ಬಿಗ್ ನ್ಯೂಸ್
ಪಾಕಿಸ್ತಾನ ಗಡಿ ಭಾಗ ಕಛ್ ಗೆ ಮಂಗಳೂರು ಯುವತಿಯರ ಬೈಕ್ ರೈಡ್ – 6 ವರ್ಷದ ಮಗುವಿನ ತಾಯಿ ಸೇರಿದಂತೆ 4 ಯುವತಿಯರ ಬರೋಬ್ಬರಿ 2000 ಕಿಮೀ ಲಾಂಗ್ ರೈಡ್
ಮಂಗಳೂರು: ಎಲ್ಲರಿಗೂ ಒಂದೊಂದು ರೀತಿಯ ಆಸೆಗಳಿರುತ್ತದೆ. ಅದೇ ರೀತಿ ಮಂಗಳೂರಿನ ಈ ಯುವತಿಯರಿಗೆ ದೇಶ ಸುತ್ತಬೇಕೆಂಬ ಆಸೆ. ಅದೂ ಬೈಕ್ ನಲ್ಲೇ. ಹುಡುಗರು ಬೈಕ್ ಮೇಲೆ ನಾಲ್ಕು ಬ್ಯಾಗ್ ಏರಿಸಿ ದೇಶ ಸುತ್ತುತ್ತಾರೆ..ನಮಗ್ಯಾಕೆ ಆಗಲ್ಲ ಅಂತಾ ನಿರ್ಧರಿಸಿದ ಈ ಯುವತಿಯರು ಈಗ ಬೈಕ್ ಮೇಲೆ ಬ್ಯಾಗ್ ಹಾಕಿ ಹೊರಟು ನಿಂತಿದ್ದಾರೆ.. ಅದೂ ಮಂಗಳೂರಿನಿಂದ ಎರಡು ಸಾವಿರ ಕಿಲೋ ಮೀಟರ್ ದೂರದಲ್ಲಿರುವ ರನ್ ಆಫ್ ಕಛ್ ಗೆ.
ಮಂಗಳೂರಿನ ಕೀರ್ತಿ ಉಚ್ಚಿಲ್,ಪೂಜಾ ಜೈನ್,ದಿವ್ಯಾಪೂಜಾರಿ,ಅಪೂರ್ವ ಮಂಗಳೂರಿನಿಂದ ರನ್ ಆಫ್ ಕಛ್ ಗೆ ಬೈಕ್ ನಲ್ಲಿ ಹೊರಟ ಯುವತಿಯರು. 2015ರಲ್ಲಿ ಆರಂಭವಾದ ಮಹಿಳಾ ಬೈಕರ್ಸ್ ಗಳು ಮಾತ್ರ ಇರುವ ಮಂಗಳೂರು ಬೈಕರ್ನಿ ಗ್ರೂಪಿನ ಸದಸ್ಯರಾಗಿರುವ ಇವರು ಈಗ ಮಂಗಳೂರಿನಿಂದ ರನ್ ಆಫ್ ಕಛ್ ಗೆ ಹೊರಟಿದ್ದಾರೆ.
ಮಂಗಳೂರಿನ ಕೆಪಿಟಿಯಿಂದ ಹೊರಟ ಈ ಯುವತಿಯರು 11 ದಿನಗಳ ಕಾಲ ಬೈಕ್ ಯಾತ್ರೆ ಮಾಡಲಿದ್ದಾರೆ. ಸುಮಾರು ಎರಡು ಸಾವಿರ ಕಿಲೋಮೀಟರ್ ದೂರವನ್ನು ಈ ಯುವತಿಯರು ಬೈಕ್ ನಲ್ಲಿ ಪ್ರಯಾಣಿಸಲಿದ್ದಾರೆ.
ಈ ಯುವತಿಯರ ಪೈಕಿ ಕೀರ್ತಿ ಉಚ್ಚಿಲ್,ಪೂಜಾ ಜೈನ್,ದಿವ್ಯಾ ಪೂಜಾರಿ ಈ ಹಿಂದೆ ಕೂಡಾ ಕನ್ಯಾಕುಮಾರಿ,ರಾಮೇಶ್ವರ, ಊಟಿ ಕೊಯಮತ್ತೂರು ಸೇರಿದಂತೆ ದಕ್ಷಿಣದ ಹಲವು ಭಾಗಗಳಿಗೆ ಭೇಟಿ ನೀಡಿದ್ದಾರೆ. ಕೇವಲ ಎರಡು ತಿಂಗಳ ಹಿಂದೆ ನೂತನ ಬೈಕ್ ಖರೀದಿಸಿರುವ ಅಪೂರ್ವ ಇದೇ ಮೊದಲ ಬಾರಿಗೆ ಲಾಂಗ್ ರೈಡ್ ಮಾಡಲಿದ್ದಾರೆ.
ಕೀರ್ತಿ ಉಚ್ಚಿಲ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಮಂಗಳೂರು ಬೈಕರ್ನಿ ಕ್ಲಬ್ ನ ಸ್ಥಾಪಕರೂ ಆಗಿದ್ದಾರೆ. ಇನ್ನು ಪೂಜಾ ಜೈನ್ ಕರಾಟೆ ಪಟು ವಾಗಿದ್ದು, ಮಂಗಳೂರಿನ ಸ್ವಂತ ಜವಳಿ ಮಳಿಗೆಯನ್ನು ಹೊಂದಿದ್ದಾರೆ. ದಿವ್ಯಾಪೂಜಾರಿ ಮೆಡಿಕಲ್ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದರೆ ಅಪೂರ್ವ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಆರು ವರ್ಷದ ಮಗನನ್ನೂ ಹೊಂದಿದ್ದಾರೆ.
ಬೈಕ್ನಲ್ಲೇ ಸುತ್ತುವ ಆಸೆ ಬಗ್ಗೆ ಮಾತನಾಡಿದ ಮಂಗಳೂರು ಬೈಕರ್ನಿ ಗುಂಪಿನ ಸ್ಥಾಪಕಿ ಕೀರ್ತಿ, ಬೈಕ್ ನಲ್ಲಿ ಹೋಗೋದು ಅಂದ್ರೆ ಒಂದು ಸ್ವಾತಂತ್ರ್ಯ ಇದ್ದಂತೇ. ಬೈಕ್ ನಲ್ಲಿ ಸಿಕ್ಕ ಖುಷಿ ಬೇರೆ ಯಾವುದರಲ್ಲೂ ನಮಗೆ ಸಿಕ್ಕಿರಲಿಲ್ಲ. ಪುರುಷರಂತೇ ಮಹಿಳೆಯರೂ ಎಲ್ಲಾ ಕ್ಷೇತ್ರದಲ್ಲಿ ಇದ್ದಾರೆ. ನಮ್ಮಲ್ಲಿ ಶಕ್ತಿ ಇದೆ ಧೈರ್ಯ ನೂ ಇದೆ ಹೀಗಾಗಿ ಬೈಕ್ನಲ್ಲಿ ಹೋಗೋಕೆ ತೀರ್ಮಾನಿಸಿದೆವು ಅಂತಾ ಹೇಳಿದ್ದಾರೆ.
ನಮ್ಮ ಗುಂಪಿನ ಎಲ್ಲರೂ ಉದ್ಯೋಗದಲ್ಲಿದ್ದಾರೆ..ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನಲೆಯಲ್ಲಿ ಎಲ್ಲರಿಗೆ ರಜೆ ಇದೆ..ದಕ್ಷಿಣದ ಹಲವು ಭಾಗಗಳಿಗೆ ಹೋದ ನಂತರ ಈಗ ಉತ್ತರ ಭಾರತದತ್ತ ಹೋಗಬೇಕು ಅಂತಾ ಯೋಚಿಸಿದೆವು..ಈಶಾನ್ಯ ರಾಜ್ಯಗಳಿಗೆ ಹೋಗಬೇಕು ಅಂತಾ ಆಸೆ ಇದ್ದರೂ, ತುಂಬಾ ದಿನ ಬೇಕಾಗಿರೋದರಿಂದ ರಜೆ ಯ ಸಮಸ್ಯೆಯಾಗುತ್ತದೆ.. ಹೀಗಾಗಿ ರನ್ ಆಫ್ ಕಛ್ ಗೆ ಹೋಗುವ ಯೋಜನೆ ಮಾಡಿದೆವು. ಈಗ ರನ್ ಆಫ್ ಕಛ್ ನಲ್ಲಿ ರನ್ ಉತ್ಸವ ನಡೆಯುತ್ತಿದ್ದೆ. ರನ್ ಆಫ್ ಕಛ್ ನ್ನು ಬೈಕರ್ಸ್ ಪ್ಯಾರಡೈಸ್ ಅಂತಾನೂ ಕರೆಯುತ್ತಿದ್ದಾರೆ..ಹೀಗಾಗಿ ರನ್ ಅಫ್ ಕಛ್ ಗೆ ಹೋಗುತ್ತಿದ್ದೇವೆ ಅಂತಾ ಕೀರ್ತಿ ಹೇಳಿದ್ದಾರೆ.
ಒಟ್ಟು ಹನ್ನೊಂದು ದಿನದ ಬೈಕ್ ರೈಡ್ ಇದಾಗಿದ್ದು, ಡಿ.29ರ ಬೆಳಗ್ಗೆ ರನ್ ಆಫ್ ಕಛ್ ನ್ನು ತಲುಪಲಿದ್ದೇವೆ. ಡಿ.30ರ ಬೆಳಗ್ಗೆ ಮತ್ತೆ ಮಂಗಳೂರು ಕಡೆಗೆ ಪ್ರಯಾಣ ಬೆಳೆಸಲಿದ್ದೇವೆ. ದಿನಕ್ಕೆ 500-600ಕಿಮೀ ಸಂಚಾರ ಮಾಡುವ ಗುರಿ ಹೊಂದಿದ್ದೇವೆ ಅಂತಾ ಕೀರ್ತಿ ತಮ್ಮ ಬೈಕ್ ಯಾತ್ರೆ ತಯಾರಿ ಬಗ್ಗೆ ಹೇಳಿದ್ದಾರೆ..
ಇನ್ನು ಮೊದಲ ಬಾರಿಗೆ ಲಾಂಗ್ ರೈಡ್ ಹೋಗುತ್ತಿರುವ ಅಪೂರ್ವ ಮಾತನಾಡಿ, ಈ ರೈಡ್ ಗಾಗಿ ಎರಡು ತಿಂಗಳ ಹಿಂದೆ ಬೈಕ್ ಖರಿದೀಸಿ ಬೈಕ್ ಅಭ್ಯಾಸ ಮಾಡಿದ್ದೇನೆ. ಉತ್ಸಾಹ ಮತ್ತು ನಂಬಿಕೆ ಇದೆ. ಅದರ ಜೊತೆಗೆ ದೂರ ಪ್ರಯಾಣದ ಭಯವೂ ಇದೆ. ಉತ್ತರ ದತ್ತ ಚಳಿ ವಿಪರೀತ ವಿರುವ ಬಗ್ಗೆ ಗೊತ್ತಾಗಿದೆ. ಹೀಗಾಗಿ ಎಲ್ಲಾ ಮುನ್ನಚ್ಚೆರಿಕಾ ಕ್ರಮ ವಹಿಸಿದ್ದೇವೆ..ಹುಡುಗಿಯರೂ ಲಾಂಗ್ ರೈಡ್ ಹೋಗಬಹುದು ಎನ್ನೋದನ್ನು ಸಾಬೀತುಪಡಿಸುವ ವಿಶ್ವಾಸ ವಿದೆ. ಈಗಾಗಲೇ ಡಿ.29ರ ರನ್ ಆಫ್ ಕಛ್ ನ ಪ್ಯಾಕೇಜ್ ನಿಗದಿ ಮಾಡಿದ್ದೇವೆ. ನಮ್ಮ ಪ್ರತಿದಿನ ದ ನಿಗದಿಯ ಗುರಿ ತಲುಪಿದರೆ ಅಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ. ಮನೆಯವರಿಗೆ ನಾನು ಬೈಕ್ ನಲ್ಲೂ ಹೋಗಬಲ್ಲೆ ಎಂಬುವುದನ್ನು ಸಾಧಿಸಿ ತೋರಿಸಬೇಕೆಂಬ ಆಸೆ ಇದೆ ಅಂತಾ ಅಪೂರ್ವ ಹೇಳಿದ್ದಾರೆ.
ಅಂತರ ರಾಜ್ಯ
Supreme Court-ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ..!
ಹಬ್ಬದ ಋತುವಿನಲ್ಲಿ ವ್ಯಾಪಾರಕ್ಕೆ ನಷ್ಟವಾಗುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ದೆಹಲಿಯ ಕಾನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗೆ ತಡೆ ನೀಡುವಂತೆ ತುರ್ತು ನಿರ್ದೇಶನಗಳನ್ನು ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಹೊಸದಿಲ್ಲಿ: ಹಬ್ಬದ ಋತುವಿನಲ್ಲಿ ವ್ಯಾಪಾರಕ್ಕೆ ನಷ್ಟವಾಗುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ದೆಹಲಿಯ ಕಾನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗೆ ತಡೆ ನೀಡುವಂತೆ ತುರ್ತು ನಿರ್ದೇಶನಗಳನ್ನು ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪ್ರತಿಭಟನೆಯಿಂದ ಹಬ್ಬದ ವ್ಯಾಪಾರಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದ ವರ್ತಕರು, ಪ್ರತಿಭಟನೆಗೆ ತಡೆ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು.
ಈ ಮನವಿಯ ವಿಚಾರವಾಗಿ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ವಿವೇಕವನ್ನು ಪ್ರತಿಭಟನಾಕಾರರು ಹೊಂದಿರುತ್ತಾರೆ ಎಂದು ಆಶಿಸಿರುವುದಾಗಿ ತಿಳಿಸಿದೆ.
ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಬೇಕೆಂಬ ವರ್ತಕರ ಆತಂಕದ ನಡುವೆಯೇ, ಪ್ರತಿಭಟನೆಗೆ ಸಂಬಂಧಿಸಿದಂತೆ ತುರ್ತು ನಿರ್ಬಂಧಗಳನ್ನು ವಿಧಿಸಲು ನ್ಯಾಯಾಲಯ ನಿರಾಕರಿಸಿರುವುದು ಗಮನ ಸೆಳೆದಿದೆ.
ಬಿಗ್ ನ್ಯೂಸ್
Puttur-ಪುತ್ತೂರು: ಓವರ್ ಟೆಕ್ ಬರದಲ್ಲಿ ಲಾರಿ-ಕಾರು ಅಪಘಾತ; ಪಲ್ಟಿಯಾದ ಲಾರಿ
ರಾಷ್ಟ್ರೀಯ ಹೆದ್ದಾರಿ 275ರ ಸಂಟ್ಯಾರ್ ಸಮೀಪ ಇಂದು ಲಾರಿ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯಲ್ಲೇ ಮಗುಚಿಬಿದ್ದಿದೆ. ಅತಿವೇಗ ಹಾಗೂ ಓವರ್ಟೇಕ್ ಮಾಡುವ ಭರದಲ್ಲಿ ಈ ದುರಂತ ನಡೆದಿದೆ ಎನ್ನಲಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.
ರಾಷ್ಟ್ರೀಯ ಹೆದ್ದಾರಿ 275ರ ಸಂಟ್ಯಾರ್ ಸಮೀಪ ಇಂದು ಲಾರಿ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯಲ್ಲೇ ಮಗುಚಿಬಿದ್ದಿದೆ. ಅತಿವೇಗ ಹಾಗೂ ಓವರ್ಟೇಕ್ ಮಾಡುವ ಭರದಲ್ಲಿ ಈ ದುರಂತ ನಡೆದಿದೆ ಎನ್ನಲಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಯು ಮುಂಭಾಗದಲ್ಲಿದ್ದ ಕಾರನ್ನು ಓವರ್ಟೇಕ್ ಮಾಡಲು ಯತ್ನಿಸಿದಾಗ ಈ ಭೀಕರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಲಾರಿಯು ಹೆದ್ದಾರಿಗೆ ಅಡ್ಡಲಾಗಿ ಮಗುಚಿಬಿದ್ದಿದೆ.
ಅಪಘಾತದಿಂದಾಗಿ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಸಾರ್ವಜನಿಕರು ಹಾಗೂ ಹಾದಿಹೋಕರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ನೆರವಾಗಿದ್ದಾರೆ.
ಲಾರಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡು, ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೇನ್ ಬಳಸಿ ರಸ್ತೆಯಲ್ಲಿದ್ದ ಲಾರಿಯನ್ನು ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಂತರ ರಾಜ್ಯ
Supreme Court-ಇಸ್ಲಾಂಗೆ ಮತಾಂತರಗೊಂಡ ಬಳಿಕ ಹಿಂದುಳಿದ ವರ್ಗಗಳ ಮೀಸಲಾತಿಯಿಲ್ಲ; ಸುಪ್ರೀಂಕೋರ್ಟ್
ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು, ಮತಾಂತರಕ್ಕೂ ಮುನ್ನ ಹೊಂದಿದ್ದ ಸಾಮಾಜಿಕ ವರ್ಗದ ಆಧಾರದಲ್ಲಿ ಹಿಂದುಳಿದ ವರ್ಗಗಳ (BC) ಮೀಸಲಾತಿ ಸೌಲಭ್ಯವನ್ನು ಮುಂದುವರಿಸಬಹುದೇ ಎಂಬ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ ಎಂದು ವರದಿಯಾಗಿದೆ. ಈ ಸಂಬಂಧ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ನವದೆಹಲಿ: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು, ಮತಾಂತರಕ್ಕೂ ಮುನ್ನ ಹೊಂದಿದ್ದ ಸಾಮಾಜಿಕ ವರ್ಗದ ಆಧಾರದಲ್ಲಿ ಹಿಂದುಳಿದ ವರ್ಗಗಳ (BC) ಮೀಸಲಾತಿ ಸೌಲಭ್ಯವನ್ನು ಮುಂದುವರಿಸಬಹುದೇ ಎಂಬ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ ಎಂದು ವರದಿಯಾಗಿದೆ. ಈ ಸಂಬಂಧ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಶ್ರೀ ಚಂದ್ರಶೇಖರ್ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದೆ. ಮತಾಂತರದ ನಂತರ ವ್ಯಕ್ತಿಯ ಸಾಮಾಜಿಕ ವರ್ಗದ ಸ್ಥಾನಮಾನ ಮತ್ತು ಮೀಸಲಾತಿ ಅರ್ಹತೆಯನ್ನು ಅನ್ವಯಿಸುವ ಕುರಿತು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಮೀಸಲಾತಿ ಅರ್ಹತೆ ಕುರಿತು ನ್ಯಾಯಾಲಯದ ಅಭಿಪ್ರಾಯ
ಮತಾಂತರ ಪೂರ್ವದ ಜಾತಿ ಅಥವಾ ಸಮುದಾಯದ ಸ್ಥಿತಿಯನ್ನು, ಮತಾಂತರದ ನಂತರದ ವ್ಯವಸ್ಥೆಯಲ್ಲಿ ಅಧಿಸೂಚಿತ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿಸಲು ಸಾಧ್ಯವಿಲ್ಲ.
ಹಿಂದುಳಿದ ವರ್ಗದಿಂದ, ಇಸ್ಲಾಂ ಅಥವಾ ಹಿಂದೂಯೇತರ ಜಾತಿಗೆ ಕನ್ವರ್ಟ್ ಆಗಲು ಇದ್ದಂತಹ ಪರಿಸ್ಥಿತಿಯು ಏನೇ ಇದ್ದರೂ, ಮತಾಂತರದ ನಂತರ ಬೇರೊಂದು ಹಿಂದುಳಿದ ವರ್ಗದ ಸದಸ್ಯತ್ವನ್ನು ನೀಡಲು ಕಾನೂನಾತ್ಮಕವಾಗಿ ಸಾಧ್ಯವಿಲ್ಲ.
ಸಂವಿಧಾನದ ಪರಿಶಿಷ್ಟ ಜಾತಿಗಳ ಆದೇಶದ ಪ್ರಕಾರ, ಹಿಂದೂ, ಸಿಖ್ ಅಥವಾ ಬೌದ್ದ ಧರ್ಮವನ್ನು ಹೊರತು ಪಡಿಸಿ ಇತರ ಧರ್ಮವನ್ನು ಪ್ರತಿಪಾದಿಸುವ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ (SC) ಸದಸ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಈ ಮೂರು ಜಾತಿಯನ್ನು ಹೊರತು ಪಡಿಸಿ, ಇತರ ಧರ್ಮಕ್ಕೆ ಮತಾಂತರಗೊಂಡ ತಕ್ಷಣವೇ ಆ ವ್ಯಕ್ತಿಯ ಪರಿಶಿಷ್ಠ ಜಾತಿಯ ಸದಸ್ಯತ್ವಕ್ಕೆ ಆಧರಿಸಿ ಇರುವ ಮೀಸಲಾತಿ ವಿಧಿ 16(4) ಮತ್ತು ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾನೆ.
ಒಂದು ವೇಳೆ, ಹಿಂದೂಯೇತರ ಧರ್ಮಕ್ಕೆ ಮತಾಂತರಗೊಂಡು, ನಂತರ ಮತ್ತೆ ಹಿಂದೂ ಧರ್ಮಕ್ಕೆ ಕನ್ವರ್ಟ್ ಆದರೆ, ಮರುಮತಾಂತರದ ನಂತರ ಮೀಸಲಾತಿ ಆಟೊಮೆಟಿಕ್ ಆಗಿ ಬರುವುದಿಲ್ಲ. ಮರುಮತಾಂತರ ನಂತರದ ಆತನ ಮೂಲ ಜಾತಿಯ ದಾಖಲೆಗಳು ಬದಲಾಗಿರುವುದು ಮುಖ್ಯ.
ಇಸ್ಲಾಂ, ಕ್ರಿಶ್ಚಿಯನ್ ಅಥವಾ ಇತರ ಹಿಂದೂಯೇತರ ಧರ್ಮಕ್ಕೆ ಮತಾಂತರಗೊಂಡ ನಂತರ, ಶಾಸನಬದ್ದ ಸೌಲಭ್ಯ, ರಕ್ಷಣೆ, ಮೀಸಲಾತಿ, ಅರ್ಹತೆಯನ್ನು, ಕನ್ವರ್ಟ್ ಆಗುವ ಮುನ್ನ ಇದ್ದ ಸಾಂವಿಧಾನಿಕ ಆಧಾರದ ಮೇಲೆ ಪಡೆಯಲು ಸಾಧ್ಯವಿಲ್ಲ.
ಪ್ರಕರಣದ ಹಿನ್ನೆಲೆ ಏನು?
ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು ಅಥವಾ ಪರಿಶಿಷ್ಟ ಜಾತಿಗಳಿಗೆ ಸೇರಿದ ವ್ಯಕ್ತಿಗಳು ಇಸ್ಲಾಂ ಅಥವಾ ಇತರ ಹಿಂದೂಯೇತರ ಧರ್ಮಕ್ಕೆ ಮತಾಂತರಗೊಂಡ ಬಳಿಕವೂ ಹಿಂದುಳಿದ ವರ್ಗದ (ಮುಸ್ಲಿಂ) ಮೀಸಲಾತಿ ಪಡೆಯಲು ಅವಕಾಶ ನೀಡುವ ಸಂಬಂಧ ತಮಿಳುನಾಡು ಸರ್ಕಾರ 2024ರಲ್ಲಿ ಸರ್ಕಾರಿ ಆದೇಶ ಹೊರಡಿಸಿತ್ತು ಎನ್ನಲಾಗಿದೆ.
ಈ ಆದೇಶವನ್ನು ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಸರ್ಕಾರದ ಆದೇಶವನ್ನು ಅಸಂವಿಧಾನಿಕ ಎಂದು ಪರಿಗಣಿಸಿತ್ತು. ಈ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ ಎಂದು ವರದಿಯಾಗಿದೆ.
ತಮಿಳುನಾಡಿನ ಮುಸ್ಲಿಂ ಹಿಂದುಳಿದ ವರ್ಗಗಳ ಪಟ್ಟಿ
1993ರ ಸರ್ಕಾರಿ ಆದೇಶದಡಿ ಮುಸ್ಲಿಂ ಸಮುದಾಯದ ಏಳು ವಿಭಾಗಗಳನ್ನು ಗುರುತಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವುಗಳೆಂದರೆ ಅನ್ಸಾರ್, ಡೆಕ್ಕನಿ ಮುಸ್ಲಿಮರು, ದುಬೇಕುಲ, ಲಬ್ಬೈ, ಮಾಪಿಳೈ, ಶೇಕ್ ಮತ್ತು ಸೈಯದ್.
ಮತಾಂತರದ ಬಳಿಕ ವ್ಯಕ್ತಿಯ ಸಾಮಾಜಿಕ ವರ್ಗದ ಗುರುತು ಮತ್ತು ಮೀಸಲಾತಿ ಅರ್ಹತೆಯನ್ನು ಹೇಗೆ ನಿರ್ಧರಿಸಬೇಕು ಎಂಬ ವಿಚಾರದಲ್ಲಿ ಈ ಪ್ರಕರಣ ಮಹತ್ವ ಪಡೆದಿದೆ.
-
ಬಿಗ್ ನ್ಯೂಸ್13 hours agoPuttur-ಪುತ್ತೂರು: ಓವರ್ ಟೆಕ್ ಬರದಲ್ಲಿ ಲಾರಿ-ಕಾರು ಅಪಘಾತ; ಪಲ್ಟಿಯಾದ ಲಾರಿ
-
ನಿಧನ ವಾರ್ತೆ16 hours agoಪುತ್ತೂರು: ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ ಶಿವಪ್ರಸಾದ್ ಜಿ.ಎಸ್. ನಿಧನ
-
ಸ್ಥಳೀಯ11 hours agoKadaba-ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಕಡಬ ನಿವಾಸಿ ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, ₹50 ಸಾವಿರ ದಂಡ..!
-
ಅಂತರ ರಾಜ್ಯ17 hours agoBJP minister-ಪತಿ ಎರಡು ಮದುವೆಯಾಗಿದ್ದರೆಂದು ದೂರು ದಾಖಲಿಸಿದ ಬಿಜೆಪಿ ಸಚಿವೆ..!
-
ಅಂತರ ರಾಜ್ಯ15 hours agoRamleela-ನವದೆಹಲಿ: ರಾಮಲೀಲಾದಲ್ಲಿ ಈ ಬಾರಿ ಅಸುರರ ಜತೆಗೆ ʻಜಿರಳೆʼಯೂ ದಹನ..!
-
ಕಾರ್ಯಕ್ರಮಗಳು15 hours agoMangalore-ಮಂಗಳೂರಿಗೆ ಲಗ್ಗೆ ಇಟ್ಟ ಅಲರ್ಜಿ ಪರೀಕ್ಷೆಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ರಾಜ್ಯದ ಪ್ರತಿಷ್ಠಿತ ‘ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ’ : ಅ.19ರಂದು 11ನೇ ಶಾಖೆ ಉದ್ಘಾಟನೆ
-
ಅಪರಾಧ15 hours agoUdupi-ಉಡುಪಿ: ಭೂಗತ ಪಾತಕಿ ಹೇಮಂತ್ ಪೂಜಾರಿ ಸಹಚರನ ಬಂಧನ
-
ಅಂತರ ರಾಜ್ಯ15 hours agoTruecaller service-ಟೆಲಿಕಾಂ ಸಂಸ್ಥೆಗಳೇ ಒದಗಿಸಲಿವೆ ಟ್ರೂ ಕಾಲರ್ ಸೇವೆ; ಅಪರಿಚಿತ ನಂಬರ್ನಿಂದ ಕರೆ ಬಂದರೂ ಹೆಸರು ಪ್ರದರ್ಶನ ಕಡ್ಡಾಯ?


















