ಬಿಗ್ ನ್ಯೂಸ್
ಬಜರಂಗದಳ ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ ಕಾಂಗ್ರೆಸ್ ವಿರುದ್ದ ಗುಡುಗಿದ ಯೋಗಿ – ಪುತ್ತೂರಿನಲ್ಲಿ ಬೃಹತ್ ರೋಡ್ ಶೋ
ಪುತ್ತೂರು, ಮೇ 6 : ಕರ್ನಾಟಕದಲ್ಲಿ ಯಡಿಯೂರಪ್ಪರವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ಅವರ ನೇತೃತ್ವದ ಡಬಲ್ ಇಂಜಿನ್ ಸರ್ಕಾರವು ದೇಶದ ಪ್ರಗತಿ ಶಾಲಿ ರಾಜ್ಯವಾಗಿ ಹೊರಹೊಮ್ಮುತ್ತಿದೆ. ಭಾರತವು ಮೋದಿಯವರ ಕೈಯಲ್ಲಿ ಸುರಕ್ಷಿತವಾಗಿದೆ. ದೇಶದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಭೇದ ಭಾವ ರಹಿತ ಮೋದಿ ಅವರ ಆಡಳಿತದ ಪರಿಣಾಮ ದೇಶದ ಪ್ರತಿ ನಾಗರೀಕರಿಗೆ ಯೋಜನೆಯ ಲಾಭಗಳು ಸಿಗುತ್ತಿದೆ. ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಬ್ಯಾರಿಕೇಡ್ ಆಗಿ ಪ್ರಗತಿಯ ಪಥಕ್ಕೆ ತಡೆಯೊಡ್ಡುತ್ತಿದೆ. ಕರ್ನಾಟಕದ ಜನತೆ ಅದನ್ನು ಸ್ವೀಕರಿಸಬಾರದು. ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
ಆವರು ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತಯಾಚನೆಯ ರೋಡ್ ಶೋ ನಡೆಸಿ ಕಿಲ್ಲೆ ಮೈದಾನದಲ್ಲಿ ಬಿಜೆಪಿ ಬೆಂಬಲಿಗರನ್ನು ಉದ್ದೇಶಿ ಮಾತನಾಡಿದರು.
ನಾನು ಶ್ರೀರಾಮನ ಜನ್ಮ ಸ್ಥಾನ ಅಯೋಧ್ಯೆಯಿಂದ ಹನುಮನ ಜನ್ಮಭೂಮಿ ಕರ್ನಾಟಕಕ್ಕೆ ಆಗಮಿಸಿದ್ದೇನೆ. ಉತ್ತರ ಪ್ರದೇಶ ಹಾಗೂ ಕರ್ನಾಟಕದ ಮಾನವ ನಾಗರೀಕತೆಯಷ್ಟೇ ಸಂಬಂಧ ಅತ್ಯಂತ ಪ್ರಾಚೀನವಾಗಿದೆ. ಪ್ರಭು ಶ್ರೀರಾಮನಿಗೆ ಅವರ ಮನವಾಸ ಸಮಯದಲ್ಲಿ ಅತಿ ದೊಡ್ಡ ಬೆಂಬಲ ನೀಡಿದಂತಹ ಮಹಾನ್ ವ್ಯಕ್ತಿಯಿದ್ದರೆ ಭಜರಂಗ ಬಲಿ ಎಂಬುದನ್ನು ಸ್ಮರಿಸಿಕೊಳ್ಳಬೇಕಾಗಿದೆ. ಕೊನೆಯ ಕ್ಷಣದವರೆಗೆ ಆತ ರಾಮನಿಗೆ ಬೆಂಬಲವನ್ನು ನೀಡಿದ್ದಾನೆ. ಒಂದು ಕಡೆಯಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮಂದಿರ ನಿರ್ಮಾಣವಾಗುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಕರ್ನಾಟಕದಲ್ಲಿ ಹನುವನ ಮಂದಿರ ನಿರ್ಮಿಸುತ್ತಿದೆ. ಇದು ನಂಬಿಕೆ ಶ್ರದ್ಧೆಗೆ ನೀಡುವ ಗೌರವಾಗಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಫಿಎಫ್ ಐ ಹಾಗೂ ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಪ್ರನಾಳಿಕೆಯಲ್ಲಿ ತಿಳಿಸಿದೆ. ಇದು ಸಮಾಜದಲ್ಲಿ ಸಾಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ದೇಶಭಕ್ತರ ಮನೋಸ್ಥೈರ್ಯವನ್ನು ಕುಗ್ಗಿಸುವ ಮೂಲಕ ರಾಷ್ಟ್ರದ್ರೋಹಿ ಶಕ್ತಿಗಳಿಗೆ ದುತ್ಸಾಹಸ ಮಾಡಲು ಪ್ರೇರೇಪಿಸುತ್ತಿದೆ. ಇದನ್ನು ಭಾರತದ ಯಾವುದೇ ರಾಷ್ಟ್ರ ಪ್ರೇಮಿ ಸ್ವೀಕರಿಸಲು ಸಿದ್ಧವಿಲ್ಲ. ಒಂದೆಡೆ ಬಿಜೆಪಿ ಸರ್ಕಾರ ನಿಮ್ಮ ನಂಬಿಕೆಯನ್ನು ಗೌರವಿಸುವ ಕಾರ್ಯ ಮಾಡುತ್ತಿದ್ದರೆ, ಕಾಂಗ್ರೆಸ್ ನಂಬಿಕೆ ಅವಮಾನಿಸುವ ಕಾರ್ಯ ಮಾಡುತ್ತಿದೆ. ಪ್ರಥಮವಾಗಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಅಸ್ಥಿತ್ವವನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಅವರು ರಾಮನನ್ನು ಕಾಲ್ಪನಿಕ ಎಂದು ಹೇಳಿದ್ದು, ವಾಸ್ತವಿಕ ಎಂದು ನಂಬಲಿಲ್ಲ. ಈ ಬಗ್ಗೆ ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಅಫಿದವತ್ ಸಲ್ಲಿಸಿತ್ತು. ಬಜರಂಗದಳ ಒಂದು ಸಾಂಸ್ಕೃತಿಕ ಸಂಘಟನೆಯಾಗಿದೆ. ಅದರಲ್ಲಿರುವ ಯುವಕರು ಭಾರತ ಮಾತೆಯ ಸೇವೆ ಸಮರ್ಪಿಸಿಕೊಂಡವರಾಗಿದ್ದಾರೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ವಿಕಾಸಕ್ಕಾಗಿ ರಾಷ್ಟ್ರದ ನಿರ್ಮಾಣಕ್ಕಾಗಿ ಟೀಮ್ ಇಂಡಿಯಾದ ನಾಯಕನಾಗಿರುವ ಮೋದಿಯ ಕೈಯನ್ನು ಬಲ ಪಡಿಸಲು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ. ಈ ಹಿನ್ನಲೆಯಲ್ಲಿ ಪುತ್ತೂರಿನ ಮತದಾರರು ಬಿಜೆಪಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರನ್ನು ಗೆಲ್ಲಿಸಬೇಕಾಗಿದೆ. ಆಶಾ ತಿಮ್ಮಪ್ಪ ಗೌಡ ರವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತೆಯಾಗಿದ್ದು, ವಿಧಾನ ಸಭೆಯ ಚುನಾವಣೆಯ ಹಿನ್ನಲೆಯಲ್ಲಿ ನಿಮ್ಮ ಮಧ್ಯ ಬಂದಿದ್ದಾರೆ. ಸಾಮಾನ್ಯ ಕಾರ್ಯಕರ್ತೆಯನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಿದಾಗ, ನಮ್ಮದೇ ಪರಿವಾರದ ಕೆಲವು ಸದ್ಯರೊಬ್ಬರು ವ್ಯಕ್ತಿಯೊಬ್ಬರನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಸಿದ್ದಾರೆ. ನಾವು ಪ್ರಚೋದನೆಗೊಳಗಾಗಬಾರದು. ಪ್ರತಿ ದಾಳಿ ನಡೆಸಬಾರದು. ಅವರನ್ನು ಸಮಾಧಾನಗೊಳಿಸಿ ಆಶಾ ತಿಮ್ಮ ಗೌಡ ಅವರನ್ನು ಗೆಲ್ಲಿಸಿ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸುಧರ್ಶನ ಮೂಡಬಿದರೆ, ಶಾಸಕ ಸಂಜೀವ ಮಠಂದೂರು, ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತಿತರರು ವಾಹನದ ವೇದಿಕೆಯಲ್ಲಿದ್ದರು.
ಸ್ಥಳೀಯ
Kumara Parvata-ಅ.18ರಿಂದ ಕುಮಾರ ಪರ್ವತ ಚಾರಣಕ್ಕೆ ಅನುಮತಿ
ಚಾರಣಿಗರ ನೆಚ್ಚಿನ ತಾಣವಾದ ಕುಮಾರ ಪರ್ವತ ಚಾರಣಕ್ಕೆ ಅಕ್ಟೋಬರ್ 18ರಿಂದ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಎರಡು ಚಾರಣ ಮಾರ್ಗಗಳ ಪೈಕಿ ಬಿದಹಳ್ಳಿ–ಕುಮಾರ ಪರ್ವತ–ಬಿದಹಳ್ಳಿ ಮಾರ್ಗದಲ್ಲಿ ಮಾತ್ರ ಸದ್ಯಕ್ಕೆ ಚಾರಣಕ್ಕೆ ಅನುಮತಿ ನೀಡಲಾಗಿದೆ.
ಸುಬ್ರಹ್ಮಣ್ಯ: ಚಾರಣಿಗರ ನೆಚ್ಚಿನ ತಾಣವಾದ ಕುಮಾರ ಪರ್ವತ ಚಾರಣಕ್ಕೆ ಅಕ್ಟೋಬರ್ 18ರಿಂದ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಎರಡು ಚಾರಣ ಮಾರ್ಗಗಳ ಪೈಕಿ ಬಿದಹಳ್ಳಿ–ಕುಮಾರ ಪರ್ವತ–ಬಿದಹಳ್ಳಿ ಮಾರ್ಗದಲ್ಲಿ ಮಾತ್ರ ಸದ್ಯಕ್ಕೆ ಚಾರಣಕ್ಕೆ ಅನುಮತಿ ನೀಡಲಾಗಿದೆ.
ಚಾರಣಕ್ಕೆ ಆಗಮಿಸುವವರು ನಿಗದಿಪಡಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಚಾರಣದ ವೇಳೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಕಡ್ಡಾಯವಾಗಿದೆ.
ಚಾರಣಿಗರು ನಿಗದಿತ ಸಮಯಕ್ಕೆ ಹಾಜರಾಗಬೇಕು. ಅಲ್ಲದೆ, ಕರ್ತವ್ಯದಲ್ಲಿರುವ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಸೂಚಿಸಲಾಗಿದೆ. ಪ್ರಕೃತಿಯ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಚಾರಣದ ಸಂದರ್ಭದಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಲಾಗಿದೆ.
ಇನ್ನೊಂದೆಡೆ, ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ ಮೂಲಕ ಕುಮಾರ ಪರ್ವತ ಚಾರಣ ಆರಂಭಿಸಲು ಈವರೆಗೆ ದಿನಾಂಕ ನಿಗದಿಯಾಗಿಲ್ಲ.
ಅಂತರ ರಾಜ್ಯ
Supreme Court-ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ..!
ಹಬ್ಬದ ಋತುವಿನಲ್ಲಿ ವ್ಯಾಪಾರಕ್ಕೆ ನಷ್ಟವಾಗುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ದೆಹಲಿಯ ಕಾನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗೆ ತಡೆ ನೀಡುವಂತೆ ತುರ್ತು ನಿರ್ದೇಶನಗಳನ್ನು ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಹೊಸದಿಲ್ಲಿ: ಹಬ್ಬದ ಋತುವಿನಲ್ಲಿ ವ್ಯಾಪಾರಕ್ಕೆ ನಷ್ಟವಾಗುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ದೆಹಲಿಯ ಕಾನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗೆ ತಡೆ ನೀಡುವಂತೆ ತುರ್ತು ನಿರ್ದೇಶನಗಳನ್ನು ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪ್ರತಿಭಟನೆಯಿಂದ ಹಬ್ಬದ ವ್ಯಾಪಾರಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದ ವರ್ತಕರು, ಪ್ರತಿಭಟನೆಗೆ ತಡೆ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು.
ಈ ಮನವಿಯ ವಿಚಾರವಾಗಿ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ವಿವೇಕವನ್ನು ಪ್ರತಿಭಟನಾಕಾರರು ಹೊಂದಿರುತ್ತಾರೆ ಎಂದು ಆಶಿಸಿರುವುದಾಗಿ ತಿಳಿಸಿದೆ.
ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಬೇಕೆಂಬ ವರ್ತಕರ ಆತಂಕದ ನಡುವೆಯೇ, ಪ್ರತಿಭಟನೆಗೆ ಸಂಬಂಧಿಸಿದಂತೆ ತುರ್ತು ನಿರ್ಬಂಧಗಳನ್ನು ವಿಧಿಸಲು ನ್ಯಾಯಾಲಯ ನಿರಾಕರಿಸಿರುವುದು ಗಮನ ಸೆಳೆದಿದೆ.
ಬಿಗ್ ನ್ಯೂಸ್
Puttur-ಪುತ್ತೂರು: ಓವರ್ ಟೆಕ್ ಬರದಲ್ಲಿ ಲಾರಿ-ಕಾರು ಅಪಘಾತ; ಪಲ್ಟಿಯಾದ ಲಾರಿ
ರಾಷ್ಟ್ರೀಯ ಹೆದ್ದಾರಿ 275ರ ಸಂಟ್ಯಾರ್ ಸಮೀಪ ಇಂದು ಲಾರಿ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯಲ್ಲೇ ಮಗುಚಿಬಿದ್ದಿದೆ. ಅತಿವೇಗ ಹಾಗೂ ಓವರ್ಟೇಕ್ ಮಾಡುವ ಭರದಲ್ಲಿ ಈ ದುರಂತ ನಡೆದಿದೆ ಎನ್ನಲಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.
ರಾಷ್ಟ್ರೀಯ ಹೆದ್ದಾರಿ 275ರ ಸಂಟ್ಯಾರ್ ಸಮೀಪ ಇಂದು ಲಾರಿ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯಲ್ಲೇ ಮಗುಚಿಬಿದ್ದಿದೆ. ಅತಿವೇಗ ಹಾಗೂ ಓವರ್ಟೇಕ್ ಮಾಡುವ ಭರದಲ್ಲಿ ಈ ದುರಂತ ನಡೆದಿದೆ ಎನ್ನಲಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಯು ಮುಂಭಾಗದಲ್ಲಿದ್ದ ಕಾರನ್ನು ಓವರ್ಟೇಕ್ ಮಾಡಲು ಯತ್ನಿಸಿದಾಗ ಈ ಭೀಕರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಲಾರಿಯು ಹೆದ್ದಾರಿಗೆ ಅಡ್ಡಲಾಗಿ ಮಗುಚಿಬಿದ್ದಿದೆ.
ಅಪಘಾತದಿಂದಾಗಿ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಸಾರ್ವಜನಿಕರು ಹಾಗೂ ಹಾದಿಹೋಕರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ನೆರವಾಗಿದ್ದಾರೆ.
ಲಾರಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡು, ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೇನ್ ಬಳಸಿ ರಸ್ತೆಯಲ್ಲಿದ್ದ ಲಾರಿಯನ್ನು ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
-
ಸ್ಥಳೀಯ19 hours agoKadaba-ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಕಡಬ ನಿವಾಸಿ ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, ₹50 ಸಾವಿರ ದಂಡ..!
-
ಬಿಗ್ ನ್ಯೂಸ್22 hours agoPuttur-ಪುತ್ತೂರು: ಓವರ್ ಟೆಕ್ ಬರದಲ್ಲಿ ಲಾರಿ-ಕಾರು ಅಪಘಾತ; ಪಲ್ಟಿಯಾದ ಲಾರಿ
-
ಅಂತರ ರಾಜ್ಯ24 hours agoRamleela-ನವದೆಹಲಿ: ರಾಮಲೀಲಾದಲ್ಲಿ ಈ ಬಾರಿ ಅಸುರರ ಜತೆಗೆ ʻಜಿರಳೆʼಯೂ ದಹನ..!
-
ಕಾರ್ಯಕ್ರಮಗಳು23 hours agoMangalore-ಮಂಗಳೂರಿಗೆ ಲಗ್ಗೆ ಇಟ್ಟ ಅಲರ್ಜಿ ಪರೀಕ್ಷೆಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ರಾಜ್ಯದ ಪ್ರತಿಷ್ಠಿತ ‘ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ’ : ಅ.19ರಂದು 11ನೇ ಶಾಖೆ ಉದ್ಘಾಟನೆ
-
ಅಪರಾಧ24 hours agoUdupi-ಉಡುಪಿ: ಭೂಗತ ಪಾತಕಿ ಹೇಮಂತ್ ಪೂಜಾರಿ ಸಹಚರನ ಬಂಧನ
-
ಅಂತರ ರಾಜ್ಯ24 hours agoTruecaller service-ಟೆಲಿಕಾಂ ಸಂಸ್ಥೆಗಳೇ ಒದಗಿಸಲಿವೆ ಟ್ರೂ ಕಾಲರ್ ಸೇವೆ; ಅಪರಿಚಿತ ನಂಬರ್ನಿಂದ ಕರೆ ಬಂದರೂ ಹೆಸರು ಪ್ರದರ್ಶನ ಕಡ್ಡಾಯ?
-
ಶಿಕ್ಷಣ17 hours agoVidyamata Academy-ವಿದ್ಯಾಮಾತಾ ಅಕಾಡೆಮಿಯಲ್ಲಿ ಮೂರು ದಿನಗಳ “ವಾಯ್ಸ್ ಅಂಡ್ ವಿಷನ್” ತರಬೇತಿ ಕಾರ್ಯಕ್ರಮ ಮತ್ತು ಶಾರದಾ ಪೂಜೆ
-
ಅಂತರ ರಾಜ್ಯ19 hours agoSupreme Court-ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ..!


















