ಸಾಮರ್ಥ್ಯದ ಕುರಿತು ತರಬೇತಿ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಬಾಕಸ್ ಚಾಂಪಿಯನ್ ಆಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ 2025ನೇ ಸಾಲಿನಲ್ಲೂ ಈ ಕುರಿತು ವಿಶೇಷ ತರಬೇತಿ ಪ್ರಾರಂಭಿಸಿದ್ದು, ಇದರ ಸಲುವಾಗಿ ದಾಖಲಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿರುತ್ತದೆ.

Ad Widget

Ad Widget

Ad Widget alt="Ad Widget"/>

Ad Widget

ಅಬಾಕಸ್, ವೇದಿಕ್ ಗಣಿತ,ಮಾನಸಿಕ ಸಾಮರ್ಥ್ಯ ತರಬೇತಿಯ ವಿಶೇಷತೆಗಳು

Ad Widget

Ad Widget <> Ad Widget

  • ಆನ್ಲೈನ್ ಮೂಲಕ ನಡೆಯಲಿರುವ ತರಬೇತಿಗಳು : ಪ್ರತೀ ಶನಿವಾರ ಮತ್ತು ಆದಿತ್ಯವಾರ ರಾತ್ರಿ 7.00ರಿಂದ 8.00ರ ವರೆಗೆ ತರಬೇತಿ ಆಯೋಜನೆ
  • 6 ವರ್ಷದಿಂದ 15 ವರ್ಷದೊಳಗಿನವರಿಗೆ ತರಬೇತಿ ಪಡೆದುಕೊಳ್ಳಲು ಅವಕಾಶ : ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಸಹಾಯವಾಗುವ ನಿಟ್ಟಿನಲ್ಲಿ ಪ್ರಮಾಣ ಪತ್ರ ಸಿಗಲಿದೆ.
  • ವಿವಿಧ ಮಟ್ಟದಲ್ಲಿ ಅಬಾಕಸ್ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಲು ಅವಕಾಶ.
    ಈ ಮೇಲಿನ ತರಬೇತಿಗೆ ವಿದ್ಯಾಮಾತಾ ಅಕಾಡೆಮಿ ಯಾಕೆ ನಿಮ್ಮ ಮೊದಲ ಆಯ್ಕೆಯಾಗಿರಬೇಕು

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು 2022ನೇ ಸಾಲಿನಲ್ಲಿ ನ್ಯಾಷನಲ್ ಚಾಂಪಿಯನ್ ಹಾಗೂ 2023-24ನೇ ಸಾಲಿನಲ್ಲಿ ಅಂತರಾಷ್ಟ್ರೀಯ ಅಬಾಕಸ್ ಚಾಂಪಿಯನ್ ಆಗಿರುವುದು ಸ್ಮರಣೀಯ ವಿಷಯವಾಗಿದೆ.



Ad Widget
  • ಆನ್ಲೈನ್ ಮೂಲಕ ತರಗತಿಗಳು ನೇರ ತರಗತಿಗಳು ನಡೆಯುವ ರೀತಿಯಲ್ಲಿ ಪರಿಣಾಮಕಾರಿಯಾಗಿರುತ್ತದೆ.
  • ಸೀಮಿತವಾದ ವಿದ್ಯಾರ್ಥಿಗಳಿಂದ ಕೂಡಿರುವ ತರಗತಿ – ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೆ ವಿಶೇಷ ಗಮನವಹಿಸಿ ನಡೆಯಲಿರುವ ತರಬೇತಿ
  • ವಸ್ತುನಿಷ್ಠ ವಿಷಯ ಗ್ರಹಿಕೆಗೆ ಸಹಾಯಕವಾಗಿ ವಿದ್ಯಾರ್ಥಿಗಳ ವೇಗ ನಿಖರತೆಯನ್ನು ಪಡೆದುಕೊಂಡು ಅಂತಾರಾಷ್ಟ್ರೀಯ ಚಾಂಪಿಯನ್ ಆಗಿರುವುದು ವಿದ್ಯಾಮಾತಾದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

ವಿಶೇಷ ಮಾದರಿಯಲ್ಲಿ ತರಬೇತಿ ನೀಡಿ ಜನಮಾನಸದಲ್ಲಿ ಮನೆ ಮಾತಾಗಿರುವ ವಿದ್ಯಾಮಾತಾ ಅಕಾಡೆಮಿಯ ಈ ತರಬೇತಿ ಪಡೆಯಲಿಚ್ಛಿಸುವವರು ಈ ಕೂಡಲೇ ಸಂಸ್ಥೆಯ ಕಛೇರಿಯನ್ನು ಅಥವಾ ದೂರವಾಣಿಯ ಮೂಲಕ ದಾಖಲಾತಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

Ad Widget

Ad Widget

ವಿದ್ಯಾಮಾತಾ ಅಕಾಡೆಮಿ

ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
PH: 9148935808 / 96204 68869

ಸುಳ್ಯ ಶಾಖೆ: 9448527606
ಕಾರ್ಕಳ ಶಾಖೆ: 8310484380

ಕಳೆದ ವರ್ಷ ಸಾಧನೆ ಮೆರೆದ ವಿದ್ಯಾರ್ಥಿಗಳು

Ad Widget
Click to comment

Leave a Reply

ಶಿಕ್ಷಣ

Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಂತ್ರಜ್ಞಾನದ ಮಹಾಸಂಗಮ; IEEE ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಸಜ್ಜು; ಡಿಸ್ಕವರ್–2026: 1,071 ಪ್ರಬಂಧಗಳ ಪೈಕಿ 94ಕ್ಕೆ ಮಂಡನೆ ಅವಕಾಶ

Published

on



Ad Widget

Ad Widget

Ad Widget

Ad Widget

ನೂತನ ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಗೆ ವೇದಿಕೆಯಾಗಿರುವ IEEE ಅಂತಾರಾಷ್ಟ್ರೀಯ ಸಮ್ಮೇಳನ ‘ಡಿಸ್ಕವರ್–2026’ ಅ.9 ಮತ್ತು 10ರಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆಯಲಿದೆ.

Ad Widget

Ad Widget

Ad Widget

Ad Widget

ಪುತ್ತೂರು: ನೂತನ ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಗೆ ವೇದಿಕೆಯಾಗಿರುವ IEEE ಅಂತಾರಾಷ್ಟ್ರೀಯ ಸಮ್ಮೇಳನ ‘ಡಿಸ್ಕವರ್–2026’ ಅ.9 ಮತ್ತು 10ರಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆಯಲಿದೆ.

Ad Widget

Ad Widget

Ad Widget alt="Ad Widget"/>

Ad Widget

ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, IEEE ಬೆಂಗಳೂರು ವಿಭಾಗ ಹಾಗೂ IEEE ಮಂಗಳೂರು ಉಪವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿರುವ ಸಮ್ಮೇಳನದಲ್ಲಿ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ಕಮ್ಯುನಿಕೇಶನ್, ವಿಎಲ್‌ಎಸ್‌ಐ, ಇಲೆಕ್ಟ್ರಿಕಲ್ ಸರ್ಕ್ಯೂಟ್ಸ್, ರೊಬೋಟಿಕ್ಸ್ ಹಾಗೂ ಹೆಲ್ತ್‌ಕೇರ್ ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ.

Ad Widget

Ad Widget <> Ad Widget

ದೇಶ-ವಿದೇಶಗಳಿಂದ 1,071 ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿದ್ದು, ಗುಣಮಟ್ಟದ ಪರಿಶೀಲನೆಯ ಬಳಿಕ 94 ಪ್ರಬಂಧಗಳನ್ನು ಮಂಡನೆಗೆ ಆಯ್ಕೆ ಮಾಡಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.



Ad Widget

ಅ.9ರಂದು ಬೆಳಿಗ್ಗೆ 9.30ಕ್ಕೆ ಸಾವರ್ಕರ್ ಸಭಾಭವನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಐಐಎಸ್‌ಸಿ ಸೆಂಟರ್ ಆಫ್ ನ್ಯಾನೋ ಸೈನ್ಸಸ್ ಎಂಡ್ ಇಂಜಿನಿಯರಿಂಗ್‌ನ ಪ್ರೊ. ಡಾ. ನವಕಾಂತ ಭಟ್ ಮುಖ್ಯ ಅತಿಥಿಯಾಗಿ, ಟಿಸಿಎಸ್ ಹಿರಿಯ ವಿಜ್ಞಾನಿ ಹಾಗೂ IEEE ಬೆಂಗಳೂರು ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ಮಿಶ್ರ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರವಿಕೃಷ್ಣ ಡಿ. ಕಲ್ಲಾಜೆ ಅಧ್ಯಕ್ಷತೆ ವಹಿಸಲಿದ್ದಾರೆ.

Ad Widget

Ad Widget

ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಿಂದ ವಿಚಾರ ಮಂಡನೆ

ಸಮ್ಮೇಳನದಲ್ಲಿ ಸೆಮಿಕಂಡಕ್ಟರ್ ವಿಎಲ್‌ಎಸ್‌ಐ ತಂತ್ರಜ್ಞಾನ, 6G ಸಂಪರ್ಕ ವ್ಯವಸ್ಥೆ ಹಾಗೂ ಎಐ ಆಧಾರಿತ ವಿಕೇಂದ್ರೀಕೃತ ಬುದ್ಧಿಮತ್ತೆ ಕುರಿತು ತಜ್ಞರಿಂದ ವಿಚಾರ ಮಂಡನೆ ನಡೆಯಲಿದೆ. ಡಾ. ನವಕಾಂತ ಭಟ್, ಸ್ಮಾರ್ಟ್‌ಬೀಮ್ ರೆಸೊನೆಟಿಕ್ಸ್‌ನ ಸಂಸ್ಥಾಪಕಿ ಡಾ. ಶ್ವೇತಾ ಅಮಿತ್ ಹಾಗೂ ಬ್ಲೂಟ್ ಟೆಕ್ನಾಲಜೀಸ್‌ನ ಸಂಸ್ಥಾಪಕ-ಸಿಟಿಒ ಸುದರ್ಶನ್ ಶೆನ್ವಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

‘ಸಂಶೋಧನೆ ಮತ್ತು ನಾವೀನ್ಯತೆ: ಗುಣಮಟ್ಟ, ಪ್ರಮಾಣ ಮತ್ತು ನೈತಿಕ ಆಯಾಮಗಳು’ ಕುರಿತು ವಿಶೇಷ ಚರ್ಚೆಯೂ ನಡೆಯಲಿದೆ. ಡಾ. ಪ್ರಶಾಂತ್ ಮಿಶ್ರ, ಡಾ. ನವಕಾಂತ ಭಟ್, ಡೆಲ್ ಟೆಕ್ನಾಲಜೀಸ್‌ನ ಡೇಟಾ ಸೈನ್ಸ್ ನಿರ್ದೇಶಕ ಪಂಡಿತ್ ಕುಲದೀಪ್ ಡೋಂಗ್ರೆ ಹಾಗೂ ಡಾ. ಅಂಬರ್ ಬಾಜ್‌ಪಾಯ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಡಾ. ಅಜಿತ್ ಹೆಬ್ಬಾರ್ ಹೊಸಮಠ ಸಮನ್ವಯಕಾರರಾಗಿರುತ್ತಾರೆ.

ಅ.10ರಂದು ಸಂಜೆ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುದರ್ಶನ್ ಶೆನ್ವಿ ಮುಖ್ಯ ಅತಿಥಿಯಾಗಿ, IEEE ಬೆಂಗಳೂರು ವಿಭಾಗದ ಡಾ. ವಾಸುದೇವ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಸನ್ನ ದರ್ಬೆ ಅಧ್ಯಕ್ಷತೆ ವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ಕೆ., ಡಾ. ಜೀವಿತಾ ಬಿ.ಕೆ., ಡಾ. ರಜನಿ ರೈ ಬಿ. ಹಾಗೂ ಡಾ. ಆಶ್ಲೆ ಡಿ. ಸೋಜ ಉಪಸ್ಥಿತರಿದ್ದರು.

Ad Widget
Continue Reading

ಶಿಕ್ಷಣ

Vivekananda-ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

Published

on



Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಮುಕ್ರಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಮುಕ್ರಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget <> Ad Widget

ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಕೆ. ವಿ. ನಿಖಿಲ್ ಕುಮಾರ್, ನಿಹಾಲ್ ಸಿ. ರೈ. ದ್ವಿತೀಯ ಪಿಯುಸಿ ಅಭಿಲಾಷ್, ವಿಕ್ರಮ್ ಎ. ಜಿ ಹಾಗೂ ಬಾಲಕಿಯರ ತಂಡದಲ್ಲಿ ದ್ವಿತೀಯ ಪಿಯುಸಿ ಆತ್ಮಿಕಾ, ಎಚ್. ಮನ್ಮಿತಾ, ಶರಣ್ಯಾ ಎಚ್. ಎನ್ ಭಾಗವಹಿಸಿರುತ್ತಾರೆ.



Ad Widget

ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗು ಉಪನ್ಯಾಸಕ ,ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

Continue Reading

ಶಿಕ್ಷಣ

Philomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ

Published

on



Ad Widget

Ad Widget

Ad Widget

Ad Widget

ಕಾಲ ಐದು ದಶಕಗಳತ್ತ ಸಾಗಿದರೂ, ಕಾಲೇಜಿನ ಆವರಣದಲ್ಲಿ ಕಳೆದ ಯೌವನದ ದಿನಗಳ ನೆನಪುಗಳು ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅಂತಹ ಸುವರ್ಣ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸಿದ ಅಪೂರ್ವ ಕ್ಷಣಕ್ಕೆ ಸಂತ ಫಿಲೋಮಿನಾ ಕಾಲೇಜು ಸಾಕ್ಷಿಯಾಯಿತು. 1991ರ ಬಿ.ಎಸ್ಸಿ. ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು 35 ವರ್ಷಗಳ ಬಳಿಕ ತಮ್ಮ ಎರಡನೇ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮಕ್ಕಾಗಿ ರವಿವಾರ ಪಿಜಿ ಸೆಮಿನಾರ್ ಹಾಲ್‌ನಲ್ಲಿ ಸೇರಿ, ಹಳೆಯ ಸ್ನೇಹ, ಗೌರವ ಮತ್ತು ಆತ್ಮೀಯತೆಯನ್ನು ಮರುಕಳಿಸಿದರು.

Ad Widget

Ad Widget

Ad Widget

Ad Widget

ಪುತ್ತೂರು, ಅ.4: ಕಾಲ ಐದು ದಶಕಗಳತ್ತ ಸಾಗಿದರೂ, ಕಾಲೇಜಿನ ಆವರಣದಲ್ಲಿ ಕಳೆದ ಯೌವನದ ದಿನಗಳ ನೆನಪುಗಳು ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅಂತಹ ಸುವರ್ಣ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸಿದ ಅಪೂರ್ವ ಕ್ಷಣಕ್ಕೆ ಸಂತ ಫಿಲೋಮಿನಾ ಕಾಲೇಜು ಸಾಕ್ಷಿಯಾಯಿತು. 1991ರ ಬಿ.ಎಸ್ಸಿ. ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು 35 ವರ್ಷಗಳ ಬಳಿಕ ತಮ್ಮ ಎರಡನೇ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮಕ್ಕಾಗಿ ರವಿವಾರ ಪಿಜಿ ಸೆಮಿನಾರ್ ಹಾಲ್‌ನಲ್ಲಿ ಸೇರಿ, ಹಳೆಯ ಸ್ನೇಹ, ಗೌರವ ಮತ್ತು ಆತ್ಮೀಯತೆಯನ್ನು ಮರುಕಳಿಸಿದರು.

Ad Widget

Ad Widget

Ad Widget alt="Ad Widget"/>

Ad Widget

ಅತ್ಯಂತ ಸುಂದರ ಹಾಗೂ ಮನೋಜ್ಞವಾಗಿ ನಡೆದ ಈ ಪುನರ್ಮಿಲನ ಕಾರ್ಯಕ್ರಮದಲ್ಲಿ 1991ರ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೃತ್ತಿ ಹಾಗೂ ಸಾಮಾಜಿಕ ಬದುಕಿನಲ್ಲಿ ವಿವಿಧ ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ಅವರು, ಕಾಲೇಜಿನ ಆವರಣದಲ್ಲಿ ಮತ್ತೆ ವಿದ್ಯಾರ್ಥಿಗಳಂತೆಯೇ ಬೆರೆತು, ತಮ್ಮ ಸುವರ್ಣ ದಿನಗಳನ್ನು ನೆನಪಿಸಿಕೊಂಡರು.

Ad Widget

Ad Widget <> Ad Widget

ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ. ಆಂಟನಿ ಪ್ರಕಾಶ್ ಮೊಂತೆರೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.



Ad Widget

ಅವರು ಮಾತನಾಡಿ, “ಕಾಲೇಜು ಬದುಕಿತ್ತು; ಬದುಕುತ್ತಿದೆ; ಮುಂದೆಯೂ ಬದುಕಲಿದೆ. ಆದರೆ ಅದಕ್ಕಿಂತ ಮುಖ್ಯವಾದುದು ಪ್ರೀತಿ, ಗೌರವ ಮತ್ತು ಸದ್ಭಾವನೆ. ನಿಮ್ಮಂತಹ ಹಿರಿಯ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸದ್ಭಾವನೆಯಿಂದಲೇ ಕಾಲೇಜು ನಿರಂತರವಾಗಿ ಬೆಳೆಯುತ್ತಿದೆ,” ಎಂದು ಹೇಳಿ, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅತ್ಯಂತ ಶಿಸ್ತಿನಿಂದ ಹಾಗೂ ಸಮಯಪಾಲನೆಯೊಂದಿಗೆ ಸಂಘಟಿಸಿರುವುದನ್ನು ಶ್ಲಾಘಿಸಿದ ಅವರು, ಅವರ ಶಿಸ್ತು ಮತ್ತು ಸಮಯ ನಿರ್ವಹಣೆಯ ಸೂಕ್ಷ್ಮತೆಯು ಯಾರಿಗಾದರೂ ಮಾದರಿಯಾಗಬಲ್ಲದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Ad Widget

Ad Widget

ಕಾಲೇಜಿನ ಅಭಿವೃದ್ಧಿಗೆ ₹2 ಲಕ್ಷ ಕೊಡುಗೆ- ನೆನಪಿನಿಂದ ನಂಟಿಗೆ, ನಂಟಿನಿಂದ ಕೊಡುಗೆಗೆ
ಪುನರ್ಮಿಲನವು ಕೇವಲ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಕಾರ್ಯಕ್ರಮವಾಗಿ ಉಳಿಯದೆ, ತಾವು ಕಲಿತ ಸಂಸ್ಥೆಯ ಮೇಲಿನ ಋಣ ತೀರಿಸುವ ಸಾರ್ಥಕ ಸಂದರ್ಭವಾಗಿಯೂ ಪರಿಣಮಿಸಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 1991ರ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು ಒಟ್ಟಾಗಿ ₹2 ಲಕ್ಷವನ್ನು ಕಾಲೇಜಿನ ಅಭಿವೃದ್ಧಿ ಕಾರ್ಯಗಳಿಗಾಗಿ ದೇಣಿಗೆಯಾಗಿ ನೀಡಿದರು.ತಾವು ವಿದ್ಯಾಭ್ಯಾಸ ಪಡೆದ ಸಂಸ್ಥೆಯ ಅಭಿವೃದ್ಧಿಗೆ ದಶಕಗಳ ಬಳಿಕವೂ ಕೈಜೋಡಿಸಿದ ಹಿರಿಯ ವಿದ್ಯಾರ್ಥಿಗಳ ಈ ಕೊಡುಗೆ ಕಾಲೇಜಿನ ಮೇಲಿನ ಅವರ ಪ್ರೀತಿ, ಕೃತಜ್ಞತೆ ಹಾಗೂ ಸದ್ಭಾವನೆಯ ಪ್ರತೀಕವಾಗಿ ಮೂಡಿಬಂತು.

ವೃತ್ತಿ ಸಾಧನೆಗೆ ಗೌರವ
ಹಿರಿಯ ವಿದ್ಯಾರ್ಥಿಗಳ ವೃತ್ತಿಪರ ಸಾಧನೆಗಳನ್ನೂ ಕಾರ್ಯಕ್ರಮದಲ್ಲಿ ಗುರುತಿಸಲಾಯಿತು. ಡಾ. ಗಿರೀಶ್ ಭಟ್ ಅಜಕ್ಕಳ ಹಾಗೂ ಶ್ರೀ ನವೀನ್ ಕುಮಾರ್ ಅವರನ್ನು ಅವರ ವೃತ್ತಿಪರ ಸಾಧನೆಗಳಿಗಾಗಿ ಗೌರವಿಸಲಾಯಿತು. ವೃತ್ತಿಜೀವನದಲ್ಲಿನ ಸಾಧನೆಗಳು ಹಾಗೂ ಪ್ರಗತಿಯನ್ನು ಗುರುತಿಸಿ ವಿವಿಧ ಗೌರವಗಳನ್ನು ನೀಡಿ ಅಭಿನಂದಿಸಲಾಯಿತು. ರೈಲ್ವೆ ಉದ್ಯೋಗದಲ್ಲಿನ ಪದೋನ್ನತಿಯೂ ಸೇರಿದಂತೆ ವೃತ್ತಿಪರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳ ಯಶಸ್ಸನ್ನು ಕಾರ್ಯಕ್ರಮದಲ್ಲಿ ಮೆಚ್ಚುಗೆಯಿಂದ ಸ್ಮರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ವಾಣಿ ಹಾಗೂ ಡಾ. ಚಂದ್ರಶೇಖರ್ ಕೆ ಜಿ ಪ್ರಾರ್ಥನೆ ನೆರವೇರಿಸಿದರು. ಡಾ. ಕೃಷ್ಣಪ್ರಭಾ ಕಾರ್ಯಕ್ರಮ ನಿರ್ವಹಿಸಿದರು. ಶಿವಕುಮಾರ್ ಸ್ವಾಗತಿಸಿದರು. ಶಿವನಾಥ ರೈ ಮೆಗಿನಗುತ್ತು ಪ್ರಾಸ್ತಾವಿಕ ನುಡಿಗಳ ಮೂಲಕ ಕಾರ್ಯಕ್ರಮದ ಆಶಯವನ್ನು ವಿವರಿಸಿದರು.

ಡಾ. ಗಿರೀಶ್ ಭಟ್ ಅಜಕ್ಕಳ ವಂದಿಸಿದರು.

ನೆನಪುಗಳೊಂದಿಗೆ ಮತ್ತೆ ವಿದ್ಯಾರ್ಥಿಗಳಾದ ಹಿರಿಯ ವಿದ್ಯಾರ್ಥಿಗಳು
ಇತ್ತೀಚಿನ ವರ್ಷಗಳಲ್ಲಿ ಕಾಲೇಜಿನ ವಿವಿಧ ಬ್ಯಾಚ್‌ಗಳ ಹಿರಿಯ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ಒಗ್ಗೂಡಿಸಿಕೊಂಡು ಕಾಲೇಜಿಗೆ ಭೇಟಿ ನೀಡುತ್ತಿರುವುದು ಗಮನಾರ್ಹವಾಗಿದೆ. ಇಂತಹ ಪುನರ್ಮಿಲನಗಳು ಕೇವಲ ಭೇಟಿಗೆ ಸೀಮಿತವಾಗದೆ, ಹಳೆಯ ಸುವರ್ಣ ನೆನಪುಗಳನ್ನು ಮರುಕಳಿಸುವ, ಸ್ನೇಹದ ನಂಟನ್ನು ಗಟ್ಟಿಗೊಳಿಸುವ ಹಾಗೂ ತಾವು ಬೆಳೆದ ಸಂಸ್ಥೆಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಪುನಃ ಜೋಡಿಸುವ ವೇದಿಕೆಗಳಾಗಿವೆ.

ವೃತ್ತಿ ಮತ್ತು ಸಾಮಾಜಿಕ ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಕಾಲೇಜಿನ ಆವರಣಕ್ಕೆ ಕಾಲಿಟ್ಟ ಕ್ಷಣ ಅವರು ತಮ್ಮ ಹುದ್ದೆ, ಸ್ಥಾನಮಾನಗಳನ್ನು ಮರೆತು ಮತ್ತೆ ತಮ್ಮ ಕಾಲೇಜು ದಿನಗಳ ವಿದ್ಯಾರ್ಥಿಗಳಾಗಿ, ಸ್ನೇಹಿತರಾಗಿ, ಸಹಪಾಠಿಗಳಾಗಿ ಬೆರೆತದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.

ಒಂದು ಋಣಸ್ಮರಣೆ; ಗುರುಗಳಿಗೆ ಭಾವಪೂರ್ಣ ಗುರುವಂದನೆ
ಪ್ರೊ. ಅಣ್ಣಾಜಿರಾವ್ | ಪ್ರೊ. ಹರಿನಾರಾಯಣ ಮಾಡಾವು | ಪ್ರೊ. ವಿಷ್ಣು ಭಟ್ | ಡಾ. ಎ.ಪಿ. ರಾಧಾಕೃಷ್ಣ | ಡಾ. ಕೃಷ್ಣಕುಮಾರ್ | ಪ್ರೊ. ಗಣೇಶ್ ಭಟ್ | ಪ್ರೊ. ಬಾಲಕೃಷ್ಣ | ಪ್ರೊ. ವಸಂತಿ | ಪ್ರೊ. ಇಟಾ ಡಿಸೋಜಾ
1991ರ ಬಿ.ಎಸ್ಸಿ. ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು ತಮ್ಮ ಬದುಕಿಗೆ ಜ್ಞಾನ ಮತ್ತು ದಿಕ್ಕು ನೀಡಿದ ಈ ಗುರುಗಳನ್ನು ಏಲಕ್ಕಿ ಹಾರ, ಸರಸ್ವತಿ ವಿಗ್ರಹ, ಶಾಲು ಹಾಗೂ ಹಣ್ಣುಗಳನ್ನು ನೀಡಿ ಗುರುವಂದನೆಯೊಂದಿಗೆ ಸನ್ಮಾನಿಸಿದರು.

ಗುರುವಂದನೆ ಸ್ವೀಕರಿಸಲು ಅನಾರೋಗ್ಯ ಮತ್ತು ವಯೋಸಹಜ ಕಾರಣಗಳಿಗೆ ಸಮಾರಂಭಕ್ಕೆ ಬರಲಾಗದ ಪ್ರೊ. ಲಕ್ಷ್ಮಿನಾರಾಯಣ ಕಡಂಬಳಿತ್ತಾಯ, ಪ್ರೊ.ಕೇಶವ ಭಟ್,ಪ್ರೊ.ಕಾನ್ಸೆಪ್ಟ ಲೋಬೋ, ಪ್ರೊಸಿರಿಲ್ ಮಥಿಯಾಸ್ ಅವರ ನಿವಾಸಗಳಿಗೇ ಹುಡುಕಿಕೊಂಡು ಹೋದ ಹಿರಿಯ ವಿದ್ಯಾರ್ಥಿಗಳು ಅಲ್ಲಿಯೇ ಗುರುವಂದನೆ ಸಲ್ಲಿಸಿ ಕೃತಾರ್ಥರಾದದ್ದು ವಿಶೇಷವಾಗಿತ್ತು.

ಇದು ಕೇವಲ ಸನ್ಮಾನವಾಗಿರದೆ, ತಮ್ಮ ಬದುಕಿಗೆ ಜ್ಞಾನ, ಶಿಸ್ತು, ಮೌಲ್ಯ ಮತ್ತು ದಿಕ್ಕು ನೀಡಿದ ಗುರುಗಳೆಡೆಗೆ ಹಳೆಯ ವಿದ್ಯಾರ್ಥಿಗಳು ಸಲ್ಲಿಸಿದ ಕೃತಜ್ಞತೆಯ ಸಂಕೇತವಾಗಿತ್ತು. ಕಾಲೇಜು ದಿನಗಳಲ್ಲಿ ಶಿಕ್ಷಕರಿಂದ ಪಡೆದ ಮಾರ್ಗದರ್ಶನವನ್ನು ಹಲವು ದಶಕಗಳ ಬಳಿಕವೂ ಸ್ಮರಿಸಿ ಗೌರವ ಸಲ್ಲಿಸಿದ ಕ್ಷಣವು ಕಾರ್ಯಕ್ರಮಕ್ಕೆ ವಿಶೇಷ ಭಾವನಾತ್ಮಕ ಸ್ಪರ್ಶ ನೀಡಿತು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಡಾ ಕೃಷ್ಣಪ್ರಭಾ, ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್ ಮಾಣಿ, ಶಿವನಾಥ ರೈ ಮೆಗಿನಗುತ್ತು, ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಹಾಗೂ ವಾಲೇರಿಯನ್ ಡಿಸೋಜಾ ಪ್ರಮುಖ ಪಾತ್ರ ವಹಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಪೊನ್ನಪ್ಪ ಅಡ್ಲ್ಯಾಬ್ಸ್, ಕಾಲೇಜಿನ ಪಿಆರ್‌ಒ ಡಾ. ಭಾರತಿ ಎಸ್. ರೈ, ಉಪಕುಲಸಚಿವ (ಶೈಕ್ಷಣಿಕ) ವಿಪಿನ್ ನಾಯಕ್, ಎನ್‌ಸಿಸಿ ನೌಕಾ ವಿಭಾಗದ ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್, ಉಪಕುಲಸಚಿವ (ಮೌಲ್ಯಮಾಪನ) ಅಭಿಷೇಕ್ ಸುವರ್ಣ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಹರ್ಷಿತ್ ಕುಮಾರ್ ಉಪಸ್ಥಿತರಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading