Connect with us

ಬಿಗ್ ನ್ಯೂಸ್

Karnataka BJP | ಎಸ್ಸಿ ಮೀಸಲು ಕ್ಷೇತ್ರದಲ್ಲೂ ಬಿಜೆಪಿ ಟಿಕೇಟ್ ಡೀಲ್..! ರಾಜ್ಯಾಧ್ಯಕ್ಷರ ಹೆಸರೇ ಉಲ್ಲೇಖ : ಕೊಟ್ಟೂರು ಮತ್ತು ಪುತ್ತೂರಿನಲ್ಲಿ ದೂರು ದಾಖಲು – ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ

Published

on



Ad Widget

Ad Widget

Ad Widget

Ad Widget

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (Karnataka BJP) ಹೀನಾಯವಾಗಿ ಸೋತ ಬಳಿಕ ಪಕ್ಷದ ಒಂದೊಂದೆ ಹುಳುಕುಗಳು ಹೊರ ಬರಲು ಆರಂಭಿಸಿದೆ . ಹಿಂದೂ ಪರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಹಾಗೂ ಬಿಜೆಪಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಮುಖ ಭಾಷಣಕಾರ್ತಿಯಾಗಿದ್ದ ಚೈತ್ರಾ ಕುಂದಾಪುರ ಹಾಲಶ್ರೀ ಸ್ವಾಮೀಜಿ ಜತೆ ಸೇರಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯೊಬ್ಬರಿಗೆ ಟಿಕೆಟ್‌ ಕೊಡುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ಹಣ ವಂಚಿಸಿದ ಪ್ರಕರಣ ಹಸಿ ಹಸಿಯಾಗಿರುವಾಗಲೇ ಬಿಜೆಪಿಯ ಮತ್ತೊಂದು ಟಿಕೆಟ್‌ ವಂಚನೆಯ ಪ್ರಕರಣ ಮುನ್ನಲೆಗೆ ಬಂದಿದೆ.

Ad Widget

Ad Widget

Ad Widget

Ad Widget

ಈ ಪ್ರಕರಣದಲ್ಲಿ ಟಿಕೆಟ್‌ ಆಕಾಂಕ್ಷಿಯು ದೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಟಿಕೆಟ್‌ ಗಾಗಿ ಹಣ ನೀಡಿ ವಂಚನೆಗೊಳಗಾದ ಶಿವಮೂರ್ತಿ ಖುದ್ದು ನಳೀನ್‌ ಬಳಿಯೂ ಟಿಕೆಟ್‌ ವಿಚಾರ ಮಾತನಾಡಿದ್ದಾರೆ ಎನ್ನುವುದನ್ನು ದೂರಿನಲ್ಲಿ ಉಲ್ಲೇಖಿಸಿದ್ದು, ಇದು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಈ ಕುರಿತು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಎರಡು ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಸಿ.ಶಿವಮೂರ್ತಿ ತಂದೆ ಬಸಪ್ಪ, ನಿವೃತ್ತ ಸಹಾಯಕ ಅಭಿಯಂತರರು ಪಿಡಬ್ಲ್ಯೂಡಿ ವಾಸ ಹನಸಿ ಗ್ರಾಮ, ಹಗರಿಬೊಮ್ಮನಹಳ್ಳಿ ತಾಲೂಕು, ಹಾಲಿ ವಾಸ ಬಸವೇಶ್ವರನಗರ ಕೊಟ್ಟೂರುಪಟ್ಟಣ ವಿಜಯನಗರ ಎಂಬವರು ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ತನಗೆ ಟಿಕೆಟ್‌ ಕೊಡುವುದಾಗಿ ನಂಬಿಸಿ ಇಬ್ಬರು 2 ಕೋಟಿ 3 ಲಕ್ಷ ರೂ.ಹಣ ಪಡೆದು ವಂಚಿಸಿದ್ದಾರೆಂದು ಆರೋಪಿಸಿದ್ದಾರೆ.

Ad Widget

Ad Widget <> Ad Widget

ಬೆನಕನಹಳ್ಳಿ ಗ್ರಾಮದ ಬಿಜೆಪಿ ಮುಖಂಡರಾದ ರೇವಣ ಸಿದ್ಧಪ್ಪ ಹಾಗು ಪುತ್ತೂರು ಬಿಜೆಪಿ ಮುಖಂಡ ಶೇಖರ್ ಎನ್.ಪಿ.(ಪುರುಷೋತ್ತಮ ನಿಕಟ್ಟೆರವರ ಮಗ) ವಂಚಿಸಿದವರೆಂದು ದೂರಿನಲ್ಲಿ ಆರೋಪಿಸಿಲಾಗಿದೆ. ಇವರ ವಿರುದ್ದ ಐಪಿಸಿ 1860(T/o 420,506,34)ಯಡಿ ಪ್ರಕರಣ ದಾಖಲಾಗಿದೆ.



Ad Widget

ಮೊದಲ ಪ್ರಕರಣ ಆರೋಪಿಯಾಗಿರುವ ಶೇಖರ್ ಎನ್.ಪಿ. ಅವರು ಪುತ್ತೂರು ನಗರ ಠಾಣೆಯಲ್ಲಿ ಟಿಕೆಟ್‌ ಆಕಾಂಕ್ಷಿ ಸಿ.ಶಿವಮೂರ್ತಿ ಹಾಗೂ ಪುತ್ತೂರು ನಿವಾಸಿಗಳಾದ ಪನಡ್ಕ ನವೀನ್‌ ರೈ ಕೈಕಾರ ಹಾಗೂ ಶ್ಯಾಮ್‌ ಸುದರ್ಶನ್‌ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

Ad Widget

Ad Widget

ಟಿಕೆಟ್‌ ಆಕಾಂಕ್ಷಿ ಸಿ.ಶಿವಮೂರ್ತಿ ದೂರಿನಲ್ಲಿ ನಳಿನ್‌ ಹೆಸರು ಪ್ರಸ್ತಾಪ ಆರೋಪಿಗಳಾದ ರೇವಣ ಸಿದ್ದಪ್ಪ ಮತ್ತು ಎನ್.ಪಿ.ಶೇಖರ್ ನನಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎನ್.ಸಿ.ಮೀಸಲು ಕ್ಷೇತ್ರದ ಬಿಜೆಪಿ ಟೆಕೆಟ್ ಕೊಡಿಸುವುದಾಗಿ ನಂಬಿಸಿದ್ದರು. ಬಳಿಕ ಶೇಖರ್‌ ಎನ್‌ ಪಿಯವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಬೆಂಗಳೂರಿನ ಕಛೇರಿಗೆ ಕರೆದುಕೊಂಡು ಹೋಗಿರುತ್ತಾರೆ.

ತನಗೆ ನಳಿನ್‌ ಆತ್ಮೀಯ ಸ್ನೇಹಿತ ಎಂದು ತಿಳಿಸಿದ ಶೇಖರ್‌ ಅವರನ್ನು ನನಗೆ ಪರಿಚಯಿಸಿದ್ದಾರೆ. ಬಳಿಕ ಟಿಕೆಟ್‌ ವಿಚಾರದ ಎಲ್ಲಾ ವ್ಯವಹಾರವನ್ನು ಶೇಖರ್‌ ಬಳಿ ಮಾತನಾಡಿ ಎಂದು ನಳಿನ್‌ ಕುಮಾರ್‌  ಹೇಳಿದ್ದರು ಎಂದು ಶಿವ ಮೂರ್ತಿ ದೂರಿನಲ್ಲಿ ಹೆಸರಿಸಿದ್ದಾರೆ ತದ ನಂತರದ ದಿನಗಳಲ್ಲಿ ಆರೋಪಿಗಳು ದಿನಾಂಕ 9.-10. -2022ರಿಂದ 30-. 04-. 2023ರ ಮಧ್ಯದ ಅವಧಿಯಲ್ಲಿ ಒಟ್ಟು 2 ಕೋಟಿ 03 ಲಕ್ಷ ರೂ.ಹಣವನ್ನು ಪಡೆದುಕೊಂಡಿದ್ದರು. ಆದರೇ ಟಿಕೆಟ್ ಕೂಡಿಸದೆ ವಂಚಿಸಿದ್ದಾರೆ. ಹೀಗಾಗಿ ಹಣವನ್ನು ವಾಪಸ್ ಕೊಡುವಂತ ಅವರಲ್ಲಿ ಹೇಳಿದ್ದು, ಹಣಕ್ಕೆ ಪೀಡಿಸಿದರೆ ನಿನನ್ನು ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಶಿವಮೂರ್ತಿಯವರು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಯಾಗಿರುವ ಶೇಖ‌ರ್ ಎನ್.ಪಿ.ಯಾನೆ ರಾಜಶೇಖರ್‌ರವರು ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್‌ ಪುತ್ತಿಲ ಪರ ಪ್ರಚಾರದಲ್ಲಿ ಬಹಿರಂಗವಾಗಿ ಗುರುತಿಸಿಕೊಂಡಿದ್ದರು.

ಎರಡನೇ ದೂರಿನಲ್ಲಿ ಏನಿದೆ? ಉದ್ಯಮಿ ಶೇಖರ್ ಎನ್.ಪಿಯವರು ವಿಜಯನನಗರ ಜಿಲ್ಲೆಯ ಬೊಮ್ಮನ ಹಳ್ಳಿ ನಿವಾಸಿ ಶಿವಮೂರ್ತಿ ಎಂಬವರಿಗೆ ಒಂದು ವರ್ಷದಲ್ಲಿ ಲಾಭಾಂಶ ಸಹಿತ ಮರುಪಾವತಿ ಮಾಡುವ ಒಪ್ಪಂದದೊಂದಿಗೆ ಹೊಯಿಗೆ ವ್ಯವಹಾರಕ್ಕಾಗಿ 2022 ಫೆಬ್ರವರಿಯಲ್ಲಿ 90 ಲಕ್ಷ ರೂಪಾಯಿ ಸಾಲವನ್ನು ನೀಡಿದ್ದರು ಹಾಗೂ ಇದಕ್ಕೆ ಪ್ರತಿಯಾಗಿ ಶಿವಮೂರ್ತಿಯವರು ಚೆಕ್‌ ನೀಡಿದ್ದರು.

ವರ್ಷದ ಬಳಿಕ ಶಿವಮೋರ್ತಿ ನೀಡಿದ್ದ ಚೆಕ್ ಗಳನ್ನು ಬ್ಯಾಂಕ್ ಗೆ ಹಾಕಿದ್ದು, ಅದು ಬೌನ್ಸ್‌ ಆಗಿದೆ. ನಂತರ ಆರೋಪಿಯು 2023 ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಸಾಲದ ಹಣವನ್ನು ಹಂತ ಹಂತವಾಗಿ ನೀಡಿದ್ದು, ಉಳಿದ ರೂ.56,50,000/- ಹಣವನ್ನು ಸ್ವಲ್ಪ ದಿನದ ಬಳಿಕ ಹಿಂದಿರುಗಿಸುವುದಾಗಿ ಒಪ್ಪಿಕೊಂಡಿದ್ದರು. ಆದರೇ ಬಳಿಕದ ದಿನಗಳಲ್ಲಿ ಶಿವಮೂರ್ತಿಯವರು ಹಣ ನೀಡದೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಶುರು ಮಾಡಿದ್ದಾರೆ.

ನನಗೆ ನೀಡಬೇಕಿದ್ದ 20 ಲಕ್ಷ ರೂಪಾಯಿಯನ್ನು ಶ್ಯಾಮ್ ಸುದರ್ಶನ್ ಹಾಗೂ ನವೀನ್ ರೈ ಕೈಕಾರ ಎಂಬವರಿಗೆ ನೀಡಿ ಆ ಹಣವನ್ನು ಅವರಿಂದ ಪಡೆದುಕೊಳ್ಳಿ ಎಂದು ಶಿವಮೂರ್ತಿ ನನಗೆ ತಿಳಿಸಿರುವುದಾಗಿ ಶೇಖರ್‌ ಆರೋಪಿಸಿದ್ದಾರೆ. ದಿನಾಂಕ 16.-10.- 2023 ರಂದು ಶೇಖರ್ ರವರಿಗೆ ಕರೆ ಮಾಡಿದ ಆರೋಪಿ ಶಿವಮೂರ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿ ಹಣ ನೀಡುವುದಿಲ್ಲ ಎಂದು ತಿಳಿಸಿರುತ್ತಾರೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಶಿವಮೂರ್ತಿ, ಶ್ಯಾಮ್ ಸುದರ್ಶನ್ ಹಾಗೂ ನವೀನ್ ರೈ ಕೈಕಾರ ವಿರುದ್ಧ ಐಪಿಸಿ ಕಲಂ 420 504, 537, 34 ರಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget
Click to comment

Leave a Reply

ಬಿಗ್ ನ್ಯೂಸ್

Green card-ಇನ್ಫೋಸಿಸ್, ಟಿಸಿಎಸ್ ಸೇರಿ 8 ಐಟಿ ಕಂಪನಿಗಳಿಗೆ ಅಮೆರಿಕದ ಗ್ರೀನ್ ಕಾರ್ಡ್ ಪ್ರಕ್ರಿಯೆ ಸ್ಥಗಿತ

Published

on



Ad Widget

Ad Widget

Ad Widget

Ad Widget

ಭಾರತದ ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ವಿಪ್ರೋ ಮತ್ತು ಎಚ್‌ಸಿಎಲ್ ಸೇರಿದಂತೆ ಎಂಟು ಕಂಪನಿಗಳಿಗೆ ಸಂಬಂಧಿಸಿದ ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳ ಪ್ರಕ್ರಿಯೆಯನ್ನು ಅಮೆರಿಕ ಅಮಾನತುಗೊಳಿಸಿದೆ ಎಂಬ ವರದಿ ಹೊರಬಿದ್ದಿದೆ.

Ad Widget

Ad Widget

Ad Widget

Ad Widget

ವಾಷಿಂಗ್ಟನ್: ಭಾರತದ ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ವಿಪ್ರೋ ಮತ್ತು ಎಚ್‌ಸಿಎಲ್ ಸೇರಿದಂತೆ ಎಂಟು ಕಂಪನಿಗಳಿಗೆ ಸಂಬಂಧಿಸಿದ ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳ ಪ್ರಕ್ರಿಯೆಯನ್ನು ಅಮೆರಿಕ ಅಮಾನತುಗೊಳಿಸಿದೆ ಎಂಬ ವರದಿ ಹೊರಬಿದ್ದಿದೆ. ಈ ಕ್ರಮವು ಸಂಬಂಧಿತ ಕಂಪನಿಗಳ ಮೂಲಕ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿರುವ ವಿದೇಶಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಅಮೆರಿಕದ ಕಾರ್ಮಿಕ ಸಚಿವ ಕೀತ್ ಸೋಂಡರ್ಲಿಂಗ್ ಹಾಗೂ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಈ ಕುರಿತು ಘೋಷಣೆ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಗ್ನಿಜೆಂಟ್, ಇನ್ಫೋಸಿಸ್, ಟಾಟಾ, ವಿಪ್ರೋ, ಎಚ್‌ಸಿಎಲ್, ಕ್ಯಾಪ್‌ಜೆಮಿನಿ, ಮೈಕ್ರೋಸಾಫ್ಟ್ ಮತ್ತು ಅಡೋಬ್ ಕಂಪನಿಗಳಿಗೆ ಸಂಬಂಧಿಸಿದ ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.

Ad Widget

Ad Widget <> Ad Widget

ಈ ಕಂಪನಿಗಳಿಗೆ ಸಂಬಂಧಿಸಿದ ಹೊಸ ಅರ್ಜಿಗಳು ಹಾಗೂ ಬಾಕಿ ಉಳಿದಿರುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಅಥವಾ ಪ್ರಕ್ರಿಯೆಗೊಳಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.



Ad Widget

ಸೋಂಡರ್ಲಿಂಗ್ ಅವರ ಹೇಳಿಕೆಯ ಪ್ರಕಾರ, 2009ರಿಂದ ಈ ಕಂಪನಿಗಳು ಸುಮಾರು 30 ಲಕ್ಷ ವಿದೇಶಿ ಉದ್ಯೋಗಿಗಳಿಗಾಗಿ ಮನವಿ ಸಲ್ಲಿಸಿವೆ. ಈ ಪೈಕಿ 2.3 ಲಕ್ಷಕ್ಕೂ ಹೆಚ್ಚು ಎಚ್‌-1ಬಿ ವೀಸಾ ಅನುಮೋದನೆಗಳು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳನ್ನು ಪಡೆದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Continue Reading

ಸಿನೆಮಾ

Nana Patekar-ನಾನಾ ಪಾಟೇಕರ್ ಸಾವಿಗೆ ನಿಖರ ಕಾರಣವೇನು? ಗೋವಾ ಪೊಲೀಸರಿಂದ ಅಸಹಜ ಸಾವು ಪ್ರಕರಣ ದಾಖಲು

Published

on



Ad Widget

Ad Widget

Ad Widget

Ad Widget

ಹಿರಿಯ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಉಪನಿರೀಕ್ಷಕ ನಿತಿನ್ ನಾಯಕ್ ತನಿಖೆ ನಡೆಸುತ್ತಿದ್ದಾರೆ.

Ad Widget

Ad Widget

Ad Widget

Ad Widget

ಪಣಜಿ: ಹಿರಿಯ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಉಪನಿರೀಕ್ಷಕ ನಿತಿನ್ ನಾಯಕ್ ತನಿಖೆ ನಡೆಸುತ್ತಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಡೋನಾ ಪೌಲಾದ ಓಷನ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಿಂದ ಬಾಂಬೋಲಿಮ್‌ನ ಮಣಿಪಾಲ್ ಆಸ್ಪತ್ರೆಗೆ ಕರೆತರುವಷ್ಟರಲ್ಲಿ 75 ವರ್ಷದ ನಾನಾ ಪಾಟೇಕರ್ ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

Ad Widget

Ad Widget <> Ad Widget

ತನಿಖೆಯ ಭಾಗವಾಗಿ ನಟನ ನಿವಾಸಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಗೋವಾ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದ್ದು, ಸಾವಿಗೆ ಕಾರಣವಾದ ಸಂದರ್ಭಗಳ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕುಟುಂಬಸ್ಥರು ಹಾಗೂ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯೂ ನಡೆದಿದೆ.



Ad Widget

ನಾನಾ ಪಾಟೇಕರ್ ಅವರ ಸಾವಿಗೆ ಹೃದಯಾಘಾತ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ, ಸಾವಿನ ನಿಖರ ಕಾರಣ ಮತ್ತು ಸಂದರ್ಭಗಳ ಕುರಿತು ತನಿಖೆ ಮುಂದುವರಿದಿದೆ. ಅಸಹಜ ಸಾವು ಪ್ರಕರಣ ದಾಖಲಿಸಿರುವುದು ಮಾತ್ರವೇ ಸಾವಿನಲ್ಲಿ ಅಪರಾಧ ಅಥವಾ ಸಂಶಯಾಸ್ಪದ ಕೃತ್ಯ ನಡೆದಿದೆ ಎಂಬುದನ್ನು ಸೂಚಿಸುವುದಿಲ್ಲ. ತನಿಖೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

Continue Reading

ಸ್ಥಳೀಯ

Beltangadi-ಬೆಳ್ತಂಗಡಿ: ಆನೆಗಳ ಸಂಚಾರ ಹೆಚ್ಚಳ ಹಿನ್ನೆಲೆ; ದಿಡುಪೆ ಫಾಲ್ಸ್ ವೀಕ್ಷಣೆಗೆ ನಿರ್ಬಂಧ

Published

on



Ad Widget

Ad Widget

Ad Widget

Ad Widget

ಮಲವಂತಿಗೆ ಗ್ರಾಮದ ಪ್ರಸಿದ್ಧ ಪ್ರವಾಸಿ ತಾಣ ದಿಡುಪೆ ಫಾಲ್ಸ್ ಸುತ್ತಮುತ್ತ ಆನೆಗಳ ಸಂಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ.

Ad Widget

Ad Widget

Ad Widget

Ad Widget

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಪ್ರಸಿದ್ಧ ಪ್ರವಾಸಿ ತಾಣ ದಿಡುಪೆ ಫಾಲ್ಸ್ ಸುತ್ತಮುತ್ತ ಆನೆಗಳ ಸಂಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಈ ನಿರ್ಬಂಧ ನಾಳೆಯಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶ ಹೊರಬೀಳುವವರೆಗೆ ಪ್ರವಾಸಿಗರಿಗೆ ದಿಡುಪೆ ಫಾಲ್ಸ್ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ವನ್ಯಜೀವಿ ವಲಯದ ಅರಣ್ಯಾಧಿಕಾರಿ ಶರ್ಮಿಷ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget

Ad Widget <> Ad Widget

ಆನೆಗಳ ಸಂಚಾರ ಹೆಚ್ಚಾಗಿರುವುದರಿಂದ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.



Ad Widget
Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading