Connect with us

ಮಂಗಳೂರು

ಮಂಗಳೂರು ಸಂಸದರ ವಿರೋಧದ ಬಳಿಕವು  ಮಂಗಳೂರು-ಗೋವಾ ವಂದೇ ಭಾರತ್‌ ರೈಲು ಕೇರಳಕ್ಕೆ ವಿಸ್ತರಣೆಯತ್ತ-  ರೈಲ್ವೇ ಸಚಿವರ ಮನವೊಲಿಸುವಲ್ಲಿ ಕೇರಳ ಸಂಸದನ ʼಕೈʼ ಮೇಲು

Published

on



Ad Widget

Ad Widget

Ad Widget

Ad Widget

ಒಂದು ತಿಂಗಳ ಹಿಂದಷ್ಟೆ ಮಂಗಳೂರು – ಗೋವಾ ನಡುವೆ ಆರಂಭಗೊಂಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಕೇರಳಕ್ಕೆ ವಿಸ್ತರಿಸಲು ರೈಲ್ವೇ ಇಲಾಖೆ ನಿಧ೯ರಿಸಿದೆ ಎಂದು ತಿಳಿದು ಬಂದಿದೆ . ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣ ಎಕ್ಸ್‌ಪ್ರೆಸ್‌ರೈಲನ್ನು ಕೋಝಿಕ್ಕೋಡ್‌ಗೆ ವಿಸ್ತರಿಸಲು ರೈಲ್ವೇ ಸಚಿವ ಅಶ್ವಿನ್‌ ವೈಷ್ಣವ್‌ ಮನ ಮಾಡಿದ್ದಾರೆ ಎಂದು  ಕಣ್ಣೂರು ಸಂಸದ ಎಂ.ಕೆ. ರಾಘವನ್‌ ತಿಳಿಸಿರುವುದಾಗಿ ವರದಿಯಾಗಿದೆ.

Ad Widget

Ad Widget

Ad Widget

Ad Widget

ಈ ರೈಲು ಈಗ ಇರುವಂತೆ ಸಂಚರಿಸಿದರೆ ಪ್ರಯಾಣಿಕರ ಕೊರತೆಯಿಂದ ಇಲಾಖೆಗೆ ನಷ್ಟ ಆಗಲಿದೆ.  ಹೀಗಾಗಿ  ಈ ರೈಲನ್ನು ಮುಂಬಾಯಿವರೆಗೆ ವಿಸ್ತರಿಸಬೇಕು ಎಂಬ ಕೂಗು   ಡಿ.೩೦ರಂದು ವಂದೇ ಭಾರತ್‌ಚಾಲನೆ ಪಡೆದ ದಿನದಿಂದಲೂ ಕೇಳಿಬಂದಿತ್ತು. ಆದರೇ ಈಗಿನ ಬೆಳವಣಿಗೆ ಇದಕ್ಕೆ ವ್ಯತಿರಿಕ್ತವಾಗಿ ಬಂದಿದೆ. ಉತ್ತರಭಿಮುಖವಾಗಿ ವಿಸ್ತರಿಸಲು ಬೇಡಿಕೆ ಇಟ್ಟರೇ ಈಗ ರೈಲು ದಕ್ಷಿಣಾಭಿಮುಖವಾಗಿ ವಿಸ್ತರಣೆಯಾಗಲಿದೆ

Ad Widget

Ad Widget

Ad Widget alt="Ad Widget"/>

Ad Widget

ಕಣ್ಣೂರು ಸಂಸದ ಎಂ.ಕೆ. ರಾಘವನ್‌ರವರು ಕನಾ೯ಟಕದ ಮೂರು ರೈಲುಗಳಾದ ಬೆಂಗಳೂರು-ಕೊಯಂಬತ್ತೂರು, ಗೋವಾ-ಮಂಗಳೂರು ವಂದೇ ಭಾರತ್‌, ಬೆಂಗಳೂರು-ಕೊಂಬತ್ತೂರು ಉದಯ್‌ಎಕ್ಸ್‌ಪ್ರೆಸ್‌ರೈಲನ್ನು ಕೇರಳದ ಕೋಝಿಕ್ಕೋಡ್‌ಗೆ ವಿಸ್ತರಿಸಬೇಕೆಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ರವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

Ad Widget

Ad Widget <> Ad Widget

ಬೆಂಗಳೂರು-ಮಂಗಳೂರು-ಕಣ್ಣೂರು ರೈಲು ಕೋಝಿಕ್ಕೋಡ್‌ಗೆ ವಿಸ್ತರಣೆಯಾದ ಬೆನ್ನಲ್ಲೇ ಮಂಗಳೂರು – ಗೋವಾ ವಂದೇ ಭಾರತ್‌ಎಕ್ಸ್‌ಪ್ರೆಸ್‌ರೈಲನ್ನೂ ಕೇರಳಕ್ಕೆ ವಿಸ್ತರಿಸಲು ರೈಲ್ವೇ ಸಚಿವರು ಒಪ್ಪಿಗೆ ನೀಡಿದ್ದಾರೆ ಎನ್ನುವ ಮಾಹಿತಿ ಕೇರಳದ ಸಂಸದರ ವತಿಯಿಂದ ಸಿಕ್ಕಿದೆ. ಕೆಲವೇ ಸಮಯದಲ್ಲಿ ಕೇರಳಕ್ಕೆ ಮತ್ತೊಂದು ವಂದೇ ಭಾರತ್‌ರೈಲು ಬರಲಿದೆ ಎಂದು ರೈಲ್ವೇ ಸಚಿವರು   ಎಂ.ಕೆ. ರಾಘವನ್‌ರವರಿಗೆ ಮಾಹಿತಿ ರವಾನಿಸಿರುತ್ತಾರೆ.



Ad Widget

ನಳಿನ್‌ ವೈಫಲ್ಯ

Ad Widget

Ad Widget

ಮಂಗಳೂರು ಸಂಸದ ನಳಿನ್‌ಕುಮಾರ್‌, ಬೆಂಗಳೂರು-ಕಣ್ಣೂರು ರೈಲನ್ನು ಕೋಜಿಕ್ಕೋಡ್‌ಗೆ ವಿಸ್ತರಿಸಬಾರದು ಎಂದು ಮನವಿ ಮಾಡಿದ್ದರು. ಅದರೆ ಇದಕ್ಕೆ ರೈಲ್ವೇ ಇಲಾಖೆ ಬೆಲೆ  ನೀಡಿದಂತೆ ಕಂಡು ಬರುವುದಿಲ್ಲ. ಕೋಜಿಕ್ಕೋಡ್‌ಗೆ ರೈಲು ವಿಸ್ತರಣೆಯಾದರೇ ಅಲ್ಲಿಯೇ ಅತ್ಯಧಿಕ ಟಿಕೆಟ್ ಬುಕ್‌ ಆಗುವ ಸಾಧ್ಯತೆಯಿರುವುದರಿಂದ   ಮಂಗಳೂರಿನಿಂದ ಬೋರ್ಡಿಂಗ್‌ ಮಾಡುವ ಪ್ರಯಾಣಿಕರಿಗೆ ಸಾಕಷ್ಟು ಸೀಟುಗಳು ಸಿಗುವುದಿಲ್ಲ . ಹೀಗಾಗಿ ರೈಲನ್ನು ಕೋಜಿಕ್ಕೋಡ್‌ಗೆ ವಿಸ್ತರಿಸುವ ಬದಲು ಮುಂಬಾಯಿಗೆ ವಿಸ್ತರಿಸಬೇಕು ಎನ್ನುವುದು  ಮಂಗಳೂರಿನ ನಾಗರೀಕರ ಆಗ್ರಹವಾಗಿತ್ತು . ಆದರೇ ಇದನ್ನು ತನ್ನ ಪಕ್ಷದ ಸರಕಾರ ಕೇಂದ್ರದಲ್ಲಿದ್ದರೂ ಅವರಿಗೆ ಮನದಟ್ಟು ಮಾಡುವಲ್ಲಿ ಸಂಸದ ನಳೀನ್‌ ಸೋತಿದ್ದಾರೆ ಎಂಬ ಅಭಿಪ್ರಾಯ ಇಲ್ಲಿನ ರೈಲ್ವೇ ಪ್ರಯಾಣಿಕರದು. ಆದರೇ ಕೇರಳದಲ್ಲಿ ಸಂಸದರನ್ನಾಗಲಿ ಶಾಸಕರನ್ನಾಗಲಿ  ಬಿಜೆಪಿ ಹೊಂದಿಲದಿದ್ದರೂ, ಅಲ್ಲಿನ ಬೇರೆ ಪಕ್ಷದ ಸಂಸದ ಬಿಜೆಪಿ ನೇತ್ರತ್ವದ ಕೇಂದ್ರ ಸರಕಾರ ಸಚಿವರನ್ನು ಹೇಗೆ ಮನವೊಲಿಸುವಲ್ಲಿ ಸಫಲರಾದರೂ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಕೇರಳ ಸಂಸದ ಮೇಲುಗೈ

ಗೋವಾ-ಮಂಗಳೂರು ವಂದೇ ಭಾರತ್‌ರೈಲು ಕೋಜಿಕ್ಕೋಡ್‌ಗೆ ವಿಸ್ತರಣೆಯಾದರೆ, ಟೂರಿಸಂ ವಲಯಕ್ಕೆ ಲಾಭ ಆಗಲಿದೆ. ಕೋಜಿಕ್ಕೋಡ್‌ನಿಂದ ಬೆಳಗ್ಗೆ ಮಂಗಳೂರಿಗೆ ಬರಲು ರೈಲು ಇರದ ಕಾರಣ ವಂದೇ ಭಾರತ್‌ಕೋಜಿಕ್ಕೋಡ್‌ನಿಂದ ಮಂಗಳೂರು ಮೂಲಕ ಗೋವಾಕ್ಕೆ ತೆರಳಿದರೆ, ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ  ಆದ್ದರಿಂದ ಕೇರಳಕ್ಕೆ ವಿಸ್ತರಿಸಿದರೆ ಲಾಭದತ್ತ ಸಾಗಲಿದೆ ಎಂದು ಸಂಸದ ಎಂ.ಕೆ. ರಾಘವನ್‌, ರೈಲ್ವೇ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿದ್ದಾರೆ. ಇದೆ ರೀತಿಯ ಮನವರಿಕೆಯನ್ನು ಮಂಗಳೂರು ಸಂಸದರು ಮಾಡುವಲ್ಲಿ ವಿಫಲರಾದರೇ ಎನ್ನುವುದು ಸದ್ಯ ಕಾಡುತ್ತಿರುವ ಪ್ರಶ್ನೆ.

ರೈಲ್ವೇ ಯಾತ್ರಿಕರ ಆಗ್ರಹಕ್ಕೆ ಮನ್ನಣೆಯಿಲ್ಲ

ಗೋವಾ-ಮಂಗಳೂರು ವಂದೇ ಭಾರತ್‌ರೈಲು ಪ್ರಯಾಣಿಕರ ಕೊರತೆಯಿಂದ ನಷ್ಟದಲ್ಲಿ ಓಡುತ್ತಿದೆಯೆಂದು ಇತ್ತೀಚೆಗೆ ಕೊಂಕಣ್‌ರೈಲ್ವೇ  ಮಾಹಿತಿ ನೀಡಿತ್ತು.  ಈಗ  ವಾರಾಂತ್ಯಗಳಲ್ಲಷ್ಟೇ ಸೀಟು ಭತಿ೯ಯಾಗುತ್ತಿದೆ.  ರೈಲಿನ ಟಿಕೆಟ್ ದರ ದುಬಾರಿಯಾಗಿದ್ದರಿಂದ  ಪ್ರಯಾಣಿಕರು ಈ ಐಷರಾಮಿ ರೈಲಿನಲ್ಲಿ ಓಡಲು ಹಿಂದೇಟು ಹಾಕುತ್ತಿದ್ದಾರೆ.   ಹೀಗಾಗಿ ಈ  ರೈಲು ರದ್ದಾಗಬಹುದು ಎನ್ನುವ ಭೀತಿ ಆರಂಭದಿಂದಲೇ ವ್ಯಕ್ತವಾಗಿತ್ತು.  ಹೀಗಾಗಿ  ಈ ರೈಲನ್ನು ಮುಂಬೈಗೆ ವಿಸ್ತರಿಸಬೇಕೆಂದು ಮಂಗಳೂರು, ಉಡುಪಿಯ ರೈಲ್ವೇ ಯಾತ್ರಿಕರು ಒತ್ತಾಯಿಸಿದ್ದರು. ರೈಲ್ವೇ ಸಚಿವಾಲಯಕ್ಕೂ ಈ ಬಗ್ಗೆ ಪತ್ರ ಬರೆದಿದ್ದರು.  

Ad Widget
Click to comment

Leave a Reply

ಮಂಗಳೂರು

Mangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ

Published

on



Ad Widget

Ad Widget

Ad Widget

Ad Widget

ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget

Ad Widget

Ad Widget

ಮಂಗಳೂರು: ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಬೆಳೆ ವಿಮೆ ಯೋಜನೆಯಡಿ ರೈತರಿಗೆ ಸೂಕ್ತ ಪರಿಹಾರ ದೊರೆಯದಿರುವುದು ಸೇರಿದಂತೆ ವಿಮೆ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಭೆಯಲ್ಲಿ ಧ್ವನಿ ಎತ್ತಲಾಗುತ್ತದೆ.

Ad Widget

Ad Widget <> Ad Widget

ಬೆಳೆ ವಿಮೆ ಯೋಜನೆಯಡಿ ರೈತರಿಗೆ ನ್ಯಾಯಯುತ ಪರಿಹಾರ ದೊರೆಯಬೇಕು ಹಾಗೂ ವಿಮೆ ಪಾವತಿಯಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.



Ad Widget

ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು ಸೇರಿದಂತೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಳೆ ವಿಮೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹಕ್ಕೊತ್ತಾಯ ಮಂಡಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Continue Reading

ಅಪರಾಧ

Digital Arrest-‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 75 ವರ್ಷದ ಮಹಿಳೆಗೆ ₹2 ಕೋಟಿ ವಂಚನೆ

Published

on



Ad Widget

Ad Widget

Ad Widget

Ad Widget

‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಕೆ ಹಾಕಿ 75 ವರ್ಷದ ಮಹಿಳೆಯೊಬ್ಬರಿಂದ ಸೈಬರ್‌ ಖದೀಮರು ಬರೋಬ್ಬರಿ ₹2 ಕೋಟಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೊಲೀಸ್‌ ಹಾಗೂ ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತರು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದು, ಈ ಕುರಿತು ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಕೆ ಹಾಕಿ 75 ವರ್ಷದ ಮಹಿಳೆಯೊಬ್ಬರಿಂದ ಸೈಬರ್‌ ಖದೀಮರು ಬರೋಬ್ಬರಿ ₹2 ಕೋಟಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೊಲೀಸ್‌ ಹಾಗೂ ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತರು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದು, ಈ ಕುರಿತು ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಸೆ.25ರಂದು ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಗೆ ಕರೆ ಮಾಡಿ ತಾನು ಮುಂಬೈನ ಕೊಲಾಬಾ ಪೊಲೀಸ್‌ ಅಧಿಕಾರಿ ಸಂದೀಪ್‌ ರಾವ್‌ ಎಂದು ಪರಿಚಯಿಸಿಕೊಂಡಿದ್ದಾನೆ. ಅಂತಾರಾಷ್ಟ್ರೀಯ ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ನರೇಶ್‌ ಗೋಯಲ್‌ ಜತೆ ಹಣ ವರ್ಗಾವಣೆ, ಮಾದಕವಸ್ತು ವ್ಯವಹಾರ ಹಾಗೂ ಮಕ್ಕಳ ಕಳ್ಳಸಾಗಣೆ ಸೇರಿದಂತೆ ಹಲವು ಅಪರಾಧಗಳಲ್ಲಿ ನೀವು ಭಾಗಿಯಾಗಿದ್ದೀರಿ. ಈ ಸಂಬಂಧ ಮುಂಬೈ ಕೊಲಾಬಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿ ಭಯ ಹುಟ್ಟಿಸಿದ್ದಾನೆ.

Ad Widget

Ad Widget <> Ad Widget

ಬಳಿಕ ಮತ್ತೊಂದು ಮೊಬೈಲ್‌ ಸಂಖ್ಯೆಯಿಂದ ವಾಟ್ಸ್‌ಆ್ಯಪ್‌ ವಿಡಿಯೊ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತಾನು ಸಿಬಿಐ ಅಧಿಕಾರಿ ಸಮಾಧಾನ್‌ ಪವಾರ್‌ ಎಂದು ಪರಿಚಯಿಸಿಕೊಂಡಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದ ಅಪರಾಧದಲ್ಲಿ ನೀವು ಭಾಗಿಯಾಗಿದ್ದೀರಿ. ‘ನ್ಯಾಷನಲ್‌ ಸೀಕ್ರೆಸಿ ಆ್ಯಕ್ಟ್‌’ ಪಾಲಿಸಬೇಕು ಎಂದು ಹೇಳಿ ಮಹಿಳೆಯನ್ನು ಮತ್ತಷ್ಟು ಹೆದರಿಸಿದ್ದಾನೆ. ಅಲ್ಲದೆ, ತಾವು ಸರ್ವೇಲೈನ್ಸ್‌ನಲ್ಲಿರುವುದರಿಂದ ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದು ಬೆದರಿಕೆ ಹಾಕಿದ್ದಾನೆ.



Ad Widget

ನಂತರ ಮಹಿಳೆಯ ಆಸ್ತಿ ಹಾಗೂ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿ ಎರಡು ದಿನಗಳಲ್ಲಿ ಕ್ಲಿಯರೆನ್ಸ್ ನೀಡುವುದಾಗಿ ಆರೋಪಿಗಳು ನಂಬಿಸಿದ್ದಾರೆ. ಈ ನೆಪದಲ್ಲಿ ಬ್ಯಾಂಕ್‌ ಖಾತೆ ಹಾಗೂ ಆಸ್ತಿ ವಿವರಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ತಮ್ಮ ಸೂಚನೆಯಂತೆ ನಿರ್ದಿಷ್ಟ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದಾರೆ.

Ad Widget

Ad Widget

ಆರೋಪಿಗಳ ಮಾತು ನಂಬಿದ ಮಹಿಳೆ, ಅವರ ಸೂಚನೆಯಂತೆ ₹60 ಲಕ್ಷವನ್ನು ಹಾಗೂ ಅ.3ರಂದು ₹1.40 ಕೋಟಿ ಹಣವನ್ನು ಆರ್‌ಟಿಜಿಎಸ್‌ ಮೂಲಕ ವರ್ಗಾಯಿಸಿದ್ದಾರೆ. ಸೆ.25ರಿಂದ ಅ.5ರವರೆಗೆ ಹಂತ ಹಂತವಾಗಿ ಒಟ್ಟು ₹2 ಕೋಟಿ ಹಣ ವರ್ಗಾಯಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ‘ಡಿಜಿಟಲ್ ಅರೆಸ್ಟ್’ ಸೇರಿದಂತೆ ವಿವಿಧ ರೀತಿಯ ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್‌ ಅಥವಾ ತನಿಖಾ ಸಂಸ್ಥೆಗಳ ಹೆಸರಿನಲ್ಲಿ ಬೆದರಿಸಿ, ಹಣ ವರ್ಗಾಯಿಸುವಂತೆ ಒತ್ತಡ ಹೇರುವುದು ವಂಚಕರ ಸಾಮಾನ್ಯ ತಂತ್ರವಾಗಿದೆ.

ಸೈಬರ್‌ ವಂಚನೆಗೆ ಒಳಗಾದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವುದು ಅತ್ಯಂತ ಮುಖ್ಯ. ವಂಚನೆಯಾದ ಕೂಡಲೇ ‘ಗೋಲ್ಡನ್ ಅವರ್’ನಲ್ಲಿ ದೂರು ನೀಡಿದರೆ ಹಣದ ವರ್ಗಾವಣೆಯನ್ನು ತಡೆಯಲು ಅಥವಾ ವಂಚಿತ ಹಣವನ್ನು ಫ್ರೀಜ್‌ ಮಾಡಲು ಪೊಲೀಸರು ಪ್ರಯತ್ನಿಸಬಹುದು. ದೂರು ನೀಡಲು ವಿಳಂಬವಾದಷ್ಟೂ ಹಣವನ್ನು ಮರಳಿ ಪಡೆಯುವುದು ಕಷ್ಟವಾಗುವ ಸಾಧ್ಯತೆ ಇದೆ.

Ad Widget
Continue Reading

ಮಂಗಳೂರು

Mangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್‌ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ

Published

on



Ad Widget

Ad Widget

Ad Widget

Ad Widget

ಸುಲ್ತಾನ್ ಗೋಲ್ಡ್‌ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಸರ ಖರೀದಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನವಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಮರೆತುಹೋದ ಮಹಿಳೆಗೆ, ರಿಕ್ಷಾ ಚಾಲಕರೊಬ್ಬರು ಅದನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ಸುಲ್ತಾನ್ ಗೋಲ್ಡ್‌ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಸರ ಖರೀದಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನವಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಮರೆತುಹೋದ ಮಹಿಳೆಗೆ, ರಿಕ್ಷಾ ಚಾಲಕರೊಬ್ಬರು ಅದನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಅಫ್ಜಿಲಾ ಎಂಬವರು ಸುಲ್ತಾನ್ ಗೋಲ್ಡ್‌ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಸರವನ್ನು ಖರೀದಿಸಿದ್ದರು. ಬಳಿಕ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನದ ಸರವಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಬಿಟ್ಟು ಇಳಿದಿದ್ದರು.

Ad Widget

Ad Widget <> Ad Widget

ರಿಕ್ಷಾ ಚಾಲಕ ಬಸವರಾಜ ಅವರಿಗೆ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಚಿನ್ನದ ನೆಕ್ಲೇಸ್‌ ಇರುವುದನ್ನು ಗಮನಿಸಿದ್ದಾರೆ. ಬಳಿಕ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಬ್ಯಾಗನ್ನು ಸುರಕ್ಷಿತವಾಗಿ ವಾರಸುದಾರರಿಗೆ ಮರಳಿಸಿದ್ದಾರೆ.



Ad Widget

ಚಿನ್ನದ ಸರವನ್ನು ಮರಳಿ ಪಡೆದ ಅಫ್ಜಿಲಾ ಅವರು ರಿಕ್ಷಾ ಚಾಲಕ ಬಸವರಾಜ ಅವರ ಪ್ರಾಮಾಣಿಕತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಚಾಲಕನ ಈ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading