Connect with us

ದಕ್ಷಿಣ ಕನ್ನಡ

ಬೇರೊಬ್ಬನ ಪತ್ನಿಯನ್ನು ಪ್ರೀತಿಸುತ್ತಿದ್ದನೆಂದು ಹಲ್ಲೆ – ಕಾಲ್ ತೆಗೆಯದೆ ಪ್ರಿಯತಮೆಯಿಂದಲೂ ತಾತ್ಸಾರ – ಮನನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ – ಹಲವರ ವಿರುದ್ದ ಪ್ರಕರಣ ದಾಖಲು

ಹಲ್ಲೆ ಘಟನೆಯಿಂದ ಹಾಗೂ ತಾನು ಪ್ರೀತಿಸುತ್ತಿರುವ ಅದ್ರಾಮರವರ ಪತ್ನಿಯು ತನ್ನ ದೂರವಾಣಿ ಕರೆ ಸ್ವೀಕರಿಸದೇ ತಾತ್ಸಾರ ಮಾಡುತ್ತಿರುವುದರಿಂದ ಅವಮಾನಗೊಂಡ ನಾಸೀರ್‌ ಅವರು ಆ 22 ರಂದು ಪುತ್ತೂರು ಹೊರವಲಯದ ಸಂಟ್ಯಾರಿನ ಸಮೀಪ ಕಟ್ಟತ್ತಾರು ಎಂಬಲ್ಲಿ ವಿಷಪಾಷಣ ಸೇವಿಸಿ ಅಸ್ವಸ್ಥಗೊಂಡಿದ್ದಾರೆ

Published

on



Ad Widget

Ad Widget

Ad Widget

Ad Widget

ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ನಿವಾಸಿ ಅಬ್ದುಲ್ ನಾಸಿರ್ (28) ಎಂಬಾತ ಲೈವ್‌ ವಿಡಿಯೋದಲ್ಲಿ ತನ್ನ ಮನದ ದುಗುಡ ವ್ಯಕ್ತಪಡಿಸಿ ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಆ 22 ರಂದು ನಡೆದಿದ್ದು, ಗಂಭೀರವಾಗಿ ಅಸ್ವಸ್ಥಗೊಂಡಿರುವ ಆತನನ್ನು ಮಂಗಳೂರಿನ ಖಾಸಗಿ ಆಸ್ಫತ್ರೆಗೆ ದಾಖಲಿಸಲಾಗಿದೆ.

Ad Widget

Ad Widget

Ad Widget

Ad Widget

ಆತ್ಮಹತ್ಯೆಗೂ ಮುನ್ನ ನನ್ನ ಮೇಲೆ ತಂಡವೊಂದು ಹಲ್ಲೆ ನಡೆಸಿರುವುದಾಗಿ ಅಬ್ದುಲ್ ನಾಸಿರ್ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾನೆ. ಹಲ್ಲೆ ಹಾಗೂ ತಾನು ಪ್ರೀತಿಸುತ್ತಿದ್ದ ಮಹಿಳೆ ಫೋನ್‌ ಕರೆ ಸ್ವೀಕರಿಸದೆ ತಾತ್ಸಾರ ಮಾಡುತ್ತಿರುವುದರಿಂದ ಅವಮಾನಿತನಾಗಿ ಆತ್ಮಹತ್ಯೆಗೆ ಯತ್ನಿಸುತ್ತಿರುವುದಾಗಿ ದೂರಿನಲ್ಲಿ ವಿವರಿಸಿದ್ದಾನೆ.
ನಾಸೀರ್‌ ನೀಡಿರುವ ದೂರಿನ್ನು ಸ್ವೀಕರಿಸಿರುವ ಬೆಳ್ಳಾರೆ ಪೊಲೀಸರು ಸ್ಥಳೀಯ ನಿವಾಸಿಗಳಾದ ಅದ್ರಾಮ ಹಾಗೂ ಮೊಯ್ದು, ತಾಜು, ಅಬ್ದುಲ್ಲಾ, ಸಮೀರ್ ಮತ್ತು ಇತರರ ವಿರುದ್ದ ಐಪಿಸಿ ಕಲಂ ಕಲಂ 341,323, 506 ಜೊತೆಗೆ 149 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

FIR ನಲ್ಲಿ ಏನಿದೆ ?

Ad Widget

Ad Widget <> Ad Widget

ಆ 17 ರಂದು ರಾತ್ರಿ ಬೆಳ್ಳಾರೆ ಗ್ರಾಮದ ನಿವಾಸಿ ಅದ್ರಾಮ ಎಂಬವರ ಮಗಳ ಚಿಕಿತ್ಸೆಗಾಗಿ , ಅದ್ರಾಮರವರ ಕಾರಿನಲ್ಲಿ ಅವರ ಪತ್ನಿ ಹಾಗೂ ಮಗಳನ್ನು ಚಾಲಕನಾಗಿ ಅಬ್ದುಲ್ ನಾಸಿರ್ ಕರೆದುಕೊಂಡು ಹೋಗಿ ವಾಪಸ್ಸು ಮನೆಗೆ ಕರೆದುಕೊಂಡು ಬಂದು ಬಿಟ್ಟಿರುತ್ತಾನೆ.ಬಳಿಕ ಅದ್ರಾಮ ಅವರ ಮನೆಯಿಂದ ವಾಪಸ್ಸು ತನ್ನ ಮನೆಗೆ ಹೋಗುತ್ತಿದ್ದ ವೇಳೆ ಆರೋಪಿಗಳಾದ ಅದ್ರಾಮ ಮೊಯ್ದು, ತಾಜು, ಅಬ್ದುಲ್ಲಾ, ಸಮೀರ್ ಮತ್ತು ಇತರರು ಸೇರಿ ಅಬ್ದುಲ್ ನಾಸಿರ್ ನನ್ನು ತಡೆಯುತ್ತಾರೆ. ಅದ್ರಾಮರವರ ಪತ್ನಿಯನ್ನು ಪ್ರೀತಿಸುತ್ತಿರುವ ಹಿನ್ನೆಲೆಯಲ್ಲಿ ತಕರಾರು ತೆಗೆದು ನಾಸೀರ್‌ ಮೇಲೆ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿ ಪುತ್ತೂರಿನ ಕೂರ್ನಡ್ಕ ಎಂಬಲ್ಲಿ ಕಾರಿನಿಂದ ಇಳಿಸಿ ಹೋಗಿರುತ್ತಾರೆ.



Ad Widget

ಹಲ್ಲೆ ಘಟನೆಯಿಂದ ಹಾಗೂ ತಾನು ಪ್ರೀತಿಸುತ್ತಿರುವ ಅದ್ರಾಮರವರ ಪತ್ನಿಯು ತನ್ನ ದೂರವಾಣಿ ಕರೆ ಸ್ವೀಕರಿಸದೇ ತಾತ್ಸಾರ ಮಾಡುತ್ತಿರುವುದರಿಂದ ಅವಮಾನಗೊಂಡ ನಾಸೀರ್‌ ಅವರು ಆ 22 ರಂದು ಪುತ್ತೂರು ಹೊರವಲಯದ ಸಂಟ್ಯಾರಿನ ಸಮೀಪ ಕಟ್ಟತ್ತಾರು ಎಂಬಲ್ಲಿ ವಿಷಪಾಷಣ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

Ad Widget

Ad Widget

ಆತ್ಮಹತ್ಯೆ ಯತ್ನಕ್ಕೂ ಮುನ್ನ ಮಾಡಿದ ವಿಡಿಯೋದಲ್ಲಿ ಏನಿದೆ ?

ಆತ್ಮಹತ್ಯೆಗೆ ಯತ್ನಿಸುವ ಮುನ್ನ ಯುವಕ ಬ್ಯಾರಿ ಭಾಷೆಯಲ್ಲಿ ವಿಡಿಯೋ ಮಾಡಿದ್ದು ಅದರಲ್ಲಿ ತನ್ನ ಮನದ ದುಗುಡ ಹೇಳಿಕೊಂಡಿದ್ದಾನೆ ” ನಾನು ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್. ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿದ್ದೆ. ಈಗ ಅಲ್ಲಿನ ಕುಟುಂಬದ ಹುಡುಗಿ ಜೊತೆಗೆ ಸಂಬಂಧ ಇದೆಯೆಂದು ಹೇಳಿ ಮನೆಗೆ ಕರೆದು ಹಲ್ಲೆ ನಡೆಸಿದ್ದಾರೆ. ನನಗೆ ಯಾವುದೇ ಹುಡುಗಿ ಜೊತೆಗೆ ಸಂಬಂಧ ಇಲ್ಲ. ನಾನು ಈಗ ಪುತ್ತೂರಿಗೆ ಹೋಗಿ ಸಾವಿಗೆ ಶರಣಾಗುತ್ತೇನೆ. ನನ್ನ ಸಾವಿಗೆ ಅದ್ರಾಮ ಮತ್ತು ಅವನ ಕುಟುಂಬಸ್ಥರೇ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

ಮುಂದುವರಿದು ” ನನಗೆ ಯಾವುದೇ ಹುಡುಗಿಯ ಜತೆ ಸಂಬಂಧವಿಲ್ಲ. ಆಕೆಯ ಗಂಡನೇ ಈ ಕಾರಿನಲ್ಲಿದ್ದಾನೆ ಎಂದು ಹೇಳಿ ಜೊತೆಗಿದ್ದ ನಾಲ್ವರು ಯುವಕರನ್ನು ತೋರಿಸಿದ್ದಾನೆ. ಬಳಿಕ ವಿಡಿಯೋ ಅಲ್ಲಿಗೆ ಮಕ್ತಾಯಗೊಂಡಿದೆ. ಬಳಿಕ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸರಬಹುದು ಎಂದು ಶಂಕಿಸಲಾಗಿದೆ.

Ad Widget
Click to comment

Leave a Reply

ರಾಜಕೀಯ

Amal Ramachandra-ಒಳ್ಳೆಯ ರೀತಿಯಲ್ಲಿ ಬೆಳೆವಿಮೆ ಬಂದರೆ ಮೋದಿಯಿಂದಾಗಿ ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿ ಈಗ ಕಾಂಗ್ರೆಸ್ ನ್ನು ದೂರುತ್ತಿದೆ..! ಟರ್ಮ್ ಶೀಟ್ ಬದಲಾವಣೆ ಮಾಡಿದ್ದು ಬಿಜೆಪಿ ಈ ಬಗ್ಗೆ ದಾಖಲೆಯಿದೆ; ಅಶೋಕ್ ರೈ ಹುಟ್ಟಿಸಿದ ಲಿಸ್ಟ್ ಕೊಡ್ತೇನೆ 8 ವರ್ಷಗಳಲ್ಲಿ ಬೆಳ್ತಂಗಡಿಯಲ್ಲಿ ಪೂಂಜಾ ಹುಟ್ಟಿಸಿದ್ದೇನೂ..? ಪುಡಾ ಅಧ್ಯಕ್ಷ ಅಮಳ ರಾಮಚಂದ್ರ

Published

on



Ad Widget

Ad Widget

Ad Widget

Ad Widget

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಒಂದು ನಿಗೂಢ ಯೋಜನೆ. ಕಾರ್ಪೊರೇಟ್ ಜಗತ್ತಿನ ಪರವಾಗಿ ಕಾರ್ಯನಿರ್ವಹಿಸುವ ಮೋದಿ ಸರಕಾರ ರೈತರನ್ನು ಕತ್ತಲಲ್ಲಿಟ್ಡು, ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ತಂದ ಯೋಜನೆ ಇದು ಎಂದು ಪುಡಾ ಅಧ್ಯಕ್ಷರಾದ ಅಮಳ ರಾಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Ad Widget

Ad Widget

Ad Widget

Ad Widget

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಒಂದು ನಿಗೂಢ ಯೋಜನೆ. ಕಾರ್ಪೊರೇಟ್ ಜಗತ್ತಿನ ಪರವಾಗಿ ಕಾರ್ಯನಿರ್ವಹಿಸುವ ಮೋದಿ ಸರಕಾರ ರೈತರನ್ನು ಕತ್ತಲಲ್ಲಿಟ್ಡು, ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ತಂದ ಯೋಜನೆ ಇದು.

Ad Widget

Ad Widget

Ad Widget alt="Ad Widget"/>

Ad Widget

ಈ ಯೋಜನೆಯಲ್ಲಿ ಸರಕಾರ ಮತ್ತು ವಿಮಾ ಕಂಪೆನಿಗಳ ನಡುವೆ ಒಪ್ಪಂದ ಏರ್ಪಟ್ಟು , ರೈತ ಪ್ರೀಮಿಯಂ ಪಾವತಿಸಿದ 1.5 ವರ್ಷದ ನಂತರ ಸ್ವಯಂಚಾಲಿತವಾಗಿ ರೈತರ ಖಾತೆಗೆ ವಿಮಾ ಮೊತ್ತ ಪಾವತಿಯಾಗುವ ವ್ಯವಸ್ಥೆ. ಈ ಯೋಜನೆಗೆ ಅಪ್ಪ ಯಾರು, ಇದನ್ನು ನಿರ್ವಹಿಸುವವರು ಯಾರು, ಸರಿಯಾದ ವಿಮಾ ಮೊತ್ತ ಪಾವತಿಯಾಗದೇ ಹೋದರೆ ದೂರು ದುಮ್ಮಾನಗಳನ್ನು ಯಾರಿಗೆ ಸಲ್ಲಿಸಬೇಕು , ಎಷ್ಟು ಮಳೆ ಬಂದಿದೆ, ಎಷ್ಟು ಉಷ್ಣಾಂಶ ಹೆಚ್ಚಾಗಿದೆ, ನಮಗೆ ನ್ಯಾಯವಾಗಿ ಎಷ್ಟು ಪರಿಹಾರ ಸಿಗಬೇಕು, ಪರಿಹಾರ ನ್ಯಾಯಬದ್ಧವಾಗಿದೆಯೇ ಎಂಬ ಯಾವುದೇ ವಿವರಗಳು ಪಾಲಿಸಿದಾರರಿಗೆ ಸಿಗದ , ಪಾರದರ್ಶಕತೆಯ ಲವಲೇಷವೂ ಇಲ್ಲದ ಒಂದು ವ್ಯವಸ್ಥೆ ಇದು ಎಂದು ಪುಡಾ ಅಧ್ಯಕ್ಷರಾದ ಅಮಳ ರಾಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Ad Widget

Ad Widget <> Ad Widget

ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಮಳ ರಾಮಚಂದ್ರ , ವಿಮಾ ಮೊತ್ತ ಪ್ರತಿ ಹೆಕ್ಟೇರಿಗೆ ಅಡಿಕೆಗೆ 1,28,000, ಕಾಳು ಮೆಣಸಿಗೆ 47,000 , ಒಟ್ಟು 1,75,000. ಇದರ ಪ್ರೀಮಿಯಂ ಕಂತು 25% ಆದರೆ ಸರಕಾರಗಳು ವಿಮಾ ಕಂಪೆನಿಗೆ ನೀಡುವ ತಲಾ 20% ಹಣ ರೂ 35,000. ಪ್ರೀಮಿಯಂ ಅಡಿಕೆಗೆ 35℅ ಕಾಳುಮೆಣಸಿಗೆ 30% ಆದರೆ ಉಭಯ ಸರಕಾರಗಳು ಕಂಪೆನಿಗೆ ನೀಡುವ 30%ಹಣದ ಮೊತ್ತ ರೂ ಅಡಿಕೆಗೆ ರೂ38,400, ಕಾಳುಮೆಣಸಿಗೆ ರೂ11750, ಒಟ್ಟು ರೂ50,150. ಇಷ್ಟು ದೊಡ್ಡ ಮೊತ್ತದ ನಮ್ಮ ತೆರಿಗೆಯ ಹಣ ಸರಕಾರ ವಿಮಾ ಕಂಪೆನಿಗೆ ನೀಡುವುದಾದರೆ, ಪರಿಹಾರ ಬಂದರೆ ಬಂತು, ಬಾರದಿದ್ದರೆ ಇಲ್ಲ, ಇದರಿಂದ ವಿಮಾ ಕಂಪೆನಿಗಳಿಗೆ ಲಾಭ ಆಗುವುದಾದರೆ, ನಮ್ಮ ಮತ್ತು ಸರಕಾರದ ಮದ್ಯೆ ವಿಮಾ ಕಂಪೆನಿ ಯಾಕೆ ಬೇಕು? ಸರಕಾರಗಳು ನೇರವಾಗಿಯೇ ಪ್ರತಿವರ್ಷ ಪ್ರತಿ ಹೆಕ್ಟೇರಿಗೆ ರೂ 50150ರಂತೆ ರೈತರ ಖಾತೆಗೆ ನೇರವಾಗಿ ಹಾಕಬಹುದಲ್ಲವೇ ? ಸರಕಾರದ ಹಣದಲ್ಲಿ ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವುದಕ್ಕಾಗಿಯೇ ಈ ಯೋಜನೆಯನ್ನು ಕೇಂದ್ರದ ಮೋದಿ ಸರಕಾರ ಜಾರಿಗೆ ತಂದಿದೆ.



Ad Widget

2016ರಲ್ಲಿ ಮರುವಿನ್ಯಾಸಗೊಳಿಸಿದ ಬೆಳೆ ವಿಮಾ ಯೋಜನೆ ಆರಂಭಗೊಂಡ ನಂತರ ಮೊದಲ ಕೆಲವು ವರ್ಷಗಳಲ್ಲಿ ಯೋಜನೆ ಬಹಳ ಚೆನ್ನಾಗಿತ್ತು. ಹತ್ತು ಸಾವಿರ 20 ಸಾವಿರ ಪ್ರೀಮಿಯಂ ಕಟ್ಟಿದ ರೈತರಿಗೆ ಲಕ್ಷ ಲಕ್ಷ ಹಣ ಬರುತ್ತಿತ್ತು. ರಾಜ್ಯ ಮತ್ತು ಕೇಂದ್ರದ ಸರಕಾರಗಳು ಸೇರಿ ಅನುಷ್ಟಾನಗೊಳಿಸಿದ ಈ ಯೋಜನೆಯಲ್ಲಿ ರೈತರಿಗೆ ಒಳ್ಳೆಯ ಪರಿಹಾರ ಬಂದಾಗ ಮೋದಿಯಿಂದಾಗಿ ಹಣ ರೈತರಿಗೆ ಬಂತು ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿಯವರಿಗೆ ಈಗ ರಾಜ್ಯ ಸರ್ಕಾರವನ್ನು ದೂರುತ್ತಿರುವುದು ಅತ್ಯಂತ ನಾಚಿಕೆಗೇಡು ಸಂಗತಿಯಾಗಿ. ಅದರಲ್ಲಿಯೂ ಯಾವ ತಪ್ಪನ್ನು ಮಾಡದ ರಾಜ್ಯ ಕಾಂಗ್ರೆಸ್ ಸರಕಾರವನ್ನು ವಿನಾಕಾರಣ ತಪ್ಪು ಮಾಹಿತಿ ನೀಡಿ ದೂಷಿಸುವುದು ಮತ್ತು ತಮ್ಮದೇ ಪಕ್ಷದ ಜೋಪಾಸಣಾ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು ಮಾಡಿದ ತಪ್ಪನ್ನು ಕಾಂಗ್ರೆಸ್ ಸರಕಾರದ ಮೇಲೆ ಹೇರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.

Ad Widget

Ad Widget

2023ರಲ್ಲಿ ಟರ್ಮಶೀಟ್ ಬದಲಾವಣೆ ಮಾಡಲಾಯಿತು ಎಂದು ಬಿಜೆಪಿಯವರು ಆರೂಪಿಸುತ್ತಿರುವುದು ನಿಜ. ಆದರೆ ಈ ಟರ್ಮ್ ಶೀಟ್ 2023ರಲ್ಲಿ ಯಾವಾಗ ಬದಲಾವಣೆ ಆಯಿತು , ಯಾವಾಗ ಟೆಂಡರ್ ಕರೆಯಲಾಯಿತು, ಯಾವಾಗ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು ಎನ್ನುವುದನ್ನು ನೋಡಿದರೆ ಬಿಜೆಪಿಯವರು ಎಷ್ಟು ಸುಳ್ಳು ಹೇಳುತ್ತಿದ್ದಾರೆ ಅನ್ನೋದು ಅರ್ಥ ಆಗುತ್ತದೆ. ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆ ನಡೆದದ್ದು 2023ರ ಮೇ ಹತ್ತರಂದು. ಫಲಿತಾಂಶ ಪ್ರಕಟವಾದದ್ದು 2023 ನೇ ಇಸವಿಯ ಮೇ 13 ರಂದು. ಫಲಿತಾಂಶ ಪ್ರಕಟವಾದ ನಂತರ, ಕಾಂಗ್ರೆಸ್ ಪಕ್ಷ ಬಹುಮತವನ್ನು ಪಡೆದು, ಮಾನ್ಯ ಸಿದ್ದರಾಮಯ್ಯನವರು ಆಡಳಿತ ಪಕ್ಷದ ನಾಯಕರಾಗಿ ಆಯ್ಕೆಗೊಂಡು, ಅವರು ಅಧಿಕಾರ ಸ್ವೀಕರಿಸಿದ್ದು 20 ಮೇ 2023 ರಂದು. ಆದರೆ ಈ ಟರ್ಮ್ ಶೀಟ್ ಬದಲಾವಣೆ, ಇಲ್ಲವಾರು ಟೆಂಡರ್ ಆದೇಶ ಮೇ ತಿಂಗಳ 19ನೇ ತಾರೀಕಿನಂದೇ ಆಗಿತ್ತು. ಅಂದರೆ ಕಾಂಗ್ರೆಸ್ ಸರಕಾರ 2023ರಲ್ಲಿ ಅಧಿಕಾರ ವಹಿಸಿಕೊಂಡು , ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸುವುದಕ್ಕೆ ಒಂದು ದಿನಕ್ಕೆ ಮೊದಲೇ ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ಸ್ಪಷ್ಟವಾದ ದಾಖಲೆಗಳಿದ್ದು, ಈ ದಾಖಲೆಗಳನ್ನು ನಾನು ದ.ಕ. ಜಿಲ್ಲೆಯ ಮಹಾಜನತೆಗೆ ಮತ್ತು ಪುತ್ತೂರಿನ ಎಲ್ಲಾ ಅಡಿಕೆ ಬೆಳೆಗಾರರಿಗೆ ಈ ಪತ್ರಿಕಾಗೋಷ್ಠಿಯಲ್ಲಿ ಸಲ್ಲಿಸುತ್ತಿದ್ದೇನೆ.

ಒಂದು ಸರಕಾರದ ಅವಧಿ ಮುಗಿದ ನಂತರ ನಂತರ ಇನ್ನೊಂದು ಸರಕಾರದ ಆಯ್ಕೆಗಾಗಿ ಚುನಾವಣೆ ನಡೆದು ಹೊಸ ಸರಕಾರ ಅಧಿಕಾರ ಸ್ವೀಕರಿಸುವವರೆಗೆ ಹಿಂದಿನ ಸರಕಾರದ ಮುಖ್ಯಮಂತ್ರಿಗಳೇ ಜೋಪಾಸಣಾ ಮುಖ್ಯಮಂತ್ರಿಗಳಾಗಿರುತ್ತಾರೆ. ಜೋಪಾಸಣಾ ಮುಖ್ಯಮಂತ್ರಿಗಳು ಕೇವಲ ಸರಕಾರವನ್ನು ನೋಡಿಕೊಳ್ಳುತ್ತಾರೆ ಅಷ್ಟೇ ಹೊರತು ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲಾ ಅಧಿಕಾರವೂ ರಾಜ್ಯಪಾಲರಲ್ಲೇ ಕೇಂದ್ರೀಕೃತವಾಗಿರುತ್ತದೆ. ಆಗಿನ ಜೋಪಾಸಣಾ ಮುಖ್ಯಮಂತ್ರಿಗಳಾಗಿದ್ದವರು ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಯವರು ಮತ್ತು ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿದ್ದವರು, ಕೇಂದ್ರದ ಬಿಜೆಪಿ ಸರಕಾರ ನೇಮಿಸಿದ, ಬಿಜೆಪಿಯ ಹಿರಿಯ ನಾಯಕರಾದ ಥಾವರ್ ಚಂದ್ ಗೆಹ್ಲೋಟ್ ಆಗಿದ್ದರು. ಅಂದರೆ ಇವತ್ತು ಟರ್ಮ್ ಶೀಟಿನಲ್ಲಿ ಏನಾದರೂ ಬದಲಾವಣೆಗಳಾಗಿ, ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ವಿಮೆಯ ಪರಿಹಾರದ ಮೊತ್ತ ಕಡಿಮೆಯಾಗಿ ಏನಾದರೂ ತೊಂದರೆ ಆಗಿದ್ದರೆ ಅದಕ್ಕೆ ಮೂಲಕ ಕಾರಣ ಅಂದಿನ ಕರ್ನಾಟಕದ ಸರಕಾರದ ಜೋಪಸನಾ ಮುಖ್ಯಮಂತ್ರಿಗಳಾದ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರು ಮತ್ತು ಅಂದಿನ ರಾಜ್ಯಪಾಲರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರೇ ಆಗಿದ್ದಾರೆ. ಮತ್ತು ಈ ಎಲ್ಲದರ ಹಿಂದೆ ಇರುವುದು ಭಾರತೀಯ ಜನತಾ ಪಕ್ಷವೇ ಆಗಿದೆ. 2023ರಲ್ಲಿ ಟರ್ಮ್ ಶೀಟ್ ಬದಲಾಯಿತು ಅನ್ನುವುದು ಸತಗಯ, 2023ರಲ್ಲಿ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂತು ಅನ್ನೂವುದೂ ಸತ್ಯ. ಹೀಗೆ ಈ 2 ಸತ್ಯಗಳನ್ನು ಮುಂದಿಟ್ಡುಕೊಂಡು ಬಿಜೆಪಿಯವರು ಸತ್ಯದ ತಲೆಯ ಮೇಲೆ ಹೊಡೆದು ಸುಳ್ಳನ್ನು ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಜಿಲ್ಲೆಯ ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಕಟಕಟೆಯಲ್ಲಿ ನಿಲ್ಲಿಸಲು ವಿಫಲ ಪ್ರಯತ್ನ ನಡೆಸಿದ್ದಾರೆ.

ತಮ್ಮ ಇತಿಹಾಸದುದ್ದಕ್ಕೂ ಸುಳ್ಳುಗಳನ್ನು ಹೇಳಿ ಅಧಿಕಾರ ಪಡೆದ ಬಿಜೆಪಿಯವರು ಮತ್ತು ಅದರ ನಾಯಕರು ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದಲ್ಲಿಯೂ ಸುಳ್ಳನ್ನೇ ಹೇಳುತ್ತಿದ್ದಾರೆ ಮತ್ತು ಆ ಮೂಲಕ ದೇಶದ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಯಾವುದೇ ಆಧಾರಗಳಿಲ್ಲದೆ ಕಪೋಲ ಕಲ್ಪಿತ ವಿಚಾರಗಳನ್ನು ಜನರ ಮುಂದಿಟ್ಟು, ಸಂದರ್ಭಕ್ಕೆ ಸರಿಯಾಗಿ ಸುಳ್ಳುಗಳನ್ನು ಹೇಳಿ, ಜನರ ದಾರಿ ತಪ್ಪಿಸಿ, ವೋಟು ಪಡೆದು ಅಧಿಕಾರಕ್ಕೆ ಇರುವ ಕಲೆಯನ್ನು ಇವರು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಾ ಬಂದಿದ್ದಾರೆ. ಮತಯಂತ್ರಗಳನ್ನು ತಿಳಿಸಿ , ದೇಶದ ದಲಿತ ದಮನಿತ, ಅಲ್ಪಸಂಖ್ಯಾತರ ಮತಗಳನ್ನು ವೋಟರ್ ಲಿಸ್ಟ್ ಇಂದ ಇಡೀ ದೇಶಕ್ಕೂ ಸಮಸ್ತ ಹಿಂದೂ ಸಮಾಜಕ್ಕೂ ಮೋಸ ಮಾಡಿದ ಇವರು ಅಡಿಕೆಯ ಬೆಳೆ ವಿಮೆಯ ವಿಚಾರದಲ್ಲಿ ಒಂದು ಕಪೋಲ ಕಲ್ಪಿತ ಸುಳ್ಳು ವಿಚಾರವನ್ನು ಮುಂದಿಟ್ಟು , ಇಡೀ ಜಿಲ್ಲೆಯಲ್ಲಿ ಹಂಗಾಮ ನಡೆಸಿ , ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಡಿಕೆ ಬೆಳೆಗಾರರಿಗೆ ದ್ರೋಹವನ್ನು ಎಸೆಗಿದ್ದಾರೆ.

ಹೀಗೆ ಬಿಜೆಪಿಯವರು ರಾಜ್ಯಸರಕಾರದ ಮೇಲೆ ಗೂಬೆ ಕೂರಿಸಿ ಜನರ ಕಣ್ಣಿ ಮಂಕುಬೂದಿ ಎರಚಿ ಮುಂದಿನ ಚುನಾವಣೆ ಎದುರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳು ಬಿಜೆಪಿಯವರಿಗಾಗಲೀ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರಿಗಾಗಲೀ ತಿಳಿಯದ ವಿಚಾರ ಏನೆಲ್ಲ. ಆದರೆ ಅವರು ಅರ್ಧ ಸತ್ಯವನ್ನು ಹೇಳಿ ಇನ್ನರ್ಧ ಸತ್ಯವನ್ನು ಮುಚ್ಚಿಟ್ಟು, ಮತ್ತೆ ಇನ್ನೊಂದಷ್ಟು ವಿಚಾರಗಳನ್ನು ತಿರುಚಿ ಜಿಲ್ಲೆಯ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇವರ ಉದ್ದೇಶ ಮುಂದಿನ ಚುನಾವಣೆಯಲ್ಲಿ ಮತ ಕದಿಯುವುದು. ಓಟ್ ಚೋರಿ ಮಾಡಿ ಸಿಕ್ಕಿಹಾಕಿಕೊಂಡ ಮೋದಿ , ಶಾ ಜೋಡಿ ಇಂದು ಇಡೀ ದೇಶದಲ್ಲಿ ಮುಖ ಮುಚ್ಚಿ ಓಡಾಡಿಕೊಂಡಿರುವುದರಿಂದ ಧೃತಿಗೆಟ್ಟ ಬಿಜೆಪಿಯವರು ಮತ್ತೆ ಪುನಃ ಸುಳ್ಳಿನ ರಾಜಕೀಯಕ್ಕೆ ಹಿಂತಿರುಗಿದ್ದಾರೆ. ಇದು ಖಂಡನಾರ್ಹ.ಸುಳ್ಳು ಹೇಳಿ ದ.ಕ. ಜಿಲ್ಲೆಯ ಜನರಿಗೆ ಮೋಸ ಮಾಡುತ್ತಿರುವ ಬಿಜೆಪಿಯ ನಡವಳಿಕೆ ಅಕ್ಷಮ್ಯ ಅಪರಾಧವಾಗಿದೆ.

ಇದರ ಜೊತೆಗೆ ಮಾನ್ಯ ಹರೀಶ್ ಪೂಂಜಾರವರು ಪುತ್ತೂರಿನ ಶಾಸಕರಾದ ಅಶೋಕ್‌ಕುಮಾರ್ ರೈವರ ಮೇಲೆ ವೈಯ್ಯಕ್ತಿ ದಾಳಿ ನಡೆಸಿದ್ದಾರೆ. ತನಾನು ಹುಟ್ಟಿಸಿದ ಮಗುವಿಗೆ ನಾನೇ ಅಪ್ಪ ಎಂದು ಹೇಳುವ ಪೂಂಜಾರವರ ಕೀಳು ಮಾತುಗಳಿಗೆ ಮಾನ್ಯ ಶಾಸಕರು ಸರಿಯಾದ ಉತ್ತರ ನೀಡಿದ್ದಾರೆ. ಹುಟ್ಡಿಸುವ ಮಾತುಗಳನ್ನ ಆಡುತ್ತಿರುವ ಹರೀಶ್‌ ಪೂಂಜಾರವರು ಅಶೋಕ್ ರೈಯವರು ಪುತ್ತೂರಿನಲ್ಲಿ ಏನನ್ನು ಹುಟ್ಟಿಸಿದ್ದಾರೆ ಮತ್ತು ಸ್ವತಃ ತಾನು ಬೆಳ್ತಂಗಡಿಯಲ್ಲಿ ಏನನ್ನು ಹುಟ್ಟಿಸಿದ್ದಾರೆ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳುವುದು ಒಳಿತು.

ಬಾಯಿ ಚಪಲಕ್ಕೆ ಮಾತನಾಡುವ ಹರೀಶ್ ಪೂಂಜಾರವರಿಗೆ ನಾವು ಕೊಡುವ ಉತ್ತರ ಇದು. ಪುತ್ತೂರಿನಲ್ಲಿ ನಮ್ಮ ಶಾಸಕರು ಒಂದು ಸರಕಾರಿ ಮೆಡಿಕಲ್ ಕಾಲೇಜು ಹುಟ್ಟಿಸಿದ್ದಾರೆ.
ಮುಂಡೂರು ಗ್ರಾಮದಲ್ಲಿ ಒಂದು ಕ್ರೀಡಾಂಗಣವನ್ನು ಹುಟ್ಟಿಸಿದ್ದಾರೆ,
ಅಲ್ಲೇ ಪಕ್ಕದಲ್ಲಿ ಒಂದು ಸರ್ವ ಸುಸಜ್ಜಿತ ಆರ್.ಟಿ.ಒ. ಟ್ರ್ಯಾಕ್ ಹುಟ್ಡಿಸಿದ್ದಾರೆ, ಬಜತ್ತೂರು ಗ್ರಾಮದಲ್ಲಿ ಒಂದು ಅಂಬೇಡ್ಕರ್ ವಸತಿ ಶಾಲೆ ಹುಟ್ಟಿಸಿದ್ದಾರೆ,
ಕುರಿಯ ಗ್ರಾಮದಲ್ಲಿ ಒಂದು ಶ್ರಮಿಕ ವಸತಿ ಶಾಲೆ ಹುಟ್ಟಿಸಿದ್ದಾರೆ.
ಬಿರುಮಲೆ ಬೆಟ್ಟದಲ್ಲಿ ಅಭಿವೃದ್ಧಿಯ ಪರ್ವವನ್ನು ಹುಟ್ಡಿಸಿದ್ದಾರೆ ,
ಬನ್ನೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಒಂದು ಹಾಸ್ಟೆಲ್ ಹುಟ್ಟಿಸಿದ್ದಾರೆ.
ತಾಲೂಕು ಪಂಚಾಯತ್‌ಗೆ ಒಂದು ನೂತನ ಕಟ್ಟಡ ಹುಟ್ಟಿಸಿದ್ದಾರೆ. ನಗರದಲ್ಲಿ ಒಂದು
ನೂತನ ಪ್ರವಾಸಿ ಮಂದಿರ ಹುಡ್ಟಿಸಿದ್ದಾರೆ.
ಕಬಕದಿಂದ ವಿಟ್ಲಕ್ಕೆ ಒಂದು ಚತುಷ್ಪತ ರಸ್ತೆ ಹುಟ್ಟಿಸಿದ್ದಾರೆ.
ನಿವೇಶನ ರಹಿತ ಬಡವರಿಗೆ ನೂರಾರು ಮನೆ ನಿವೇಶನ ಹುಟ್ಟಿಸಿದ್ದಾರೆ. ನಿಮ್ಮದೇ ಪಕ್ಷದ ಖದೀಮರು ನುಂಗಿ ನೀರು ಕುಡಿಯಲು ನೋಡಿದ್ದ ಮಹಾಲಿಂಗೇಶ್ವರ ದೇವಸ್ಥಾನದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ದೇವಾಲಯದ ಸ್ವಾದೀನಕ್ಕೆ ಮರು ಒಪ್ಪಿಸಿ ಮರು ಹುಟ್ಟು ನೀಡಿದ್ದಾರೆ. ಕಳೆದ 8 ವರ್ಷಗಳಿಂದ ಶಾಸಕರಾಗಿರುವ ನೀವೇನು ಹುಟ್ಟಸಿದಿರಿ ? ನೀವು ಹುಟ್ಟಿಸಿದ್ದು ಕೋಮುವಾದ ಮಾತ್ರ ! ನೀವು ಹುಟ್ಟಿಸಿದ್ದು ಹಿಂದೂ ಮುಸ್ಲಿಂ ದ್ವೇಷ ಮಾತ್ರ ! ನೀವು ಹುಟ್ಟಿಸಿದ್ದು ಗೋಣಿ ಚೀಲದ ತುಂಬಾ ಕಂತೆ ಕಂತೆ ಹಣ ಮಾತ್ರ ! ನೀವು ಹುಟ್ಟಿಸಿದ್ದು ಅದೇ ಸುಳ್ಳಿನ ರಾಜಕಾರಣ ಮಾತ್ರ ! ಒಂದು ಅವಧಿಗೆ ನಿಮ್ಮದೇ ಪಕ್ಷದ ಸರಕಾರ ಇದ್ದಾಗ ನೀವು ಹುಟ್ಟಿಸಿದ್ದು ಏನಾದರೂ ಒಂದು ಇದ್ದರೆ ಹೇಳಿ ನೋಡೋಣ ! ನಿಮ್ಮ ಕ್ಷೇತ್ರಕ್ಕೆ ಸ್ವಾಗತಿಸುವ ಹೊಂಡ ಬಿದ್ದ ರಸ್ತೆಗಳೇ ನಿಮ್ಮ ಹಣೆ ಬರಹವನ್ನು ಸಾರಿ ಸಾರಿ ಹೇಳುತ್ತದೆ. ನಾಚಿಕೆಯಾಗಬೇಕು ನಿಮಗೆ.

ದಾಖಲೆ : ಕರ್ನಾಟಕ ಸರಕಾರದ ನಡವಳಿಗಳು.
https://samrakshane.karnataka.gov.in/Docs/RWBCIS_Kharif_6_Districts_GO_2023_24.pdf

Ad Widget
Continue Reading

ಶಿಕ್ಷಣ

Sanidhya S. Rao-ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಸಾನಿಧ್ಯ ಎಸ್. ರಾವ್‌ಗೆ ಪ್ರಥಮ ಸ್ಥಾನ; SGFI ಸ್ಪರ್ಧೆಗೆ ಆಯ್ಕೆ

Published

on



Ad Widget

Ad Widget

Ad Widget

Ad Widget

ಹರಿಯಾಣದ ಕುರುಕ್ಷೇತ್ರದಲ್ಲಿ ಅಕ್ಟೋಬರ್ 1ರಿಂದ 5ರವರೆಗೆ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ ಎಸ್. ರಾವ್ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಹರಿಯಾಣದ ಕುರುಕ್ಷೇತ್ರದಲ್ಲಿ ಅಕ್ಟೋಬರ್ 1ರಿಂದ 5ರವರೆಗೆ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ ಎಸ್. ರಾವ್ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ರಾಷ್ಟ್ರಮಟ್ಟದಲ್ಲಿ ಪ್ರತಿಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡಿದ ಸಾನಿಧ್ಯ, ತಮ್ಮ ಚೆಸ್ ಕೌಶಲ್ಯ ಮತ್ತು ಅತ್ಯುತ್ತಮ ಪ್ರದರ್ಶನದ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಈ ಸಾಧನೆಯೊಂದಿಗೆ ಅವರು ಮುಂದಿನ ಹಂತದ ಎಸ್‌ಜಿಎಫ್‌ಐ (School Games Federation of India) ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

Ad Widget

Ad Widget <> Ad Widget

ಸುದೇಶ್ ಮತ್ತು ಶ್ರುತಿ ದಂಪತಿಯ ಪುತ್ರಿಯಾದ ಸಾನಿಧ್ಯ, ನಿರಂತರ ಪರಿಶ್ರಮ, ಏಕಾಗ್ರತೆ ಹಾಗೂ ಕ್ರೀಡಾ ಕೌಶಲ್ಯದ ಮೂಲಕ ಈ ಮಹತ್ವದ ಯಶಸ್ಸು ಸಾಧಿಸಿದ್ದಾರೆ.



Ad Widget

ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಮುಂದಿನ ಸ್ಪರ್ಧೆಯಲ್ಲಿಯೂ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದ್ದಾರೆ.

Continue Reading

ಕಾರ್ಯಕ್ರಮಗಳು

‘Havells Experience Center-ನಾಳೆ (ಅ. 15) ರಂದು ಮೈತ್ರಿ ಎಲೆಕ್ಟ್ರಿಕ್‌ನಲ್ಲಿ ʻಹ್ಯಾವೆಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್ʼ ಶುಭಾರಂಭ

Published

on



Ad Widget

Ad Widget

Ad Widget

Ad Widget

ಪುತ್ತೂರು ನಗರದ ಮೈತ್ರಿ ಎಲೆಕ್ಟ್ರಿಕ್ ಕಂಪನಿಯ ವತಿಯಿಂದ ಹ್ಯಾವೆಲ್ಸ್‌ನ ವಿಶೇಷ ಅನುಭವ ಕೇಂದ್ರವಾದ ‘ಹ್ಯಾವೆಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್’ ಅ.15 ಗುರುವಾರದಂದು ಉದ್ಘಾಟನೆಗೊಳ್ಳಲಿದೆ. ಪುತ್ತೂರಿನ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿರುವ ಸುಶಾ ಚೇಂಬರ್ಸ್‌ನ ಮೊದಲ ಮಹಡಿಯಲ್ಲಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget

Ad Widget

Ad Widget

ಪುತ್ತೂರು: ನಗರದ ಮೈತ್ರಿ ಎಲೆಕ್ಟ್ರಿಕ್ ಕಂಪನಿಯ ವತಿಯಿಂದ ಹ್ಯಾವೆಲ್ಸ್‌ನ ವಿಶೇಷ ಅನುಭವ ಕೇಂದ್ರವಾದ ‘ಹ್ಯಾವೆಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್’ ಅ.15 ಗುರುವಾರದಂದು ಉದ್ಘಾಟನೆಗೊಳ್ಳಲಿದೆ.

Ad Widget

Ad Widget

Ad Widget alt="Ad Widget"/>

Ad Widget

ಪುತ್ತೂರಿನ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿರುವ ಸುಶಾ ಚೇಂಬರ್ಸ್‌ನ ಮೊದಲ ಮಹಡಿಯಲ್ಲಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget <> Ad Widget

ಹ್ಯಾವೆಲ್ಸ್ ಕಂಪನಿಯ ವಿದ್ಯುತ್ ಉಪಕರಣಗಳು ಹಾಗೂ ಗೃಹ ಬಳಕೆಯ ವಿವಿಧ ಉತ್ಪನ್ನಗಳು ಮತ್ತು ಪರಿಹಾರಗಳ ಸಂಪೂರ್ಣ ಶ್ರೇಣಿಯನ್ನು ಗ್ರಾಹಕರು ವೀಕ್ಷಿಸಿ, ಮಾಹಿತಿ ಪಡೆಯಲು ಇಲ್ಲಿ ಅವಕಾಶವಿರಲಿದೆ.



Ad Widget

1997ರಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯು ಈ ನೂತನ ಕೇಂದ್ರದ ಮೂಲಕ ಗ್ರಾಹಕರಿಗೆ ಹ್ಯಾವೆಲ್ಸ್ ಉತ್ಪನ್ನಗಳ ಪರಿಚಯ ಹಾಗೂ ಉತ್ತಮ ಖರೀದಿ ಅನುಭವ ಒದಗಿಸುವ ಉದ್ದೇಶ ಹೊಂದಿದೆ.

Ad Widget

Ad Widget

ಹೆಚ್ಚಿನ ಮಾಹಿತಿಗಾಗಿ 94493 24436 ಅನ್ನು ಸಂರ್ಪಕಿಸಬಹುದು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading