Connect with us

ವಿದೇಶ

Indian Soldier | ಹಮಾಸ್-ಇಸ್ರೇಲ್ ಯುದ್ಧದಲ್ಲಿ ಭಾರತ ಮೂಲದ 19 ವರ್ಷದ ಯೋಧ ಸಾವು: ಇಸ್ರೇಲ್ ಘೋಷಣೆ

Published

on



Ad Widget

Ad Widget

Ad Widget

Ad Widget

ಗಾಝಾ: ಗಾಝಾಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ಯುದ್ಧದಲ್ಲಿ ಭಾರತ ಮೂಲದ 19 ವರ್ಷದ ಯೋಧನೋರ್ವ (Indian Soldier) ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಯೋಧನನ್ನು 19 ವರ್ಷದ ಸಾರ್ಜೆಂಟ್ ಓಜ್ ಡೇನಿಯಲ್ ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget


ಅಕ್ಟೋಬರ್ 7 ರಂದು ಗಾಜಾಕ್ಕೆ ಅಪಹರಿಸಲ್ಪಟ್ಟ, ಭಾರತ ಮೂಲದ ಸಾರ್ಜೆಂಟ್ ಓಜ್ ಡೇನಿಯಲ್ ಅವರು ಸತ್ತಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಹೇಳಿದ್ದಾರೆ.
ಇದಕ್ಕೂ ಮೊದಲು ಭಾರತೀಯ ಮೂಲದ ಇಸ್ರೇಲಿ ಸೈನಿಕನ ಸಾವು ಡಿಸೆಂಬರ್ 2023 ರಲ್ಲಿ ವರದಿಯಾಗಿತ್ತು.

Ad Widget

Ad Widget

Ad Widget alt="Ad Widget"/>

Ad Widget

ಮಹಾರಾಷ್ಟ್ರದ ಬೆನೆ ಇಸ್ರೇಲ್ ಸಮುದಾಯದವರಾದ 34 ವರ್ಷ ವಯಸ್ಸಿನ ಸಾರ್ಜೆಂಟ್ ಗಿಲ್ ಡೇನಿಯಲ್ಸ್ ಯುದ್ಧದಲ್ಲಿ ಸಾವನ್ನಪ್ಪಿದ್ದರು. ಅದಕ್ಕೂ ಮೊದಲು ನವೆಂಬರ್ 2023 ರಲ್ಲಿ, 20 ವರ್ಷ ವಯಸ್ಸಿನ ಸಿಬ್ಬಂದಿ ಭಾರತ ಮೂಲದ ಹಲೇಲ್ ಸೊಲೊಮನ್ ಸಹ ಗಾಝಾದಲ್ಲಿ ಹೋರಾಡುತ್ತಿದ್ದಾಗ ಸಾವನ್ನಪ್ಪಿದ್ದರು.

Ad Widget

Ad Widget <> Ad Widget


ಇಸ್ರೇಲ್‌ನಲ್ಲಿ ಸುಮಾರು 85,000 ಭಾರತೀಯ ಮೂಲದ ಯಹೂದಿಗಳಿದ್ದಾರೆ. ಅವರಲ್ಲಿ ಕೇರಳದ ಕೊಚ್ಚಿನ್ ಯಹೂದಿಗಳು ಮತ್ತು ಪರದೇಸಿ ಯಹೂದಿಗಳು, ಮುಂಬೈ ಮತ್ತು ಕೋಲ್ಕತ್ತಾದ ಬಗ್ದಾದಿ ಯಹೂದಿಗಳು, ಮಹಾರಾಷ್ಟ್ರದ ಬೆನೆ ಇಸ್ರೇಲ್ ಮತ್ತು ಮಣಿಪುರ ಮತ್ತು ಮಿಜೋರಾಂನ ಬಿನೆ ಮೆನಾಶೆ ಸೇರಿದ್ದಾರೆ.



Ad Widget
Ad Widget
Click to comment

Leave a Reply

ಬಿಗ್ ನ್ಯೂಸ್

Singapore-ಜನನ ಪ್ರಮಾಣ ಹೆಚ್ಚಿಸಲು ಸಿಂಗಾಪುರ ಸರ್ಕಾರದ ವಿನೂತನ ಯೋಜನೆ; ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್‌’ ಆ್ಯಪ್‌

Published

on



Ad Widget

Ad Widget

Ad Widget

Ad Widget

ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸಿಂಗಾಪುರ ಸರ್ಕಾರ ವಿನೂತನ ಯೋಜನೆಗೆ ಮುಂದಾಗಿದೆ. ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್‌’ ಎಂಬ ಡೇಟಿಂಗ್ ಆ್ಯಪ್‌ ಅನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ.

Ad Widget

Ad Widget

Ad Widget

Ad Widget

ಸಿಂಗಾಪುರ: ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸಿಂಗಾಪುರ ಸರ್ಕಾರ ವಿನೂತನ ಯೋಜನೆಗೆ ಮುಂದಾಗಿದೆ. ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್‌’ ಎಂಬ ಡೇಟಿಂಗ್ ಆ್ಯಪ್‌ ಅನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಈ ಆ್ಯಪ್‌ನಲ್ಲಿ 21ರಿಂದ 35 ವರ್ಷದೊಳಗಿನ ಸರ್ಕಾರಿ ನೌಕರರು ಪರಸ್ಪರ ಪರಿಚಯವಾಗಿ, ಸೂಕ್ತ ಸಂಗಾತಿಯನ್ನು ಹುಡುಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಯುವಜನರು ಸಂಬಂಧ ಬೆಳೆಸಿಕೊಂಡು ಕುಟುಂಬ ಆರಂಭಿಸಲು ಹಾಗೂ ಮಕ್ಕಳನ್ನು ಹೊಂದಲು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ.

Ad Widget

Ad Widget <> Ad Widget

ಸಿಂಗಾಪುರದ ಸರ್ಕಾರಿ ತಂತ್ರಜ್ಞಾನ ಸಂಸ್ಥೆ ಗವ್‌ಟೆಕ್‌ ಈ ಆ್ಯಪ್‌ ಅಭಿವೃದ್ಧಿಪಡಿಸಿದೆ. ಆ್ಯಪ್‌ ಬಳಸುವವರು ತಮ್ಮ ಆಸಕ್ತಿಗಳು, ಅಭ್ಯಾಸಗಳು ಹಾಗೂ ವೈಯಕ್ತಿಕ ಆದ್ಯತೆಗಳಿಗೆ ಸಂಬಂಧಿಸಿದ ಪ್ರಶ್ನಾವಳಿಯನ್ನು ಭರ್ತಿ ಮಾಡಬೇಕು. ಅದರ ಆಧಾರದ ಮೇಲೆ ಬಳಕೆದಾರರಿಗೆ ಸೂಕ್ತ ಸಂಗಾತಿಯನ್ನು ಆ್ಯಪ್‌ ಸೂಚಿಸುತ್ತದೆ.



Ad Widget

ಸೂಚಿಸಲಾದ ವ್ಯಕ್ತಿಯೊಂದಿಗೆ ಸಂಪರ್ಕ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಇಬ್ಬರೂ ಪರಸ್ಪರ ಒಪ್ಪಿಕೊಂಡ ಬಳಿಕವಷ್ಟೇ ಸಂಪರ್ಕ ವಿವರಗಳನ್ನು ಪಡೆಯಲು ಅವಕಾಶವಿರುತ್ತದೆ. ಹೊಂದಾಣಿಕೆ ಆಗದಿದ್ದರೆ ಮತ್ತೊಬ್ಬ ವ್ಯಕ್ತಿಯನ್ನು ಆ್ಯಪ್‌ ಸೂಚಿಸುತ್ತದೆ.

Ad Widget

Ad Widget

ಸಿಂಗಾಪುರದಲ್ಲಿ ಜನನ ಪ್ರಮಾಣ ನಿರಂತರವಾಗಿ ಕುಸಿಯುತ್ತಿದ್ದು, ಒಟ್ಟು ಫಲವತ್ತತೆ ಪ್ರಮಾಣ 0.87ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಜನನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ‘ಫಸ್ಟ್‌ಡೇಟ್‌’ ಆ್ಯಪ್‌ ಕೂಡ ಅದರ ಭಾಗವಾಗಿದೆ.

Ad Widget
Continue Reading

ಬಿಗ್ ನ್ಯೂಸ್

Fly Dubai plane-ಫ್ಲೈ ದುಬೈ ವಿಮಾನದಲ್ಲಿ ಕಾಕ್‌ಪಿಟ್‌ ಗಲಾಟೆ; ಯುಎಇ ಅಧಿಕಾರಿಗಳಿಂದ ತನಿಖೆ ಆರಂಭ – ಪ್ರಯಾಣಿಕರ ಕರೆದೊಯ್ಯಲು ಇಸ್ರೇಲ್ ವಿಮಾನ ಪ್ರವೇಶಕ್ಕೆ ಸೌದಿ ಅನುಮತಿ ನಿರಾಕರಣೆ

Published

on



Ad Widget

Ad Widget

Ad Widget

Ad Widget

ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈ ದುಬೈ ಎಫ್‌ಝಡ್1073 ವಿಮಾನದಲ್ಲಿ ಕಾಕ್‌ಪಿಟ್‌ನಲ್ಲಿ ನಡೆದ ಪ್ರಕರಣದ ಕುರಿತು ಯುಎಇ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಘಟನೆಯ ತನಿಖೆಯನ್ನು ಯುಎಇಯ ನ್ಯಾಯಾಂಗ ಪ್ರಾಧಿಕಾರಗಳು ನಡೆಸಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Ad Widget

Ad Widget

Ad Widget

Ad Widget

ದುಬೈ: ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈ ದುಬೈ ಎಫ್‌ಝಡ್1073 ವಿಮಾನದಲ್ಲಿ ಕಾಕ್‌ಪಿಟ್‌ನಲ್ಲಿ ನಡೆದ ಪ್ರಕರಣದ ಕುರಿತು ಯುಎಇ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಘಟನೆಯ ತನಿಖೆಯನ್ನು ಯುಎಇಯ ನ್ಯಾಯಾಂಗ ಪ್ರಾಧಿಕಾರಗಳು ನಡೆಸಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಬುಧವಾರ ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಜಗಳದ ಹಿನ್ನೆಲೆಯಲ್ಲಿ ವಿಮಾನವನ್ನು ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಬಳಿಕ ಒಮನ್ ಮೂಲದವನೆಂದು ಹೇಳಲಾಗಿರುವ ಸಹ-ಪೈಲಟ್‌ನನ್ನು ಸೌದಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Ad Widget

Ad Widget <> Ad Widget

ವರದಿಗಳ ಪ್ರಕಾರ, ವಿಮಾನವನ್ನು ಪತನಗೊಳಿಸಲು ಸಹ-ಪೈಲಟ್ ಯತ್ನಿಸಿದ್ದಾರೆ ಎನ್ನಲಾಗಿದ್ದು, ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತಡೆಯಲು ಮುಂದಾದಾಗ ಕಾಕ್‌ಪಿಟ್‌ನಲ್ಲಿ ಹೋರಾಟ ನಡೆದಿದೆ. ಈ ವೇಳೆ ಮಚ್ಚರ್ ಅವರಿಗೆ ಚಾಕುವಿನಿಂದ ಇರಿತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.



Ad Widget

ಘಟನೆ ನಡೆದಾಗ ವಿಮಾನದಲ್ಲಿ 27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರು ಇದ್ದರು. ವಿಮಾನದಲ್ಲಿದ್ದ ಫ್ಲೈ ದುಬೈ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ವಿಮಾನವನ್ನು ಸುರಕ್ಷಿತಗೊಳಿಸಿದರು ಎಂದು ಸಂಸ್ಥೆ ತಿಳಿಸಿದೆ.

Ad Widget

Ad Widget

ಘಟನೆಯ ಸಂಪೂರ್ಣ ಸಂದರ್ಭ ಹಾಗೂ ಕಾರಣಗಳನ್ನು ಪರಿಶೀಲಿಸಲು ಪಬ್ಲಿಕ್ ಪ್ರಾಸಿಕ್ಯೂಷನ್‌ನ ವಿಶೇಷ ಸದಸ್ಯರ ತಂಡವನ್ನು ರಚಿಸುವಂತೆ ಯುಎಇ ಅಟಾರ್ನಿ ಜನರಲ್ ಆದೇಶಿಸಿದ್ದಾರೆ. ವಿಮಾನವು ಯುಎಇಯಲ್ಲಿ ನೋಂದಣಿಯಾಗಿದ್ದು, ಯುಎಇ ಧ್ವಜವನ್ನು ಹೊಂದಿರುವ ಹಿನ್ನೆಲೆಯಲ್ಲಿ ಅನ್ವಯವಾಗುವ ಕಾನೂನಿನಡಿ ತನಿಖೆ ನಡೆಸುವ ಅಧಿಕಾರ ಯುಎಇ ನ್ಯಾಯಾಂಗ ಪ್ರಾಧಿಕಾರಗಳಿಗೆ ಇದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಘಟನೆಯ ಹಿಂದೆ ಭಯೋತ್ಪಾದಕ ಚಟುವಟಿಕೆ ಅಥವಾ ಉದ್ದೇಶವಿದೆಯೇ, ಪೂರ್ವನಿಯೋಜಿತ ಕೃತ್ಯವೇ ಎಂಬುದೂ ಸೇರಿದಂತೆ ಎಲ್ಲ ಸಾಧ್ಯತೆಗಳನ್ನು ತನಿಖಾ ತಂಡ ಪರಿಶೀಲಿಸಲಿದೆ. ಯುಎಇ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಸೇರಿದಂತೆ ಸಂಬಂಧಿತ ಅಧಿಕಾರಿಗಳ ಸಹಕಾರದೊಂದಿಗೆ ತನಿಖೆ ಆರಂಭಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತನಿಖೆ ಪೂರ್ಣಗೊಳ್ಳುವವರೆಗೆ ಅಧಿಕೃತ ಮೂಲಗಳು ಬಿಡುಗಡೆ ಮಾಡುವ ಮಾಹಿತಿಯನ್ನು ಮಾತ್ರ ನಂಬಬೇಕು. ಊಹಾಪೋಹಗಳು ಹಾಗೂ ನಂಬಲರ್ಹವಲ್ಲದ ವರದಿಗಳನ್ನು ತಪ್ಪಿಸುವಂತೆ ವಿದೇಶಾಂಗ ಸಚಿವಾಲಯ ಮನವಿ ಮಾಡಿದೆ.

ಇಸ್ರೇಲ್‌ನ ಕೋರಿಕೆ ತಿರಸ್ಕಾರ

ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಫ್ಲೈ ದುಬೈ ವಿಮಾನದ ಪ್ರಯಾಣಿಕರನ್ನು ವಾಪಸ್ ಕರೆತರಲು ತನ್ನ ವಿಮಾನಗಳಿಗೆ ಸೌದಿ ವಾಯುಪ್ರದೇಶದಲ್ಲಿ ಹಾರಾಟ ನಡೆಸಲು ಅನುಮತಿ ನೀಡಬೇಕೆಂಬ ಇಸ್ರೇಲ್‌ನ ಕೋರಿಕೆಯನ್ನು ಸೌದಿ ಅರೇಬಿಯಾ ತಿರಸ್ಕರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರದ ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಇಸ್ರೇಲಿ ಪ್ರಯಾಣಿಕರನ್ನು ಕರೆತರಲು ತನ್ನ ಮಿಲಿಟರಿ ವಿಮಾನಗಳಿಗೆ ಅನುಮತಿ ನೀಡುವಂತೆ ಇಸ್ರೇಲ್ ಮನವಿ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಕಾಕ್‌ಪಿಟ್‌ನಲ್ಲಿ ನಡೆದ ಘಟನೆಯ ಕುರಿತು ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫ್ಲೈ ದುಬೈ ಸಂಸ್ಥೆಯು ಇಸ್ರೇಲ್‌ಗೆ ಹಾಗೂ ಇಸ್ರೇಲ್‌ನಿಂದ ತನ್ನ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

Ad Widget
Continue Reading

ಬಿಗ್ ನ್ಯೂಸ್

Captain Smith Machcher-ವಿಮಾನದ ವ್ಯವಸ್ಥೆಗಳನ್ನು ಹಾಳುಮಾಡಲು ಯತ್ನಿಸಿದ ಸಹಪೈಲಟ್; 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಛರ್

Published

on



Ad Widget

Ad Widget

Ad Widget

Ad Widget

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಮಧ್ಯವಿಮಾನದಲ್ಲೇ ಕಾಕ್‌ಪಿಟ್‌ನಲ್ಲಿ ಆತಂಕಕಾರಿ ಘಟನೆ ನಡೆದಿದೆ ಎನ್ನಲಾಗಿದ್ದು, ಸಹ ಪೈಲಟ್ ವಿಮಾನದ ವ್ಯವಸ್ಥೆಗಳನ್ನು ಹಾಳುಮಾಡಲು ಯತ್ನಿಸಿದ ಸಂದರ್ಭದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರು ಅದನ್ನು ತಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

Ad Widget

Ad Widget

Ad Widget

Ad Widget

ದುಬೈ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಮಧ್ಯವಿಮಾನದಲ್ಲೇ ಕಾಕ್‌ಪಿಟ್‌ನಲ್ಲಿ ಆತಂಕಕಾರಿ ಘಟನೆ ನಡೆದಿದೆ ಎನ್ನಲಾಗಿದ್ದು, ಸಹ ಪೈಲಟ್ ವಿಮಾನದ ವ್ಯವಸ್ಥೆಗಳನ್ನು ಹಾಳುಮಾಡಲು ಯತ್ನಿಸಿದ ಸಂದರ್ಭದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರು ಅದನ್ನು ತಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಯಿಂದ ಸುಮಾರು 180 ಪ್ರಯಾಣಿಕರಿದ್ದ ವಿಮಾನದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Ad Widget

Ad Widget

Ad Widget alt="Ad Widget"/>

Ad Widget

ಫ್ಲೈದುಬೈಯ FZ 1073 ವಿಮಾನದಲ್ಲಿ ಇಬ್ಬರು ಪೈಲಟ್‌ಗಳ ನಡುವೆ ಸಂಘರ್ಷ ಉಂಟಾಗಿತ್ತು ಎನ್ನಲಾಗಿದೆ. ಈ ವೇಳೆ ಸಹ ಪೈಲಟ್ ವಿಮಾನದ ವ್ಯವಸ್ಥೆಗಳನ್ನು ಹಾಳುಮಾಡಲು ಯತ್ನಿಸಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದನ್ನು ತಡೆಯಲು ಕ್ಯಾಪ್ಟನ್ ಸ್ಮಿತ್ ಮಚ್ಛರ್ ಮುಂದಾದಾಗ ಅವರಿಗೆ ಇರಿತವಾಗಿದ್ದು, ಮುಖ ಮತ್ತು ಕೈಗಳಲ್ಲಿ ರಕ್ತದ ಗುರುತುಗಳೊಂದಿಗೆ ಅವರು ನೆಲದ ಮೇಲೆ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ ಎಂದು ವರದಿಯಾಗಿದೆ.

Ad Widget

Ad Widget <> Ad Widget

ಘಟನೆಯ ಹಿನ್ನೆಲೆಯಲ್ಲಿ ವಿಮಾನ ಅಪಹರಣದ ಆತಂಕವೂ ಕೆಲಕಾಲ ಎದುರಾಗಿತ್ತು. ಆದರೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಇತರ ಪೈಲಟ್‌ಗಳು ಯಶಸ್ವಿಯಾಗಿದ್ದು, ಕಾಕ್‌ಪಿಟ್‌ನ ನಿಯಂತ್ರಣವನ್ನು ಪಡೆದುಕೊಂಡು ವಿಮಾನವನ್ನು ಸೌದಿ ಅರೇಬಿಯಾದ ವಿಮಾನ ನಿಲ್ದಾಣವೊಂದಕ್ಕೆ ಸುರಕ್ಷಿತವಾಗಿ ತಿರುಗಿಸಿದ್ದಾರೆ ಎಂದು ವರದಿಯಾಗಿದೆ.



Ad Widget

ಯಾರು ಈ ಕ್ಯಾಪ್ಟನ್ ಸ್ಮಿತ್ ಮಚ್ಛರ್?
ಭಾರತೀಯ ನಾಗರಿಕರಾಗಿರುವ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಕಳೆದ ನಾಲ್ಕು ವರ್ಷಗಳಿಂದ ಫ್ಲೈದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಅವರು ಸ್ಪೈಸ್‌ಜೆಟ್‌ನಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

Ad Widget

Ad Widget

ಅವರ ಲಿಂಕ್ಡ್‌ಇನ್ ಪ್ರೊಫೈಲ್‌ ಪ್ರಕಾರ, ಬೋಯಿಂಗ್ 737 ವಿಮಾನಗಳಲ್ಲಿ ಅವರಿಗೆ 13 ವರ್ಷಕ್ಕೂ ಹೆಚ್ಚು ವಾಣಿಜ್ಯ ವಿಮಾನ ಹಾರಾಟದ ಅನುಭವವಿದೆ. ಲೈನ್ ಟ್ರೈನಿಂಗ್ ಕ್ಯಾಪ್ಟನ್ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು 9,750ಕ್ಕೂ ಹೆಚ್ಚು ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ.

2011ರಲ್ಲಿ ಸ್ಪೈಸ್‌ಜೆಟ್‌ಗೆ ಸೇರ್ಪಡೆಯಾದ ಸ್ಮಿತ್ ಮಚ್ಛರ್ ಅವರು ಲೈನ್ ಟ್ರೈನಿಂಗ್ ಕ್ಯಾಪ್ಟನ್ ಹಾಗೂ ಸೀನಿಯರ್ ಕಮಾಂಡರ್ ಸೇರಿದಂತೆ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ 2022ರ ಜೂನ್‌ನಲ್ಲಿ ಸ್ಪೈಸ್‌ಜೆಟ್ ತೊರೆದು ಫ್ಲೈದುಬೈಗೆ ಡೈರೆಕ್ಟ್ ಎಂಟ್ರಿ ಕ್ಯಾಪ್ಟನ್ ಆಗಿ ಸೇರ್ಪಡೆಯಾಗಿದ್ದರು.

ವಿಮಾನದಲ್ಲಿನ ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಸಹ ಪೈಲಟ್‌ನ ಕೃತ್ಯ ಹಾಗೂ ಕಾಕ್‌ಪಿಟ್‌ನಲ್ಲಿ ನಡೆದ ಸಂಘರ್ಷದ ಸಂಪೂರ್ಣ ವಿವರಗಳು ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading