Connect with us

ಲೇಖನಗಳು

ಪುತ್ತೂರಿನ ರಾಜಕೀಯದ ಮುಂದೆ ಹಿಂದುತ್ವವೇ ಮಂಡಿಯೂರುತ್ತಿವುದು ದುರಂತ..! ನ್ಯಾಯ ಆಚೆ ಬದಿಗೊಂದು ಈಚೆ ಬದಿಗೊಂದು ಸಿದ್ದವಾಗಿದೆಯೇ..? ಪುತ್ತೂರಿಗರು ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆ..! ಪುತ್ತಿಲರ ಬಗೆಗೆ ಆಕ್ಷೇಪಗಳಿದ್ದರೆ ಅವರನ್ನು ಹಿಂದೂ ಸಮಾಜದ ವಿಶ್ವಸನೀಯ ಪಕ್ಷವೆಂಬ ನೆಗಳ್ತೆಗೆ ಪಾತ್ರವಾದ ಭಾಜಪಕ್ಕೆ ಸೇರಿಸುವ ‘ನಾಟಕ’ ಬೇಕಿತ್ತೇ..? ✍️ ಲೇಖನ : ರಾಕೇಶ್‌ ಕಮ್ಮಾಜೆ

Published

on



Ad Widget

Ad Widget

Ad Widget

Ad Widget

ಹಿಂದೂ ಸಮಾಜ ತಲೆತಗ್ಗಿಸುವ ಕೆಲಸವೊಂದು ಪುತ್ತೂರಿನಲ್ಲಿ ಘಟಿಸಿದೆ. ವಿಶ್ವಹಿಂದೂ ಪರಿಷತ್ತಿನ ನೂತನ ಕಟ್ಟಡದ ಶಿಲಾನ್ಯಾಸಕ್ಕೆ ಆಗಮಿಸಿದ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲರನ್ನು ತಡೆಯುವ, ತಳ್ಳಾಡುವ ಮೂಲಕ ಒಂದು ಕೆಟ್ಟ ಸಂದೇಶವನ್ನು ಸಮಾಜಕ್ಕೆ ನೀಡಲಾಗಿದೆ. ‘ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎನ್ನುವ ಘೊಷವಾಕ್ಯಕ್ಕೆ ಅಪಚಾರವೆಸಗುವ ಕಾರ್ಯ ನಡೆದಿದೆ.

Ad Widget

Ad Widget

Ad Widget

Ad Widget
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅರುಣ್ ಪುತ್ತಿಲ ಅಥವ ಅವರ ಪರಿವಾರದವರು ಸಂಘದ ಬಗೆಗೆ ಸಂಘಟನೆಗಳ ಬಗೆಗೆ ಹಾಗೂ ಹಿರಿಯರ ಬಗೆಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂಬುದು ಅವರ ಮೇಲಿರುವ ಆರೋಪ. ಆ ಕಾರಣದಿಂದಲೇ ಅವರು ವಿಶ್ವಹಿಂದೂ ಪರಿಷತ್ತಿನ ಕಟ್ಟಡ ನಿರ್ಮಾಣದ ಭೂಮಿಪೂಜೆಗೆ ಬರಬಾರದೆಂಬುದು ತಳ್ಳಾಡಿದವರ ಅಂಬೋಣ.

ಇದೇ ವಿಷಯವನ್ನು ಆಧರಿಸಿಯೇ ಮುಂದುವರೆಯುವುದಾದರೆ ಇದು ಬಹುದೊಡ್ಡ ಚರ್ಚಾಸ್ಪದ ವಿಷಯವೇ ಹೌದು. ಯಾಕೆಂದರೆ ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಗೆಲುವೇ ಪ್ರಧಾನವಾಗಿರುವಾಗ ಎದುರಾಳಿಯನ್ನು ಹಳಿಯುವುದು, ಅವರ ತಪ್ಪುಗಳನ್ನು ಎತ್ತಿ ಕಾಣಿಸುವುದು ಎಲ್ಲವೂ ಸಹಜ ಪ್ರಕ್ರಿಯೆಯೇ ಆಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದವರು ಎದುರಾಳಿಗಳನ್ನು ಹೊಗಳುತ್ತಾ ಪ್ರಚಾರಮಾಡುವ ಕ್ರಮ ಜಗತ್ತಿನಲ್ಲೇ ಇಲ್ಲ..! ಹೀಗಿರುವಾಗ ಅರುಣ್ ಪುತ್ತಿಲ ಟೀಕಿಸಿದ್ದಾರೆ, ಜರೆದಿದ್ದಾರೆ ಎಂಬೆಲ್ಲ ವಾದಗಳು ಚುನಾವಣೆ ಮುಗಿಯುವವರೆಗಷ್ಟೇ ಊರ್ಜಿತದಲ್ಲಿರುತ್ತವೆ..!

Ad Widget

Ad Widget

Ad Widget alt="Ad Widget"/>

Ad Widget

ಹಾಗೆ ನೋಡಿದರೆ ವಿಧಾನಸಭಾ ಚುನಾವಣೆಯ ವೇಳೆಗೆ ಅರುಣ್ ಪುತ್ತಿಲ ಹಾಗೂ ಅವರ ತಂಡದವರ ಬಗೆಗೆ ಕಾಂಗ್ರೆಸ್‌ಗಿಂತಲೂ ಭಾಜಪಾಕ್ಕೆ ಸಂಬಂಧಿಸಿದ ಅಥವ ಸಂಘಪರಿವಾರಕ್ಕೆ ಸಂಬಂಧಿಸಿದ ವ್ಯಕ್ತಿಗಳಲ್ಲೇ ಅನೇಕ ಮಂದಿ ಕೇವಲವಾಗಿ ಮಾತನಾಡಿದ್ದು ಮಾಧ್ಯಮಗಳಲ್ಲೇ ಪ್ರಕಟವಾಗಿದೆ. ಹಾಗಾದರೆ ಅವೆಲ್ಲವೂ ಸ್ವೀಕಾರಾರ್ಹವಾದದ್ದಾಗಿದೆಯೇ..? ನ್ಯಾಯವೂ ಆಚೆ ಬದಿಗೊಂದು ಈಚೆ ಬದಿಗೊಂದು ಅಂತ ಸಿದ್ಧವಾಗುತ್ತದೆಯೇ ಅನ್ನುವುದು ಪುತ್ತಿಲ ಪರಿವಾರದವರಲ್ಲಿ ಪ್ರಶ್ನೆಯಾಗಿ ಮೂಡಲಾರಂಭಿಸಿದೆ. ಈ ಮಧ್ಯೆ, ಚುನಾವಣೆಯ ಸಂದರ್ಭದಲ್ಲೂ ನೇರಾನೇರವಾಗಿ ಅರುಣ್ ಪುತ್ತಿಲರಾಗಲೀ, ಅವರ ಬೆಂಬಲಿಗರಾಗಲೀ ಸಂಘವನ್ನೋ, ಸಂಘದ ಹಿರಿಯರನ್ನೋ ತುಚ್ಛವಾಗಿ ನಿಂದಿಸಿದ್ದು ಇದುವರೆಗೂ ಮಾಧ್ಯಮದಲ್ಲಾಗಲೀ, ವಾಟ್ಸಾಪ್ ವೀಡಿಯೋಗಳಲ್ಲಾಗಲೀ ಹರಿದಾಡಿದ್ದಿಲ್ಲ. ಅದೂ ಅಲ್ಲದೆ, ಸಂಘದವರನ್ನೋ, ಭಾಜಪಾದವರನ್ನೋ ನಿಂದಿಸದಿದ್ದದ್ದರಿಂದಲೇ ಅರುಣ್ ಪುತ್ತಿಲ ವ್ಯಾಪಕ ಪ್ರಶಂಸೆಗೂ, ಬಹುದೊಡ್ಡ ಜನಬೆಂಬಲಕ್ಕೂ ಅರ್ಹರಾದದ್ದೆಂಬುದೂ ಸತ್ಯ. ಇನ್ನು, ಖಾಸಗಿಯಾಗಿ ಯಾರೋ ಯಾರಲ್ಲೋ ಯಾವಾಗಲೋ ಏನನ್ನೋ ಹೇಳಿದ್ದಾರೆಂಬುದು ತರ್ಕಕ್ಕೆ ಮೂಲವಾಗುವುದಿಲ್ಲ. ಅದನ್ನು ತರ್ಕವಾಗಿ ಎತ್ತಿಕೊಳ್ಳುವವರು ಸಾಮಾನ್ಯ ಜ್ಞಾನ ಹಾಗೂ ಪ್ರಪಂಚಜ್ಞಾನ ಎರಡರಿಂದಲೂ ದೂರ ಇದ್ದಾರೆಂದೇ ಅರ್ಥ!

Ad Widget

Ad Widget <> Ad Widget

ಅದೇನೇ ಇರಲಿ, ಅವೆಲ್ಲದರ ನಂತರವೇ ಅರುಣ್ ಪುತ್ತಿಲರನ್ನು ಭಾಜಪಕ್ಕೆ ಸೇರಿಸುವ ಪ್ರಕ್ರಿಯೆ ನಡೆದಿದೆ. ಹೊರಗಿನಿಂದ ಏನೇ ಹೇಳಿದರೂ, ಪುತ್ತಿಲರನ್ನು ಪಕ್ಷಕ್ಕೆ ಸೇರಿಸಿಕೊಂಡದ್ದು ಅವರ ಹಿಂದಿರುವ ಅರವಮೂರು ಸಾವಿರ ಮತದಾರರನ್ನೂ, ಮುಂದಾಗಬಹುದಾದ ಹಾನಿಯನ್ನೂ ಗಮನದಲ್ಲಿಟ್ಟುಕೊಂಡೇ ವಿನಃ ಔದಾರ್ಯದಿಂದ ಅಲ್ಲ ಎಂಬುದು ಪ್ರತಿಯೊಬ್ಬ ಪುತ್ತೂರಿಗನಿಗೂ ತಿಳಿದಿದೆ..! ಅಕಸ್ಮಾತ್ ಪುತ್ತಿಲರ ಬಗೆಗೆ ಆಕ್ಷೇಪಗಳಿದ್ದರೆ ಅವರನ್ನು ಹಿಂದೂ ಸಮಾಜದ ವಿಶ್ವಸನೀಯ ಪಕ್ಷವೆಂಬ ನೆಗಳ್ತೆಗೆ ಪಾತ್ರವಾದ ಭಾಜಪಕ್ಕೆ ಸೇರಿಸುವ ‘ನಾಟಕ’ ಬೇಕಿರಲಿಲ್ಲ ಎಂಬುದನ್ನು ಅನೇಕ ಪ್ರಜ್ಞಾವಂತರೇ ಆಡುತ್ತಿದ್ದಾರೆ.



Ad Widget

ಹಾಗಾದರೆ ಚುನಾವಣಾ ಸಂದರ್ಭದಲ್ಲಿ ಪುತ್ತಿಲರ ಬೆಂಬಲ ಅಗತ್ಯವಿರುವುದರಿಂದ ಪಕ್ಷಕ್ಕೆ, ಸಂಘಟನೆಗೆ ಸೇರಿಸಿಕೊಳ್ಳುವುದು, ತದನಂತರ ಮೂಲೆಗುಂಪು ಮಾಡುವುದು ಎಂಬ ಅಘೋಷಿತ ನಿರ್ಣಯವೇನಾದರೂ ಆಗಿದೆಯಾ..? ಮೊನ್ನೆ ಮೊನ್ನೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲೂ ಅರುಣ್ ಪುತ್ತಿಲ ಸಕ್ರಿಯವಾಗಿಯೇ ತೊಡಗಿಸಿಕೊಂಡಿದ್ದಾರೆ, ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ತನ್ನನ್ನು ನೇರಾನೇರ ಟೀಕಿಸಿದ್ದ ಕಿಶೋರ್ ಕುಮಾರ್ ಬೊಟ್ಯಾಡಿ ಜತೆಗೂ ಹೆಗಲಿಗೆ ಕೈಯಿಟ್ಟು ಗೆಲುವಿಗಾಗಿ ದುಡಿದಿದ್ದಾರೆ. ಹಾಗಾದರೆ ಆವಾಗಲೆಲ್ಲಾ ಹಿಂದೂ ವ್ಯವಸ್ಥೆಗೆ ಸ್ವೀಕಾರಾರ್ಹವಾಗಿದ್ದ ಅರುಣ್ ಪುತ್ತಿಲ ಇದೀಗ ಚುನಾವಣೆಯ ನಂತರ ‘ತುಚ್ಛ’ರಾದದ್ದು ಹೇಗೆ ಎಂಬುದು ಅನೇಕರಿಗೆ ಪ್ರಶ್ನೆಯಾಗಿಯೇ ಉಳಿದಿದೆ..!

Ad Widget

Ad Widget

ನಿಜ, ಅರುಣ್ ಪುತ್ತಿಲರನ್ನು ಭಾಜಪಕ್ಕೆ ತರುವ ವೇಳೆಗೂ ಒಂದಷ್ಟು ಕಿತ್ತಾಟಗಳಾಗಿವೆ, ಅದಾಗಲೇ ಹೇಳಿದಂತೆ ಅರುಣ್ ಪುತ್ತಿಲರನ್ನು ಹೊರಗಿಟ್ಟರೆ ನಷ್ಟ ಆಗುತ್ತದೆಂಬ ಕಾರಣದಿಂದಲೇ, ಅವರು ಭಾಜಪಕ್ಕೆ ಅಡಿಯಿಡುವಾಗ ಅವರನ್ನು ಸ್ವೀಕರಿಸಲು ಮನಸ್ಸಿಲ್ಲದವರೂ ಸುಮ್ಮನೆ ಕುಳಿತಿದ್ದಾರೆ ಹೊರತು, ಹಿಂದು ಸಮಾಜ ಒಡೆಯುತ್ತದೆ, ಅದು ಒಂದಾಗಿಯೇ ಇರಬೇಕೆಂಬ ಉದಾತ್ತ ಚಿಂತನೆಯಿಂದ ಏನೂ ಅಲ್ಲ ಎಂಬುದು ಆ ವೇಳೆಗೇ ಅನೇಕರಿಗೆ ಅರ್ಥವಾಗಿದ್ದ ವಿಚಾರ.

ತನ್ಮಧ್ಯೆ, ಪುತ್ತಿಲರನ್ನು ತಮ್ಮ ಗುಂಪಿಗೆ ಸೇರಿಸಿದಂತೆ ಮಾಡಿ, ಅವರಿಂದಾಗುವ ಅಷ್ಟೂ ಲಾಭವನ್ನು ಪಡೆದುಕೊಂಡು ನಂತರ ಅವರ ವರ್ಚಸ್ಸನ್ನೂ, ಜನಾನುರಾಗವನ್ನೂ ಮರೆಮಾಡುವ ಯೋಚನೆಯಲ್ಲಿ ಕೆಲವರಿರುವುದನ್ನು ಅರುಣ್ ಪುತ್ತಿಲ ಅರಿಯದಷ್ಟು ಮುಗ್ಧರಲ್ಲ ಎನಿಸುತ್ತದೆ.
ಅಂದಿನಿಂದ ಇಂದಿನವರೆಗೂ ಕಾರ್ಯಕರ್ತರ ಮಧ್ಯೆ ನಿರ್ಮಾಣವಾದ ಕಂದಕ ಹಾಗೆಯೇ ಬೆಳೆದುಬಂದಿದೆ. ಪುತ್ತಿಲರನ್ನು ಪಕ್ಷಕ್ಕೆ ಬರಮಾಡಿಕೊಂಡವರೂ ಈ ಕಂದಕ ಮುಚ್ಚುವ ಕಾರ್ಯಕ್ಕೆ ಯಾರೂ ಮನಸ್ಸು ಮಾಡಿಲ್ಲ. ಕೆಲವರಿಗಂತೂ ಕಂದಕ ಇರುವುದೇ ಒಳ್ಳೆಯದೆಂಬ ಭಾವನೆ ಇದ್ದಂತಿದೆ.

ಯಾಕೆಂದರೆ ಹೀಗೆ ಕಂದಕವೊಂದಿದ್ದರೆ ಮಾತ್ರ ಬೇಕಾದಾಗ, ಅರ್ಥಾತ್ ಚುನಾವಣೆ ಬಂದಾಗ ಕಾಲುಸಂಕವೊಂದನ್ನು ಹಾಕಿ ಆಚೀಚೆ ನಡೆದಾಡುವುದು, ಬೇಡದಾಗ ಕಾಲುಸಂಕವನ್ನೆತ್ತಿ ಎಸೆದು ನಮಗೂ ಅವರಿಗೂ ಸಂಬಂಧವೇ ಇಲ್ಲ ಎಂಬಂತೆ ಇರುವುದಕ್ಕೆ ಸಾಧ್ಯ..!

ಹಾಗೆಂದು ಹಿಂದೂ ಸಮಾಜದ ಬಗೆಗೆ ನಿಜಕಾಳಜಿಯಿರುವ ಅನೇಕರಿಗೆ ಈ ಪ್ರಕರಣದಿಂದ ನೋವಾಗಿದ್ದು ಸತ್ಯ.
ಮೊದಲೇ ಹತ್ತು ಹಲವು ದಾಳಿಗಳಿಂದ ಹಿಂದೂ ಸಮಾಜ ನಲುಗುತ್ತಿದೆ. ಇದರ ಮಧ್ಯೆ ಹಿಂದೂ ಸಂಘಟನೆ, ವ್ಯಕ್ತಿಗಳ ನಡುವೆಯೇ ಈ ಭಿನ್ನಮತಗಳು ಬೆಳೆದುಬರುತ್ತಿದ್ದರೆ ನಷ್ಟವಾಗುವುದು ಪಕ್ಷಕ್ಕಿಂತಲೂ ಹೆಚ್ಚಾಗಿ ಹಿಂದೂ ಸಮಾಜಕ್ಕೆ ಎಂಬುದನ್ನು ಮರೆಯಬಾರದು. ಯಾಕೆಂದರೆ ಈ ಎಲ್ಲಾ ವ್ಯವಹಾರಗಳಲ್ಲಿ ಬಲಿಪಶುಗಳಾಗುತ್ತಿರುವುದು ಕಾರ್ಯಕರ್ತರು. ಒಂದೆಡೆ ಪುತ್ತಿಲರನ್ನು ಸ್ವೀಕರಿಸುವುದು ಮತ್ತೊಂದೆಡೆ ಅವರನ್ನು ಮೂಲೆಗುಂಪಾಗಿಸುವ ಪ್ರಯತ್ನ ನಡೆಸುವುದು. ಚುನಾವಣೆ ಬಂದಾಗ ಹೆಗಲಿಗೆ ಹೆಗಲು, ಚುನಾವಣೆ ನಂತರ ಮುಯ್ಯಿಗೆ ಮುಯ್ಯಿ.. ಇಂತಹ ಘಟನೆಗಳು ಒಟ್ಟು ವ್ಯವಸ್ಥೆಯ ಬಗೆಗೇ ಕಾರ್ಯಕರ್ತನಲ್ಲಿ ಜಿಗುಪ್ಸೆ ತರುವುದಕ್ಕೆ ಕಾರಣವಾಗುತ್ತದೆ. ಆಗ ಶಿಥಿಲಗೊಳ್ಳುವುದು ಹಿಂದೂ ಸಂಘಟನೆ..!

ಭಾಜಪಕ್ಕೆ ಸೇರಿದ ನಂತರವೂ ಅರುಣ್ ಪುತ್ತಿಲ ಅವರು ತಮ್ಮ ಪುತ್ತಿಲ ಪರಿವಾರದ ನೆಲೆಯಿಂದಲೇ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಪಕ್ಷಕ್ಕೆ ಸೇರಿದ್ದರಿಂದ ಅವರಿಗೆ ದೊಡ್ಡ ಲಾಭವೇನೂ ಆದಂತಿಲ್ಲ. ತಾವು ಇಷ್ಪಡುವ ‘ಮೋದೀಜಿಯವರಿಗಾಗಿ’ ದುಡಿಯುವ ಅವಕಾಶ ಅವರಿಗೂ ಅವರ ಜತೆಗಾರರಿಗೂ ಸಿಕ್ಕಿದ್ದಷ್ಟೇ ಲಾಭ..! ಹಾಗಾಗಿ ಪಕ್ಷದಲ್ಲೇ ಇದ್ದು, ಹೀಗೆ ಮೂಲೆಗುಂಪಾಗಿಸುವ ಪ್ರಯತ್ನಕ್ಕೆ ತನ್ನನ್ನು ತಾನು ಶಾಶ್ವತವಾಗಿ ಒಡ್ಡಿಕೊಂಡಿರಬೇಕಾದ ಪರಿಸ್ಥಿತಿಯಲ್ಲೇನೂ ಅವರಿಲ್ಲ.

ಚುನಾವಣೆ ಗೆಲ್ಲಬಹುದು ಅಥವ ಗೆಲ್ಲದೇ ಇರಬಹುದು, ಜನಮಾನಸದಲ್ಲಿ ಹಿಂದೂ ನಾಯಕ ಎಂಬ ಭಾವನೆಯನ್ನು ಅದಾಗಲೇ ಅವರು ಮೂಡಿಸಿಯಾಗಿದೆ. ಈಗಲೂ ಸಮಯದ ಹಂಗಿಲ್ಲದೆ ಹಿಂದೂ ಸಮಾಜಕ್ಕಾಗಿ ಎದ್ದು ಬರುತ್ತಿರುವ ಈ ಭಾಗದ ಏಕೈಕ ನಾಯಕ ಅರುಣ್ ಪುತ್ತಿಲರೇ..! ಈ ತಳ್ಳಾಟ ಪ್ರಕರಣದಲ್ಲೂ ಜನರ ಭಾವನೆ ವಾಲಿದ್ದು ಅರುಣ್ ಪುತ್ತಿಲ ಅವರ ಕಡೆಗೆಯೇ..! ಅದರರ್ಥ, ಅರುಣ್ ಪುತ್ತಿಲ ಮಾಡುವುದೆಲ್ಲಾ ಸರಿ, ಅವರನ್ನು ಯಾರೂ ಪ್ರಶ್ನಿಸಬಾರದು ಎಂದಲ್ಲ.

ಆದರೆ ಸದ್ಯಕ್ಕಂತೂ ದಾರಿಯಲ್ಲಿ ನಿಲ್ಲಿಸಿ ಪ್ರಶ್ನೆ ಮಾಡಬೇಕಾದಂತಹ ಕಾರ್ಯವನ್ನೇನೂ ಅವರು ಮಾಡಿಲ್ಲ ಎಂಬುದು ಪುತ್ತೂರಿನ ಸಾಮಾನ್ಯ ನಾಗರಿಕರಿಗೂ ತಿಳಿದಿದೆ.
ನಿಜಕ್ಕಾದರೆ ಸಂಘದ ಅಥವ ಭಾಜಪದ ಒಂದಷ್ಟು ಜನ ಹಿರಿಯರು ಮನಸ್ಸು ಮಾಡಿದರೆ ಅರುಣ್ ಪುತ್ತಿಲರ ವರ್ಚಸ್ಸನ್ನು ಬಳಸಿಕೊಂಡು ಪುತ್ತೂರಷ್ಟೇ ಅಲ್ಲದೆ ಬಹುತೇಕ ಕರಾವಳಿ ಭಾಗದಾದ್ಯಂತ ಸಂಘಟನೆಯನ್ನು, ಪಕ್ಷವನ್ನು ಮತ್ತಷ್ಟು ಬಲಪಡಿಸಬಹುದು, ಮತ್ತೂ ಮುಂದುವರೆದು ಪುತ್ತಿಲ ಪರಿವಾರವನ್ನೇ ಹಿಂದೂ ಸಂಘಟನೆಗಳಡಿ ವಿಲೀನಗೊಳಿಸಲೂಬಹುದು. ಆದರೆ ಅಂತಹ ವ್ಯವಸ್ಥೆ ಜಾರಿಗೊಳ್ಳಬೇಕಾದರೆ ಪರಸ್ಪರ ವಿಶ್ವಾಸ ಮೂಡಬೇಕಿದೆ ಹಾಗೂ ವೈಯಕ್ತಿಕ ಹಿತಾಸಕ್ತಿಗಿಂತ ಹಿಂದೂ ಸಮಾಜದ, ಭಾಜಪದ ಉನ್ನತಿಕೆಯೇ ಲಕ್ಷ್ಯವಾಗಬೇಕಿದೆ!

ಹಾಗೆಂದು ಸಂಘಪರಿವಾರದ ಹಿರಿಯರೋ, ಹಿಂದೂ ಸಮಾಜದ ನೇತಾರರೋ ಎಲ್ಲರೂ ಕೈಕಟ್ಟಿಕೂತಿದ್ದಾರೆ ಎಂದಲ್ಲ. ವಿಶ್ವಹಿಂದೂ ಪರಿಷತ್ತಿನ ಹಿರಿಯರೆನಿಸಿದವರು ಈ ಘಟನೆಯನ್ನು ಖಂಡಿಸಿದ್ದಾರೆ, ತಪ್ಪಾದದ್ದು ಹೌದು ಎಂಬುದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ.

ಪುತ್ತೂರಿನ ಘಟನೆಯ ಬಳಿಕ ಸಂಘದ ಹಿರಿಯರೊಬ್ಬರು ‘ಬೈಠಕ್’ ತೆಗೆದುಕೊಂಡಿದ್ದಾರೆಂಬ ವರ್ತಮಾನವಿದೆ. ಯಾಕೆಂದರೆ ನಿಜವಾದ ಸಂಘ, ರಾಜಕೀಯಕ್ಕಿಂತ ಭಿನ್ನವಾದದ್ದು, ಶ್ರೇಷ್ಟವಾದದ್ದೂ ಹೌದು. ಸಂಘ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ಮಾಡುತ್ತದೆಯೇ ವಿನಃ ತನ್ನ ಕಿರೀಟವನ್ನು ವಿಜ್ರಂಭಿಸುವುದಕ್ಕೆ ಹೊರಡುವುದಿಲ್ಲ. ಹಾಗಾಗಿ ಸಂಘದ ಹಿರಿಯರೆನಿಸಿದವರು ತಮ್ಮ ಸಹಸಂಘಟನೆಗಳಿಗೆ, ಅವುಗಳ ನೇತೃತ್ವ ವಹಿಸಿದವರಿಗೆ ಬುದ್ಧಿಮಾತು ಹೇಳಿರಬಹುದು ಎಂಬ ನಿರೀಕ್ಷೆಯಿದೆ. ಯಾಕೆಂದರೆ ‘ಅದು ಕಾರ್ಯಕರ್ತರ ಭಾವನೆ’ ಎಂದು ಯಾರೂ ಜಾರುವಂತಿಲ್ಲ. ಯಾಕೆಂದರೆ ಕಾರ್ಯಕರ್ತ ತಪ್ಪಾದ ಹಾದಿಯಲ್ಲಿ ನಡೆಯರಾಂಭಿಸಿದರೆ ಆತನನ್ನು ತಿದ್ದಿ, ಸರಿದಾರಿಗೆ ತರುವ ಜವಾಬ್ಧಾರಿ ನೇತಾರರಿಗಿದೆ. ಅಕಸ್ಮಾತ್ ಕಾರ್ಯಕರ್ತರಲ್ಲಿ ನೋವಿದೆ ಎಂದು ಗೊತ್ತಿದ್ದರೆ, ನೇತಾರರೆನಿಸಿದವರು ಇಷ್ಟು ದಿನ ತೆಪ್ಪಗಿದ್ದದ್ದು ಯಾಕೆ, ಹಾಗಾದರೆ ಅವರಿಗೂ ಆ ನೋವು ಕಾರ್ಯಕರ್ತರಲ್ಲಿ ಸದಾ ಉಳಿದೇ ಇರಬೇಕು ಎಂಬ ಭಾವನೆ ಇದೆಯೇ? ಎಂದು ಪುನಃ ಅವರ ಬುಡಕ್ಕೇ ಬರುತ್ತದೆ! ಹಾಗಾಗಿ ಪಕ್ಷ, ಸಂಘಟನೆಗಳ ನೇತಾರರು ಹೆಚ್ಚು ಜಾಗೃತೆ ವಹಿಸಬೇಕಿದೆ.
ಸೂಕ್ಷ್ಮವಾಗಿ ನೋಡಿದರೆ, ಬಜರಂಗದಳವೋ, ಶ್ರಿರಾಮಸೇನೆಯೋ ಅಥವ ಪುತ್ತಿಲ ಪರಿವಾರವೋ… ಇವೆಲ್ಲದರ ಕಾರ್ಯಕರ್ತ ನಿಜಕ್ಕೂ ಮುಗ್ಧನೇ, ಆತ ತನ್ನ ನೇತಾರ ಹೇಳಿದ್ದನ್ನು ಪ್ರಮಾಣವೆಂದೇ ನಂಬುತ್ತಾನೆ. ಯಾರೆದುರಾದರೂ ಛೂ ಬಿಟ್ಟರೆ ಹರಿಹಾಯುತ್ತಾನೆ. ಕೊನೆಗೆ ಅವನ ಮನೆಗೆ ಹೋಗಿ ‘ನೀ ಮಾಡಿದ್ದು ಸರಿಯಾ’ ಎಂದು ಕಣ್ಣಲ್ಲಿ ಕಣ್ಣಿಟ್ಟು ಕೇಳಿದರೆ ಕಣ್ಣಿರ‍್ಗರೆಯುತ್ತಾನೆ.

ಹಾಗಾಗಿ ಪುತ್ತಿಲರು ಬಂದಾಗ ತೋಳೇರಿಸಿದವರನ್ನು ನಿಂದಿಸಬೇಕಾದದ್ದಿಲ್ಲ. ಅವರಿಗೆ ಯಾರೋ ಅಂತಹ ಪ್ರೇರಣೆ ನೀಡಿರಬಹುದು. ಅಷ್ಟಕ್ಕೂ ಪುತ್ತಿಲರ ಎದುರು ನಿಂತವರೂ ಹಿಂದೂ ಸಮಾಜಕ್ಕಾಗಿಯೇ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ ಎಂಬುದನ್ನು ಮರೆಯಬಾರದು.
ಹಿಂದೊಮ್ಮೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಭಾಷಣದಲ್ಲಿ ನನಗೆ ಶಾಸಕ ಸ್ಥಾನ ಅಥವ ಹಿಂದುತ್ವ ಆಯ್ಕೆಯಾಗಿ ಎದುರು ನಿಂತರೆ ನಾನು ಹಿಂದುತ್ವವನ್ನೇ ಆಯ್ಕೆ ಮಾಡುತ್ತೇನೆ ಎಂದಾಗ ಇಡೀ ಹಿಂದೂ ಸಮಾಜ ಪುಳಕಿತಗೊಂಡಿತ್ತು. ತದನಂತರ ಹೆಚ್ಚಿನವರು ‘ರಾಜಕೀಯಕ್ಕಿಂತ ಹಿಂದುತ್ವವೇ ಮುಖ್ಯ’ ಎಂದು ರಾಜ್ಯಾದ್ಯಂತ ಭಾಷಣ ಮಾಡಲಾರಂಭಿಸಿದ್ದರು. ಹೀಗೆ ರಾಜ್ಯದೆಲ್ಲೆಡೆ ರಾಜಕೀಯಕ್ಕಿಂತ ಹಿರಿದೆನಿಸಿದ ಹಿಂದುತ್ವ ಪುತ್ತೂರಿನಲ್ಲಿ ಮಾತ್ರ ರಾಜಕೀಯದೆದುರು ಮಂಡಿಯೂರಿ ಕುಳಿತಿರುವುದನ್ನು ನೋಡುವಾಗ ಅಯ್ಯೋ ಎನಿಸುತ್ತದೆ.

ಕೊನೆಗೂ, ಈ ರಾಡಿ ರಾದ್ಧಾಂತಗಳಿಗೆ ಕೊನೆ ಹಾಡಲು ಅಸಾಧ್ಯವಾದರೆ ಅಷ್ಟರಮಟ್ಟಿಗೆ ಸಂಘವೂ, ಭಾಜಪವೂ ಈ ಭಾಗದಲ್ಲಿ ಸೋತಿದೆ ಎಂದೇ ಅರ್ಥ. ಯಾಕೆಂದರೆ ತನ್ನದೇ ಆಡುಂಬೊಲ ಪುತ್ತೂರಿನ ರಗಳೆಗಳನ್ನೇ ಸರಿಪಡಿಸಲಾಗದೆ ‘ಬನ್ನಿ ಸಿದ್ದರಾಮಯ್ಯನವರನ್ನು ಎದುರಿಸೋಣ’ ಎಂದರೆ ಬಿದ್ದು ಬಿದ್ದು ನಗೋಣ ಎನಿಸುತ್ತದೆ. ಆದ್ದರಿಂದ ರಾಜಕೀಯವನ್ನು ಮನೆಯಲ್ಲಿಟ್ಟು, ಹಿಂದೂ ಸಮಾಜದ ಎಲ್ಲರೂ ಒಂದಾಗಿ ಬೆರೆಯುವಂತಹ ವಾತಾವರಣವನ್ನು ರೂಪಿಸುವ ಸದ್ಬುದ್ಧಿಯನ್ನು ‘ಪುತ್ತೂರಿನ ಕಾಣದ ಕೈಗಳಿಗೆ’ ಭಗವಂತ ಕರುಣಿಸಲಿ ಎಂದಷ್ಟೇ ಹಾರೈಸಬಹುದು..!

ರಾಕೇಶ ಕುಮಾರ್ ಕಮ್ಮಜೆ
ಪ್ರಾಂಶುಪಾಲರು
ಅಂಬಿಕಾ ಮಹಾವಿದ್ಯಾಲಯ
ಬಪ್ಪಳಿಗೆ, ಪುತ್ತೂರು

Ad Widget
1 Comment

1 Comment

  1. LAKSHMINARAYANA BHAT PERNAJE

    October 24, 2024 at 4:32 pm

    ಈ ಘಟಣೆಯ ನಂತರ ವಿಶ್ವಹಿಂದೂ ಪರಿಷತ್ತಿನ ಹಿರಿಯರ ನೇತಾರ ಯು.ಪೂವಪ್ಪನವರ ಹೇಳಿಕೆ ಗಮನಿಸಿರುವೆ.ವಾಸ್ತವಿಕೆಯ ಅರಿವಿದ್ಜದ ಹಿರಿಯರ ನೈಜ ಕಾಳಜಿ ಅವರ ಹೇಳಿಕೆ ಒಡಗೂಡಿತ್ತು.ಹಾಗೆಯೇ ವಿಶ್ವಹಿಂದೂಪರಿಷತ್ತಿನ ಪುತ್ತೂರಿನ ಯುವ ನೇತಾರ ಮುರಲಿಕೃಷ್ಣ ಅವರ ಹೇಳಿಕೆಯನ್ನೂ ಗಮನಿಸಿದೆ.ಅವರ ಹೇಳಿಕೆ ಕಾರ್ಯಕರ್ತರ ನಡೆಯನ್ನು ಸಮರ್ಥಿಸಿದಂತಿತ್ತು. ಮತ್ತು ಎಲ್ಲವೂ ಸರಿಯಾಗಬೇಕು ಎಂಬ ನೈಜ ಕಾಳಜಿ ಕುರಿತು ಸಂದೇಹ ಬರುವಂತಿತ್ತು.ಪುತ್ತಿಲರ ಹೇಳಿಕೆ ಆ ಘಟಣೆಯನ್ನು ಅತಿ ಲಘುವಾಗಿ ಅವರು ಸ್ವೀಕರಿಸಿ ಸಮಾಜಸಂಘಟಣೆಯ ವಿಚಾರದ ಮಧ್ಯೆ ಈ ಘಟಣೆ ಮೌಲ್ಯರಹಿತವಾಗಿದೆ ಎಂಬುದನ್ನು ಪ್ರಕಟಪಡಿಸಿದಂತಿತ್ತು.ಮತ್ತು ಅವರ ಹೇಳಿಕೆ ಮುತ್ಸದ್ದಿತನವನ್ನು ಬಿಂಬಿಸುವಂತಿತ್ತು.ಎಲ್ಲವನ್ನೂ ನಿರ್ವ್ಯಾಜವಾಗಿ ಸ್ವೀಕರಿಸುವುದಾದಲ್ಲಿ ಪುತ್ತೂರಲ್ಲಿ ಹಿಂದುತ್ವದ ಮೌಲ್ಯ ಕುಸಿಯುತ್ತಿದ್ದು ವಿನಾಶದ ಹಾದಿಯತ್ತ ಸಾಗುತ್ತಲಿದೆ ಎನ್ನದೆ ಬೇರೆ ವಿಧಿಯಿಲ್ಲ.

Leave a Reply

ಲೇಖನಗಳು

Mercury-ಬುಧನ ನಕ್ಷತ್ರ ಬದಲಾವಣೆ: ಈ 5 ರಾಶಿಯವರಿಗೆ ಇಂದಿನಿಂದ ‘ರಾಜಯೋಗ’, ಅದೃಷ್ಟದ ಬಾಗಿಲು ಓಪನ್..!

Published

on



Ad Widget

Ad Widget

Ad Widget

Ad Widget

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದೇ ಕರೆಯಲ್ಪಡುವ ‘ಬುಧ’ ಇಂದು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ. ಸದ್ಯ ಪೂರ್ವಫಲ್ಗುಣಿ ನಕ್ಷತ್ರದಲ್ಲಿರುವ ಬುಧನು ಇಂದು (ಶನಿವಾರ) ಸಂಜೆ 4:31ಕ್ಕೆ ಸೂರ್ಯನ ಅಧಿಪತ್ಯದ ‘ಉತ್ತರಾಫಲ್ಗುಣಿ’ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.

Ad Widget

Ad Widget

Ad Widget

Ad Widget

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದೇ ಕರೆಯಲ್ಪಡುವ ‘ಬುಧ’ ಇಂದು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ. ಸದ್ಯ ಪೂರ್ವಫಲ್ಗುಣಿ ನಕ್ಷತ್ರದಲ್ಲಿರುವ ಬುಧನು ಇಂದು (ಶನಿವಾರ) ಸಂಜೆ 4:31ಕ್ಕೆ ಸೂರ್ಯನ ಅಧಿಪತ್ಯದ ‘ಉತ್ತರಾಫಲ್ಗುಣಿ’ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.

Ad Widget

Ad Widget

Ad Widget alt="Ad Widget"/>

Ad Widget

ಈ ನಕ್ಷತ್ರ ಬದಲಾವಣೆಯು ಮುಂದಿನ 13 ದಿನಗಳ ಕಾಲ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದರೂ, 5 ರಾಶಿಯವರಿಗೆ ಮಾತ್ರ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಉದ್ಯೋಗ, ವ್ಯವಹಾರ ಮತ್ತು ಆರ್ಥಿಕವಾಗಿ ಲಾಭ ಪಡೆಯಲಿರುವ ಆ ಅದೃಷ್ಟದ ರಾಶಿಗಳು ಇಲ್ಲಿವೆ:

Ad Widget

Ad Widget <> Ad Widget

ವೃಷಭ ರಾಶಿ
ವೃಷಭ ರಾಶಿಯವರಿಗೆ ಬುಧನ ನಕ್ಷತ್ರ ಬದಲಾವಣೆ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು. ವೃತ್ತಿಜೀವನದಲ್ಲಿ ಬಹುದಿನಗಳಿಂದ ಎದುರು ನೋಡುತ್ತಿದ್ದ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ದೊರೆಯುವುದರಿಂದ ನಿಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಮುಂದಕ್ಕೆ ಕೊಂಡೊಯ್ಯಬಹುದು. ಇದರಿಂದ ವೃತ್ತಿಯಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗಬಹುದು. ಉದ್ಯೋಗದ ಜೊತೆಗೆ ಕುಟುಂಬದ ವಿಚಾರದಲ್ಲೂ ಈ ಅವಧಿ ಖುಷಿ ನೀಡಬಹುದು. ಕುಟುಂಬದವರೊಂದಿಗೆ ಪ್ರವಾಸ ಅಥವಾ ಮಕ್ಕಳೊಂದಿಗೆ ವಿಶೇಷ ಸಮಯ ಕಳೆಯುವ ಅವಕಾಶ ಸಿಗಬಹುದು. ಒಟ್ಟಿನಲ್ಲಿ, ಕೆಲಸದಲ್ಲಿ ಪ್ರಗತಿ ಮತ್ತು ಕುಟುಂಬದಲ್ಲಿ ಸಂತೋಷ ಎರಡೂ ಒಟ್ಟಿಗೆ ಸಿಗುವ ಆಹ್ಲಾದಕರ ದಿನಗಳು ನಿಮ್ಮದಾಗಬಹುದು.



Ad Widget

ಮಿಥುನ ರಾಶಿ
ಬುಧನ ಬದಲಾವಣೆ ​ಮಿಥುನ ರಾಶಿಯವರಿಗೆ ಹಣದ ವಿಚಾರದಲ್ಲಿ ಹೊಸ ದಾರಿ ತೋರಿಸಬಹುದು. ವ್ಯಾಪಾರದಲ್ಲಿ ತೊಡಗಿರುವವರಿಗೆ ಹೊಸ ಯೋಜನೆಗಳು ಮತ್ತು ಪ್ರಮುಖ ಒಪ್ಪಂದಗಳನ್ನು ಅಂತಿಮಗೊಳಿಸುವ ಅವಕಾಶ ಸಿಗಬಹುದು. ಈಗ ಮಾಡಿಕೊಳ್ಳುವ ಕೆಲವು ವ್ಯವಹಾರ ಸಂಪರ್ಕಗಳು ಮುಂದಿನ ದಿನಗಳಲ್ಲಿ ದೊಡ್ಡ ಲಾಭ ತಂದುಕೊಡುವ ಸಾಧ್ಯತೆಯಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಸಮಯ ಇದಾಗಿದ್ದು, ಆದಾಯ ಗಳಿಸಲು ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ಹಣಕಾಸಿನ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡುಬರಬಹುದು. ವ್ಯವಹಾರ ವಿಸ್ತರಣೆ ಜೊತೆಗೆ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶವೂ ಒಟ್ಟಿಗೆ ಒಲಿದುಬರಬಹುದು.

Ad Widget

Ad Widget

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದಿನಿಂದಲೇ ಶುಭ ಸುದ್ದಿಗಳ ನಿರೀಕ್ಷೆ. ಸೂರ್ಯನ ಅಧಿಪತ್ಯದ ಸಿಂಹ ರಾಶಿಯವರಿಗೆ ಬುಧನ ನಕ್ಷತ್ರ ಬದಲಾವಣೆ ವಿಶೇಷವಾಗಿರಬಹುದು. ವಿಶೇಷವಾಗಿ ಸೆಪ್ಟೆಂಬರ್ 13ರವರೆಗಿನ ಅವಧಿ ಹಲವು ವಿಚಾರಗಳಲ್ಲಿ ಅನುಕೂಲಕರವಾಗಿರಬಹುದು. ನೀವು ಅಂದುಕೊಂಡ ಕೆಲಸಗಳು ನಿರೀಕ್ಷೆಯಂತೆ ನಡೆಯುವ ಸಾಧ್ಯತೆಯಿದ್ದು, ಮನಸ್ಸಿನಲ್ಲೂ ಹೊಸ ಉತ್ಸಾಹ ಮೂಡಬಹುದು. ಮನೆಯ ವಾತಾವರಣ ಸಂತೋಷದಿಂದ ಕೂಡಿರಲಿದ್ದು, ಕುಟುಂಬದವರಿಂದ ಉತ್ತಮ ಬೆಂಬಲ ಸಿಗಬಹುದು. ಹಣಕಾಸಿನ ವಿಚಾರಗಳಲ್ಲೂ ಸ್ಥಿರತೆ ಹೆಚ್ಚಾಗುವ ಸಾಧ್ಯತೆಯಿದೆ. ಹಣದ ಚಿಂತೆ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ, ಕೆಲಸದಲ್ಲಿ ಸ್ಪಷ್ಟತೆ ಸಿಗುವ ದಿನಗಳು ಆರಂಭವಾಗಬಹುದು.

ವೃಶ್ಚಿಕ ರಾಶಿ
ಮುಂದಿನ ದಿನಗಳು ​ವೃಶ್ಚಿಕ ರಾಶಿಯವರಿಗೆ ಹೊಸ ಅನುಭವಗಳ ಜೊತೆಗೆ ನೆಮ್ಮದಿಯನ್ನೂ ತರಬಹುದು. ಇಂದಿನಿಂದ ಸೆ.13ರವರೆಗಿನ ಅವಧಿ ನಿಮಗೆ ವಿಶೇಷವಾಗಿರಬಹುದು. ಹೊಸ ವಿಷಯಗಳನ್ನು ಕಲಿಯಲು ಮತ್ತು ನಿಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಉತ್ತಮ ಅವಕಾಶಗಳು ಸಿಗಬಹುದು. ಕುಟುಂಬದವರೊಂದಿಗೆ ಪ್ರವಾಸಕ್ಕೆ ಯೋಜನೆ ರೂಪಿಸುವ ಸಾಧ್ಯತೆಯಿದ್ದು, ಬಹುದಿನಗಳಿಂದ ಬಯಸುತ್ತಿದ್ದವರೊಂದಿಗೆ ಗುಣಮಟ್ಟದ ಸಮಯ ಕಳೆಯಬಹುದು. ಇದೇ ಸಮಯದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳತ್ತ ಆಸಕ್ತಿ ಹೆಚ್ಚಾಗಬಹುದು. ಕುಟುಂಬದ ಸಂತೋಷ, ಹೊಸ ಕಲಿಕೆ ಮತ್ತು ಮನಸ್ಸಿನ ನೆಮ್ಮದಿ-ಮೂರೂ ಒಂದೇ ಸಮಯದಲ್ಲಿ ಸಿಗುವ ಸಾಧ್ಯತೆಯಿದೆ.

ಧನು ರಾಶಿ
ಬುಧನ ನಕ್ಷತ್ರ ಬದಲಾವಣೆ ಧನು ರಾಶಿಯವರಿಗೆ ಪ್ರಗತಿಯ ಹೊಸ ಬಾಗಿಲು ತೆರೆಯಬಹುದು. ಉದ್ಯೋಗದಲ್ಲಿರುವವರಿಗೆ ತಮ್ಮ ಕ್ಷೇತ್ರದಲ್ಲಿ ಮುನ್ನಡೆಯಲು ಉತ್ತಮ ಅವಕಾಶಗಳು ದೊರೆಯಬಹುದು. ವ್ಯವಹಾರಸ್ಥರಿಗೂ ಹೊಸ ಅವಕಾಶಗಳು ಸಿಗುವ ಸಾಧ್ಯತೆಯಿದ್ದು, ಕೈಗೆತ್ತಿಕೊಂಡ ಕೆಲಸಗಳಲ್ಲಿ ಯಶಸ್ಸು ಕಾಣಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಾಧ್ಯತೆಯಿದ್ದು, ಆರ್ಥಿಕ ಲಾಭವೂ ದೊರೆಯಬಹುದು. ಯಶಸ್ಸಿನ ಅನುಭವದಿಂದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ. ಕೆಲಸದಲ್ಲಿ ಯಶಸ್ಸು, ಹಣದಲ್ಲಿ ಲಾಭ ಮತ್ತು ಆತ್ಮವಿಶ್ವಾಸದ ಹೆಚ್ಚಳ-ಧನು ರಾಶಿಯವರಿಗೆ ಶುಭ ದಿನಗಳು ಆರಂಭವಾಗಬಹುದು.

Ad Widget
Continue Reading

ಲೇಖನಗಳು

Shani Dev-ರೇವತಿ ನಕ್ಷತ್ರಕ್ಕೆ ಶನಿ ಪ್ರವೇಶ; ಈ 4 ರಾಶಿಯವರಿಗೆ ಶುಕ್ರದೆಸೆ ಆರಂಭ..!

Published

on



Ad Widget

Ad Widget

Ad Widget

Ad Widget

ಗ್ರಹಗಳ ಚಲನೆಯಲ್ಲಿ ನ್ಯಾಯದ ದೇವತೆ ಎಂದು ಕರೆಯಲ್ಪಡುವ ಶನಿ ಮಹಾತ್ಮನ ಸಂಚಾರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾದ ಶನಿಯು ಶೀಘ್ರದಲ್ಲೇ ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದು, ಈ ಬದಲಾವಣೆಯು ಕೆಲವು ರಾಶಿಯವರ ಬದುಕಿನಲ್ಲಿ ಸುಖವನ್ನು ತರಲಿದೆ.

Ad Widget

Ad Widget

Ad Widget

Ad Widget

ಜ್ಯೋತಿಷ್ಯ ಲೋಕ: ಗ್ರಹಗಳ ಚಲನೆಯಲ್ಲಿ ನ್ಯಾಯದ ದೇವತೆ ಎಂದು ಕರೆಯಲ್ಪಡುವ ಶನಿ ಮಹಾತ್ಮನ ಸಂಚಾರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾದ ಶನಿಯು ಶೀಘ್ರದಲ್ಲೇ ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದು, ಈ ಬದಲಾವಣೆಯು ಕೆಲವು ರಾಶಿಯವರ ಬದುಕಿನಲ್ಲಿ ಸುಖವನ್ನು ತರಲಿದೆ.

Ad Widget

Ad Widget

Ad Widget alt="Ad Widget"/>

Ad Widget

ರೇವತಿ ನಕ್ಷತ್ರಕ್ಕೆ ಶನಿ ಪಾದಾರ್ಪಣೆ:
ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಆಗಸ್ಟ್ 20, 2026ರ ಸಂಜೆ 07:45ಕ್ಕೆ ಶನಿಯು ರೇವತಿ ನಕ್ಷತ್ರದ ಮೊದಲ ಪಾದಕ್ಕೆ ಪ್ರವೇಶಿಸಲಿದ್ದಾನೆ. ಅಕ್ಟೋಬರ್ 09, 2026ರವರೆಗೆ ಶನಿಯು ಇದೇ ನಕ್ಷತ್ರದಲ್ಲಿ ವಿರಾಜಮಾನನಾಗಿರುತ್ತಾನೆ. ಈ ಅವಧಿಯಲ್ಲಿ ಶನಿ ದೇವನು ನಾಲ್ಕು ರಾಶಿಯವರಿಗೆ ವಿಶೇಷ ಆಶೀರ್ವಾದ ನೀಡಲಿದ್ದಾನೆ.

Ad Widget

Ad Widget <> Ad Widget

ಯಾರಿಗೆ ಅದೃಷ್ಟ?



Ad Widget

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಈ ಅವಧಿಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನಿರುದ್ಯೋಗಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಆಫರ್ ಸಿಗುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ದೀರ್ಘಕಾಲದ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ.

Ad Widget

Ad Widget

ಸಿಂಹ ರಾಶಿ: ಅಕ್ಟೋಬರ್ ವರೆಗಿನ ಸಮಯವು ಸಿಂಹ ರಾಶಿಯವರಿಗೆ ‘ಸುವರ್ಣ ಅವಧಿ’ಯಾಗಲಿದೆ. ನೀವು ಕೈಹಾಕಿದ ಪ್ರಮುಖ ಕೆಲಸಗಳಲ್ಲಿ ಭರ್ಜರಿ ಯಶಸ್ಸು ಸಿಗಲಿದೆ. ಹಳೆಯ ಹೂಡಿಕೆಗಳಿಂದ ದೊಡ್ಡ ಲಾಭ ದೊರೆಯಲಿದ್ದು, ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲವಿದು.

ಕನ್ಯಾ ರಾಶಿ: ಈ ರಾಶಿಯವರು ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯಲಿದ್ದಾರೆ. ಉದ್ಯೋಗದಲ್ಲಿ ಬಡ್ತಿ (Promotion) ಸಿಗುವ ಸಾಧ್ಯತೆ ದಟ್ಟವಾಗಿದೆ. ನಿಮ್ಮ ಕಾರ್ಯಕ್ಷಮತೆಯನ್ನು ಮೇಲಧಿಕಾರಿಗಳು ಶ್ಲಾಘಿಸಲಿದ್ದು, ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದೀರಿ.

ಮಕರ ರಾಶಿ: ಶನಿಯ ನಕ್ಷತ್ರ ಬದಲಾವಣೆಯು ಮಕರ ರಾಶಿಯವರ ಕೌಟುಂಬಿಕ ಜೀವನದಲ್ಲಿ ಸಂತೋಷ ತರಲಿದೆ. ಮನೆಯಲ್ಲಿ ಮದುವೆಯಂತಹ ಶುಭ ಕಾರ್ಯಗಳು ಜರುಗಲಿವೆ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದ್ದು, ಸಂಬಂಧಗಳು ಮತ್ತಷ್ಟು ಬಲಗೊಳ್ಳುತ್ತವೆ. ಬಾಕಿ ಉಳಿದಿದ್ದ ಕಾನೂನು ಕೆಲಸಗಳಲ್ಲಿ ಜಯ ಸಿಗಲಿದೆ.

ಒಟ್ಟಾರೆಯಾಗಿ, ಶನಿ ದೇವನ ಈ ನಕ್ಷತ್ರ ಪರಿವರ್ತನೆಯು ಈ ನಾಲ್ಕು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.

Ad Widget
Continue Reading

ಲೇಖನಗಳು

Lakshmi Rajyoga-ಶುಕ್ರ-ಚಂದ್ರ ಸಂಯೋಗ: ಸೆ.13ರಿಂದ ಈ 5 ರಾಶಿಯವರಿಗೆ ಒಲಿಯಲಿದೆ ‘ಲಕ್ಷ್ಮಿ ರಾಜಯೋಗ’..!

Published

on



Ad Widget

Ad Widget

Ad Widget

Ad Widget

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟಕ್ಕೆ ವಿಶೇಷ ಮಹತ್ವವಿದೆ. ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಅಪರೂಪದ ಗ್ರಹ ಸಂಯೋಗ ನಡೆಯಲಿದ್ದು, ಇದು ಹಲವು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.

Ad Widget

Ad Widget

Ad Widget

Ad Widget

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟಕ್ಕೆ ವಿಶೇಷ ಮಹತ್ವವಿದೆ. ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಅಪರೂಪದ ಗ್ರಹ ಸಂಯೋಗ ನಡೆಯಲಿದ್ದು, ಇದು ಹಲವು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.

Ad Widget

Ad Widget

Ad Widget alt="Ad Widget"/>

Ad Widget

ಸೆ.13ರಂದು ಸೃಷ್ಟಿಯಾಗಲಿದೆ ಲಕ್ಷ್ಮಿ ರಾಜಯೋಗ
ಸೆಪ್ಟೆಂಬರ್ 13 ರಂದು ಕಲೆ, ಪ್ರೀತಿ ಮತ್ತು ವೈಭವದ ಕಾರಕನಾದ ಶುಕ್ರ ಹಾಗೂ ಮನಸ್ಸಿನ ಕಾರಕನಾದ ಚಂದ್ರ ತುಲಾ ರಾಶಿಯಲ್ಲಿ ಒಂದಾಗಲಿದ್ದಾರೆ. ಈ ಎರಡು ಪ್ರಬಲ ಗ್ರಹಗಳ ಮಿಲನದಿಂದಾಗಿ ‘ಲಕ್ಷ್ಮಿ ರಾಜಯೋಗ’ ಸೃಷ್ಟಿಯಾಗಲಿದೆ. ಈ ಯೋಗವು ಸೃಜನಶೀಲತೆ ಮತ್ತು ಉತ್ಸಾಹವನ್ನು ಹೆಚ್ಚಿಸುವುದಲ್ಲದೆ, ಕೆಲವು ರಾಶಿಗಳಿಗೆ ಆರ್ಥಿಕವಾಗಿ ಅಪಾರ ಲಾಭವನ್ನು ತಂದುಕೊಡಲಿದೆ. ಆ ಅದೃಷ್ಟವಂತ 5 ರಾಶಿಗಳು ಇಲ್ಲಿವೆ:

Ad Widget

Ad Widget <> Ad Widget

ಕಟಕ ರಾಶಿ
ಇನ್ನೊಂದು ತಿಂಗಳಲ್ಲಿ ಕಟಕ ರಾಶಿಯವರ ಬಾಳು ಬೆಳಗುವುದು. ಕಟಕ ರಾಶಿಯವರ ಆತ್ಮ ವಿಶ್ವಾಸ ಮತ್ತು ವ್ಯಕ್ತಿತ್ವವನ್ನು ಸುಧಾರಿಸಲಿದೆ. ಇದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಬಲವಾದ ಪ್ರಭಾವ ಬೀರುವುದು. ಕಚೇರಿಯಲ್ಲಿ ನಿಮ್ಮ ಮೇಲಿನ ಗೌರವ ಹೆಚ್ಚಾಗಬಹುದು. ಕೆಲವರಿಗೆ ಹೊಸ ಜವಾಬ್ದಾರಿಗಳನ್ನು ನೀಡಬಹುದು. ಬಡ್ತಿಗೆ ಅವಕಾಶಗಳು ಸಿಗಲಿವೆ. ಅಲ್ಲದೆ ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ನೀವು ಕಾಣುವಿರಿ. ವಿವಾಹಿತ ದಂಪತಿಗಳ ನಡುವೆ ಅನ್ಯೋನ್ಯತೆ ದ್ವಿಗುಣವಾಗಲಿದೆ. ಈ ಅವಧಿಯು ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿರುತ್ತದೆ. ಯಾಕೆಂದರೆ ನೀವು ನಿಮ್ಮ ಪರೀಕ್ಷೆಗಳಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು. ನಿಮ್ಮ ಭರವಸೆಗಳನ್ನು ಪೂರೈಸಲು ಸಾಧ್ಯವಾಗುವ ಸಮಯ ಇದು. ಆಸ್ತಿಗಳಲ್ಲಿ ಹೂಡಿಕೆ ಮಾಡಲು ಇದು ಅತ್ಯುತ್ತಮ ಸಮಯ.



Ad Widget

ಸಿಂಹ ರಾಶಿ
​ಸಿಂಹ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ನೆಮ್ಮದಿಯನ್ನು ತರಲಿದೆ. ಶುಕ್ರ ಚಂದ್ರ ಗ್ರಹ ಸಂಚಾರವು ಹೊಸ ಆದಾಯದ ಅವಕಾಶಗಳನ್ನು ಸೃಷ್ಟಿಸಬಹುದು. ಬಹುನಿರೀಕ್ಷಿತ ಹಣ ಈ ಸಮಯದಲ್ಲಿ ಉಪಯೋಗಕ್ಕೆ ಬರಬಹುದು. ಹೂಡಿಕೆಗಳು ಅನಿರೀಕ್ಷಿತ ಲಾಭವನ್ನು ನೀಡುತ್ತವೆ. ಐಷಾರಾಮಿ ವಸ್ತುಗಳ ಮೇಲಿನ ವೆಚ್ಚಗಳು ಹೆಚ್ಚಾಗಲಿವೆ. ಆದರೆ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸು ಕಂಡುಬರುವ ಸಾಧ್ಯತೆಗಳು ಇವೆ. ಇದಲ್ಲದೆ ಹೆಚ್ಚಿದ ಆತ್ಮವಿಶ್ವಾಸ ನಿಮ್ಮ ವೃತ್ತಿಜೀವನದಲ್ಲಿ ಪ್ರಮುಖ ಮೈಲಿಗಲ್ಲುಗಳನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ.

Ad Widget

Ad Widget

ಧನು ರಾಶಿ
ಧನು ರಾಶಿಯವರಿಗೆ ಭಾಗ್ಯದ ಬಾಗಿಲು ತೆರೆಯುವ ಸಮಯ. ಈ ಸಮಯದಲ್ಲಿ ನೀವು ಮಾಡುವ ಕಾರ್ಯಗಳು ದುಪ್ಪಟ್ಟು ಲಾಭವನ್ನು ನೀಡುತ್ತವೆ. ಹಿಂದೆ ಮಾಡಿದ ಸಾಲಗಳನ್ನು ತೀರಿಸಲು ಸಾಧ್ಯವಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಇದಲ್ಲದೆ ಉದ್ಯೋಗದಲ್ಲಿ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳು ವೃದ್ಧಿಯಾಗುತ್ತವೆ. ಇದು ವ್ಯವಹಾರ ಮತ್ತು ವೈಯಕ್ತಿಕ ವಿಷಯಗಳಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಸಮಯ. ಹೀಗಾಗಿ ನೀವು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸು ಕಾಣುವಿರಿ. ನೆಮ್ಮದಿಯ ಜೀವನ ನಿಮ್ಮದಾಗಲಿದೆ. ದೀರ್ಘಕಾಲದಿಂದ ನಿಂತುಹೋಗಿದ್ದ ಶುಭ ಕಾರ್ಯಗಳು ಮತ್ತೆ ಶುರುವಾಗಲಿವೆ.

ತುಲಾ ರಾಶಿ
ಲಕ್ಷ್ಮಿ ರಾಜಯೋಗದಿಂದಾಗಿ ಸೆಪ್ಟೆಂಬರ್ 13ರಿಂದ ತುಲಾ ರಾಶಿಯವರ ಆದಾಯ ದ್ವಿಗುಣವಾಗುವುದು. ವಿದೇಶದಲ್ಲಿ ವ್ಯಾಪಾರ ಅಥವಾ ಕೆಲಸದಲ್ಲಿ ತೊಡಗಿರುವವರು ಹೆಚ್ಚಿನ ಲಾಭವನ್ನು ಗಳಿಸಬಹುದು. ಶುಕ್ರ ಚಂದ್ರ ಗ್ರಹಗಳ ಸಂಯೋಗದಿಂದ ತುಲಾ ರಾಶಿಯವರ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಹಳೆಯ ಹೂಡಿಕೆಗಳಿಂದ ಲಾಭವನ್ನು ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಇರುತ್ತವೆ. ವಿಶೇಷವಾಗಿ ಶುಕ್ರನು ಹಣದ ಮನೆಯಲ್ಲಿ ಸಂಯೋಗದಲ್ಲಿರುವುದರಿಂದ, ಆರ್ಥಿಕ ಪರಿಸ್ಥಿತಿ ನಿರೀಕ್ಷೆಗಿಂತ ಹೆಚ್ಚು ಸುಧಾರಿಸುತ್ತದೆ. ಆರ್ಥಿಕ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳು ಬಹಳ ಕಡಿಮೆಯಾಗುವುದು. ಪ್ರಮುಖ ಅಗತ್ಯಗಳು ಈಡೇರುತ್ತವೆ. ಆರೋಗ್ಯ ಬಹಳಷ್ಟು ಸುಧಾರಣೆ ಕಾಣುವುದು. ನೀವು ವೈಯಕ್ತಿಕ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ವೃತ್ತಿ ಮತ್ತು ಕೆಲಸದಲ್ಲಿ ಮಾತ್ರವಲ್ಲದೆ ಸಮಾಜದಲ್ಲಿಯೂ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ನೀವಿರುವ ಸ್ಥಳದಲ್ಲಿ ಉದ್ಯೋಗ ಸಿಗಬಹುದು. ನಿರೀಕ್ಷಿತ ಶುಭ ಸುದ್ದಿ ಬರಲಿದೆ.

ಕುಂಭ ರಾಶಿ
​ಕುಂಭ ರಾಶಿಯವರಿಗೆ ಶುಕ್ರ ಚಂದ್ರ ಸಂಯೋಗ ಅಪಾರ ಲಾಭವನ್ನು ತಂದುಕೊಡುವುದು. ಶುಕ್ರನ ಅನುಗ್ರಹದಿಂದ ಮನೆಯಲ್ಲಿ ಮದುವೆಯಂತಹ ಶುಭ ಘಟನೆಗಳು ನಡೆಯಲಿವೆ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ಇಲ್ಲಿಯವರೆಗೆ ನಿಧಾನವಾಗಿ ಚಲಿಸುತ್ತಿರುವ ಯೋಜನೆಗಳು ವೇಗವನ್ನು ಪಡೆಯಲು ಪ್ರಾರಂಭಿಸಬಹುದು. ಬೆಳವಣಿಗೆ ಮತ್ತು ಆರ್ಥಿಕ ಲಾಭಗಳಿಗೆ ಅವಕಾಶಗಳನ್ನು ಸೃಷ್ಟಿಲಾಗಲಿವೆ. ವೃತ್ತಿಪರ ಮತ್ತು ವ್ಯವಹಾರ-ಸಂಬಂಧಿತ ಪ್ರಯತ್ನಗಳಲ್ಲಿ ಅನುಕೂಲಕರ ಬೆಳವಣಿಗೆಗಳು ಕಂಡುಬರುವ ಸಾಧ್ಯತೆ ಉಂಟು. ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳ ಬೆಂಬಲ ನಿಮ್ಮ ಮೇಲೆ ಇರುವುದರಿಂದ ನಿಮ್ಮೆಲ್ಲಾ ಕಾರ್ಯಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ. ಆದರೆ ಸಮಾಜದಲ್ಲಿ ನಿಮ್ಮ ಖ್ಯಾತಿ ಮತ್ತು ಪ್ರಭಾವ ದ್ವಿಗುಣವಾಗಲಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading