Uncategorized
ಸಂಘ ಪರಿವಾರದ ಷಡ್ಯಂತ್ರಕ್ಕೆ ಪ್ರಚೋದನೆ ಒಳಗಾಗದೆ ಪ್ರಬುದ್ಧತೆ ಮೆರೆದ ಜಿಲ್ಲೆಯ ಮುಸಲ್ಮಾನರು :ಎಚ್ ಮಹಮ್ಮದ್ ಅಲಿ
ಪುತ್ತೂರು : ಪುತ್ತೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಸಭೆ ನ.20ರಂದು ನಡೆಯಿತು.
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಮಾತನಾಡಿ ,ದೇಶದ ಸ್ವತಂತ್ರ ಹೋರಾಟದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಬಹುದೊಡ್ಡ ಕೊಡುಗೆ ಇದೆ,ಇದೀಗ ಕೋಮು ಶಕ್ತಿಗಳು ಲವ್ ಜಿಹಾದ್, ಗೋ ಹತ್ಯೆ ಎಜೆಂಡ ಇಟ್ಟು ಕೊಂಡು ಮುಸಲ್ಮಾನರನ್ನು ಗುರಿಯಾಗಿಸಿದೆ,
ಮತಾಂತರ ಎಂಬ ವಿಷಯ ಇಟ್ಟುಕೊಂಡು ಕ್ರೈಸ್ತರನ್ನು ಗುರಿಯಾಗಿಸಿದೆ,
ಇದೀಗ ಚುನಾವಣೆ ಹತ್ತಿರ ಬರುತ್ತಿದ್ದು,ಸಂಘ ಪರಿವಾರದ ಸಂಘಟಣೆಯವರು ಅಲ್ಲಲ್ಲಿ ಸಮಾವೇಶ ನಡೆಸಿ ಭಾಷಣದಲ್ಲಿ ಮುಸ್ಲಿಂ ರನ್ನು ಹೀನಾಯವಾಗಿ ಬೈದು, ಮುಸ್ಲಿಂ ಸಮುದಾಯದವರನ್ನು ಕೆರಳಿಸುವ ಕೆಲಸ ಮಾಡುತ್ತಿದೆ, ಮುಸಲ್ಮಾನರು ಕೆರಳಿದರೆ ಇದರಿಂದ ಬಿಜೆಪಿಗೆ ಲಾಭವಾಗಲಿ ಎಂಬ ದುರುದ್ದೇಶದಿಂದ ಇಂತಹ ಸಮಾವೇಶಗಳನ್ನು ನಡೆಸಲಾಗುತ್ತಿದೆ, ಆದರೆ ಸಂಘ ಪರಿವಾರದ ಈ ಷಡ್ಯಂತ್ರಕ್ಕೆ ಬಲಿ ಬೀಳದೆ, ಪ್ರಚೋದನೆಗೆ ಒಳಗಾಗದೆ ಜಿಲ್ಲೆಯ ಮುಸ್ಲಿಂ ಸಮುದಾಯವು ಬಹಳ ಪ್ರಬುದ್ಧತೆಯಿಂದ ಮೆರೆದಿದೆ ಎಂದು ಹೇಳಿದರು
ಮುಸಲ್ಮಾನರು ಎಲ್ಲಾ ಧರ್ಮದವರನ್ನು ಗೌರವಿಸುವ ಜಾತ್ಯತೀತ ಚೌಕಟ್ಟಿನಲ್ಲಿಹಿಂದೂ ಸಮಾಜದ ಬಂದುಗಳೊಂದಿಗೆ ವ್ಯಾಪಾರ ವ್ಯವಹಾರದೊಂದಿಗೆ ಜೀವಿಸುವವರಾಗಿರುತ್ತಾರೆ , ಆದರೆ ನಮ್ಮ ಯುವಕರು ಕೋಮುವಾದಿ ಸಂಘಟಣೆಗಳಿಗೆ ಬಲಿ ಬೀಳದಂತೆ ನೋಡಿ ಕೊಳ್ಳುವ ಜವಾಬ್ದಾರಿ ಸಮುದಾಯದ ಹಿರಿಯ ಮೇಲಿದೆ ಎಂದು ಹೇಳಿದರು. ಇದೀಗ ಕೆಲವರು ಕಾಂಗ್ರೆಸ್ ಪಕ್ಷ ಸಮುದಾಯಕ್ಕೆ ಏನೂ ಮಾಡಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ, ಕಾಂಗ್ರೆಸ್ ಆಡಳಿತ ಯಾವತ್ತೂ ದೇಶದ ಮುಸಲ್ಮಾನರ ದೇಶ ನಿಷ್ಠೆಯನ್ನು ಹಾಗೂ ಅವರ ಪೌರತ್ವವನ್ನು ಪ್ರಶ್ನೆ ಮಾಡಿದ್ದಿಲ್ಲ ಎಂದು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಮಾಡುವವರು ಅರಿತು ಕೊಳ್ಳಲಿ ಎಂದು ಹೇಳಿದರು
ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿ ಅಲ್ಪ ಸಂಖ್ಯಾತ ಸಮುದಾಯದವರು ಸಂಘಟಿತರಾಗಿ ತಮಗಾಗುವ ಅನ್ಯಾಯದ ವಿರುದ್ದ ಪುಟಿದೇಳುವ ಕೆಲಸ ಮಾಡಬೇಕು, ಒಂದು ರಾಜಕೀಯ ಪಕ್ಷವಾಗಿ ಎಲ್ಲಾ ಜಾತಿ ಧರ್ಮದವರ ಹಿತ ಕಾಪಾಡುವ ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ, ಕಾಂಗ್ರೆಸ್ ಪಕ್ಷದಡಿಯಲ್ಲಿ ಸಂಘಟಿತರಾಗಿ ಎಲ್ಲಾ ಜಾತಿ, ಎಲ್ಲಾ ಧರ್ಮದವರೊಂದಿಗೆ ಅನ್ಯೋನ್ಯತೆ ಯಿಂದ ಇದ್ದು ದೇಶ ಕಟ್ಟುವ ಕೆಲಸ ಮಾಡ ಬೇಕಾಗಿದೆ ಹಾಗೂ ಮುಸಲ್ಮಾನರನ್ನ ಕೋಮುವಾದಿಗಳೆಂದು ಬಿಂಬಿಸುವ ಶಕ್ತಿಗಳ ವಿರುದ್ಧ ಸಮುದಾಯವು ಜಾಗ್ರತರಾಗ ಬೇಕಾಗಿದೆ,
ದೇಶದ ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರ ಜೊತೆ ಕೈಜೋಡಿಸಿ ದೇಶಕ್ಕೆ ದ್ರೋಹ ಎಸಗಿರುವವರ ಎದುರು ನಮ್ಮ ದೇಶ ಭಕ್ತಿ ಯನ್ನು ಸಾಬೀತು ಪಡಿಸುವ ಅಗತ್ಯಇಲ್ಲ, ದೇಶದ ಅಖಂಡತೆಗೆ ಮತ್ತು ಐಕ್ಯತೆಗೆ ದೇಶದ ಮುಸಲ್ಮಾನರು ಯಾವ ತ್ಯಾಗಕ್ಕೂ ಸಿದ್ದರಿರುವ ಸಮುದಾಯವಾಗಿರುತ್ತದೆ ಎಂದು ಹೇಳಿದರು.
ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಪ್ರದಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿಗಳಾದ ಗ್ರೆಗೊರಿ ಡಿ ಸೋಜಾ ಮಾತನಾಡಿ ಈಗಿನ ಸರಕಾರಿ ವ್ಯವಸ್ಥೆಯಲ್ಲಿ,ಅಲ್ಪ ಸಂಖ್ಯಾತರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ನೋಡುವ ಕೆಲಸವಾಗುತ್ತಿದೆ ಇದರ ವಿರುದ್ಧ ನಾವು ಸಂಘಟಿತರಾಗಿ ಪ್ರತಿಭಟಿಸುವ ಕೆಲಸ ಮಾಡಬೇಕೆಂದರು.
ಘಟಕದ ಪದಾಧಿಕಾರಿಗಳಾದ ಬಿ ಕೆ ಅಬ್ದುಲ್ ರಹಿಮಾನ್ ಕಾವು, ಮನ್ಸೂರ್ ಮೌಲವಿ ಮಾಡ್ನೂರು,ಬಷೀರ್ ಕೌಡಿಚಾರ್,ಇಸ್ಮಾಯಿಲ್ ಗಟ್ಟ ಮನೆ, ಶರೀಫ್ ಕೊಯಿಲ, ಅಬ್ದುಲ್ ಖಾದರ್ ಕಟ್ಟಪುಣಿ, ಹನೀಫ್ ರೆಂಜಲಾಡಿ ಮೊದಲಾದವರು,ಸಭೆಯಲ್ಲಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ಸಭಾ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಘಟಕದ ಅಧ್ಯಕ್ಷರಾದ ವಿ ಎಚ್ ಎ ಶಕೂರ್ ಹಾಜಿ ಮಾತನಾಡಿ ಘಟಕದ ಪದಾಧಿಕಾರಿಗಳು ನೀಡಿರುವ ಸಲಹೆಯಂತೆ ಪ್ರತಿಯೊಂದು ವಲಯದಲ್ಲಿ ಅಲ್ಪ ಸಂಖ್ಯಾತ ಘಟಕದ ರಚನೆಗೆ ಕ್ರಮ ಕೈಗೊಳ್ಳಲಾಗುವುದು,ಅಲ್ಪ ಸಂಖ್ಯಾತರಿಗೆ ಸರಕಾರ ಇಲಾಖೆಯಿಂದ ಸಿಗುವ ಸವಲತ್ತುಗಳ ಮಾಹಿತಿಗಳನ್ನು ನೀಡಲಾಗುವುದು, ಪ್ರತಿ ತಿಂಗಳು ಸಭೆ ನಡೆಸಿ ಪಕ್ಷ ಸಂಘಟಣೆಯ ಕೆಲಸವನ್ನು ಮಾಡಲಾಗುವುದು, ಇದಕ್ಕೆ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಪೂರ್ಣ ಸಹಕಾರ ನೀಡುವಂತೆ ಕೇಳಿಕೊಂಡರು.
ಈ ಸಭೆಯಲ್ಲಿ ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ, ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಅಸ್ಮಾ ಘಟ್ಟಮನೆ, ಕಚೇರಿ ಕಾರ್ಯದರ್ಶಿ ಸಿರಿಲ್ ರೋಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು
ಘಟಕದ ಪ್ರದಾನ ಕಾರ್ಯದರ್ಶಿ ಶರೀಫ್ ಕೊಯಿಲ ಸ್ವಾಗತಿಸಿದರು,ಕಾರ್ಯದರ್ಶಿ ಬಷೀರ್ ಕೌಡಿಚಾರ್ ವಂದಿಸಿದರು ಪ್ರದಾನ ಕಾರ್ಯದರ್ಶಿ ಆಶಿಫ್ ಹಾಜಿ ತಂಬುತಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು
Uncategorized
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ

ಉಳ್ಳಾಲ: ಸೋಮೇಶ್ವರದ ಪೆರಿಬೈಲ್ ಬೀಚ್‌ನಲ್ಲಿ ಸಮುದ್ರಪಾಲಾಗಿದ್ದ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ ಶೋಭಿತ್ ಎಂ. ಗೌಡ (18) ಅವರ ಮೃತದೇಹ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿಯಾಗಿದ್ದ ಶೋಭಿತ್, ಶನಿವಾರ ಸಂಜೆ ಸ್ನೇಹಿತರೊಂದಿಗೆ ಬೀಚ್‌ಗೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ನೀರುಪಾಲಾಗಿದ್ದರು.
ಉಜಿರೆ ಎಸ್‌ಡಿಎಂ ಕಾಲೇಜಿನ ಒಂಬತ್ತು ಮಂದಿ ವಿದ್ಯಾರ್ಥಿಗಳು ಶನಿವಾರ ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸೋಮೇಶ್ವರದ ಪೆರಿಬೈಲ್ ಬೀಚ್‌ಗೆ ತೆರಳಿದ್ದರು. ಈ ವೇಳೆ ಶೋಭಿತ್ ಮತ್ತು ಆಕಾಶ್ ಎಂಬವರು ಸಮುದ್ರಕ್ಕಿಳಿದಿದ್ದು, ಇಬ್ಬರೂ ಅಲೆಗಳ ಸೆಳೆತಕ್ಕೆ ಸಿಲುಕಿದ್ದರು. ಈಜು ತಿಳಿದಿದ್ದ ಆಕಾಶ್ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಶೋಭಿತ್ ನಾಪತ್ತೆಯಾಗಿದ್ದರು.
ವಿದ್ಯಾರ್ಥಿಗಾಗಿ ಶನಿವಾರ ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಎಸ್‌ಡಿಆರ್‌ಎಫ್, ಕರಾವಳಿ ಕಾವಲು ಪಡೆ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಭಾನುವಾರ ಮಧ್ಯಾಹ್ನ ಉಳ್ಳಾಲ ವಲಯದ ನಾಡದೋಣಿ ಹಾಗೂ ಗಿಲ್ನೆಟ್ ಮೀನುಗಾರರ ಸಂಘದ ಪ್ರಮುಖರಾದ ಆಸಿಫ್ ಎಂ.ಬಿ., ನಿಝಾಮ್ ಕೋಟೆಪುರ, ನಝೀರ್ ಕೋಡಿ, ರಝಾಕ್ ಕೋಟೆಪುರ, ಮುಸ್ತಾಫ ಕೋಟೆಪುರ ಮತ್ತು ಇರ್ಫಾನ್ ಕೋಟೆಪುರ ಅವರು ನಾಡದೋಣಿಯಲ್ಲಿ ಶೋಧ ನಡೆಸಿದರು. ಈ ವೇಳೆ ಉಚ್ಚಿಲ ಪೆರಿಬೈಲ್ ಸಮೀಪ ಸಮುದ್ರದಲ್ಲಿ ತೇಲುತ್ತಿದ್ದ ಶೋಭಿತ್ ಅವರ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ನಾಡದೋಣಿಯ ಮೂಲಕ ಕೋಟೆಪುರ ಸಮುದ್ರ ತೀರಕ್ಕೆ ತರಲಾಗಿದ್ದು, ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶೋಭಿತ್ ತನ್ನ ಪೋಷಕರ ಏಕೈಕ ಪುತ್ರನಾಗಿದ್ದ ಎಂದು ತಿಳಿದುಬಂದಿದೆ.
Uncategorized
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್‌ಫುಲ್ |
ಅ. 23ರಂದು ಚಿತ್ರ ಬಿಡುಗಡೆ

ಬಹು ನಿರೀಕ್ಷಿತ ತುಳು ಚಿತ್ರ ‘ಬನ’ ಮುಂಬೈನಲ್ಲಿ ನಡೆದ ಮೊದಲ ಎರಡು ಪ್ರೀಮಿಯರ್ ಪ್ರದರ್ಶನಗಳಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂಬೈನ ಮುಲುಂದ್ ಮತ್ತು ಕಲ್ಯಾಣ್‌ನಲ್ಲಿ ಶನಿವಾರ ನಡೆದ ಪ್ರದರ್ಶನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡೂ ಕಡೆ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡಿದೆ ಎಂದು ಚಿತ್ರತಂಡ ತಿಳಿಸಿದೆ.
ನಾಗನ ಹಿನ್ನೆಲೆಯನ್ನು ಆಧರಿಸಿದ ಮೊದಲ ತುಳು ಚಿತ್ರ ಎಂಬ ವಿಶೇಷತೆಯೊಂದಿಗೆ ಗಮನ ಸೆಳೆದಿರುವ ‘ಬನ’, ತನ್ನ ಕಥೆ ಮತ್ತು ಕಲಾವಿದರ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಕಥಾಹಂದರ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದು, ಯುವ ಕಲಾವಿದರ ಅಭಿನಯದ ಜತೆಗೆ ಹಿರಿಯ ಕಲಾವಿದರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಪ್ರದರ್ಶನದ ಬಳಿಕ ಕೇಳಿಬಂದಿವೆ.
ಚಿತ್ರದಲ್ಲಿ ಯುವ ಕಲಾವಿದರು ಅದ್ಭುತವಾಗಿ ನಟಿಸಿದ್ದು, ಕಥೆಯ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಭಿನ್ನ ಕಥಾವಸ್ತು ಹಾಗೂ ಕಲಾವಿದರ ಸಹಜ ಅಭಿನಯ ಚಿತ್ರಕ್ಕೆ ಮೆರುಗು ನೀಡಿದೆ. ತುಳು ಚಿತ್ರರಂಗದಲ್ಲಿ ನಾಗನ ಹಿನ್ನೆಲೆಯನ್ನು ಆಧರಿಸಿದ ಕಥಾವಸ್ತುವಿನೊಂದಿಗೆ ಮೂಡಿಬಂದಿರುವ ‘ಬನ’, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಮುಂಬೈ ತುಳು ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆ ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ.
ಮುಂಬೈನಲ್ಲಿ ಚಿತ್ರದ ಪ್ರೀಮಿಯರ್ ಪ್ರದರ್ಶನಗಳ ಆಯೋಜನೆಯನ್ನು ಬಾಬಪ್ರಸಾದ್ ಅರಸ ಮತ್ತು ನಾಗಕಿರಣ್ ಶೆಟ್ಟಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಶನಿವಾರ ನಡೆದ ಎರಡೂ ಪ್ರದರ್ಶನಗಳಿಗೆ ಪ್ರೇಕ್ಷಕರ ಉತ್ತಮ ಸ್ಪಂದನೆ ದೊರೆತಿದ್ದು, ಹೌಸ್‌ಫುಲ್ ಪ್ರದರ್ಶನ ಚಿತ್ರತಂಡಕ್ಕೆ ಸಂತಸ ತಂದಿದೆ.
ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ತುಳುವರು ತುಳು ಭಾಷೆ ಮತ್ತು ಚಿತ್ರರಂಗದ ಬೆಳವಣಿಗೆಗೆ ನಿರಂತರ ಬೆಂಬಲ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಬನ’ ಚಿತ್ರಕ್ಕೆ ಮುಂಬೈನಲ್ಲಿ ದೊರೆತಿರುವ ಪ್ರತಿಕ್ರಿಯೆ ಚಿತ್ರ ಬಿಡುಗಡೆಗೂ ಮುನ್ನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಅ. 23ರಂದು ಚಿತ್ರ ಬಿಡುಗಡೆ
‘ಬನ’ ಚಿತ್ರವು ಇದೇ ತಿಂಗಳ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮುಂಬೈನ ಪ್ರೀಮಿಯರ್ ಪ್ರದರ್ಶನಗಳಲ್ಲಿ ದೊರೆತಿರುವ ಮೆಚ್ಚುಗೆ, ಚಿತ್ರದ ಅಧಿಕೃತ ಬಿಡುಗಡೆಗೆ ಮುನ್ನ ಸಕಾರಾತ್ಮಕ ವಾತಾವರಣ ನಿರ್ಮಿಸಿದೆ. ವಿಭಿನ್ನ ಕಥಾಹಂದರ ಮತ್ತು ಕಲಾವಿದರ ಅಭಿನಯದ ಮೂಲಕ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿರುವ ‘ಬನ’ ಚಿತ್ರಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಪ್ರತಿಕ್ರಿಯೆ ದೊರೆಯಲಿದೆ ಎಂಬ ಕುತೂಹಲ ತುಳು ಚಿತ್ರಪ್ರೇಮಿಗಳಲ್ಲಿದೆ.
Uncategorized
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ

ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್ ಹಾಲು (ಲ್ಯಾಟೆಕ್ಸ್) ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ರಬ್ಬರ್ ಶೀಟ್ ದರದಲ್ಲೂ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪೂರೈಕೆ ಕೊರತೆ, ಹವಾಮಾನ ವೈಪರೀತ್ಯ ಹಾಗೂ ಕೈಗಾರಿಕಾ ವಲಯದ ಹೆಚ್ಚಿದ ಬೇಡಿಕೆಯಿಂದ ರಬ್ಬರ್ ಬೆಲೆ ಚೇತರಿಕೆ ಕಂಡಿದ್ದು, ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಆರ್‌ಎಸ್‌ಎಸ್-4 ದರ್ಜೆಯ ರಬ್ಬರ್ ಶೀಟ್ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು ₹281ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳ ಮೊದಲ ವಾರದಲ್ಲಿ ₹272ಕ್ಕೆ ಇಳಿದಿದ್ದ ದರ, ಬಳಿಕ ಹಂತಹಂತವಾಗಿ ಚೇತರಿಸಿಕೊಂಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹295ರ ಅಧಿಕೃತ ದರ ದಾಖಲಾಗಿದ್ದು, ಕೆಲವು ವಹಿವಾಟುಗಳು ₹300ರ ಮಟ್ಟದಲ್ಲೂ ನಡೆದಿವೆ ಎಂದು ರಬ್ಬರ್ ಉತ್ಪಾದಕರ ಸಂಘಗಳು ತಿಳಿಸಿವೆ. ಇದಕ್ಕೂ ಮೊದಲು ಆಗಸ್ಟ್ 4ರಂದು ದಾಖಲಾಗಿದ್ದ ₹298ರ ಗರಿಷ್ಠ ದರವನ್ನು ಪ್ರಸ್ತುತ ಬೆಲೆ ಮೀರಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ರಬ್ಬರ್ ಬೆಲೆ ಏರಿಕೆಯ ಹಾದಿಯಲ್ಲಿದೆ. ಕಳೆದ ತಿಂಗಳ ಮೊದಲ ವಾರದಲ್ಲಿ ಕೆ.ಜಿ.ಗೆ ₹261ಕ್ಕೆ ಇಳಿದಿದ್ದ ಆರ್‌ಎಸ್‌ಎಸ್ ಶೀಟ್ ದರ, ಇದೀಗ ₹275ಕ್ಕೆ ಏರಿಕೆಯಾಗಿದೆ.
ಪೂರೈಕೆ ಕೊರತೆ, ರೋಗಬಾಧೆ ಪರಿಣಾಮ
ಭಾರತ ಸೇರಿದಂತೆ ಪ್ರಮುಖ ರಬ್ಬರ್ ಉತ್ಪಾದಕ ರಾಷ್ಟ್ರಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ರಬ್ಬರ್ ಎಲೆ ಉದುರುವ ರೋಗದ ಬಾಧೆಯಿಂದ ಉತ್ಪಾದನೆ ಕುಸಿದಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಮುಂದುವರಿದಿದ್ದರೂ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಉತ್ಪಾದನೆ ಮತ್ತು ಬೇಡಿಕೆಯ ನಡುವಿನ ಅಂತರವೂ ಬೆಲೆ ಏರಿಕೆಗೆ ಕಾರಣವಾಗಿದೆ.
ಕೃತಕ ರಬ್ಬರ್ ಉತ್ಪಾದನಾ ವೆಚ್ಚ ಹೆಚ್ಚಳ
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಹಾಗೂ ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತಗಳು ಕೃತಕ ರಬ್ಬರ್ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿವೆ. ಕೃತಕ ರಬ್ಬರ್ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕೆಗಳು ನೈಸರ್ಗಿಕ ರಬ್ಬರ್ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ವಾಹನ ಮತ್ತು ಟಯರ್ ತಯಾರಿಕಾ ವಲಯದಿಂದಲೂ ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಮತ್ತಷ್ಟು ಬಲ ನೀಡಿದೆ.
ಆದರೆ ಕಚ್ಚಾ ರಬ್ಬರ್ ಬೆಲೆ ಏರಿಕೆಯಿಂದ ರಬ್ಬರ್ ಆಧಾರಿತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪಾದನಾ ವೆಚ್ಚವೂ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಟಯರ್, ವೈದ್ಯಕೀಯ ಕೈಗವಸು ಹಾಗೂ ಕ್ರೀಡಾ ಪರಿಕರಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಉದ್ಯಮ ವಲಯದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ವಿವಿಧ ದರ್ಜೆಯ ರಬ್ಬರ್ ದರ (ಪ್ರತಿ ಕೆ.ಜಿ.ಗೆ)
| ರಬ್ಬರ್ ದರ್ಜೆ | ದೇಶೀಯ ಮಾರುಕಟ್ಟೆ | ಅಂತರರಾಷ್ಟ್ರೀಯ ಮಾರುಕಟ್ಟೆ |
| ಆರ್‌ಎಸ್‌ಎಸ್-4 | ₹282 | ₹275 |
| ಆರ್‌ಎಸ್‌ಎಸ್-5 | ₹277 | ₹271 |
| ಲ್ಯಾಟೆಕ್ಸ್ (ಶೇ. 60 ಒಣ ರಬ್ಬರ್) | ₹203 | ₹184 |
-
Uncategorized8 hours ago
ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ!
-
Uncategorized7 hours ago
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ
-
Uncategorized5 hours ago
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ
-
Uncategorized9 hours ago
ಪುತ್ತೂರು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ
-
Uncategorized7 hours ago
ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ
-
Uncategorized6 hours ago
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್‌ಫುಲ್ |


















