ಕಾರ್ಯಕ್ರಮಗಳು
Press Day-ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಪುತ್ತೂರು ತಾಲೂಕು ನೇತೃತ್ವದಲ್ಲಿ ಪತ್ರಿಕಾ ದಿನಾಚರಣೆ; ಡಾ.ಆಶಾಲತಾ ಪಿ. ರವರಿಂದ ಉಪನ್ಯಾಸ; ಪ್ರೊ.ವಿ.ಬಿ. ಅರ್ತಿಕಜೆಯವರಿಗೆ ಸನ್ಮಾನ; ಜವಾಬ್ದಾರಿಯುತ ಮಾಧ್ಯಮದಿಂದ ಸಮಾಜದ ಬದಲಾವಣೆ ಸಾಧ್ಯ-ಪುತ್ತೂರು ಎ.ಸಿ ಜುಬಿನ್ ಮೊಹಪಾತ್ರ
ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ನೇತೃತ್ವದಲ್ಲಿ ವಿವೇಕಾನಂದ ಕಾಲೇಜು(ಸ್ವಾಯತ್ತ) ಪುತ್ತೂರು ಹಾಗೂ ಪತ್ರಿಕೋದ್ಯಮ ವಿಭಾಗ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ- ಉಪನ್ಯಾಸ-ಸನ್ಮಾನ ಸಮಾರಂಭ ನೆಹರುನಗರ ವಿವೇಕಾನಂದ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಜುಬಿನ್ ಮೊಹಪಾತ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಸತ್ಯದ ವರದಿಗಳನ್ನು ಪ್ರಕಟಿಸಿದ ಪತ್ರಕರ್ತರು ಹುತಾತ್ಮರಾದ ಘಟನೆಗಳು ನಡೆದಿದೆ. ಸುಳ್ಳು ಸುದ್ದಿಗಳನ್ನು ಹಾಕಿದಾಗ ಸಮಾಜದ ಹಾಗೂ ಕುಟುಂಬದ ಮೇಲೆ ಬಹಳ ಪ್ರಭಾವ ಬೀರುತ್ತದೆ. ಜವಾಬ್ದಾರಿಯುತ ಮಾಧ್ಯಮದಿಂದ ಸಮಾಜದ ಹಾಗೂ ರಾಜಕೀಯ ಬದಲಾವಣೆ ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಂಬ ಮೂರು ಅಂಗಗಳಿದ್ದು ಇವು ಮೂರು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅವುಗಳನ್ನು ಎಚ್ಚರಿಸುವ ನಾಲ್ಕನೇ ಅಂಗವಾಗಿ ಪತ್ರಿಕಾಂಗ ಕಾರ್ಯ ನಿರ್ವಹಿಸುತ್ತದೆ. ಪೆನ್ನು ಕತ್ತಿಗಿಂತ ಶಕ್ತಿಶಾಲಿಯಾಗಿದೆ. ಆದರೆ ಅದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಬಾರದು. ಪತ್ರಕರ್ತರು ಎಥಿಕ್ಸ್‌ನೊಂದಿಗೆ ಜವಾಬ್ದಾರಿ ವಹಿಸಿಕೊಂಡು ಕರ್ತವ್ಯ ನಿರ್ವಹಿಸುವವರಾಗಬೇಕು ಎಂದು ಹೇಳಿದ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಬಾಲಗಂಗಾಧರ್ ತಿಲಕ್, ಭಗತ್ ಸಿಂಗ್‌ರವರೂ ಆ ಕಾಲದಲ್ಲಿ ಸ್ವಾತಂತ್ರ್ಯದ ಹೋರಾಟದೊಂದಿಗೆ ಪತ್ರಕರ್ತರಾಗಿ ದುಡಿದವರಾಗಿದ್ದಾರೆ ಎಂಡು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಮಾತನಾಡಿ, ವರದಿಗಾರಿಕೆಗೆ ಸಂಬಂಧಪಟ್ಟಂತೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನೆರವು ನೀಡಲು ಸುದ್ದಿ ಬಿಡುಗಡೆ, ಕಹಳೆ, ವಿಟಿವಿ ಸಂಸ್ಥೆ ಸದಾ ಸಿದ್ಧವಿದೆ ಎಂದು ತಿಳಿಸಿದರು. ನಮ್ಮ ಯೂನಿಯನ್ ಮೂಲಕ ಹಲವು ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ ಅವರು ನಮ್ಮ ಸಂಘದಲ್ಲಿ ವಿವಿಧ ಪತ್ರಿಕೆ, ಟಿ.ವಿ. ಮತ್ತು ವೆಬ್ ಮಾಧ್ಯಮದ ವರದಿಗಾರರು ಸದಸ್ಯರಾಗಿದ್ದಾರೆ. ಈ ಸದಸ್ಯರಿಗೆ ಕಾರ್ಯ ನಿರ್ವಹಿಸಲು ಸ್ಥಳದ ಅವಶ್ಯಕತೆ ಇದೆ. ಹಾಗಾಗಿ ಪುತ್ತೂರು ಪತ್ರಿಕಾ ಭವನದಲ್ಲಿ ನಮ್ಮ ಯೂನಿಯನ್ ಸದಸ್ಯರಿಗೆ ಮಾತ್ರವಲ್ಲದೆ ಎಲ್ಲಾ ಪತ್ರಕರ್ತರ ಸಂಘದವರಿಗೂ ಸಮಾನ ಅವಕಾಶ ಸಿಗುವಂತಾಗಬೇಕಿದೆ ಎಂದರು. ನಮ್ಮ ಸದಸ್ಯರಿಗೆ ಸರಕಾರದ ಸವಲತ್ತು ಮತ್ತು ಇನ್ಸೂರೆನ್ಸ್ ವ್ಯವಸ್ಥೆ ಸಿಗುವಂತೆ ಮಾಡಲು ಪ್ರಯತ್ನ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಾಗಾರಗಳನ್ನು ನಡೆಸಲಿದ್ದೇವೆ ಎಂದು ಅವರು ತಿಳಿಸಿದರು.
ದ.ಕ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷರಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡು ಮಾತನಾಡಿ ನಕಾರಾತ್ಮಕ ಲೇಖನಗಳನ್ನು ಓದುಗರು ಓದುವುದು ಕಡಿಮೆ ಮಾಡಿದಾಗ ಮತ್ತು ಸಕರಾತ್ಮಕ ಲೇಖನಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ ಸಮಾಜದ ಸ್ವಾಸ್ಥ್ಯ ಉಳಿಯುತ್ತದೆ ಎಂದರು. ಪುತ್ತೂರು ವ್ಯಾಪ್ತಿಗೆ ಸಂಬಂಧಪಟ್ಟ ಹಾಗೆ ತುಳುವಿನಲ್ಲಿ ಒಳ್ಳೆಯ ಡಾಕ್ಯುಮೆಂಟರಿ ಮಾಡುವವರಿಗೆ, ಪುಸ್ತಕ ಪ್ರಕಟಿಸುವವರಿಗೆ ತುಳು ಸಾಹಿತ್ಯ ಅಕಾಡೆಮಿ ಫೆಲೋಶಿಪ್ ನಗದು ನೀಡುತ್ತದೆ ಎಂದು ಹೇಳಿದ ಅವರು ಪತ್ರಿಕೋದ್ಯಮದ ಉಗಮ, ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಗೌರವ ಸಲಹೆಗಾರರಾದ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪ್ರೊ.ವಿ.ಬಿ. ಅರ್ತಿಕಜೆಯವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು “ಇತಿಹಾಸ ಪ್ರಾಧ್ಯಾಪಕನಾಗಿರುವ ನಾನು ಪತ್ರಿಕೋದ್ಯಮದಲ್ಲಿ ಕಳೆದ ೪೦ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಪತ್ರಕರ್ತನಾಗಿ ವೃತ್ತಿಯಿಂದ ರಿಟೈರ್ಡ್ ಆದರೂ ಪ್ರವೃತ್ತಿಯಿಂದ ರಿಟೈರ್ಡ್ ಆಗದ ಹಾಗೆ ಸೇವೆ ನೀಡುತ್ತಿದ್ದೇನೆ ಎಂದರು. ಪುತ್ತೂರಿನ ಪತ್ರಕರ್ತರ ಸಂಘಕ್ಕೆ ನಿಜಕ್ಕೂ ಜೀವ ಕೊಟ್ಟವರು ಸುದ್ದಿ ಬಿಡುಗಡೆ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದರು. ದಶಕಗಳ ಹಿಂದೆಯೇ ಶಿವಾನಂದರು ಪುತ್ತೂರಿನ ಪತ್ರಕರ್ತರ ಸಂಘದ ಒಡಬಾಡಿ ಆಗಿದ್ದರು ಎಂದು ಹೇಳಿದ ಅರ್ತಿಕಜೆ ಅವರು ವರದಿಗಾರರು ಮಾಡುವ ಲೇಖನ, ವರದಿಗಳು ಓದುಗರ ಮನ ಮುಟ್ಟಬೇಕಾಗಿದೆ ಎಂದು ಹೇಳಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದರವರು ಪ್ರೊ.ವಿ.ಬಿ ಆರ್ತಿಕಜೆರವರನ್ನು ಸನ್ಮಾನಿಸಿ ಮಾತನಾಡಿ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಕಳೆದ 40 ವರ್ಷಗಳಿಂದ ಬರೆಯುತ್ತಿದ್ದೇನೆ. ಸನ್ಮಾನಿತ ಪ್ರೊ.ಅರ್ತಿಕಜೆರವರು ಕೂಡ ಪತ್ರಿಕಾ ಜೀವನದಲ್ಲಿ 40 ವರ್ಷದ ಅನುಭವವನ್ನು ಹೊಂದಿರುವುದು ಕಾಕತಾಳೀಯ. ಓರ್ವ ವೈದ್ಯನಾಗಿದ್ದ ನಾನು ಭ್ರಷ್ಟಾಚಾರದ ವಿರುದ್ಧ ೪೦ ವರ್ಷದ ಹಿಂದೆಯೇ ಹೋರಾಟ ನಡೆಸಿ ಪತ್ರಿಕೆ ಆರಂಭಿಸಿ ಈಗಲೂ ಹೋರಾಟ ಮಾಡುತ್ತಿದ್ದೇನೆ ಎಂದರು. ಸಮಾಜದಲ್ಲಿ ಎಲ್ಲರಿಗೂ ಒಂದು ದಿನಾಚರಣೆ ಇದ್ದ ಹಾಗೆ ಆಗಸ್ಟ್ 15ರ ಸ್ವಾತಂತ್ರೋತ್ಸವ ದಿನದಂದು ಲಂಚ, ಭ್ರಷ್ಟಾಚಾರ ಮುಕ್ತ ದಿನವನ್ನಾಗಿ ಆಚರಣೆ ಮಾಡಬೇಕು ಎನ್ನುವ ಘೋಷಣೆ ಹೊರಡಿಸಬೇಕು ಎಂದು ಹೇಳಿದ ಡಾ. ಶಿವಾನಂದ ಅವರು ವೇದಿಕೆಯಲ್ಲಿದ್ದ ಅತಿಥಿಗಳಿಗೆ ಲಂಚ, ಭ್ರಷ್ಟಾಚಾರದ ವಿರುದ್ಧದ ಜನಜಾಗೃತಿಯ ಫಲಕವನ್ನು ನೀಡಿದರು. ಮಳೆ ಕೊಯ್ಲು ಕುರಿತು ಜನಜಾಗೃತಿ ಮೂಡಿಸುತ್ತಿರುವ ಕುರಿತು ಮಾಹಿತಿ ನೀಡಿದ ಅವರು ಅಗ್ನಿ ಅನಾಹುತ ತಪ್ಪಿಸುವ ಬಗ್ಗೆ ನಡೆಸಲಾಗುತ್ತಿರುವ ಜನಜಾಗೃತಿ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೆರವೇರಿಸಿಕೊಟ್ಟ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಆಶಾಲತಾ ಪಿ.ರವರು ಭಾರತೀಯ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೆ ತನ್ನ ಹಕ್ಕನ್ನು ಮಂಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಜನರ ಧ್ವನಿಯನ್ನು ಸಮಾಜಕ್ಕೆ ತಿಳಿಸುವ ಉದ್ಧೇಶವಿರಬೇಕು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಪತ್ರಗಾರಿಕೆ ಇರಬಾರದು. ಪತ್ರಿಕಾಂಗ ಸಂವಿಧಾನದ ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿದ್ದು ಶೋಷಣೆಮುಕ್ತ, ದೌರ್ಜನ್ಯಮುಕ್ತ ಸಮಾಜ ನಿರ್ಮಿಸಲು ಸೌಹಾರ್ದಯುತವಾಗಿ, ಭ್ರಾತೃತ್ವದ ಜವಾಬ್ದಾರಿಯನ್ನು ಪತ್ರಕರ್ತರು ವಹಿಸಿಕೊಳ್ಳಬೇಕು. ಜನಧ್ವನಿಯಾಗಿ ದಿನದ ಇಪ್ಪತ್ನಾಲ್ಕು ಗಂಟೆಯೂ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದು ಅವರ ಕಾರ್ಯವೈಖರಿ ಶ್ಲಾಘನೀಯ ಎಂದರು.
ಪುತ್ತೂರು ಕಹಳೆ ನ್ಯೂಸ್ ಚಾನೆಲ್ ಮುಖ್ಯಸ್ಥ ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ ಮಾತನಾಡಿ, ಪತ್ರಿಕೋದ್ಯಮದಲ್ಲಿ ಸಕರಾತ್ಮಕ ಹಾಗೂ ನಕಾರಾತ್ಮಕ ಹೀಗೆ ಎರಡು ಆಯಾಮಗಳಿದ್ದು ಇದು ಓದುಗನ ಮಾನಸಿಕತ್ವದ ಮೇಲೆ ನಿಂತಿದೆ. ಸಕರಾತ್ಮಕ ವರದಿಗಳಿಗೆ ಓದುಗರ ಸಂಖ್ಯೆ ಕಡಿಮೆ, ಆದರೆ ನಕಾರಾತ್ಮಕ ವರದಿಗಳಿಗೆ ಓದುಗರ ಸಂಖ್ಯೆ ಅಧಿಕವಾಗಿರುವುದು ಇತ್ತೀಚೆಗಿನ ವಿದ್ಯಮಾನದಲ್ಲಿ ಕಾಣ ಸಿಗುತ್ತದೆ. ಕೆಲವೊಮ್ಮೆ ನಿಷ್ಠುರ, ಪ್ರಖರ, ನಿಖರವಾದ ವರದಿಗಳನ್ನು ಹಾಕಿ ಸ್ಟೇಷನ್ ಮೆಟ್ಟಿಲು ಹತ್ತಿದ್ದೂ ಇದೆ. ಉದಯೋನ್ಮುಖ ಪತ್ರಕರ್ತರು ವರದಿಗೆ ತೆರಳಿದಾಗ ಅಲ್ಲಿನ ಪ್ರತಿಯೋರ್ವರ ಭಾಷಣಗಳನ್ನು ಇಷ್ಟಪಟ್ಟು ಕೇಳುವಂತರಾಗಬೇಕು. ಪುತ್ತೂರಿನಲ್ಲಿ ಪತ್ರಕರ್ತರ ನಡುವೆ ಭಿನ್ನಾಭಿಪ್ರಾಯಗಳಿದ್ದು ಇದನ್ನು ದೂರ ಮಾಡಲು ಈ ಯೂನಿಯನ್ ಪ್ರಯತ್ನಿಸಬೇಕು ಎಂದರು. ಡಾ. ಯು.ಪಿ. ಶಿವಾನಂದರವರ ನೇತೃತ್ವದಲ್ಲಿ ಸುದ್ದಿ ಬಿಡುಗಡೆ ಬಳಗ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವುದು ಒಳ್ಳೆಯ ಕಾರ್ಯ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿವೇಕಾನಂದ ಕಾಲೇಜಿನ ಸಂಚಾಲಕರಾದ ನ್ಯಾಯವಾದಿ ಮುರಳೀಕೃಷ್ಣ ಕೆ.ಎನ್. ಮಾತನಾಡಿ ಪತ್ರಿಕಾ ದಿನಾಚರಣೆ ಸಂದರ್ಭ ಆದರ್ಶ ವ್ಯಕ್ತಿಗೆ ಸನ್ಮಾನ ಮಾಡಿರುವುದು ಶ್ಲಾಘನೀಯ. ಯಾವುದೇ ವರದಿಯನ್ನು ಮಾಡುವಾಗ ಅದು ನಿಖರವಾಗಿರಬೇಕು, ಸತ್ಯವಾಗಿರಬೇಕು, ಪರಾಮರ್ಶೆ ಮಾಡುವಂತಿರಬೇಕು. ಸತ್ಯಶೋಧಕರಾಗಿ ಪತ್ರಕರ್ತರು ಕೆಲಸ ಮಾಡಬೇಕು. ಯುವ ಪತ್ರಕರ್ತರು ಸಾಹಿತ್ಯವನ್ನು ಓದುವ ಪರಿಪಾಠ ಬೆಳೆಸಬೇಕು. ಯಾವುದೇ ಬರಹ, ಲೇಖನ ಓದುಗರಿಗೆ ತಲುಪಬೇಕಾದರೆ ಅಲ್ಲಿ ಉತ್ತಮ ಸಾಹಿತ್ಯದ ಅಗತ್ಯವಿದೆ. ಮಾಧ್ಯಮಗಳು ಸಮಾಜಕ್ಕೆ ದೃಷ್ಠಿ ಕೊಡುವ ಮಾಧ್ಯಮಗಳಾಗಬೇಕು ಎಂದರು.
ಈ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ವೇದವ್ಯಾಸ ರಾಮಕುಂಜ ಹಾಗೂ ಕಾರ್ಯಾಗಾರಕ್ಕೆ ಸಹಕಾರ ನೀಡಿದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ನಿಡ್ಪಳ್ಳಿರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಪುರುಷೋತ್ತಮ ಶೆಟ್ಟಿ ನುಳಿಯಾಲು ಮಾಲಕತ್ವದ ಯಮುನಾ ಹೋಮ್ಸ್ ಆಂಡ್ ಡಿಸೈನ್ಸ್, ಯಮುನಾ ಬೋರ್‌ವೆಲ್ಸ್‌ರವರಿಂದ ತಾಲೂಕು ಜರ್ನಲಿಸ್ಟ್ ಯೂನಿಯನ್‌ನ ಸದಸ್ಯರಿಗೆ ಉತ್ತಮ ಗುಣಮಟ್ಟದ ಕೊಡೆಗಳನ್ನು ವಿತರಣೆ ಮಾಡಲಾಯಿತು.
ತಾಲೂಕು ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿಣಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಪೆರುವಾಯಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊಟ್ಟೆತ್ತಡ್ಕ ಸ್ವಾಗತಿಸಿ ಉಪಾಧ್ಯಕ್ಷೆ ಕವಿತಾ ಮಾಣಿ ವಂದಿಸಿದರು. ಉಪಾಧ್ಯಕ್ಷೆ ಚೈತ್ರಾ ಭೂಷಣ್ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷೆ ಹೇಮಾ ಜಯರಾಂ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ನ ಉಪಾಧ್ಯಕ್ಷರಾದ ಜ್ಯೋತಿಪ್ರಕಾಶ್ ಪುಣಚ, ತಾಲೂಕು ಜರ್ನಲಿಸ್ಟ್ ಯೂನಿಯನ್ ಜತೆ ಕಾರ್ಯದರ್ಶಿ ಚಿನ್ಮಯಕೃಷ್ಣ, ಕೋಶಾಧಿಕಾರಿ ಪ್ರಜ್ವಲ್ ಕೋಟ್ಯಾನ್, ಕಾರ್ಯಕಾರಿಣಿ ಸದಸ್ಯರಾದ ಆದಿತ್ಯ ಈಶ್ವರಮಂಗಲ, ಚಂದ್ರಕಾಂತ್ ಉರ್ಲಾಂಡಿ, ದೀಪಕ್ ಹೊಸ್ಮಠ, ಪ್ರಶಾಂತ್ ಸಿ.ಎಚ್., ಜಯಪ್ರಕಾಶ್ ಬದಿನಾರು, ಜಗದೀಶ್ ಕಜೆ, ಶಶಿಧರ ನೆಕ್ಕಿಲಾಡಿ, ಸುಭಾಶ್ಚಂದ್ರ ಕೆ, ಗುಣಕರ ಏಕ, ಮನ್ಮಥ ಶೆಟ್ಟಿ, ಪ್ರಭಾಕರ ವಿಟ್ಲ, ರಾಜೇಶ್ ವಿಟ್ಲ, ರಕ್ಷಿತಾ ಮತ್ತಿತರರು ಸಹಕರಿಸಿದರು.
ಮಂಗಳೂರು
Mangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ
ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು: ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಬೆಳೆ ವಿಮೆ ಯೋಜನೆಯಡಿ ರೈತರಿಗೆ ಸೂಕ್ತ ಪರಿಹಾರ ದೊರೆಯದಿರುವುದು ಸೇರಿದಂತೆ ವಿಮೆ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಭೆಯಲ್ಲಿ ಧ್ವನಿ ಎತ್ತಲಾಗುತ್ತದೆ.
ಬೆಳೆ ವಿಮೆ ಯೋಜನೆಯಡಿ ರೈತರಿಗೆ ನ್ಯಾಯಯುತ ಪರಿಹಾರ ದೊರೆಯಬೇಕು ಹಾಗೂ ವಿಮೆ ಪಾವತಿಯಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು ಸೇರಿದಂತೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಳೆ ವಿಮೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹಕ್ಕೊತ್ತಾಯ ಮಂಡಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಸ್ಥಳೀಯ
Dharmasthala-ಅ. 11 ರಿಂದ 19 : ಧರ್ಮಸ್ಥಳದಲ್ಲಿ ನವರಾತ್ರಿ ವೈಭವ
ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಇದೇ 11 ರಿಂದ 19 ರ ವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಇದೇ 11 ರಿಂದ 19 ರ ವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ದೇವಸ್ಥಾನದ ಎದುರು ಇರುವ ಪ್ರವಚನಮಂಟಪದಲ್ಲಿ ಸಂಜೆ ಆರು ಗಂಟೆಯಿಂದ ಒಂಭತ್ತು ಗಂಟೆ ವರೆಗೆ ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ. 11: ಭಾನುವಾರ: ಕುಮಾರಿ ಪ್ರಾಪ್ತಿ ಶೆಟ್ಟಿ, ಧರ್ಮಸ್ಥಳ ಮತ್ತು ಕುಮಾರಿ ಆದ್ವಿ, ನಿಡಿಗಲ್ (ಭಕ್ತಿಸಂಗೀತ), ಅ. 12: ಸೋಮವಾರ: ಪವಿತ್ರವಿನಯ್ ಮಯ್ಯ ಅರ್ಕುಳ, ಮಂಗಳೂರು (ಸುಗಮ ಸಂಗೀತ), ಅ. 13: ಮಂಗಳವಾರ: ಕುಮಾರಿ ಮಾನ್ಸಿ, ಮೈಸೂರು (ಭಕ್ತಿಸಂಗೀತ), ಅ. 14: ಬುಧವಾರ: ಮಾಸ್ಟರ್ ಆಗಮ, ಪೆರ್ಲ, ಮಂಗಳೂರು (ಕರ್ನಾಟಕ ಶಾಸ್ತ್ರೀಯ ಸಂಗೀತ), ಅ. 15: ಗುರುವಾರ: ಕುಮಾರಿ ಧೃತಿ ಬಿ. ಆತ್ರೇಯಾಸ್, ಕುಮಾರಿ ಧನ್ವಿ ಬಿ. ಆತ್ರೇಯಾಸ್ ಮತ್ತು ಮಾಸ್ಟರ್ ಅಸ್ರಮೇಯ ಗುರುಪ್ರಸಾದ್, ಬೆಂಗಳೂರು (ನೃತ್ಯ, ಗಾನಲಹರಿ), ಅ. 16: ಶುಕ್ರವಾರ: ಸನತ್‌ಕುಮಾರ್, ಬೆಂಗಳೂರು (ವಯಲಿನ್ ವಾದನ), ಅ. 17: ಶನಿವಾರ: ಕುಮಾರಿ ಮಯೂರಿ ಭಟ್ ಪೊಳಲಿ, ಬಂಟ್ವಾಳ (ಕರ್ನಾಟಕ ಶಾಸ್ತ್ರೀಯ ಸಂಗೀತ), ಅ. 18: ಆದಿತ್ಯವಾರ: ಕುಮಾರಿ ಐಶ್ವರ್ಯ ಜೋಗಿ ಮತ್ತು ತಂಡ, ಕುಂದಾಪುರ (ಸುಮಧುರ ಗಾನವೈಭವ), ಅ. 19: ಸೋಮವಾರ: ಕುಮಾರಿ ಅರ್ಚಿಷಾ ರಾವ್ ಮತ್ತು ಬಳಗ, ಬೆಂಗಳೂರು (ಸಂಜೆ ಗಂಟೆ 6.30 ರಿಂದ 8.30). ಮಲ್ಲಿಕಾಮಟ್ಟಿ ಮತ್ತು ಬಳಗ, ಪೊಳಲಿ (ರಾತ್ರಿ ಗಂಟೆ 9 ರಿಂದ 11.30) ಭಕ್ತಿ ಸಂಗೀತ.
ಸ್ಥಳೀಯ
Excel-ಎಕ್ಸೆಲ್ ಗುರು ನಮನ 2026: ಸಾಮರಸ್ಯವೇ ಸಮಾಜದ ಉನ್ನತಿಗೆ ತಳಪಾಯ: ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ
ಎಕ್ಸೆಲ್ ಗುರುವಾಯನ ಕೆರೆಯಲ್ಲಿ ನಡೆದ ಗುರು ನಮನ 2026 ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾತನಾಡಿದರು.
ಗುರುವಾಯನಕೆರೆ, ಅ.4 : “ಸಮಾಜದಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ. ಪ್ರತಿಯೊಂದು ವರ್ಗ, ಸಮುದಾಯಕ್ಕೂ ಈ ಸಮಾಜ ಆಶ್ರಯ ನೀಡಿದೆ. ಪ್ರತಿಯೊಬ್ಬರ ನಂಬಿಕೆ ಆಚರಣೆಗಳು ಬೇರೆ ಬೇರೆಯಾಗಿರುತ್ತವೆ. ಅವರವರ ನಂಬಿಕೆ ಮತ್ತು ಆಚರಣೆಗಳನ್ನು ತಿರಸ್ಕರಿಸಿದಾಗ ಸಮಾಜದಲ್ಲಿ ಘರ್ಷಣೆಗಳು ಏರ್ಪಡುತ್ತವೆ. ಪ್ರತಿಯೊಬ್ಬರನ್ನೂ ಸಾಮರಸ್ಯದಿಂದ ನೋಡುವ ಗುಣ ನಮ್ಮದಾಗಬೇಕು. ಸಾಮರಸ್ಯವೇ ಸಮಾಜದ ಉನ್ನತಿಗೆ ಅಡಿಪಾಯವಿದ್ದಂತೆ” ಎಂದು ಎಕ್ಸೆಲ್ ಗುರುವಾಯನ ಕೆರೆಯಲ್ಲಿ ನಡೆದ ಗುರು ನಮನ 2026 ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.
ಸ್ವಾಮೀಜಿಯವರು ಮಾತನಾಡುತ್ತಾ ಎಕ್ಸೆಲ್ ವಿದ್ಯಾಸಂಸ್ಥೆಯು ಸುಂದರ ಪರಿಸರದಲ್ಲಿ ನಿರ್ಮಾಣಗೊಂಡಿದೆ. ಈ ವಿದ್ಯಾಸಂಸ್ಥೆಯಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಗೊಳ್ಳುತ್ತದೆ. ವಿದ್ಯಾರ್ಥಿಗಳು ಪರಸ್ಪರ ಗೌರವಿಸಿರಿ. ಈ ಸಮಾಜಕ್ಕೆ ಒಳ್ಳೆಯದನ್ನು ಬಯಸಿ. ನೀವು ಓದಿದ ವಿದ್ಯಾ ಸಂಸ್ಥೆಗೆ ಚಿರಋಣಿಯಾಗಿರಬೇಕೆಂದು, ಈ ಸಂಸ್ಥೆಯು ಸಾವಿರಾರು ಶಿಕ್ಷಕರನ್ನು ನಿರಂತರವಾಗಿ ಗೌರವಿಸುತ್ತಾ ಬಂದಿರುವುದು ನಿಜವಾಗಿಯೂ ಅತ್ಯುತ್ತಮ ಬೆಳವಣಿಗೆಯಾಗಿದೆ. ಇದು ಸುಮಂತ್ ಕುಮಾರ್ ಅವರ ಈ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ ಎಂದರು.
ಸುಬ್ರಮಣ್ಯದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ್ ನಾಯಕ್ ಇವರು ಮಾತನಾಡುತ್ತಾ ” ವಿದ್ಯಾರ್ಥಿಗಳು ಕಷ್ಟಕರ ವಿಷಯಗಳ ಕಡೆಗೆ ಹೆಚ್ಚು ಗಮನ ಕೊಡಬೇಕು. ನೀವೆಲ್ಲ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವುದು ನಿಮ್ಮೆಲ್ಲರ ಅದೃಷ್ಟವೇ ಸರಿ. ಈ ಸಂಸ್ಥೆಯ ಅಧ್ಯಕ್ಷರಾದ ನುಮಂತ್ ಕುಮಾರ್ ಜೈನ್ ಇವರು ಉದಾರ ವ್ಯಕ್ತಿತ್ವದ ವ್ಯಕ್ತಿ. ಅವರ ಸೇವಾ ಮನೋಭಾವದಿಂದಲೇ ಈ ಶಿಕ್ಷಣ ಸಂಸ್ಥೆಯು ಎತ್ತರಕ್ಕೆ ಬೆಳೆಯುತ್ತಿದೆ. ಜಿಲ್ಲೆಯ ಯಾವುದೇ ಶೈಕ್ಷಣಿಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಸುಮಂತ್ ಅವರ ಕೊಡುಗೆ ಅಪಾರವಾದದ್ದು. ಈ ಸಂಸ್ಥೆಗೆ ನನ್ನನ್ನು ಆಹ್ವಾನಿಸಿ ಸನ್ಮಾನಿಸಿದ್ದೀರಿ. ನನ್ನಲ್ಲಿ ಕೃತಾರ್ಥತೆ ಭಾವ ಮೂಡುತ್ತಿದೆ. ಎಕ್ಸೆಲ್ ವಿದ್ಯಾಸಂಸ್ಥೆಗೆ ನಾನು ಚಿರಋಣಿ” ಎಂದು ಸಂತಸ ವ್ಯಕ್ತಪಡಿಸಿದರು.
ಮೂಲ್ಕಿಯ ವಿಜಯ ಕಾಲೇಜಿನ ವಿಶ್ರಾಂತ ಪಾಚಾರ್ಯರಾದ ಡಾ .ನಾರಾಯಣ ಪೂಜಾರಿ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಾದ ಸಂತೋಷ್ ಕುಮಾರ್ ಕಾಪಿನಡ್ಕ ಇವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಕೋರಿದರು.
ಎಕ್ಸೆಲ್ ವಿದ್ಯಾ ಸಂಸ್ಥೆಯ ಹಿತೈಷಿಗಳಾದ ರತ್ನರಾಜ್ ಜೈನ್ ಮತ್ತು ಪತ್ರಿಕೋದ್ಯಮಿಗಳಾದ ಸಂತೋಷ್ ಕೋಟ್ಯಾನ್ ಇವರು ಈ ಕಾರ್ಯಕ್ರಮದ ಭಾಗವಾಗಿ ಸನ್ಮಾನ ಸ್ವೀಕರಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡುತ್ತಾ “ನಮ್ಮ ಎಕ್ಸೆಲ್ ಸಂಸ್ಥೆಯ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಮಾಡುತ್ತಿದ್ದಾರೆ . ಇಲ್ಲಿ ಓದಿದ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳಾಗಿ ರೂಪಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುರುಗಳನ್ನು ಗೌರವಿಸುವ ಮೂಲಕ ನಮ್ಮಲ್ಲಿ ಧನ್ಯತಾಭಾವ ಮೂಡಿದೆ. ಶಿಕ್ಷಕರು ಜಗತ್ತಿನ ಪ್ರಥಮ ಪೂಜ್ಯರು . ಅಂತಹ ಶಿಕ್ಷಕರನ್ನು ಸನ್ಮಾನಿಸುವುದು ನಮ್ಮ ಸೌಭಾಗ್ಯ” ಎಂದು ಹೇಳಿದರು.
ಕಾಲೇಜಿನ ಬ್ರೋಚರ್ಸ್ ಅನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಗ್ರಾಮಗಳಲ್ಲಿ ಶಿಕ್ಷಕ ವೃತ್ತಿಯನ್ನು ಮಾಡುತ್ತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ 300 ಹೆಚ್ಚು ಶಿಕ್ಷಕರನ್ನು ಗೌರವಿಸಿದ್ದು ಅತ್ಯಂತ ವಿರಳ ಮತ್ತು ಸೃಜನಾತ್ಮಕ ಕಾರ್ಯಕ್ರಮವಾಗಿತ್ತು. ಎಲ್ಲ ಶಿಕ್ಷಕರಿಗೆ ಹಾರ , ಶಾಲು, ಪೇಟ ಮತ್ತು ಸ್ಮರಣಿಕೆ, ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಡಾ ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರಿನ ಮುಖ್ಯೋಪಾಧ್ಯಯರಾದ ಶಾಂತಿರಾಜ್ ಜೈನ್ ವಂದಿಸಿದರು.
ಉಪನ್ಯಾಸಕರಾದ ಪ್ರಸನ್ನ ಭೋಜ, ತಿಪ್ಪೇಸ್ವಾಮಿ, ಪ್ರಜ್ವಿತ್ ರೈ, ಅನನ್ಯ ಜೈನ್, ವೈಷ್ಣವಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ದ್ವಿತೀಯ ಪಿಯು ವಿದ್ಯಾರ್ಥಿಗಳು ಪ್ರಾರ್ಥನೆ ಹಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಆರಂಭವನ್ನು ಒದಗಿಸಿದರು.
ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ, ಡಾ. ಪ್ರಜ್ವಲ್, ಉಪ ಪ್ರಾಚಾರ್ಯರಾದ ರೋಹಿತ್, ಹರೀಶ್ ಕುಮಾರ್ ಗುರುವಾಯನಕೆರೆ ಟೆಕ್ನೋ ಸ್ಕೂಲಿನ ಮುಖ್ಯ ಶಿಕ್ಷಕಿ ಸುಮಿತ್ರ, ವೇಣೂರು ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಿರಾಜ್ ಜೈನ್, ವಿದ್ಯಾರ್ಥಿಗಳು, ಪೋಷಕರು, ಬೋಧಕ ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.
ಎಕ್ಸೆಲ್ ಸಿಬ್ಬಂದಿಯಿಂದ ಸಾಂಸ್ಕೃತಿಕ ವೈಭವ: ಗಿರಿಜಾ ಕಲ್ಯಾಣ ಹಾಗೂ ತಾರಕಾಸುರ ವಧೆ ಯಕ್ಷಗಾನ ಪ್ರದರ್ಶನ
ಗುರು ನಮನ ಕಾರ್ಯಕ್ರಮದ ಅಂಗವಾಗಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಎಕ್ಸೆಲ್ ಪಿಯು ಕಾಲೇಜಿನ ಸಿಬ್ಬಂದಿಯ ಜೊತೆಗೆ ಎಕ್ಸೆಲ್ ಟೆಕ್ನೋ ಸ್ಕೂಲ್ ಗುರುವಾಯನಕೆರೆ ಮತ್ತು ವೇಣೂರು ಶಾಲೆಗಳ ಸಿಬ್ಬಂದಿಯವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗದವರು ವಿವಿಧ ನೃತ್ಯ,ಹಾಡು, ರೂಪಕ, ಭರತನಾಟ್ಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಸರ್ವರನ್ನು ರೋಮಾಂಚನಗೊಳಿಸಿದರು. ಗಿರಿಜಾ ಕಲ್ಯಾಣ ಮತ್ತು ತಾರಕಾಸುರ ವಧೆ ಎನ್ನುವ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು.
-
ಬಿಗ್ ನ್ಯೂಸ್22 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಬಿಗ್ ನ್ಯೂಸ್22 hours agoSDPI-ಮಕ್ಕಳ ಆಟದ ಉಪಕರಣಗಳೇ ಹಾಳು: ಕಾರಂತರ ಬಾಲವನದ ದುಸ್ಥಿತಿಗೆ ಎಸ್ಡಿಪಿಐ ಅಸಮಾಧಾನ
-
ಬಿಗ್ ನ್ಯೂಸ್21 hours agoReservation-ದ.ಕ. ಜಿ.ಪಂ., ತಾ.ಪಂ. ಮೀಸಲಾತಿ ಪ್ರಕಟ: ಮಹಿಳೆಯರಿಗೆ ತಾ.ಪಂ. 65, ಜಿ.ಪಂ. 18 ಸ್ಥಾನ ಮೀಸಲು
-
ಅಪರಾಧ21 hours agoDigital Arrest-‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 75 ವರ್ಷದ ಮಹಿಳೆಗೆ ₹2 ಕೋಟಿ ವಂಚನೆ
-
ಅಂತರ ರಾಜ್ಯ20 hours agoNana Patekar-ಕಾರ್ಗಿಲ್ ಯುದ್ಧದ ವೇಳೆ ಸೈನಿಕನಾಗಿಯೂ ದೇಶ ಸೇವೆ ಮಾಡಿದ್ದ ನಾನಾ ಪಾಟೇಕರ್
-
ಅಂತರ ರಾಜ್ಯ20 hours agoDK Shivakumar-‘ಸ್ಟಿಂಗ್ ಆಪರೇಷನ್’ ಬಗ್ಗೆ ಎಲ್ಲಾ ಮಾಹಿತಿ ಇದೆ..! ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ : ಇದರ ಪಿತಾಮಹ ಯಾರೆಂದೂ ತಿಳಿದಿದೆ : ಡಿಕೆಶಿ ಸ್ಫೋಟಕ ಹೇಳಿಕೆ
-
ಅಂತರ ರಾಜ್ಯ21 hours agoCEC Jnanesh Kumar-ವಿಪಕ್ಷಗಳ ಪ್ರತಿಭಟನೆ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ನಿವಾಸಕ್ಕೆ ತೀವ್ರ ಭದ್ರತೆ
-
ಮಂಗಳೂರು19 hours agoMangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ


















