ಉಡುಪಿ
Shiva Temple | ಆಲದ ಮರವನ್ನೇ ಆಲಯವಾಗಿಸಿಕೊಂಡ ‘ತುಳುವೇಶ್ವರ’ – ಈ ಶಿವ ದೇವಸ್ಥಾನದ ವಿಶೇಷತೆ ಇಲ್ಲಿದೆ
ಪರಮೇಶ್ವರ ಸದಾ ವಿರಾಗಿ, ಅವನಿಗೆ ಯಾವ ವೈಭೋಗದ ಆಸೆ ಇರುವುದಿಲ್ಲ ಎನ್ನುವುದನ್ನು ನಾವೆಲ್ಲ ಕೇಳಿದ್ದೇವೆ. ಅದಕ್ಕೆ ಉದಾಹರಣೆ ಎನ್ನುವಂತೆ ಇರುವ ಶಿವ ಸನ್ನಿಧಾನವೇ (Shiva Temple) ತುಳುವೇಶ್ವರ.
ಸಾವಿರ ವರ್ಷದ ಇತಿಹಾಸವಿರುವ ಈ ತುಳುವೇಶ್ವರನ ವಿಶೇಷವೆಂದರೆ ಈ ಶಿವಲಿಂಗಕ್ಕೆ ಆಲಯವೇ ಇಲ್ಲ, ಬದಲಿಗೆ ಆಲದ ಮರವೇ ಶಿವ ಆಲಯವಾಗಿ ಲಿಂಗವನ್ನು ಮಳೆ, ಬಿಸಿಲಿನಿಂದ ರಕ್ಷಿಸುತ್ತಿದೆ.
ಉಡುಪಿ ಜಿಲ್ಲೆ ಪ್ರಮುಖ ತಾಲೂಕು ಕೇಂದ್ರ ಕುಂದಾಪುರದಿಂದ ಸುಮಾರು 6 ಕಿಮೀ ಇರುವ ಐತಿಹಾಸಿಕ ಗ್ರಾಮ ಬಸ್ರೂರಿನಲ್ಲಿ ಈ ತುಳುವೇಶ್ವರ ಸನ್ನಿಧಾನವಿದೆ.
ತುಳುನಾಡು ಎಂದು ಕರೆಯಲ್ಪಡುವ ಕಾಸಗೋಡಿನಿಂದ ಬೈಂದೂರಿನವರೆಗಿನ ಉದ್ದನೆ ಕಡಲ ಕಿನಾರೆಯ ಪ್ರದೇಶದ ತುಳು ಭಾಷಿಕರ ಅಧಿದೇವತೆ ಈ ತುಳುವೇಶ್ವರನಾಗಿದ್ದು ಪ್ರಕೃತಿ ಮತ್ತು ದೈವ ಶಕ್ತಿಯ ಸಂಗಮವಾಗಿ ಉಳಿದಿದೆ.
ಹಿಂದೆ ವಸುಪುರ ಎಂದು ಹೆಸರಾಗಿದ್ದ ಬಸ್ರೂರು ವಿಜಯನಗರ ಮತ್ತು ಅದಕ್ಕೂ ಮುನ್ನಿನ ಕಾಲದಿಂದ ವ್ಯಾಪಾರಿ ಕೇಂದ್ರವಾಗಿ ಪ್ರಸಿದ್ದಿಯಾಗಿತ್ತು. ಬಾರ್ಕೂರು ಸಂಸ್ಥಾನದಲ್ಲಿ ಪ್ರಮುಖ ವಾಣಿಜ್ಯ ನಗರವಾಗಿ ಗುರುತಿಸಿಕೊಂಡಿದ್ದ ಬಸ್ರೂರು ಇಂತಹಾ ಊರಿನಲ್ಲಿ ಪ್ರಸಿದ್ದ ಮಹಾಲಿಂಗೇಶ್ವರನ ಸನ್ನಿಧಾನವೂ ಇದ್ದು ಆಲಯವೇ ಇಲ್ಲದೆ ಮರದ ನಡುವೆಯೇ ಪೂಜಿಸಲ್ಪಡುವ ಈ ತುಳುವೇಶ್ವರ ಶಿವಾಲಯದ ಬಗೆಗೆ ಇನ್ನೂ ಹೆಚ್ಚಿನವರಿಗೆ ಮಾಹಿತಿಯೇ ಇಲ್ಲ.
ಇನ್ನು ಶತ ಶತಮಾನಗಳಷ್ಟು ಹಿಂದೆ ಈ ತುಳುವೇಶ್ವರನಿಗೆ ದೇವಾಲಯವಿತ್ತು. ಆದರೆ ಕಾಲದ ಹೊಡೆತಕ್ಕೆ ಸಿಕ್ಕು ಸುಮಾರು 200 ವರ್ಷಗಳ ಹಿಂದೆ ಈ ಪುರಾತನ ದೇವಾಲಯ ಶಿಥಿಲವಾಗಿದೆ. ವಿಶೇಷವೆಂದರೆ ಅನೇಕ ವರ್ಷಗಳ ಹಿಂದೆ ದೇವಾಲಯದ ಗೋಡೆಯ ಬದಿ ಬೆಳೆದ ಆಲದ ಮರವೊಂದು ಇಂದಿಗೂ ಹಾಗೆಯೇ ಇದ್ದು ಶಿವಲಿಂಗದ ಸುತ್ತ ರಕ್ಷಣಾ ಗೋಡೆಯಂತೆ ಆವರಿಸಿದೆ. ಈ ಆಲದ ಮರಕ್ಕೆ ಸುಮಾರು 250 ವರ್ಷಗಳಾಗಿದೆ ಎಂದು ಅಂದಾಜಿಸಲಾಗಿದೆ.
ತುಳುವೇಶ್ವರ ಇತಿಹಾಸ ಕಾಲದಲ್ಲಿ ಸಾಕಷ್ಟು ಪ್ರಸಿದ್ದಿ ಹೊಂದಿದ್ದ ದೇವ ಸನ್ನಿಧಾನವಾಗಿತ್ತು ಎನ್ನಲು ಶಾಸನಾಧಾರಗಳೂ ಇದೆ. ಕ್ರಿಶ 1401ರಲ್ಲಿ ಕೆತ್ತಿಸಲಾದ ಶಾಸನದಲ್ಲಿ ತುಳುವೇಶ್ವರ ದೇವರಿಗೆ ದಾನ ಕೊಟ್ಟಿರುವ ವಿಚಾರ ಬರುತ್ತದೆ, ಬಾರ್ಕೂರು ರಾಜ್ಯಪಾಲ ಬಸವಣ್ಣ ಒಡೆಯನ ಆಳ್ವಿಕೆಯಲ್ಲಿ ಬಸ್ರೂರಿನ ಪಡುವನ ಕೇರಿಯ ಭೂ ಒಡೆತನ ಹೊಂದಿದ್ದ ಪ್ರತಿಷ್ಠಿತ ಮನೆತನದವಳಾದ ತುಳುವಕ್ಕ ಹೆಗ್ಗಡತಿ ತಾನು ನಿರ್ಮಿಸಿದ್ದ ಧರ್ಮಛತ್ರದ ವೆಚ್ಚಕ್ಕೆ ಬೇರೆ ಬೇರೆ ಕಡೆಗಳಲ್ಲಿದ್ದ ಅವಳ ಭೂಮಿಯಿಂದ ಬರುವ ಆದಾಯವನ್ನು ದತ್ತಿ ನೀಡಿದ್ದಳು. ಹಾಗೆ ದತ್ತಿ ನೀಡುವಾಗ ಆಕೆ ತುಳುವೇಶ್ವರ ದೇವರಿಗೆ ಮತ್ತು ಮುಳುಲದೇವಿಗೆ ನೀಡಿದ್ದ ದತ್ತಿ ವಿಚಾರ ಸಹ ಶಾಸನದಲ್ಲಿ ಪ್ರಸ್ತಾಪವಾಗಿದೆ.
ಈ ಸ್ಥಳದಲ್ಲಿ ಶಿವನ ಆಲಯವಿತ್ತು ಎನ್ನಲು ಇನ್ನೂ ದಾಖಲೆಗಳೆಂಬಂತೆ ಶಿವನ ಎದುರಲ್ಲಿ ನಂದಿ ವಿಗ್ರಹವಿದೆ. ಅಲ್ಲದೆ ಮುರಕಲ್ಲಿನಲ್ಲಿ ಕಟ್ಟಿರುವ ಗೋಡೆ, ನಂದಿ ಮಂಟಪದ ಕುರುಹುಗಳು, ನೈವೇದ್ಯ ಶಾಲೆ ಅವಶೀಷಗಳು, ಸೇರಿ ಅನೇಕ ಪ್ರಾಚೀನ ದಾಖಲೆಗಳು ಇಲ್ಲಿ ಸಿಗುತ್ತದೆ. ನಂದಿ ವಿಗ್ರಹವು ಅತ್ಯಂತ ಅಪರೂಪದ ಕೆತ್ತನೆಯಿಂದ ಕೂಡಿದ್ದು ಏಕಶಿಲಾ ವಿಗ್ರಹವು ಪ್ರಾಚೀನ ಚರಿತ್ರೆಯ ಮೇಲೆ ಬೆಳಕು ಚೆಲ್ಲುತ್ತದೆ.
ಸುಮಾರು 60 ವರ್ಷಗಳಷ್ಟು ಹಿಂದೆ ನಿಧಿಯಾಸೆಗಾಗಿ ಈ ನಂದಿ ವಿಗ್ರಹವನ್ನು ಕಬ್ಬಿಣದ ಸಲಾಕೆ ಬಳಸಿ ಪೀಠದಿಂದ ಬೇರ್ಪಡಿಸಲು ಯತ್ನ ನಡೆದಿತ್ತು. ಆದರೆ ಅದು ವಿಫಲವಾಗಿತ್ತು. ಅಂದಿನಿಂದಲೂ ನಂದಿಯ ಒಂದು ಭಾಗ ವಾಲಿಕೊಂಡಿರುವುದು, ಮೇಲಕ್ಕೆ ಎದ್ದಿರುವುದನ್ನು ನಾವು ಕಾಣುತ್ತೇವೆ.
ಇಲ್ಲಿನ ಶಿವಲಿಂಗದ ಸುತ್ತಲೂ ಆಲದ ಮರದ ಬಿಳಲುಗಳೇ ರಕ್ಷಣಾ ಪೌಳಿಯಾಗಿದ್ದು ದೇವಾಲಯದ ಪೂರ್ವ ದಿಕ್ಕಿನಿಂದ ಶಿವಲಿಂಗದ ಕಡೆಗೆ ಓರ್ವ ವ್ಯಕ್ತಿ ಪ್ರವೇಶಿಸುವಷ್ಟು ಸ್ಥಳಾವಕಾಶವಿದೆ. ಪಾಣಿಪೀಠದ ಮೇಲಿರುವ ಶಿವಲಿಂಗವು ಎರಡೂವರೆ ಅಡಿ ಎತ್ತರವಿದೆ.
ಸುಮಾರು 150 ವರ್ಷಗಳ ಹಿಂದೆ ವಿಠಲ ಕಿಣಿ ಎನ್ನುವ ವೈಷ್ಣವ ಸಂಪ್ರದಾಯಸ್ಥ ಮನೆತನಕ್ಕೆ ಸೇರಿದ ವ್ಯಕ್ತಿ ಈ ಶಿವಲಿಂಗವಿದ್ದ ಜಾಗವನ್ನು ಖರೀದಿಸಿದ್ದರು. ಹಾಗೆ ಜಾಗ ಖರೀದಿಸುವಾಗ ಅವರಿಗೆ ಈ ಸ್ಥಳದಲ್ಲಿ ಶಿವಲಿಂಗವಿದೆ ಎನ್ನುವ ವಿಚಾರ ಸಹ ತಿಳಿದಿರಲಿಲ್ಲ. ಆದರೆ ಎಂದು ಶಿವನ ಕಾರಣಿಕ ಶಕ್ತಿ ಗೋಚರವಾಯಿತೋ ಅಂದೇ ವಿಠಲ ಕಿಣಿ ತಾವು ಪ್ರತಿನಿತ್ಯ ಆ ಪರಮೇಶ್ವರನಿಗೆ ನಿತ್ಯ ಪೂಜೆ ಸಲ್ಲಿಸಲು ಪ್ರಾರಂಭಿಸುತ್ತಾರೆ. ಅಂದಿನಿಂದ ಇಂದಿನವರೆಗೆ ವಿಠಲ ಕಿಣಿ ಮನೆತನದವರೇ ಈ ತುಳುವೇಶ್ವರನಿಗೆ ನಿತ್ಯ ನೈಮಿತ್ತಿಕ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.
ಇನ್ನು ಈಗ ಶಿವನ ಪೂಜಾ ಕೈಂಕರ್ಯ ನಡೆಸುತ್ತಿರುವ ಕುಟುಂಬಕ್ಕೆ ಶಿವನ ಈ ಪ್ರಾಚೀನ ಸನ್ನಿಧಾನವನ್ನು ಜೀರ್ಣೋದ್ದಾರ ಮಾಡಬೇಕೆಂದು ಬಯಕೆ ಇದೆ. ಆದರೆ ಹಲವು ಕಡೆ ಪ್ರಶ್ನೆ, ದರ್ಶನಾದಿಗಳನ್ನು ನಡೆಸಿ ಕೇಳಲಾಗಿ ಈ ದೇವಾಲಯ ಜೀರ್ಣೋದ್ದಾರಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ, ಯೋಗಿಯೊಬ್ಬರ ಮೂಲಕ ಈ ದೇವಾಲಯ ಪುನರ್ ಅಭಿವೃದ್ಧಿ ಹೊಂದಲಿದೆ ಎನ್ನುವ ಉತ್ತರ ದೊರಕಿದೆ.
ತುಳುನಾಡಿನ ಬೇರೆಲ್ಲಿಯೂ ‘ತುಳುವೇಶ್ವರ’ ಎನ್ನುವ ದೇವರ ಸನ್ನಿಧಾನವಿಲ್ಲ. ಹೀಗಾಗಿ ಕಾಸರಗೋಡಿನಿಂದ ಪ್ರಾರಂಭವಾಗಿ ಉಡುಪಿ ಜಿಲ್ಲೆ ಬೈಂದೂರಿನ ತನಕದ ತುಳು ಭಾಷಾ ಪ್ರಾಂತಕ್ಕೆ ಈ ಶಿವನು ಅಧಿದೇವತೆಯಾಗಿದ್ದಾನೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಅಲ್ಲದೆ ಕಳೆದ ವರ್ಷಗಳಲ್ಲಿ ಬದಿಯಡ್ಕ, ಧರ್ಮಸ್ಥಳಗಳಲ್ಲಿ ನಡೆದಿದ್ದ ವಿಶ್ವ ತುಳು ಸಮ್ಮೇಳನಕ್ಕೆ ಇದೇ ಸನ್ನಿಧಾನದಲ್ಲಿ ಚಾಲನೆ ನೀಡಲಾಗಿತ್ತು.
ಅಪರಾಧ
Udupi-ಉಡುಪಿ: ಹೇಮಂತ್ ಪೂಜಾರಿ ಬೇಟೆಗೆ ಪೊಲೀಸರ ಬಲೆ; ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್ ವಶಕ್ಕೆ..!
ಮುದರಂಗಡಿಯ ಗುತ್ತಿಗೆದಾರ ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಭೂಗತ ಪಾತಕಿ ಹೇಮಂತ್ ಪೂಜಾರಿಯನ್ನು ಬಂಧಿಸಲು ಉಡುಪಿ ಜಿಲ್ಲಾ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಉದ್ಯಮಿಗಳು ಹಾಗೂ ಗುತ್ತಿಗೆದಾರರಿಗೆ ಹಣಕ್ಕಾಗಿ ಜೀವ ಬೆದರಿಕೆ ಹಾಕಿದ ಪ್ರಕರಣಗಳಿಗೆ ಸಂಬಂಧಿಸಿ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವ ಪೊಲೀಸರು, ಬೆದರಿಕೆ ಕರೆಗಳ ಹಿಂದೆ ಹೇಮಂತ್ ಪೂಜಾರಿಯ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಉಡುಪಿ, ಅ.11: ಮುದರಂಗಡಿಯ ಗುತ್ತಿಗೆದಾರ ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಭೂಗತ ಪಾತಕಿ ಹೇಮಂತ್ ಪೂಜಾರಿಯನ್ನು ಬಂಧಿಸಲು ಉಡುಪಿ ಜಿಲ್ಲಾ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಉದ್ಯಮಿಗಳು ಹಾಗೂ ಗುತ್ತಿಗೆದಾರರಿಗೆ ಹಣಕ್ಕಾಗಿ ಜೀವ ಬೆದರಿಕೆ ಹಾಕಿದ ಪ್ರಕರಣಗಳಿಗೆ ಸಂಬಂಧಿಸಿ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವ ಪೊಲೀಸರು, ಬೆದರಿಕೆ ಕರೆಗಳ ಹಿಂದೆ ಹೇಮಂತ್ ಪೂಜಾರಿಯ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಉದ್ಯಮಿಗಳು ಹಾಗೂ ಗುತ್ತಿಗೆದಾರರಿಗೆ ಕರೆ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಿದ ಪ್ರಕರಣಗಳಿಗೆ ಸಂಬಂಧಿಸಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಎರಡು, ಕಾಪು, ಶಿರ್ವ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ಇನ್ನೂ ಎರಡು-ಮೂರು ಉದ್ಯಮಿಗಳು ಹಾಗೂ ಗುತ್ತಿಗೆದಾರರಿಗೆ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ದೂರುಗಳು ಲಭಿಸಿವೆ ಎಂದು ತಿಳಿದುಬಂದಿದೆ.
ಈ ಪ್ರಕರಣಗಳ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಸಂಬಂಧಪಟ್ಟ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ತನಿಖೆಯ ಪ್ರಗತಿ ಕುರಿತು ಉನ್ನತ ಪೊಲೀಸ್ ಅಧಿಕಾರಿಗಳಿಗೆ ವರದಿಗಳನ್ನು ಸಲ್ಲಿಸಲಾಗುತ್ತಿದೆ.
ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಈ ಹಿಂದೆ ಉಡುಪಿ ಜಿಲ್ಲಾ ಪೊಲೀಸರು ಹೇಮಂತ್ ಪೂಜಾರಿಗಾಗಿ ಬಾಂಗ್ಲಾದೇಶದ ಗಡಿಯವರೆಗೂ ಶೋಧ ನಡೆಸಿದ್ದರು. ಆದರೆ, ಆ ಕಾರ್ಯಾಚರಣೆಯಲ್ಲಿ ಆತನ ಪತ್ತೆಯಾಗಿರಲಿಲ್ಲ. ಇದೀಗ ಬೆದರಿಕೆ ಕರೆಗಳ ಪ್ರಕರಣಗಳಲ್ಲಿನ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ.
ಕಾಪು ಪೊಲೀಸರ ವಶಕ್ಕೆ ಅನುಜ್ ಪಾಟೀಲ್
ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಶಾರ್ಪ್ ಶೂಟರ್‌ಗಳನ್ನು ಕಳುಹಿಸಿದ್ದ ಆರೋಪ ಎದುರಿಸುತ್ತಿರುವ ಮುಂಬೈ ಮೂಲದ ಗ್ಯಾಂಗ್‌ಸ್ಟರ್, ಬಿಹಾರದ ನಳಂದ ಜಿಲ್ಲೆಯ ಅನುಜ್ ಪಾಟೀಲ್ (35)ನನ್ನು ಕಾಪು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಈ ಹಿಂದೆ ಬೈಂದೂರು ಹಾಗೂ ಹೆಬ್ರಿ ಪೊಲೀಸರು ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಕಾಪು ಪೊಲೀಸರು ವಶಕ್ಕೆ ಪಡೆದು, ಹೇಮಂತ್ ಪೂಜಾರಿಯೊಂದಿಗಿನ ಆತನ ಸಂಪರ್ಕ ಹಾಗೂ ಅಪರಾಧ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.
ಉದ್ಯಮಿಗಳು ಹಾಗೂ ಗುತ್ತಿಗೆದಾರರಿಗೆ ಬಂದಿರುವ ಬೆದರಿಕೆ ಕರೆಗಳ ಆಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ. ಈ ಕರೆಗಳನ್ನು ಹೇಮಂತ್ ಪೂಜಾರಿಯೇ ಮಾಡುತ್ತಿದ್ದಾನೆಯೇ ಅಥವಾ ಆತನ ಹೆಸರಿನಲ್ಲಿ ಬೇರೆ ಯಾರಾದರೂ ಬೆದರಿಕೆ ಹಾಕುತ್ತಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ಪೊಲೀಸ್ ಆಯುಧ ಕಸಿದು ಗುಂಡು ಹಾರಿಸಲು ಯತ್ನಿಸಿದ್ದ ಆರೋಪ
2017ರಿಂದ ತಲೆಮರೆಸಿಕೊಂಡಿದ್ದ ಅನುಜ್ ಪಾಟೀಲ್ ಮುಂಬೈ ಕೇಂದ್ರವಾಗಿಸಿಕೊಂಡು ಕಾರ್ಯಾಚರಿಸುತ್ತಿದ್ದ ಎನ್ನಲಾಗಿದೆ. ಆತನ ವಿರುದ್ಧ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಒಟ್ಟು 11 ಕ್ರಿಮಿನಲ್ ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದು, ಅವುಗಳಲ್ಲಿ 10 ಪ್ರಕರಣಗಳು ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದ್ದಾಗಿವೆ ಎಂದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ನಾಲ್ಕು, ಗುಜರಾತ್‌ನಲ್ಲಿ ಐದು, ದಮನ್ ಮತ್ತು ದಿಯುನಲ್ಲಿ ಒಂದು ಹಾಗೂ ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ ಕರೆತರುತ್ತಿದ್ದಾಗ, ಹೆಬ್ರಿ ತಾಲೂಕಿನ ಸೋಮೇಶ್ವರದಲ್ಲಿ ಮೂತ್ರ ವಿಸರ್ಜನೆಗೆಂದು ಪೊಲೀಸ್ ವಾಹನದಿಂದ ಕೆಳಗಿಳಿದಿದ್ದ ಅನುಜ್ ಪಾಟೀಲ್, ಕೊಲ್ಲೂರು ಪೊಲೀಸ್ ಠಾಣೆಯ ಪಿಎಸ್‌ಐ ವಿನಯ್ ಅವರ ಸೇವಾ ಆಯುಧವನ್ನು ಕಸಿದು ಗುಂಡು ಹಾರಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್‌ಐ ನಂಜ ನಾಯಕ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದರು. ಗಾಯಗೊಂಡ ಆತನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಚಿಕಿತ್ಸೆಯ ಬಳಿಕ ತನಿಖೆ ಮುಂದುವರಿಸಿರುವ ಪೊಲೀಸರು, ಬೈಂದೂರು ಮತ್ತು ಹೆಬ್ರಿ ಠಾಣೆಗಳ ನಂತರ ಇದೀಗ ಕಾಪು ಪೊಲೀಸರ ವಶದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಅನುಜ್ ಪಾಟೀಲ್‌ನ ಅಪರಾಧ ಚಟುವಟಿಕೆಗಳು, ಹೇಮಂತ್ ಪೂಜಾರಿಯೊಂದಿಗಿನ ಸಂಪರ್ಕ ಹಾಗೂ ಬೆದರಿಕೆ ಕರೆಗಳ ಹಿಂದಿನ ಜಾಲದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಅಪರಾಧ
Udupi-ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆ : ಉಡುಪಿ, ಮೂಲ್ಕಿಯಲ್ಲಿ 4 ಪ್ರಕರಣ ದಾಖಲು
ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬರುತ್ತಿರುವ ಪ್ರಕರಣಗಳು ವರದಿಯಾಗಿವೆ. ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೂರು ಹಾಗೂ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಒಂದು ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಉಡುಪಿ, ಅ.8: ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬರುತ್ತಿರುವ ಪ್ರಕರಣಗಳು ವರದಿಯಾಗಿವೆ. ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೂರು ಹಾಗೂ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಒಂದು ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೊಲೆಯಾದ ಉದ್ಯಮಿ ಡೇವಿಡ್ ಡಿಸೋಜಾ ಅವರ ಪುತ್ರನಿಗೆ ವಾಟ್ಸಾಪ್ ಕರೆ ಮಾಡಿರುವ ಅಪರಿಚಿತ ವ್ಯಕ್ತಿಯೊಬ್ಬ, ₹5 ಕೋಟಿ ನೀಡುವಂತೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
“ನಿನ್ನ ತಂದೆಯಿಂದ ನನ್ನ ಸಹೋದರನಿಗೆ ಸಾಕಷ್ಟು ನಷ್ಟವಾಗಿತ್ತು. ಆ ಕಾರಣಕ್ಕೆ ನಾನೇ ಕೊಲೆ ಮಾಡಿಸಿದ್ದೆ. ನಮಗಾಗಿರುವ ನಷ್ಟವನ್ನು ತುಂಬಿಕೊಡಲು ₹5 ಕೋಟಿ ನೀಡಬೇಕು” ಎಂದು ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಬ್ಬ ಉದ್ಯಮಿ ಹಾಗೂ ಖಾಸಗಿ ಸಂಸ್ಥೆಯ ವ್ಯಕ್ತಿಗೂ ಹೇಮಂತ್ ಪೂಜಾರಿ ಹೆಸರಿನಲ್ಲಿ ವಾಟ್ಸಾಪ್ ಕರೆಗಳು ಬಂದಿದ್ದು, ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲೂ ಪ್ರಕರಣಗಳು ದಾಖಲಾಗಿವೆ.
25 ವರ್ಷಗಳಿಂದ ಪೊಲೀಸರಿಗೆ ಬೇಕಾಗಿರುವ ಆರೋಪಿ
ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಹೇಮಂತ್ ಪೂಜಾರಿ ಪ್ರಮುಖ ಆರೋಪಿಯಾಗಿದ್ದಾನೆ. ಆತನ ಸಹೋದರ ಹಾಗೂ ಇತರ ಸಹಚರರ ನೆರವಿನಿಂದ ಹೊರರಾಜ್ಯದ ಶೂಟರ್‌ಗಳನ್ನು ಕರೆಸಿ ಕೊಲೆ ಮಾಡಿಸಲಾಗಿದೆ ಎಂಬ ಆರೋಪ ಪ್ರಕರಣದಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಪೂಜಾರಿಯನ್ನು ಹೊರತುಪಡಿಸಿ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಕಳೆದ 25 ವರ್ಷಗಳಿಂದ ಪೊಲೀಸರಿಗೆ ಬೇಕಾಗಿರುವ ಹೇಮಂತ್ ಪೂಜಾರಿ ಬಗ್ಗೆ ಇದುವರೆಗೂ ಸ್ಪಷ್ಟ ಸುಳಿವು ಲಭ್ಯವಾಗಿಲ್ಲ. ಈ ನಡುವೆ ಆತನ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬಂದಿರುವುದು ಪೊಲೀಸರ ಗಮನ ಸೆಳೆದಿದೆ.
ಕರೆ ಮಾಡುತ್ತಿರುವವರು ಯಾರು?
ಹೇಮಂತ್ ಪೂಜಾರಿಯೇ ಕರೆ ಮಾಡುತ್ತಿದ್ದಾನೆಯೇ ಅಥವಾ ಆತನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬೇರೆಯವರು ಬೆದರಿಕೆ ಹಾಕುತ್ತಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕರೆಗಳ ಮೂಲ, ಹಣದ ಬೇಡಿಕೆಯ ಹಿಂದಿನ ಉದ್ದೇಶ ಹಾಗೂ ಪ್ರಕರಣಗಳ ನಡುವಿನ ಸಂಬಂಧದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಪರಾಧ
Mangalore-ಮಂಗಳೂರು: ಜೈಲಿನಲ್ಲೇ ವಾರ್ಡನ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 5 ವರ್ಷ ಜೈಲು, 40,000 ರೂ. ದಂಡ
ಜಿಲ್ಲಾ ಕಾರಾಗೃಹದ ಜೈಲ್ ವಾರ್ಡನ್‌ಗೆ ಕೊಲೆ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 40 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಉಡುಪಿ: ಜಿಲ್ಲಾ ಕಾರಾಗೃಹದ ಜೈಲ್ ವಾರ್ಡನ್‌ಗೆ ಕೊಲೆ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 40 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
2011ರ ಡಿಸೆಂಬರ್ 3ರಂದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜಾರು ಗ್ರಾಮದ ಉಡುಪಿ ಜಿಲ್ಲಾ ಕಾರಾಗೃಹದ ಮೊದಲ ಬ್ಯಾರಕ್ ಎದುರಿನ ವರಾಂಡದಲ್ಲಿ ಘಟನೆ ನಡೆದಿತ್ತು. ಜೈಲ್ ವಾರ್ಡನ್ ಅವರು ಪ್ರಭಾರ ವಹಿಸಿಕೊಳ್ಳುವ ಸಲುವಾಗಿ ಬಂಧಿಗಳ ಲೆಕ್ಕ ತೆಗೆದುಕೊಳ್ಳಲು ತಮ್ಮ ತಮ್ಮ ಬ್ಯಾರಕ್‌ಗಳಿಗೆ ತೆರಳುವಂತೆ ಸೂಚಿಸಿದ್ದರು. ಈ ವೇಳೆ ಅಡುಗೆ ಕೋಣೆಯ ಎದುರುಗಡೆ ಇದ್ದ ವಿಚಾರಣಾ ಬಂಧಿ ಸಫಾನ್ ಹುಸೈನ್ ಅಲಿಯಾಸ್ ರಜಾಕ್ ಎಂಬಾತ ಜೈಲ್ ವಾರ್ಡನ್ ಅವರನ್ನು ಉದ್ದೇಶಿಸಿ ಅವಾಚ್ಯವಾಗಿ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದ.
ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು 2012ರ ಜನವರಿ 10ರಂದು ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ನ್ಯಾಯಾಲಯ ಆರೋಪಿಗೆ 2013ರ ಮೇ 29ರಂದು ಜಾಮೀನು ಮಂಜೂರು ಮಾಡಿತ್ತು. ಆದರೆ ವಿಚಾರಣೆಗೆ ಹಾಜರಾಗದೆ ಆರೋಪಿ ತಲೆಮರೆಸಿಕೊಂಡಿದ್ದರಿಂದ ಪ್ರಕರಣವು 2022ರ ಜೂನ್ 24ರಂದು ಎಲ್‌ಪಿಸಿ ನಂ.02/2022ರಂತೆ ದಾಖಲಾಗಿತ್ತು.
ತಲೆಮರೆಸಿಕೊಂಡಿದ್ದ ಸಫಾನ್ ಹುಸೈನ್‌ನನ್ನು 2026ರ ಏಪ್ರಿಲ್ 23ರಂದು ಬಾಡಿ ವಾರಂಟ್ ಮೂಲಕ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 40,000 ದಂಡ ವಿಧಿಸಿ ತೀರ್ಪು ನೀಡಿದೆ
-
Uncategorized20 hours ago
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ
-
Uncategorized22 hours ago
ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ!
-
Uncategorized21 hours ago
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ
-
Uncategorized22 hours ago
ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ
-
Uncategorized24 hours ago
ಪುತ್ತೂರು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ
-
ಅಂತರ ರಾಜ್ಯ5 hours agoKasaragod-ಕಾಸರಗೋಡು: ಮದುವೆ ರದ್ದು, ₹7.57 ಲಕ್ಷದ ಉಡುಗೊರೆ ವಾಪಸ್ ನೀಡದೆ ವಂಚನೆ ಆರೋಪ; ಯುವತಿ ಸಹಿತ ಮೂವರ ವಿರುದ್ಧ ಪ್ರಕರಣ
-
Uncategorized21 hours ago
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್ಫುಲ್ |
-
ಬಿಗ್ ನ್ಯೂಸ್6 hours agoPuttur-ಪುತ್ತೂರು : ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಒಳಚರಂಡಿ ಕಾಮಗಾರಿ ಟೆಂಡರ್ ಸ್ಥಗಿತಗೊಳಿಸಿ : ನಗರಸಭೆಗೆ ಮನವಿ


















