ದಕ್ಷಿಣ ಕನ್ನಡ
Dharmasthal dharmadhikaari Dr Veerendra Heggade ನ 24: ಸಾಮಾಜಿಕ ಹಾಗೂ ಧಾರ್ಮಿಕ ಕಳಕಳಿಯ ಕಾರ್ಯಕ್ರಮದ ಮೂಲಕ ಸಮಾಜಸೇವೆಯನ್ನು ಉಸಿರಾಗಿಸಿಕೊಂಡಿರುವ ಡಾ. ವೀರೇಂದ್ರ ಹೆಗ್ಗಡೆಯವರ 56ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ
ಧರ್ಮಸ್ಥಳ : ನ 23: ದಿನವೊಂದಕ್ಕೆ ಸಾವಿರಾರು ಭಕ್ತರು ಆಗಮಿಸುವ, ಧಾನ ಧರ್ಮಗಳಿಗೆ ಅನ್ವರ್ಥನಾಮವಾಗಿರುವ, ದಕ್ಷಿಣ ಭಾರತದ ಪ್ರಸಿದ್ದ ಪುಣ್ಯ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಕ್ಷೇತ್ರದ ಆಡಳಿತವನ್ನು ಅತ್ಯಂತ ಅಚ್ಚುಕಟ್ಟಾಗಿ, ಸುವ್ಯವಸ್ಥಿತವಾಗಿ ನಿರ್ವಹಿಸುತ್ತಿರುವ ಡಾ. ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾಗಿ ಅ 24ಕ್ಕೆ 56 ವರ್ಷ ಪೂರ್ಣಗೊಳ್ಳಲಿದೆ. ವರ್ಧಂತ್ಯುತ್ಸವದ ಪ್ರಯುಕ್ತ ಕ್ಷೇತ್ರದಲ್ಲಿ ಸಭೆ ಸಮಾರಂಭ ಜರುಗಲಿದೆ . ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಸನ್ಮಾನ, ಹೊಸ ಯೋಜನೆ, ಯೋಚನೆಗಳನ್ನು ಹೆಗ್ಗಡೆಯವರು ಈ ಸಂದರ್ಭ ಸಾರ್ವಜನಿಕರ ಮುಂದಿಡಲಿದ್ದಾರೆ
600 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಶ್ರೀ ಮಂಜುನಾಥ ಸ್ವಾಮಿ ಲಿಂಗ ರೂಪಿಯಾಗಿ ನೆಲೆಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಪಸರಿಸುತ್ತಿರುವ ಆಧ್ಯಾತ್ಮಿಕ ಪರಂಪರೆ ನಾಡಿನಾದ್ಯಂತ ಪ್ರಸಿದ್ಧ. ಸ್ವಾಮಿಯ ಸಾನಿಧ್ಯವು ಕ್ಷೇತ್ರವನ್ನು ಬೆಳಗುತ್ತಿದ್ದರೆ, ಅಲ್ಲಿನ ಆಡಳಿತ ಪರಂಪರೆ ಧಾರ್ಮಿಕ, ಸಾಮಾಜಿಕ ಕಾಳಜಿಯಿಂದ ಮುಂದುವರಿಯುತ್ತಿದ್ದು ಕ್ಷೇತ್ರದ ಹೆಸರನ್ನು ನಾಡಿನಾದ್ಯಂತ ಪಸರಿಸಲು ಕಾರಣವಾಗಿದೆ.
ನೂರಾರು ವರ್ಷಗಳಿಂದ ಹೆಗ್ಗಡೆ ವಂಶಸ್ಥರು ಕ್ಷೇತ್ರದ ಕೈಂಕರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ. ಆಯಾ ಕಾಲಕ್ಕೆ ತಕ್ಕಂತೆ ಅಂದಿನ ಹೆಗ್ಗಡೆಯವರು ಧರ್ಮಸ್ಥಳದ ಹೆಸರನ್ನು ಚಿರಸ್ಥಾಯಿಯಾಗಿಸಲು ಶ್ರಮಿಸಿದ್ದಾರೆ. ಇದೀಗ 21ನೇ ಹೆಗ್ಗಡೆಯವರಾಗಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕ್ಷೇತ್ರವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ
1968 ರ ಅ.24ರಂದು ತಮ್ಮ 20ನೇ ವಯಸ್ಸಿನಲ್ಲೇ ಕ್ಷೇತ್ರದ ಸೇವೆಗೆ ಕಟಿಬದ್ಧರಾದ ವೀರೇಂದ್ರ ಹೆಗ್ಗಡೆ ಅವರು ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಅವರಿಗೆ ದೇವಸ್ಥಾನದ ಜವಾಬ್ದಾರಿಯನ್ನು ಮಾತ್ರ ನೋಡಿಕೊಳ್ಳಬಹುದಿತ್ತು. ಆದರೆ ಅವರು ಹಾಗೆ ಮಾಡದೆ ದೇವಾಲಯದ ಮೂಲಕ ಸಮಾಜಸೇವೆಯನ್ನು ಮಾಡಬಹುದು, ಬಡವರ ಕಣ್ಣೀರೊರಸಬಹುದು ಎಂಬುದನ್ನು ಅಕ್ಷರಶಃ ತೋರಿಸಿಕೊಟ್ಟಿದ್ದಾರೆ ಮತ್ತು ಅದರಲ್ಲಿ ಯಶಸ್ವಿಯಾಗಿದ್ದಾರೆ.
ಮಾದರಿ ಗ್ರಾಮಾಭಿವೃದ್ಧಿ ಯೋಜನೆ:
ಡಾ. ವೀರೇಂದ್ರ ಹೆಗ್ಗಡೆಯವರು ಆರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯಾದ್ಯಂತ ವಿಸ್ತಾರಗೊಂಡು 55 ಲಕ್ಷ ಕುಟುಂಬಗಳು ಬೆಳಗಲು ಕಾರಣವಾಗಿದೆ. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಮೂಲಕ ಅನೇಕ ಕಾಲೇಜುಗಳ ಸ್ಥಾಪನೆಯಾಗಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಯೋಗ್ಯ ಶಿಕ್ಷಣ ಪಡೆಯುವಂತಾಗಿದೆ. ಅಲ್ಲದೆ ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ. ಸಾವಿರಾರು ನಿರುದ್ಯೋಗಿಗಳನ್ನು ಉದ್ಯೋಗಿಗಳನ್ನಾಗಿ ಮಾಡಿರುವ ಹೆಗ್ಗಳಿಕೆ ಇವರ ರುಡ್‌ಸೆಟಿ ಸಂಸ್ಥೆಯದು. ಇದು ರಾಷ್ಟ್ರವ್ಯಾಪಿಯಾಗಿ ಗುರುತಿಸಿಕೊಂಡು ಆರ್ ಸೆಟಿಯಾಗಿ ಕಾರ್ಯನಿರ್ವಹಿಸುತ್ತಿದೆ.
ರಾಜ್ಯದ ದೇವಾಲಯ, ಬಸದಿಗಳ ನವೀಕರಣ, 700 ಕೆರೆಗಳ ಪುನಶ್ವೇತನ, ವಾತ್ಸಲ್ಯ ಕಾರ್ಯಕ್ರಮದಡಿ 16,821 ಮಂದಿ ಹಿರಿಯ ಜೀವಿಗಳಿಗೆ ಮಾಸಾಶನ, ಮನೆ ನಿರ್ಮಾಣ, ಮದ್ಯ ವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತ ಸಮಾಜದ ನಿರ್ಮಾಣದ ಪ್ರಯತ್ನ, ಶುದ್ಧಗಂಗಾ ಯೋಜನೆಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಸಿರಿ ಗ್ರಾಮೋದ್ಯೋಗದ ಮೂಲಕ ಉದ್ಯೋಗ ಸೃಷ್ಟಿ, ಚಿತ್ರಕಲೆ, ಭಜನೆ, ಯೋಗಕ್ಕೆ ಪ್ರಚಾರ ಹೀಗೆ ಇನ್ನೂ ಹಲವಾರು ಪ್ರಕಲ್ಪಗಳನ್ನು ಸಮಾಜಕ್ಕೆ ಅರ್ಪಿಸಿದ್ದಾರೆ.
ಉನ್ನತ ಪುರಸ್ಕಾರಗಳಲ್ಲೊಂದಾದ ಪದ್ಮವಿಭೂಷಣ ಹೆಗ್ಗಡೆಯವರ ಸೇವಾಕಾರ್ಯಕ್ಕೆ ಸಂದ ಗೌರವ, ಪ್ರಧಾನಿ ನರೇಂದ್ರ ಮೋದಿಯವರು ಹೆಗ್ಗಡೆಯವರ ಚಟುವಟಿಕೆಗಳಿಂದ ಪ್ರಭಾವಿತಗೊಂಡು ರಾಜ್ಯಸಭಾ ಸದಸ್ಯತ್ವ ನೀಡಿ ಗೌರವಿಸಿದ್ದಾರೆ.
ಶಿಕ್ಷಣ
Vidyamata-ಕರಾವಳಿಯ ಯುವಜನತೆಯ ಉದ್ಯೋಗ ಸ್ವಪ್ನಕ್ಕೆ ‘ವಿದ್ಯಾಮಾತಾ’ ಆಸರೆ: ಬರಿ ಅಂಕಗಳಷ್ಟೇ ಅಲ್ಲ, ಬದುಕನ್ನು ಗೆಲ್ಲುವ ಕೌಶಲ್ಯವೇ ನಿಜವಾದ ಶಕ್ತಿ
ಸ್ಪರ್ಧಾತ್ಮಕ ಜಾಗೃತಿಯಿಲ್ಲದ ಇಂತಹ ವಾತಾವರಣದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಎಪಿಎಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ‘ವಿದ್ಯಾಮಾತಾ ಅಕಾಡೆಮಿ’ ನೂತನ ಪ್ರಯೋಗಗಳ ಮೂಲಕ ಯಶಸ್ಸು ಕಂಡು ಕರಾವಳಿಯಲ್ಲೇ ಪ್ರಥಮವೆನಿಸಿದೆ. ಇತ್ತೀಚೆಗೆ ಪ್ರಖ್ಯಾತ ‘Times of India’ ಇಂಗ್ಲಿಷ್ ದಿನಪತ್ರಿಕೆಯೂ ಸಹ ವಿದ್ಯಾಮಾತಾ ಅಕಾಡೆಮಿಯ ಈ ಶೈಕ್ಷಣಿಕ ಬದಲಾವಣೆಯ ಹಾದಿಯನ್ನು ವಿಶೇಷವಾಗಿ ಶ್ಲಾಘಿಸಿ ವರದಿ ಮಾಡಿದೆ.

ಪುತ್ತೂರು: ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಕರಾವಳಿ ಭಾಗದಲ್ಲಿ ಪದವೀಧರರ ಮಹಾಪೂರವಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಿವಿಲ್ ಸರ್ವೀಸಸ್ ಹಾಗೂ ರಕ್ಷಣಾ ಪಡೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಭಾಗದ ಯುವಕರ ಭಾಗವಹಿಸುವಿಕೆ ಹಿಂದಿನಿಂದಲೂ ಕಡಿಮೆಯಿತ್ತು. ಹೆಚ್ಚಿನ ವಿದ್ಯಾರ್ಥಿಗಳು ಕೇವಲ ಸಾಂಪ್ರದಾಯಿಕ ಉದ್ಯೋಗಗಳು ಅಥವಾ ಗಲ್ಫ್ ದೇಶಗಳ ವಲಸೆಗೆ ಸೀಮಿತರಾಗಿದ್ದರು. ಸ್ಪರ್ಧಾತ್ಮಕ ಜಾಗೃತಿಯಿಲ್ಲದ ಇಂತಹ ವಾತಾವರಣದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಎಪಿಎಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ‘ವಿದ್ಯಾಮಾತಾ ಅಕಾಡೆಮಿ’ ನೂತನ ಪ್ರಯೋಗಗಳ ಮೂಲಕ ಯಶಸ್ಸು ಕಂಡು ಕರಾವಳಿಯಲ್ಲೇ ಪ್ರಥಮವೆನಿಸಿದೆ. ಇತ್ತೀಚೆಗೆ ಪ್ರಖ್ಯಾತ ‘Times of India’ ಇಂಗ್ಲಿಷ್ ದಿನಪತ್ರಿಕೆಯೂ ಸಹ ವಿದ್ಯಾಮಾತಾ ಅಕಾಡೆಮಿಯ ಈ ಶೈಕ್ಷಣಿಕ ಬದಲಾವಣೆಯ ಹಾದಿಯನ್ನು ವಿಶೇಷವಾಗಿ ಶ್ಲಾಘಿಸಿ ವರದಿ ಮಾಡಿದೆ.
ಸಾಮಾನ್ಯವಾಗಿ ದೊಡ್ಡ ಮಟ್ಟದ ಕೋಚಿಂಗ್ ಸಂಸ್ಥೆಗಳು ನೂರರಲ್ಲಿ ಒಬ್ಬರು IAS ಅಥವಾ KAS ಅಧಿಕಾರಿಯಾದರೆ ಆ ಯಶಸ್ಸನ್ನು ಮಾತ್ರ ದೊಡ್ಡದಾಗಿ ಬಿಂಬಿಸುತ್ತವೆ. ಆದರೆ, ಆ ಪ್ರಕ್ರಿಯೆಯಲ್ಲಿ ಸ್ಪರ್ಧೆಗಿಳಿದು ಸೋತ ಉಳಿದ 99 ವಿದ್ಯಾರ್ಥಿಗಳ ಭವಿಷ್ಯದ ಕಥೆಯೇನು ಎಂಬ ಆಳವಾದ ಸಾಮಾಜಿಕ ಪ್ರಶ್ನೆಯನ್ನು ವಿದ್ಯಾಮಾತಾ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ಭಾಗ್ಯೇಶ್ ರೈ ಮುಂದಿಟ್ಟಿದ್ದಾರೆ. ಒಬ್ಬ ವಿಜೇತನನ್ನು ರೂಪಿಸುವಷ್ಟೇ ಗಂಭೀರವಾಗಿ, ಅಲ್ಲಿ ಹಿನ್ನಡೆ ಅನುಭವಿಸುವ ಉಳಿದ 99 ವಿದ್ಯಾರ್ಥಿಗಳ ಬದುಕಿಗೂ ಭದ್ರತೆ ಮತ್ತು ಆತ್ಮವಿಶ್ವಾಸ ನೀಡುವುದು ನಮ್ಮ ಜವಾಬ್ದಾರಿ ಎಂಬುದು ಸಂಸ್ಥೆಯ ಮೂಲ ಮಂತ್ರವಾಗಿದೆ.
ಇಂದಿನ ಶಿಕ್ಷಣ ಪದ್ಧತಿಯಲ್ಲಿ ಕೇವಲ ಅಂಕಗಳ ಬೆನ್ನೇರುವ ಯುವಜನತೆಗೆ ಪ್ರಾಯೋಗಿಕ ಕೌಶಲ್ಯ, ಸಂವಹನ ಕಲೆ ಹಾಗೂ ವಾಸ್ತವ ಜಗತ್ತಿನ ಸವಾಲುಗಳನ್ನು ಎದುರಿಸುವ ತಾಕತ್ತು ಕೊರತೆಯಿದೆ. ಸ್ನಾತಕೋತ್ತರ ಪದವಿ ಪಡೆದರೂ ಕನಿಷ್ಠ ಸ್ವ-ಪರಿಚಯ ಮಾಡಿಕೊಳ್ಳಲು ಅಥವಾ ಕಂಪ್ಯೂಟರ್ ನಿರ್ವಹಿಸಲು ಬಾರದ ಇಂದಿನ ಸ್ಥಿತಿಯನ್ನು ಬದಲಾಯಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸ್ವಾವಲಂಬನೆಯನ್ನು ತುಂಬುವ ಕೆಲಸ ಇಲ್ಲಿ ನಡೆಯುತ್ತಿದೆ.
ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಿರ್ಣಾಯಕ ಹಂತದಲ್ಲಿ ಸಮಯವನ್ನು ವ್ಯರ್ಥ ಮಾಡದಂತೆ ಸಂಸ್ಥೆಯು ‘ಕಲಿಕೆಯೊಂದಿಗೆ ಗಳಿಕೆ’ ಎನ್ನುವ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. ಪಿಯುಸಿ (PUC) ಮುಗಿದ ಕೂಡಲೇ ದೂರಶಿಕ್ಷಣದ ಮೂಲಕ ಡಿಗ್ರಿ (ಬಿ.ಎ, ಬಿ.ಕಾಮ್, ಬಿ.ಬಿ.ಎ) ವ್ಯಾಸಂಗಕ್ಕೆ ದಾಖಲಾಗಿ, ಅದೇ ಮೂರು ವರ್ಷಗಳ ಅವಧಿಯಲ್ಲಿ ಐಎಎಸ್, ಕೆಎಎಸ್, ಬ್ಯಾಂಕಿಂಗ್, ಪೊಲೀಸ್ ಹಾಗೂ ರರಣಾ ಪಡೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಾನಾಂತರ ತರಬೇತಿ ಪಡೆಯಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಯು ಪದವಿ ಮುಗಿಸುವ ವೇಳೆಗೆ ಸರ್ಕಾರದ ಉದ್ಯೋಗ ಅಥವಾ ಉನ್ನತ ಖಾಸಗಿ ವಲಯದಲ್ಲಿ ನೆಲೆಗೊಳ್ಳಲು ಸಂಪೂರ್ಣ ಸಿದ್ಧನಾಗಿರುತ್ತಾನೆ.
ವಿಶೇಷವಾಗಿ ಭಾರತೀಯ ಭೂಸೇನೆ (Agniveer), ವಾಯುಸೇನೆ, ನೌಕಾಸೇನೆ, ಅರೆಮಿಲಿಟರಿ ಪಡೆಗಳು, ಕರ್ನಾಟಕ ಪೊಲೀಸ್ ಹಾಗೂ ಅರಣ್ಯ ಇಲಾಖೆಗಳ ನೇಮಕಾತಿಗಾಗಿ ಯುವಕರಿಗೆ 17ನೇ ವಯಸ್ಸಿನಿಂದಲೇ ಸುವರ್ಣ ಅವಕಾಶಗಳಿವೆ. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಲಿಖಿತ ಪರೀಕ್ಷೆಯಷ್ಟೇ ಅಲ್ಲದೆ, ನುರಿತ ತರಬೇತುದಾರರಿಂದ ಮೈದಾನದಲ್ಲಿ ದೈಹಿಕ ಕ್ಷಮತೆ ಮತ್ತು ಕಠಿಣ ತರಬೇತಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ ನವೋದಯ, ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆಗಳು, KAR-TET, KSET, NET, HSTR, PSTR, GPSTR ನಂತಹ ಶೈಕ್ಷಣಿಕ ಹಾಗೂ ಬೋಧನಾ ಅರ್ಹತಾ ಪರೀಕ್ಷೆಗಳಿಗೂ ಇಲ್ಲಿ ಅತ್ಯುತ್ತಮ ತರಬೇತಿ ಲಭ್ಯವಿದೆ.
ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ ಅವರ ನೇತೃತ್ವದಲ್ಲಿ ಸಂಸ್ಥೆಯು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ದಿನದ 24 ಗಂಟೆಯೂ ನಿರಾಳವಾಗಿ ಓದಲು ‘ದೇವಿದ್ಯಾ’ 24×7 ಸದಾಶಿವ ಅಧ್ಯಯನ ಗ್ರಂಥಾಲಯ ಹಾಗೂ AI ಚಾಲಿತ ಡಿಜಿಟಲ್ ಇಂಟರಾಕ್ಟಿವ್ ಪ್ಯಾನಲ್‌ಗಳನ್ನು ಹೊಂದಿರುವ ‘ಸ್ತುತ್ಯ’ ಸ್ಮಾರ್ಟ್ ಕ್ಲಾಸ್‌ರೂಮ್‌ಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇದರೊಂದಿಗೆ ಟ್ಯಾಲಿ ಪ್ರೈಮ್, ಪ್ರಾಯೋಗಿಕ ಅಕೌಂಟಿಂಗ್, ಗಲ್ಫ್ ವ್ಯಾಟ್ (Gulf VAT), ಡೇಟಾ ಅನಾಲಿಟಿಕ್ಸ್, ಕೋಡ್-ಆರ್ಕಿಟೆಕ್ಟ್ ಪ್ರೋಗ್ರಾಮಿಂಗ್ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿಗಳನ್ನು ನೀಡುವುದರ ಮೂಲಕ ಕರಾವಳಿಯ ಯುವಜನತೆಯನ್ನು ಜಾಗತಿಕ ಮಟ್ಟದ ಉದ್ಯೋಗಗಳಿಗೆ ಸಜ್ಜುಗೊಳಿಸಲಾಗುತ್ತಿದೆ. ಬರಿ ಅಂಕಗಳ ಕಾರ್ಖಾನೆಯಾಗದೆ, ಬದುಕಿನ ಪ್ರತಿ ಹಂತದಲ್ಲೂ ವಿದ್ಯಾರ್ಥಿಗೆ ಭರವಸೆಯ ದಾರಿದೀಪವಾಗುವ ಮೂಲಕ ವಿದ್ಯಾಮಾತಾ ಅಕಾಡೆಮಿಯು ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ.
ಮಂಗಳೂರು
Mulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್‌ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ
ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು: ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಲಕ್ಷ್ಮಿ ಗಣೇಶ್ ಹೆಸರಿನ ಎಕ್ಸ್‌ಪ್ರೆಸ್ ಬಸ್ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಗಿಡುಗ ಬಸ್‌ನ ಮುಂಭಾಗದ ಗಾಜಿಗೆ ಬಡಿದಿದೆ. ಇದರಿಂದ ಗಾಜು ಒಡೆದು ಚೂರುಚೂರಾಗಿದೆ.
ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾದರೂ, ಚಾಲಕ ಹರೀಶ್ ಪೂಜಾರಿ ಅವರು ವಿಚಲಿತರಾಗದೆ ಸಮಯಪ್ರಜ್ಞೆಯಿಂದ ಬಸ್ ನಿಲ್ಲಿಸಿದ್ದಾರೆ. ಅವರ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬಸ್ ಚಾಲಕ ಪುತ್ತೂರಿನ ಸಂಟ್ಯಾರು ಕೂರೇಲು ನಿವಾಸಿ ಹರೀಶ್ ಪೂಜಾರಿ ಮೇಲೆ ಗಾಜಿನ ಚೂರುಗಳು ಬಿದ್ದು ಗಾಯಗೊಂಡಿದ್ದರು ಅವರು ವೇಗವಾಗಿ ಹೋಗುತ್ತಿದ್ದ ಬಸ್ ನ್ನು ತಕ್ಷಣ ನಿಯಂತ್ರಿಸಿದ್ದಾರೆ. ಅವಘಡ ಸಂದರ್ಭ ಡ್ರೈವರ್ ಸ್ಟೇರೀಂಗ್ ಕೈಬಿಟ್ಟದ್ದರೂ ಬಸ್ ಡಿವೈಡರ್ ಹಾರಿ ಭಾರೀ ಅವಘಡ ಸಂಭವಿಸುತ್ತಿತ್ತು ಎನ್ನಲಾಗಿದೆ.
ಮಂಗಳೂರು
Ujire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.
ಉಜಿರೆಯಿಂದ ಆರಂಭವಾದ ಬೃಹತ್ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಮೌನ ಮೆರವಣಿಗೆಯ ಮೂಲಕ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಲಾಯಿತು. ಸುಮಾರು ಐದು ಕಿಲೋಮೀಟರ್ ದೂರದವರೆಗೆ ಹೋರಾಟಗಾರರು ನಡಿಗೆಯಲ್ಲಿ ಸಾಗಲಿದ್ದಾರೆ.
ನ್ಯಾಯದ ನಡಿಗೆಯ ಬಳಿಕ ಬೆಳ್ತಂಗಡಿಯ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾವೇಶ ನಡೆಯಲಿದೆ. ಸೌಜನ್ಯ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲರ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಕೀಲರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
-
Uncategorized13 hours ago
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ
-
Uncategorized16 hours ago
ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ!
-
Uncategorized15 hours ago
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ
-
Uncategorized17 hours ago
ಪುತ್ತೂರು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ
-
Uncategorized16 hours ago
ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ
-
Uncategorized15 hours ago
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್ಫುಲ್ |
-
ಶಿಕ್ಷಣ13 minutes agoVidyamata-ಕರಾವಳಿಯ ಯುವಜನತೆಯ ಉದ್ಯೋಗ ಸ್ವಪ್ನಕ್ಕೆ ‘ವಿದ್ಯಾಮಾತಾ’ ಆಸರೆ: ಬರಿ ಅಂಕಗಳಷ್ಟೇ ಅಲ್ಲ, ಬದುಕನ್ನು ಗೆಲ್ಲುವ ಕೌಶಲ್ಯವೇ ನಿಜವಾದ ಶಕ್ತಿ
-
ಸ್ಥಳೀಯ8 minutes agoSharavuru-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ


















