ಕಾರ್ಯಕ್ರಮಗಳು
Puttur-ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಆ. 31ರಂದು 14ನೇ ವರ್ಷದ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ
ಆ. 31ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ವಿಶ್ವ ಹಿಂದೂ ಪರಿಷದ್, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆ ಅಂಗವಾಗಿ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಮುಳಿಯ ಹೇಳಿದರು.
ಪುತ್ತೂರು: ಆ. 31ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ವಿಶ್ವ ಹಿಂದೂ ಪರಿಷದ್, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆ ಅಂಗವಾಗಿ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಮುಳಿಯ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ” ವಿಶ್ವ ಹಿಂದೂ ಪರಿಷದ್ ಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆರಂಭಗೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ ಪುತ್ತೂರಿನಲ್ಲಿ 14ನೇ ವರ್ಷದ ಸಂಭ್ರಮದಲ್ಲಿದೆ. ಈ ಸಂದರ್ಭ ಮೊಸರು ಕುಡಿಕೆ, ಶೋಭಾಯಾತ್ರೆ ಉತ್ಸವ, ಮುಕ್ತ ಕಬಡ್ಡಿ ಪಂದ್ಯಾಟ, ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆ, ಪುತ್ತೂರು ಮುದ್ದುಕೃಷ್ಣ, ಉದ್ದಕಂಬ, ವೀರ ಹಿಂದು ಯುವಕರಿಂದ ಅಟ್ಟಿ ಮಡಿಕೆ ಒಡೆಯುವ ಸಾಹಸ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಆ. 24ರಂದು ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ:
ಸಮಿತಿ ಸಂಚಾಲಕ ಪುತ್ತೂರು ಉಮೇಶ್ ನಾಯಕ್ ಮಾತನಾಡಿ,” ಆ. 24ರಂದು ಬೆಳಿಗ್ಗೆ ಗಂಟೆ 10 ರಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಹಾಕಿರುವ ಸಭಾ ಮಂಟಪದಲ್ಲಿ ದಿ. ಟಿ. ರಾಧಾಕೃಷ್ಣ ಭಟ್ ಇವರ ಸ್ಮರಣಾರ್ಥ ಪ್ರೊ ಮಾದರಿಯ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಹೋಟೆಲ್ ಅಶ್ವಿನಿ ಇದರ ಮಾಲಕ ಅಶ್ವಿನ್ ರೈ ಇವರು ಕಬಡ್ಡಿ ಅಂಕಣದ ಉದ್ಘಾಟನೆ ಮಾಡಲಿದ್ದಾರೆ. ನಂತರ 10 ಗಂಟೆಗೆ ಹೈಸ್ಕೂಲ್ ವಿಭಾಗದ ಹುಡುಗರ ಅಹ್ವಾನಿತ 6 ತಂಡಗಳ ಕಬಡ್ಡಿ ಪಂದ್ಯಾಟ, ಮಧ್ಯಾಹ್ನ 1 ರಿಂದ ವಿಶೇಷವಾಗಿ ಕಾರ್ಯಕರ್ತರ 7 ತಂಡಗಳ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟ ನಡೆಯಲಿದೆ.
ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸಭಾಧ್ಯಕ್ಷರಾಗಿ ಸುಜೇಂದ್ರ ಪ್ರಭು, ಅಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುನೀತ್ ಅತ್ತಾವರ, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ್, ಭರತ್ ಕುಮೇಲು ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ್ ಸಂತೋಷ್ ಕುಮಾರ್ ರೈ ನಳೀಲು, ಆಡಳಿತ ಮೊಕ್ತಸರರು, ನಳೀಲು ಸುಬ್ರಮಣ್ಯ ದೇವಸ್ಥಾನ ನಿತಿನ್ ಕುಮಾರ್ ಮಂಗಳವಿರೂಪಾಕ್ಷ ಭಟ್ ಮಚ್ಚಿಮಲೆ, ವಕೀಲರು ಪುತ್ತೂರು ಕಿರಣ್ ಚಂದ್ರ ಡಿ. ಪುಷ್ಪಗಿರಿ, ಯುವ ಉದ್ಯಮಿಗಳು ಅರುಣ್ ಕುಮಾರ್ ರೈ ಆನಾಜಿ, ಉದ್ಯಮಿಗಳು ಯಶ್ ಕುಮಾರ್ ಮಕಾಡಿಯ, ಉದ್ಯಮಿಗಳು ಧರೇಶ್ ಹೊಳ್ಳ, ಮಾಲಕರು ಹೊಳ್ಳ ಕ್ರಾಕರ್ಸ್ ಶವಿನ್ ಪೂಜಾರಿ, ಯುವ ಉದ್ಯಮಿ ಇವರು ಉಪಸ್ಥಿತರಿರಲಿದ್ದಾರೆ.
ರಾತ್ರಿ 8 ಗಂಟೆಯಿಂದ ಪುರುಷರ ಹೊನಲು ಬೆಳಕಿನ ಮ್ಯಾಟ್ ಅಂಕಣದ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿರುವುದು. ಪ್ರಥಮ ಬಹುಮಾನ 7000 ರೂ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 5000 ರೂ ಮತ್ತು ಟ್ರೋಫಿ, ತೃತೀಯ ಬಹುಮಾನ 3000 ಮತ್ತು ಟ್ರೋಫಿ ಚತುರ್ಥ ಬಹುಮಾನ 2000 ಮತ್ತು ಟ್ರೋಫಿ ನೀಡಲಾಗುವುದು ಎಂದರು.
ಆ.31ರಂದು ಅಟ್ಟ ಮಡಿಕೆ ಒಡೆಯುವ ಸಾಹಸ ಸ್ಪರ್ಧೆ:
ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಕೃಷ್ಣಪ್ರಸನ್ನ ಮಾತನಾಡಿ, ಆ. 31ರಂದು ಮದ್ಯಾಹ್ನ ಗಂಟೆ 02-30ರಿಂದ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಮುಂಭಾಗದಿಂದ ಪುತ್ತೂರು ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆ ಮತ್ತು ಹಿಂದೂ ಯುವಕರಿಂದ ಅಟ್ಟಿ ಮಡಿಕೆ ಒಡೆಯುವ ಸಾಹಸ ಸ್ಪರ್ಧೆಯ ಉದ್ಘಾಟನೆ ನಡೆಯಲಿದೆ. ಧ್ವಜ ಹಸ್ತಾಂತರ ಪ್ರದೀಪ್ ಸರಿಪಲ್ಲ ವಿ.ಹಿಂ.ಪ ಮಂಗಳೂರು ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಇವರು ನಡೆಸಲಿದ್ದಾರೆ ಎಂದರು.
ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಪ್ರಾರಂಭವಾಗುವ ಶೋಭಾಯಾತ್ರೆಯಲ್ಲಿ ಶ್ರೀ ಕೃಷ್ಣನ ಸುಂದರ ರಥದೊಂದಿಗೆ ಕೊಂಬು ಕಹಳೆಯೊಂದಿಗೆ ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆ ಕರ್ನಾಟಕ ರಾಜ್ಯ ಮಟ್ಟದ ತಾಲೀಮು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ವೀರಾಂಜನೇಯ ವ್ಯಾಯಾಮ ಶಾಲೆ ಚಂದಳಿಕೆ ವಿಟ್ಲ ಇವರಿಂದ ಆಕರ್ಷಕ ಮೈನವಿರೇಳಿಸುವ ತಾಲೀಮು ಪ್ರದರ್ಶನ,ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಪ್ರಸಿದ್ದ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ, ಕೀಲುಕುದುರೆ, ಗೊಂಬೆ, ನಾಸಿಕ್ ಬ್ಯಾಂಡ್ ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಲಿದ್ದಾರೆ.
ದಿ. ಗುರುಕೃಷ್ಣ ಸುಳ್ಯ ಇವರ ಸ್ಮರಣಾರ್ಥ ವೀರ ಯುವಕರಿಂದ ಸಾಹಸಮಯ ಅಟ್ಟಿಮದಿಕೆ: ಡೆಯುವ ಸ್ಪರ್ಧೆಯು ಮುಖ್ಯರಸ್ತೆಯ ಮೂಲ ಯ ಬಟ ದೇವಸ್ಥಾನದ ಗದ್ದೆಗೆ ಸಾಗಿ, ಸಂಜೆ ಗಂಟೆ 6-30 ರಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಸಭಾವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷದ್ ಸ್ಥಾಪನ ದಿನದ ಪಷ್ಠಿಪೂರ್ತಿ ಸಂಭ್ರಮದ ಸಭಾ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣವೇಣಿ ಪ್ರಸಾದ್ ಮುಳಿಯ ಅಧ್ಯಕ್ಷರು, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಇವರು ವಹಿಸಲಿದ್ದಾರೆ. ದಿಕ್ಕೂಚಿ ಭಾಷಣಗಾರರಾಗಿ ಶಿವಾನಂದ ಮೆಂಡನ್, ವಿ.ಹಿಂ.ಪ. ಮಂಗಳೂರು ವಿಭಾಗ ಸಹಕಾರ್ಯದರ್ಶಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ| ಗೋಪಿನಾಥ್ ಪೈ, ಖ್ಯಾತ ಸರ್ಜನ್, ಸಿಟಿ ಆಸ್ಪತ್ರೆ ಪುತ್ತೂರು, ಅಶೋಕ್ ಬ್ರಹ್ಮನಗರ, ಅಧ್ಯಕ್ಷರು ಮಾರಿಯಮ್ಮ ದೇವಸ್ಥಾನ ಬ್ರಹ್ಮನಗರ, ಪುತ್ತೂರು ಇವರು ಭಾಗವಹಿಸಲಿದ್ದಾರೆ ಎಂದರು.
ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯ ಪ್ರಥಮ ಬಹುಮಾನ 10000/- ಮತ್ತು ಟ್ರೋಫಿ, ದ್ವಿತೀಯ ಬಹುಮಾನ 7000/- ಮತ್ತು ಟ್ರೋಫಿ, ತೃತೀಯ ಬಹುಮಾನ 4000/-ಮತ್ತು ಟ್ರೋಫಿ ಇರಲಿದೆ.
ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆ:
ಸಮಿತಿ ಉಪಾಧ್ಯಕ್ಷೆ ವಿ. ಪ್ರಭಾವತಿ ಮಾತನಾಡಿ, ಆ. 25ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10-00 ರಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಹಾಕಿರುವ ಸಭಾಮಂಟಪದಲ್ಲಿ ದಿ. ನಿತಿನ್ ಕುಮಾರ್ ನಿಡ್ನಳ್ಳಿ ಇವರ ಸ್ಮರಣಾರ್ಥ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. ಡಾ|ಸುಧಾ ಎಸ್ ರಾವ್, ಪ್ರಗತಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಪುತ್ತೂರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಡಾ. ಅನಿಲ ದೀಪಕ್ ಶೆಟ್ಟಿ ಭಾಗವಹಿಸಲಿದ್ದಾರೆ.
2 ವರ್ಷದ ಒಳಗಿನ ಮಕ್ಕಳಿಗೆ ಪುತ್ತೂರು ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದ್ದು ಇದರಲ್ಲಿ ಪ್ರಥಮ ಬಹುಮಾನ ಚಿನ್ನದ ಪದಕ, ದ್ವಿತೀಯ ಬೆಳ್ಳಿಯ ತೃತೀಯ ಕಂಚಿನ ಪದಕ ನೀಡಲಿದ್ದು. 2 ರಿಂದ 4 ವರ್ಷದ ಮಕ್ಕಳಿಗೆ ಕಂದಕೃಷ್ಣ, 4 ರಿಂದ 6 ವರುಷ ಮಕ್ಕಳಿಗೆ ಬಾಲಕೃಷ್ಣ, 6 ರಿಂದ 9 ವರುಷದ ಮಕ್ಕಳಿಗೆ ಕಿಶೋರ ಕೃಷ್ಣ, 9 ರಿಂದ 16 ವರುಷದ ಮಕ್ಕಳಿಗೆ ರಾಧಾ ಕೃಷ್ಣವೇಶ ಸ್ಪರ್ಧೆ ನಡೆಯಲಿದೆ. ಅಲ್ಲದೇ, 16 ವರುಷದ ಒಳಗಿನ ವಯೋಮಿತಿ ಮತ್ತು ವಯಸ್ಮರ ವಿಭಾಗದಲ್ಲಿ ಶಂಖನಾದ ಸ್ಪರ್ಧೆ ನಡೆಯಲಿದೆ. ಕೃಷ್ಣವೇಶ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ನೀಡಲಾಗುವುದು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಪುತ್ತೂರು ಅಧ್ಯಕ್ಷ ದಾಮೋದರ ಪಾಟಾಳಿ ಉಪಸ್ಥಿತರಿದ್ದರು
ಮಂಗಳೂರು
Mangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ
ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು: ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಬೆಳೆ ವಿಮೆ ಯೋಜನೆಯಡಿ ರೈತರಿಗೆ ಸೂಕ್ತ ಪರಿಹಾರ ದೊರೆಯದಿರುವುದು ಸೇರಿದಂತೆ ವಿಮೆ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಭೆಯಲ್ಲಿ ಧ್ವನಿ ಎತ್ತಲಾಗುತ್ತದೆ.
ಬೆಳೆ ವಿಮೆ ಯೋಜನೆಯಡಿ ರೈತರಿಗೆ ನ್ಯಾಯಯುತ ಪರಿಹಾರ ದೊರೆಯಬೇಕು ಹಾಗೂ ವಿಮೆ ಪಾವತಿಯಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು ಸೇರಿದಂತೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಳೆ ವಿಮೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹಕ್ಕೊತ್ತಾಯ ಮಂಡಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಸ್ಥಳೀಯ
Dharmasthala-ಅ. 11 ರಿಂದ 19 : ಧರ್ಮಸ್ಥಳದಲ್ಲಿ ನವರಾತ್ರಿ ವೈಭವ
ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಇದೇ 11 ರಿಂದ 19 ರ ವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಇದೇ 11 ರಿಂದ 19 ರ ವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ದೇವಸ್ಥಾನದ ಎದುರು ಇರುವ ಪ್ರವಚನಮಂಟಪದಲ್ಲಿ ಸಂಜೆ ಆರು ಗಂಟೆಯಿಂದ ಒಂಭತ್ತು ಗಂಟೆ ವರೆಗೆ ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ. 11: ಭಾನುವಾರ: ಕುಮಾರಿ ಪ್ರಾಪ್ತಿ ಶೆಟ್ಟಿ, ಧರ್ಮಸ್ಥಳ ಮತ್ತು ಕುಮಾರಿ ಆದ್ವಿ, ನಿಡಿಗಲ್ (ಭಕ್ತಿಸಂಗೀತ), ಅ. 12: ಸೋಮವಾರ: ಪವಿತ್ರವಿನಯ್ ಮಯ್ಯ ಅರ್ಕುಳ, ಮಂಗಳೂರು (ಸುಗಮ ಸಂಗೀತ), ಅ. 13: ಮಂಗಳವಾರ: ಕುಮಾರಿ ಮಾನ್ಸಿ, ಮೈಸೂರು (ಭಕ್ತಿಸಂಗೀತ), ಅ. 14: ಬುಧವಾರ: ಮಾಸ್ಟರ್ ಆಗಮ, ಪೆರ್ಲ, ಮಂಗಳೂರು (ಕರ್ನಾಟಕ ಶಾಸ್ತ್ರೀಯ ಸಂಗೀತ), ಅ. 15: ಗುರುವಾರ: ಕುಮಾರಿ ಧೃತಿ ಬಿ. ಆತ್ರೇಯಾಸ್, ಕುಮಾರಿ ಧನ್ವಿ ಬಿ. ಆತ್ರೇಯಾಸ್ ಮತ್ತು ಮಾಸ್ಟರ್ ಅಸ್ರಮೇಯ ಗುರುಪ್ರಸಾದ್, ಬೆಂಗಳೂರು (ನೃತ್ಯ, ಗಾನಲಹರಿ), ಅ. 16: ಶುಕ್ರವಾರ: ಸನತ್‌ಕುಮಾರ್, ಬೆಂಗಳೂರು (ವಯಲಿನ್ ವಾದನ), ಅ. 17: ಶನಿವಾರ: ಕುಮಾರಿ ಮಯೂರಿ ಭಟ್ ಪೊಳಲಿ, ಬಂಟ್ವಾಳ (ಕರ್ನಾಟಕ ಶಾಸ್ತ್ರೀಯ ಸಂಗೀತ), ಅ. 18: ಆದಿತ್ಯವಾರ: ಕುಮಾರಿ ಐಶ್ವರ್ಯ ಜೋಗಿ ಮತ್ತು ತಂಡ, ಕುಂದಾಪುರ (ಸುಮಧುರ ಗಾನವೈಭವ), ಅ. 19: ಸೋಮವಾರ: ಕುಮಾರಿ ಅರ್ಚಿಷಾ ರಾವ್ ಮತ್ತು ಬಳಗ, ಬೆಂಗಳೂರು (ಸಂಜೆ ಗಂಟೆ 6.30 ರಿಂದ 8.30). ಮಲ್ಲಿಕಾಮಟ್ಟಿ ಮತ್ತು ಬಳಗ, ಪೊಳಲಿ (ರಾತ್ರಿ ಗಂಟೆ 9 ರಿಂದ 11.30) ಭಕ್ತಿ ಸಂಗೀತ.
ಸ್ಥಳೀಯ
Excel-ಎಕ್ಸೆಲ್ ಗುರು ನಮನ 2026: ಸಾಮರಸ್ಯವೇ ಸಮಾಜದ ಉನ್ನತಿಗೆ ತಳಪಾಯ: ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ
ಎಕ್ಸೆಲ್ ಗುರುವಾಯನ ಕೆರೆಯಲ್ಲಿ ನಡೆದ ಗುರು ನಮನ 2026 ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾತನಾಡಿದರು.
ಗುರುವಾಯನಕೆರೆ, ಅ.4 : “ಸಮಾಜದಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ. ಪ್ರತಿಯೊಂದು ವರ್ಗ, ಸಮುದಾಯಕ್ಕೂ ಈ ಸಮಾಜ ಆಶ್ರಯ ನೀಡಿದೆ. ಪ್ರತಿಯೊಬ್ಬರ ನಂಬಿಕೆ ಆಚರಣೆಗಳು ಬೇರೆ ಬೇರೆಯಾಗಿರುತ್ತವೆ. ಅವರವರ ನಂಬಿಕೆ ಮತ್ತು ಆಚರಣೆಗಳನ್ನು ತಿರಸ್ಕರಿಸಿದಾಗ ಸಮಾಜದಲ್ಲಿ ಘರ್ಷಣೆಗಳು ಏರ್ಪಡುತ್ತವೆ. ಪ್ರತಿಯೊಬ್ಬರನ್ನೂ ಸಾಮರಸ್ಯದಿಂದ ನೋಡುವ ಗುಣ ನಮ್ಮದಾಗಬೇಕು. ಸಾಮರಸ್ಯವೇ ಸಮಾಜದ ಉನ್ನತಿಗೆ ಅಡಿಪಾಯವಿದ್ದಂತೆ” ಎಂದು ಎಕ್ಸೆಲ್ ಗುರುವಾಯನ ಕೆರೆಯಲ್ಲಿ ನಡೆದ ಗುರು ನಮನ 2026 ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.
ಸ್ವಾಮೀಜಿಯವರು ಮಾತನಾಡುತ್ತಾ ಎಕ್ಸೆಲ್ ವಿದ್ಯಾಸಂಸ್ಥೆಯು ಸುಂದರ ಪರಿಸರದಲ್ಲಿ ನಿರ್ಮಾಣಗೊಂಡಿದೆ. ಈ ವಿದ್ಯಾಸಂಸ್ಥೆಯಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಗೊಳ್ಳುತ್ತದೆ. ವಿದ್ಯಾರ್ಥಿಗಳು ಪರಸ್ಪರ ಗೌರವಿಸಿರಿ. ಈ ಸಮಾಜಕ್ಕೆ ಒಳ್ಳೆಯದನ್ನು ಬಯಸಿ. ನೀವು ಓದಿದ ವಿದ್ಯಾ ಸಂಸ್ಥೆಗೆ ಚಿರಋಣಿಯಾಗಿರಬೇಕೆಂದು, ಈ ಸಂಸ್ಥೆಯು ಸಾವಿರಾರು ಶಿಕ್ಷಕರನ್ನು ನಿರಂತರವಾಗಿ ಗೌರವಿಸುತ್ತಾ ಬಂದಿರುವುದು ನಿಜವಾಗಿಯೂ ಅತ್ಯುತ್ತಮ ಬೆಳವಣಿಗೆಯಾಗಿದೆ. ಇದು ಸುಮಂತ್ ಕುಮಾರ್ ಅವರ ಈ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ ಎಂದರು.
ಸುಬ್ರಮಣ್ಯದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ್ ನಾಯಕ್ ಇವರು ಮಾತನಾಡುತ್ತಾ ” ವಿದ್ಯಾರ್ಥಿಗಳು ಕಷ್ಟಕರ ವಿಷಯಗಳ ಕಡೆಗೆ ಹೆಚ್ಚು ಗಮನ ಕೊಡಬೇಕು. ನೀವೆಲ್ಲ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವುದು ನಿಮ್ಮೆಲ್ಲರ ಅದೃಷ್ಟವೇ ಸರಿ. ಈ ಸಂಸ್ಥೆಯ ಅಧ್ಯಕ್ಷರಾದ ನುಮಂತ್ ಕುಮಾರ್ ಜೈನ್ ಇವರು ಉದಾರ ವ್ಯಕ್ತಿತ್ವದ ವ್ಯಕ್ತಿ. ಅವರ ಸೇವಾ ಮನೋಭಾವದಿಂದಲೇ ಈ ಶಿಕ್ಷಣ ಸಂಸ್ಥೆಯು ಎತ್ತರಕ್ಕೆ ಬೆಳೆಯುತ್ತಿದೆ. ಜಿಲ್ಲೆಯ ಯಾವುದೇ ಶೈಕ್ಷಣಿಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಸುಮಂತ್ ಅವರ ಕೊಡುಗೆ ಅಪಾರವಾದದ್ದು. ಈ ಸಂಸ್ಥೆಗೆ ನನ್ನನ್ನು ಆಹ್ವಾನಿಸಿ ಸನ್ಮಾನಿಸಿದ್ದೀರಿ. ನನ್ನಲ್ಲಿ ಕೃತಾರ್ಥತೆ ಭಾವ ಮೂಡುತ್ತಿದೆ. ಎಕ್ಸೆಲ್ ವಿದ್ಯಾಸಂಸ್ಥೆಗೆ ನಾನು ಚಿರಋಣಿ” ಎಂದು ಸಂತಸ ವ್ಯಕ್ತಪಡಿಸಿದರು.
ಮೂಲ್ಕಿಯ ವಿಜಯ ಕಾಲೇಜಿನ ವಿಶ್ರಾಂತ ಪಾಚಾರ್ಯರಾದ ಡಾ .ನಾರಾಯಣ ಪೂಜಾರಿ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಾದ ಸಂತೋಷ್ ಕುಮಾರ್ ಕಾಪಿನಡ್ಕ ಇವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಕೋರಿದರು.
ಎಕ್ಸೆಲ್ ವಿದ್ಯಾ ಸಂಸ್ಥೆಯ ಹಿತೈಷಿಗಳಾದ ರತ್ನರಾಜ್ ಜೈನ್ ಮತ್ತು ಪತ್ರಿಕೋದ್ಯಮಿಗಳಾದ ಸಂತೋಷ್ ಕೋಟ್ಯಾನ್ ಇವರು ಈ ಕಾರ್ಯಕ್ರಮದ ಭಾಗವಾಗಿ ಸನ್ಮಾನ ಸ್ವೀಕರಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡುತ್ತಾ “ನಮ್ಮ ಎಕ್ಸೆಲ್ ಸಂಸ್ಥೆಯ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಮಾಡುತ್ತಿದ್ದಾರೆ . ಇಲ್ಲಿ ಓದಿದ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳಾಗಿ ರೂಪಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುರುಗಳನ್ನು ಗೌರವಿಸುವ ಮೂಲಕ ನಮ್ಮಲ್ಲಿ ಧನ್ಯತಾಭಾವ ಮೂಡಿದೆ. ಶಿಕ್ಷಕರು ಜಗತ್ತಿನ ಪ್ರಥಮ ಪೂಜ್ಯರು . ಅಂತಹ ಶಿಕ್ಷಕರನ್ನು ಸನ್ಮಾನಿಸುವುದು ನಮ್ಮ ಸೌಭಾಗ್ಯ” ಎಂದು ಹೇಳಿದರು.
ಕಾಲೇಜಿನ ಬ್ರೋಚರ್ಸ್ ಅನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಗ್ರಾಮಗಳಲ್ಲಿ ಶಿಕ್ಷಕ ವೃತ್ತಿಯನ್ನು ಮಾಡುತ್ತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ 300 ಹೆಚ್ಚು ಶಿಕ್ಷಕರನ್ನು ಗೌರವಿಸಿದ್ದು ಅತ್ಯಂತ ವಿರಳ ಮತ್ತು ಸೃಜನಾತ್ಮಕ ಕಾರ್ಯಕ್ರಮವಾಗಿತ್ತು. ಎಲ್ಲ ಶಿಕ್ಷಕರಿಗೆ ಹಾರ , ಶಾಲು, ಪೇಟ ಮತ್ತು ಸ್ಮರಣಿಕೆ, ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಡಾ ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರಿನ ಮುಖ್ಯೋಪಾಧ್ಯಯರಾದ ಶಾಂತಿರಾಜ್ ಜೈನ್ ವಂದಿಸಿದರು.
ಉಪನ್ಯಾಸಕರಾದ ಪ್ರಸನ್ನ ಭೋಜ, ತಿಪ್ಪೇಸ್ವಾಮಿ, ಪ್ರಜ್ವಿತ್ ರೈ, ಅನನ್ಯ ಜೈನ್, ವೈಷ್ಣವಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ದ್ವಿತೀಯ ಪಿಯು ವಿದ್ಯಾರ್ಥಿಗಳು ಪ್ರಾರ್ಥನೆ ಹಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಆರಂಭವನ್ನು ಒದಗಿಸಿದರು.
ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ, ಡಾ. ಪ್ರಜ್ವಲ್, ಉಪ ಪ್ರಾಚಾರ್ಯರಾದ ರೋಹಿತ್, ಹರೀಶ್ ಕುಮಾರ್ ಗುರುವಾಯನಕೆರೆ ಟೆಕ್ನೋ ಸ್ಕೂಲಿನ ಮುಖ್ಯ ಶಿಕ್ಷಕಿ ಸುಮಿತ್ರ, ವೇಣೂರು ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಿರಾಜ್ ಜೈನ್, ವಿದ್ಯಾರ್ಥಿಗಳು, ಪೋಷಕರು, ಬೋಧಕ ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.
ಎಕ್ಸೆಲ್ ಸಿಬ್ಬಂದಿಯಿಂದ ಸಾಂಸ್ಕೃತಿಕ ವೈಭವ: ಗಿರಿಜಾ ಕಲ್ಯಾಣ ಹಾಗೂ ತಾರಕಾಸುರ ವಧೆ ಯಕ್ಷಗಾನ ಪ್ರದರ್ಶನ
ಗುರು ನಮನ ಕಾರ್ಯಕ್ರಮದ ಅಂಗವಾಗಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಎಕ್ಸೆಲ್ ಪಿಯು ಕಾಲೇಜಿನ ಸಿಬ್ಬಂದಿಯ ಜೊತೆಗೆ ಎಕ್ಸೆಲ್ ಟೆಕ್ನೋ ಸ್ಕೂಲ್ ಗುರುವಾಯನಕೆರೆ ಮತ್ತು ವೇಣೂರು ಶಾಲೆಗಳ ಸಿಬ್ಬಂದಿಯವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗದವರು ವಿವಿಧ ನೃತ್ಯ,ಹಾಡು, ರೂಪಕ, ಭರತನಾಟ್ಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಸರ್ವರನ್ನು ರೋಮಾಂಚನಗೊಳಿಸಿದರು. ಗಿರಿಜಾ ಕಲ್ಯಾಣ ಮತ್ತು ತಾರಕಾಸುರ ವಧೆ ಎನ್ನುವ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು.
-
ನಿಧನ ವಾರ್ತೆ8 hours agoMumbai-ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ? ಸರಪಳಿಯಿಂದ ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ
-
ಮಂಗಳೂರು7 hours agoUjire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
-
ಅಂತರ ರಾಜ್ಯ8 hours agoArrested-ಕಾಸರಗೋಡು: ಮದುವೆಯ ನೆಪದಲ್ಲಿ ಹತ್ತಾರು ಯುವತಿಯರಿಗೆ ವಂಚನೆ: ಮದುವೆಯಾದ ಮೂರೇ ದಿನಕ್ಕೆ ಚಿನ್ನ, ಹಣದೊಂದಿಗೆ ಪರಾರಿ; ಆರೋಪಿ ಬಿಜು ಆಂಟನಿ ಬಂಧನ
-
ಅಂತರ ರಾಜ್ಯ8 hours agoJantar Mantar-ಸಿಜೆಪಿ ಪ್ರತಿಭಟನೆಗೆ ದೆಹಲಿಯಲ್ಲಿ ಬಿಗಿ ಭದ್ರತೆ – ಪಂಚರ್ ಆಗಲು ರಸ್ತೆಗಳಿಗೆ ತಡೆಬೇಲಿ..! ವಿಮಾನದಲ್ಲೇ ಅಭಿಜಿತ್ ದಿಪ್ಕೆ ಪೊಲೀಸ್ ವಶಕ್ಕೆ..! ಸಾವಿರಕ್ಕೂ ಮಿಕ್ಕಿ ಪ್ರತಿಭಟನಾಕಾರರೂ ವಶಕ್ಕೆ-ಸುಪ್ರೀಂ ಕೋರ್ಟ್ ವಕೀಲರಿಗೆ ತಡೆ..! ತೀವ್ರ ಅಡೆತಡೆಗಳ ನಡುವೆ ಜಂತರ್ ಮಂತರ್ ಗೆ ಹರಿದು ಬರುತ್ತಿರುವ ಜನಸಾಗರ
-
ರಾಜ್ಯ8 hours agoRobotic technology-ರೋಬೋಟಿಕ್ ತಂತ್ರಜ್ಞಾನದ ಅದ್ಭುತ: ಸ್ಪೇನ್ನಲ್ಲಿ ಕುಳಿತು ಕರ್ನಾಟಕದ ಮಹಿಳೆಗೆ ಹೃದಯ ಶಸ್ತ್ರಚಿಕಿತ್ಸೆ
-
ಮಂಗಳೂರು4 hours agoMulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ
-
ಅಂತರ ರಾಜ್ಯ9 hours agoDhruv Rati-BIG BREAKING: ದೆಹಲಿಯ ಜಂತರ್ ಮಂತರ್ ನಲ್ಲಿ ಸಿಜೆಪಿ ಪ್ರತಿಭಟನೆ ಹಿನ್ನಲೆ – ಯೂಟ್ಯೂಬರ್ ಧ್ರುವ್ ರಾಠಿ ಪೊಲೀಸ್ ವಶಕ್ಕೆ?
-
Uncategorized10 hours agoCJP protest-ಇಂದು CJP ಪ್ರತಿಭಟನೆ : ದೆಹಲಿಗೆ ಬರಬೇಕಾಗಿದ್ದ 250 ರೈಲು ರದ್ದು, ಹಲವು ರೈಲಿನ ವೇಳಾಪಟ್ಟಿ ಬದಲಾವಣೆ : ಮೆಟ್ರೋ ಸಂಚಾರ ಸ್ಥಗಿತ – ಇಂಟರ್ ನೆಟ್ ಬಂದ್..! ‘ಹೆದರಿದ್ರಾ ಮೋದಿಜೀ..?’ ಎಂದ CJP


















