ದಕ್ಷಿಣ ಕನ್ನಡ
ಸೌಜನ್ಯ ಪ್ರಕರಣ : ಮರು ತನಿಖೆಗೆ ಒತ್ತಾಯಿಸಿ ಆ. 28ರಂದು ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ – ತಿಮರೋಡಿ, ವಾಲ್ಕೆ, ಅತ್ತಾವರ ಸಹಿತ ಹಲವು ಹಿಂದೂ ಮುಖಂಡರು ಭಾಗಿ
ಇಲಾಖೆಯ ತಪ್ಪಿನಿಂದ ನಿರ್ದೋಷಿ ಸಂತೋಷ್ ರಾವ್ ಅವರಿಗೆ ಜೈಲು ಶಿಕ್ಷೆಯಾಗಿದೆ. ಸಂತೋಷ್ ರಾವ್ ಅವರಿಗೆ ನಷ್ಟವನ್ನು ಭರಿಸಿ ಸೂಕ್ತ ಪರಿಹಾರವನ್ನು ನೀಡಬೇಕು. ಇಲಾಖೆಯ ಸೌಜನ್ಯ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಎದ್ದುಕಾಣುತ್ತಿದ್ದು, ಸರಿಯಾದ ರೀತಿಯಲ್ಲಿ ಮರು ತನಿಖೆಯನ್ನು ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ
ಪುತ್ತೂರು: ಧರ್ಮಸ್ಥಳದ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಹತ್ಯೆಯನ್ನು ಉಗ್ರವಾಗಿ ಖಂಡಿಸಿ, ಈ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಆ.೨೮ರಂದು ಪುತ್ತೂರಿನಲ್ಲಿ ಅಭಿನವ ಭಾರತ ಮಿತ್ರಮಂಡಳಿ ಪುತ್ತೂರು ಮತ್ತು ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಕುರಿತ ಮಾಹಿತಿಯನ್ನು ಅಭಿನವ ಭಾರತ ಮಿತ್ರ ಮಂಡಳಿ ಪ್ರವರ್ತಕ ದಿನೇಶ್ ಕುಮಾರ್ ಜೈನ್ ಪತ್ರಿಕಾಗೋಷ್ಟಿಯಲ್ಲಿ ಹಂಚಿಕೊಂಡಿದ್ದು, ಆ.28 ರಂದು ಮಧ್ಯಾಹ್ನ 3 ಗಂಟೆಗೆ ಪುತ್ತೂರು ದರ್ಬೆ ವೃತ್ತದಿಂದ ಬೃಹತ್ ಜನ ಜಾಗೃತಿ ಮೆರವಣಿಗೆ ಹೊರಡಲಿದೆ . ಪುತ್ತೂರಿನ ರಾಜ ಮಾರ್ಗದಲ್ಲಿ ಸಾಗುವ ಜಾಗೃತಿ ಜಾಥವು ಪುತ್ತೂರು ಬಸ್ಸು ನಿಲ್ದಾಣದ ಮೂಲಕ ಸಾಗಿ, ಪ್ರಧಾನ ಅಂಚೆ ಕಛೇರಿಯ ಬಳಿ ತಲುಪಿ ಅಲ್ಲಿಂದ ಶ್ರೀ ಮಹಾಲೀಂಗೇಶ್ವರ ದೇಗುಲದ ಗದ್ದೆಯ ಮೂಲಕ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣ ತಲುಪಲಿದ್ದು ಅಲ್ಲಿ ಸಮಾವೇಶಗೊಳ್ಳಲಿದೆ.
ಈ ಪ್ರತಿಭಟನೆಗೆ ಎಲ್ಲ ಹಿಂದೂ ಪರ ಸಂಘಟನೆಗಳು , ವಿವಿಧ ಜಾತಿಯ ಸಂಘಟನೆಗಳು ಬೆಂಬಲ ಸೂಚಿಸಿವೆ. ಜನ ಜಾಗೃತಿ ಸಭೆಯಲ್ಲಿ ಸೌಜನ್ಯ ತಾಯಿ, ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ, ಪ್ರವೀಣ್ ವಾಲ್ಕೆ, ಪ್ರಸಾದ್ ಅತ್ತಾವರ, ಸಂತೋಷ್ ರಾವ್ ಪರ ವಾಕಾಲತ್ತು ಹಾಕಿದ ವಕೀಲರಾದ ಮೋಹಿತ್, ನವೀನ್ ಪದ್ಯಾಣ ಭಾಗವಹಿಸಲಿದ್ದಾರೆ ಎಂದರು.
ಇಲಾಖೆಯ ತಪ್ಪಿನಿಂದ ನಿರ್ದೋಷಿ ಸಂತೋಷ್ ರಾವ್ ಅವರಿಗೆ ಜೈಲು ಶಿಕ್ಷೆಯಾಗಿದೆ. ಸಂತೋಷ್ ರಾವ್ ಅವರಿಗೆ ನಷ್ಟವನ್ನು ಭರಿಸಿ ಸೂಕ್ತ ಪರಿಹಾರವನ್ನು ನೀಡಬೇಕು. ಇಲಾಖೆಯ ಸೌಜನ್ಯ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಎದ್ದುಕಾಣುತ್ತಿದ್ದು, ಸರಿಯಾದ ರೀತಿಯಲ್ಲಿ ಮರು ತನಿಖೆಯನ್ನು ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ. ಕುಟುಂಬಕ್ಕೆ ಸರಿಯಾದ ನ್ಯಾಯ ಕೊಡಿಸುವಲ್ಲಿ ವಿಫಲವಾದರೆ ಖಾಸಗಿ ದಾವೆ ಹೂಡುವ ಮೂಲಕ ನ್ಯಾಯಕ್ಕೆ ಮೊರೆ ಹೋಗಲಾಗುವುದು ಎಂದು ಹೇಳಿದರು.
ದೇಶದವನ್ನು ತಾಯಿಯ ಸ್ವರೂಪದಲ್ಲಿ ಕಾಣುವುದು ಈನೆಲದಲ್ಲಿ ಮಾತೆಯರ, ಸಹೋದರಿಯ ಮೇಲೆ ದೌರ್ಜನ್ಯ ಅತ್ಯಾಚಾರ ನಡೆಯುತ್ತಿರುವುದು ಆತಂಕದ ವಿಚಾರವಾಗಿದೆ. ಹೆಣ್ಣು ಮಕ್ಕಳ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಯಾಗಬೇಕು ಎಂಬ ಆಗ್ರಹಿಸಿದರು.
ಮಂಗಳೂರು
D.K. Shivakumar-ಅ.15ರಂದು ಮಂಗಳೂರು, ಉಡುಪಿ ಜಿಲ್ಲೆಗೆ ಡಿ.ಕೆ. ಶಿವಕುಮಾರ್ ಭೇಟಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 15ರ ಗುರುವಾರ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಗುರುವಾರ ಮಧ್ಯಾಹ್ನ 4.10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು, ಸಂಜೆ 4.40ಕ್ಕೆ ಕಾಪು ಉಚ್ಚಿಲದಲ್ಲಿ ನಡೆಯುವ ದಸರಾ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಮಹಿಳಾ ದಸರಾವನ್ನು ಉದ್ಘಾಟಿಸಲಿದ್ದಾರೆ.
ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 15ರ ಗುರುವಾರ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಗುರುವಾರ ಮಧ್ಯಾಹ್ನ 4.10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು, ಸಂಜೆ 4.40ಕ್ಕೆ ಕಾಪು ಉಚ್ಚಿಲದಲ್ಲಿ ನಡೆಯುವ ದಸರಾ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಮಹಿಳಾ ದಸರಾವನ್ನು ಉದ್ಘಾಟಿಸಲಿದ್ದಾರೆ.
ಬಳಿಕ ಸಂಜೆ 6.30ಕ್ಕೆ ಮಂಗಳೂರಿನಲ್ಲಿ ನಡೆಯುವ ಮಂಗಳೂರು ದಸರಾ ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 8 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿರುವ ಅವರು, ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.
ಬಿಗ್ ನ್ಯೂಸ್
G.L. Acharya Jewellers-ವಿಜಯದಶಮಿ ಪ್ರಯುಕ್ತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನಿಂದ ವಿಶೇಷ ಕೊಡುಗೆ
ವಿಜಯದಶಮಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ವಿಶೇಷಗೊಳಿಸುವ ಉದ್ದೇಶದಿಂದ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಯಾದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಶುಲ್ಕದ ಮೇಲೆ ಗ್ರಾಹಕರಿಗೆ ಗರಿಷ್ಠ ರೂ.600ವರೆಗೆ ರಿಯಾಯಿತಿ ನೀಡಲಾಗುತ್ತಿದೆ.ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ಗೆ ಫ್ಲಾಟ್ ರೂ.8000 ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ಫ್ಲಾಟ್ ರೂ.8000 ರಿಯಾಯಿತಿ ನೀಡಲಾಗುತ್ತಿದೆ ಎಂದು ಸಂಸ್ಥೆ ಪ್ರಕಟಿಸಿದೆ.
ವಿಜಯದಶಮಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ವಿಶೇಷಗೊಳಿಸುವ ಉದ್ದೇಶದಿಂದ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಯಾದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಶುಲ್ಕದ ಮೇಲೆ ಗ್ರಾಹಕರಿಗೆ ಗರಿಷ್ಠ ರೂ.600ವರೆಗೆ ರಿಯಾಯಿತಿ ನೀಡಲಾಗುತ್ತಿದೆ.ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ಗೆ ಫ್ಲಾಟ್ ರೂ.8000 ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ಫ್ಲಾಟ್ ರೂ.8000 ರಿಯಾಯಿತಿ ನೀಡಲಾಗುತ್ತಿದೆ ಎಂದು ಸಂಸ್ಥೆ ಪ್ರಕಟಿಸಿದೆ.
ವಜ್ರಾಭರಣಗಳನ್ನು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲೇ ನೀಡುವುದರ ಜೊತೆಗೆ, ಪ್ರತಿ ಕ್ಯಾರೆಟ್ ಗೆ ರೂ.8000 ವಿಶೇಷ ರಿಯಾಯಿತಿ ನೀಡಲಾಗುವುದು ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಆಭರಣ ಖರೀದಿಗೆ ಈ ಕೊಡುಗೆ ವಿಶೇಷ ಅವಕಾಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಸಂದರ್ಭದಲ್ಲಿ ಗ್ರಾಹಕರು ಚಿನ್ನದ ಉಳಿತಾಯ ಯೋಜನೆಗೆ ಸೇರ್ಪಡೆಯಾಗುವ ಅವಕಾಶವೂ ಇದೆ.ಯೋಜನೆಗೆ ಸೇರ್ಪಡೆಯಾಗಿ ನಿಗದಿತ ಅವಧಿ ಪೂರ್ಣಗೊಳಿಸಿದ ಬಳಿಕ ಮುಂದಿನ ವರ್ಷ ಇದೇ ಹಬ್ಬದ ಸಂಭ್ರಮದ ಸಮಯದಲ್ಲಿ ಚಿನ್ನಾಭರಣ ಖರೀದಿಸಲು ಅವಕಾಶವಿದ್ದು, ಹಬ್ಬದ ಸಂದರ್ಭದಲ್ಲಿ ಉಳಿತಾಯದೊಂದಿಗೆ ಚಿನ್ನ ಖರೀದಿಸಲು ಗ್ರಾಹಕರಿಗೆ ಅನುಕೂಲ ಕಲ್ಪಿಸಲಾಗಿದೆ.
ಇತರೆ ಮಳಿಗೆಯ ಹಳೆಯ ಚಿನ್ನವನ್ನು 0% ರೇಟ್ ಡಿಡಕ್ಷನ್ನೊಂದಿಗೆ ಎಕ್ಸ್ಚೇಂಜ್ ಮಾಡಿಕೊಳ್ಳುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ.
ವಿಜಯದಶಮಿ ಹಾಗೂ ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಗ್ರಾಹಕರಿಗಾಗಿ ಆಕರ್ಷಕ ಚಿನ್ನಾಭರಣಗಳ ವೈವಿಧ್ಯಮಯ ಸಂಗ್ರಹವನ್ನು ಸಂಸ್ಥೆ ಸಿದ್ಧಪಡಿಸಿದೆ.ಸಾಂಪ್ರದಾಯಿಕ ವಿನ್ಯಾಸಗಳ ಜೊತೆಗೆ ಆಧುನಿಕ ಶೈಲಿಯ ಆಭರಣಗಳೂ ಲಭ್ಯವಿದ್ದು ಗ್ರಾಹಕರ ವಿವಿಧ ಅಭಿರುಚಿ ಹಾಗೂ ಅಗತ್ಯಗಳಿಗೆ ತಕ್ಕಂತೆ ಹಲವು ವಿನ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಹೆಚ್ಚಿನ ಉಳಿತಾಯದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಕೊಡುಗೆ ಚಿನ್ನದ ನಾಣ್ಯಗಳು, ಚಿನ್ನದ ಗಟ್ಟಿಗಳು ಹಾಗೂ ಎಲ್ಲೋ ಟ್ಯಾಗ್ ಹೊಂದಿರುವ ಆಭರಣಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ ಈ ಕೊಡುಗೆಯನ್ನು ಯಾವುದೇ ಚಿನ್ನದ ಉಳಿತಾಯ ಯೋಜನೆ ಅಥವಾ ಇತರ ಯಾವುದೇ ಯೋಜನೆಯೊಂದಿಗೆ ಸಂಯೋಜಿಸಲು ಸಾಧ್ಯವಿಲ್ಲ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಪುತ್ತೂರಿನಲ್ಲಿ ಆರಂಭಗೊಂಡಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಆರು ದಶಕಗಳಿಗೂ ಹೆಚ್ಚು ಕಾಲ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡು -ಮುನ್ನಡೆಯುತ್ತಿದೆ.ಗುಣಮಟ್ಟ,ಸೊಬಗು, ಪಾರದರ್ಶಕತೆ ಹಾಗೂ ಗ್ರಾಹಕರ ಹಿತಕ್ಕೆ ಆದ್ಯತೆ -ನೀಡುತ್ತಾ ಸಂಸ್ಥೆ ತನ್ನ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದೆ.
ಸುಳ್ಯ
ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಬಂಧನ, ತಿಹಾರ್ ಜೈಲಿಗೆ ಶಿಫ್ಟ್ ಸಾಧ್ಯತೆ

ನವದೆಹಲಿ: ನಿಷೇಧಿತ ಪ್ರದೇಶವಾದ ಜಂತರ್ ಮಂತರ್ ಪ್ರವೇಶಿಸಿ, ಪೊಲೀಸ್ ಬ್ಯಾರಿಕೇಡ್ ಉಲ್ಲಂಘಿಸಿದ ಹಾಗೂ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನಾಯಕರು ಮಂಗಳವಾರ ಮುಂಜಾನೆ ಜಂತರ್ ಮಂತರ್ ಬಳಿ ಪ್ರತಿಭಟನೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಭೇದಿಸಿ ಒಳಪ್ರವೇಶಿಸಿದ ಅವರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿತ್ತು.
ಬಂಧಿತ ನಾಯಕರನ್ನು ಇಂದು (ಬುಧವಾರ) ವಿಶೇಷ ಕಾರ್ಯಕಾರಿ ಮ್ಯಾಜಿಸ್ಟ್ರೇಟ್ (ಎಸ್ಇಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದ್ದು, ಬಳಿಕ ಅವರನ್ನು ತಿಹಾರ್ ಜೈಲಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರ ವಿರುದ್ಧ ಸಿಜೆಪಿ ಆರೋಪ:
ಸಿಜೆಪಿ ಕಾನೂನು ಘಟಕದ ಮುಖ್ಯಸ್ಥೆ ರತ್ನಾ ಸಿಂಗ್ ಅವರು ‘ಎಕ್ಸ್’ (ಟ್ವಿಟರ್) ಮೂಲಕ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
“ಜಂತರ್ ಮಂತರ್ ಘಟನೆಗೆ ಸಂಬಂಧಿಸಿದಂತೆ ನಮ್ಮ ನಾಯಕರಾದ ಸೌರವ್ ದಾಸ್, ಅಶುತೋಷ್ ಹಾಗೂ ಅಜಿಂಕ್ಯ ಅವರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ಅವರ ಮೇಲೆ ಅಕ್ರಮ ಪ್ರವೇಶ, ಬಾಂಡ್ ಉಲ್ಲಂಘನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ತಡರಾತ್ರಿಯವರೆಗೂ ವಕೀಲರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ನೀಡಿರಲಿಲ್ಲ.
ಮುಂಜಾನೆ 3 ಗಂಟೆ ಸುಮಾರಿಗೆ ಖಾಸಗಿ ವ್ಯಾನ್ ಮೂಲಕ ಅವರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಗೆ ಕರೆತರಲಾಗಿದೆ. ಈ ಎಲ್ಲ ಕಾನೂನುಬಾಹಿರ ಕ್ರಮಗಳ ನಡುವೆಯೂ ನಮ್ಮ ನಾಯಕರ ನೈತಿಕ ಸ್ಥೈರ್ಯ ಕುಗ್ಗಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿನ್ನೆಲೆ ಏನು?
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಿಜೆಪಿ ಹಾಗೂ ಇತರ ಕೆಲವು ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆಗಳನ್ನು ತೀವ್ರಗೊಳಿಸಿವೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಕಳೆದ ಅಕ್ಟೋಬರ್ 11ರಂದು ನೂತನ ಆದೇಶ ಹೊರಡಿಸಿದ್ದ ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅವರು, ಯಾವುದೇ ಧರಣಿ ಮತ್ತು ಪ್ರತಿಭಟನೆಗಳಿಗೆ ಕೇವಲ ರಾಮ್ಲೀಲಾ ಮೈದಾನ, ಬುರಾರಿ ಗ್ರೌಂಡ್ ಹಾಗೂ ಸಿಬಿಡಿ ಗ್ರೌಂಡ್ಗಳನ್ನು ಮಾತ್ರ ನಿಗದಿಪಡಿಸಿದ್ದರು. ಈ ಆದೇಶದ ಅನ್ವಯ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿದ್ದು, ಅಲ್ಲಿ ಜಮಾವಣೆಯನ್ನು ನಿಷೇಧಿಸಲಾಗಿದೆ. ನಿಷೇಧದ ನಡುವೆಯೂ ಪ್ರತಿಭಟನೆ ನಡೆಸಿದ್ದರಿಂದ ಈ ಬಂಧನ ಕಾರ್ಯಾಚರಣೆ ನಡೆದಿದೆ.
-
ನಿಧನ ವಾರ್ತೆ24 hours agoKalmadka-ಸುಳ್ಯ ಕಲ್ಮಡ್ಕದಲ್ಲಿ ದುರಂತ: ವಿದ್ಯುತ್ ಸ್ಪರ್ಶಿಸಿ ಮೀನು ಹಿಡಿಯಲು ಹೋದ ಬಾವ–ಬಾಮೈದ ಸಾವು
-
Uncategorized22 hours agoLawyer Amrutesh-ಸೌಜನ್ಯ ಪ್ರಕರಣ ಮರುತನಿಖೆ : ಸಂತೋಷ್ ರಾವ್ ವಿರುದ್ಧ ಬಲವಾದ ಸಾಕ್ಷ್ಯಗಳಿವೆ: ಧಾರ್ಮಿಕ ಕ್ಷೇತ್ರದ ಮೇಲೆ ಷಡ್ಯಂತ್ರ ನಡೆಯುತ್ತಿದೆ : ಹೈಕೋರ್ಟ್ ವಕೀಲ ಅಮೃತೇಶ್
-
ಶಿಕ್ಷಣ23 hours agoVivekananda-ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ಉಪನ್ಯಾಸಕರಿಗೆ ಡಾಕ್ಟರೇಟ್ ಪದವಿ
-
ಮಂಗಳೂರು23 hours agoRaghupti Bhat-2028ರ ಚುನಾವಣೆಯಲ್ಲಿ ಸ್ಪರ್ಧೆ ಖಚಿತ; ಕಾಂಗ್ರೆಸ್ ಸೇರ್ಪಡೆ ಬಗ್ಗೆ ಏನು ಹೇಳಿದ್ರು ರಘುಪತಿ ಭಟ್
-
ಬಿಗ್ ನ್ಯೂಸ್24 hours agoVitla-ವಿಟ್ಲ: ಕಾರು–ಆಕ್ಟಿವಾ ಡಿಕ್ಕಿ; ಸವಾರನಿಗೆ ಗಂಭೀರ ಗಾಯ
-
ರಾಜಕೀಯ21 hours agoSiddaramaiah-ಸ್ಟಿಂಗ್ ವಿಡಿಯೋ ಪ್ರಸಾರಕ್ಕೆ ಬ್ರೇಕ್ ಹಾಕಲು ಸಿದ್ದರಾಮಯ್ಯ ಕೋರ್ಟ್ ಮೊರೆ
-
ನಿಧನ ವಾರ್ತೆ22 hours agoSubramanya-ಸರ್ಪಸಂಸ್ಕಾರ ಸೇವೆಗೆ ಬಂದ ಯಾತ್ರಾರ್ಥಿಯ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆ
-
ಬಿಗ್ ನ್ಯೂಸ್23 hours agoPuttur-ಪುತ್ತೂರಿನಲ್ಲಿ ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಘಟಕ ಸ್ಥಾಪನೆಗೆ ಹಕ್ಕೊತ್ತಾಯ; 1 ಲಕ್ಷ ಸಹಿ ಸಂಗ್ರಹದ ಗುರಿ; ಸೇಡಿಯಾಪು, ಆರ್ಯಾಪುವಿನಲ್ಲಿ ಜಮೀನು ಗುರುತು


















