ದಕ್ಷಿಣ ಕನ್ನಡ
ನಾಲ್ಕು ತಿಂಗಳಿಗೊಮ್ಮೆ ಬರುವ ರೂ. 2ಸಾವಿರಕ್ಕೆ ಕೇಂದ್ರ ಸರಕಾರ ತೆಗೆದು ಕೊಂಡಷ್ಟು ಪ್ರಚಾರ ತಿಂಗಳಿಗೊಮ್ಮೆ ಕೊಡುವ ನಾವು ಪಡೆಯುತ್ತಿಲ್ಲ : ಪೂರ್ವಭಾವಿ ಸಭೆಯಲ್ಲಿ ಶಾಸಕ ಅಶೋಕ್ ರೈ | ಪುತ್ತೂರಿನಲ್ಲಿಂದು ಗ್ಯಾರಂಟಿ ಸಮಾವೇಶ
ಪುತ್ತೂರು: ಮಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದು ಪುತ್ತೂರಿನವರು. ಇದು ನಾನು ಹೇಳಿರುವುದಲ್ಲ ಪೊಲೀಸ್ ಗುಪ್ತಚರದ ವರದಿ. ಹಾಗಾಗಿ ಮಾ.7 ರಂದು ಪುತ್ತೂರಿನಲ್ಲೇ ನಡೆಯುವ ಸಮಾವೇಶಕ್ಕೆ ಅತಿ ಹೆಚ್ಚು ಸರಕಾರದ ಯೋಜನೆಯ ಫಲಾನುಭವಿಗಳು ಭಾಗವಹಿಸುವ ಮೂಲಕ ನಮ್ಮ ಪುತ್ತೂರಿನ ಶಕ್ತಿ ಕರ್ನಾಟಕಕ್ಕೆ ಗೊತ್ತಾಗಬೇಕೆಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಯ ಕುರಿತು ಪುತ್ತೂರು ಕಿಲ್ಲೆ ಮೈದಾನದಲ್ಲಿ ಮಾ.7ರಂದು ನಡೆಯುವ ಪುತ್ತೂರು ವಿಧಾನಸಭಾ ಕ್ಷೇತ್ರದ ಫಲಾನುಭವಿಗಳ ಸಮಾವೇಶದ ಪೂರ್ವ ಸಿದ್ದತೆಯಾಗಿ ಮಾ.5 ರಂದು ಸಂಜೆ ಬೊಳುವಾರು ಬೈಪಾಸ್ ರಸ್ತೆಯ ಉದಯಗಿರಿ ಭಾಗೀರಥಿ ಸಭಾಭವನದಲ್ಲಿ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
4 ತಿಂಗಳಿಗೊಮ್ಮೆ ಬರುವ ರೂ. 2ಸಾವಿರಕ್ಕೆ ಕೇಂದ್ರ ಸರಕಾರ ತೆಗೆದು ಕೊಂಡಷ್ಟು ಪ್ರಚಾರ ನಾವು ಮಾಡುತ್ತಿಲ್ಲ. ಅಲ್ಲೂ ಅವರು ಆರ್.ಟಿ.ಸಿ ಇದ್ದವರಿಗೆ ಮಾತ್ರ ಕೊಡುತ್ತಾರೆ. ಬಡವರಿಗೆ ಕೊಡುತ್ತಿಲ್ಲ. ಆದರೆ ನಮ್ಮ ಸರಕಾರ ಎಲ್ಲರಿಗೂ ರೂ. 2 ಸಾವಿರ ನೀಡುತ್ತಿದೆ. ತಿಂಗಳಿಗೆ ಸುಮಾರು ರೂ. 5 ಸಾವಿರವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯ ಸಾಧನೆಯ ಮೂಲಕ ಪ್ರಚಾರ ಮಾಡುತ್ತಿದ್ದೇವೆ ಎಂದು ಅಶೋಕ್ ರೈ ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಗೆ ಬೇಕಾದ ಶಕ್ತಿಯನ್ನು ತೋರಿಸುವ ಕೆಲಸ ಸಮಾವೇಶದಲ್ಲಿ ಆಗುತ್ತದೆ. ಸಮಾವೇಶಕ್ಕೆ 15ಸಾವಿರ ಜನರು ಸೇರುವ ನಿರೀಕ್ಷೆ ಇದೆ. ದ ಕ, ಉಡುಪಿ ಜಿಲ್ಲೆಯಲ್ಲಿ ಪ್ರಬಲವಾಗಿರುವ ವಿಧಾನಸಭಾ ಕ್ಷೇತ್ರ ಪುತ್ತೂರು. ಹಾಗಾಗಿ ನಮ್ಮ ಪುತ್ತೂರಿನ ಶಕ್ತಿ ಕರ್ನಾಟಕಕ್ಕೆ ಗೊತ್ತಾಗಬೇಕು. ಈ ನಿಟ್ಟಿನಲ್ಲಿ ಸಮಾವೇಶ ಯಶಸ್ವಿಯಾಗಬೇಕು. ಬೆಳಿಗ್ಗೆ 11 ಗಂಟೆಗೆ ಕಿಲ್ಲೆ ಮೈದಾನದಲ್ಲಿ ಎಲ್ಲರು ಸೇರಬೇಕು. ಅಧಿಕಾರಿಗಳು 5 ಸಾವಿರ ಜನರ ಲೆಕ್ಕ ಕೊಟ್ಟಿದ್ದಾರೆ. 10 ಸಾವಿರ ಜನ ಪಕ್ಷದಿಂದ ಸೇರಿಸಬೇಕು ಎಂದರು.
ಕೇವಲ2 ಗಂಟೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಬಳಿಕ ಊಟದ ವ್ಯವಸ್ಥೆ ಮಾಡಿದ್ದೆವೆ. ಒಟ್ಟು ರೂ.50 ಲಕ್ಷ ಖರ್ಚು ಆಗಲಿದೆ. ನಿಮಗೆ ಬೇರೆ ಯಾವ ಒತ್ತಡ ಕೊಡುವುದಿಲ್ಲ. ನಿಮಗೆ ಜನ ಸೇರಿಸುವುದಷ್ಟೆ ಕೆಲಸ. ಈ ಕಾರ್ಯಕ್ರಮ ಮುಂದೆ ಒಳ್ಳೆಯ ಸಂದೇಶ ಕೊಡುತ್ತದೆ ಎಂದರು.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರ ಮೂಲಕ ಮೂಲೆ ಮೂಲೆಗಳಿಂದ ಫಲಾನುಭವಿಗಳು ಆಗಮಿಸಲಿದ್ದು ಅವರಿಗೆ 108 ಬಸ್ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಪುತ್ತೂರಿನಿಂದ 65 ಬಸ್ ವ್ಯವಸ್ಥೆ ಮಾಡಲಾಗಿದ್ದು, ಉಳಿದ ಬಸ್‌ಗಳನ್ನು ಉಡುಪಿಯಿಂದ ತರಿಸಲಾಗುವುದು. ಸಮಾವೇಶದ ಯಶಸ್ವಿಗೆ ಪ್ರತಿ ಎರಡು ಬೂತ್‌ಗೆ ಒಬ್ಬೊಬ್ಬರಿಗೆ ಜವಾಬ್ದಾರಿ ನೀಡಿದ್ದೆವು. ದೇವಸ್ಥಾನ, ಪುಡಾ, ನಗರಸಭೆ, ವಿಟ್ಲ ಪಟ್ಟಣ ಪಂಚಾಯತ್, ಸಹಿತ ಹಲವು ನಾಮನಿರ್ದೇಶಿತ ಸದಸ್ಯರಿಗೆ ಪ್ರಸ್ತಾವನೆ ನೀಡಲಾಗಿದೆ. ಕೆಲವು ಕಡೆ ಸಣ್ಣ ವ್ಯತ್ಯಾಸ ಆಗಿರುತ್ತದೆ. ಒಂದೆರಡು ಕಡೆ ಆಗಿದೆ. ಅದನ್ನು ಬಿಟ್ಟು ಪಕ್ಷದ ಕಾರ್ಯಕ್ರಮದ ಯಶಸ್ವಿಗೆ ಗಮನ ಕೊಡಿ. ಇವತ್ತು ಈ ಸಮಾವೇಶ ಒಳ್ಳೆಯ ಸಂದೇಶ ಕೊಡುತ್ತದೆ. ಸರಕಾರದ 5 ಗ್ಯಾರೆಂಟಿ ಅದರಲ್ಲಿಯೂ ಗೃಹಲಕ್ಷ್ಮೀ ಮತ್ತು ಗೃಹ ಜ್ಯೋತಿ ಮುಂದೆ ಬರುವ ಚುನಾವಣೆಗೆ ಶಕ್ತಿ ತೋರಿಸುವ ಸಮಾವೇಶ ಆಗಲಿದೆ ಎಂದರು.
ರೂ. 2 ಸಾವಿರ ಅತೀ ಹೆಚ್ಚು ಮಹಿಳೆಯರಿಗೆ ಸಿಕ್ಕಿರುವುದು ಪುತ್ತೂರು ತಾಲೂಕಿನಲ್ಲಿ ಮಾತ್ರ
ಗೃಹಲಕ್ಷ್ಮೀ ಯೋಜನೆಯಲ್ಲಿ ರೂ.2 ಸಾವಿರ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತಿದೆ. ಆದರೆ ಕೆಲವು ಕಡೆ ದುಡ್ಡು ಬಂದಿಲ್ಲ ಎಂಬ ಆರೋಪ ಕೇಳಿ ಬಂದಿರುವುದನ್ನು ಪರಿಶೀಲಿಸಿದಾಗ ಅವರ ಖಾತೆಗೆ ಬಂದ ಹಣ ಸಾಲದ ಕಂತಿಗೆ ಅಟೋಮೆಟಿಕ್ ಕಟ್ ಆಗುತ್ತಿದೆ. ಈ ವಿಚಾರ ಫಲಾನುಭವಿಗಳಿಗೆ ತಿಳಿದಿಲ್ಲ. ಎಷ್ಟೋ ಮಂದಿ ಬಜಾಜ್ ಪೈನಾನ್ಸ್ ಸಹಿತ ಇತರ ಸಾಲ ಮಾಡಿದ್ದಾರೆ. ಆದರೆ ಅವರು ಸರಿಯಾಗಿ ಸಾಲ ಮರುಪಾವತಿ ಮಾಡದಿದ್ದಾಗ ಸರಕಾರದ ರೂ. 2 ಸಾವಿರ ಖಾತೆಗೆ ಬಿದ್ದ ತಕ್ಷಣ ಕಟ್ ಆಗುತ್ತಿದೆ. ಇದು ಟೆಕ್ನಿಕಲ್ ಪ್ರೋಸೆಸ್. ಆದರೆ ಜನರು ಖಾತೆಗೆ ಹಣ ಬಂದಿಲ್ಲ ಎಂದು ಬೈಯುವುದು ನಮಗೆ. ಒಟ್ಟು ಸಮೀಕ್ಷೆ ಮಾಡಿದಾಗ ಮಹಿಳಾ ಫಲಾನುಭವಿಗಳಿಗೆ ರೂ. 2ಸಾವಿರ ಅತೀ ಹೆಚ್ಚು ಸಿಕ್ಕಿರುವುದು ಪುತ್ತೂರು ತಾಲೂಕಿನಲ್ಲಿ ಎಂದು ಅಶೋಕ್ ರೈ ಹೇಳಿದರು.
ಪುತ್ತೂರು ಕ್ಷೇತ್ರ ಯಾವುದರಲ್ಲೂ ಹಿನ್ನೆಡೆ ಕಾಣಲಿಲ್ಲ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮಾತನಾಡಿ ಸರಕಾರಿ ಕಾರ್ಯಕ್ರಮವಾದರೂ ಅಲ್ಲಿ ಸರಕಾರದ ಮಟ್ಟದಲ್ಲಿ ಅಧಿಕಾರಿಗಳು ಫಲಾನುಭವಿಗಳನ್ನು ಸೇರಿಸುತ್ತಾರೆ. ಈ ಸಮಾವೇಶಕ್ಕೆ ನಾವು ಕೂಡಾ ನಿಷ್ಠಾವಂತ ಕಾರ್ಯಕರ್ತರಾಗಿ ಹೆಚ್ಚು ಫಲಾನುಭವಿಗಳನ್ನು ಸೇರಿಸಬೇಕು. ನಾನು ಅಧ್ಯಕ್ಷ ಸ್ಥಾನ ಪಡೆದು ಮೂರು ವರ್ಷ ಕಳೆದಿದೆ. ಅವಧಿಯೂ ಮುಗಿದಿದೆ. ಹಲವಾರು ಕಾರ್ಯಕ್ರಮ ಪುತ್ತೂರಿನಲ್ಲಿ ಯಶಸ್ವಿಯಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ಯಾವುದರಲ್ಲೂ ಹಿಂದೆ ಬೀಳಲಿಲ್ಲ ಎಂದ ಅವರು ಸಮಿತಿ ತಂಡದ ಪದಾಧಿಕಾರಿಗಳ ಪಟ್ಟಿಗಳನ್ನು ಘೋಷಣೆ ಮಾಡಿದರು.
ಉಪಕಾರ ಸ್ಮರಣೆ ಮಾಡುವ ಕಾರ್ಯಕ್ರಮ:
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ ರಾಜಾರಾಮ್ ಅವರು ಮಾತನಾಡಿ ಕರ್ನಾಟಕ ಸರಕಾರ ಗ್ಯಾರೆಂಟಿ ಸರಕಾರ. ಹಾಗಾಗಿ ಸರಕಾರದ ಗ್ಯಾರೆಂಟಿ ಯೋಜನೆಯ ಫಲಾನುಭವಿಗಳಿಗೆ ಉಪಕಾರ ಸ್ಮರಣೆ ಮಾಡುವ ಅವಕಾಶ ಲಭಿಸಿದೆ. ಇದರಲ್ಲಿ ಪೂರ್ಣ ಮಟ್ಟದಲ್ಲಿ ಎಲ್ಲರು ಭಾಗವಹಿಸುವಂತೆ ವಿನಂತಿಸಿದ ಅವರು ಈ ಸಮಾವೇಶ ಮುಂದಿನ ಲೋಕಸಭಾ ಚುನಾವಣೆಗೆ ಮುನ್ನುಡಿಯಾಗಲಿದೆ ಎಂದರು.
ಪುತ್ತೂರಿನ ಸಮಾವೇಶ ದಾಖಲೆಯ ರೀತಿಯಲ್ಲಿ ಆಗಬೇಕು:
ಕೆ ಪಿ ಸಿ ಸಿ ಸದಸ್ಯ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿ ಓರ್ವ ಜನಪ್ರತಿನಿಧಿಯಾಗಿ ನಾಯಕನಾಗಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಅಶೋಕ್ ರೈ ಅವರಿಂದ ಕಲಿಯಬೇಕು. ಅವರ ನಿರಂತರ ಶ್ರಮದಿಂದ ಪುತ್ತೂರಿಗೆ 1350 ಕೋಟಿ ಅನುದಾನ ಬಂದಿದೆ. ಈ ಹಿಂದಿನವರು ಸಾವಿರ ಕೋಟಿ ಎಂದು ಹೇಳಿದ್ದನ್ನು ಕೇಳಿದ್ದೇವೆ ಹೊರತು ಎಲ್ಲಿಗೆ ಬಂದಿದೆ ಎಂದು ಗೊತ್ತಿಲ್ಲ. ಅಶೋಕ್ ರೈ ಅವರು ಹಾಗಲ್ಲ ಎಲ್ಲವನ್ನು ಕಾಮಗಾರಿಗಳನ್ನು ತೋರಿಸಿ ಅನುದಾನ ಮುಂದಿಟ್ಟಿದ್ದಾರೆ ಎಂದ ಅವರು ಸಮಾವೇಶದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಶಕ್ತಿಸಿಗಬೇಕು. ಪುತ್ತೂರಿನ ಸಮಾವೇಶ ದಾಖಲೆಯ ರೀತಿಯಲ್ಲಿ ಆಗಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ 1 ಲಕ್ಷಕ್ಕೂ ಅಧಿಕ ಮತ ಬಂದಾಗ ನಮ್ಮ ಸಮಾವೇಶ ಯಶಸ್ವಿಯಾಗುತ್ತದೆ ಎಂದರು.
ಜವಾಬ್ದಾರಿ ನಿಭಾಯಿಸಿದಾಗ ಹಲವು ಅವಕಾಶ ಲಭಿಸುತ್ತದೆ:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಎಮ್ ಎಸ್ ಮಹಮ್ಮದ್ ಅವರು ಮಾತನಾಡಿ ನಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸಿದರೆ ಮುಂದೆ ಹಲವು ಅವಕಾಶ ಲಭಿಸಲಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಶಾಸಕರಿಗೆ ಶಕ್ತಿ ಕೊಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ನಮಗೆ ದೊಡ್ಡ ಜವಾಬ್ದಾರಿ ಇದೆ. ಈ ಸಮಾವೇಶ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಗೆಲುವಿಗೆ ಕಾರಣವಾಗಲಿದೆ. ಮುಂದೆ ಸಂಸದ ಅಭ್ಯರ್ಥಿ ಯಾರೆ ಆಗಿರಲಿ ಅವರನ್ನು ಗೆಲ್ಲಿಸುವ ಕೆಲಸ ಆಗಬೇಕು ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ, ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಭಟ್, ಸಂತೋಷ್ ಭಂಡಾರಿ, ಸೇವಾದಳದ ವಿಶ್ಚಜೀತ್ ವಂದೇ ಮಾತರಂ ಹಾಡಿದರು. ಆಕ್ರಮಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಮಳ ರಾಮಚಂದ್ರ ವಂದಿಸಿದರು. ಸಭೆಯಲ್ಲಿ ಕಾಂಗ್ರೆಸ್ ಮುಖಂಡರು. ಕಾರ್ಯಕರ್ತರು ಉಪಸ್ಥಿತರಿದ್ದರು.
8 ತಿಂಗಳಲ್ಲಿ 1350 ಕೋಟಿ ಅನುದಾನ
ಗ್ಯಾರೆಂಟಿಯಿಂದ ಅನುದಾನ ಕಡಿಮೆ ಆಗುತ್ತಿದೆ ಎಂಬ ಕೆಲವು ರಾಜಕೀಯ ಆರೋಪಳಿಗೆ ಪುತ್ತೂರಿನಲ್ಲಿ ಅತಿ ಹೆಚ್ಚು ಅನುದಾನ ತರಿಸುವ ಕೆಲಸ ಆಗಿದೆ. ಕೇವಲ 8 ತಿಂಗಳಲ್ಲಿ ಪುತ್ತೂರು ವಿಧಾನ ಸಭಾಕ್ಷೇತ್ರದಲ್ಲಿ 1350 ಕೋಟಿ ಅನುದಾನ ಬಂದಿದೆ. ಮುಂದೆ ಬಿರುಮಲೆಗೆ ಪ್ರವಾಸಿಧಾಮ, ಉಪ್ಪಿನಂಗಡಿ ದೇವಸ್ಥಾನ, ಮಹಾಲಿಂಗೇಶ್ವರ ದೇವಸ್ಥಾನಕೆ ಅನುದಾನ, ಪಶುವೈದ್ಯಕೀಯ ಕಾಲೇಜಿಗೆ ಅನುದಾನ ತರಿಸಲಾಗಿದೆ. ಮುಂದೆ ಮುಂದಿನ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜು ನೀಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ನೀಡಿದ್ದಾರೆ. ಇದರ ಜೊತೆಗೆ ರಸ್ತೆ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು. ಇವೆಲ್ಲನ್ನು ತೋರಿಸಲು ಗ್ಯಾರಂಟಿ ಸಮಾವೇಶ ಯಶಸ್ವಿಯಾಗಬೇಕೆಂದರು.
ಎಲ್ಲರನ್ನು ಅನಾಲೈಸ್ ಮಾಡುತ್ತೇವೆ
ಸಮಾವೇಶದ ಯಶಸ್ವಿಗೆ ವಲಯ ತಂಡ ಮಾಡಿದ್ದೇವೆ. ವಲಯ ಅಧ್ಯಕ್ಷರಿಗೆ ಬೂತ್ ಅದ್ಯಕ್ಷರ ಪೂರ್ಣ ಮಾಹಿತಿ ಇರಬೇಕು. ಕೆಲಸ ಮಾಡುವ ಮೂಲಕ ನಿಮ್ಮ ಸಾಮಾರ್ಥ್ಯ ತೋರಿಸಬೇಕು. ನಾವು ಎಲ್ಲರನ್ನು ಅನಾಲೈಸ್ ಮಾಡುತ್ತೇವೆ. ಹಿಂದೆ ಸಮಾವೇಶಕ್ಕೆ ಹೋದಾಗ ಯಾವ ಬಸ್‌ನಲ್ಲಿ 16 ಮಂದಿ ಯಾವ ಬಸ್‌ನಲ್ಲಿ 45ಮಂದಿ ಇತ್ತು ಎಂಬುದು ಗೊತ್ತಿದೆ. ಹಾಗಾಗಿ ಪಕ್ಷಕ್ಕಾಗಿ ಸ್ವಲ್ಪ ಸಮಯ ಕೊಡಿ. ಇಂತಹ ಸಮಯದಲ್ಲಿ ಎಲ್ಲರನ್ನು ಅಬ್ಸರ್‌ವೇಶನ್ ಮಾಡುತ್ತೇವೆ. ಈಗ ಇಲ್ಲಿ ಎಲ್ಲರು ಅಧ್ಯಕ್ಷರೇ ಆಗಿರುತ್ತಾರೆ. ಸಮಾವೇಶಕ್ಕೆ ರಚಿಸಿದ ತಂಡವನ್ನು ಬಿಡುವುದಿಲ್ಲ. ಮುಂದೆ ಇದೇ ತಂಡ ಇನ್ನೂ ಪೂರ್ಣ ಮಟ್ಟದಲ್ಲಿ ಕೆಲಸ ಮಾಡಲಿದೆ. ಸಮಾವೇಶಕ್ಕೆ ಎರಡೇ ದಿನ ಇರುವುದು. ಕೊನೆಗೆ ಪೋನ್ ಮಾಡಿಯಾದರೂ ಜನರನ್ನು ಸಂಪರ್ಕಿಸಿ. : ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು
ಮಂಗಳೂರು
Mulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್‌ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ
ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು: ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಲಕ್ಷ್ಮಿ ಗಣೇಶ್ ಹೆಸರಿನ ಎಕ್ಸ್‌ಪ್ರೆಸ್ ಬಸ್ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಗಿಡುಗ ಬಸ್‌ನ ಮುಂಭಾಗದ ಗಾಜಿಗೆ ಬಡಿದಿದೆ. ಇದರಿಂದ ಗಾಜು ಒಡೆದು ಚೂರುಚೂರಾಗಿದೆ.
ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾದರೂ, ಚಾಲಕ ಹರೀಶ್ ಪೂಜಾರಿ ಅವರು ವಿಚಲಿತರಾಗದೆ ಸಮಯಪ್ರಜ್ಞೆಯಿಂದ ಬಸ್ ನಿಲ್ಲಿಸಿದ್ದಾರೆ. ಅವರ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬಸ್ ಚಾಲಕ ಪುತ್ತೂರಿನ ಸಂಟ್ಯಾರು ಕೂರೇಲು ನಿವಾಸಿ ಹರೀಶ್ ಪೂಜಾರಿ ಮೇಲೆ ಗಾಜಿನ ಚೂರುಗಳು ಬಿದ್ದು ಗಾಯಗೊಂಡಿದ್ದರು ಅವರು ವೇಗವಾಗಿ ಹೋಗುತ್ತಿದ್ದ ಬಸ್ ನ್ನು ತಕ್ಷಣ ನಿಯಂತ್ರಿಸಿದ್ದಾರೆ. ಅವಘಡ ಸಂದರ್ಭ ಡ್ರೈವರ್ ಸ್ಟೇರೀಂಗ್ ಕೈಬಿಟ್ಟದ್ದರೂ ಬಸ್ ಡಿವೈಡರ್ ಹಾರಿ ಭಾರೀ ಅವಘಡ ಸಂಭವಿಸುತ್ತಿತ್ತು ಎನ್ನಲಾಗಿದೆ.
ಮಂಗಳೂರು
Ujire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.
ಉಜಿರೆಯಿಂದ ಆರಂಭವಾದ ಬೃಹತ್ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಮೌನ ಮೆರವಣಿಗೆಯ ಮೂಲಕ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಲಾಯಿತು. ಸುಮಾರು ಐದು ಕಿಲೋಮೀಟರ್ ದೂರದವರೆಗೆ ಹೋರಾಟಗಾರರು ನಡಿಗೆಯಲ್ಲಿ ಸಾಗಲಿದ್ದಾರೆ.
ನ್ಯಾಯದ ನಡಿಗೆಯ ಬಳಿಕ ಬೆಳ್ತಂಗಡಿಯ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾವೇಶ ನಡೆಯಲಿದೆ. ಸೌಜನ್ಯ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲರ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಕೀಲರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬಿಗ್ ನ್ಯೂಸ್
Kaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಶುಕ್ರವಾರ (ಅ. 9) ಮಧ್ಯಾಹ್ನ ಸುಮಾರು 4 ಗಂಟೆಗೆ ಕಾವು ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಈ ವೇಳೆ ಮರ ಹಾಗೂ ವಿದ್ಯುತ್ ಕಂಬ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು, ಮಡ್ಯಂಗಳ , ಮದ್ಲ ಎಂಬಲ್ಲಿ ಹಲವು ಮರಗಳು ಧರೆಗುರುಳಿವೆ. ಪೆರಿಗೇರಿ ರಸ್ತೆಯಲ್ಲೂ ಒಂದು ಮರ ಧರೆಗುರುಳಿದೆ ಜೊತೆಗೆ ವಿದ್ಯುತ್ ತಂತಿಗಳೂ ರಸ್ತೆಗೆ ಬಿದ್ದಿವೆ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಸ್ಥಳೀಯರ ನೆರವಿನೊಂದಿಗೆ ಮೆಸ್ಕಾಂ, ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರ, ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಸಂಚಾರ ನಿಯಂತ್ರಿಸುತ್ತಿದ್ದಾರೆ.
ತೆರವು ಕಾರ್ಯಾಚರಣೆಗೆ ಸುಮಾರು 3ರಿಂದ 4 ಗಂಟೆಗಳ ಕಾಲ ಬೇಕಾಗುವ ಸಾಧ್ಯತೆಯಿದ್ದು, ಪುತ್ತೂರಿನಿಂದ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಐ ಸುಷ್ಮಾ ಭಂಡಾರಿ ತಿಳಿಸಿದ್ದಾರೆ.
-
ನಿಧನ ವಾರ್ತೆ7 hours agoMumbai-ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ? ಸರಪಳಿಯಿಂದ ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ
-
ಮಂಗಳೂರು5 hours agoUjire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
-
ಅಂತರ ರಾಜ್ಯ7 hours agoArrested-ಕಾಸರಗೋಡು: ಮದುವೆಯ ನೆಪದಲ್ಲಿ ಹತ್ತಾರು ಯುವತಿಯರಿಗೆ ವಂಚನೆ: ಮದುವೆಯಾದ ಮೂರೇ ದಿನಕ್ಕೆ ಚಿನ್ನ, ಹಣದೊಂದಿಗೆ ಪರಾರಿ; ಆರೋಪಿ ಬಿಜು ಆಂಟನಿ ಬಂಧನ
-
ಅಂತರ ರಾಜ್ಯ6 hours agoJantar Mantar-ಸಿಜೆಪಿ ಪ್ರತಿಭಟನೆಗೆ ದೆಹಲಿಯಲ್ಲಿ ಬಿಗಿ ಭದ್ರತೆ – ಪಂಚರ್ ಆಗಲು ರಸ್ತೆಗಳಿಗೆ ತಡೆಬೇಲಿ..! ವಿಮಾನದಲ್ಲೇ ಅಭಿಜಿತ್ ದಿಪ್ಕೆ ಪೊಲೀಸ್ ವಶಕ್ಕೆ..! ಸಾವಿರಕ್ಕೂ ಮಿಕ್ಕಿ ಪ್ರತಿಭಟನಾಕಾರರೂ ವಶಕ್ಕೆ-ಸುಪ್ರೀಂ ಕೋರ್ಟ್ ವಕೀಲರಿಗೆ ತಡೆ..! ತೀವ್ರ ಅಡೆತಡೆಗಳ ನಡುವೆ ಜಂತರ್ ಮಂತರ್ ಗೆ ಹರಿದು ಬರುತ್ತಿರುವ ಜನಸಾಗರ
-
ರಾಜ್ಯ7 hours agoRobotic technology-ರೋಬೋಟಿಕ್ ತಂತ್ರಜ್ಞಾನದ ಅದ್ಭುತ: ಸ್ಪೇನ್ನಲ್ಲಿ ಕುಳಿತು ಕರ್ನಾಟಕದ ಮಹಿಳೆಗೆ ಹೃದಯ ಶಸ್ತ್ರಚಿಕಿತ್ಸೆ
-
Uncategorized8 hours agoCJP protest-ಇಂದು CJP ಪ್ರತಿಭಟನೆ : ದೆಹಲಿಗೆ ಬರಬೇಕಾಗಿದ್ದ 250 ರೈಲು ರದ್ದು, ಹಲವು ರೈಲಿನ ವೇಳಾಪಟ್ಟಿ ಬದಲಾವಣೆ : ಮೆಟ್ರೋ ಸಂಚಾರ ಸ್ಥಗಿತ – ಇಂಟರ್ ನೆಟ್ ಬಂದ್..! ‘ಹೆದರಿದ್ರಾ ಮೋದಿಜೀ..?’ ಎಂದ CJP
-
ಅಂತರ ರಾಜ್ಯ8 hours agoDhruv Rati-BIG BREAKING: ದೆಹಲಿಯ ಜಂತರ್ ಮಂತರ್ ನಲ್ಲಿ ಸಿಜೆಪಿ ಪ್ರತಿಭಟನೆ ಹಿನ್ನಲೆ – ಯೂಟ್ಯೂಬರ್ ಧ್ರುವ್ ರಾಠಿ ಪೊಲೀಸ್ ವಶಕ್ಕೆ?
-
ಅಂತರ ರಾಜ್ಯ6 hours agoBy-election results-ಉಪಚುನಾವಣೆ ಫಲಿತಾಂಶ: ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ, ತಮಿಳುನಾಡಿನಲ್ಲಿ ಟಿವಿಕೆ ಅಬ್ಬರ


















