Uncategorized
ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್ ಸರ್ಟಿಫಿಕೆಟ್ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್ ಮಾಡಿದ ಪ್ಲ್ಯಾನ್ ಒಂದಾ ಎರಡಾ ?
ಮಹಿಳಾ ಪೊಲೀಸ್ ಸಿಬಂದಿಯನ್ನು ಹತ್ಯೆಗೈದು, ಎರಡು ವರ್ಷಗಳ ಕಾಲ ಆಕೆ ನಾಪತ್ತೆಯಾಗಿದ್ದಳೆಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದ ದುಷ್ಕರ್ಮಿಯನ್ನು ಕೊನೆಗೂ ಹೆಡೆಮುರಿ ಕಟ್ಟುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆಯಾದ ಪೊಲೀಸ್ ಸಿಬಂದಿಗೆ ನಕಲಿ ಪ್ರಿಯಕರನೊಬ್ಬನನ್ನು ಸೃಷ್ಟಿಸಿದ ಆರೋಪಿಯು ಆಕೆ ಆತನೊಂದಿಗೆ ಪರಾರಿಯಾಗಿರುವುದಾಗಿ ಮನೆಯವರಿಗೆ ಹಾಗೂ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರನ್ನು ಏಕಕಾಲದಲ್ಲಿ ಯಾಮಾರಿಸಿದ್ದ. ಇದಕ್ಕಾಗಿ ಆತ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ವಿಶೇಷ ಎಂದರೇ ಈ ಪ್ರಕರಣದ ಆರೋಪಿಯು ಓರ್ವ ಪೊಲೀಸ್ ಸಿಬಂದಿ.
ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಪೊಲೀಸ್ ಕಾನ್ಸ್‌ಟೆಬಲ್ ಆಗಿದ್ದ ಮೋನಿಕಾ ಯಾದವ್ ಎಂಬವರು ಎರಡು ವರ್ಷಗಳ ಹಿಂದೆ ಸಂಶಯಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದರು. ಪೊಲೀಸ್ ಕಾನ್ಸ್‌ಟೆಬಲ್ ಸುರೇಂದ್ರ ಸಿಂಗ್ ರಾಣಾ ಎಂಬಾತ ಮೋನಿಕಾಳನ್ನು ಹತ್ಯೆ ಮಾಡಿದ್ದ ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಇದೀಗ ಗೊತ್ತಾಗಿದ್ದು, ಆತನನ್ನು ಬಂಧಿಸಲಾಗಿದೆ. ಆರೋಪಿಗೆ ನೆರವು ನೀಡಿದ ಆತನ ಬಾವ ಹಾಗೂ ಮೋನಿಕಾಳ ನಕಲಿ ಪ್ರಿಯಕರನಾಗಿ ನಟಿಸಿದ ಸುರೇಂದ್ರ ಸಿಂಗ್‌ನ ಸ್ನೇಹಿತನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಆದರೇ ಆರೋಪಿಯು ಕೊಲೆ ಮಾಡಿದ ಬಳಿಕ ಅದನ್ನು ಮುಚ್ಚಿ ಹಾಕಲು ಮಾಡಿದ ಪ್ರಯತ್ನ ಮಲಯಾಳಂ ಸೂಪರ್ ಹಿಟ್ ಮೂವಿ ದೃಶ್ಯ ದಂತಿದೆ
28ರ ಹರೆಯದ ಪೊಲೀಸ್ ಕಾನ್ಸ್‌ಟೆಬಲ್ ಸುರೇಂದ್ರ ಸಿಂಗ್ ರಾಣಾ ಪೊಲೀಸ್ ಕಾನ್ಸ್‌ಟೆಬಲ್ ಮೋನಿಕಾ ಯಾದವ್ ಅವರ ಕತ್ತು ಹಿಸುಕಿ ಕೊಲೆ ಮಾಡಿ ಉತ್ತರ ದಿಲ್ಲಿಯಲ್ಲಿ ಚರಂಡಿಗೆ ಎಸೆದಿದ್ದ. ಆರೋಪಿ ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಮೋರಿಯಲ್ಲಿ ಹುಡುಕಾಟ ನಡೆಸಿ ಅಸ್ಥಿಪಂಜರವೊಂದನ್ನು ಪತ್ತೆ ಮಾಡಿದ್ದು, ಅದನ್ನು ಡಿಎನ್‌ಎ ಪರೀಕ್ಷೆಗೆ ರವಾನಿಸಿದ್ದಾರೆ.
ರಾಣಾ ಹಾಗೂ ಮೋನಿಕಾ ಪೊಲೀಸ್ ತರಬೇತಿ ಶಿಬಿರದಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದರು. ಮೋನಿಕಾ ಅವರನ್ನು ರಾಣಾ ಮದುವೆ ಆಗಬೇಕು ಎಂದು ಬಯಸಿದ್ದ. ಆದರೆ, ಆಕೆ ಪದೇ ಪದೇ ಮದುವೆಗೆ ನಿರಾಕರಿಸುತ್ತಿದ್ದ ಕಾರಣ ಸಿಟ್ಟಿಗೆದ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
2 ವರ್ಷಗಳ ಹಿಂದೆ ದಿಲ್ಲಿಯ ಅಲಿಪುರದಲ್ಲಿನ ತನ್ನ ಮನೆಗೆ ಕರೆದೊಯ್ದಿದ್ದ ಆರೋಪಿ, ಅಲ್ಲಿಯೇ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ. ಕೊಲೆ ಮಾಡಿದ ಬಳಿಕ ಆಕೆ ಇನ್ನೂ ಬದುಕಿದ್ದಾಳೆ ಎಂದು ಮೋನಿಕಾ ಕುಟುಂಬಸ್ಥರಿಗೆ ನಂಬಿಸಲು ನಾಟಕವಾಡಿದ್ದ. ಇದಕ್ಕಾಗಿ ಸುರೇಂದ್ರ ಸಿಂಗ್ ತನ್ನ ಬಾವ ರವೀನ್ ಎಂಬಾತನ ನೆರವು ಪಡೆದಿದ್ದ. ಮತ್ತೊಬ್ಬ ಆರೋಪಿ ರಾಜ್‌ಪಾಲ್, ರವೀನ್‌ನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ . ಮೂವರು ಈಗ ಪೊಲೀಸ್ ಬಂಧನದಲ್ಲಿದ್ದಾರೆ.
2021ರ ಸೆಪ್ಟಂಬರ್ ನಲ್ಲಿ ಮೋನಿಕಾ ಕೊಲೆಯಾಗಿದ್ದಳು. ಆದರೇ ಆಕೆ ಆರವಿಂದ್ ಎಂಬಾತನ ಜತೆ ಪರಾರಿಯಾಗಿರುವುದಾಗಿ ಸುರೇಂದ್ರ ಸಿಂಗ್ ರಾಣಾ ಮನೆಯವರನ್ನು ನಂಬಿಸಿದ್ದ. ಅವರ ಜತೆ ಸೇರಿ ಹುಡುಕಾಡುವ ನಾಟಕವನ್ನು ಆಡಿದ್ದ. ಸರಿ ಸುಮಾರು ಒಂದೂವರೆ ತಿಂಗಳು ಕಳೆದರೂ ಮೋನಿಕಾ ಸಿಗದಿದ್ದಾಗ ಕೊನೆಗೆ 2021 ರ ಆಕ್ಟೋಬರ್ 20 ರಂದು ಮೋನಿಕಾ ನಾಪತ್ತೆಯಾಗಿರುವ ಬಗ್ಗೆ ಮನೆಯವರು ದೂರು ದಾಖಲಿಸಿದ್ದರು. ಅದರಲ್ಲಿ ಆಕೆ ಸೆ. 8 ರಂದು ಕಾಣೆಯಾಗಿರುವುದ್ದಾಗಿ ತಿಳಿಸಲಾಗಿತ್ತು.
ತನ್ನ ಸ್ನೇಹಿತ ರಾಜ್ ಪಾಲನನ್ನು ಅರವಿಂದ ನಂತೆ ನಟಿಸುವಂತೆ ಒಪ್ಪಿಸಿದ ರಾಣಾ ಆತನಲ್ಲಿ ಮೋನಿಕಾಳ ಮನೆಯವರಿಗೆ ಫೋನ್ ಮಾಡಿಸಿ ” ನಾವಿಬ್ಬರೂ ಮದುವೆಯಾಗಿದ್ದೇವೆ ಎಂದು ತಿಳಿಸಿದ್ದ ಮನೆಯವರು ಮೋನಿಕಾಳಿಗೆ ಪೋನ್ ನೀಡುವಂತೆ ಕೇಳಿದಾಗ ಆಕೆ ಹೆದರಿದ್ದಾಳೆ ಮಾತನಾಡುವ ಮೂಡಿನಲ್ಲಿ ಇಲ್ಲ ಎಂದು ನಂಬಿಸಿದ್ದ.
ಮೋನಿಕಾಳ ಕುಟುಂಬವನ್ನು ನಂಬಿಸಲು ರಾಣಾ ಮಹಿಳೆಯೊರ್ವಳಿಗೆ ಮೋನಿಕಾಳ ಹೆಸರಿನಲ್ಲಿ ಕೋವಿಡ್ ಲಸಿಕೆ ಕೊಡಿಸಿ ಅದರ ಸರ್ಟಿಫಿಕೆಟ್ ಅನ್ನು ಮನೆಯವರಿಗೆ ಕಳುಹಿಸಿದ್ದ. ಮೋನಾ ಬದುಕಿದ್ದಾಳೆ ಭಾವಿಸುವಂತೆ ಮಾಡಲು ಮೋನಿಕಾಳ ಬ್ಯಾಂಕ್ ಖಾತೆಯಲ್ಲಿ ವಹಿವಾಟುಗಳನ್ನು ನಡೆಸಿದ್ದ. ಆಕೆಯ ಸಿಮ್ ಕಾರ್ಡ್ ಅನ್ನು ಬಳಸಿದ್ದ.
ಮೋನಿಕಾಳ ಹಲವಾರು ರೆಕಾರ್ಡೆಡ್ ಆಡಿಯೋಗಳನ್ನು ಹೊಂದಿದ್ದ ರಾಣಾ , ಅವುಗಳನ್ನು ಎಡಿಟ್ ಮಾಡಿ ಕುಟುಂಬ ಸದಸ್ಯರಿಗೆ ಕಳುಹಿಸುವ ಮೂಲಕ ಮೋನಿಕಾ ಜೀವಂತವಾಗಿದ್ದಾಳೆ ಎಂದು ಮನೆಯವರನ್ನು ನಂಬಿಸಲು ಯಶಸ್ವಿಯಾಗಿದ್ದ
ರಾಜ್ ಪಾಲ್ ಗೆ ವೇಶ್ಯೆಯರ ಸಹವಾಸವಿದ್ದು, ಅವರೊಂದಿಗೆ ಹೊಟೇಲ್ ಗಳಲ್ಲಿ ತಂಗುತ್ತಿದ್ದ ವೇಳೆ ತನ್ನ ಹೆಸರನ್ನು ಅರವಿಂದ್ ಎಂದು ಹಾಗೂ ವೇಶ್ಯೆಯರ ಹೆಸರನ್ನು ಮೋನಿಕಾ ಎಂದು ನೀಡುತ್ತಿದ್ದ. ಬಳಿಕ ಇದೆ ದಾಖಲೆಯನ್ನು ಮೋನಿಕಾಳ ಮನೆಯವರಿಗೆ ನೀಡಿ ತಾವಿಬ್ಬರು ಜತೆಯಾಗಿದ್ದೇವೆ ಎಂದು ನಂಬಿಸುತ್ತಿದ್ದ . ಇದನ್ನೆ ಮೋನಿಕಾಳ ಮನೆಯವರು ಪೊಲೀಸರಿಗೆ ತೋರಿಸಿದ ಕಾರಣ, ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗದೇ ಮಿಸ್ಸಿಂಗ್ ಪ್ರಕರಣದ ಕಡತವನ್ನು ಬದಿಗಿಟ್ಟಿದ್ದರು.
ಆದರೆ, ಈ ಪ್ರಕರಣ ಭೇದಿಸಲು ಪೊಲೀಸರಿಗೆ ಬರೋಬ್ಬರಿ 2 ವರ್ಷ ಕಾಲ ಬೇಕಾಯಿತು. ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರ ಮಾಡಿದ ಬಳಿಕ ಡಿಸಿಪಿ ಸಂಜಯ್ ಭಾಟಿಯಾ ತಂಡ, ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ದಿಲ್ಲಿಯಲ್ಲಿ ಜಿ – 20 ಶೃಂಗ ಸಭೆ ನಡೆಯುತ್ತಿದ್ದ ನಡುವಲ್ಲೂ ಈ ಪ್ರಕರಣದ ತನಿಖೆ ಚುರುಕಾಗಿ ಸಾಗಿತ್ತು. ಕಳೆದ ವಾರವಷ್ಟೇ ಈ ಪ್ರಕರಣದ ಕುರಿತಾಗಿ ಮಹತ್ವದ ಬೆಳವಣಿಗೆ ಆಗಿತ್ತು. ಪ್ರಕರಣದ ಮೂರನೇ ಆರೋಪಿ ರಾಜ್‌ಪಾಲ್ ಮೊದಲಿಗೆ ಪತ್ತೆಯಾಗಿದ್ದ. ಆತನನ್ನು ನಕಲಿ ಸಿಮ್ ಕಾರ್ಡ್ ಪಡೆದ ಆಧಾರದ ಮೇಲೆ ಬಂಧಿಸಿ ಪೊಲೀಸರು ನಂತರ, ರವೀನ್ ಹಾಗೂ ರಾಣಾವರೆಗೆ ತಲುಪಿದರು.
Uncategorized
Digitel Arrest ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಪುತ್ತೂರಿನ ವ್ಯಕ್ತಿಗೆ ₹1.31 ಕೋಟಿ ವಂಚನೆ

ಪುತ್ತೂರು: ಮುಂಬೈ ಪೊಲೀಸ್ ಹಾಗೂ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತರು, ಬಂಧನದ ಭೀತಿ ಹುಟ್ಟಿಸಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬರಿಗೆ ₹1.31 ಕೋಟಿ ವಂಚಿಸಿರುವ ಘಟನೆ ನಡೆದಿದೆ.
ಪೆಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಿರುವುದಾಗಿ ಸುಳ್ಳು ಆರೋಪ ಹೊರಿಸಿದ ವಂಚಕರು, ವಾಟ್ಸ್‌ಆ್ಯಪ್ ವಿಡಿಯೋ ಕರೆಗಳ ಮೂಲಕ ನಿರಂತರವಾಗಿ ಬೆದರಿಸಿದ್ದಾರೆ. ಬ್ಯಾಂಕ್ ಖಾತೆಗಳ ಪರಿಶೀಲನೆ ಮತ್ತು ಹಣದ ದೃಢೀಕರಣದ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಹಣ ವರ್ಗಾಯಿಸುವಂತೆ ಸೂಚಿಸಿದ್ದಾರೆ.
ಇದನ್ನು ನಂಬಿದ ದೂರುದಾರರು 2026ರ ಸೆ.2ರಿಂದ ಅ.6ರವರೆಗೆ ಹಂತ ಹಂತವಾಗಿ ಒಟ್ಟು ₹1,31,50,000 ಹಣವನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ.
ನಂತರ ಇದು ಸೈಬರ್ ವಂಚನೆ ಎಂಬುದನ್ನು ಅರಿತ ದೂರುದಾರರು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಈ ಸಂಬಂಧ ದಕ್ಷಿಣ ಕನ್ನಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ತನಿಖೆ ನಡೆಸಲಾಗುತ್ತಿದೆ.
ಗಮನಿಸಿ: ಪೊಲೀಸ್ ಅಥವಾ ತನಿಖಾ ಸಂಸ್ಥೆಗಳ ಹೆಸರಿನಲ್ಲಿ ವಿಡಿಯೋ ಕರೆ ಮಾಡಿ ಬಂಧನದ ಬೆದರಿಕೆ ಒಡ್ಡಿ ಹಣ ವರ್ಗಾಯಿಸುವಂತೆ ಸೂಚಿಸುವುದು ಸೈಬರ್ ವಂಚನೆಯ ವಿಧಾನವಾಗಿದೆ. ಇಂತಹ ಕರೆಗಳನ್ನು ನಂಬದೆ, ತಕ್ಷಣವೇ 1930 ಸಹಾಯವಾಣಿಗೆ ದೂರು ನೀಡಬೇಕು.
Uncategorized
Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐಇಇಇ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ಐಇಇಇ ಬೆಂಗಳೂರು ವಿಭಾಗ ಮತ್ತು ಐಇಇಇ ಮಂಗಳೂರು ಉಪವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ವಿಎಲ್‌ಎಸ್‌ಐ, ಇಲೆಕ್ಟಿçಕಲ್ ಸರ್ಕ್ಯೂಟ್ಸ್ ಮತ್ತು ರೊಬೋಟಿಕ್ಸ್ ವಿಷಯಗಳನ್ನೊಳಗೊಂಡ ಐಇಇಇ ಅಂತಾರಾಷ್ಟ್ರೀಯ ಸಮ್ಮೇಳನ ಡಿಸ್ಕವರ್ 2026ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಬ್ಲೂಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಇದರ ಸ್ಥಾಪಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿ ಸುದರ್ಶನ್ ಶೆನ್ವಿ ಮಾತಾಡಿದರು.

ಪುತ್ತೂರು: ನೀವು ವಿದ್ಯಾರ್ಥಿಯಾಗಿರಲಿ ಅಥವಾ ವೃತ್ತಿಪರರಾಗಿರಲಿ ಐಇಇಇ ಸದಸ್ಯತ್ವವು ನಿಮ್ಮನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಸಮುದಾಯಗಳೊಂದಿಗೆ ನೇರವಾಗಿ ಜೋಡಿಸುತ್ತದೆ ಎಂದು ಬೆಂಗಳೂರಿನ ಬ್ಲೂಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಇದರ ಸ್ಥಾಪಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿ ಸುದರ್ಶನ್ ಶೆನ್ವಿ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ಐಇಇಇ ಬೆಂಗಳೂರು ವಿಭಾಗ ಮತ್ತು ಐಇಇಇ ಮಂಗಳೂರು ಉಪವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ವಿಎಲ್‌ಎಸ್‌ಐ, ಇಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ರೊಬೋಟಿಕ್ಸ್ ವಿಷಯಗಳನ್ನೊಳಗೊಂಡ ಐಇಇಇ ಅಂತಾರಾಷ್ಟ್ರೀಯ ಸಮ್ಮೇಳನ ಡಿಸ್ಕವರ್ 2026ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು.
ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಯಾವುದನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಸಮ್ಮೇಳನವೇ ಸಾಕ್ಷಿ, ನಿಗದಿತ ಸಮಯದಲ್ಲಿ ಪ್ರತಿಯೊಂದು ಕೆಲಸಗಳು ಸಂಪನ್ನಗೊಂಡವು ಇದರ ಹಿಂದೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ನುಡಿದರು.

ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಐಇಇಇ ಬೆಂಗಳೂರು ವಿಭಾಗದ ತಾಂತ್ರಿಕ ಮತ್ತು ಸಮ್ಮೇಳನ ಪ್ರಾಯೋಜಕತ್ವ ಸಮಿತಿಯ ಸಹ ಅಧ್ಯಕ್ಷ ಡಾ.ವಾಸುದೇವ ಆಚಾರ್ಯ ಮಾತನಾಡಿ ಈ ಅಂತಾರಾಷ್ಟ್ರೀಯ ಸಮ್ಮೇಳನವು ಅತ್ಯಂತ ಉತ್ತಮ ರೀತಿಯಲ್ಲಿ ನಡೆಯಿತು. ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿದ್ದತೆಗಳು ಯಾವರೀತಿಯಲ್ಲಿ ನಡೆಯುತ್ತಿತ್ತು ಎನ್ನುವುದಕ್ಕೆ ಇದರ ಯಶಸ್ಸೇ ಸಾಕ್ಷಿ ಎಂದರು. ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಐಇಇಇಯ ವ್ಯಾಪ್ತಿಗೆ ತರುವ ಮಿಷನ್-31 ಎನ್ನುವ ಪರಿಕಲ್ಪನೆಗೆ ಎಲ್ಲರೂ ಕೈಜೋಡಿಸಿ ಇದರ ಯಶಸ್ಸಿನಲ್ಲಿ ಪಾಲುದಾರರಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಪ್ರಸನ್ನ ದರ್ಬೆ ಮಾತನಾಡಿ ಇಂಜಿನಿಯರಿಂಗ್ ಕಾಲೇಜಿನ ಇತಿಹಾಸದಲ್ಲಿ ಇದೊಂದು ಮುಖ್ಯ ಕಾರ್ಯಕ್ರಮವಾಗಿ ಗುರುತಿಸಲ್ಪಡುವಂತಾಯ್ತು ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು. ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಔನ್ನತ್ಯಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವುದಕ್ಕೆ ಉತ್ಸುಕವಾಗಿದೆ ಎಂದರು.
ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐಇಇಇ ಮಂಗಳೂರು ಉಪವಿಭಾಗದ ಮುಖ್ಯಸ್ಥ ಡಾ.ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕಿಯರಲ್ಲೊಬ್ಬರಾದ ಡಾ.ರಜನಿ ರೈ.ಬಿ ಎರಡು ದಿನಗಳ ಕಾಲ ನಡೆದ ಈ ಸಮ್ಮೇಳನದ ವರದಿಯನ್ನು ವಾಚಿಸಿದರು. ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ರೇಶ್ಮಾ ಪೈ ಅತಿಥಿಗಳನ್ನು ಪರಿಚಯಿಸಿದರು.
ಒಟ್ಟು ಆರು ವಿಭಾಗಗಳಲ್ಲಿ ನಡೆದ ಪ್ರಬಂಧ ಮಂಡನೆಯಲ್ಲಿ ಪ್ರತಿ ವಿಭಾಗದಲ್ಲಿಯೂ ಉತ್ತಮವಾದ ಪ್ರಬಂಧಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜೋತಿಮಣಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕಿ ಡಾ.ಜೀವಿತಾ.ಬಿ.ಕೆ ವಂದಿಸಿದರು. ಮೂಲ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಶ್ರೀಶರಣ್ಯ ಕಾರ್ಯಕ್ರಮ ನಿರ್ವಹಿಸಿದರು.
Uncategorized
Sahyadri College-ಸಹ್ಯಾದ್ರಿ ಕಾಲೇಜು AICTE IDEA ಲ್ಯಾಬ್ ಉದ್ಘಾಟನೆ
ನೋಯ್ಡಾದ ಜೆಎಸ್‌ಎಸ್ (JSS) ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ. ಎಚ್. ಆರ್. ಮಹಾದೇವಸ್ವಾಮಿ ಅವರು, ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ‘ಸಹ್ಯಾದ್ರಿ AICTE IDEA ಲ್ಯಾಬ್’ ಅನ್ನು 09-10-2026 (ಶುಕ್ರವಾರ) ರಂದು ಉದ್ಘಾಟಿಸಿದರು.

ನೋಯ್ಡಾದ ಜೆಎಸ್‌ಎಸ್ (JSS) ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ. ಎಚ್. ಆರ್. ಮಹಾದೇವಸ್ವಾಮಿ ಅವರು, ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ‘ಸಹ್ಯಾದ್ರಿ AICTE IDEA ಲ್ಯಾಬ್’ ಅನ್ನು 09-10-2026 (ಶುಕ್ರವಾರ) ರಂದು ಉದ್ಘಾಟಿಸಿದರು.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (AICTE) ‘IDEA’ (ಐಡಿಯಾ, ಡೆವಲಪ್‌ಮೆಂಟ್, ಇವ್ಯಾಲ್ಯುಯೇಷನ್ ಮತ್ತು ಅಪ್ಲಿಕೇಶನ್ – ಅಂದರೆ ಕಲ್ಪನೆ, ಅಭಿವೃದ್ಧಿ, ಮೌಲ್ಯಮಾಪನ ಮತ್ತು ಅನ್ವಯ) ಯೋಜನೆಯು, ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ತಮ್ಮ ಕಲ್ಪನೆಯನ್ನು ಕಾರ್ಯಸಾಧ್ಯವಾದ ಮಾದರಿಯಾಗಿ (ಪ್ರೊಟೊಟೈಪ್) ಪರಿವರ್ತಿಸಲು ಒಂದೇ ಸೂರಿನಡಿ ವೇದಿಕೆಯನ್ನು ಒದಗಿಸುತ್ತದೆ. ಈ ಪ್ರಯೋಗಾಲಯವು 3,817 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಇದರ ಯೋಜನಾ ವೆಚ್ಚ 90 ಲಕ್ಷ ರೂಪಾಯಿಗಳಾಗಿವೆ. ಇಲ್ಲಿನ ಸೌಲಭ್ಯಗಳಲ್ಲಿ 3D ಪ್ರಿಂಟರ್ ಮತ್ತು 3D ಸ್ಕ್ಯಾನರ್, CNC ರೂಟರ್, ವಿನೈಲ್ ಕಟ್ಟರ್, ಬಹುಪಯೋಗಿ ಲೇತ್ ಮತ್ತು ಮಿಲ್ಲಿಂಗ್ ಯಂತ್ರಗಳು, ಡ್ರಿಲ್ಲಿಂಗ್ ಮತ್ತು ವೆಲ್ಡಿಂಗ್ ಯಂತ್ರಗಳು, ಸೋಲ್ಡರಿಂಗ್ ಸ್ಟೇಷನ್‌ಗಳು, ಡಿಜಿಟಲ್ ಸೂಕ್ಷ್ಮದರ್ಶಕಗಳು (ಮೈಕ್ರೋಸ್ಕೋಪ್‌ಗಳು) ಮತ್ತು ಆಸಿಲೋಸ್ಕೋಪ್‌ಗಳು ಸೇರಿವೆ.

ಉದ್ಘಾಟನಾ ಭಾಷಣದಲ್ಲಿ, ಡಾ. ಮಹಾದೇವಸ್ವಾಮಿ ಅವರು ನಾವೀನ್ಯತೆ, ಬೌದ್ಧಿಕ ಆಸ್ತಿ ಹಕ್ಕುಗಳು (IPR) ಮತ್ತು ದೇಶದಲ್ಲಿ ಉದ್ಯಮಶೀಲತೆಯ ವ್ಯಾಪ್ತಿಯ ಕುರಿತು ಮಾತನಾಡಿದರು.
ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ಅವರು ಸ್ವಾಗತ ಭಾಷಣ ಮಾಡಿದರು. ಸಂಯೋಜಕರಾದ ಡಾ. ಅಜಿತ್ ಬಿ. ಎಸ್. ಅವರು ಪ್ರಯೋಗಾಲಯದ ಕುರಿತು ಸಂಕ್ಷಿಪ್ತ ಪರಿಚಯವನ್ನು ನೀಡಿದರು ಹಾಗೂ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ನಿರ್ದೇಶಕರು (ಸಂಶೋಧನೆ ಮತ್ತು ಅಭಿವೃದ್ಧಿ) ಆದ ಡಾ. ಎಸ್. ಮಂಜಪ್ಪ ಅವರು, AICTE IDEA ಪ್ರಯೋಗಾಲಯದ ವ್ಯಾಪ್ತಿ ಮತ್ತು ಉದ್ದೇಶಗಳು, ಪ್ರಾಯೋಜಕ ಸಂಸ್ಥೆಗಳ ಪಾತ್ರ ಹಾಗೂ ಸಹ್ಯಾದ್ರಿಯಲ್ಲಿ ಕೈಗೊಂಡ ಅಭಿವೃದ್ಧಿಪರ ಉಪಕ್ರಮಗಳು ಸಂಸ್ಥೆಗೆ ತಂದುಕೊಟ್ಟಿರುವ ವಿವಿಧ ಮನ್ನಣೆಗಳ ಕುರಿತು ವಿವರಿಸಿದರು.
ಈ ಉಪಕ್ರಮಗಳು ಎಲ್ಲಾ ಪಾಲುದಾರರಿಗೆ ಹೇಗೆ ಪ್ರಯೋಜನಕಾರಿಯಾಗಿವೆ ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ಅವರು ಒತ್ತಿ ಹೇಳಿದರು. ಆಡಳಿತಾಧಿಕಾರಿ ಶ್ರೀ ಕೃಷ್ಣ ಹೆಗಡೆ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಾಯೋಗಿಕ ಕಲಿಕೆ ಮತ್ತು ಅನ್ವಯಿಕ ಅಭ್ಯಾಸಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಮಹತ್ವವನ್ನು ತಿಳಿಸಿದರು. ಸಹ-ಸಂಯೋಜಕರಾದ ಡಾ. ದುದ್ದೆಲ ಸಾಯಿ ಪ್ರಶಾಂತ್ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಡಾ. ಆಯೇಷಾ ಶಬಾನಾ ಅವರು ನಿರೂಪಿಸಿದರು.

ಮುಂದಿನ ಎರಡು ವರ್ಷಗಳಲ್ಲಿ, ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮಗಳು, ಹೊಸ ಆಲೋಚನೆಗಳನ್ನು ರೂಪಿಸುವ ಕಾರ್ಯಾಗಾರಗಳು (ideation workshops) ಮತ್ತು ಇಂಟರ್ನ್‌ಶಿಪ್‌ಗಳನ್ನು ಆಯೋಜಿಸಲು ಯೋಜಿಸಲಾಗಿದೆ. ಅಲ್ಲದೆ, ಇದು ಉದ್ಯಮ ವಲಯ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಸಂಪರ್ಕ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು (outreach programs) ನಡೆಸಲಿದೆ ಮತ್ತು AICTEಯ ‘IDEA ಲ್ಯಾಬ್’ಗಳ ರಾಷ್ಟ್ರೀಯ ಜಾಲದ ಭಾಗವಾಗಲಿದೆ. ಸಹ್ಯಾದ್ರಿ ಹಾಗೂ ಕರಾವಳಿ ಪ್ರದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
-
ಮಂಗಳೂರು21 hours agoMangalore-ಮಂಗಳೂರು: ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ
-
ಬಿಗ್ ನ್ಯೂಸ್21 hours agoGolithottu-ಗೋಳಿತ್ತೊಟ್ಟು: ತೋಡಿನ ನೀರಿನಲ್ಲಿ ಮೀನುಗಳ ಮಾರಣಹೋಮ; ತನಿಖೆಗೆ ಸ್ಥಳೀಯರ ಆಗ್ರಹ
-
Uncategorized17 hours ago
Digitel Arrest ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಪುತ್ತೂರಿನ ವ್ಯಕ್ತಿಗೆ ₹1.31 ಕೋಟಿ ವಂಚನೆ
-
ಅಂತರ ರಾಜ್ಯ24 hours agoElon Musk-ಅಂಬಾನಿ ಮತ್ತು ಅವರ ಬೆಂಬಲಿಗರ ವಾದ ಹಾಸ್ಯಾಸ್ಪದವಾಗಿದೆ : ಸ್ಟಾರ್ ಲಿಂಕ್ ಕುರಿತು ಇಲಾನ್ ಮಸ್ಕ್
-
ಮಂಗಳೂರು22 hours agoABVP protest-ಮಂಗಳೂರಿನ ಆಗ್ನೆಸ್ ಕಾಲೇಜಿನಲ್ಲಿ ದಸರಾ ರಜೆಯಲ್ಲೂ ಪರೀಕ್ಷೆ; ಎಬಿವಿಪಿ ಪ್ರತಿಭಟನೆ ವೇಳೆ ನೂಕಾಟ; ವಿದ್ಯಾರ್ಥಿನಿಯರನ್ನು ತಳ್ಳಿದ ಪೊಲೀಸರ ವಿರುದ್ಧ ಆಕ್ರೋಶ
-
ನಿಧನ ವಾರ್ತೆ3 hours agoSullia-Big Breaking: ಸುಳ್ಯ: ವಿದ್ಯುತ್ ಶಾಕ್ಗೆ ಇಬ್ಬರು ಯುವಕರು ಬಲಿ; ಬಾಲಕನಿಗೆ ಗಾಯ
-
ಕ್ರೀಡೆ20 hours agoMCC:ಎಂಸಿಸಿಯಿಂದ ಕ್ರಿಕೆಟ್ ನಿಯಮಗಳ ಪರಿಷ್ಕರಣೆ: ಅ.1ರಿಂದ ಹೊಸ ಬದಲಾವಣೆಗಳು ಜಾರಿ
-
ನಿಧನ ವಾರ್ತೆ24 hours agoNana Patekar-ನಟ ನಾನಾ ಪಾಟೇಕರ್ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತ ದೃಢ


















