ಚಿನ್ನ-ಬೆಳ್ಳಿ ದರ
Gold Rate Today -ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೆ ಚಿನ್ನ – ಇಲ್ಲಿದೆ ಇಂದಿನ ರೇಟ್
ಮುಂಬೈ: ಈ ವರ್ಷ ಆರಂಭದಿಂಲೂ ಚಿನ್ನದ ದರದಲ್ಲಿ ನಾಗಲೋಟ ಕಂಡು ಬಂದಿದೆ ವರ್ಷದ ಮೊದಲ ಎರಡೂವರೆ ತಿಂಗಳಿನಲ್ಲಿ 3.5% ರಷ್ಟು ಏರಿಕೆಯಾಗಿ ಗಮನಾರ್ಹವಾದ ಜಿಗಿತ ಕಂಡಿವೆ. ಕಳೆದ ಎರಡು ವಾರದಲ್ಲಿ 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ದರ ರೂ 6000ಕ್ಕಿಂತ ಮೇಲಿದೆ. ಇದು ಚಿನ್ನದ ಬೆಲೆಯ ಸಾರ್ವಕಾಲಿಕ ಗರಿಷ್ಠ ಮಟ್ಟ
ಬ್ರೋಕರೇಜ್ ಸಂಸ್ಥೆಯಾದ ಆಕ್ಸಿಸ್ ಸೆಕ್ಯುರಿಟೀಸ್, 2024 ರಲ್ಲಿ ಚುನಾವಣಾ ವರ್ಷದಲ್ಲಿ ಚಿನ್ನವು ಆದ್ಯತೆಯ ಆಸ್ತಿಯಾಗಿ ಮುಂದುವರಿಯುತ್ತದೆ ಎಂದು ಹೇಳಿದೆ. ಇಂದಿನ ಚಿನ್ನದ ದರ ಈ ಕೆಳಗೆ ನೀಡಲಾಗಿದೆ.
ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 6059
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 6,610
ಎಂಟು ಗ್ರಾಂ ಚಿನ್ನ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 48,472
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 52,888
ಹತ್ತು ಗ್ರಾಂ ಚಿನ್ನ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 60, 590
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 66,100
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) today Gold Rate In Bangalore
• ಬೆಂಗಳೂರು: 60,590 ರೂ
• ಚೆನ್ನೈ: 61,150 ರೂ
• ಮುಂಬೈ: 60,590 ರೂ
• ದೆಹಲಿ: 60,740 ರೂ
• ಕೋಲ್ಕತಾ: 60,590 ರೂ
• ಕೇರಳ: 60,590 ರೂ
• ಅಹ್ಮದಾಬಾದ್: 60,640 ರೂ
• ಜೈಪುರ್: 60,740 ರೂ
• ಲಕ್ನೋ: 60,740 ರೂ
• ಭುವನೇಶ್ವರ್: 60,590 ರೂ
2024ರ ಜನವರಿ 1 ರಿಂದ ಮಾ 17 ರವರೆಗೆ 87 ದಿನಗಳಲ್ಲಿ 22-ಕ್ಯಾರೆಟ್ ಮತ್ತು 24-ಕ್ಯಾರೆಟ್ ಚಿನ್ನವು ಅಂದಾಜು 3.5% ರಷ್ಟು ಏರಿಕೆಯಾಗಿದೆ. ಮಾರ್ಚ್ 2024 ರ ಮೊದಲ ವಾರದಲ್ಲಿ 24-ಕ್ಯಾರೆಟ್ 10 ಗ್ರಾಂಗೆ ಗರಿಷ್ಠ ಬೆಲೆ 66,270 ರೂ.ಗಳಲ್ಲಿ ದಾಖಲಾಗಿದೆ. ಏತನ್ಮಧ್ಯೆ, MCX ಚಿನ್ನವು ಇದೇ ಸಮಯದಲ್ಲಿ 10 ಗ್ರಾಂಗೆ 66356 ರೂ. ತಲುಪಿದೆ. ಮಾರ್ಚ್ ಆರಂಭದಲ್ಲಿ ಸ್ಪಾಟ್ ಚಿನ್ನವು ತನ್ನದೇ ಆದ ಐತಿಹಾಸಿಕ ಗರಿಷ್ಠವಾದ 2195.20 ಅನ್ನು ತಲುಪಿತು.
ಆರ್ಬಿಐ ಸೇರಿದಂತೆ ಜಾಗತಿಕ ಕೇಂದ್ರೀಯ ಬ್ಯಾಂಕ್ಗಳಿಂದ ದರ ಕಡಿತಕ್ಕೆ ಅವಕಾಶವಿದೆ. ಬಡ್ಡಿದರ ಕಡಿತವು ಸಾಗರೋತ್ತರ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಚಿನ್ನವನ್ನು ಆಕರ್ಷಿಸುವಂತೆ ಮಾಡುತ್ತದೆ.
ಇಂದಿನ ಬೆಳ್ಳಿ ದರ (Silver Rate)
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) (silver Price)
• ಬೆಂಗಳೂರು: 7,610 ರೂ
• ಚೆನ್ನೈ: 8,030 ರೂ
• ಮುಂಬೈ: 7,730 ರೂ
• ದೆಹಲಿ: 7,730 ರೂ
• ಕೋಲ್ಕತಾ: 7,730 ರೂ
• ಕೇರಳ: 8,030 ರೂ
• ಅಹ್ಮದಾಬಾದ್: 7,730 ರೂ
• ಜೈಪುರ್: 7,730 ರೂ
• ಲಕ್ನೋ: 7,730 ರೂ
• ಭುವನೇಶ್ವರ್: 8,030 ರೂ
ಚಿನ್ನ-ಬೆಳ್ಳಿ ದರ
Gold Rate Today -ಅಮೆರಿಕ-ಇರಾನ್ ಸಂಘರ್ಷದ ಎಫೆಕ್ಟ್: 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ ₹1.48 ಲಕ್ಷ; ಬೆಳ್ಳಿಯೂ ದುಬಾರಿ
ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,940 ರೂ. ಏರಿಕೆಯಾಗಿದ್ದು, ಒಟ್ಟು ದರ 1,48,580 ರೂ. ತಲುಪಿದೆ. ಪ್ರತಿ ಗ್ರಾಂಗೆ 294 ರೂ. ಹೆಚ್ಚಳವಾಗಿದ್ದು, 14,858 ರೂ. ದಾಖಲಾಗಿದೆ. ಬೆಳ್ಳಿಯ ದರದಲ್ಲಿ ಇಂದು ಒಂದೇ ದಿನ 10,000 ರೂ. ಏರಿಕೆಯಾಗಿದ್ದು, ಕೆಜಿ ಬೆಳ್ಳಿಯ ಬೆಲೆ 2,60,000 ರೂ. ನೊಂದಿಗೆ ಹೊಸ ದಾಖಲೆ ಬರೆದಿದೆ.
ಬೆಂಗಳೂರು: ಜಾಗತಿಕ ರಾಜಕೀಯ ಬೆಳವಣಿಗೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಭಾರಿ ಪ್ರಭಾವ ಬೀರಿದ್ದು, ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇಂದಿನ ಚಿನ್ನದ ದರ ವಿವರ (ಜೂನ್ 12, 2026):
24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ):
ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,940 ರೂ. ಏರಿಕೆಯಾಗಿದ್ದು, ಒಟ್ಟು ದರ 1,48,580 ರೂ. ತಲುಪಿದೆ. ಪ್ರತಿ ಗ್ರಾಂಗೆ 294 ರೂ. ಹೆಚ್ಚಳವಾಗಿದ್ದು, 14,858 ರೂ. ದಾಖಲಾಗಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):
ಆಭರಣ ಚಿನ್ನದ ಬೆಲೆಯೂ ಏರಿಕೆಯ ಹಾದಿಯಲ್ಲಿದ್ದು, 10 ಗ್ರಾಂಗೆ 2,700 ರೂ. ಹೆಚ್ಚಳವಾಗಿದೆ. ಇದರೊಂದಿಗೆ 22 ಕ್ಯಾರೆಟ್ ಚಿನ್ನದ ಬೆಲೆ 1,36,200 ರೂ. ಗೆ ತಲುಪಿದೆ.
ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ:
ಬೆಳ್ಳಿಯ ದರದಲ್ಲಿ ಇಂದು ಒಂದೇ ದಿನ 10,000 ರೂ. ಏರಿಕೆಯಾಗಿದ್ದು, ಕೆಜಿ ಬೆಳ್ಳಿಯ ಬೆಲೆ 2,60,000 ರೂ. ನೊಂದಿಗೆ ಹೊಸ ದಾಖಲೆ ಬರೆದಿದೆ.
ಬೆಲೆ ಏರಿಕೆಗೆ ಕಾರಣವೇನು?
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಇರಾನ್ ಪಡೆಗಳು ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿರುವುದು ಮತ್ತು ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದು ತೈಲ ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ. ಇದರ ಜೊತೆಗೆ ಒಮಾನ್ ಕರಾವಳಿಯಲ್ಲಿ ಭಾರತದ ಹಡಗುಗಳ ಮೇಲೆ ಸರಣಿ ದಾಳಿಗಳು ನಡೆದಿರುವುದು ಮಾರುಕಟ್ಟೆಯ ಏರುಪೇರಿಗೆ ಕಾರಣವಾಗಿದೆ.
ಆದರೆ, ಅಂತಿಮವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇರಾನ್ ಮೇಲಿನ ಯೋಜಿತ ದಾಳಿಯನ್ನು ರದ್ದುಗೊಳಿಸಿ, ಶಾಂತಿ ಸಂಧಾನಕ್ಕೆ ಮುಂದಾಗುವುದಾಗಿ ಹೇಳಿರುವುದು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಸಂಚಲನ ಮೂಡಿಸಿದೆ. ಸುರಕ್ಷಿತ ಹೂಡಿಕೆಯ ದೃಷ್ಟಿಯಿಂದ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಪುಷ್ಟಿ ನೀಡಿದೆ.
ಚಿನ್ನ-ಬೆಳ್ಳಿ ದರ
Gold Rate Today -ಆಭರಣ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್: ಒಂದೇ ದಿನ ಸಾವಿರ ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ..!
ವಾರದ ಮೊದಲ ದಿನವಾದ ಸೋಮವಾರ ಆಭರಣ ಖರೀದಿದಾರರಿಗೆ ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಜೂನ್ ತಿಂಗಳ ಆರಂಭದಿಂದಲೇ ಇಳಿಕೆಯ ಹಾದಿ ಹಿಡಿದಿರುವ ಚಿನ್ನದ ಬೆಲೆ, ಇಂದು ಮತ್ತಷ್ಟು ಕುಸಿತ ಕಾಣುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬೆಂಗಳೂರು: ವಾರದ ಮೊದಲ ದಿನವಾದ ಸೋಮವಾರ ಆಭರಣ ಖರೀದಿದಾರರಿಗೆ ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಜೂನ್ ತಿಂಗಳ ಆರಂಭದಿಂದಲೇ ಇಳಿಕೆಯ ಹಾದಿ ಹಿಡಿದಿರುವ ಚಿನ್ನದ ಬೆಲೆ, ಇಂದು ಮತ್ತಷ್ಟು ಕುಸಿತ ಕಾಣುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬೆಲೆ ಇಳಿಕೆಗೆ ಕಾರಣಗಳೇನು?
ಜಾಗತಿಕ ಮಾರುಕಟ್ಟೆಯಲ್ಲಿನ ಏರುಪೇರುಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರಿವೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿ, ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ ಹಾಗೂ ಹಣದುಬ್ಬರದ ಅಪಾಯಗಳ ನಡುವೆಯೂ ಹೂಡಿಕೆದಾರರು ಹೆಚ್ಚಿನ ಬಡ್ಡಿದರ ಸಿಗುವ ಸುರಕ್ಷಿತ ಕಡೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ಚಿನ್ನದ ಮೇಲಿನ ಬೇಡಿಕೆ ಕುಸಿದು ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ವರದಿಯಾಗಿದೆ.
ಇಂದಿನ ಚಿನ್ನದ ಬೆಲೆ ವಿವರ (ಜೂನ್ 8):
24 ಕ್ಯಾರೆಟ್ ಚಿನ್ನ (ಅಪರಂಜಿ): ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 1,040 ರೂಪಾಯಿ ಭಾರಿ ಇಳಿಕೆಯಾಗಿದೆ. ಇದರಿಂದಾಗಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15,169 ರೂಪಾಯಿಗೆ ತಲುಪಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 950 ರೂಪಾಯಿ ಕುಸಿತ ಕಂಡಿದೆ. ಇದರೊಂದಿಗೆ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 13,905 ರೂಪಾಯಿಯಾಗಿದೆ.
ಕಳೆದ 10 ದಿನಗಳ ಟ್ರೆಂಡ್:
ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಇಳಿಯುತ್ತಲೇ ಸಾಗಿದೆ. ಕಳೆದ 10 ದಿನಗಳಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 5,350 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನದ ಮೇಲೆ 4,900 ರೂಪಾಯಿ ಇಳಿಕೆಯಾಗಿರುವುದು ಮಧ್ಯಮ ವರ್ಗದ ಜನರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಚಿನ್ನ-ಬೆಳ್ಳಿ ದರ
Gold Rate Today -ಕದನ ವಿರಾಮದ ಬೆನ್ನಲ್ಲೇ ಭಾರಿ ಏರಿಕೆ ಕಂಡ ಚಿನ್ನ ಮತ್ತು ಬೆಳ್ಳಿ ದರ..! ಒಂದೇ ದಿನ ಕೆ.ಜಿ ಬೆಳ್ಳಿಗೆ ₹11,000 ಹೆಚ್ಚಳ..!
ಜಾಗತಿಕ ಮಾರುಕಟ್ಟೆಯಲ್ಲಿ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಭಾರಿ ಏರಿಕೆ ಕಂಡಿವೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ನೀಡಿರುವ ಮಾಹಿತಿಯಂತೆ, ಬುಧವಾರ ಚಿನಿವಾರ ಪೇಟೆಯಲ್ಲಿ ಈ ಬೆಲೆಬಾಳುವ ಲೋಹಗಳ ಬೆಲೆ ಹೊಸ ದಾಖಲೆ ಬರೆದಿದೆ.
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಭಾರಿ ಏರಿಕೆ ಕಂಡಿವೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ನೀಡಿರುವ ಮಾಹಿತಿಯಂತೆ, ಬುಧವಾರ ಚಿನಿವಾರ ಪೇಟೆಯಲ್ಲಿ ಈ ಬೆಲೆಬಾಳುವ ಲೋಹಗಳ ಬೆಲೆ ಹೊಸ ದಾಖಲೆ ಬರೆದಿದೆ.
ಬೆಳ್ಳಿಯ ದರದಲ್ಲಿ ಭಾರಿ ಜಿಗಿತ:
ಬೆಳ್ಳಿಯ ದರವು ಪ್ರತಿ ಕೆ.ಜಿಗೆ ಬರೋಬ್ಬರಿ ₹11,000 ರಷ್ಟು ಏರಿಕೆಯಾಗಿದೆ. ಇದರಿಂದಾಗಿ ದೇಶದಲ್ಲಿ ಬೆಳ್ಳಿಯ ಬೆಲೆ ಈಗ ₹2.51 ಲಕ್ಷದ ಗಡಿ ತಲುಪಿದೆ.
ಚಿನ್ನದ ಬೆಲೆ ಎಷ್ಟು ಹೆಚ್ಚಳ?:
ಚಿನ್ನದ ದರದಲ್ಲೂ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದ್ದು, 10 ಗ್ರಾಂ (ಶೇ 99.9ರಷ್ಟು ಪರಿಶುದ್ಧತೆ) ಚಿನ್ನದ ಬೆಲೆಯಲ್ಲಿ ₹3,200 ಹೆಚ್ಚಳವಾಗಿದೆ. ಇದರೊಂದಿಗೆ 10 ಗ್ರಾಂ ಚಿನ್ನದ ಮಾರುಕಟ್ಟೆ ದರವು ₹1,56,400ಕ್ಕೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಹಠಾತ್ ಬೆಳವಣಿಗೆಗಳು ಮತ್ತು ಹೂಡಿಕೆದಾರರ ಒಲವು ದೇಶದ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದ್ದು, ಆಭರಣ ಖರೀದಿದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
-
ಬಿಗ್ ನ್ಯೂಸ್20 hours agoಡಿಕೆಶಿ ಸರ್ಕಾರದಿಂದ ಜನತೆಗೆ ಬಿಗ್ ಶಾಕ್ – ರೈತರಿಗೆ ಬಂಪರ್ ಗಿಫ್ಟ್..! ಹಾಲಿನ ದರ 8 ರೂ. ಏರಿಕೆ : 6 ರೂ. ರೈತರಿಗೆ..! ನ.1 ರಿಂದ ಬಹುತೇಕ ಜಾರಿ
-
ಶಿಕ್ಷಣ23 hours agoPhilomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
-
ನಿಧನ ವಾರ್ತೆ24 hours agoKerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು
-
Uncategorized21 hours ago
ಶಿಕ್ಷೆಯ ವಿರುದ್ಧ ಹೈಕೋರ್ಟಿಗೆ ಅಪೀಲು; ನ್ಯಾಯಾಲಯಕ್ಕೆ ಗೈರು: ನೆಕ್ಕಿಲಾಡಿಯಲ್ಲಿ ಆರೋಪಿಯ ಬಂಧನ
-
ರಾಜಕೀಯ20 hours ago2027ರ ಜನವರಿ ಮೊದಲ ವಾರದಲ್ಲೇ ಜಿ.ಪಂ ಮತ್ತು ತಾ.ಪಂ ಚುನಾವಣೆ : ಸಚಿವ ಸಂಪುಟದಲ್ಲಿ ಚರ್ಚೆ..!
-
ಅಂತರ ರಾಜ್ಯ23 hours agoYouTuber-89 ವರ್ಷದ ವೃದ್ಧನ 5 ಸವರನ್ ಚಿನ್ನದ ಸರ ಕಳವು ಆರೋಪ; 118 ಸವರನ್ ಚಿನ್ನ ಕಳವು ಪ್ರಕರಣದ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲು
-
Uncategorized20 hours ago
Rahul Gandhi ;8 ಗಂಟೆಗಳ ಧರಣಿ ಬಳಿಕ ಪೊಲೀಸ್ ಆ್ಯಕ್ಷನ್: ರಾಹುಲ್–ಪ್ರಿಯಾಂಕಾ ಸೇರಿ 50 ಸಂಸದರು ವಶ
-
ಸ್ಥಳೀಯ23 hours agoUT Khader-ಚನ್ನಪಟ್ಟಣ: ನಡುರಾತ್ರಿ 2 ಗಂಟೆಗೆ ಸರ್ಕಾರಿ ಆಸ್ಪತ್ರೆಗೆ ಯು.ಟಿ. ಖಾದರ್ ದಿಢೀರ್ ಭೇಟಿ: ಹೊರಗಡೆ ಔಷಧಿ ಬರೆಯುತ್ತಿದ್ದಕ್ಕೆ ಗರಂ


















