Connect with us

ಬೆಂಗಳೂರು

Anand Mahindra-ಎಸಿ ನೀರು ಹೀಗೆ ಬಳಸಿ… ಬೇಸಿಗೆ ಕಾಲದಲ್ಲಿ ಉದ್ಯಮಿ ಆನಂದ್ ಮಹೀಂದ್ರರ ಉಪಯುಕ್ತ ಸಲಹೆ

Published

on



Ad Widget

Ad Widget

Ad Widget

Ad Widget

ಬೆಂಗಳೂರು : ನೀರಿನ ಮಿತ ಬಳಕೆ ಹೇಗೆ ಎಂಬ ಚರ್ಚೆಗಳು ಬೇಸಿಗೆ ಕಾಲದಲ್ಲಿ ಕೇಳಿ ಬರುತ್ತಿರುವುದು ಸಾಮಾನ್ಯ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಥರಹವೇರಿ ಸಲಹೆಗಳು ಹರಿದಾಡುತ್ತಿರುತ್ತವೆ. ಇಂತಹುದೇ ಒಂದು ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎಸಿ ತ್ಯಾಜ್ಯ ನೀರನ್ನು ಹೇಗೆ ಉಪಯುಕ್ತವಾಗಿ ಬಳಸಿಕೊಳ್ಳಬಹುದು ಎನ್ನುವದನ್ನು ಆ ವಿಡಿಯೋದಲ್ಲಿ ತೋರಿಸಲಾಗಿದೆ. ತಮ್ಮ ನಿರೀನ ಗರಿಷ್ಟ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆ ವಿಡಿಯೋ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದೆ.

Ad Widget

Ad Widget

Ad Widget

Ad Widget

ವಿಡಿಯೋದಲ್ಲಿ ಏನಿದೆ :
ಎಸಿಯಿಂದ ಹೊರಬರುವ ನೀರನ್ನು ಸಂಗ್ರಹಿಸಿ ಮನೆ ಒರೆಸಲು, ಗಿಡಗಳಿಗೆ ಹಾಕಲು, ಟಾಯ್ಲೆಟ್ ಫ್ಲಶ್ ಮಾಡಲು, ಕಾರ್ ತೊಳೆಯಲು ಬಳಸಬಹುದು ಎನ್ನುವುದನ್ನು ಆ ವಿಡಿಯೋದಲ್ಲಿ ತಿಳಿಸಲಾಗಿದೆ.ಎಸಿ ಕಂಡೆನ್ಸರ್ನಿಂದ ಒಂದು ಸಣ್ಣ ಪೈಪ್ ಅನ್ನು ಗೋಡೆಗೆ ತಾಕಿದಂತಿರುವ ದೊಡ್ಡ ಪೈಪ್ಗೆ (ಮಳೆ ನೀರು ಹೋಗಲು ಬಿಡುವ ಗಾತ್ರದ ಪೈಪ್) ಕನೆಕ್ಟ್ ಮಾಡಬಹುದು. ಈ ದೊಡ್ಡ ಪೈಪ್ನ ಕೊನೆಯಲ್ಲಿ ಒಂದು ನಲ್ಲಿಯನ್ನು ಫಿಟ್ ಮಾಡಬಹುದು ಎಂದು ಅವರು ವಿಡಿಯೋದಲ್ಲಿ ತೋರಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಈ ರೀತಿಯಲ್ಲಿ ಎಸಿಯಿಂದ ಹೊರಬರುವ ನೀರನ್ನು ಕೆಳಗೆ ಟ್ಯಾಪ್ ಮೂಲಕ ಯಾವುದಾದರೂ ಪಾತ್ರೆಗಳಿಗೆ ಹಿಡಿದಿಟ್ಟುಕೊಳ್ಳಬಹುದು. ಅಥವಾ ಎಸಿ ಕಂಡೆನ್ಸರ್ನಿಂದ ಸಣ್ಣ ಪೈಪ್ ಮೂಲಕ ನೇರವಾಗಿ ಯಾವುದಾದರೂ ದೊಡ್ಡ ಡ್ರಮ್ಗೆ ಬಂದು ಬೀಳುವಂತೆಯೂ ಮಾಡಬಹುದು.

Ad Widget

Ad Widget <> Ad Widget

ಆನಂದ್ ಮಹೀಂದ್ರ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದನ್ನು ದೇಶಾದ್ಯಂತ ಪ್ರಯೋಗಿಸಬಹುದು ಎಂದಿದ್ದಾರೆ. ನೀರು ಆಸ್ತಿ, ಅದನ್ನು ಸುರಕ್ಷಿತವಾಗಿ ಸಂಗ್ರಹಿಸುವುದು ಅವಶ್ಯಕ. ಈ ಮಾತನ್ನು ಎಲ್ಲರೂ ಹಂಚಿಕೊಳ್ಳಿ ಎಂದು ಸಂದೇಶ ನೀಡಿದ್ದಾರೆ. ಎಸಿಯಿಂದ ಹೊರಬರುವ ನೀರು ಸಂಸ್ಕರಿತ ನೀರಾಗಿರುತ್ತದೆ. ಹೀಗಾಗಿ, ಅದು ಅಸುರಕ್ಷಿತವೇನಲ್ಲ ಎಂದು ಅವರು ತಿಳಿಸಿದ್ದಾರೆ.



Ad Widget
Ad Widget

ಅಪರಾಧ

Raid-ರಾಜ್ಯದ 45 ಐಸ್‌ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!

Published

on



Ad Widget

Ad Widget

Ad Widget

Ad Widget

ರಾಜ್ಯಾದ್ಯಂತ ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ಗುರುವಾರ ವಿಶೇಷ ತಪಾಸಣೆ ನಡೆಸಿದೆ. ಒಟ್ಟು 45 ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು, ಬೆಂಗಳೂರು, ಮೈಸೂರು ಮತ್ತು ರಾಯಚೂರಿನ ನಾಲ್ಕು ಘಟಕಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಉಲ್ಲಂಘನೆಗಳು ಪತ್ತೆಯಾಗಿವೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು, ಅ. 9: ರಾಜ್ಯಾದ್ಯಂತ ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ಗುರುವಾರ ವಿಶೇಷ ತಪಾಸಣೆ ನಡೆಸಿದೆ. ಒಟ್ಟು 45 ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು, ಬೆಂಗಳೂರು, ಮೈಸೂರು ಮತ್ತು ರಾಯಚೂರಿನ ನಾಲ್ಕು ಘಟಕಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಉಲ್ಲಂಘನೆಗಳು ಪತ್ತೆಯಾಗಿವೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ನಾಲ್ಕು ಘಟಕಗಳಲ್ಲಿ ನಿಯಮ ಉಲ್ಲಂಘನೆ
ಪರಿಶೀಲನೆ ವೇಳೆ ಬೆಂಗಳೂರಿನ ಜಯನಗರ 3ನೇ ಬ್ಲಾಕ್‌ನ ಸಾವರ ಐಸ್‌ಕ್ರೀಂ ಕೆಫೆ, ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯ ಎಂ.ಎನ್. ಎಂಟರ್‌ಪ್ರೈಸಸ್, ಮೈಸೂರಿನ ಜಾನ್ ಕ್ಯಾಂಡಿ ಐಸ್‌ಕ್ರೀಂ ತಯಾರಿಕಾ ಘಟಕ ಹಾಗೂ ರಾಯಚೂರಿನ ಜೆಮಿನಿ ಐಸ್‌ಕ್ರೀಂ ತಯಾರಿಕಾ ಘಟಕಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದೆ.

Ad Widget

Ad Widget <> Ad Widget

ಈ ಘಟಕಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ ಸಂಬಂಧಿತ ನಿಯಮಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.



Ad Widget

70 ಆಹಾರ ಮಾದರಿಗಳ ಸಂಗ್ರಹ
ವಿಶೇಷ ತಪಾಸಣೆಯ ಸಂದರ್ಭದಲ್ಲಿ ವಿವಿಧ ಘಟಕಗಳಿಂದ ಐಸ್‌ಕ್ರೀಂ, ಹಾಲು, ಹಾಲಿನ ಪುಡಿ, ಫ್ಲೇವರಿಂಗ್ ಪದಾರ್ಥಗಳು, ಸಕ್ಕರೆ, ಆಹಾರ ಸೇರ್ಪಡೆ ಪದಾರ್ಥಗಳು ಸೇರಿದಂತೆ ವಿವಿಧ ಕಚ್ಚಾವಸ್ತುಗಳ ಒಟ್ಟು 70 ಮಾದರಿಗಳನ್ನು ಸಂಗ್ರಹಿಸಲಾಗಿದೆ.

Ad Widget

Ad Widget

ಈ ಮಾದರಿಗಳನ್ನು ಗುಣಮಟ್ಟ ಮತ್ತು ಆಹಾರ ಸುರಕ್ಷತಾ ಮಾನದಂಡಗಳ ಪರಿಶೀಲನೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಅವಧಿ ಮೀರಿದ ಆಹಾರ ಪದಾರ್ಥ ಪತ್ತೆ
ಪರಿಶೀಲನೆಯ ವೇಳೆ ಅವಧಿ ಮೀರಿದ ಐಸ್‌ಕ್ರೀಂ, ಹಾಲು, ಬಿಸ್ಕತ್ ಹಾಗೂ ಕೊಬ್ಬರಿ ಪುಡಿ ಪತ್ತೆಯಾಗಿವೆ. ಅಲ್ಲದೆ, ಕೆಲವು ಆಹಾರ ಉತ್ಪನ್ನಗಳ ಮೇಲೆ ಲೇಬಲಿಂಗ್ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದೂ ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಇಂತಹ ತಪಾಸಣೆಗಳನ್ನು ಮುಂದುವರಿಸಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

Ad Widget
Continue Reading

ಬಿಗ್ ನ್ಯೂಸ್

Half helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್‌ ಸಂಪೂರ್ಣ ನಿಷೇಧ

Published

on



Ad Widget

Ad Widget

Ad Widget

Ad Widget

ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯಾದ್ಯಂತ ಹಾಫ್ ಹೆಲ್ಮೆಟ್‌ಗಳ ಬಳಕೆ, ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯಾದ್ಯಂತ ಹಾಫ್ ಹೆಲ್ಮೆಟ್‌ಗಳ ಬಳಕೆ, ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಥವಾ ಐಎಸ್‌ಐ ಗುಣಮಟ್ಟದ ಮಾನದಂಡ ಹೊಂದಿರುವ ಸುರಕ್ಷಿತ ಹೆಲ್ಮೆಟ್‌ಗಳನ್ನೇ ಧರಿಸಬೇಕು. ತಪಾಸಣೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಳಪೆ ಗುಣಮಟ್ಟದ ಅಥವಾ ಹಾಫ್ ಹೆಲ್ಮೆಟ್‌ಗಳನ್ನು ಬಳಸುವುದರಿಂದ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಂಭೀರ ತಲೆಪೆಟ್ಟಾಗುವ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Ad Widget

Ad Widget <> Ad Widget

ಹಾಫ್ ಹೆಲ್ಮೆಟ್‌ಗಳನ್ನು ಬಳಸುವ ಸವಾರರ ವಿರುದ್ಧ ಮಾತ್ರವಲ್ಲದೆ, ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ತಯಾರಿಸುವ ಘಟಕಗಳು ಹಾಗೂ ಅವುಗಳನ್ನು ಮಾರಾಟ ಮಾಡುವ ಅಂಗಡಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅನಧಿಕೃತವಾಗಿ ಇಂತಹ ಹೆಲ್ಮೆಟ್‌ಗಳನ್ನು ಮಾರಾಟ ಮಾಡುವವರ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.



Ad Widget

ಸರ್ಕಾರದ ನಿಯಮ ಉಲ್ಲಂಘಿಸಿ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವ ಸವಾರರ ವಿರುದ್ಧ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ದಂಡ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

Ad Widget

Ad Widget

ಸವಾರರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ.

Ad Widget
Continue Reading

ಅಪರಾಧ

FIR-ಮತದಾರರ ಹೆಸರು ಅಳಿಸಲು ಫಾರಂ-7 ಅರ್ಜಿ ದುರ್ಬಳಕೆ; ಬೆಂಗಳೂರಿನಲ್ಲಿ ಐವರ ವಿರುದ್ಧ FIR

Published

on



Ad Widget

Ad Widget

Ad Widget

Ad Widget

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು 5,698 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪದಡಿ ಜಯನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು 5,698 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪದಡಿ ಜಯನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಯನಗರ ಕ್ಷೇತ್ರದ ವಿವಿಧ ಭಾಗಗಳಲ್ಲಿನ 5,698 ಮತದಾರರ ಹೆಸರುಗಳನ್ನು ಅಳಿಸುವಂತೆ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

Ad Widget

Ad Widget <> Ad Widget

ಪ್ರಕರಣದಲ್ಲಿ ಬಿಜೆಪಿ ಸಂಪರ್ಕ ಹೊಂದಿರುವ ಬೂತ್‌ ಮಟ್ಟದ ಏಜೆಂಟ್‌ಗಳಾದ ರಾಮಕೃಷ್ಣ ಹಾಗೂ ಯೋಗೇಶ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಅರ್ಜಿಗಳಲ್ಲಿ ಕೆಲವರ ವೈಯಕ್ತಿಕ ವಿವರಗಳನ್ನು ಅವರ ಅನುಮತಿಯಿಲ್ಲದೆ ಬಳಸಲಾಗಿದೆ ಹಾಗೂ ಕೆಲವು ಅರ್ಜಿಗಳಲ್ಲಿನ ಸಹಿಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.



Ad Widget

ಫಾರಂ-7 ಅರ್ಜಿಗಳನ್ನು ಯಾರು ಸಲ್ಲಿಸಿದ್ದಾರೆ, ಅರ್ಜಿಗಳಲ್ಲಿನ ಸಹಿಗಳು ನಕಲಿಯಾಗಿವೆಯೇ ಹಾಗೂ ಮತದಾರರ ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಲಾಗಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಗಳು ತನಿಖೆಯ ಹಂತದಲ್ಲಿದ್ದು, ಪ್ರಕರಣದ ಸತ್ಯಾಸತ್ಯತೆ ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading