ಪುತ್ತೂರು
ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಪುತ್ತೂರು ಹಾಗೂ ಸುಳ್ಯ ಮಳಿಗೆಯಲ್ಲಿ ಆಗಸ್ಟ್ 7 ರಿಂದ 15 ರವರೆಗೆ ‘ಆಟಿ ಸೇಲ್’ – ಚಿನ್ನಾಭರಣಕ್ಕೆ ಪ್ರತಿ ಗ್ರಾಮ್ ಗೆ ರೂ.100 ರಿಯಾಯಿತಿ : ಹೆಚ್ಯುಐಡಿ ಮುದ್ರಿತ ಆಭರಣಗಳ ವಿನೂತನ ಸಂಗ್ರಹ
ಪುತ್ತೂರು:ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ನ ಪುತ್ತೂರು ಹಾಗೂ ಸುಳ್ಯ ಚಿನ್ನಾಭರಣ ಮಳಿಗೆಗಳಲ್ಲಿ ಆಗಸ್ಟ್ 7ರಿಂದ 15 ರವರೆಗೆ ‘ಆಟಿ ಸೇಲ್’ ಆಯೋಜಿಸಲಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷವಾಗಿ ಪುತ್ತೂರು ಮತ್ತು ಸುಳ್ಯ ಮಳಿಗೆಯಲ್ಲಿ ಈ ‘ಆಟಿ ಸೇಲ್’ ನ ಕೊಡುಗೆಯಾಗಿ ಚಿನ್ನಾಭರಣಗಳ ಪ್ರತೀ ಗ್ರಾಂ ಮೇಲೆ ರೂ.100 ರಿಯಾಯಿತಿ, ವಜ್ರಾಭರಣಗಳ ಪ್ರತೀ ಕ್ಯಾರೆಟ್ ಮೇಲೆ ರೂ.5,000ದವರೆಗೆ ರಿಯಾಯಿತಿ, ಬೆಳ್ಳಿಯ ಆಭರಣಗಳ ಮೇಲೆ ಪ್ರತಿ ಕಿಲೋ ಗ್ರಾಂಗೆ ರೂ.2,000 ರಿಯಾಯಿತಿ ಇದೆ.
ಪುತ್ತೂರಿನಲ್ಲಿ 6,000 ಚದರಡಿ ಬಹುಮಹಡಿ ಮಳಿಗೆಯಲ್ಲಿ ಝಗಮಗಿಸುವ ವಿನೂತನ ಶೈಲಿಯ ಚಿನ್ನಾಭರಣಗಳ ಶ್ರೇಣಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಸಾವಿರಾರು ಹೊಸ ಹೊಸ ಬಗೆಯ ವಿನ್ಯಾಸದ ನೆಕ್ಲೆಸ್ ಗಳು, ಪ್ರಾಚಿ ಎಂಬ ಹೆಸರಿನ ಆಂಟಿಕ್ ಆಭರಣಗಳು, ವಜ್ರಾಭರಣಗಳು, ಮಕ್ಕಳ, ಮಹಿಳೆಯರ ಹಾಗೂ ಪುರುಷರ ನಾನಾ ಅಭಿರುಚಿಗೆ ಒಪ್ಪುವ ಆಭರಣಗಳ ಅಪೂರ್ವ ಸಂಗ್ರಹ ಇಲ್ಲಿದೆ.
ವಿಶಾಲವಾದ ವಾಹನ ಪಾರ್ಕಿಂಗ್, ಸಿಬ್ಬಂದಿಗಳಿಂದ ನಗುಮೊಗದ ಸೇವೆ, ಸಂಪೂರ್ಣ ಪಾರದರ್ಶಕ ವ್ಯವಹಾರ, ನ್ಯಾಯೋಚಿತ ತಯಾರಿಕಾ ವೆಚ್ಚ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ನ ವೈಶಿಷ್ಟ್ಯ. ಎಲ್ಲಾ ಪೀಳಿಗೆಯ ಅಭಿರುಚಿಗೆ ತಕ್ಕಂತೆ ಚಿನ್ನದ ಆಭರಣಗಳ ವಿಶಿಷ್ಟ ಕಲೆಕ್ಷನ್ ಇಲ್ಲಿದೆ.
ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಆಭರಣಗಳ ಆರಾಮದಾಯಕ ಆಯ್ಕೆಗಾಗಿ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳಿಗೆ ಪ್ರತ್ಯೇಕ ವಿಭಾಗಗಳಿವೆ. ಗ್ರಾಹಕರ ಅನುಕೂಲಕ್ಕಾಗಿ ಪುತ್ತೂರು ಮಳಿಗೆ ಭಾನುವಾರಗಳಂದು ಕೂಡಾ ತೆರೆದಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಯುಐಡಿ ಮುದ್ರಿತ ಆಭರಣಗಳು: ಸಾಮಾನ್ಯ ಗ್ರಾಹಕನಿಗೂ ಚಿನ್ನಾಭರಣಗಳ ಶುದ್ಧತೆ, ತೂಕ ಮತ್ತು ಮೂಲವನ್ನು ನೇರವಾಗಿ ತಿಳಿದುಕೊಳ್ಳುವ ಸಲುವಾಗಿ ಭಾರತ ಸರಕಾರ ಜಾರಿಗೊಳಿಸಿದ ಹೆಚ್ ಯುಐಡಿ (hallmark unique identification) ಆಭರಣಗಳು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ನಲ್ಲಿದೆ.
huid ಎಂಬುದು ಎಲ್ಲಾ ಚಿನ್ನದ ಆಭರಣಗಳು 6 ಅಂಕಿಗಳ ಆಲ್ಫಾನ್ಯೂಮೆರಿಕ್ ವಿಶಿಷ್ಟ ಗುರುತಿನ ಕೋಡನ್ನು ಹೊಂದಿರುವುದಾಗಿದೆ. ಸ್ವರ್ಣೋದ್ಯಮದಲ್ಲಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ ಆರಂಭದಿಂದಲೂ ಪಾರದರ್ಶಕ ವ್ಯವಹಾರಕ್ಕೆ ಮನಸೋತ ಗ್ರಾಹಕರು ಇಂದಿಗೂ ಜಿ.ಎಲ್.ನಲ್ಲೇ ಚಿನ್ನಾಭರಣ ಖರೀದಿಸಿ ಸಂತೃಪ್ತರಾಗುತ್ತಿದ್ದಾರೆ.
ಶಿಕ್ಷಣ
Philomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ‘ಬಿಜ್ಫೆಸ್ಟ್ 2K26’
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ದರ್ಬೆ, ಪುತ್ತೂರಿನ ವಾಣಿಜ್ಯ ವಿಭಾಗದ ವತಿಯಿಂದ ರಾಜ್ಯಮಟ್ಟದ ಅಂತರ್ ಕಾಲೇಜು ವಾಣಿಜ್ಯ ಮೇಳ ‘ಬಿಜ್ಫೆಸ್ಟ್ 2K26’ ಅನ್ನು ಅಕ್ಟೋಬರ್ 7ರಂದು ಕಾಲೇಜಿನ ಎಸ್ಜೆಎಂ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಪುತ್ತೂರು, ಅ. 7: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ದರ್ಬೆ, ಪುತ್ತೂರಿನ ವಾಣಿಜ್ಯ ವಿಭಾಗದ ವತಿಯಿಂದ ರಾಜ್ಯಮಟ್ಟದ ಅಂತರ್ ಕಾಲೇಜು ವಾಣಿಜ್ಯ ಮೇಳ ‘ಬಿಜ್ಫೆಸ್ಟ್ 2K26’ ಅನ್ನು ಅಕ್ಟೋಬರ್ 7ರಂದು ಕಾಲೇಜಿನ ಎಸ್ಜೆಎಂ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಪಿಯು ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ, ವ್ಯವಹಾರಿಕ ಸೃಜನಶೀಲತೆ, ಸಂವಹನ ಕೌಶಲ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿದ ಮೇಳದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಕಾಲೇಜಿನ ಪ್ರಾಂಶುಪಾಲ ವಂದನೀಯ ಡಾ. ಆಂಟನಿ ಪ್ರಕಾಶ್ ಮೊಂತೆರೋ ಅಧ್ಯಕ್ಷತೆ ವಹಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಫಿನ್ಸ್ಟ್ರಾಟ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ನ ಸೀನಿಯರ್ ಅಸೋಸಿಯೇಟ್ ಜೋಸ್ವಿತಾ ಲೊರೇನ್ ಲೋಬೊ ಉದ್ಘಾಟಕರಾಗಿ ಭಾಗವಹಿಸಿದರು.
ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಕಲಿಕೆ, ನವೀನ ಚಿಂತನೆ, ಉದ್ಯಮಶೀಲತೆ ಹಾಗೂ ಕೌಶಲಾಭಿವೃದ್ಧಿಯನ್ನು ಬೆಳೆಸುವ ಅಗತ್ಯವನ್ನು ಗಣ್ಯರು ಒತ್ತಿಹೇಳಿದರು. ಸಾಂಪ್ರದಾಯಿಕ ತರಗತಿ ಕಲಿಕೆಯನ್ನು ಮೀರಿ, ನೈಜ ಜಗತ್ತಿನ ವ್ಯವಹಾರಿಕ ಸನ್ನಿವೇಶಗಳಲ್ಲಿ ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಅನ್ವಯಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದು ಬಿಜ್ಫೆಸ್ಟ್ನ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಲಾಯಿತು.

ಮೇಳದಲ್ಲಿ ವಾಣಿಜ್ಯ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳು ವಿದ್ಯಾರ್ಥಿಗಳ ವಿಶ್ಲೇಷಣಾತ್ಮಕ ಸಾಮರ್ಥ್ಯ, ಉದ್ಯಮಶೀಲ ಚಿಂತನೆ, ಸೃಜನಶೀಲತೆ, ಹಣಕಾಸು ಅರಿವು, ಸಂವಹನ ಕೌಶಲ, ನಾಯಕತ್ವ, ತಂಡಭಾವನೆ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸುವಂತಿದ್ದವು. ವಿವಿಧ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಆರೋಗ್ಯಕರ ಸ್ಪರ್ಧೆ ಹಾಗೂ ಸಹಕಾರದ ವಾತಾವರಣ ನಿರ್ಮಿಸಿದರು.
ಪಿಯು ವಿಭಾಗದಲ್ಲಿ ಸಂತ ಫಿಲೋಮಿನಾ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಪಿಯು ವಿಭಾಗದಲ್ಲಿ ಸಂತ ಫಿಲೋಮಿನಾ ಪಿಯು ಕಾಲೇಜು, ಪುತ್ತೂರು ಸಮಗ್ರ ವಿಜೇತ ಪ್ರಶಸ್ತಿಯನ್ನು ಪಡೆದುಕೊಂಡಿತು. ಅಂಬಿಕಾ ಪಡವಿ ಪೂರ್ವ ವಿದ್ಯಾಲಯ, ಪುತ್ತೂರು ಸಮಗ್ರ ರನ್ನರ್ಅಪ್ ಸ್ಥಾನ ಗಳಿಸಿತು.
ಪದವಿ ವಿಭಾಗದಲ್ಲಿ ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಸಮಗ್ರ ವಿಜೇತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ತ್ರಿಶಾ ಕಾಲೇಜು, ಮಂಗಳೂರು ಸಮಗ್ರ ರನ್ನರ್ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತೋರಿದ ಸತತ ಸಾಧನೆ, ಸಿದ್ಧತೆ, ತಂಡಕಾರ್ಯ ಹಾಗೂ ಪ್ರತಿಭೆಗೆ ಈ ಫಲಿತಾಂಶ ಸಾಕ್ಷಿಯಾಯಿತು.
ವಿಜೇತರಿಗೆ ಪ್ರಶಸ್ತಿ ಪ್ರದಾನ
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ವಹಿಸಿದ್ದರು. ಪುತ್ತೂರಿನ ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೊದ ಮಾಲೀಕ ಇಶಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳ ವಿಜೇತರು ಹಾಗೂ ರನ್ನರ್ಅಪ್ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೇಳದಲ್ಲಿ ಭಾಗವಹಿಸಿದ ಎಲ್ಲ ಶಿಕ್ಷಣ ಸಂಸ್ಥೆಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮಗಳು
Puttur-ಪುತ್ತೂರು: ಅ.15ರಂದು ‘ಮೈ ಡ್ರೆಸ್ ಕೋಡ್’ ನೂತನ ಮಳಿಗೆ ಗ್ರಾಂಡ್ ರೀ-ಓಪನಿಂಗ್
ಪುತ್ತೂರು ನಗರದ ಕೆಎಸ್ಆರ್ಟಿಸಿ ವಾಣಿಜ್ಯ ಸಂಕೀರ್ಣದ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ‘ಮೈ ಡ್ರೆಸ್ ಕೋಡ್’ ಬಟ್ಟೆ ಮಳಿಗೆಯ ಶುಭಾರಂಭ ಸಮಾರಂಭವು ಅ.15 ಗುರುವಾರದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಪುತ್ತೂರು: ನಗರದ ಕೆಎಸ್ಆರ್ಟಿಸಿ ವಾಣಿಜ್ಯ ಸಂಕೀರ್ಣದ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ‘ಮೈ ಡ್ರೆಸ್ ಕೋಡ್’ ಬಟ್ಟೆ ಮಳಿಗೆಯ ಶುಭಾರಂಭ ಸಮಾರಂಭವು ಅ.15 ಗುರುವಾರದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಈ ಶುಭಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದಕ್ಷಿಣ ಕನ್ನಡದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಜಯ ಸಾಮ್ರಾಟ್ ಪುತ್ತೂರಿನ ಸಂಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಯು.ಆರ್. ಪಾರ್ಪಟೀಸ್ ಸಂಸ್ಥಾಪಕ ಉಜ್ವಲ್ ಪ್ರಭು, ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸಿಜ್ಲರ್ಸ್ ಗ್ರೂಪ್ ಮಾಲೀಕ ಪ್ರಸನ್ನ ಕುಮಾರ್ ಶೆಟ್ಟಿ, ಹಿಂದೂ ಮುಖಂಡ ಮುರಳಿ ಕೃಷ್ಣ ಹಸಂತಡ್ಕ, ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚನಿಲ ಹಾಗೂ ಹಿಂದೂಸ್ಥಾನ್ ಪ್ರೊಮೋಟರ್ಸ್ ಆ್ಯಂಡ್ ಡೆವಲಪರ್ಸ್ ಪ್ರೈ.ಲಿ.ಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಇಬ್ರಾಹಿಂ ಮೊಹಿದೀನ್ ಅವರು ಭಾಗವಹಿಸಲಿದ್ದಾರೆ.
ಮಳಿಗೆಯ ಮಾಲೀಕ ರಮೇಶ್ ಅವರು ಗ್ರಾಹಕರು, ಹಿತೈಷಿಗಳು ಹಾಗೂ ಸಾರ್ವಜನಿಕರನ್ನು ಶುಭಾರಂಭ ಸಮಾರಂಭಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 63631 66808 / 95352 47400 ಅನ್ನು ಸಂರ್ಪಕಿಸಬಹುದು.
ಕಾರ್ಯಕ್ರಮಗಳು
Puttur-ಪುತ್ತೂರು: ಅ.16ರಂದು ಪ್ರವೀಣ್ ಕ್ಯಾಪಿಟಲ್ನ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ
ಹಣಕಾಸು ಸೇವಾ ಕ್ಷೇತ್ರದಲ್ಲಿ 1994ರಿಂದ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಅ.16, ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಶ್ರೀ ಗಣೇಶ್ ಕಾಂಪ್ಲೆಕ್ಸ್ನಲ್ಲಿರುವ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ.
ಪುತ್ತೂರು: ಹಣಕಾಸು ಸೇವಾ ಕ್ಷೇತ್ರದಲ್ಲಿ 1994ರಿಂದ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಅ.16, ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಶ್ರೀ ಗಣೇಶ್ ಕಾಂಪ್ಲೆಕ್ಸ್ನಲ್ಲಿರುವ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರಿನ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ನ ಅಧ್ಯಕ್ಷ ಜಿ.ಎಲ್. ಬಲರಾಮ ಆಚಾರ್ಯ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಭಾಗವಹಿಸಲಿದ್ದಾರೆ.
1994ರಲ್ಲಿ ಆರಂಭಗೊಂಡಿರುವ ಪ್ರಾವೀಣ್ ಕ್ಯಾಪಿಟಲ್, ಗ್ರಾಹಕರ ಬೆಂಬಲ ಮತ್ತು ವಿಶ್ವಾಸದೊಂದಿಗೆ ತನ್ನ ಸೇವೆಯನ್ನು ಮುಂದುವರಿಸುತ್ತಿದೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಪ್ರಧಾನ ಕಚೇರಿಯನ್ನು ನವೀಕರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
-
Uncategorized24 hours agoLawyer Amrutesh-ಸೌಜನ್ಯ ಪ್ರಕರಣ ಮರುತನಿಖೆ : ಸಂತೋಷ್ ರಾವ್ ವಿರುದ್ಧ ಬಲವಾದ ಸಾಕ್ಷ್ಯಗಳಿವೆ: ಧಾರ್ಮಿಕ ಕ್ಷೇತ್ರದ ಮೇಲೆ ಷಡ್ಯಂತ್ರ ನಡೆಯುತ್ತಿದೆ : ಹೈಕೋರ್ಟ್ ವಕೀಲ ಅಮೃತೇಶ್
-
ರಾಜಕೀಯ23 hours agoSiddaramaiah-ಸ್ಟಿಂಗ್ ವಿಡಿಯೋ ಪ್ರಸಾರಕ್ಕೆ ಬ್ರೇಕ್ ಹಾಕಲು ಸಿದ್ದರಾಮಯ್ಯ ಕೋರ್ಟ್ ಮೊರೆ
-
ದಕ್ಷಿಣ ಕನ್ನಡ8 hours ago
ಕಳವು ಮಾಡಿ ಮನೆಗೆ ಬೆಂಕಿ ಹಚ್ಚಿದ ಶಂಕೆ: ಪುತ್ತೂರಿನಲ್ಲಿ ಪ್ರಕರಣ ದಾಖಲು
-
ಅಂತರ ರಾಜ್ಯ6 hours agoRestaurant-ನೀರಿನ ಬಾಟ್ಲಿಗೆ ₹2 ಹೆಚ್ಚುವರಿ ವಸೂಲಿ; ರೆಸ್ಟೋರೆಂಟ್ಗೆ ₹1 ಲಕ್ಷ ದಂಡ..!
-
ಸುಳ್ಯ8 hours ago
ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಬಂಧನ, ತಿಹಾರ್ ಜೈಲಿಗೆ ಶಿಫ್ಟ್ ಸಾಧ್ಯತೆ
-
Uncategorized7 hours agoKumaraswamy-ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯ ಮೌನವಾಗಿರಬಾರದು – ಸಿಬಿಐ ತನಿಖೆಗೆ ಕುಮಾರಸ್ವಾಮಿ ಆಗ್ರಹ
-
ಬಿಗ್ ನ್ಯೂಸ್7 hours agoG.L. Acharya Jewellers-ವಿಜಯದಶಮಿ ಪ್ರಯುಕ್ತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನಿಂದ ವಿಶೇಷ ಕೊಡುಗೆ
-
ನಿಧನ ವಾರ್ತೆ6 hours agoBoat Sink-ಹಾಜಿಪುರ: ಗಂಗಾ ನದಿಯಲ್ಲಿ ದೋಣಿ ಮುಳುಗಿ 11 ಮಂದಿ ಸಾವು


















