ಶಿಕ್ಷಣ
Puttur-ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಬಿ ಬಿ ಎ ವಿದ್ಯಾರ್ಥಿನಿ ಅನಘ ಎಸ್ ರೈ ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ತೇರ್ಗಡೆ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಬಿ ಬಿ ಎ ವಿದ್ಯಾರ್ಥಿನಿ ಅನಘ ಎಸ್ ರೈ ಕಂಪನಿ ಸೆಕ್ರೆಟರಿ ಯ ಪ್ರವೇಶ ಪರೀಕ್ಷೆ ಸಿ ಯಸ್ ಈ ಈ ಟಿ ಯಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಸ್ತುತ ವರ್ಷದಲ್ಲಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಐಸಿಎಸ್ಐನೊಂದಿಗಿನ ಸಹಯೋಗದಿಂದ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಿ ಅವರನ್ನು ಕಂಪನಿ ಸೆಕ್ರೆಟರಿ ಕೋರ್ಸ್ ಗೆ ಅಥವಾ ತತ್ಸಮಾನ ಕೋರ್ಸ್ ಗಳಿಗೆ ಸೇರುವಂತೆ ಅಣಿಗೊಳಿಸಲಾಗುತ್ತದೆ. ಸಂಸ್ಥೆಯು ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾದ ಏಕೈಕ ಅಧ್ಯಯನ ಕೇಂದ್ರವಾಗಿದೆ. ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಐಸಿಸ್ಐ ಮಂಗಳೂರು ಚಾಪ್ಟರ್ ಜೊತೆ ಒಪ್ಪಂದ ಮಾಡಿಕೊಂಡು ಪುತ್ತೂರಿನ ಸ್ಟಡಿ ಸೆಂಟರ್ ಆಗಿ ಐಸಿಎಸ್ಐ ಜೊತೆ ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ. ಈಗಾಗಲೇ ಈ ಅಧ್ಯಯನ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಸಿಎಸ್ ಕೋರ್ಸ್ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ತಯಾರುಮಾಡುತ್ತ ಬಂದಿರುತ್ತದೆ. ಮೇ 04 ,2024ರ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಅನಘ ಎಸ್ ರೈ ಅವರು ಉತ್ತೀರ್ಣರಾಗಿರುತ್ತಾರೆ.
ಪ್ರಥಮ ವರುಷದ ಪ್ರಥಮ ಬ್ಯಾಚ್ ನಲ್ಲಿ ವಿದ್ಯಾರ್ಥಿನಿ ಉತ್ತೀರ್ಣರಾಗಿರುವುದು ಅತಿ ಸಂತಸದ ವಿಷಯ. ಕಾಲೇಜಿನ ವ್ಯವಹಾರ ಆಡಳಿತ ವಿಭಾಗವು ವಿದ್ಯಾಥಿಗಳ ಕೌಶಲ್ಯ ಅಭಿವೃದ್ಧಿ ಕಡೆ ಗಮನ ತೋರುತ್ತಾ ಇಂತಹ ನವನವೀನ ವಿಷಯಗಳ್ಳನ್ನು ನೀಡುತ್ತಾ ಕಾಲೇಜಿನ ಮತ್ತು ಬಿ ಬಿ ಎ ಕೋರ್ಸ್ ನ ಘನತೆ ಮತ್ತು ಗೌರವವನ್ನು ಹೆಚ್ಚಿಸುವ ಕಾರ್ಯ ಮಾಡುತ್ತ ಬಂದಿರುತ್ತದೆ. ಇದು ಶಿಕ್ಷಕರಿಗೆ ಮತ್ತು ಕಾಲೇಜಿಗೆ ವಿದ್ಯಾರ್ಥಿಗಳ ಮೇಲೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಎಂದು ಕಾಲೇಜಿನ ಪ್ರಾಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ಸಂತಸ ವ್ಯಕ್ತ ಪಡಿಸಿದರು.
ವಿದ್ಯಾರ್ಥಿಗಳು ಪ್ರೊಫೆಷನಲ್ ಕೋರ್ಸ್ ಅನ್ನು ಕಲಿಯಲು ಮಂಗಳೂರು ಮುಂತಾದ ಊರುಗಳಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಇದನ್ನರಿತ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಪ್ರಾಂಶುಪಾಲರೊಡನೆ ಚರ್ಚಿಸಿ ಪ್ರಸ್ತುತ ವರುಷ ಬಿಬಿಎ ವಿಥ್ ಕಂಪೆನಿ ಸೆಕ್ರೆಟರಿ ಕೋರ್ಸ್ ನೀಡುವ ಬಗ್ಗೆ ಯೋಚಿಸಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸಿಯಸ್ ಕೋರ್ಸ್ ನೀಡುವ ಉದ್ದೇಶದಿಂದ ಐ.ಸಿ.ಯಸ್.ಐಜೊತೆ ಒಪ್ಪಂದ ಮಾಡಿಕೊಂಡಿದ್ದು ಬಿಬಿಎ ಕೋರ್ಸ್ ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ಸಿಯಸ್ ಕೋರ್ಸ್ ನೀಡುತ್ತಿದೆ ಎಂದು ವಿಭಾಗ ಮುಖ್ಯಸ್ಥರಾದ ರಾಧಾಕೃಷ್ಣ ಗೌಡರವರು ತಿಳಿಸಿರುತ್ತಾರೆ.
ಅನಘ ಎಸ್ ರೈ ಇವರು ಸದಾಶಿವ ರೈ ಮತ್ತು ಧ್ಯಾನ ಎಸ್ ರೈ ಅವರ ಪುತ್ರಿ.
ಶಿಕ್ಷಣ
Vivekananda-ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ತಂಡದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಧನುಷ್ ಎಸ್, ಯಶಸ್ ಎಚ್ . ಸಿ ದ್ವಿತೀಯ ಪಿಯುಸಿ ಗಗನ್ ಕೆ.ಎನ್, ತೇಜಸ್ ಟಿ. ಆರ್, ಜಶ್ವಂತ್ ಗೌಡ, ಧನುಷ್ ಕೆ . ಎಚ್, ಆಕಾಶ್ ಭಾಗವಹಿಸಿರುತ್ತಾರೆ.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
ಶಿಕ್ಷಣ
Taekwondo Competition-ಟೇಕ್ವಾಂಡೋ ಸ್ಪರ್ಧೆ: ಸಂತ ಫಿಲೋಮಿನಾ ಪ ಪೂ ಕಾಲೇಜಿನ ಮೊಹಮ್ಮದ್ ಶಾಜ್ ಗೆ ಪ್ರಶಸ್ತಿ
ಸೆ 30 ರಂದು ಚಿಕ್ಕಮಗಳೂರು ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಜ್ಯೋತಿನಗರದಲ್ಲಿ ನಡೆದ ‘ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ 2026 – 27’ ಟೇಕ್ವಾಂಡೋ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಮೊಹಮ್ಮದ್ ಶಾಜ್ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.
ಪುತ್ತೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಮಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸೆ 30 ರಂದು ಚಿಕ್ಕಮಗಳೂರು ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಜ್ಯೋತಿನಗರದಲ್ಲಿ ನಡೆದ ‘ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ 2026 – 27’ ಟೇಕ್ವಾಂಡೋ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಮೊಹಮ್ಮದ್ ಶಾಜ್ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.
ಇವರು ಉಪ್ಪಿನಂಗಡಿ ನಿವಾಸಿ ಮೊಹಮ್ಮದ್ ಮುಸ್ತಫಾ ಮತ್ತು ಸೌಧ ದಂಪತಿಗಳ ಪುತ್ರ.
ಇವರಿಗೆ ಶಿಹಾಬ್ ಟಿ ತರಬೇತಿ ನೀಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.
ಶಿಕ್ಷಣ
Vivekananda-ರಾಷ್ಟ್ರಮಟ್ಟದ ಭೌತಶಾಸ್ತ್ರ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯ ಸಾಧನೆ..!
ಪುತ್ತೂರು: ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಇದರ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀಹರಿ ಶರ್ಮಾ ನೋಯ್ಡಾದ ಆಮಿಟಿ ಯುನಿವರ್ಸಿಟಿಯಲ್ಲಿ ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಕ್ಸ್ ಟೀರ‍್ಸ್ (ಐಎಪಿಟಿ) ಸಂಸ್ಥೆಯ ಸಹಯೋಗದೊಂದಿಗೆ ನಡೆದ ರಾಷ್ಟ್ರಮಟ್ಟದ ಭೌತಶಾಸ್ತ್ರ ಸ್ಪರ್ಧೆ National Competition for Innovative Experiments in Physics (NCIEP)ನಲ್ಲಿ “Electromagnetic Shock-Absorber for the Real-Time Landing of Reusable Spacecraft” ಎಂಬ ಭೌತಶಾಸ್ತ್ರದ ಮಾದರಿಯನ್ನು ಸ್ಪರ್ಧೆಯಲ್ಲಿ ಪ್ರಸ್ತುತಪಡಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಅಕ್ಟೋಬರ್ 4ರಿಂದ 6ರವರೆಗೆ ನಡೆದ 40ನೇ IAPT Annual Conventionನಲ್ಲಿ ಇವರು ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಭಾಗವಹಿಸಿದ್ದರು. ದೇಶದ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಐಐಟಿಗಳು ಹಾಗೂ ವಿಶ್ವವಿದ್ಯಾಲಯಗಳ ಒಟ್ಟು 118 ಮಾದರಿಗಳ ಪೈಕಿ 12ಮಾದರಿಗಳು ಸ್ಪರ್ಧೆಗೆ ಆಯ್ಕೆಯಾಗಿದ್ದವು.
ಕರ್ನಾಟಕದಿಂದ ಪ್ರಸ್ತುತಪಡಿಸಲು ಆಯ್ಕೆಯಾದ ಏಕೈಕ ಮಾದರಿ ಇವರದ್ದಾಗಿತ್ತು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ. ಶಿವಪ್ರಸಾದ್ ಕೆ.ಎಸ್. ಈ ಮಾದರಿ ತಯಾರಿಕೆಯಲ್ಲಿ ಮಾರ್ಗದರ್ಶನ ನೀಡಿರುದ್ದಾರೆ. ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
-
ಮಂಗಳೂರು10 hours agoMangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು
-
ಅಪರಾಧ14 hours agoRaid-ರಾಜ್ಯದ 45 ಐಸ್ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!
-
ಸ್ಥಳೀಯ16 hours agoGanja-ಸಾಗರದ ಲಾಡ್ಜ್ನಲ್ಲಿ ಗಾಂಜಾ ಸೇವನೆ: ಯುವತಿ ಸೇರಿ ನಾಲ್ವರು ವಶಕ್ಕೆ – ಗಾಂಜಾ ಸಾಗಾಟಗಾರನ ಮಾಹಿತಿ ಬಿಚ್ಚಿಟ್ಟ ಯುವತಿ..!
-
ಬಿಗ್ ನ್ಯೂಸ್16 hours agoAYUSH Federation-ಡಾ. ಪ್ರದೀಪ್ ನಾವೂರು ಅವರ ಆರೋಗ್ಯ ಕ್ಲಿನಿಕ್ ಗೆ ಬೆಂಕಿ : ಆಯುಷ್ ಫೆಡರೇಶನ್ ತೀವ್ರ ಖಂಡನೆ
-
ಬಿಗ್ ನ್ಯೂಸ್8 hours agoKaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
-
ಮಂಗಳೂರು9 hours agoMRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
-
ಅಪರಾಧ9 hours agoPuttur-ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣ; ಪರಾರಿಯಾಗಿದ್ದ ಇಬ್ಬರು ವಶಕ್ಕೆ, ಆರೋಪಿ ಶಿವಪ್ರಸಾದ್ ಮನೆ ಮಹಜರು?
-
ಸಿನೆಮಾ14 hours agoNana Patekar-ನಾನಾ ಪಾಟೇಕರ್ ಸಾವಿಗೆ ನಿಖರ ಕಾರಣವೇನು? ಗೋವಾ ಪೊಲೀಸರಿಂದ ಅಸಹಜ ಸಾವು ಪ್ರಕರಣ ದಾಖಲು




















