ಬಿಗ್ ನ್ಯೂಸ್
ತನ್ನ ಮಗನಿಂದಲೇ ಅಜ್ಜನನ್ನು ಕೊಲೆ ಮಾಡಿಸಿದ ಜ್ಯೋತಿಷಿ..! ಉಜಿರೆ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ ಭೇದಿಸಿದ ಪೊಲೀಸರು – ಕಾಸರಗೋಡು to ಉಜಿರೆ ಸ್ಕೂಟರ್ ಪ್ರಯಾಣ ಮತ್ತು ಸಾಕ್ಷಿ ನೀಡಿದ ಬಾಳೆಎಲೆ..! ಎರಡನೇ ಕೊಲೆ ಜಸ್ಟ್ ಮಿಸ್..!
ಮಂಗಳೂರು, ಆಗಸ್ಟ್.25: ನಿವೃತ್ತ ಶಿಕ್ಷಕ ಕೊಲೆ ಪ್ರಕರಣ ಸಂಬಂಧಿಸಿದಂತೆ ಮಗಳಿಗೆ ಆಸ್ತಿ- ಜಾಗ ಪಾಲು (Property) ಮಾಡಿ ಕೊಡದೇ ಇರುವ ಕಾರಣದಿಂದ ಕುಟುಂಬ ಸದಸ್ಯರಾದ ಅಳಿಯ ಮತ್ತು ಮೊಮ್ಮಗ ಸೇರಿ ಬಾಲಕೃಷ್ಣ ಭಟ್ ಅವರನ್ನು ಕೊಲೆ (Murder) ಮಾಡಿರುವುದು ಬೆಳಕಿಗೆ ಬಂದಿದೆ. ಹಂತಕರಿಬ್ಬರನ್ನು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ.
ಧರ್ಮಸ್ಥಳ ಪೊಲೀಸರು ಮೊಬೈಲ್, ಸಿಸಿ ಕ್ಯಾಮರ ಹಾಗೂ ವಿವಿಧ ಟೆಕ್ನಿಕಲ್ ಅಧಾರದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕೊಲೆಯಾದ ಬಾಲಕೃಷ್ಣ ಭಟ್(83) ಅವರ ಮಗಳ ಗಂಡ(ಆಳಿಯ) ರಾಘವೇಂದ್ರ ಕೆಧಿಲಾಯ(53) ಮತ್ತು ಮಗಳ ಮಗ (ಮೊಮ್ಮಗ) ಮುರುಳಿಕೃಷ್ಣ(20) ಎಂಬಾತನನ್ನು ಆ.24 ರಂದು ಕಾಸರಗೋಡು ಮನೆಯಲ್ಲಿ ಅರೆಸ್ಟ್ ಮಾಡಿದ್ದಾರೆ.
ಮೊದಲಿಗೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಬಾಲಕೃಷ್ಣ ಭಟ್ ಅವರನ್ನು ಆಸ್ತಿ ಹಾಗೂ ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಳಿಯನ ಜೊತೆ ಬಂದಿದ್ದ ಮೊಮ್ಮಗ ಮೊದಲು ಮಾರಕಾಸ್ತ್ರದಿಂದ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದು ಆರೋಪಿಗಳಿಬ್ಬರನ್ನು ಕೋರ್ಟ್ ರಜೆ ಇರುವ ಕಾರಣದಿಂದ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಆ.24 ರಂದು ಸಂಜೆ ಹಾಜರುಪಡಿಸಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆ.27 ರಂದು ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ.
ಮಾರಕಾಸ್ತ್ರದಿಂದ ಕೊಲೆ ಮಾಡಿದ ಮೊಮ್ಮಗ
ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಅವರ ಜಾಗ ಮತ್ತು ನಾಲ್ಕು ವರ್ಷದ ಹಿಂದೆ ಮೃತಪಟ್ಟಿದ್ದ ಪತ್ನಿ ದಿ.ಯು.ಲೀಲಾ(75) ಅವರ ಚಿನ್ನವನ್ನು ಮಗಳಾದ ವಿಜಯಲಕ್ಷ್ಮಿಗೆ ಪಾಲು ನೀಡದೆ ಅದನ್ನು ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದರು. ಇದೇ ಕಾರಣದಿಂದ ಬೇಸರಗೊಂಡಿದ್ದ ಬಾಲಕೃಷ್ಣ ಭಟ್ ಮಗಳು ವಿಜಯಲಕ್ಷ್ಮಿಯ ಗಂಡ ಕೃಷಿಕ ಹಾಗೂ ಜ್ಯೋತಿಷ್ಯಿಯಾಗಿರುವ ರಾಘವೇಂದ್ರ ಕೆಧಿಲಾಯ(53) ಮತ್ತು ಮಗ ಮುರಳಿ ಕೃಷ್ಣ (20) ಹತ್ಯೆ ಮಾಡುವ ಯೋಜನೆ ರೂಪಿಸಿದ್ದಾರೆ. ಅಪ್ಪ-ಮಗ ಸೇರಿಕೊಂಡು ಕಾಸರಗೋಡು ಮನೆಯಿಂದ ಮಾರಕಾಸ್ತ್ರ ರೆಡಿ ಮಾಡಿಕೊಂಡು ನೇರ ವಿಜಯಲಕ್ಷ್ಮಿಯ ಸ್ಕೂಟರ್ನಲ್ಲಿ ರಾಘವೇಂದ್ರ ಕೆಧಿಲಾಯ ಮತ್ತು ಸ್ನೇಹಿತನ ಬೈಕ್ ನಲ್ಲಿ ಮುರುಳಿಕೃಷ್ಣ ಬಂದು ಮಂಗಳೂರಿನಲ್ಲಿ ಬೈಕ್ ನಿಲ್ಲಿಸಿ ಅಲ್ಲಿಂದ ಒಂದು ಸ್ಕೂಟರಿನಲ್ಲಿಯೇ ಅಪ್ಪ-ಮಗ ಬೆಳಾಲಿಗೆ ಬಂದು ಬಾಲಕೃಷ್ಣ ಭಟ್ ಮನೆ ಸೇರಿದ್ದಾರೆ.
ಬಳಿಕ ಮಾವ ಮಾಡಿದ ಊಟ ಮಾಡಿ, ಚಾ ಕುಡಿದು ಮಾತನಾಡುತ್ತಿರುವಾಗಲೇ ಆಯುಧದಿಂದ ಮೊಮ್ಮಗ ಮುರುಳಿಕೃಷ್ಣ ಹಿಂಬದಿಯ ಕುತ್ತಿಗೆಗೆ ಹಲ್ಲೆ ಮಾಡಿದ್ದಾರೆ. ಈ ವೇಳೆ ತಪ್ಪಿಸಿಕೊಂಡು ಮನೆಯ ಅಂಗಳಕ್ಕೆ ಬಂದಾಗ ಮತ್ತೆ ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಅದಕ್ಕೆ ನಳ್ಳಿ ನೀರಿನ ಕೇಳಗೆ ಹಾಕಿದ್ದ ಹಾಸು ಕಲ್ಲು ತಲೆಯ ಮೇಲೆ ಇಟ್ಟು ಬಳಿಕ ಅಲ್ಲಿಂದ ಕೊಲೆಗಾರ ಅಳಿಯ-ಮೊಮ್ಮಗ ನೇರ ಸ್ಕೂಟರ್ ಮೂಲಕ ಕಾಸರಗೋಡು ಮನೆ ಸೇರಿದ್ದಾರೆ. ಬಾಲಕೃಷ್ಣ ಭಟ್ ಅವರನ್ನು ಪತಿ- ಮಗ ಸೇರಿ ಕೊಲೆ ಮಾಡುವುದು ಅಥವಾ ಕೊಲೆ ಮಾಡಿದ್ದಾರೆ ಎಂದು ಪತ್ನಿ ವಿಜಯಲಕ್ಷ್ಮಿಗೆ ತಿಳಿದಿರಲಿಲ್ಲ. ಧರ್ಮಸ್ಥಳ ಪೊಲೀಸರು ಕಾಸರಗೋಡು ಮನೆಗೆ ಬಂದು ಪತಿ-ಮಗನನ್ನು ವಶಕ್ಕೆ ಪಡೆದ ಬಳಿಕ ಕೊಲೆ ಮಾಡಿದ ರಹಸ್ಯ ಬಯಲಾಗಿದೆ.
ಎರಡನೆ ಕೊಲೆ ಮೀಸ್
ಬಾಲಕೃಷ್ಣ ಭಟ್ ಜೊತೆ ಕಿರಿಯ ಮಗ ಸುರೇಶ್ ಭಟ್ ನನ್ನು ಕೂಡ ಕೊಲೆ ಮಾಡಲು ಯೋಜನೆ ರೂಪಿಸಿ ಬಂದಿದ್ದರು. ಹಾಗೂ ಬಾಲಕೃಷ್ಣ ಭಟ್ ಕೊಲೆ ಬಳಿಕ ಸುರೇಂದ್ರ ಭಟ್ ಬರುವಿಕೆಗಾಗಿ ಸ್ವಲ್ಪ ಸಮಯ ಮನೆಯಲ್ಲಿ ಕಾದು ಕುಳಿತ್ತಿದ್ದರು. ಆದ್ರೆ ಬಾರದೆ ಇದ್ದಾಗ ಬಾಲಕೃಷ್ಣ ಭಟ್ ಅವರ 50 ಸಾವಿರದ ಎರಡು ಬಾಂಡ್ ಪೇಪರ್ ಹಾಗೂ ಕೆಲವು ದಾಖಲೆಗಳನ್ನು ಕಪಾಟಿನಿಂದ ಹಂತಕರು ತೆಗೆದುಕೊಂಡು ಬಂದ ದಾರಿಯಲ್ಲಿ ವಾಪಸ್ ತಮ್ಮ ಮನೆಗೆ ಸ್ಕೂಟರಿನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎಸ್.ಪಿ.ಬಿ.ಕಾಂಪೌಂಡ್ ನ ನಿವೃತ್ತ ಶಿಕ್ಷಕನಾಗಿರುವ ಎಸ್.ಪಿ.ಬಾಲಕೃಷ್ಣ ಭಟ್(83) ಎಂಬವರು ಆ.20 ರಂದು ಮಧ್ಯಾಹ್ನದ ಬಳಿಕ ಮನೆಯ ಅಡುಗೆ ಕೋಣೆಯಲ್ಲಿರುವಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಯ ಅಂಗಳಕ್ಕೆ ಓಡಿ ಬಂದಿದ್ದು ಈ ವೇಳೆ ಕೂಡ ಕುತ್ತಿಗೆ, ಕೈಗೆ, ತಲೆಗೆ ದಾಳಿ ಮಾಡಿದ್ದು ಇದರಿಂದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ಬಗ್ಗೆ ಕಿರಿಯ ಮಗ ಸುರೇಶ್ ಭಟ್ ನೀಡಿದ ದೂರಿನ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೊಲೆಗಾರ ಹಿನ್ನಲೆ
ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ಗೆ ಒಟ್ಟು ಮೂರು ಜನ ಮಕ್ಕಳು. ಮೊದಲ ಮಗ ಹರೀಶ್ ಭಟ್ ಬೆಂಗಳೂರಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಎರಡನೇ ಮಗಳು ವಿಜಯಲಕ್ಷ್ಮಿ(49) ಇವರನ್ನು 22 ವರ್ಷದ ಹಿಂದೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮುಲ್ಲೇರಿಯಲ್ಲಿ ಕೃಷಿ ಹಾಗೂ ಜ್ಯೋತಿಷ್ಯಿಯಾಗಿರುವ ರಾಘವೇಂದ್ರ ಕೆಧಿಲಾಯ(53) ಇವನಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ ಇವರಲ್ಲಿ ಮೊದಲ ಮಗ ಮುರಳಿಕೃಷ್ಣ(20) ಹಾಗೂ ಪಿಯುಸಿ ಓದುತ್ತಿರುವ ಮಗಳು ಇದ್ದಾರೆ. ಕಿರಿಯ ಮಗ ಸುರೇಶ್ ಭಟ್(48) ಅವಿವಾಹಿತನಾಗಿದ್ದು ಪುತ್ತೂರಿನಲ್ಲಿ ರಿಲಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸುಳಿವು ನೀಡಿದ ಊಟ ಮಾಡಿ ಬಿಸಾಕಿದ ಬಾಳೆ ಎಳೆ:
ಕೊಲೆ ಬಳಿಕ ಮಂಗಳೂರು ಶ್ವಾನ ದಳ ತಂಡ ಘಟನಾ ಸ್ಥಳಕ್ಕೆ ಬಂದು ಮನೆಯೊಳಗಿಂದ ಆರೋಪಿಗಳ ಸುಳಿವಿಗಾಗಿ ವಾಸನೆ ಹಿಡಿದು ಅಂಗಳ, ಕೊಲೆಯಾಗಿ ಬಿದ್ದ ಜಾಗ ಹಾಗೂ ಊಟ ಮಾಡಿ ಬಾವಿ ಬಳಿ ತೆಂಗಿನ ಬುಡಕ್ಕೆ ಬಿಸಾಕಿದ ಎರಡು ಬಾಳೆ ಎಲೆ ಕಡೆಗೆ ಹೋಗಿ ಸುಳಿವು ನೀಡಿತ್ತು. ಬಳಿಕ ಅಲ್ಲಿಂದ ಆರೋಪಿಗಳು ರಸ್ತೆಗೆ ಹೋಗಿರುವ ಬಗ್ಗೆ ಸುಳಿವು ನೀಡಿತ್ತು ಪೊಲೀಸ್ ಇಲಾಖೆಯ ಶ್ವಾನ ಬ್ರೇವ್. ಪೊಲೀಸರಿಗೆ ಅಲ್ಲಿಯೇ ಮೊದಲ ಸುಳಿವು ಕುಟುಂಬದೊಳಗಿನವರೆ ಮನೆಗೆ ಬಂದು ಊಟ ಮತ್ತು ಚಾ ಕುಡಿದು ಕೃತ್ಯ ಎಸಗಿರುವ ಬಗ್ಗೆ ಗೊತ್ತಾಗಿದೆ. ಇದರಿಂದ ಕುಟುಂಬದ ಎಲ್ಲ ಸದಸ್ಯರ ಮೊಬೈಲ್ ನಂಬರ್ ಪಡೆದು ಕಾರ್ಯಾಚರಣೆ ನಡೆಸಿದಾಗ ಆಳಿಯ ಮತ್ತು ಮೊಮ್ಮಗ ಸಿಕ್ಕಿ ಬಿದ್ದಿದ್ದಾರೆ.
ಅಜ್ಜನ ಶವ ನೋಡಲು ಬಾರದ ಮೊಮ್ಮಗ
ಬಾಲಕೃಷ್ಣ ಭಟ್ ಕೊಲೆ ಬಳಿಕ ಬೆಳಾಲು ಮನೆಗೆ ಆ.21 ರಂದು ಮಧ್ಯಾಹ್ನದ ಬಳಿಕ ಮೃತದೇಹ ನೋಡಲು ಮಗಳು ವಿಜಯಲಕ್ಷ್ಮಿ ಮತ್ತು ಆಳಿಯ ರಾಘವೇಂದ್ರ ಕೆದಿಲಾಯ ಕಾರಿನಲ್ಲಿ ಬಂದಿದ್ದರು. ಮೊಮ್ಮಗ ಮುರುಳಿಕೃಷ್ಣ ಮಾತ್ರ ಬಂದಿರಲ್ಲಿಲ್ಲ. ವಿಚಾರಣೆಯಲ್ಲಿ ಬಾಲಕೃಷ್ಣ ಭಟ್ ಅವರನ್ನು ತಾವು ತಂದಿದ್ದ ಮಾರಕಾಸ್ತ್ರದಿಂದ ರಾಘವೇಂದ್ರ ಕೆಧಿಲಾಯ ಮಗ ಮುರುಳಿಕೃಷ್ಣ ಮಾತ್ರ ಕೊಚ್ಚಿ ಕೊಲೆ ಮಾಡಿದ್ದು ಇದನ್ನು ತಂದೆ ರಾಘವೇಂದ್ರ ಕೆಧಿಲಾಯ ನೋಡುತ್ತಾ ನಿಂತಿದ್ದ. ಬಳಿಕ ಕಪಾಟಿನಲ್ಲಿದ್ದ ದಾಖಲೆ ಪತ್ರ ಹಾಗೂ ಬಾಂಡ್ ಪೇಪರ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಮುರುಳಿಕೃಷ್ಣ ವಿರುದ್ಧ ಕೇರಳ ರಾಜ್ಯದ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಕಾರ್ಯಾಚರಣೆ
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಮಾರ್ಗದರ್ಶನಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ -1 ಕಿಶೋರ್.ಪಿ , ಸಬ್ ಇನ್ಸ್ಪೆಕ್ಟರ್ -2 ಸಮರ್ಥ್.ಆರ್.ಗಾಣಿಗೇರಾ ಹಾಗೂ ಸಿಬ್ಬಂದಿಗಳು ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಅಂತರ ರಾಜ್ಯ
Nana Patekar-ಕಾರ್ಗಿಲ್ ಯುದ್ಧದ ವೇಳೆ ಸೈನಿಕನಾಗಿಯೂ ದೇಶ ಸೇವೆ ಮಾಡಿದ್ದ ನಾನಾ ಪಾಟೇಕರ್
ರಂಗಭೂಮಿ, ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಹಿರಿಯ ನಟ ನಾನಾ ಪಾಟೇಕರ್ (75) ಗುರುವಾರ ಮುಂಜಾನೆ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗೋವಾದ ತಮ್ಮ ನಿವಾಸದಲ್ಲಿ ಅಸ್ವಸ್ಥರಾಗಿ ಪತ್ತೆಯಾದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರ ಪ್ರಯತ್ನ ಫಲಿಸದೆ ಬೆಳಗ್ಗೆ 5.20ರ ಸುಮಾರಿಗೆ ನಿಧನರಾದರು.
ನವದೆಹಲಿ: ರಂಗಭೂಮಿ, ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಹಿರಿಯ ನಟ ನಾನಾ ಪಾಟೇಕರ್ (75) ಗುರುವಾರ ಮುಂಜಾನೆ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗೋವಾದ ತಮ್ಮ ನಿವಾಸದಲ್ಲಿ ಅಸ್ವಸ್ಥರಾಗಿ ಪತ್ತೆಯಾದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರ ಪ್ರಯತ್ನ ಫಲಿಸದೆ ಬೆಳಗ್ಗೆ 5.20ರ ಸುಮಾರಿಗೆ ನಿಧನರಾದರು.
ನಾನಾ ಪಾಟೇಕರ್ ಕೇವಲ ಬೆಳ್ಳಿತೆರೆಯ ನಟನಾಗಿ ಮಾತ್ರ ಗುರುತಿಸಿಕೊಂಡವರಲ್ಲ. ಸರಳತೆ, ಸಾಮಾಜಿಕ ಕಳಕಳಿ ಹಾಗೂ ದೇಶಪ್ರೇಮಕ್ಕೂ ಅವರು ಹೆಸರಾಗಿದ್ದರು. ಭಾರತೀಯ ಸೇನೆಯೊಂದಿಗೆ ಅವರಿಗಿದ್ದ ನಂಟು ಕೂಡ ಅವರ ಬದುಕಿನ ಪ್ರಮುಖ ಅಧ್ಯಾಯವಾಗಿತ್ತು.
ಸೇನಾ ತರಬೇತಿ ಪಡೆದು ಟೆರಿಟೋರಿಯಲ್ ಆರ್ಮಿಗೆ ಸೇರ್ಪಡೆ
1991ರಲ್ಲಿ ತೆರೆಕಂಡ ತಮ್ಮ ಪ್ರಸಿದ್ದ ‘ಪ್ರಹಾರ್: ದಿ ಫೈನಲ್ ಅಟ್ಯಾಕ್’ ಸಿನಿಮಾದ ಕಮಾಂಡೋ ಪಾತ್ರಕ್ಕಾಗಿ ನಾನಾ ಪಾಟೇಕರ್ ಅವರು ಯಾವುದೇ ಶಾರ್ಟ್‌ಕಟ್ ಬಳಸದೆ, ಮರಾಠಾ ಲೈಟ್ ಇನ್ವೆಂಟ್ರಿ ಜೊತೆ ಮೂರು ವರ್ಷಗಳ ಕಾಲ ಕಠಿಣ ಮಿಲಿಟರಿ ತರಬೇತಿ ಪಡೆದಿದ್ದರು. ಈ ತರಬೇತಿಯ ನಂತರ ಅವರು 1980ರ ದಶಕದ ಉತ್ತರಾರ್ಧದಲ್ಲಿ ಟೆರಿಟೋರಿಯಲ್ ಆರ್ಮಿಗೆ (ಪ್ರಾದೇಶಿಕ ಸೇನೆ) ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು.
1999ರಲ್ಲಿ ಕಾರ್ಗಿಲ್ ಯುದ್ಧ ಆರಂಭವಾದಾಗ ಗಡಿಯಲ್ಲಿ ಸೈನಿಕರೊಂದಿಗೆ ಸೇವೆ ಸಲ್ಲಿಸುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದರು. ಅನುಮತಿ ಪಡೆದ ಬಳಿಕ ತಮ್ಮ ನಟನಾ ವೃತ್ತಿಜೀವನವನ್ನು ಕೆಲಕಾಲ ಬದಿಗೊತ್ತಿ ಸೇನೆಯ ಕ್ವಿಕ್ ರಿಯಾಕ್ಷನ್ ಟೀಮ್‌ನೊಂದಿಗೆ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದರು.
ಶ್ರೀನಗರ, ಡ್ರಾಸ್ ಹಾಗೂ ಲೇಹ್ ಸೇರಿದಂತೆ ಕಠಿಣ ಹವಾಮಾನವಿರುವ ಪ್ರದೇಶಗಳಲ್ಲಿ ಸೈನಿಕರೊಂದಿಗೆ ಸುಮಾರು ಎರಡು ತಿಂಗಳು ಕಳೆದಿದ್ದರು. ಈ ಅವಧಿಯಲ್ಲಿ ಸುಮಾರು 20 ಕೆ.ಜಿ. ತೂಕ ಕಳೆದುಕೊಂಡಿದ್ದಾಗಿ ಅವರು ಹಿಂದಿನ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ಗಣ್ಯರಿಂದ ಸಂತಾಪ
ನಾನಾ ಪಾಟೇಕರ್ ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ರಿತೇಶ್ ದೇಶ್‌ಮುಖ್ ಸೇರಿದಂತೆ ದೇಶದ ಪ್ರಮುಖ ರಾಜಕಾರಣಿಗಳು, ಚಲನಚಿತ್ರ ರಂಗದ ಗಣ್ಯರು ಹಾಗೂ ಕ್ರೀಡಾಪಟುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ”ಎಕ್ಸ್”ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ನಾನಾ ಪಾಟೇಕರ್‌ಜಿ ಅವರ ಅಭಿನಯದಲ್ಲಿನ ವಿಶಿಷ್ಟತೆ, ತೀವ್ರತೆ ಹಾಗೂ ಪ್ರಭಾವಶಾಲಿ ವ್ಯಕ್ತಿತ್ವ ಕೆಲವೇ ಕೆಲವು ಕಲಾವಿದರಲ್ಲಿ ಮಾತ್ರ ಕಾಣಸಿಗುತ್ತದೆ. ತಮ್ಮ ಪಾತ್ರಗಳ ಮೂಲಕ ಜ್ವಾಲಾಮುಖಿಯಂತೆ ಸ್ಫೋಟಿಸುವ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಅವರು ಪ್ರದರ್ಶಿಸುತ್ತಿದ್ದರು. ಬೆಳ್ಳಿತೆರೆಯ ಮೇಲೆ ಅವರು ಜೀವ ತುಂಬಿದ ಪಾತ್ರಗಳು ಹಲವು ತಲೆಮಾರುಗಳ ನೆನಪಿನಲ್ಲಿ ಶಾಶ್ವತವಾಗಿ ಉಳಿಯಲಿವೆ. ನೇರ ಹಾಗೂ ಸ್ಪಷ್ಟ ಅಭಿಪ್ರಾಯಗಳಿಗೆ ಹೆಸರಾಗಿದ್ದ ನಾನಾ ಪಾಟೇಕರ್ ಅವರದು ಅದೇ ವಿಶಿಷ್ಟ ಛಾಪು. ತಾವು ಕಂಡ ಸಂಗತಿಗಳ ಕುರಿತು ಯಾವುದೇ ಮುಚ್ಚುಮರೆಯಿಲ್ಲದೆ ಅತ್ಯಂತ ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು’ ಎಂದು ಹೇಳಿದ್ದಾರೆ.
ಅವರ ಅಗಲಿಕೆಗೆ ಸಂತಾಪ ಸೂಚಿಸಿರುವ ನಟ ಅಕ್ಷಯ್ ಕುಮಾರ್, “ಅವರ ಗಂಭೀರ ಧ್ವನಿ, ನಟನೆಯಲ್ಲಿನ ತೀವ್ರತೆ ಹಾಗೂ ಪ್ರಾಮಾಣಿಕತೆ ಅವರನ್ನು ಅನನ್ಯ ವ್ಯಕ್ತಿಯನ್ನಾಗಿ ಮಾಡಿತ್ತು. ವೆಲ್ಕಮ್ ಹಾಗೂ ಇತ್ತೀಚಿನ ಹೌಸ್‌ಫುಲ್ 5 ಚಿತ್ರಗಳಲ್ಲಿ ಅವರೊಂದಿಗೆ ಕೆಲಸ ಮಾಡಿದ ನೆನಪುಗಳು ಎಂದಿಗೂ ನನ್ನೊಂದಿಗಿರುತ್ತವೆ” ಎಂದಿದ್ದಾರೆ.
ನಟ ರಿತೇಶ್ ದೇಶ್‌ಮುಖ್ ಪ್ರತಿಕ್ರಿಯಿಸಿ, “ನಾನಾ ಪಾಟೇಕರ್ ಅವರು ಬೆಳ್ಳಿಪರದೆಯ ಮೇಲಷ್ಟೇ ಅಲ್ಲದೆ, ನಿಜ ಜೀವನದಲ್ಲೂ ಒಬ್ಬ ರಿಯಲ್ ಹೀರೋ ಆಗಿದ್ದರು. ಅವರು ಕೈಗೊಂಡ ಸಾಮಾಜಿಕ ಕಾರ್ಯಗಳು ಅಪಾರವಾದವು. ನಾಯಕನಾಗಿ, ಖಳನಾಯಕನಾಗಿ ಹಾಗೂ ಹಾಸ್ಯನಟನಾಗಿ ಎಲ್ಲಾ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಅವರ ಅಗಲಿಕೆ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ” ಎಂದು ಸ್ಮರಿಸಿದ್ದಾರೆ.
ಬಿಗ್ ನ್ಯೂಸ್
Reservation-ದ.ಕ. ಜಿ.ಪಂ., ತಾ.ಪಂ. ಮೀಸಲಾತಿ ಪ್ರಕಟ: ಮಹಿಳೆಯರಿಗೆ ತಾ.ಪಂ. 65, ಜಿ.ಪಂ. 18 ಸ್ಥಾನ ಮೀಸಲು
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ವರ್ಗವಾರು ಮೀಸಲಾತಿ ವಿವರ ಪ್ರಕಟಗೊಂಡಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಆರಂಭವಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ವರ್ಗವಾರು ಮೀಸಲಾತಿ ವಿವರ ಪ್ರಕಟಗೊಂಡಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಆರಂಭವಾಗಿದೆ.
ಜಿಲ್ಲೆಯ ವಿವಿಧ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದಡಿ ಮೀಸಲಿಡಲಾಗಿದೆ.
ತಾಲೂಕು ಪಂಚಾಯಿತಿ:
ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪಂಚಾಯಿತಿಗಳಲ್ಲಿ ಒಟ್ಟು 126 ಸ್ಥಾನಗಳಿದ್ದು, 65 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 13 ಸ್ಥಾನಗಳಿದ್ದು, ಈ ಪೈಕಿ 9 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ 10 ಸ್ಥಾನಗಳಿದ್ದು, 9 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಹಿಂದುಳಿದ ವರ್ಗ ‘ಎ’ಗೆ 29 ಸ್ಥಾನಗಳು ಮೀಸಲಾಗಿದ್ದು, 16 ಸ್ಥಾನಗಳು ಮಹಿಳೆಯರಿಗೆ ಮೀಸಲು. ಹಿಂದುಳಿದ ವರ್ಗ ‘ಬಿ’ಗೆ 7 ಸ್ಥಾನಗಳಿದ್ದು, 4 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಸಾಮಾನ್ಯ ವರ್ಗದ 67 ಸ್ಥಾನಗಳ ಪೈಕಿ 27 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ತಾಲೂಕುವಾರು ಗಮನಿಸಿದರೆ ಮೂಲ್ಕಿಯಲ್ಲಿ 7, ಮೂಡುಬಿದಿರೆಯಲ್ಲಿ 9, ಸುಳ್ಯದಲ್ಲಿ 11, ಉಳ್ಳಾಲದಲ್ಲಿ 12, ಪುತ್ತೂರಿನಲ್ಲಿ 12, ಮಂಗಳೂರಿನಲ್ಲಿ 14, ಬೆಳ್ತಂಗಡಿಯಲ್ಲಿ 14, ಕಡಬದಲ್ಲಿ 22 ಹಾಗೂ ಬಂಟ್ವಾಳದಲ್ಲಿ 25 ತಾಲೂಕು ಪಂಚಾಯಿತಿ ಕ್ಷೇತ್ರಗಳಿವೆ. ಬಂಟ್ವಾಳದಲ್ಲಿ ಅತಿ ಹೆಚ್ಚು 25 ಹಾಗೂ ಮೂಲ್ಕಿಯಲ್ಲಿ ಅತಿ ಕಡಿಮೆ 7 ಕ್ಷೇತ್ರಗಳಿವೆ.
ಜಿಲ್ಲಾ ಪಂಚಾಯಿತಿ:
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 35 ಸ್ಥಾನಗಳಿದ್ದು, 18 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 3 ಸ್ಥಾನಗಳಿದ್ದು, 2 ಮಹಿಳೆಯರಿಗೆ ಮೀಸಲು. ಪರಿಶಿಷ್ಟ ಪಂಗಡಕ್ಕೆ 2 ಸ್ಥಾನಗಳಿದ್ದು, 1 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ.
ಹಿಂದುಳಿದ ವರ್ಗ ‘ಎ’ಗೆ 10 ಸ್ಥಾನಗಳಿದ್ದು, 5 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಹಿಂದುಳಿದ ವರ್ಗ ‘ಬಿ’ಗೆ 2 ಸ್ಥಾನಗಳಿದ್ದು, 1 ಸ್ಥಾನ ಮಹಿಳೆಯರಿಗೆ ಮೀಸಲು. ಸಾಮಾನ್ಯ ವರ್ಗದ 18 ಸ್ಥಾನಗಳ ಪೈಕಿ 9 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಮೀಸಲಾತಿ ವಿವರ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಆರಂಭವಾಗಿದೆ. ಯಾವ ಕ್ಷೇತ್ರದಲ್ಲಿ ಯಾವ ವರ್ಗಕ್ಕೆ ಮೀಸಲಾತಿ ದೊರೆತಿದೆ ಎಂಬುದನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದೆ.
ಅಂತರ ರಾಜ್ಯ
CEC Jnanesh Kumar-ವಿಪಕ್ಷಗಳ ಪ್ರತಿಭಟನೆ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ನಿವಾಸಕ್ಕೆ ತೀವ್ರ ಭದ್ರತೆ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದಂತೆ ವಿಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ನಿವಾಸದ ಹೊರಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಲಾಗಿದೆ.
ಹೊಸದಿಲ್ಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದಂತೆ ವಿಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ನಿವಾಸದ ಹೊರಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಲಾಗಿದೆ.
ಜ್ಞಾನೇಶ್ ಕುಮಾರ್ ಅವರಿಗೆ ಈಗಾಗಲೇ Z-ಪ್ಲಸ್ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇತ್ತೀಚಿನ ಗುಪ್ತಚರ ಮಾಹಿತಿ ಹಾಗೂ ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಗಮನದಲ್ಲಿಟ್ಟುಕೊಂಡು ಅವರ ನಿವಾಸದ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ವಿವಿಧ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಭದ್ರತಾ ಏಜೆನ್ಸಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಭಟನೆಗಳು ದೇಶದ ವಿವಿಧೆಡೆ ತೀವ್ರಗೊಳ್ಳುತ್ತಿರುವ ನಡುವೆಯೇ ಅವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
-
Uncategorized15 hours ago
Naana Paatekar No More : ವ್ಯವಸ್ಥೆಯ ವಿರುದ್ಧದ ಧ್ವನಿಗೆ ರೂಪ ನೀಡಿದ, ತನ್ನ ಡೈಲಾಗ್ ನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಅಭಿಜಾತ ಕಲಾವಿದ ನಾನಾಪಾಟೇಕರ್ ಇನ್ನಿಲ್ಲ
-
ಬಿಗ್ ನ್ಯೂಸ್9 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಮಂಗಳೂರು13 hours agoMangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ
-
Uncategorized13 hours agoAshok Rai-ಬದ್ಯಾರ್ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
-
ನಿಧನ ವಾರ್ತೆ13 hours agoBeltangadi-ಬೆಳ್ತಂಗಡಿ: ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿ ಸಾವು
-
ಅಪರಾಧ14 hours agoUppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ
-
ನಿಧನ ವಾರ್ತೆ13 hours agoAccident-ಮೂಡುಬಿದಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು
-
ಬಿಗ್ ನ್ಯೂಸ್14 hours agoHalf helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ


















