Connect with us

Uncategorized

MLA Ashok Rai: ವಿಟ್ಲ ಪ. ಪಂ. ವ್ಯಾಪ್ತಿಯಲ್ಲಿ  2.50 ಕೋಟಿ ರೂ ಕಾಮಗಾರಿಗೆ ಚಾಲನೆ | ಇತಿಹಾಸದಲ್ಲೇ ಮೊದಲ ಬಾರಿ ಇಲ್ಲಿಗೆ ಭಾರೀ ಮೊತ್ತದ ಅನುದಾನ ನೀಡಲಾಗಿದೆ : ಅನುದಾನ ಬರುತ್ತಿಲ್ಲವೆಂಬುದು ಬಿಜೆಪಿಯ ಅಪಪ್ರಚಾರ : ಶಾಸಕ ಅಶೋಕ್ ರೈ

Published

on



Ad Widget

Ad Widget

Ad Widget

Ad Widget

ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಜಾರಿಯಾದ ಬಳಿಕ ಅಭಿವೃದ್ದಿ ಕಾಮಗಾರಿಗೆ ಯಾವುದೇ ಅನುದಾನವನ್ನು ನೀಡುತ್ತಿಲ್ಲ ಎಂಬುದು ಬಿಜೆಪಿಗರ ಸುಳ್ಳು ಪ್ರಚಾರವಾಗಿದ್ದು , ಗ್ಯಾರಂಟಿ ಯೋಜನೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸಿದ್ದು ಮಾತ್ರವಲ್ಲದೆ ಪ್ರತೀ ಗ್ರಾಮಗಳ, ಪಟ್ಟಣಗಳ ಅಭಿವೃದ್ದಿಗೆ ಕೋಟಿಗಟ್ಟಲೆ ಅನುದಾನವನ್ನು ನೀಡುತ್ತಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು

Ad Widget

Ad Widget

Ad Widget

Ad Widget

ವಿಟ್ಲ:   ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈಯವರು  ಒಟ್ಟು 2.58 ಕೋಟಿ ರೂ ವೆಚ್ಚದ   ರಸ್ತೆ  ಸಹಿತ  ವಿವಿಧ ಕಾಮಗಾರಿಗಳಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಿದರು.

Ad Widget

Ad Widget

Ad Widget alt="Ad Widget"/>

Ad Widget

ವಿಟ್ಲ ಪಟ್ಟಣ ಪಂಚಾಯತ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರೀ ಇಷ್ಟು ದೊಡ್ಡ  ಮೊತ್ತದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ಅನೇಕ ವರ್ಷಗಳಿಂದ ಆಗದೇ ಇರುವ ರಸ್ತೆಗಳಿಗೆ ಈ ಬಾರಿ ಕಾಂಕ್ರೀಟ್ ಭಾಗ್ಯ ದೊರಕಿದೆ. ಕಾಂಗ್ರೆಸ್ ಎಂದರೆ ಅಭಿವೃದ್ದಿ ಎಂದು ಜನರಿಗೆ ಗೊತ್ತಾಗಿದೆ. ನಾವು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸ ಮಾಡುವುದಿಲ್ಲ.  ನಾವು ಹೇಳಿದ್ದನ್ನು ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಜನ ನೆಮ್ಮದಿಯಿಂದ ಇದ್ದಾರೆ ಎಂದು ಶಾಸಕರು ಹೇಳಿದರು.

Ad Widget

Ad Widget <> Ad Widget

ಬಿಜೆಪಿಗರು ಕೇವಲ ಬೊಗಳೆ ಬಿಟ್ಟು ಜನರನ್ನು ಮೋಸ ಮಾಡಿ ಅಧಿಕಾರಕ್ಕೆ ಬರುತ್ತಾರೆ. ಅಧಿಕಾರಕ್ಕೆ ಬಂದ ಬಳಿಕ ಜನರನ್ನು ಮರೆಯುತ್ತಾರೆ. ಧರ್ಮ, ಜಾತಿಯ ಹೆಸರು ಹೇಳಿ ಅಧಿಕಾರ ಪಡೆಯುವ ಬಿಜೆಪಿಗೆ ಜನರ ನೆಮ್ಮದಿ ಮತ್ತು ಅಭಿವೃದ್ದಿ ಬೇಕಾಗಿಲ್ಲ ಎಂದು ಹೇಳಿದರು.



Ad Widget

ವಿಟ್ಲಕ್ಕೆ 24/7 ಕುಡಿಯುವ ನೀರು

Ad Widget

Ad Widget

ವಿಟ್ಲ  ಪಟ್ಟಣ ಪಂಚಾಯತ್ ವ್ಯಾಪ್ತಿಗೆ ದಿನದ 24 ಗಂಟೆಯೂ ಶುದ್ದ ಕುಡಿಯುವ ನೀರನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುತ್ತದೆ. ಜನ ಇನ್ನು ಕುಡಿಯಲು ನೀರಿಲ್ಲ ಎಂದು ಹೇಳುವ  ಪರಿಸ್ಥಿತಿ ಇರುವುದಿಲ್ಲ. ಫಿಲ್ಟರ್ ವಾಟರ್ ನ್ನು  ನೀಡುತ್ತಿದ್ದು,  ಇದಕ್ಕಾಗಿ ಪ್ರತ್ಯೇಕವಾಗಿ ರೂ 100 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದೇವೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಗ್ಯಾರಂಟಿ ನಿಲ್ಲೋದಿಲ್ಲ

ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಜಾರಿಯಾದ ಬಳಿಕ ಅಭಿವೃದ್ದಿ ಕಾಮಗಾರಿಗೆ ಯಾವುದೇ ಅನುದಾನವನ್ನು ನೀಡುತ್ತಿಲ್ಲ ಎಂಬುದು ಬಿಜೆಪಿಗರ ಸುಳ್ಳು ಪ್ರಚಾರವಾಗಿದ್ದು , ಗ್ಯಾರಂಟಿ ಯೋಜನೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸಿದ್ದು ಮಾತ್ರವಲ್ಲದೆ ಪ್ರತೀ ಗ್ರಾಮಗಳ, ಪಟ್ಟಣಗಳ ಅಭಿವೃದ್ದಿಗೆ ಕೋಟಿಗಟ್ಟಲೆ ಅನುದಾನವನ್ನು ನೀಡುತ್ತಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪ್ರತೀ ಮಹಿಳೆಯರಿಗೆ ತಿಂಗಳಿಗೆ 2000 ದಂತೆ ಸಂಬಳ ರೂಪದಲ್ಲಿನೀಡುತ್ತಿದೆ. ಇದು ರಾಜ್ಯದ ಮಹಿಳೆಯರು ಸ್ವಾಭಿಮಾನದಿಂದ ಬದುಕಲು ಮಾಡಿದ ಯೋಜನೆಯಾಗಿದೆ. ಈ ಯೋಜನೆಯಿಂದ ಪ್ರತೀ ಕುಟುಂಬವು ಸಂತೃಪ್ತ ಜೀವನ ನಡೆಸುವಂತಾಗಿದೆ ಎಂದು ಹೇಳಿದರು. ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಎಂದೂ ನಿಲ್ಲುವುದಿಲ್ಲ. ಗ್ಯಾರಂಟಿ ಯೋಜನೆ ವಿರುದ್ದ ಬಿಜೆಪಿ ಎಷ್ಟೇ ಅಪಪ್ರಚಾರ ಮಾಡಿದರೂ ಅದನ್ನು ನಾವು ಇನ್ನು ಮುಂದೆ ಅಧಿಕಾರಕ್ಕೆ ಬಂದಾಗಲೂ ಕೊಟ್ಟೇ ಕೊಡ್ತೀವಿ ಎಂದು ಹೇಳಿದರು.

ಅಶೋಕ್ ರೈ ಶಾಸಕರಾಗಿರುವುದು ಜನರ ಭಾಗ್ಯ; ಮಂಜುನಾಥ ಭಂಡಾರಿ

ಪುತ್ತೂರು ಶಾಸಕರಾಗಿ ಅಶೋಕ್ ಕುಮಾರ್ ರೈ ಆಯ್ಕೆಯಾಗಿರುವುದು ಪುತ್ತೂರು ಜನರ ಭಾಗ್ಯವಾಗಿದೆ. ಸದಾ ತನ್ನ ಕ್ಷೇತ್ರದ ಜನರ ಪರವಾಗಿ ಸರಕಾರದ ಮುಂದೆ ಅನುದಾನಕ್ಕಾಗಿ ಮನವಿ ಸೇರಿದಂತೆ ಅಭಿವೃದ್ದಿ ಕಾಮಗಾರಿ ನಡೆಸುವಂತೆ ಅತೀ ಹೆಚ್ಚು ಒಲವು ತೋರುತ್ತಿರುವುದು ಅವರಿಗೆ ಅಭಿವೃದ್ದಿ ಮೇಲಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ದ ಕ ಜಿಲ್ಲೆಯ ಶಾಸಕರ ಪೈಕಿ ಅಶೋಕ್ ರೈಯವರೇ ಅಬಿವೃದ್ದಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ, ಮುಖ್ಯಾಧಿಕಾರಿ ಗೋಪಾಲ ,ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ, ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಟಂತಬೆಟ್ಟು, ಉಮಾನಾಥ ಶೆಟ್ಟಿ, ರಮಾನಾಥ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ವಿಕೆಎಂ ಅಶ್ರಪ್, ಹಸೈನಾರ್ ನೆಲ್ಲಿಗುಡ್ಡೆ, ಡೀಕಯ್ಯ, ಲತಾವೇಣಿ, ಪದ್ಮಿನಿ, ನಾಮ ನಿರ್ದೇಶನ ಸದಸ್ಯರಾದ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಶ್ರೀನಿವಾಸ್ ಶೆಟ್ಟಿ, ಸುನೀತಾ ಕೋಟ್ಯಾನ್,  ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಭವಾನಿ ರೈ ಕೊಲ್ಯ,  ಬೂತ್ ಅಧ್ಯಕ್ಷರಾದ ವಿಕೆಎಂ ಹಂಝ, ಅಬ್ದುಲ್ ರಹಿಮಾನ್ ಕುರುಂಬಳ, ಎಂಕೆ ಮೂಸಾ, ಶೇಕ್ ಅಲಿ, ಮನೋಹರ ಲ್ಯಾನ್ಸಿ ಡಿ ಸೋಜ, ಎಸ್ ಕೆ ಮೊಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

Ad Widget
Click to comment

Leave a Reply

Uncategorized

Puttur Court retaining wall collapse : ಹತ್ತು ತಿಂಗಳ ಹಿಂದಷ್ಟೇ ಉದ್ಘಾಟನೆ; ಪುತ್ತೂರು ಹೊಸ ನ್ಯಾಯಾಲಯದ ತಡೆಗೋಡೆ ಕುಸಿತ- ಕಾಮಗಾರಿಯ ಗುಣಮಟ್ಟದ ಬಗ್ಗೆ ಚರ್ಚೆ

Published

on



Ad Widget

Ad Widget

Ad Widget

Ad Widget

ಪುತ್ತೂರು: ನಗರದ ಆನೆಮಜಲು–ನ್ಯಾಯಾಲಯ ಸಂಕೀರ್ಣ–ಕಾಲನಿ ಸಂಪರ್ಕ ರಸ್ತೆ ಬದಿಯಲ್ಲಿರುವ ಹೊಸ ನ್ಯಾಯಾಲಯ ಸಂಕೀರ್ಣದ ತಡೆಗೋಡೆಯ ಒಂದು ಭಾಗ ಬುಧವಾರ ಸಂಜೆ ಸುರಿದ ಮಳೆಗೆ ಕುಸಿದು ಬಿದ್ದಿದೆ.

Ad Widget

Ad Widget

Ad Widget

Ad Widget

ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಹತ್ತು ತಿಂಗಳಷ್ಟೇ ಕಳೆದಿದ್ದು, ಅಷ್ಟರಲ್ಲೇ ಗೋಡೆ ಕುಸಿದಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಮಗಾರಿಯ ಗುಣಮಟ್ಟವನ್ನು ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗಳು ಹರಿದಾಡುತ್ತಿವೆ. ಸಂಜೆ ಸುರಿದ ಮಳೆಯ ಸಂದರ್ಭದಲ್ಲಿ ತಡೆಗೋಡೆಯ ಒಂದು ಭಾಗ ಕುಸಿದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Ad Widget

Ad Widget

Ad Widget alt="Ad Widget"/>

Ad Widget

ಘಟನೆ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಡೆ ಕುಸಿಯಲು ಕಾರಣ ಹಾಗೂ ಕಾಮಗಾರಿಯ ಗುಣಮಟ್ಟದ ಕುರಿತು ಪರಿಶೀಲನೆ ನಡೆಯುತ್ತಿದೆ.

Ad Widget

Ad Widget <> Ad Widget

ಇದೇ ವೇಳೆ ನ್ಯಾಯಾಲಯದ ಕ್ಯಾಂಟೀನ್‌ನ ಗೋಡೆಯಲ್ಲೂ ಬಿರುಕುಗಳು ಕಾಣಿಸಿಕೊಂಡಿವೆ ಎಂಬ ಆರೋಪ ಕೇಳಿಬಂದಿದೆ. ಹೊಸದಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಸಂಕೀರ್ಣದ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಈ ಘಟನೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.



Ad Widget

Continue Reading

Uncategorized

Maharashtra-ಮಹಾರಾಷ್ಟ್ರದಲ್ಲಿ ಭ್ರೂಣ ಲಿಂಗ ಪತ್ತೆ ಜಾಲ: ಗರ್ಭಿಣಿಯ ವೇಷದಲ್ಲಿ ಬಾಗಲಕೋಟೆಯ ಮಹಿಳಾ ಅಧಿಕಾರಿಗಳ ರಹಸ್ಯ ಕಾರ್ಯಾಚರಣೆ; ಇಬ್ಬರ ಬಂಧನ – ಸ್ಕ್ಯಾನಿಂಗ್ ಯಂತ್ರ ಜಪ್ತಿ

Published

on



Ad Widget

Ad Widget

Ad Widget

Ad Widget

ಮಹಾರಾಷ್ಟ್ರದಲ್ಲಿ ಭ್ರೂಣ ಲಿಂಗ ಪತ್ತೆ ನಡೆಸಿ, ಬಳಿಕ ಕರ್ನಾಟಕದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಬಾಗಲಕೋಟೆ ಜಿಲ್ಲೆಯ ಮಹಿಳಾ ಅಧಿಕಾರಿಗಳ ತಂಡ ರಹಸ್ಯ ಕಾರ್ಯಾಚರಣೆ ನಡೆಸಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಜಾಡರ ಬಬಲಾದ ಗ್ರಾಮದಲ್ಲಿ ಅ.5ರಂದು ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಭ್ರೂಣ ಲಿಂಗ ಪತ್ತೆಗೆ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರವನ್ನು ಜಪ್ತಿ ಮಾಡಲಾಗಿದೆ.

Ad Widget

Ad Widget

Ad Widget

Ad Widget

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಭ್ರೂಣ ಲಿಂಗ ಪತ್ತೆ ನಡೆಸಿ, ಬಳಿಕ ಕರ್ನಾಟಕದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಬಾಗಲಕೋಟೆ ಜಿಲ್ಲೆಯ ಮಹಿಳಾ ಅಧಿಕಾರಿಗಳ ತಂಡ ರಹಸ್ಯ ಕಾರ್ಯಾಚರಣೆ ನಡೆಸಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಜಾಡರ ಬಬಲಾದ ಗ್ರಾಮದಲ್ಲಿ ಅ.5ರಂದು ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಭ್ರೂಣ ಲಿಂಗ ಪತ್ತೆಗೆ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರವನ್ನು ಜಪ್ತಿ ಮಾಡಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ್ ಗರ್ಭಿಣಿಯ ವೇಷದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶೋಭಾ ನಾದಿನಿ ಗರ್ಭಿಣಿಯ ಸಂಬಂಧಿಯಂತೆ ಹಾಗೂ ಡಿಎಚ್‌ಒ ಡಾ. ಸುವರ್ಣ ಕುಲಕರ್ಣಿ ಗರ್ಭಿಣಿಯ ತಾಯಿಯ ವೇಷದಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Ad Widget

Ad Widget <> Ad Widget

ಮಹಾರಾಷ್ಟ್ರದಲ್ಲಿ ಲಿಂಗ ಪತ್ತೆ, ಕರ್ನಾಟಕದಲ್ಲಿ ಹತ್ಯೆ ಆರೋಪ
ಮಹಾರಾಷ್ಟ್ರದ ಜತ್ತ ತಾಲೂಕಿನ ಜಾಡರ ಬಬಲಾದ ಗ್ರಾಮದಲ್ಲಿ ಭ್ರೂಣದ ಲಿಂಗ ಪತ್ತೆ ಮಾಡಿ, ಬಳಿಕ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಈ ಜಾಲದ ಕುರಿತು ತನಿಖೆ ನಡೆಸಿದಾಗ ಮಹಾಲಿಂಗಪುರದಲ್ಲಿ ಈ ಹಿಂದೆ ಭ್ರೂಣ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕವಿತಾ ಬಾಡನವರ ಅವರ ಹೆಸರು ಕೂಡ ಕೇಳಿಬಂದಿತ್ತು.



Ad Widget

ಈ ಹಿನ್ನೆಲೆಯಲ್ಲಿ ಮಹಿಳಾ ಅಧಿಕಾರಿಗಳ ತಂಡ ಗರ್ಭಿಣಿಯರಂತೆ ವೇಷ ಧರಿಸಿ ಕಾರ್ಯಾಚರಣೆಗೆ ಇಳಿದಿತ್ತು.

Ad Widget

Ad Widget

ರಹಸ್ಯ ಕಾರ್ಯಾಚರಣೆ ನಡೆದದ್ದು ಹೇಗೆ?
ಅ.5ರ ರಾತ್ರಿ ಜಾಡರ ಬಬಲಾದ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು, ಭ್ರೂಣದ ಲಿಂಗ ಪತ್ತೆಗಾಗಿ ಮಧ್ಯವರ್ತಿ ನಿಖಿಲ್‌ ತೇಲಿ ಅವರನ್ನು ಸಂಪರ್ಕಿಸಿದರು. ಆತ ಅಧಿಕಾರಿಗಳನ್ನು ತೋಟದ ಮನೆಯೊಂದಕ್ಕೆ ಕರೆದೊಯ್ದಿದ್ದಾನೆ. ಬಳಿಕ ನಿಖಿಲ್‌ನ ತಾಯಿ ದಾನಕ್ಕ ತೇಲಿ ಅವರು ಸ್ಕ್ಯಾನಿಂಗ್ ಯಂತ್ರವು ಕರ್ಜಗಿ ಗ್ರಾಮದ ಕವಿತಾ ಗೋಡೆಕರ ಅವರ ಮನೆಯಲ್ಲಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು ಕವಿತಾ ಅವರ ಮನೆಗೆ ತೆರಳಿದಾಗ ಸ್ಕ್ಯಾನಿಂಗ್‌ಗೆ ಯಂತ್ರ ಸಿದ್ಧಪಡಿಸಲಾಗುತ್ತಿತ್ತು. ಈ ವೇಳೆ ಪೊಲೀಸರು ಆರೋಪಿಗಳನ್ನು ಹಾಗೂ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ.

ಈ ಜಾಲದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ನಕಲಿ ವೈದ್ಯ ಸಂಜಯ್ ವಾಘ್ಮೋಡೆ ಅವರನ್ನು ಬಂಧಿಸಲು ಅಧಿಕಾರಿಗಳು ಮುಂದಾದಾಗ, ಆತ ಸ್ಥಳದಿಂದ ಪರಾರಿಯಾಗಿದ್ದಾನೆ.

ಕಾರ್ಯಾಚರಣೆಯಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ತಹಸೀಲ್ದಾರ್ ಗಿರೀಶ ಸ್ವಾದಿ ಹಾಗೂ ಆರೋಗ್ಯ ಇಲಾಖೆಯ ಮನು ಕೂಡ ಭಾಗವಹಿಸಿದ್ದರು.

ಇಬ್ಬರ ಬಂಧನ; ಸ್ಕ್ಯಾನಿಂಗ್ ಯಂತ್ರ ಜಪ್ತಿ
ಭ್ರೂಣ ಲಿಂಗ ಪತ್ತೆ ಆರೋಪದಡಿ ನಿಖಿಲ್ ತೇಲಿ, ದಾನಕ್ಕ ತೇಲಿ, ಕವಿತಾ ಗೋಡೆಕರ ಹಾಗೂ ನಕಲಿ ವೈದ್ಯ ಸಂಜಯ್ ವಾಘ್ಮೋಡೆ ವಿರುದ್ಧ ಮಹಾರಾಷ್ಟ್ರದ ಉಮದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಈ ಪೈಕಿ ನಿಖಿಲ್ ತೇಲಿ ಹಾಗೂ ದಾನಕ್ಕ ತೇಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಜಯ್ ವಾಘ್ಮೋಡೆ ಪರಾರಿಯಾಗಿದ್ದಾನೆ. ಭ್ರೂಣ ಲಿಂಗ ಪತ್ತೆಗೆ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರವನ್ನು ಪಿಸಿಪಿಎನ್‌ಡಿಟಿ ಕಾಯ್ದೆಯಡಿ ವಶಪಡಿಸಿಕೊಂಡು ಮಹಾರಾಷ್ಟ್ರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಹಿಂದಿನ ಪ್ರಕರಣದ ಬೆನ್ನಲ್ಲೇ ಮತ್ತೊಂದು ಆರೋಪ
ಮಹಾಲಿಂಗಪುರದಲ್ಲಿ 2020 ಹಾಗೂ 2024ರಲ್ಲಿ ಕವಿತಾ ಬಾಡನವರ ವಿರುದ್ಧ ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಆರೋಪ ಕೇಳಿಬಂದಿತ್ತು. ಈ ಪೈಕಿ ಗರ್ಭಪಾತದ ವೇಳೆ ಮಹಾರಾಷ್ಟ್ರ ಮೂಲದ ಗರ್ಭಿಣಿಯೊಬ್ಬರು ಮೃತಪಟ್ಟ ಪ್ರಕರಣದಲ್ಲೂ ಕವಿತಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಂಧನದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅವರ ವಿರುದ್ಧ ಮತ್ತೆ ಇದೇ ರೀತಿಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ರಹಸ್ಯ ಕಾರ್ಯಾಚರಣೆ ನಡೆಸಲಾಗಿದೆ.

ಈ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದಡಿ ಆರೋಗ್ಯ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇತ್ತೀಚೆಗೆ ಕವಿತಾ ಅವರಿಗೆ ಪೊಲೀಸರು ನೋಟಿಸ್‌ ಕೂಡ ಜಾರಿ ಮಾಡಿದ್ದರು.

ಮಹಿಳಾ ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ ವಿಜಯಪುರ ಹಾಗೂ ಸಾಂಗ್ಲಿ ಪೊಲೀಸರಿಗೆ ಕಾರ್ಯಾಚರಣೆಯ ಮಾಹಿತಿ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad Widget
Continue Reading

Uncategorized

Kural Tulu Touch-ತುಳು ಭಾಷೆಗೆ ಡಿಜಿಟಲ್‌ ಬಲ; ಆಂಡ್ರಾಯ್ಡ್‌ಗೆ ಬಂತು ‘ಕುರಲ್ ತುಳು ಟಚ್’ ಕೀಬೋರ್ಡ್‌

Published

on



Ad Widget

Ad Widget

Ad Widget

Ad Widget

ಕರಾವಳಿ ಕರ್ನಾಟಕದ ಹೆಮ್ಮೆಯ ತುಳು ಭಾಷೆಯನ್ನು ಡಿಜಿಟಲ್‌ ಜಗತ್ತಿನಲ್ಲಿ ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಇನ್ನು ಮುಂದೆ ನೇರವಾಗಿ ತುಳು ಲಿಪಿಯಲ್ಲೇ ಸಂದೇಶಗಳನ್ನು ಟೈಪ್‌ ಮಾಡಲು ನೆರವಾಗುವ ‘ಕುರಲ್ ತುಳು ಟಚ್’ (Kural Tulu Touch) ನೂತನ ಕೀಬೋರ್ಡ್‌ ಅಧಿಕೃತವಾಗಿ ಬಿಡುಗಡೆಯಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು, ಅ.6: ಕರಾವಳಿ ಕರ್ನಾಟಕದ ಹೆಮ್ಮೆಯ ತುಳು ಭಾಷೆಯನ್ನು ಡಿಜಿಟಲ್‌ ಜಗತ್ತಿನಲ್ಲಿ ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಇನ್ನು ಮುಂದೆ ನೇರವಾಗಿ ತುಳು ಲಿಪಿಯಲ್ಲೇ ಸಂದೇಶಗಳನ್ನು ಟೈಪ್‌ ಮಾಡಲು ನೆರವಾಗುವ ‘ಕುರಲ್ ತುಳು ಟಚ್’ (Kural Tulu Touch) ನೂತನ ಕೀಬೋರ್ಡ್‌ ಅಧಿಕೃತವಾಗಿ ಬಿಡುಗಡೆಯಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಸಾಫ್ಟ್‌ವೇರ್‌ ಇಂಜಿನಿಯರ್‌ಗಳಾದ ಹರ್ಷಿತ್‌ ದೇವಾಡಿಗ ಹಾಗೂ ಚೈತ್ರಾ ಪೂಜಾರಿ ಅಭಿವೃದ್ಧಿಪಡಿಸಿರುವ ಈ ಕೀಬೋರ್ಡ್‌ ಅನ್ನು ಬೆಂಗಳೂರಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ‘ತುಳುನಾಡ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಗೊಳಿಸಲಾಯಿತು.

Ad Widget

Ad Widget <> Ad Widget

ವಾಟ್ಸಾಪ್‌, ಸಾಮಾಜಿಕ ಜಾಲತಾಣಗಳಲ್ಲೂ ತುಳು ಲಿಪಿ
‘ಕುರಲ್ ತುಳು ಟಚ್’ ಕೀಬೋರ್ಡ್‌ ಸದ್ಯ ಆಂಡ್ರಾಯ್ಡ್‌ ಬಳಕೆದಾರರಿಗೆ ‘ಬಾರವು ಸಾರವು’ (Baravu Saravu) ಆ್ಯಪ್‌ ಮೂಲಕ ಲಭ್ಯವಿದೆ. ಆ್ಯಪ್‌ನಲ್ಲಿರುವ ‘New Keyboard’ ಆಯ್ಕೆಯನ್ನು ಸಕ್ರಿಯಗೊಳಿಸಿದ ಬಳಿಕ ವಾಟ್ಸಾಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ತುಳು ಲಿಪಿಯಲ್ಲಿ ಸಂದೇಶಗಳನ್ನು ಟೈಪ್‌ ಮಾಡಬಹುದು.



Ad Widget

ತುಳು ಕೀಬೋರ್ಡ್‌ನಿಂದ ಇತರ ಭಾಷೆಗಳ ಕೀಬೋರ್ಡ್‌ಗಳಿಗೆ ಸುಲಭವಾಗಿ ಬದಲಾಯಿಸುವ ಸೌಲಭ್ಯವೂ ಇದ್ದು, ಟೈಪ್‌ ಮಾಡಿದ ಪಠ್ಯವನ್ನು ಡಿಜಿಟಲ್‌ ಚಾಟ್‌ಗಳಲ್ಲಿ ಹಂಚಿಕೊಳ್ಳಬಹುದಾದ ಸ್ಟಿಕ್ಕರ್‌ಗಳಾಗಿ ಪರಿವರ್ತಿಸುವ ಆಯ್ಕೆಯೂ ಇದೆ.

Ad Widget

Ad Widget

ಅಕ್ಷರ, ಗುಣಿತಾಕ್ಷರ, ಒತ್ತಕ್ಷರಗಳಿಗೆ ಬೆಂಬಲ
ಸಾಮಾನ್ಯ ಮೊಬೈಲ್‌ ಕೀಬೋರ್ಡ್‌ಗಳ ಮಾದರಿಯಲ್ಲೇ ಸರಳವಾಗಿ ಬಳಸಬಹುದಾದ ವಿನ್ಯಾಸವನ್ನು ‘ಕುರಲ್ ತುಳು ಟಚ್’ ಹೊಂದಿದೆ. ತುಳು ಭಾಷೆಯ ಅಕ್ಷರಗಳು, ಸಂಖ್ಯೆಗಳು, ಗುಣಿತಾಕ್ಷರಗಳು ಹಾಗೂ ಒತ್ತಕ್ಷರಗಳನ್ನು ಇದು ಬೆಂಬಲಿಸುತ್ತದೆ. ಹೀಗಾಗಿ ತುಳು ಲಿಪಿಯಲ್ಲಿ ಪದಗಳು ಹಾಗೂ ವಿವಿಧ ಅಕ್ಷರ ಸಂಯೋಜನೆಗಳನ್ನು ನಿಖರವಾಗಿ ಟೈಪ್‌ ಮಾಡಲು ಸಾಧ್ಯವಾಗಲಿದೆ.

ತುಳು ಲಿಪಿಯನ್ನು ಕೇವಲ ಶೈಕ್ಷಣಿಕ ಉದ್ದೇಶಗಳು ಅಥವಾ ದಾಖಲೆಗಳಿಗೆ ಸೀಮಿತಗೊಳಿಸದೆ, ದೈನಂದಿನ ಡಿಜಿಟಲ್‌ ಸಂವಹನದಲ್ಲೂ ಪ್ರಾಯೋಗಿಕವಾಗಿ ಬಳಸುವಂತೆ ಮಾಡುವುದು ತಮ್ಮ ಉದ್ದೇಶ ಎಂದು ಡೆವಲಪರ್‌ಗಳು ತಿಳಿಸಿದ್ದಾರೆ.

ಆ್ಯಪ್‌ ಅಭಿವೃದ್ಧಿಗೆ ‘Flutter’ ಹಾಗೂ ಬ್ಯಾಕೆಂಡ್‌ ಬೆಂಬಲಕ್ಕೆ ‘Firebase’ ತಂತ್ರಜ್ಞಾನ ಬಳಸಲಾಗಿದ್ದು, ಕೀಬೋರ್ಡ್‌ ಅಭಿವೃದ್ಧಿಯನ್ನು ಕೇವಲ ಎರಡು ವಾರಗಳಲ್ಲಿ ಪೂರ್ಣಗೊಳಿಸಲಾಗಿದೆ.

ಮೂರು ವರ್ಷಗಳ ಹಿಂದಿನ ತುಳು ಕಲಿಕಾ ಆ್ಯಪ್‌ ನೆರವು
ಮೂರು ವರ್ಷಗಳ ಹಿಂದೆ ರೂಪಿಸಿದ್ದ ‘ತುಳು ಕಲಿಕೆ ಆ್ಯಪ್‌’ ಈ ಯೋಜನೆಗೆ ಬಲವಾದ ಅಡಿಪಾಯವಾಯಿತು ಎಂದು ಹರ್ಷಿತ್‌ ದೇವಾಡಿಗ ತಿಳಿಸಿದ್ದಾರೆ. ಸಣ್ಣ ಮೊಬೈಲ್‌ ಪರದೆಯಲ್ಲಿ ತುಳು ಅಕ್ಷರಗಳನ್ನು ಸುಲಭವಾಗಿ ಗುರುತಿಸಿ ಟೈಪ್‌ ಮಾಡಲು ಅನುಕೂಲವಾಗುವಂತೆ ತುಳು ಫಾಂಟ್‌ ಅನ್ನು ಕೀಬೋರ್ಡ್‌ ಲೇಔಟ್‌ಗೆ ನಿಖರವಾಗಿ ಮ್ಯಾಪ್‌ ಮಾಡುವುದು ಪ್ರಮುಖ ತಾಂತ್ರಿಕ ಸವಾಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಜೈ ತುಳುನಾಡ್ ಸಂಸ್ಥಾಪಕ ಸದಸ್ಯ ಶರತ್‌ ಕೊಡವೂರು ಮಾತನಾಡಿ, ಕೇಂದ್ರ ಭಾರತೀಯ ಭಾಷೆಗಳ ಸಂಸ್ಥೆ (CIIL) ಮಾನ್ಯತೆ ಪಡೆದ ತುಳು ಲಿಪಿಯನ್ನು ಡಿಜಿಟಲ್‌ ಜಗತ್ತಿಗೆ ತರುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಬಳಕೆದಾರರಿಗೆ ಗೊಂದಲವಾಗದಂತೆ ಅಕ್ಷರಗಳ ಸರಿಯಾದ ಮ್ಯಾಪಿಂಗ್‌ ಅತ್ಯಂತ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.

‘ಬಾರವು ಸಾರವು’ನಲ್ಲಿ ತುಳು ಕಲಿಕೆಗೆ ಹಲವು ಸೌಲಭ್ಯ
‘ಬಾರವು ಸಾರವು’ ಆ್ಯಪ್‌ ಕೇವಲ ಕೀಬೋರ್ಡ್‌ ಒದಗಿಸುವುದಕ್ಕೆ ಸೀಮಿತವಾಗಿಲ್ಲ. ತುಳು ಕಲಿಯಲು ಆಸಕ್ತಿ ಹೊಂದಿರುವವರಿಗೆ ಸಮಗ್ರ ಕಲಿಕಾ ವೇದಿಕೆಯಾಗಿಯೂ ಇದು ಕಾರ್ಯನಿರ್ವಹಿಸುತ್ತದೆ.

ಆ್ಯಪ್‌ನಲ್ಲಿ ತುಳು ನಿಘಂಟು, ಮೂಲಭೂತ ವಾಕ್ಯಗಳು, ಆಡಿಯೋ ಆಧಾರಿತ ಕಲಿಕಾ ಸಾಮಗ್ರಿಗಳು ಹಾಗೂ ತುಳು ಸಂಸ್ಕೃತಿಯನ್ನು ಪರಿಚಯಿಸುವ ಪಾರಂಪರಿಕ ಛಾಯಾಚಿತ್ರಗಳು ಲಭ್ಯವಿವೆ. ಬಳಕೆದಾರರು ನಿಘಂಟಿಗೆ ಹೊಸ ತುಳು ಪದಗಳನ್ನು ಸೂಚಿಸುವ ಅವಕಾಶವೂ ಇದ್ದು, ಪರಿಶೀಲನೆಯ ಬಳಿಕ ಅವುಗಳನ್ನು ಸೇರಿಸಲಾಗುತ್ತದೆ.

ತುಳು ಲಿಪಿ ಕಲಿಕಾ ವಿಷಯಗಳು ಹಾಗೂ ವೀಡಿಯೊಗಳನ್ನು ಒದಗಿಸಿರುವ ಬನಶ್ರೀ ಅವಿನಾಶ್‌, ಪಾರಂಪರಿಕ ಲಿಪಿಯನ್ನು ಕಲಿಯಲು ಮತ್ತು ಅಭ್ಯಾಸ ಮಾಡಲು ಆಸಕ್ತಿ ಹೊಂದಿರುವವರಿಗೆ ಈ ವೇದಿಕೆ ಪ್ರಾಯೋಗಿಕ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.

ಯೂನಿಕೋಡ್‌ ಮಾನ್ಯತೆಯ ಬಳಿಕ ಮತ್ತೊಂದು ಮಹತ್ವದ ಹೆಜ್ಜೆ
ತುಳು-ತಿಗಳಾರಿ ಲಿಪಿಗೆ ಯೂನಿಕೋಡ್‌ ಮಾನ್ಯತೆ ದೊರೆತಿರುವುದು ಈ ತಾಂತ್ರಿಕ ಬೆಳವಣಿಗೆಗೆ ಪ್ರಮುಖ ಪ್ರೇರಣೆಯಾಗಿದೆ. 2024ರಲ್ಲಿ ಯೂನಿಕೋಡ್‌ ಕಾನ್ಸೋರ್ಟಿಯಂನ ‘ಯೂನಿಕೋಡ್‌ 16’ ಆವೃತ್ತಿಯಲ್ಲಿ 80 ತುಳು ಅಕ್ಷರಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಇದರಿಂದ ಡಿಜಿಟಲ್‌ ವೇದಿಕೆಗಳಲ್ಲಿ ತುಳು ಲಿಪಿಗೆ ಬೆಂಬಲ ಕಲ್ಪಿಸಲು ಹಾಗೂ ಫಾಂಟ್‌ ಮತ್ತು ಕೀಬೋರ್ಡ್‌ ಅಭಿವೃದ್ಧಿಪಡಿಸಲು ತಾಂತ್ರಿಕ ಅಡಿಪಾಯ ಸೃಷ್ಟಿಯಾಯಿತು.

ತುಳು ವಿದ್ವಾಂಸರು ಹಾಗೂ ತುಳು ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಗಳ ಹಲವು ವರ್ಷಗಳ ಪ್ರಯತ್ನದ ಫಲವಾಗಿ ಈ ತಾಂತ್ರಿಕ ಪ್ರಗತಿ ಸಾಧ್ಯವಾಗಿದೆ. ಇದೀಗ ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಿರುವ ಯುವ ಪೀಳಿಗೆಗೆ ಕನ್ನಡ ಅಥವಾ ಇಂಗ್ಲಿಷ್‌ ಲಿಪಿಯ ಬದಲು ತುಳು ಭಾಷೆಯನ್ನು ಅದರ ಮೂಲ ಲಿಪಿಯಲ್ಲೇ ಡಿಜಿಟಲ್‌ ಸಂವಹನದಲ್ಲಿ ಬಳಸಲು ಹೊಸ ಅವಕಾಶ ದೊರೆತಂತಾಗಿದೆ.

ಸದ್ಯ ‘ಕುರಲ್ ತುಳು ಟಚ್’ ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ iOS ಬಳಕೆದಾರರಿಗೂ ಕೀಬೋರ್ಡ್‌ ಬಿಡುಗಡೆ ಮಾಡಲು ಡೆವಲಪರ್‌ಗಳು ಯೋಜಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading