Connect with us

ರಾಷ್ಟ್ರೀಯ

man brutally murdered puppy ಮುದ್ದಾಡುತ್ತ ಬಂದ ನಾಯಿ ಮರಿಯನ್ನು ಎತ್ತಿ ನೆಲಕ್ಕೆ ಬಡಿದು ತುಳಿದು ಕೊಂದ ಕ್ರೂರಿ – ಆ ಮುದ್ದು ಮರಿಗಳು ನಿಮಗೇನು ಮಾಡಿದ್ವು ? ಮಮ್ಮಲ ಮರುಗಿದ್ದ ನೆಟ್ಟಿಗರು -; ಅನಾಗರಿಕ ಕೃತ್ಯಕ್ಕೆ ಸಿಎಂ ಚೌಹಾಣ್ ಖಂಡನೆ

Published

on



Ad Widget

Ad Widget

Ad Widget

Ad Widget

ಭೋಪಾಲ್: ಮುದ್ದು ಮಾಡಲು ಬಂದ ಪುಟ್ಟ ನಾಯಿಮರಿಯೊಂದನ್ನು ವ್ಯಕ್ತಿಯೊಬ್ಬ ಆಕ್ರೋಶದಿಂದ ಎತ್ತಿ ನೆಲಕ್ಕೆ ಬಡಿದು ಹತ್ಯೆ ಮಾಡಿದ ಪೈಶಾಚಿಕ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಈ ಘಟನೆಗೆ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Ad Widget

Ad Widget

Ad Widget

Ad Widget

ರಾಜ್ಯದ ಗುಣಾ ನಗರದ ಸುಭಾಷ್ ಕಾಲೊನಿಯಲ್ಲಿ ವ್ಯಕ್ತಿಯೊಬ್ಬ ಮುಚ್ಚಿದ ಅಂಗಡಿ ಮುಗ್ಗಟ್ಟಿನ ಮೆಟ್ಟಿಲುಗಳ ಮೇಲೆ ಕುಳಿತುಕೊಂಡಿದ್ದ. ಈ ವೇಳೆ ಆತನ ಬಳಿ ಎರಡು ಪುಟ್ಟ ನಾಯಿಮರಿಗಳು ಬಾಲ ಅಲ್ಲಾಡಿಸುತ್ತ ಬಂದಿವೆ. ಈ ಪೈಕಿ ಒಂದು ಮರಿ ಹಿಂದಿನಿಂದ ಆತನನ್ನು ಮುಟ್ಟಿದಾಗ ಒಮ್ಮೆಗೆ ಗಾಬರಿಗೊಂಡ ಆತ, ಸಿಟ್ಟಿನಲ್ಲಿ ನಾಯಿ ಮರಿಯನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದ್ದಾನೆ.

Ad Widget

Ad Widget

Ad Widget alt="Ad Widget"/>

Ad Widget

ಬಳಿಕ ಎದ್ದು ಹೋಗಿ ಮತ್ತೆ ನಾಯಿಯನ್ನು ಜೋರಾಗಿ ಎರಡು ಮೂರು ಬಾರಿ ತುಳಿದಿದ್ದಾನೆ. ಪರಿಣಾಮ ಮರಿ ಅಲ್ಲೇ ಸಾವನ್ನಪ್ಪಿದೆ. ಈ ಘಟನೆ ಸಿಸಿಟೀವಿಯೊಂದಲ್ಲಿ ಸೆರೆಯಾಗಿದ್ದು, ನಾಯಿಮರಿ ಕೊಂದ ವ್ಯಕ್ತಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

Ad Widget

Ad Widget <> Ad Widget

Gold Rate today : ಅಭರಣ ಪ್ರಿಯರಿಗೆ ಸಂತಸದ ಸುದ್ದಿ : ಚಿನ್ನ, ಬೆಳ್ಳಿ ಮತ್ತಷ್ಟೂ ಅಗ್ಗ



Ad Widget

ವೀಡಿಯೊ ವೈರಲ್ ಆಗುತ್ತಿದ್ದಂತೆ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಟ್ಯಾಗ್ ಮಾಡುವ ಮೂಲಕ ಮರು ಪೋಸ್ಟ್ ಮಾಡಿದ್ದಾರೆ.

Ad Widget

Ad Widget

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ‘ಈಭಯಾನಕಘಟನೆಯಿಂದ ಆಘಾತವಾಗಿದೆ. ನ್ಯಾಯ ಒದಗಿಸಲು ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಅನಾಗರಿಕ ಕೃತ್ಯಗಳನ್ನು ನಾವು ಖಂಡಿಸುತ್ತೇವೆ ಮತ್ತು ಜವಾಬ್ದಾರಿಯುತ ವ್ಯಕ್ತಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಟ್ವಿಟ್ ಮಾಡಿದ್ದಾರೆ.

Garlic Price Hike ಮಂಗಳೂರು : ದಿಢೀರ್‌ ಏರಿದ ಬೆಳ್ಳುಳ್ಳಿ ದರ – ತ್ರಿಶಕದತ್ತ ದಾಪುಗಾಲು

ಕೃತ್ಯ ಎಸಗಿದ ಅರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಆರೋಪಿಯನ್ನು ಗುನಾ ನಗರದ ನಿವಾಸಿ ಮೃತ್ಯುಂಜಯ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಗುನಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಖತ್ರಿ ತಿಳಿಸಿದ್ದಾರೆ.

ಘಟನಾ ಸ್ಥಳದ ಎದುರು ವಾಸಿಸುವ ಝಂಕಾರ್ ಶರ್ಮಾ ಎಂಬವರು ಅಪರಿಚಿತ ವ್ಯಕ್ತಿಯ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಐಪಿಸಿ ಸೆಕ್ಷನ್ 429 (ಐವತ್ತು ರೂಪಾಯಿ ಮೌಲ್ಯದ ಯಾವುದೇ ಮೌಲ್ಯದ ಜಾನುವಾರುಗಳು ಅಥವಾ ಯಾವುದೇ ಪ್ರಾಣಿಯನ್ನು ಕೊಲ್ಲುವ ಅಥವಾ ಅಂಗವೈಕಲ್ಯಗೊಳಿಸುವ ಮೂಲಕ ಕಿಡಿಗೇಡಿತನ) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ಸೆಕ್ಷನ್ 11 (ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

KIOCL Recruitment 2023: ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ನೇಮಕಾತಿಗೆ ಅರ್ಜಿ ಆಹ್ವಾನ

Ad Widget

ರಾಷ್ಟ್ರೀಯ

Cancer-ಕ್ಯಾನ್ಸರ್ ಔಷಧಿಗಳ ಬೆಲೆಯಲ್ಲಿ ಶೇ.70ರಷ್ಟು ಇಳಿಕೆ ಸಾಧ್ಯತೆ..! MRP ಮೇಲಿನ ಲಾಭಾಂಶ ಮಿತಿಗೆ ಕೇಂದ್ರ ಚಿಂತನೆ

Published

on



Ad Widget

Ad Widget

Ad Widget

Ad Widget

ಕ್ಯಾನ್ಸರ್ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಬೆಲೆ ನಿಯಂತ್ರಣದ ನಿಗದಿತ ಪಟ್ಟಿಗೆ ಸೇರದ ಕ್ಯಾನ್ಸರ್ ನಿರೋಧಕ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಮೇಲಿನ ಲಾಭಾಂಶವನ್ನು ಶೇ.30ಕ್ಕೆ ಮಿತಿಗೊಳಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಈ ಕ್ರಮ ಜಾರಿಯಾದರೆ ಕೆಲವು ಔಷಧಿಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಕ್ಯಾನ್ಸರ್ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಬೆಲೆ ನಿಯಂತ್ರಣದ ನಿಗದಿತ ಪಟ್ಟಿಗೆ ಸೇರದ ಕ್ಯಾನ್ಸರ್ ನಿರೋಧಕ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಮೇಲಿನ ಲಾಭಾಂಶವನ್ನು ಶೇ.30ಕ್ಕೆ ಮಿತಿಗೊಳಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಈ ಕ್ರಮ ಜಾರಿಯಾದರೆ ಕೆಲವು ಔಷಧಿಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Ad Widget

Ad Widget

Ad Widget alt="Ad Widget"/>

Ad Widget

ಬ್ರಾಂಡೆಡ್, ಜೆನೆರಿಕ್ ಔಷಧಿಗಳಿಗೂ ಅನ್ವಯ
ಬೆಲೆ ನಿಯಂತ್ರಣದ ನಿಗದಿತ ಪಟ್ಟಿಗೆ ಸೇರದ (ನಾನ್‌-ಶೆಡ್ಯೂಲ್ಡ್) ಕ್ಯಾನ್ಸರ್ ಔಷಧಿಗಳಿಗೆ ಈ ಮಿತಿಯನ್ನು ಅನ್ವಯಿಸುವ ಪ್ರಸ್ತಾವನೆ ಸರಕಾರದ ಮುಂದಿದೆ. ಬ್ರಾಂಡೆಡ್, ಜೆನೆರಿಕ್, ದೇಶೀಯವಾಗಿ ತಯಾರಿಸಿದ ಹಾಗೂ ಆಮದು ಮಾಡಿಕೊಳ್ಳುವ ಕ್ಯಾನ್ಸರ್ ಔಷಧಿಗಳೂ ಇದರ ವ್ಯಾಪ್ತಿಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.

Ad Widget

Ad Widget <> Ad Widget

ಜೀವರಕ್ಷಕ ಔಷಧಿಗಳ ಬೆಲೆಯನ್ನು ಕಡಿಮೆ ಮಾಡಿ, ಸಾಮಾನ್ಯ ಜನರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ. ಪ್ರಸ್ತಾವಿತ ಬೆಲೆ ನಿಯಂತ್ರಣ ಜಾರಿಯಾದರೆ ಕ್ಯಾನ್ಸರ್ ಔಷಧಿಗಳ ಗರಿಷ್ಠ ಮಾರಾಟ ದರದಲ್ಲಿ ಶೇ.70ರಷ್ಟು ಇಳಿಕೆಯಾಗಬಹುದು ಎಂಬ ಅಂದಾಜು ವ್ಯಕ್ತವಾಗಿದೆ. ಇದರಿಂದ ಗ್ರಾಹಕರಿಗೆ ಒಟ್ಟಾರೆ ಸುಮಾರು ₹2,500 ಕೋಟಿ ಉಳಿತಾಯವಾಗುವ ನಿರೀಕ್ಷೆಯಿದೆ.



Ad Widget

ಅಂತಿಮ ನಿರ್ಧಾರದ ನಿರೀಕ್ಷೆ
ಕ್ಯಾನ್ಸರ್ ಔಷಧಿಗಳ ಮಾರಾಟದ ಮೇಲಿನ ಲಾಭಾಂಶಕ್ಕೆ ಮಿತಿ ವಿಧಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಕುರಿತು ಪರಿಶೀಲನೆ ನಡೆಸಲು ಕ್ಯಾನ್ಸರ್ ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

Ad Widget

Ad Widget

ಮುಂದಿನ ದಿನಗಳಲ್ಲಿ ಈ ಬೆಲೆ ನಿಯಂತ್ರಣ ಕ್ರಮವನ್ನು ಇನ್ನಷ್ಟು ಕ್ಯಾನ್ಸರ್ ಔಷಧಿಗಳು ಹಾಗೂ ಇತರ ಔಷಧಿಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಸ್ತಾವನೆ ಜಾರಿಯಾದರೆ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡಲು ಮತ್ತು ರೋಗಿಗಳ ಆರ್ಥಿಕ ಹೊರೆಯನ್ನು ತಗ್ಗಿಸಲು ನೆರವಾಗಬಹುದು. ಆದರೆ ಬೆಲೆ ಇಳಿಕೆಯ ಪ್ರಮಾಣ ಹಾಗೂ ಕ್ರಮ ಜಾರಿಯಾಗುವ ದಿನಾಂಕದ ಕುರಿತು ಅಧಿಕೃತ ಘೋಷಣೆ ಹೊರಬಿದ್ದ ಬಳಿಕವೇ ಸ್ಪಷ್ಟ ಚಿತ್ರಣ ದೊರೆಯಲಿದೆ.

Ad Widget
Continue Reading

ಕ್ರೀಡೆ

India-West Indies match-ಒಂದೇ ODI ಪಂದ್ಯದಲ್ಲಿ 5 ಶತಕ: ಗುವಾಹಟಿಯಲ್ಲಿ ವಿಶ್ವದಾಖಲೆ ಬರೆದ ಭಾರತ–ವೆಸ್ಟ್ ಇಂಡೀಸ್ ಕದನ

Published

on



Ad Widget

Ad Widget

Ad Widget

Ad Widget

ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.

Ad Widget

Ad Widget

Ad Widget

Ad Widget

ಗುವಾಹಟಿ: ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.

Ad Widget

Ad Widget

Ad Widget alt="Ad Widget"/>

Ad Widget

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಜಾನ್ ಕ್ಯಾಂಬೆಲ್ (101), ಶಾಯಿ ಹೋಪ್ (104) ಹಾಗೂ ಅಮಿರ್ ಜಾಂಗೋ (114) ಅವರ ಶತಕಗಳ ನೆರವಿನಿಂದ 405 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

Ad Widget

Ad Widget <> Ad Widget

ಇದಕ್ಕೆ ಉತ್ತರವಾಗಿ ಭಾರತ ತಂಡದ ಆರಂಭಿಕರಾದ ನಾಯಕ ಶುಭಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಶತಕ ಸಿಡಿಸಿದರು. ಗಿಲ್ ಅಜೇಯ 223 ರನ್ ಗಳಿಸಿದರೆ, ರೋಹಿತ್ ಶರ್ಮಾ 101 ರನ್ ಬಾರಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 255 ರನ್‌ಗಳ ಭರ್ಜರಿ ಜೊತೆಯಾಟವಾಡಿದರು.



Ad Widget

ಒಂದೇ ಪಂದ್ಯದಲ್ಲಿ 5 ಶತಕ
1971ರಲ್ಲಿ ಮೊದಲ ಏಕದಿನ ಪಂದ್ಯ ನಡೆದ ಬಳಿಕ ಇದುವರೆಗೆ 5,023 ODI ಪಂದ್ಯಗಳು ನಡೆದಿವೆ. ಆದರೆ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.

Ad Widget

Ad Widget

ಇದಕ್ಕೂ ಮೊದಲು ಒಂದೇ ODI ಪಂದ್ಯದಲ್ಲಿ ನಾಲ್ಕು ಶತಕಗಳು ದಾಖಲಾಗಿದ್ದೇ ಗರಿಷ್ಠ ಸಾಧನೆಯಾಗಿತ್ತು. 1998ರಲ್ಲಿ ಲಾಹೋರ್‌ನಲ್ಲಿ ಪಾಕಿಸ್ತಾನ–ಆಸ್ಟ್ರೇಲಿಯಾ ಪಂದ್ಯ, 2013ರಲ್ಲಿ ನಾಗ್ಪುರದಲ್ಲಿ ಭಾರತ–ಆಸ್ಟ್ರೇಲಿಯಾ ಪಂದ್ಯ ಹಾಗೂ 2023ರಲ್ಲಿ ಹೈದರಾಬಾದ್‌ನಲ್ಲಿ ಪಾಕಿಸ್ತಾನ–ಶ್ರೀಲಂಕಾ ಪಂದ್ಯಗಳಲ್ಲಿ ತಲಾ ನಾಲ್ಕು ಶತಕಗಳು ದಾಖಲಾಗಿದ್ದವು.

ವಿಶೇಷವೆಂದರೆ, ಈ ಹಿಂದೆ ನಾಲ್ಕು ಶತಕಗಳು ದಾಖಲಾಗಿದ್ದ ಪಂದ್ಯಗಳೂ ಏಷ್ಯಾ ಖಂಡದಲ್ಲೇ ನಡೆದಿದ್ದವು.

ಒಂದೇ ಇನ್ನಿಂಗ್ಸ್‌ನಲ್ಲಿ 3 ಶತಕ
ವೆಸ್ಟ್ ಇಂಡೀಸ್ ತಂಡದ ಪರ ಜಾನ್ ಕ್ಯಾಂಬೆಲ್, ಶಾಯಿ ಹೋಪ್ ಮತ್ತು ಅಮಿರ್ ಜಾಂಗೋ ಶತಕ ಸಿಡಿಸುವ ಮೂಲಕ ಮತ್ತೊಂದು ಅಪರೂಪದ ದಾಖಲೆಗೂ ಕಾರಣರಾದರು. ಏಕದಿನ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದು ಆರನೇ ಬಾರಿ.

ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್, 2015ರಲ್ಲಿ ದಕ್ಷಿಣ ಆಫ್ರಿಕಾ–ಭಾರತ, 2022ರಲ್ಲಿ ಇಂಗ್ಲೆಂಡ್–ನೆದರ್ಲ್ಯಾಂಡ್ಸ್, 2023ರಲ್ಲಿ ದಕ್ಷಿಣ ಆಫ್ರಿಕಾ–ಶ್ರೀಲಂಕಾ ಹಾಗೂ 2025ರಲ್ಲಿ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪಂದ್ಯಗಳಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿದ್ದರು.

ವೆಸ್ಟ್ ಇಂಡೀಸ್‌ಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದೇ ಮೊದಲ ಅನುಭವವಾಗಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡವೊಂದು ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕಗಳನ್ನು ದಾಖಲಿಸಿರುವುದು ಇದು ಎರಡನೇ ಬಾರಿ.

ಇದರೊಂದಿಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿದರೂ ಪಂದ್ಯ ಸೋತ ಮೊದಲ ತಂಡ ಎಂಬ ಅನಪೇಕ್ಷಿತ ದಾಖಲೆಯೂ ವೆಸ್ಟ್ ಇಂಡೀಸ್ ಪಾಲಾಗಿದೆ.

Ad Widget
Continue Reading

ರಾಷ್ಟ್ರೀಯ

ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮುಖ್ಯ ಚುನಾವಣ ಆಯುಕ್ತ ಜ್ಞಾನೇಶ್ ಕುಮಾರ್ ಆಹ್ವಾನಿಸಿದ್ದರು..! ನಿವೃತ್ತ ಐಎಎಸ್ ಅಧಿಕಾರಿ ಬಹಿರಂಗ

Published

on



Ad Widget

Ad Widget

Ad Widget

Ad Widget

ತಿರುವನಂತಪುರ: ‘2019ರ ಲೋಕಸಭಾ ಚುನಾವಣೆಯಲ್ಲಿ ಕೇರಳಂನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ತಮಗೆ ಆಹ್ವಾನ ನೀಡಿದ್ದರು’ ಎಂದು ಕೇರಳಂನ ಮಾಜಿ ಮುಖ್ಯ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಜಿಜಿ ಥಾಮ್ರನ್‌ ಬಹಿರಂಗಪಡಿಸಿದ್ದಾರೆ.

Ad Widget

Ad Widget

Ad Widget

Ad Widget

ಬಿಜೆಪಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾ‌ರ್ ನಡುವಿನ ಮೈತ್ರಿಯ ಕುರಿತು ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ಥಾಮ್ಸ್‌ನ್ ಅವರ ಹೇಳಿಕೆ ಹೊರಬಿದ್ದಿದೆ.

Ad Widget

Ad Widget

Ad Widget alt="Ad Widget"/>

Ad Widget

‘ಜ್ಞಾನೇಶ್ ಕುಮಾರ್ ಅವರನ್ನು ಬಿಜೆಪಿಯು ಆರಂಭದಲ್ಲಿ ಪಕ್ಷದ ನೇಮಕಾತಿ ಪ್ರಕ್ರಿಯೆಗೆ ಬಳಸಿಕೊಂಡಿತ್ತು. ನಂತರ ಅವರನ್ನು ‘ಅಂಪೈರ್’ ರೀತಿ ಮಾಡಿ, ಭಾರತದ ಚುನಾವಣೆಗಳನ್ನು `ಫಿಕ್ಸಿಂಗ್’ ಮಾಡುವ ಉಸ್ತುವಾರಿ ವಹಿಸಲಾಯಿತು’ ಎಂದು ಲೋಕಸಭೆಯ ವಿರೋಧ ಪಕ್ಷದ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Ad Widget

Ad Widget <> Ad Widget

2016ರಲ್ಲಿ ವಿಮಾನ ಪ್ರಯಾಣವೊಂದರ ಸಂದರ್ಭದಲ್ಲಿ ಜ್ಞಾನೇಶ್ ಕುಮಾ‌ರ್ ಅವರನ್ನು ಭೇಟಿಯಾದೆ. ಕೇರಳಂನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಅವರು ನನಗೆ ಸೂಚಿಸಿದರು. ನಾನು ಅದೇ ವರ್ಷ ನಿವೃತ್ತಿಯಾಗಲಿದ್ದೆ. ಕೇಂದ್ರ ಸಚಿವ ಕೂಡ ಆಗಲು ಅವಕಾಶವಿದೆ ಎಂದು ಅವರು ಹೇಳಿದರು. ಆದರೆ, ನನಗೆ ಆಸಕ್ತಿ ಇಲ್ಲದ ಕಾರಣ, ಆ ಆಹ್ವಾನವನ್ನು ನಿರಾಕರಿಸಿದೆ.



Ad Widget

ಬಿಜೆಪಿ ಮುಖಂಡರ ಬದಲು ಮುಖ್ಯ ಚುನಾವಣಾ ಆಯುಕ್ತರೇ ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದು ಆಶ್ಚರ್ಯ ತಂದಿತ್ತು’ ಎಂದು ಥಾಮ್ರನ್ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Ad Widget

Ad Widget

ಥಾಮ್ಪನ್ ಹಾಗೂ ಜ್ಞಾನೇಶ್ ಕುಮಾರ್ ಇಬ್ಬರೂ ಕೇರಳಂ ಕೇಡರ್‌ನ ಐಎಎಸ್‌ ಅಧಿಕಾರಿಗಳು. ಥಾಮ್ರನ್ 1980ರ ಹಾಗೂ ಕುಮಾರ್ 1988ರ ಬ್ಯಾಚ್‌ನ ಅಧಿಕಾರಿ. ಕೇರಳಂನ ಲೋಕೋಪಯೋಗಿ ಕಾರ್ಯದರ್ಶಿಯಾಗಿಯೂ ಜ್ಞಾನೇಶ್ ಕುಮಾರ್ ಕಾರ್ಯನಿರ್ವಹಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading