Uncategorized
ಐದೂವರೆ ತಿಂಗಳಿನಲ್ಲಿಯೇ ದಕ್ಷ ಅಧಿಕಾರಿ ಮಂಗಳೂರು ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಗೆ ಪೋಸ್ಟಿಂಗ್ ತೋರಿಸದೆ ದಿಢೀರ್ ವರ್ಗಾವಣೆ – ಹಿಂದಿರುವ ಕಾಣದ ಕೈ ಯಾವುದು ಗೊತ್ತೇ?
ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರ ಪಿಆರ್‌ಓ ರೀತಿ ಕೆಲಸ ಮಾಡುವ ವ್ಯಕ್ತಿಯೇ ಈ ಚಾಕಲೇಟ್ ಸರಬರಜು ಮಾಡುತ್ತಿದ್ದ ಪ್ರಕರಣದ ಕಿಂಗ್ ಪಿನ್ ಎನ್ನಲಾಗುತ್ತಿದೆ. ಆ ಪ್ರಕರಣದಲ್ಲಿ ಕಿಂಗ್ ಪಿನ್ ವಿರುದ್ದ ಕೇಸ್ ಆಗದಿದ್ದರೂ, ಆತ ಪೊಲೀಸ್ ಇಲಾಖೆಯ ರಾಡರ್ ನಲ್ಲಿದ್ದ
ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಈ ಬಗ್ಗೆ ಆದೇಶ ಹೊರಬಿದ್ದಿದೆ. ಈ ವರ್ಗಾವಣೆ ಆದೇಶದಲ್ಲಿ ಅಚ್ಚರಿ ತಂದಿರುವುದು ಮಂಗಳೂರು ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಅವರ ವರ್ಗಾವಣೆ . ಕುಲದೀಪ್ ಜೈನ್ ಅವರನ್ನು ವರ್ಗಾಯಿಸಿ ಅವರ ಜಾಗಕ್ಕೆ ಅನುಪಮ್ ಅಗರ್ವಾಲ್ ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಉಡುಪಿ ಎಸ್ ಪಿ ಅಕ್ಷಯ್ ಹಾಕೇ ಮಚ್ಚಿಂದ್ರ ಅವರ ಬದಲಿಗೆ ಡಾ ಅರುಣ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ದಕ್ಷ ಅಧಿಕಾರಿ ಎಂದೇ ಪ್ರಖ್ಯಾತಿ ಪಡೆದಿದ್ದ ಕುಲದೀಪ್ ಅವರು ಕೇವಲ ಐದೂವರೆ ತಿಂಗಳ ಹಿಂದೆಯಷ್ಟೆ ಮಂಗಳೂರಿಗೆ ಪೋಸ್ಟಿಂಗ್ ಪಡೆದಿದ್ದರು. ಇಷ್ಟು ತರಾತುರಿಯಲ್ಲಿ ಕಾಂಗ್ರೆಸ್ ನೇತ್ರತ್ವದ ಸಿದ್ದರಾಮಯ್ಯ ಸರಕಾರ ಅವರನ್ನು ವರ್ಗಾವಣೆಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಮೂಡಿಸಿದೆ . ಇದರ ಹಿಂದೆ ಕಾಣದ ಕೈ ಯೊಂದು ಕೆಲಸ ಮಾಡಿದೆ , ಇದರ ಹಿಂದೆ ಡ್ರಗ್ಸ್ ಮಾಫಿಯಾದ ನೆರಳಿದೆ ಎಂಬ ಮಾತುಗಳು ಪೊಲೀಸ್ ಮೂಲಗಳು ಹೇಳುತ್ತಿವೆ.
ತಿಂಗಳ ಹಿಂದೆ ಡ್ರಗ್ಸ್ ಲೇಪಿತ ಚಾಕಲೇಟ್ ಮಾರುವ ಜಾಲವೊಂದನ್ನು ಕಮೀಷನರ್ ನೇತ್ರತ್ವದ ಪೊಲೀಸರು ಬೇಧಿಸಿದ್ದರು. ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರ ಪಿಆರ್‌ಓ ರೀತಿ ಕೆಲಸ ಮಾಡುವ ವ್ಯಕ್ತಿಯೇ ಈ ಚಾಕಲೇಟ್ ಸರಬರಜು ಮಾಡುತ್ತಿದ್ದ ಪ್ರಕರಣದ ಕಿಂಗ್ ಪಿನ್ ಎನ್ನಲಾಗುತ್ತಿದೆ. ಆ ಪ್ರಕರಣದಲ್ಲಿ ಕಿಂಗ್ ಪಿನ್ ವಿರುದ್ದ ಕೇಸ್ ಆಗದಿದ್ದರೂ, ಆತ ಪೊಲೀಸ್ ಇಲಾಖೆಯ ರಾಡರ್ ನಲ್ಲಿದ್ದ. ಈ ವ್ಯಕ್ತಿಯ ಮೇಲೆ ಮರ್ಡರ್ ಕೇಸೊಂದು ಈಗಾಗಲೇ ಇದ್ದು , ವಿಚಾರಣೆಯಲ್ಲಿದೆ. ಈತನ ಪಕ್ಷ ಈಗ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ, ಈ ವ್ಯಕ್ತಿ ಎಲ್ಲ ಪಕ್ಷದವರೊಂದಿಗೆ ಗಳಸ್ಯ ಕಂಠಸ್ಯ ಸಂಬಂಧ ಹೊಂದಿದ್ದಾನೆ. ಇದೆ ಸಂಪರ್ಕವನ್ನು ಬಳಸಿಕೊಂಡು ಅಡಳಿತರೂಢ ಪಕ್ಷದ ಶಾಸಕರೊಬ್ಬರ ಮೂಲಕ ಕಮೀಷನರ್ ಬದಲಾವಣೆಗೆ ಯತ್ನಸಿದ್ದ ಎನ್ನಲಾಗುತ್ತಿದೆ.
ಇದರ ಜತೆಗೆ ಮಂಗಳೂರು ಸಿಸಿಬಿ ಪೊಲೀಸರ ಮೂಲಕ ಕಮೀಷನರ್ ಕುಲದೀಪ್ ಅವರು ಡ್ರಗ್ ದಂಧೆ ವಿರುದ್ದ ಸಮರ ಸಾರಿದ್ದರು. ಈ ಡ್ರಗ್ಸ್ ದಂಧೆಕೋರರ ವಿರುದ್ದ ಯಾವುದೇ ಮುಲಾಜಿಗೆ ಒಳಗಾಗದೇ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದಾರು. ಕಳೆದ 3 ತಿಂಗಳ ಅವಧಿಯಲ್ಲಿ ನೂರಾರು ಡ್ರಗ್ ಪೆಡ್ಲರ್ ಗಳ ಹೆಡೆಮುರಿ ಕಟ್ಟಿದ್ದರು.
ಎರಡು ದಿನಗಳ ಹಿಂದೆಯಷ್ಟೆ ಬೆಂಗಳೂರಿನ ಯಲಹಂಕದಲ್ಲಿದ್ದುಕೊಂಡು ಮಂಗಳೂರು, ಬೆಂಗಳೂರಿಗೆ ಎಂಡಿಎಂಎ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜಿರೀಯನ್ ಪ್ರಜೆ ಮಹಿಳೆಯನ್ನು ಬಂದಿಸಿದ್ದರು. ಈ ಮೂಲಕ ಡ್ರಗ್ ದಂಧೆಯ ಮೂಲಕ್ಕೆ ಕಮೀಷನರ್ ಕೈ ಹಾಕಿದ್ದರು. ಇದು ಜಿಲ್ಲೆಯ ಡ್ರಗ್ ದಂಧೆಕೋರರನ್ನು ಕೆರಳಿಸಿತ್ತು.
ಇವರ ಜತೆ ಚಾಕಲೇಟ್ ದಂಧೆಕೋರನ್ನು ಸೇರಿದ್ದಾನೆ. ಕರಾವಳಿ ಮೂಲದ ಶಾಸಕರೊಬ್ಬರ ಮೂಲಕ ಕಮೀಷನರ್ ವರ್ಗಾವಣೆಗೆ ಪ್ರಯತ್ನಿಸಲಾಗಿದೆ ಎMದು ಮೂಲಗಳಿಂದ ತಿಳಿದು ಬಂದಿದೆ. ಇದರ ಪರಿಣಾಮವೇ ಈ ವರ್ಗಾವಣೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿದೆ. ಹೀಗಾಗಿಯೇ ಕುಲದೀಪ್ ಅವರನ್ನು ವರ್ಗಾವಣೆಗೊಳಿಸಿರವ ಸರಕಾರ ಅವರಿಗೆ ಯವುದೇ ಪೋಸ್ಟಿಂಗ್ ತೋರಿಸಲ್ಲ ಎಂದು ಹೇಳಲಾಗುತ್ತಿದೆ.
ಕುಲದೀಪ್ ಕುಮಾರ್ ಜೈನ್ ಕಳೆದ 2023 ಪೆಬ್ರವರಿ 24 ರಂದು ಮಂಗಳೂರು ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ಹಿಂದಿನ ಕಮಿಷನರ್ ಆಗಿದ್ದ ಶಶಿಕುಮಾರ್ ವಿರುದ್ದ ಭ್ರಷ್ಟಾಚಾರದ ಆರೋಪ ಅವರ ಅಧಿಕಾರವಧಿಯಲ್ಲಿ ಕೇಳಿ ಬಂದಿತ್ತು. ಹಾಗಿದ್ಧೂ ಅವರು ಎರಡೂವರೆ ವರ್ಷ ಪೂರ್ಣಗೊಳಿಸುವಲ್ಲಿ ಸಪಲರಾಗಿದ್ದರು ಆದರೆ ಕುಲದೀಪ್ ಅಧಿಕಾರ ಅವಧಿ ಕೇವಲ ಐದೂವರೆ ತಿಂಗಳಿನಲ್ಲಿ ಮೊಟಕುಗೊಂಡಿದೆ. ಸರಕಾರ ಯಾವುದೇ ಇದ್ದರೂ ಪ್ರಮಾಣಿಕರಿಗೆ ನಬೆಲೆಯಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.
ಅನುಪಮ್ ಅಗರ್ವಾಲ್
ನೂತನ ಆಯುಕ್ತರಾಗಿರುವ ಅನುಪಮ್ ಅಗರ್ವಾಲ್ 2008-ಬ್ಯಾಚ್ IPS ಅಧಿಕಾರಿಯಾಗಿದ್ದು ಮೂಲತಃ ರಾಜಸ್ಥಾನದ ಜೋದ್‌ಪುರದವರು ಈ ಹಿಂದೆ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ದಾವಣಗೆರೆಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಳಗಾವಿಯಲ್ಲಿ ಉಪ ಪೊಲೀಸ್ ಆಯುಕ್ತರಾಗಿ ರಾಮನಗರ ಮತ್ತು ವಿಜಯಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
Uncategorized
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ

ಉಳ್ಳಾಲ: ಸೋಮೇಶ್ವರದ ಪೆರಿಬೈಲ್ ಬೀಚ್‌ನಲ್ಲಿ ಸಮುದ್ರಪಾಲಾಗಿದ್ದ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ ಶೋಭಿತ್ ಎಂ. ಗೌಡ (18) ಅವರ ಮೃತದೇಹ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿಯಾಗಿದ್ದ ಶೋಭಿತ್, ಶನಿವಾರ ಸಂಜೆ ಸ್ನೇಹಿತರೊಂದಿಗೆ ಬೀಚ್‌ಗೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ನೀರುಪಾಲಾಗಿದ್ದರು.
ಉಜಿರೆ ಎಸ್‌ಡಿಎಂ ಕಾಲೇಜಿನ ಒಂಬತ್ತು ಮಂದಿ ವಿದ್ಯಾರ್ಥಿಗಳು ಶನಿವಾರ ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸೋಮೇಶ್ವರದ ಪೆರಿಬೈಲ್ ಬೀಚ್‌ಗೆ ತೆರಳಿದ್ದರು. ಈ ವೇಳೆ ಶೋಭಿತ್ ಮತ್ತು ಆಕಾಶ್ ಎಂಬವರು ಸಮುದ್ರಕ್ಕಿಳಿದಿದ್ದು, ಇಬ್ಬರೂ ಅಲೆಗಳ ಸೆಳೆತಕ್ಕೆ ಸಿಲುಕಿದ್ದರು. ಈಜು ತಿಳಿದಿದ್ದ ಆಕಾಶ್ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಶೋಭಿತ್ ನಾಪತ್ತೆಯಾಗಿದ್ದರು.
ವಿದ್ಯಾರ್ಥಿಗಾಗಿ ಶನಿವಾರ ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಎಸ್‌ಡಿಆರ್‌ಎಫ್, ಕರಾವಳಿ ಕಾವಲು ಪಡೆ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಭಾನುವಾರ ಮಧ್ಯಾಹ್ನ ಉಳ್ಳಾಲ ವಲಯದ ನಾಡದೋಣಿ ಹಾಗೂ ಗಿಲ್ನೆಟ್ ಮೀನುಗಾರರ ಸಂಘದ ಪ್ರಮುಖರಾದ ಆಸಿಫ್ ಎಂ.ಬಿ., ನಿಝಾಮ್ ಕೋಟೆಪುರ, ನಝೀರ್ ಕೋಡಿ, ರಝಾಕ್ ಕೋಟೆಪುರ, ಮುಸ್ತಾಫ ಕೋಟೆಪುರ ಮತ್ತು ಇರ್ಫಾನ್ ಕೋಟೆಪುರ ಅವರು ನಾಡದೋಣಿಯಲ್ಲಿ ಶೋಧ ನಡೆಸಿದರು. ಈ ವೇಳೆ ಉಚ್ಚಿಲ ಪೆರಿಬೈಲ್ ಸಮೀಪ ಸಮುದ್ರದಲ್ಲಿ ತೇಲುತ್ತಿದ್ದ ಶೋಭಿತ್ ಅವರ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ನಾಡದೋಣಿಯ ಮೂಲಕ ಕೋಟೆಪುರ ಸಮುದ್ರ ತೀರಕ್ಕೆ ತರಲಾಗಿದ್ದು, ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶೋಭಿತ್ ತನ್ನ ಪೋಷಕರ ಏಕೈಕ ಪುತ್ರನಾಗಿದ್ದ ಎಂದು ತಿಳಿದುಬಂದಿದೆ.
Uncategorized
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್‌ಫುಲ್ |
ಅ. 23ರಂದು ಚಿತ್ರ ಬಿಡುಗಡೆ

ಬಹು ನಿರೀಕ್ಷಿತ ತುಳು ಚಿತ್ರ ‘ಬನ’ ಮುಂಬೈನಲ್ಲಿ ನಡೆದ ಮೊದಲ ಎರಡು ಪ್ರೀಮಿಯರ್ ಪ್ರದರ್ಶನಗಳಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂಬೈನ ಮುಲುಂದ್ ಮತ್ತು ಕಲ್ಯಾಣ್‌ನಲ್ಲಿ ಶನಿವಾರ ನಡೆದ ಪ್ರದರ್ಶನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡೂ ಕಡೆ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡಿದೆ ಎಂದು ಚಿತ್ರತಂಡ ತಿಳಿಸಿದೆ.
ನಾಗನ ಹಿನ್ನೆಲೆಯನ್ನು ಆಧರಿಸಿದ ಮೊದಲ ತುಳು ಚಿತ್ರ ಎಂಬ ವಿಶೇಷತೆಯೊಂದಿಗೆ ಗಮನ ಸೆಳೆದಿರುವ ‘ಬನ’, ತನ್ನ ಕಥೆ ಮತ್ತು ಕಲಾವಿದರ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಕಥಾಹಂದರ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದು, ಯುವ ಕಲಾವಿದರ ಅಭಿನಯದ ಜತೆಗೆ ಹಿರಿಯ ಕಲಾವಿದರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಪ್ರದರ್ಶನದ ಬಳಿಕ ಕೇಳಿಬಂದಿವೆ.
ಚಿತ್ರದಲ್ಲಿ ಯುವ ಕಲಾವಿದರು ಅದ್ಭುತವಾಗಿ ನಟಿಸಿದ್ದು, ಕಥೆಯ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಭಿನ್ನ ಕಥಾವಸ್ತು ಹಾಗೂ ಕಲಾವಿದರ ಸಹಜ ಅಭಿನಯ ಚಿತ್ರಕ್ಕೆ ಮೆರುಗು ನೀಡಿದೆ. ತುಳು ಚಿತ್ರರಂಗದಲ್ಲಿ ನಾಗನ ಹಿನ್ನೆಲೆಯನ್ನು ಆಧರಿಸಿದ ಕಥಾವಸ್ತುವಿನೊಂದಿಗೆ ಮೂಡಿಬಂದಿರುವ ‘ಬನ’, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಮುಂಬೈ ತುಳು ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆ ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ.
ಮುಂಬೈನಲ್ಲಿ ಚಿತ್ರದ ಪ್ರೀಮಿಯರ್ ಪ್ರದರ್ಶನಗಳ ಆಯೋಜನೆಯನ್ನು ಬಾಬಪ್ರಸಾದ್ ಅರಸ ಮತ್ತು ನಾಗಕಿರಣ್ ಶೆಟ್ಟಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಶನಿವಾರ ನಡೆದ ಎರಡೂ ಪ್ರದರ್ಶನಗಳಿಗೆ ಪ್ರೇಕ್ಷಕರ ಉತ್ತಮ ಸ್ಪಂದನೆ ದೊರೆತಿದ್ದು, ಹೌಸ್‌ಫುಲ್ ಪ್ರದರ್ಶನ ಚಿತ್ರತಂಡಕ್ಕೆ ಸಂತಸ ತಂದಿದೆ.
ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ತುಳುವರು ತುಳು ಭಾಷೆ ಮತ್ತು ಚಿತ್ರರಂಗದ ಬೆಳವಣಿಗೆಗೆ ನಿರಂತರ ಬೆಂಬಲ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಬನ’ ಚಿತ್ರಕ್ಕೆ ಮುಂಬೈನಲ್ಲಿ ದೊರೆತಿರುವ ಪ್ರತಿಕ್ರಿಯೆ ಚಿತ್ರ ಬಿಡುಗಡೆಗೂ ಮುನ್ನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಅ. 23ರಂದು ಚಿತ್ರ ಬಿಡುಗಡೆ
‘ಬನ’ ಚಿತ್ರವು ಇದೇ ತಿಂಗಳ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮುಂಬೈನ ಪ್ರೀಮಿಯರ್ ಪ್ರದರ್ಶನಗಳಲ್ಲಿ ದೊರೆತಿರುವ ಮೆಚ್ಚುಗೆ, ಚಿತ್ರದ ಅಧಿಕೃತ ಬಿಡುಗಡೆಗೆ ಮುನ್ನ ಸಕಾರಾತ್ಮಕ ವಾತಾವರಣ ನಿರ್ಮಿಸಿದೆ. ವಿಭಿನ್ನ ಕಥಾಹಂದರ ಮತ್ತು ಕಲಾವಿದರ ಅಭಿನಯದ ಮೂಲಕ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿರುವ ‘ಬನ’ ಚಿತ್ರಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಪ್ರತಿಕ್ರಿಯೆ ದೊರೆಯಲಿದೆ ಎಂಬ ಕುತೂಹಲ ತುಳು ಚಿತ್ರಪ್ರೇಮಿಗಳಲ್ಲಿದೆ.
Uncategorized
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ

ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್ ಹಾಲು (ಲ್ಯಾಟೆಕ್ಸ್) ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ರಬ್ಬರ್ ಶೀಟ್ ದರದಲ್ಲೂ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪೂರೈಕೆ ಕೊರತೆ, ಹವಾಮಾನ ವೈಪರೀತ್ಯ ಹಾಗೂ ಕೈಗಾರಿಕಾ ವಲಯದ ಹೆಚ್ಚಿದ ಬೇಡಿಕೆಯಿಂದ ರಬ್ಬರ್ ಬೆಲೆ ಚೇತರಿಕೆ ಕಂಡಿದ್ದು, ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಆರ್‌ಎಸ್‌ಎಸ್-4 ದರ್ಜೆಯ ರಬ್ಬರ್ ಶೀಟ್ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು ₹281ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳ ಮೊದಲ ವಾರದಲ್ಲಿ ₹272ಕ್ಕೆ ಇಳಿದಿದ್ದ ದರ, ಬಳಿಕ ಹಂತಹಂತವಾಗಿ ಚೇತರಿಸಿಕೊಂಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹295ರ ಅಧಿಕೃತ ದರ ದಾಖಲಾಗಿದ್ದು, ಕೆಲವು ವಹಿವಾಟುಗಳು ₹300ರ ಮಟ್ಟದಲ್ಲೂ ನಡೆದಿವೆ ಎಂದು ರಬ್ಬರ್ ಉತ್ಪಾದಕರ ಸಂಘಗಳು ತಿಳಿಸಿವೆ. ಇದಕ್ಕೂ ಮೊದಲು ಆಗಸ್ಟ್ 4ರಂದು ದಾಖಲಾಗಿದ್ದ ₹298ರ ಗರಿಷ್ಠ ದರವನ್ನು ಪ್ರಸ್ತುತ ಬೆಲೆ ಮೀರಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ರಬ್ಬರ್ ಬೆಲೆ ಏರಿಕೆಯ ಹಾದಿಯಲ್ಲಿದೆ. ಕಳೆದ ತಿಂಗಳ ಮೊದಲ ವಾರದಲ್ಲಿ ಕೆ.ಜಿ.ಗೆ ₹261ಕ್ಕೆ ಇಳಿದಿದ್ದ ಆರ್‌ಎಸ್‌ಎಸ್ ಶೀಟ್ ದರ, ಇದೀಗ ₹275ಕ್ಕೆ ಏರಿಕೆಯಾಗಿದೆ.
ಪೂರೈಕೆ ಕೊರತೆ, ರೋಗಬಾಧೆ ಪರಿಣಾಮ
ಭಾರತ ಸೇರಿದಂತೆ ಪ್ರಮುಖ ರಬ್ಬರ್ ಉತ್ಪಾದಕ ರಾಷ್ಟ್ರಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ರಬ್ಬರ್ ಎಲೆ ಉದುರುವ ರೋಗದ ಬಾಧೆಯಿಂದ ಉತ್ಪಾದನೆ ಕುಸಿದಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಮುಂದುವರಿದಿದ್ದರೂ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಉತ್ಪಾದನೆ ಮತ್ತು ಬೇಡಿಕೆಯ ನಡುವಿನ ಅಂತರವೂ ಬೆಲೆ ಏರಿಕೆಗೆ ಕಾರಣವಾಗಿದೆ.
ಕೃತಕ ರಬ್ಬರ್ ಉತ್ಪಾದನಾ ವೆಚ್ಚ ಹೆಚ್ಚಳ
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಹಾಗೂ ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತಗಳು ಕೃತಕ ರಬ್ಬರ್ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿವೆ. ಕೃತಕ ರಬ್ಬರ್ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕೆಗಳು ನೈಸರ್ಗಿಕ ರಬ್ಬರ್ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ವಾಹನ ಮತ್ತು ಟಯರ್ ತಯಾರಿಕಾ ವಲಯದಿಂದಲೂ ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಮತ್ತಷ್ಟು ಬಲ ನೀಡಿದೆ.
ಆದರೆ ಕಚ್ಚಾ ರಬ್ಬರ್ ಬೆಲೆ ಏರಿಕೆಯಿಂದ ರಬ್ಬರ್ ಆಧಾರಿತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪಾದನಾ ವೆಚ್ಚವೂ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಟಯರ್, ವೈದ್ಯಕೀಯ ಕೈಗವಸು ಹಾಗೂ ಕ್ರೀಡಾ ಪರಿಕರಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಉದ್ಯಮ ವಲಯದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ವಿವಿಧ ದರ್ಜೆಯ ರಬ್ಬರ್ ದರ (ಪ್ರತಿ ಕೆ.ಜಿ.ಗೆ)
| ರಬ್ಬರ್ ದರ್ಜೆ | ದೇಶೀಯ ಮಾರುಕಟ್ಟೆ | ಅಂತರರಾಷ್ಟ್ರೀಯ ಮಾರುಕಟ್ಟೆ |
| ಆರ್‌ಎಸ್‌ಎಸ್-4 | ₹282 | ₹275 |
| ಆರ್‌ಎಸ್‌ಎಸ್-5 | ₹277 | ₹271 |
| ಲ್ಯಾಟೆಕ್ಸ್ (ಶೇ. 60 ಒಣ ರಬ್ಬರ್) | ₹203 | ₹184 |
-
Uncategorized15 hours ago
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ
-
Uncategorized18 hours ago
ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ!
-
Uncategorized17 hours ago
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ
-
Uncategorized17 hours ago
ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ
-
Uncategorized19 hours ago
ಪುತ್ತೂರು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ
-
Uncategorized16 hours ago
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್‌ಫುಲ್ |
-
ಸ್ಥಳೀಯ2 hours agoSharavuru-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ
-
ಬಿಗ್ ನ್ಯೂಸ್1 hour agoPuttur-ಪುತ್ತೂರು : ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಒಳಚರಂಡಿ ಕಾಮಗಾರಿ ಟೆಂಡರ್ ಸ್ಥಗಿತಗೊಳಿಸಿ : ನಗರಸಭೆಗೆ ಮನವಿ


















