ದಕ್ಷಿಣ ಕನ್ನಡ
ಆಧುನಿಕ ತಂತ್ರಜ್ಞಾನವನ್ನು ಬಳಸಿ ಚಿತ್ರ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ- ಅಪಪ್ರಚಾರಿಗಳ ವಿರುದ್ದ ಮಹಾಲಿಂಗೇಶ್ವರ ದೇವಳದಲ್ಲಿ ಪ್ರಾರ್ಥನೆ : ಸಂಜೀವ ಮಠಂದೂರು
ಪುತ್ತೂರು:- ಏ 7 : ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಂದಿಗೆ ಅಕ್ಷೇಪಾರ್ಹ ಭಂಗಿಯಲ್ಲಿರುವ ಪೋಟೊಗಳು ವೈರಲ್ ಆದ ಘಟನೆಯೂ ರಾಜಕೀಯ ಷಡ್ಯಂತ್ರ ಎಂದಿರುವ ಪುತ್ತೂರು ಶಾಸಕ ಸಂಜೀವ ಮಠಂದೂರು, ಅಪಪ್ರಚಾರ ನಡೆಸಿದವರ ವಿರುದ್ದ, ಮಹಾಲಿಂಗೇಶ್ವರ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, “ ಇತ್ತೀಚಿಗೆ ವೈರಲ್ ಆಗಿರುವಂತಹ ಚಿತ್ರಣವು ಆಧುನಿಕ ತಂತ್ರಜ್ಞಾನವನ್ನು ಬಳಸಿ ಮಾಡಿರುವುದಾಗಿದೆ. ಅಂತಹ ಯಾವುದೇ ಘಟನೆಗಳು ಆಗಿರುವುದಿಲ್ಲ ಮತ್ತು ಅದರಲ್ಲಿ ನನ್ನ ಯಾವುದೇ ಪಾತ್ರ ಇರುವುದಿಲ್ಲ. ಸದ್ರಿ ಚಿತ್ರಣವು ರಾಜಕೀಯ ವಿರೋಧಿಗಳು ನನ್ನನ್ನು ರಾಜಕೀಯದಿಂದ ಮುಗಿಸಲು ಮಾಡಿದ ತಂತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ವ್ಯಕ್ತಿಯನ್ನು ರಾಜಕೀಯವಾಗಿ ಮುಗಿಸಲು ಮಾಡುತ್ತಿರುವ ಪ್ರಯತ್ನ ಸರ್ವೆ ಸಾಮಾನ್ಯವಾಗಿದೆ. ಈ ಆರೋಪದ ವಿರುದ್ಧ ಕಾನೂನು ಹೋರಾಟ ಮಾಡಲು ನಾನು ತಯಾರು ಮಾಡುತ್ತಿದ್ದೇನೆ ಎಂದರು.
ಪತ್ರಿಕಾ ಪ್ರಕಟನೆಯ ಪೂರ್ಣ ಪಾಠ
ಪ್ರತಿಷ್ಠಿತ ಮನೆಯಲ್ಲಿ ಹುಟ್ಟಿ ಬೆಳೆದ ನಾನು ನನ್ನ ಜೀವನವನ್ನು ಧಾರ್ಮಿಕ, ಶೈಕ್ಷಣಿಕ, ಸಹಕಾರ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಿಗೆ ಮೀಸಲಾಗಿಟ್ಟಿದ್ದು ಕಳೆದ ಹಲವು ದಶಕಗಳಿಂದ ಈ ಕ್ಷೇತ್ರಗಳಲ್ಲಿ ನನ್ನನ್ನು ನಾನುತೊಡಗಿಸಿಕೊಂಡಿದ್ದೇನೆ. ಕಳೆದ ಹಲವು ವರ್ಷಗಳಿಂದ ದೇವಾಸ್ಥಾನಗಳ ಜೀರ್ಣೋದ್ಧಾರ ಸಮಿತಿಯಲ್ಲಿ ತೊಡಗಿಸಿಕೊಂಡು ದೇವಾಳಯದ ಜೀರ್ಣೋದ್ಧಾರ ಮಾಡಿ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮಾಡುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿರುತ್ತೇನೆ. ಅಲ್ಲದೇ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶೇಷವಾಗಿಪ್ರಾಥಮಿಕ ಅವಶ್ಯಕತೆಗಳನ್ನು ಕಲ್ಪಿಸುವಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರಮಾಣಿಕ ಸಮಾಜಸೇವೆಯನ್ನು ಕೂಡ ಮಾಡಿಕೊಂಡು ಬಂದಿರುತ್ತೇನೆ
ಸರಕಾರಿ ಶಾಲೆಗಳಿಗೆ ಕಳೆದ ಕೆಲವು ದಶಕಗಳಿಂದ ರಾಜಕೀಯ, ಸಹಕಾರ ಕ್ಷೇತ್ರದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಗ್ರಾಮಪಂಚಾಯಿತಿನಿಂದ ಹಿಡಿದು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಕಳೆದ ಅವಧಿಯಲ್ಲಿಶಾಸಕನನಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ ತೃಪ್ತಿ ನನಗಿದೆ. ಅದರಲ್ಲಿ ವಿಶೇಷವಾಗಿ ಕಳೆದ 5ವರ್ಷದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸುಮಾರು 1100 ಕೋಟಿಗೂ ಮಿಕ್ಕಿ ಅನುದಾನವನ್ನು ತರಿಸಿ ಆ ಮೂಲಕ ಪುತ್ತೂರು ವಿಧಾನ ಸಭಾ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿ ಕೆಲಸವನ್ನು ಪ್ರಮಾಣಿಕವಾಗಿ ಮಾಡಿರುತ್ತೇನೆ.
ಸದ್ರಿ ಅನುದಾನವನ್ನು ಸಮಾಜದ ಎಲ್ಲಾ ವರ್ಗದ ಜನರಿಗೆ ತಲುಪಿಸುವಂತಹ ಕೆಲಸವನ್ನು ಮಾಡಿರುತ್ತೇನೆ. ಅಲ್ಲದೇಬಡವರ್ಗದ ಜನರಿಗೆ ಸರ್ಕಾರದಿಂದ ಸಿಗುವಂತಹ ಎಲ್ಲಾ ಸಕಲ ಸೌಲಭ್ಯಗಳನ್ನು ಒದಗಿಸಿರುತ್ತೇನೆ. ಕಳೆದ ಅವಧಿಯಲ್ಲಿ ಮಾಡಿದ ಅಭಿವೃದ್ಧಿಯನ್ನು ಯಾವುದೇ ಜಾತಿ, ಮತ, ಪಂಥ, ನೋಡದೇ ಮಾಡಿರುತ್ತೇನೆ. ಈ ಅವಧಿಯಲ್ಲಿ ಸಾಕಷ್ಟು ಏಳು ಬೀಳುಗಳು ಆಗಿದ್ದರೂ ಎಲ್ಲವನ್ನು ಎದುರಿಸಿ ಮುನ್ನಡೆದಿದ್ದೇನೆ.
ಹೀಗಿರುವಾಗ ನನ್ನ ಅಭಿವೃದ್ಧಿಯನ್ನು ಸಹಿಸದ ಕೆಲವೊಂದು ವ್ಯಕ್ತಿಗಳು ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿರುತ್ತಾರೆ. ಇದು ನನ್ನ ವಿರುದ್ಧ ಮಾಡಿದ ಷಡ್ಯಂತರವಲ್ಲದೇ ಬೇರೆನೂ ಅಲ್ಲ. ಹಾಗೇ ಮಾಡಿದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಮತ್ತು ಸತ್ಯ ಸತ್ಯಾತೆಗಳು ಇರುವುದಿಲ್ಲ.
ಇತ್ತೀಚಿಗೆ ವೈರಲ್ ಆಗಿರುವಂತಹ ಚಿತ್ರಣವು ಆಧುನಿಕ ತಂತ್ರಜ್ಞಾನವನ್ನು ಬಳಸಿ ಮಾಡಿರುವಿದಾಗಿದೆ. ಅಂತಹ ಯಾವುದೇ ಘಟನೆಗಳು ಆಗಿರುವುದಿಲ್ಲ ಮತ್ತು ಅದರಲ್ಲಿ ನನ್ನ ಯಾವುದೇ ಪಾತ್ರ ಇರುವುದಿಲ್ಲ. ಸದ್ರಿ ಚಿತ್ರಣವು ರಾಜಕೀಯ ವಿರೋಧಿಗಳು ನನ್ನನ್ನು ರಾಜಕೀಯದಿಂದ ಮುಗಿಸಲು ಮಾಡಿದ ತಂತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ವ್ಯಕ್ತಿಯನ್ನು ರಾಜಕೀಯವಾಗಿ ಮುಗಿಸಲು ಮಾಡುತ್ತಿರುವ ಪ್ರಯತ್ನ ಸರ್ವೆ ಸಾಮಾನ್ಯವಾಗಿದೆ. ಈ ಆರೋಪದ ವಿರುದ್ಧ ಕಾನೂನು ಹೋರಾಟ ಮಾಡಲು ನಾನು ತಯಾರು ಮಾಡುತ್ತಾ ಇದ್ದೇನೆ. ಅಲ್ಲದೇ ಈ ರೀತಿ ಪ್ರಚಾರ ಮಾಡುವವರ ವಿರುದ್ಧ ನಾನು ನಂಬಿದಂತಹ ಆರಾಧ್ಯ ದೇವರಾದ ಶ್ರೀಮಹಾಲಿಂಗೇಶ್ವರ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದೇನೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು
Dakshina Kannada-ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಪ್ರಸ್ತಾವ: ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸಿದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವಂತೆ ರಾಜಕಾರಣಿಗಳು, ಸಾಮಾಜಿಕ ಚಿಂತಕರು, ಸರ್ವಧರ್ಮಗಳ ಹಿರಿಯರು ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಸರ್ಕಾರಕ್ಕೆ ಹಲವು ಮನವಿಗಳು ಸಲ್ಲಿಕೆಯಾಗಿವೆ. ಸಾರ್ವಜನಿಕರ ಬೇಡಿಕೆ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಪರಿಗಣಿಸಿ ಈ ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ.
ಭಾರತ ಸರ್ಕಾರದ ಗೃಹ ಸಚಿವಾಲಯದ 1953ರ ಸೆಪ್ಟೆಂಬರ್ 11ರ ಮಾರ್ಗಸೂಚಿಗಳು ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಸೆಕ್ಷನ್ 4(4A) ಅಡಿಯಲ್ಲಿ ಲಭ್ಯವಿರುವ ಅಧಿಕಾರಗಳನ್ವಯ ಮರುನಾಮಕರಣ ಪ್ರಕ್ರಿಯೆ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಈ ಸಂಬಂಧ ಸಾರ್ವಜನಿಕರು ತಮ್ಮ ಸಲಹೆ ಮತ್ತು ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ಅಥವಾ ಇ-ಮೇಲ್ ಮೂಲಕ ಸರ್ಕಾರಕ್ಕೆ ಸಲ್ಲಿಸಬಹುದು. ಸ್ವೀಕೃತವಾಗುವ ಅಭಿಪ್ರಾಯಗಳನ್ನು ಪರಿಶೀಲಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಭಿಪ್ರಾಯ ಸಲ್ಲಿಸಬೇಕಾದ ವಿಳಾಸಗಳು
- ಮುಖ್ಯಮಂತ್ರಿಯವರ ಸಚಿವಾಲಯ, ಕೊಠಡಿ ಸಂಖ್ಯೆ: 235, 2ನೇ ಮಹಡಿ, ವಿಧಾನಸೌಧ, ಬೆಂಗಳೂರು – 560001; ಇ-ಮೇಲ್: cm.kar@nic.in
- ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ, ಕೊಠಡಿ ಸಂಖ್ಯೆ: 711, 7ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು – 560001; ಇ-ಮೇಲ್: Prs.revenue@gmail.com
- ಗಮನಿಸಿ: ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಲ್ಲಿಸಬೇಕು.
ಮಂಗಳೂರು
Raghupti Bhat-2028ರ ಚುನಾವಣೆಯಲ್ಲಿ ಸ್ಪರ್ಧೆ ಖಚಿತ; ಕಾಂಗ್ರೆಸ್ ಸೇರ್ಪಡೆ ಬಗ್ಗೆ ಏನು ಹೇಳಿದ್ರು ರಘುಪತಿ ಭಟ್
ಕಾಂಗ್ರೆಸ್ ಸೇರ್ಪಡೆಯ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳೂರು: ಕಾಂಗ್ರೆಸ್ ಸೇರ್ಪಡೆಯ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಈಗಾಗಲೇ ಆಹ್ವಾನ ಬಂದಿರುವುದು ನಿಜ. ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯ ಪಡೆದುಕೊಂಡ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.
“ಬಿಜೆಪಿಯವರು ಕರೆಯುತ್ತಾರೆ ಎಂದು ಕಾಯುತ್ತಿದ್ದೇನೆ. ಬಿಜೆಪಿ ಸೇರುವ ಬಗ್ಗೆಯೂ ಯೋಚಿಸಬಹುದು. ಆದರೆ ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಬೆಳೆದು, ಬಿಜೆಪಿಯಲ್ಲಿ ಯುವ ಮೋರ್ಚಾ ಜಿಲ್ಲಾ ಘಟಕ ಹಾಗೂ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಮೂರು ಬಾರಿ ಶಾಸಕನಾಗಿದ್ದೇನೆ. ಹೀಗಿರುವಾಗ ಏಕಾಏಕಿ ಪಕ್ಷ ಬದಲಿಸುವ ನಿರ್ಧಾರ ಕೈಗೊಳ್ಳಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನನ್ನ ಬೆಂಬಲಿಗರ ವಿಶ್ವಾಸ ಪಡೆದುಕೊಂಡೇ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ತಿಳಿಸಿದರು.
ಕಳೆದ ಚುನಾವಣೆಯ ಸಂದರ್ಭ ತಮಗೆ ಅನ್ಯಾಯವಾಗಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದ ರಘುಪತಿ ಭಟ್, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ತಪ್ಪಿದ್ದಕ್ಕಿಂತಲೂ ವಿಧಾನ ಪರಿಷತ್ ಸ್ಥಾನ ನೀಡುವುದಾಗಿ ಹೇಳಿ, ಕೊನೆಗೆ ಅವಕಾಶ ನೀಡದಿರುವುದು ನೋವು ತಂದಿದೆ ಎಂದರು.
ತಮ್ಮದೇ ಪಕ್ಷದ ಕೆಲವು ಶಾಸಕರಿಂದ ವೈಯಕ್ತಿಕ ದಬ್ಬಾಳಿಕೆ ಎದುರಿಸಬೇಕಾಯಿತು ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ಸಂಘದ ಹಿರಿಯರು ಹಾಗೂ ಬಿಜೆಪಿಯ ನಾಯಕರು ತಮ್ಮೊಂದಿಗೆ ಮಾತನಾಡದಿರುವುದು ಬೇಸರ ತಂದಿದೆ ಎಂದು ಹೇಳಿದರು.
“ನನ್ನ ಹತ್ತಿರದ ಕ್ಷೇತ್ರಗಳ ಮಾಜಿ ಶಾಸಕರನ್ನು ಗೌರವದಿಂದ ಕಾಣಲಾಗುತ್ತದೆ. ನನಗೆ ವಿಶೇಷ ಗೌರವ ಬೇಡ. ಕನಿಷ್ಠ ಬಹುವಚನದಲ್ಲಿ ಮಾತನಾಡಿದ್ದರೂ ಸಾಕಿತ್ತು. ಈ ಎಲ್ಲ ಘಟನೆಗಳು ಮಾನಸಿಕವಾಗಿ ನೋವುಂಟುಮಾಡಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ಕ್ಷೇತ್ರದ ಜನರು ನನ್ನನ್ನು ಸೋಲಿಸಿಲ್ಲ. ಪಕ್ಷವೇ ನನಗೆ ಟಿಕೆಟ್ ತಪ್ಪಿಸಿದೆ ಎಂಬ ಭಾವನೆ ಜನರಲ್ಲಿದೆ. ಜನರು ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಜನರು ಬೇಡ, ನೀವು ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದರೆ ಮನೆಯಲ್ಲೇ ಕುಳಿತುಕೊಳ್ಳುತ್ತೇನೆ. ಜನರ ಕೆಲಸ ಮಾಡಲು ಜನಪ್ರತಿನಿಧಿಯಾಗಲೇಬೇಕೆಂದಿಲ್ಲ. ಚುನಾವಣಾ ರಾಜಕೀಯದಿಂದ ದೂರವಿದ್ದರೂ ಜನರಿಗೆ ಸಹಾಯ ಮಾಡಬಹುದು ಎಂದು ರಘುಪತಿ ಭಟ್ ಹೇಳಿದರು
ಬಿಗ್ ನ್ಯೂಸ್
Puttur-ಪುತ್ತೂರಿನಲ್ಲಿ ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಘಟಕ ಸ್ಥಾಪನೆಗೆ ಹಕ್ಕೊತ್ತಾಯ; 1 ಲಕ್ಷ ಸಹಿ ಸಂಗ್ರಹದ ಗುರಿ; ಸೇಡಿಯಾಪು, ಆರ್ಯಾಪುವಿನಲ್ಲಿ ಜಮೀನು ಗುರುತು
ಹೃದಯ, ಕ್ಯಾನ್ಸರ್ ಹಾಗೂ ನರಸಂಬಂಧಿ ಕಾಯಿಲೆಗಳಿಗೆ ಒಂದೇ ಆವರಣದಲ್ಲಿ ಉನ್ನತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಪುತ್ತೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ ಹಾಗೂ ನಿಮ್ಹಾನ್ಸ್‌ನ ಘಟಕಗಳನ್ನು ಸ್ಥಾಪಿಸಲು ಜನಾಂದೋಲನ ಆರಂಭವಾಗಿದೆ. ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯು ಒಂದು ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಿದ್ದು, ಈಗಾಗಲೇ 20 ಸಾವಿರ ಸಹಿಗಳನ್ನು ಸಂಗ್ರಹಿಸಿದೆ.
ಪುತ್ತೂರು: ಹೃದಯ, ಕ್ಯಾನ್ಸರ್ ಹಾಗೂ ನರಸಂಬಂಧಿ ಕಾಯಿಲೆಗಳಿಗೆ ಒಂದೇ ಆವರಣದಲ್ಲಿ ಉನ್ನತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಪುತ್ತೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ ಹಾಗೂ ನಿಮ್ಹಾನ್ಸ್‌ನ ಘಟಕಗಳನ್ನು ಸ್ಥಾಪಿಸಲು ಜನಾಂದೋಲನ ಆರಂಭವಾಗಿದೆ. ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯು ಒಂದು ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಿದ್ದು, ಈಗಾಗಲೇ 20 ಸಾವಿರ ಸಹಿಗಳನ್ನು ಸಂಗ್ರಹಿಸಿದೆ.
ಪುತ್ತೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಜತೆಗೆ ಮೂರು ಪ್ರಮುಖ ಸರ್ಕಾರಿ ಆಸ್ಪತ್ರೆಗಳ ಘಟಕಗಳನ್ನೂ ಸ್ಥಾಪಿಸುವ ಮೂಲಕ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸಬೇಕು ಎಂಬುದು ಸಮಿತಿಯ ಆಶಯವಾಗಿದೆ.
ಈ ಕುರಿತು ಸೋಮವಾರ ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅಭಿಯಾನದ ಉದ್ದೇಶ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಚರ್ಚಿಸಲಾಯಿತು.
120 ಎಕರೆ ಸರ್ಕಾರಿ ಜಮೀನಿನತ್ತ ಗಮನ
ಆಸ್ಪತ್ರೆಗಳ ಘಟಕಗಳ ಸ್ಥಾಪನೆಗೆ ಅಗತ್ಯವಿರುವ ಜಮೀನು ಗುರುತಿಸುವ ಪ್ರಕ್ರಿಯೆಗೆ ಸಮಿತಿ ಆದ್ಯತೆ ನೀಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿರುವ ಸೇಡಿಯಾಪು ಪ್ರದೇಶದ ಸಮೀಪ ಸುಮಾರು 120 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು, ಆರ್ಯಾಪು ಗ್ರಾಮದಲ್ಲಿಯೂ ಸುಮಾರು 88 ಎಕರೆ ಜಾಗ ಗುರುತಿಸಲಾಗಿದೆ. ಸೂಕ್ತ ಸ್ಥಳ ಆಯ್ಕೆ ಮಾಡಿ ಆಸ್ಪತ್ರೆಗಳ ಘಟಕಗಳಿಗೆ ಜಮೀನು ಮೀಸಲಿಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಸಮಿತಿಯ ಸಂಚಾಲಕ ಅಮಳ ರಾಮಚಂದ್ರ ತಿಳಿಸಿದ್ದಾರೆ.
ಸಮನ್ವಯದ ಚಿಕಿತ್ಸೆಗೆ ಅವಕಾಶ
ಅಮೆರಿಕದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಸಾಮೆತ್ತಡ್ಕದ ಡಾ. ಸಂದೀಪ್ ನಾಯಕ್ ಮಾತನಾಡಿ, ‘ಒಂದೇ ಆವರಣದಲ್ಲಿ ಹಲವು ಸಂಸ್ಥೆಗಳು, ಸಮನ್ವಯದ ಚಿಕಿತ್ಸೆ’ ಎಂಬ ಪರಿಕಲ್ಪನೆಯೊಂದಿಗೆ ಅಭಿಯಾನ ರೂಪಿಸಲಾಗಿದೆ ಎಂದರು.
ಹೃದಯ, ಕ್ಯಾನ್ಸರ್ ಹಾಗೂ ನರಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ತಜ್ಞರು ಸಮನ್ವಯದಿಂದ ಕಾರ್ಯನಿರ್ವಹಿಸಲು ಇಂತಹ ವ್ಯವಸ್ಥೆ ನೆರವಾಗಲಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ದೂರದ ನಗರಗಳಿಗೆ ಕರೆದೊಯ್ಯುವ ಅಗತ್ಯವೂ ಕಡಿಮೆಯಾಗಬಹುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಣತಿ ಗಳಿಸಲು ಅವಕಾಶ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ವೈದ್ಯಕೀಯ ಕಾಲೇಜಿನೊಂದಿಗೆ ಸಂಶೋಧನಾ ಕೇಂದ್ರ, ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ವೃದ್ಧಾಪ್ಯ ಆರೈಕೆ ಕೇಂದ್ರಗಳನ್ನೂ ಸ್ಥಾಪಿಸಬೇಕು. ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಒಂದು ಸೀಟು ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರಿ ಸ್ವಾಮ್ಯಕ್ಕೆ ಒತ್ತು
ವೈದ್ಯಕೀಯ ಕಾಲೇಜು ಸಂಪೂರ್ಣ ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರಿಯಬೇಕು. ಅಗತ್ಯ ಅನುದಾನ, ವೈದ್ಯಕೀಯ ಸೌಲಭ್ಯ ಹಾಗೂ ಸಿಬ್ಬಂದಿ ನೇಮಕಾತಿಯನ್ನು ಸರ್ಕಾರ ಖಚಿತಪಡಿಸಬೇಕು. ಹೋರಾಟ ರಾಜಕೀಯೇತರ ಮತ್ತು ಜಾತ್ಯತೀತ ನೆಲೆಯಲ್ಲಿ ಮುಂದುವರಿಯಬೇಕು ಎಂಬುದು ಸಮಿತಿಯ ನಿಲುವಾಗಿದೆ.
ಹಿರಿಯ ವೈದ್ಯಕೀಯ ಕಾಲೇಜು ಹೋರಾಟಗಾರ ದಿನೇಶ್ ಭಟ್ ಕೆ. ಮಾತನಾಡಿ, ಪುತ್ತೂರಿನಲ್ಲಿ ಉನ್ನತ ಆರೋಗ್ಯ ಸೇವೆಗಳ ಅಭಿವೃದ್ಧಿ ಅಗತ್ಯ ಎಂದರು. ಸುಳ್ಯ, ವಿಟ್ಲ, ಬಂಟ್ವಾಳ, ಬೆಳ್ತಂಗಡಿ ಹಾಗೂ ಕಡಬ ಭಾಗದ ಜನರಿಗೂ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂಬುದು ಸಮಿತಿಯ ಆಶಯವಾಗಿದೆ.
ಸಭೆಯಲ್ಲಿ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ, ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿಸೋಜ, ಉಪಾಧ್ಯಕ್ಷ ವಿಶ್ವಪ್ರಸಾದ್ ಸೇಡಿಯಾಪು ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
-
ನಿಧನ ವಾರ್ತೆ14 hours agoSullia-Big Breaking: ಸುಳ್ಯ: ವಿದ್ಯುತ್ ಶಾಕ್ಗೆ ಇಬ್ಬರು ಯುವಕರು ಬಲಿ; ಬಾಲಕನಿಗೆ ಗಾಯ
-
ನಿಧನ ವಾರ್ತೆ9 hours agoKalmadka-ಸುಳ್ಯ ಕಲ್ಮಡ್ಕದಲ್ಲಿ ದುರಂತ: ವಿದ್ಯುತ್ ಸ್ಪರ್ಶಿಸಿ ಮೀನು ಹಿಡಿಯಲು ಹೋದ ಬಾವ–ಬಾಮೈದ ಸಾವು
-
ಸ್ಥಳೀಯ13 hours agoArrested-1,000 ಅಡಿ ಆಳದ ಪ್ರಪಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶವ ಪತ್ತೆ; ಆತ್ಮಹತ್ಯೆ ಕತೆ ಕಟ್ಟಿದ ಪ್ರಿಯಕರ ಅರೆಸ್ಟ್..!
-
ಮಂಗಳೂರು12 hours agoSoujanya Case-BIG BREAKING NEWS: ಸೌಜನ್ಯ ಪ್ರಕರಣ: ಮಂಗಳೂರಿನಲ್ಲಿ ಎಸ್ಐಟಿ ಮಹತ್ವದ ಸಭೆ; ಸೌಜನ್ಯ ದೇಹ ಸಿಕ್ಕ ಸ್ಥಳಕ್ಕೆ ಭೇಟಿ ಸಾಧ್ಯತೆ
-
ಸ್ಥಳೀಯ14 hours agoSatish Patri-ಚಿಕ್ಕಮಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಆರೋಪ; ತಲೆಮರೆಸಿಕೊಂಡಿದ್ದ ಅರ್ಚಕ ಸತೀಶ್ ಪಾತ್ರಿ ಅರೆಸ್ಟ್..!
-
ಬಿಗ್ ನ್ಯೂಸ್9 hours agoVitla-ವಿಟ್ಲ: ಕಾರು–ಆಕ್ಟಿವಾ ಡಿಕ್ಕಿ; ಸವಾರನಿಗೆ ಗಂಭೀರ ಗಾಯ
-
Uncategorized7 hours agoLawyer Amrutesh-ಸೌಜನ್ಯ ಪ್ರಕರಣ ಮರುತನಿಖೆ : ಸಂತೋಷ್ ರಾವ್ ವಿರುದ್ಧ ಬಲವಾದ ಸಾಕ್ಷ್ಯಗಳಿವೆ: ಧಾರ್ಮಿಕ ಕ್ಷೇತ್ರದ ಮೇಲೆ ಷಡ್ಯಂತ್ರ ನಡೆಯುತ್ತಿದೆ : ಹೈಕೋರ್ಟ್ ವಕೀಲ ಅಮೃತೇಶ್
-
ಶಿಕ್ಷಣ8 hours agoVivekananda-ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ಉಪನ್ಯಾಸಕರಿಗೆ ಡಾಕ್ಟರೇಟ್ ಪದವಿ


















