Uncategorized
Uppinangady : ಉಪ್ಪಿನಂಗಡಿ : ಕಾಲೇಜ್ ವಿದ್ಯಾರ್ಥಿನಿಯ ಅ*ತ್ಯಾ*ಚಾರ –ವಿಟ್ಲದ ವ್ಯಕ್ತಿಯ ವಿರುದ್ದ POCSO ಪ್ರಕರಣ ದಾಖಲು

3 ತಿಂಗಳ ಹಿಂದೆ ಆರೋಪಿಗೆ ವಿದ್ಯಾರ್ಥಿನಿಯ ಪರಿಚಯವಾಗಿದೆ. ಪುತ್ತೂರಿನಲ್ಲಿ ಆತ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡಿದ್ದಾನೆ ಹಾಗೂ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ. ಬಳಿಕ ದೂರವಾಣಿ ಮೂಲಕ ಆಕೆಯನ್ನು ಸಂಪರ್ಕಿಸಿ ಆತ್ಮೀಯತೆ ಬೆಳೆಸಿದ್ದಾನೆ.
ಉಪ್ಪಿನಂಗಡಿ: ಸೆ 13 ಅಪ್ರಾಪ್ತೆ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಬಗ್ಗೆ ವಿಟ್ಲದ ವ್ಯಕ್ತಿಯೊಬ್ಬರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ನೆಲ್ಯಾಡಿಯ ಕಾಲೇಜೊಂದರ ವಿದ್ಯಾರ್ಥಿನಿ ಪ್ರಕರಣದ ಸಂತ್ರಸ್ತೆ
ವಿಟ್ಲ ನಿವಾಸಿ ಆರೋಪಿ. ಈತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾಡಿಗೆ ಕರೆದುಕೊಂಡು ಕಾಡಿಗೆ ಕರೆದೊಯ್ದು ಆಕೆಯ ಅತ್ಯಾಚಾರವೆಸಗಿರುವುದಾಗಿ ಆರೋಪಿಸಲಾಗಿದೆ. ಕೃತ್ಯವು ಸುಮಾರು ಒಂದೂವರೆ ತಿಂಗಳ ಹಿಂದೆ ನಡೆದಿದೆ
ದೂರಿನಲ್ಲಿ ಏನಿದೆ ?
3 ತಿಂಗಳ ಹಿಂದೆ ಆರೋಪಿಗೆ ವಿದ್ಯಾರ್ಥಿನಿಯ ಪರಿಚಯವಾಗಿದೆ. ಪುತ್ತೂರಿನಲ್ಲಿ ಆತ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡಿದ್ದಾನೆ ಹಾಗೂ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ. ಬಳಿಕ ದೂರವಾಣಿ ಮೂಲಕ ಆಕೆಯನ್ನು ಸಂಪರ್ಕಿಸಿ ಆತ್ಮೀಯತೆ ಬೆಳೆಸಿದ್ದಾನೆ .
Uncategorized
Ashok Rai-ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದ ವಿದ್ಯಾರ್ಥಿಗಳು; ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸಿದ ಶಾಸಕ ಅಶೋಕ್ ರೈ
ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಬೊಳುವಾರಿನಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು ಈ ಕಾರ್ಯಕ್ರಮದಲ್ಲಿ ಕೆಲವೊಂದು ವಿದ್ಯಾರ್ಥಿಗಳು ಬಸ್ ಸಮಸ್ಯೆಯ ಬಗ್ಗೆ ಶಾಸಕರ ಗಮನಸೆಳೆದಿದ್ದರು. ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಅದನ್ನು ಇತ್ಯರ್ಥಪಡಿಸುವುದಾಗಿ ಶಾಸಕರು ಭರವಸೆಯನ್ನು ನೀಡಿದ್ದರು.
ಪುತ್ತೂರು: ಅ.3ರಂದು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಬೊಳುವಾರಿನಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು ಈ ಕಾರ್ಯಕ್ರಮದಲ್ಲಿ ಕೆಲವೊಂದು ವಿದ್ಯಾರ್ಥಿಗಳು ಬಸ್ ಸಮಸ್ಯೆಯ ಬಗ್ಗೆ ಶಾಸಕರ ಗಮನಸೆಳೆದಿದ್ದರು. ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಅದನ್ನು ಇತ್ಯರ್ಥಪಡಿಸುವುದಾಗಿ ಶಾಸಕರು ಭರವಸೆಯನ್ನು ನೀಡಿದ್ದರು.
ಅ. 5ರಂದು ಸೋಮವಾರ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಕಚೇರಿಗೆ ಕರೆಸಿದ ಶಾಸಕರು ಅವರ ಜೊತೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿ ಪರಿಹಾರ ಒದಗಿಸಿದ್ದಾರೆ.
ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿ ಬಸ್ ಸಮಸ್ಯೆಯ ಬಗ್ಗೆ ಶಾಸಕರ ಗಮನಸೆಳೆದಿದ್ದರು. ಪುತ್ತೂರು ಬಸ್ ನಿಲ್ದಾಣದ ಬಳಿಯಿಂದ ನಾವು ಬೊಳುವಾರು ಕಾಲೇಜಿಗೆ ಬರುವಲ್ಲಿ ಮಂಗಳೂರಿಗೆ ತೆರಳುವ ಸ್ಟೇಟ್ ಬ್ಯಾಂಕ್ ಬಸ್ಸಿನವರು ನಮ್ಮನ್ನು ಹತ್ತಲು ಬಿಡುವುದಿಲ್ಲ, ಬೇರೆ ಬಸ್ಸಲ್ಲಿ ಹೋಗಿ ಎಂದು ಹೇಳುತ್ತಾರೆ. ವಿಟ್ಲ, ಉಪ್ಪಿನಂಗಡಿ ಬಸ್ಸಿಗೆ ಹತ್ತಿದರೆ ಅವರು ಕೂಡಾ ಅದೇ ರೀತಿ ಹೇಳುವುದರಿಂದ ನಮಗೆ ಸಮಸ್ಯೆಯಾಗುತ್ತಿದೆ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದ ಶಾಸಕರು ನಗರದಲ್ಲಿ ಸಿಟಿ ಬಸ್ ಓಡಿಸುವ ಕೆಲಸ ಮಾಡಬೇಕು. ಬಸ್ಸಿನ ಕೊರತೆ ಇದ್ದಲ್ಲಿ ತಿಳಿಸಿ ಹೆಚ್ಚುವರಿ ಬಸ್ ತರಿಸುತ್ತೇನೆ. ಬೆಳಿಗ್ಗೆ ಕಾಲೇಜು ವಿದ್ಯಾರ್ಥಿಗಳು ಹೊರಡುವ ವೇಳೆ ಪುತ್ತೂರಿನಿಂದ ಬೊಳುವಾರು, ನೆಹರೂನಗರ, ದರ್ಬೆ, ಮುಕ್ರಂಪಾಡಿ ರೌಂಡ್ಸ್ ಆಗಿ ಬರುವ ವ್ಯವಸ್ಥೆಯನ್ನು ಮಾಡಬೇಕು ಇದರಿಂದ ನಗರದ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸುವುದಾಗಿ ಖಚಿತ ಭರವಸೆ ನೀಡಿದರು.ಉಳಿದಂತೆ ಪುಣಚಾ, ಪಾಣಾಜೆ, ಈಶ್ವರಮಂಗಲದ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು.
ಸಂಪ್ಯದಲ್ಲಿ ಬಸ್ ನಿಲ್ಲಿಸುತ್ತೇವೆ
ಸುಳ್ಯ ಕಡೆಯಿಂದ ಬರುವ ಬಸ್ಸುಗಳು ಸಂಪ್ಯದಲ್ಲಿ ಬಸ್ ನಿಲ್ಲಿಸುವುದೇ ಇಲ್ಲ. ಬಸ್ ಖಾಲಿ ಇದ್ದರೂ ನಿಲ್ಲಿಸುವುದಿಲ್ಲ . ಆ ಕಡೆಯಿಂದ ಇತರೆ ಬಸ್ಸುಗಳು ಫುಲ್ ಆಗಿರುತ್ತದೆ ಬಸ್ ನಿಲ್ಲಿಸುವ ವ್ಯವಸ್ಥೆ ಮಾಡಿ ಎಂದು ಶಾಸಕರಲ್ಲಿ ವಿದ್ಯಾರ್ಥಿಗಳು ಮನವಿ ಮಾದ್ದರು. ಈ ವಿಚಾರವನ್ನು ಅಧಿಕಾರಿಗಳ ಬಳಿ ಶಾಸಕರು ತಿಳಿಸಿದಾಗ ಸಂಪ್ಯದಲ್ಲಿ ನಾಳೆಯಿಂದಲೇ ಬಸ್ಸು ನಿಲ್ಲಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಈ ವೇಳೆ ವಿಭಾಗೀಯ ನಿಯಂತ್ರಣಾಧಿಕಾರಿ ಹರಿಬಾಬು, ವಿಭಾಗೀಯ ಸಂಚಲನಾಧಿಕಾರಿ ಜೈಶಂತ್, ಡಿಪೋ ಮೆನೆಜರ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
Uncategorized
ಬೆಳೆ ವಿಮೆ ಪರಿಹಾರ ಕಡಿತ: ಸರ್ಕಾರದ ಮುಂದೆ ಅರುಣ್ ಪುತ್ತಿಲ ಆಕ್ರೋಶ – ಪ್ರಶ್ನೆಗಳ ಸುರಿಮಳೆ

ಟರ್ಮ್‌ಶೀಟ್ ಬದಲಾವಣೆ ಏಕೆ? | ಮಳೆ ದಾಖಲೆ ಸರಿಯಾಗಿದೆಯೇ? | ವಿಮಾ ಕಂತು ಪಾವತಿಯಲ್ಲಿ ವಿಳಂಬವಾಗಿದೆಯೇ?
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ಹವಾಮಾನ ಆಧರಿತ ಬೆಳೆ ವಿಮೆ ಪರಿಹಾರ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿರುವ ಕುರಿತು ರೈತರಲ್ಲಿ ಅಸಮಾಧಾನ ಹೆಚ್ಚಿರುವ ಬೆನ್ನಲ್ಲೇ, ಬೆಳೆ ವಿಮಾ ವ್ಯವಸ್ಥೆಯ ಪ್ರತಿಯೊಂದು ಹಂತವನ್ನೂ ಪರಿಶೀಲಿಸಿ ವಾಸ್ತವಾಂಶಗಳನ್ನು ಬಹಿರಂಗಪಡಿಸುವಂತೆ ಅರುಣ್ ಕುಮಾರ್ ಪುತ್ತಿಲ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳೆ ವಿಮೆ ವಿಚಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ಟರ್ಮ್‌ಶೀಟ್, ಮಳೆ ದಾಖಲೀಕರಣ, ವಿಮಾ ಕಂತು, ಟೆಂಡರ್ ಹಾಗೂ ಪರಿಹಾರ ಲೆಕ್ಕಾಚಾರದ ಸಂಪೂರ್ಣ ವ್ಯವಸ್ಥೆ ಪಾರದರ್ಶಕವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಅಡಿಕೆ ಹಾಗೂ ಕಾಳುಮೆಣಸು ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಆಧಾರಿತ ವಿಮೆ ಜಾರಿಯಲ್ಲಿದ್ದು, 2026-27ನೇ ಸಾಲಿಗೂ ಅಡಿಕೆ ಮತ್ತು ಕಾಳುಮೆಣಸು ಯೋಜನೆಯಡಿ ಒಳಪಡಿಸಲಾಗಿದೆ.
₹1.28 ಲಕ್ಷದಿಂದ ₹20 ಸಾವಿರಕ್ಕೆ?
2018ರಲ್ಲಿ ಹೆಕ್ಟೇರ್‌ಗೆ ಸರಾಸರಿ ಸುಮಾರು ₹1.28 ಲಕ್ಷ, 2020–21ರಲ್ಲಿ ₹60 ಸಾವಿರದಿಂದ ₹90 ಸಾವಿರ ಹಾಗೂ 2023ರವರೆಗೆ ಸುಮಾರು ₹70 ಸಾವಿರದಷ್ಟು ಪರಿಹಾರ ದೊರೆಯುತ್ತಿತ್ತು ಎಂಬ ಮಾಹಿತಿ ರೈತರಿಂದ ಲಭ್ಯವಾಗುತ್ತಿದೆ. ಆದರೆ ಇತ್ತೀಚಿನ ಪರಿಹಾರ ಹಲವು ಪ್ರದೇಶಗಳಲ್ಲಿ ಸರಾಸರಿ ₹20 ಸಾವಿರದ ಮಟ್ಟಕ್ಕೆ ಇಳಿದಿದೆ ಎಂಬ ಅಸಮಾಧಾನವಿದೆ ಎಂದು ಪುತ್ತಿಲ ಹೇಳಿದ್ದಾರೆ.
ಇಷ್ಟೊಂದು ವ್ಯತ್ಯಾಸಕ್ಕೆ ಕಾರಣವೇನು? ವಿಮಾ ಲೆಕ್ಕಾಚಾರದ ಮಾನದಂಡ ಬದಲಾಗಿದೆಯೇ? ಟರ್ಮ್‌ಶೀಟ್‌ನಲ್ಲಿ ಏನು ಬದಲಾವಣೆಯಾಗಿದೆ? ಎಂಬುದನ್ನು ಸರ್ಕಾರ ಮತ್ತು ವಿಮಾ ಸಂಸ್ಥೆಗಳು ರೈತರ ಮುಂದೆ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇತ್ತೀಚಿನ ವರದಿಗಳಲ್ಲೂ ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ 2025-26ನೇ ಸಾಲಿನಲ್ಲಿ ಕಡಿಮೆ ಪ್ರಮಾಣದ ವಿಮೆ ಪರಿಹಾರ ದೊರೆತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ.
ಮಳೆ ಬಿದ್ದಿದ್ದೆಷ್ಟು? ಲೆಕ್ಕಕ್ಕೆ ತೆಗೆದುಕೊಂಡಿದ್ದೆಷ್ಟು?
ಹವಾಮಾನ ಆಧರಿತ ಬೆಳೆ ವಿಮೆಯಲ್ಲಿ ಮಳೆ ಪ್ರಮಾಣದ ದಾಖಲೀಕರಣ ನಿರ್ಣಾಯಕ. ಕಳೆದ ವರ್ಷ ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದ್ದರೂ ನಿರೀಕ್ಷಿತ ಪ್ರಮಾಣದ ಪರಿಹಾರ ಸಿಗದಿರುವುದರಿಂದ ಗ್ರಾಮವಾರು ವಾಸ್ತವ ಮಳೆ ಪ್ರಮಾಣ ಮತ್ತು ವಿಮಾ ಲೆಕ್ಕಾಚಾರಕ್ಕೆ ಬಳಸಿರುವ ಅಧಿಕೃತ ಮಳೆ ದಾಖಲೆ ಒಂದೇ ಆಗಿದೆಯೇ? ಎಂಬುದನ್ನು ಪರಿಶೀಲಿಸಬೇಕು ಎಂದು ಪುತ್ತಿಲ ಹೇಳಿದ್ದಾರೆ.
ಮಳೆ ಮಾಪಕಗಳ ಕಾರ್ಯನಿರ್ವಹಣೆಯಲ್ಲಿ ಕಳೆದ ವರ್ಷ ಸಮಸ್ಯೆಗಳು ಕಂಡುಬಂದಿದ್ದರೆ ಅವು ಈಗ ಸಂಪೂರ್ಣವಾಗಿ ಸರಿಪಡಿಸಲಾಗಿದೆಯೇ? ಪ್ರತಿಯೊಂದು ಗ್ರಾಮದಲ್ಲೂ ನಿರಂತರವಾಗಿ ದತ್ತಾಂಶ ದಾಖಲಾಗುತ್ತಿದೆಯೇ? ಎಂಬುದನ್ನೂ ಸರ್ಕಾರ ಬಹಿರಂಗಪಡಿಸಬೇಕು ಎಂದಿದ್ದಾರೆ.
ಹವಾಮಾನ ಆಧರಿತ ವಿಮೆಯಲ್ಲಿ ವಿಮಾ ಘಟಕ ಹಾಗೂ ಸಂಬಂಧಿತ ಹವಾಮಾನ ಕೇಂದ್ರದ ದತ್ತಾಂಶ ಪರಿಹಾರ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ರಾಜ್ಯದ ವಿಮಾ ಪಾಲು ಎಷ್ಟಿದೆ?
ವಿಮಾ ಕಂತಿನಲ್ಲಿ ರೈತರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಪಾಲಿನ ಪ್ರಮಾಣದಲ್ಲಿ ಬದಲಾವಣೆಗಳಾಗಿದ್ದರೆ ಅದರ ಸಂಪೂರ್ಣ ವಿವರವನ್ನು ಸರ್ಕಾರ ಪ್ರಕಟಿಸಬೇಕು. ರಾಜ್ಯ ಸರ್ಕಾರದ ಪಾಲಿನ ಕಂತು ಸಮಯಕ್ಕೆ ಪಾವತಿಯಾಗಿದೆಯೇ? ವಿಳಂಬವಾಗಿದ್ದರೆ ಅದರ ಪರಿಣಾಮ ಪರಿಹಾರ ವಿತರಣೆಯ ಮೇಲೆ ಬೀರಿದೆಯೇ? ಎಂಬ ಪ್ರಶ್ನೆಗಳಿಗೂ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಟೆಂಡರ್ ವಿಸ್ತರಣೆಗೂ ದಾಖಲೆ ಬೇಕು
ಟಾಟಾ ಎಐಜಿ ವಿಮಾ ಸಂಸ್ಥೆಗೆ ನೀಡಲಾಗಿದ್ದ ಟೆಂಡರ್ ಅವಧಿ ಮುಗಿದ ಬಳಿಕವೂ ವಿಸ್ತರಣೆ ಮಾಡಲಾಗಿದ್ದರೆ, ಹೊಸ ಟೆಂಡರ್ ಏಕೆ ನಡೆಯಲಿಲ್ಲ? ಯಾವ ನಿಯಮದಡಿ ಅವಧಿ ವಿಸ್ತರಿಸಲಾಯಿತು? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪುತ್ತಿಲ ಹೇಳಿದ್ದಾರೆ.
ಯಾವುದೇ ಅಕ್ರಮ ನಡೆದಿದೆ ಎಂದು ಆರೋಪಿಸುವುದಿಲ್ಲ. ಆದರೆ ರೈತರಲ್ಲಿ ಅನುಮಾನ ಮೂಡದಂತೆ ಸಂಬಂಧಿತ ಆಡಳಿತಾತ್ಮಕ ಹಾಗೂ ಹಣಕಾಸು ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಅವರು ಹೇಳಿದ್ದಾರೆ.
ಗ್ರಾಮವಾರು ವಿಮಾ ಮಾಹಿತಿ ಬಹಿರಂಗಪಡಿಸಿ
ಗ್ರಾಮವಾರು ಮಳೆ ದಾಖಲೆ, ವಿಮಾ ಘಟಕ, ಟರ್ಮ್‌ಶೀಟ್‌ನ ಪ್ರಮುಖ ಮಾನದಂಡಗಳು, ಅರ್ಹ ರೈತರ ಸಂಖ್ಯೆ, ಪರಿಹಾರ ಲೆಕ್ಕಾಚಾರದ ವಿಧಾನ ಹಾಗೂ ಪಾವತಿಸಲಾದ ಮೊತ್ತದ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಪುತ್ತಿಲ ಆಗ್ರಹಿಸಿದ್ದಾರೆ.
ಸ್ಥಳೀಯ ರೈತರು ಅಥವಾ ಸಂಘ-ಸಂಸ್ಥೆಗಳು ದಾಖಲಿಸುವ ಮಳೆ ಪ್ರಮಾಣವನ್ನು ಅಧಿಕೃತ ದಾಖಲೆಗಳೊಂದಿಗೆ ಹೋಲಿಕೆ ಮಾಡುವ ವ್ಯವಸ್ಥೆ ರೂಪಿಸಬೇಕು. ದೊಡ್ಡ ಪ್ರಮಾಣದ ವ್ಯತ್ಯಾಸ ಕಂಡುಬಂದರೆ ರೈತರಿಗೆ ಪರಿಶೀಲನೆ ಮತ್ತು ದೂರು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದಿದ್ದಾರೆ.
ರಾಜಕೀಯಕ್ಕಿಂತ ರೈತರ ಹಿತ ಮುಖ್ಯ
ಬೆಳೆ ವಿಮೆ ವಿಚಾರವನ್ನು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಸೀಮಿತಗೊಳಿಸಬಾರದು. ದಾಖಲೆಗಳು ಸಾರ್ವಜನಿಕವಾಗಬೇಕು, ನಿಯಮಗಳು ಸ್ಪಷ್ಟವಾಗಬೇಕು, ಮಳೆ ದಾಖಲೀಕರಣ ನಿಖರವಾಗಬೇಕು ಹಾಗೂ ಪರಿಹಾರ ಲೆಕ್ಕಾಚಾರ ಪಾರದರ್ಶಕವಾಗಬೇಕು ಎಂದು ಪುತ್ತಿಲ ಹೇಳಿದ್ದಾರೆ.
ದಕ್ಷಿಣ ಕನ್ನಡದ ಅಡಿಕೆ ಸೇರಿದಂತೆ ಎಲ್ಲ ಬೆಳೆಗಾರರಿಗೆ ನ್ಯಾಯಯುತ ವಿಮೆ ಪರಿಹಾರ ದೊರೆಯುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷದ ಮಳೆ ದಾಖಲೆ ಮತ್ತು ಪರಿಹಾರ ಲೆಕ್ಕಾಚಾರವನ್ನು ಗ್ರಾಮವಾರು ಪರಿಶೀಲಿಸಿ, ತಾಂತ್ರಿಕ ಅಥವಾ ಆಡಳಿತಾತ್ಮಕ ಲೋಪ ಕಂಡುಬಂದರೆ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ರೈತರ ಪರವಾಗಿ ಸರ್ಕಾರದ ಗಮನ ಸೆಳೆದು ಅಗತ್ಯ ಮಾಹಿತಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸಬೇಕು. ಬೆಳೆ ವಿಮೆ ರೈತರ ಅನುಮಾನಕ್ಕೆ ಕಾರಣವಾಗುವ ವ್ಯವಸ್ಥೆಯಾಗದೆ, ರೈತರ ವಿಶ್ವಾಸಕ್ಕೆ ಪಾತ್ರವಾಗುವ ಪಾರದರ್ಶಕ ವ್ಯವಸ್ಥೆಯಾಗಬೇಕು ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
Uncategorized
ಪುತ್ತೂರು : ವಿಚಾರಣೆ ವೇಳೆ ನ್ಯಾಯಾಲಯದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿಗೆ 2 ವರ್ಷ ಜೈಲು

ಪುತ್ತೂರು, ಅ.5: ವಿಚಾರಣೆ ನಡೆಯುತ್ತಿದ್ದ ವೇಳೆ ನ್ಯಾಯಾಲಯದಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದ ಆರೋಪಿಗೆ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯವು ಎರಡು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.
ಪುತ್ತೂರು ಸಿರಿ ಬಾಗಿಲು ನಿವಾಸಿ ಜಯೇಶ್ ಅಲಿಯಾಸ್ ಜಯೇಶ್ ಕಾಂತ್ ಎಸ್., ಶಾಹಿರ್ ಅಲಿಯಾಸ್ ಶಾಕಿರ್ (41) ಶಿಕ್ಷೆಗೆ ಗುರಿಯಾದ ಆರೋಪಿ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಅ.ಕ್ರ. 120/2008ರಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 450, 302 ಮತ್ತು 201ರ ಅಡಿಯಲ್ಲಿ ಆರೋಪಿಯಾಗಿದ್ದ ಶಾಕಿರ್‌ನನ್ನು 2016ರ ಏಪ್ರಿಲ್ 5ರಂದು ಮಂಗಳೂರು ಕಾರಾಗೃಹದಿಂದ ವಿಚಾರಣೆಗಾಗಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕರೆತರಲಾಗಿತ್ತು.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ತಪ್ಪಿಸಿಕೊಂಡು ಪರಾರಿಯಾಗಲು ಆತ ಯತ್ನಿಸಿದ್ದ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 224ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಅಂದಿನ ಪುತ್ತೂರು ನಗರ ಠಾಣೆಯ ಉಪನಿರೀಕ್ಷಕ ಖಾದರ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ್ ಅವರು ಅ.5ರಂದು ಆರೋಪಿಗೆ ಎರಡು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದರು.
-
Uncategorized23 hours ago
ಪುತ್ತೂರು : ಪರವಾನಿಗೆ ರಹಿತವಾಗಿ ಹಿಂಸಾತ್ಮಕವಾಗಿ 11 ಗೋವುಗಳ ಸಾಗಾಟ; ಶಿವಪ್ರಸಾದ್ ಬಂಧನ
-
Uncategorized22 hours ago
ಪುತ್ತೂರು : ವಿಚಾರಣೆ ವೇಳೆ ನ್ಯಾಯಾಲಯದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿಗೆ 2 ವರ್ಷ ಜೈಲು
-
Uncategorized10 hours ago
ಬೆಳೆ ವಿಮೆ ಪರಿಹಾರ ಕಡಿತ: ಸರ್ಕಾರದ ಮುಂದೆ ಅರುಣ್ ಪುತ್ತಿಲ ಆಕ್ರೋಶ – ಪ್ರಶ್ನೆಗಳ ಸುರಿಮಳೆ
-
ಸಿನೆಮಾ11 hours agoPrema Da Ooralli-ಅಮ್ಮನ ಮಂಗಳಸೂತ್ರವನ್ನೇ ಗಿರವಿಡಲು ಮುಂದಾಗಿದ್ದ ನಿರ್ದೇಶಕ; ಇಂದು ₹17 ಕೋಟಿಯತ್ತ ಸಿನಿಮಾ! ‘ಪ್ರೇಮದ ಊರಲ್ಲಿ’ ಸೃಷ್ಟಿಸಿದ ಬಾಕ್ಸ್ ಆಫೀಸ್ ಅಚ್ಚರಿ
-
ದಕ್ಷಿಣ ಕನ್ನಡ4 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
ದಕ್ಷಿಣ ಕನ್ನಡ11 hours ago
ವಿಟ್ಲ :ಬ್ಯಾಂಕ್ ಉದ್ಯೋಗದ ಆಸೆ ತೋರಿಸಿ ಹಣ ವಂಚನೆ: 15 ವರ್ಷಗಳ ಬಳಿಕ ವಾರೆಂಟ್ ಆರೋಪಿ ಬಂಧನ
-
ಅಪರಾಧ11 hours agoMangalore-ಮಂಗಳೂರು: ಜೈಲಿನಲ್ಲೇ ವಾರ್ಡನ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 5 ವರ್ಷ ಜೈಲು, 40,000 ರೂ. ದಂಡ
-
ಬಿಗ್ ನ್ಯೂಸ್9 hours agoPuttur-ಪುತ್ತೂರಿನಲ್ಲಿ ಆಸರೆ ಇಲ್ಲದೆ ಭಿಕ್ಷಾಟನೆ ಮಾಡುತ್ತಿದ್ದ 60ರ ವ್ಯಕ್ತಿಗೆ ನೆರವು; ಪಚ್ಚನಾಡಿ ಪುನರ್ವಸತಿ ಕೇಂದ್ರಕ್ಕೆ ದಾಖಲು


















