Connect with us

ಅಪರಾಧ

Kerala Human Sacrifice Killings : ದೇವರ ನಾಡು ಕೇರಳದಲ್ಲಿ ಬೆಚ್ಚಿ ಬೀಳಿಸುವ ರಾಕ್ಷಸಿ ಕೃತ್ಯ…! ಸುಖ ಸಂಪತ್ತು ಹಾಗೂ ಯೌವ್ವನದ ಸಿದ್ದಿಗಾಗಿ ವಾಮಚಾರ – ಇಬ್ಬರು ಮಹಿಳೆಯರ ಹತ್ಯೆಗೈದು ನರ ಮಾಂಸ ಭಕ್ಷಣೆ | ‘ನರಬಲಿʼ ಗೈದ ನಕಲಿ ಮಾಂತ್ರಿಕ ಹಾಗೂ ದಂಪತಿ ಬಂಧನ

Published

on



Ad Widget

Ad Widget

Ad Widget

Ad Widget

ಕೊಚ್ಚಿ : ದೇಶದಲ್ಲಿಯೇ ಅತಿ ಹೆಚ್ಚು ಸಾಕ್ಷರರಿರುವ ರಾಜ್ಯ ಎಂಬ ಕೀರ್ತಿಗೆ, ದೇವರ ನಾಡು ಎಂಬ ಅಭಿದಾನಕ್ಕೆ ಹಾಗು ಹೆಚ್ಚು ಸುಸಂಸ್ಕೃತ ನಾಗರೀಕ ಸಮಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೇರಳದ ಗೌರವಕ್ಕೆ ಕಪ್ಪು ಚುಕ್ಕೆ ಮೂಡಿಸಿದ ಘಟನೆಯೊಂದು ಅಲ್ಲಿನ ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾದಲ್ಲಿ ಅ 11 ರಂದು  ಬೆಳಕಿಗೆ ಬಂದಿದೆ. ನಕಲಿ ಮಂತ್ರವಾದಿ ನಡೆಸಿದ  ವಾಮಚಾರದ ವೇಳೆ ಇಬ್ಬರು ಅಮಾಯಕ ಮಹಿಳೆಯರ ಶಿರಚ್ಛೇದಿಸಿ,  ದೇಹ ಛಿದ್ರಗೊಳಿಸಿ ‘ನರಬಲಿʼ (Kerala Human Sacrifice Killings) ನೀಡಿ, ಮೃತ ಶರೀರವನ್ನು ಭಕ್ಷಿಸಿದ (Ate Flesh For Preserve Youth) ಘಟನೆಯೊಂದು ನಡೆದಿದ್ದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. 21 ನೇ ಶತಮಾನದಲ್ಲೂ ಮೂಢನಂಬಿಕೆ ಮನುಷ್ಯನನ್ನು ಈ ರೀತಿಯ ಬೀಭತ್ಸ ಕೃತ್ಯಗಳಿಗೆ ಪ್ರೇರೆಪಿಸಿದ್ದು ಸಾರ್ವಜನಿಕ ವಲಯವನ್ನು ಬೆಚ್ಚಿಬೀಳಿಸಿದೆ.

Ad Widget

Ad Widget

Ad Widget

Ad Widget

ಕೇರಳ ರಾಜ್ಯದ  ಕಾಲಡಿ ನಿವಾಸಿ ರೋಸ್ಲಿನ್(52) ಹಾಗೂ ಕಡವಂತರ ಪೊನ್ನುರುನ್ನಿ ನಿವಾಸಿ ತಮಿಳುನಾಡು ಮೂಲದ ಪದ್ಮಾ(49) ಹತ್ಯೆಯಾದವರು. ಇವರಿಬ್ಬರು ಲಾಟರಿ ಮಾರಿ ಜೀವನ ನಡೆಸುತ್ತಿದ್ದ ಬಡ ಮಹಿಳೆಯರು.ಇವರನ್ನು ಇಳಂತೂರಿನ ನಾಟಿ  ವೈದ್ಯ ದಂಪತಿಗಳಾದ ಭಗಲ್ ಸಿಂಗ್ (68) ಮತ್ತು‌ ಆತನ ಪತ್ನಿ ಲೈಲಾ (59)  ತಮ್ಮ ಅರ್ಥಿಕ  ಶ್ರೇಯೋಭಿವೃದ್ದಿಗಾಗಿ ಹಾಗು ಯೌವನ ಮರಳಿ ಪಡೆಯುವ ಉದ್ದೇಶದಿಂದ ಇನ್ನೊಬ್ಬ ಆರೋಪಿ ಜತೆ ಸೇರಿ ಅವರು ನರಬಲಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ .

Ad Widget

Ad Widget

Ad Widget alt="Ad Widget"/>

Ad Widget

 ಪೆರುಂಬಾವೂರು ನಿವಾಸಿ  ಶಿಹಾಬ್ ಅಲಿಯಾಸ್ ರಶೀದ್ ಅಲಿಯಾಸ್ ಮಹಮ್ಮದ್ ಶಾಫಿ ಪ್ರಕರಣದ ಎ 1 ಆರೋಪಿ ಹಾಗೂ  ನಕಲಿ ಮಾಂತ್ರಿಕ . ಈ ಶಿಹಾಬ್‌ ಎಂಬಾತ ಭಗವಂತ್ ಹಾಗೂ ಲೈಲಾ ಅವರನ್ನು ವಾಮಚಾರಕ್ಕೆ ಪ್ರೇರೆಪಿಸಿದಾತ, ನರ ಬಲಿ ನೀಡಿದ್ದಲ್ಲಿ ಸಂಪತ್ತು ಮತ್ತು ಐಶ್ವರ್ಯ ವೃದ್ದಿಸುವುದಾಗಿ ನಂಬಿಸಿ ಅದಕ್ಕಾಗಿ  ಅವರಿಂದ ಹಣ ಪಡೆದು ಅಮಾಯಕ ಮಹಿಳೆಯರ ಹತ್ಯೆಗೆ ಕಾರಣವಾಗಿದ್ದಾನೆ.  ಶಿಹಾಬ್‌ , ಭಗಲ್ ಸಿಂಗ್ ಹಾಗೂ ಲೈಲಾ  ಕೃತ್ಯ ಎಸಗಿದ ಈ ಮೂವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದು ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಅವರಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Ad Widget

Ad Widget <> Ad Widget

ಆರೋಪಿ ಭಗವಂತ್‌ ತಂದೆ ಇಳಂತೂರಿನ ಪ್ರಖ್ಯಾತ ಪಾರಂಪರಿಕ ನಾಟಿ ವೈದ್ಯ. ಅವರು ಮೈ ಕೈ ಇತ್ಯಾದಿ ದೈಹಿಕ  ನೋವುಗಳಿಗೆ  ಎಣ್ಣೆ ಹಾಗು  ಮಸಾಜು ಮಾಡುವ ಮೂಲಕ  ನೋವು ನಿವಾರಿಸುವ ನಾಟಿ ಪಂಡಿತ. ತಂದೆಯಂತೆ ಮಗನೂ ಕೂಡ ನಾಟಿ ವೈದ್ಯ ವೃತ್ತಿಯನ್ನೆ ನಡೆಸುತ್ತಿದ್ದ. ಅಲ್ಲದೇ ಆತ ಸಿಪಿಎಂ ಬ್ರಾಂಚ್ ಸಮಿತಿ ಸದಸ್ಯ ಕೂಡಾಗಿದ್ದು ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯನಾಗಿದ್ದ.



Ad Widget
ಸೂತ್ರಧಾರಿ : ಶಾಫಿ

Gold Rate Today : ಗೋಲ್ಡ್ ಖರೀದಿಸ ಬಯಸುವವರಿಗೆ ಸಂತಸದ ಸುದ್ದಿ – ರೇಟ್ ನಲ್ಲಿ ಮತ್ತಷ್ಟೂ ಇಳಿಕೆ : ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಇಲ್ಲಿ ತಿಳಿಯಿರಿ

Ad Widget

Ad Widget

ಏನಿದು ಪ್ರಕರಣ ?

ನಕಲಿ ಮಾಂತ್ರಿಕ ಶಾಫಿಯು ಶ್ರೀ ದೇವಿ ಎಂಬ ನಕಲಿ  ಹೆಸರಿನಲ್ಲಿ ಫೇಸ್‌ ಬುಕ್‌ ನಲ್ಲಿ ಖಾತೆ ತೆರೆದು,  ಮೆಸೇಂಜರ್‌ ಮೂಲಕ  ತಿರುವಲ್ಲಾದ ನಾಟಿ  ವೈದ್ಯ ದಂಪತಿಯನ್ನು  ಸಂಪರ್ಕಿಸಿ‌ದ್ದಾನೆ. ಇದೆ ರೀತಿ ಆತ ಹಲವರನ್ನು ಸಂಪರ್ಕಿಸಿದ್ದು ಅದರಲ್ಲಿ ಈ ದಂಪತಿ ಈತನ ಬಲೆಗೆ ಬಿದ್ದಿದ್ದಾರೆ.  ಕೆಲ ಸಮಯದ ಬಳಿಕ ಆ ವೈದ್ಯ ದಂಪತಿ ಜತೆ ಈತನಿಗೆ ಆತ್ಮೀಯತೆ ಬೆಳೆದಿದೆ. ಈ ಸಂದರ್ಭ ಅವರು ತಮ್ಮ ಅರ್ಥಿಕ  ಹಾಗೂ ಆರೋಗ್ಯ ಸಮಸ್ಯೆಗಳನ್ನು ಶಾಫಿ ಮುಂದೆ ಹೇಳಿಕೊಂಡಿದ್ದಾರೆ. ಈ ವೇಳೆ ಆತ ಪೆರುಂಬವೂರು ನಿವಾಸಿಯಾದ ಸಂತ ಶಾಫಿಯನ್ನು  (ತನ್ನನ್ನು) ಸಂತುಷ್ಟಗೊಳಿಸಿದರೆ ಜೀವನದಲ್ಲಿ ಹೆಚ್ಚಿನ ಏಳಿಗೆ, ಸುಖ ಸಂಪತ್ತು  ಪಡೆಯಬಹುದೆಂದು  ಅವರನ್ನು ನಂಬಿಸಿದ್ದಾನೆ.

ಮೂರನೇ ಆರೋಪಿ ಲೈಲಾ

 ಆ ಬಳಿಕ ವೈದ್ಯ ದಂಪತಿಗಳು  ಶಾಫಿಯನ್ನು  ಬೇಟಿಯಾಗಿದ್ದಾರೆ.  ಈ ವೇಳೆ ಅವರ ಪರವಾಗಿ ಹಲವಾರು ಪೂಜೆಗಳನ್ನು,  ಮಾಡಿದ್ದಾನೆ. ಹಾಗೂ ಇದಕ್ಕಾಗಿ ಅವರಿಂದ ಲಕ್ಷಾಂತರ ರೂಪಾಯಿ ಪೀಕಿಸಿದ್ದಾನೆ. ಮಹಿಳೆಯ ನರ ಬಲಿ ನೀಡಿದರೆ ಕಷ್ಟವೆಲ್ಲಾ ನೀಗಿ ಅವರಿಗೆ ಸುಖ ಸಂತೃಪ್ತಿ ಪ್ರಾಪ್ತಿಯಾಗುವುದಾಗಿ ಶಾಪಿಯು  ನಾಟಿ ವೈದ್ಯ ದಂಪತಿಗಳನ್ನು ಕಳೆದ ಮೇ ತಿಂಗಳಿನಲ್ಲಿ ನಂಬಿಸಿದ್ದಾನೆ. ಅಲ್ಲದೇ ನರ ಬಲಿಗೆ ಮಹಿಳೆಯನ್ನು ತಾನೇ ತರುವುದಾಗಿಯೂ ಅವರನ್ನು ಒಪ್ಪಿಸಿದ್ದಾನೆ.

ಬಳಿಕ ಕಾಲಡಿ ನಿವಾಸಿ ರೋಸ್ಲಿನ್ ಎಂಬವರನ್ನು ಸಂಪರ್ಕಿಸಿದ ಶಾಫಿ ಆಕೆಗೆ ನೀಲಿ ಚಿತ್ರದಲ್ಲಿ ನಟಿಸಲು 10 ಲಕ್ಷ ಆಮೀಷವೊಡ್ಡಿ ಇಳಂತೂರಿನ ನಾಟಿ ವೈದ್ಯನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಮೂವರು ಆರೋಪಿಗಳು ಸೇರಿ ಆ ಮಹಿಳೆಯ ಶಿರ ಛೇಧಿಸಿ, ದೇಹವನ್ನು 50 ಕ್ಕೂ ಅಧಿಕ ತುಂಡುಗಳನ್ನಾಗಿ ಕತ್ತರಿಸಿದ್ದಾರೆ. ರೋಸ್ಲಿನ್ ನಾಪತ್ತೆಯಾಗಿರುವ ಬಗ್ಗೆ ಆಕೆಯ ಮಗಳು ಜೂ 6 ರಂದು ಪೊಲೀಸರಿಗೆ ದೂರು ನೀಡಿದರು. ಆದರೆ ಬೇರೆ ಬೇರೆ ಸ್ಥಳಗಳಲ್ಲಿ ತಂಗುವ ಅಭ್ಯಾಸವಿದ್ದ ರೋಸ್ಲಿನ್ ನನ್ನು  ಪತ್ತೆ ಹಚ್ಚಲು ಪೊಲೀಸರಿಗೆ  ಸಾಧ್ಯವಾಗಿರಲಿಲ್ಲ. ಈ ಮಹಿಳೆಯನ್ನು ಕರೆದುಕೊಂಡು ಬರಲು ಶಾಫಿ ನಾಟಿ ವೈದನ ಬಳಿಯಿಂದ ಒಂದೂವರೆ ಲಕ್ಷ  ಹಣ ಪಡೆದಿದ್ದ.

ಕೊಲೆಯಾದ ರೊಸ್ಲಿನ್‌

Crop Insurance : ರೈತರ ಖಾತೆಗೆ ಜಮೆಯಾಗುತ್ತಿದೆ ಬೆಳೆ ವಿಮೆ ಪರಿಹಾರ – ಈ ಬಾರಿ ಪಾವತಿಯಾಗುತ್ತಿರುವ ಮೊತ್ತ ಎಷ್ಟು ಗೊತ್ತೆ?

 ನರ ಬಲಿ ನೀಡಿದ ಎರಡು ತಿಂಗಳ ಬಳಿಕವು ತಮ್ಮ ಪರಿಸ್ಥಿತಿಯಲ್ಲಿ ಸುಧಾರಣೆ ಆಗದಿದ್ದಾಗ ಆ ದಂಪತಿ ಮತ್ತೆ ಶಾಫಿಯನ್ನು ಸಂಪರ್ಕಿಸಿದ್ದು ಈ ವೇಳೆ ಹಿಂದಿನ ಪೂಜೆಯ ವೇಳೆ ಲೋಪವಾಗಿದೆಯೆಂದು ಇನ್ನೊಂದು ಮಹಿಳೆಯ ಬಲಿ ಕೊಟ್ಟರೇ ಸರಿಯಾಗುವುದಾಗಿಯೂ ತಿಳಿಸಿದ್ದಾನೆ . ಅದರಂತೆ ಇನ್ನೊಂದು ನರ ಬಲಿಗೆ ನಾಟಿ ವೈದ್ಯ ದಂಪತಿ ಸಮ್ಮತಿ ಸೂಚಿಸಿದ್ದಾರೆ. ಆ ಬಳಿಕ ಕಡವಂತರ ಪೊನ್ನುರುನ್ನಿ ನಿವಾಸಿ ಪದ್ಮಾ ಎಂಬಾಕೆಯನ್ನು  ಸಂಪರ್ಕಿಸಿ ಆಕೆಯ ಬಳಿಯೂ ಬ್ಲೂ ಫಿಲಂ ಚಿತ್ರಿಕರಣದ ಕಥೆ ಹೇಳಿ 10 ಲ ರೂ ನೀಡುವ ಆಮೀಷವೊಡ್ಡಿದ್ದಾನೆ. ಬಳಿಕ ಆಕೆಯನ್ನು ಭಗಲ್ ಸಿಂಗ್ ಸಿಂಗ್‌ ಮನೆಗೆ ಕರೆ ತಂದು ನರ ಬಲಿ ನೀಡಲಾಗಿದೆ.

ಕೊಲೆಯಾದ ಪಧ್ಮಾ

ನರ ಬಲಿ ಬಳಿಕ ಮಾಂಸ ಭಕ್ಷಣೆ   

 ವಾಮಾಚಾರದ ನೆಪದಲ್ಲಿ ಮಹಿಳೆಯರನ್ನು ಮಂಚದಲ್ಲಿ ಕಟ್ಟಿ ಹಾಕಿ, ಪೂಜೆಯ ಬಳಿಕ  ಸುತ್ತಿಗೆಯಲ್ಲಿ ಆಕೆಯ ತಲೆಗೆ ಹೊಡೆದು, ದಂಪತಿಗಳಿಂದ ಶಿರಚ್ಛೇದನ‌ ನಡೆಸಿ ದೇಹವನ್ನು ಛಿದ್ರಗೊಳಿಸಿ ನರಬಲಿ  ನೀಡಲಾಗಿದೆ.  ಮಹಿಳೆಯರ ದೇಹವನ್ನು 50 ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಲಾಗಿದೆ. ಬಳಿಕ  ಆ ಮಹಿಳೆಯರ ಮಾಂಸ ಹಾಗೂ ರಕ್ತವನ್ನು ದಂಪತಿ ಹಾಗೂ ಶಾಪಿ  ಸೇವಿಸಿದ್ದಾರೆ ಎನ್ನಲಾಗಿದೆ. ಮನುಷ್ಯರ ಮಾಂಸ ತಿಂದರೆ ಸದಾ ಯೌವನ ಇರುತ್ತದೆ’ ಎಂದು  ಶಾಫಿ ಹೇಳಿದ  ಕಾರಣಕ್ಕೆ ಲೈಲಾ ಮತ್ತು ಭಗವಾಲ್​ ಸಿಂಗ್​ ಇಬ್ಬರೂ ಸೇರಿ ಆ ಮಾಂಸವನ್ನು ಬೇಯಿಸಿಕೊಂಡು ತಿಂದಿರುವುದಾಗಿ ತನಿಖೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂಬ ಅಘಾತಕಾರಿ ವಿಚಾರವು ಹೊರ ಬಿದ್ದಿದೆ. ಇಂತಹುದೇ ದೃಶ್ಯವೊಂದು ಖ್ಯಾತ ನಟಿ ರಮ್ಯಕೃಷ್ಣ ನಟಿಸಿದ ಕನ್ನಡ ಚಿತ್ರ ನೀಲಾಂಬರಿಯಲ್ಲಿ ಇದ್ದು ಈ ಬೀಭತ್ಸ ಘಟನೆ ಅದನ್ನು ನೆನಪಿಸಿದೆ.  ಮಾಂಸ ಹಾಗೂ ರಕ್ತ ಸೇವಿಸಿರುವ ಸಾಧ್ಯತೆಯ  ಶಂಕೆಯನ್ನು  ಕೊಚ್ಚಿಯ ನಗರ ಪೊಲೀಸ್‌ ಆಯುಕ್ತ  ಸಿ ಎಚ್‌ ನಾಗರಾಜ್‌ ಕೂಡ ವ್ಯಕ್ತಪಡಿಸಿದ್ದಾರೆ.

ಆರೋಪಿ ನಾಟಿ ವೈದ್ಯ ಭಗಲ್ ಸಿಂಗ್

ಲಾಟರಿ ಮಾರಾಟದ ಮಹಿಳೆಯರೆ ಯಾಕೇ?

ನರ ಬಲಿ ನೀಡಲಾದ ಇಬ್ಬರು ಮಹಿಳೆಯರು ಲಾಟರಿ ಮಾರಿ ಜೀವನೋಪಾಯವನ್ನು ಕಂಡುಕೊಂಡವರು . ಅವರ ದಿನದ ಗಳಿಕೆ 500 ರಿಂದ 700 ರೂಪಾಯಿಗಳು ಮಾತ್ರ. ಅಲ್ಲದೇ ಇವರು ಲೈಂಗಿಕ ಕಾರ್ಯಕರ್ತೆಯರಾಗಿಯೂ ದುಡಿಯುತ್ತಿದ್ದರು ಎನ್ನಲಾಗುತ್ತಿದೆ, ಹೀಗಿದ್ದು ಇವರ ಅರ್ಥಿಕ ಸ್ಥಿತಿಯನ್ನು ಉತ್ತಮವಾಗಿರಲಿಲ್ಲ. ಒಮ್ಮೆಲೆ 10 ಲಕ್ಷ ರೂಪಾಯಿ ಆಸೆಯಿಂದ ಶಾಫಿ ಹೆಣೆದ ಬಲೆಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಶವ ಹೂತಿಟ್ಟ ನಾಟಿ ವೈದ್ಯನ ಮನೆಯ ಹಿಂಬದಿಯಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿರುವುದು

Fish | ಮಂಗಳೂರು : ಬೃಹತ್ ಮತ್ಸ್ಯ ಸಮೂಹ ಬೇಟೆ – ಮೀನುಗಾರನಿಗೆ ಒಲಿದ ಅದೃಷ್ಟ

ಘಟನೆ ಬೆಳಕಿಗೆ ಬಂದದ್ದು ಹೇಗೆ?

 ಕಡವಂತರದ ಪೊನ್ನುರುನ್ನಿ ನಿವಾಸಿ‌ ಮಹಿಳೆ‌ ಪದ್ಮಾ ನಾಪತ್ತೆಯಾದ ಬಗ್ಗೆ ಅವರ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆಯ ಮೊಬೈಲ್‌ ನ ಟವರ್‌ ಲೊಕೇಶನ್‌ ಹಾಗು ಮಹಿಳೆಯ ನಾಪತ್ತೆಯಾದ ಪ್ರದೇಶದ ಸಿಸಿಟಿವಿ ಪರಿಶೀಲನೆಯ ವೇಳೆ ಪೊಲೀಸರಿಗೆ ಕೃತ್ಯದ ಹಿಂದೆ ಶಾಫಿ ಇರುವುದು ಬೆಳಕಿಗೆ ಬಂದಿದೆ. ಬಳಿಕ ಅವನು ನೀಡಿದ ಮಾಹಿತಿಯಂತೆ ತಿರುವಲ್ಲಾದ ದಂಪತಿಯನ್ನು ಬಂಧಿಸಲಾಗಿದೆ. ತನಿಖೆ ವೇಳೆ‌ ಆರೋಪಿಗಳು ಸೆ.27ರಂದು ಪದ್ಮಾಳನ್ನು ಹಾಗೂ ಎರಡು ತಿಂಗಳ ಹಿಂದೆ ಕಾಲಡಿ ನಿವಾಸಿ ರೋಸ್ಲಿನ್ ರನ್ನು  ತಿರುವಲ್ಲಾಗೆ ಕರೆದೊಯ್ದು ಬಲಿ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ

ಆರೋಪಿಗಳ ಬಂಧನದ ಬಳಿಕ ಅ 11 ರಂದು ಸಂಜೆ  ಮೃತದೇಹಗಳ ಪತ್ತೆಗಾಗಿ ಅವುಗಳನ್ನು ಹೂತಿಟ್ಟ ಸ್ಥಳವಾದ ನಾಟಿ ವೈದ್ಯ  ದಂಪತಿಗಳ ಮನೆಯ ಹಿಂಬದಿಯಲ್ಲಿ ಅಗೆದು ಶೋಧ ನಡೆಸಲಾಯಿತು. ಈ ಎರಡು ದೇಹಗಳು ಸಂಪೂರ್ಣ ಕೊಳೆತ ಹಾಗೂ  ಛಿಧ್ರ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ . ಹೀಗಾಗಿ  ಮಹಿಳೆಯರ ಕುಟುಂಬ ಸದಸ್ಯರಿಗೆ ದೇಹದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಮೃತದೇಹಗಳು ಈ ಇಬ್ಬರದ್ದೇ ಎಂದು ದೃಢೀಕರಿಸಲು ಡಿ ಎನ್ ಎ ಸಹಿತ ವಿಧಿವಿಜ್ಞಾನ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

Mosquito coils dangerous : ಸೊಳ್ಳೆ ಓಡಿಸಲು ಕಾಯಿಲ್ ಹಚ್ಚುವ ಮೊದಲು ಇದನ್ನು ಓದಿ – ಇದೆ ಹಲವು ತೊಂದರೆ

 ಸ್ತ್ರೀ ಪೀಡಕ ಶಾಫಿ

ಪ್ರಕರಣದ ಮೊದಲ ಆರೋಪಿ ಶಾಫಿ ಅಲಿಯಾಸ್‌ ರಶೀದ್‌ ಓರ್ವ ಸ್ತ್ರೀ ಪೀಡಕ ಎಂಬ ಶಾಕಿಂಗ್‌ ವಿಚಾರ ಪ್ರಕರಣದ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಅವನ ವಿರುದ್ದ 8 ಕ್ರಿಮಿನಲ್‌ ಪ್ರಕರಣ ಇವೆ ಎನ್ನಲಾಗಿದೆ. 2020 ರಲ್ಲಿ 75 ರ ಹರೆಯದ ಮುದುಕಿಯನ್ನು ಅತ್ಯಾಚಾರಗೈದು ಬಳಿಕ ಕೊಂದ ಪ್ರಕರಣವು ಆತನ ಮೇಲಿದೆ. ಈತನ ನಡವಳಿಕೆ ಆತನೊಬ್ಬ ಲೈಂಗಿಕ ವಿಕೃತಿಯುಳ್ಳ  ಮನೋರೋಗಿ ಎಂಬೆಡೆಗೆ ಬೊಟ್ಟು ಮಾಡುತ್ತಿದೆ. ಪೂಜೆಯ ನೆಪದಲ್ಲಿ ಪ್ರಕರಣದ ಇನ್ನೊಬ್ಬ ಆರೋಪಿ ಲೈಲಾರನ್ನು ಪತಿ ಭಗಲ್‌ ಸಿಂಗ್‌ ನ ಸಮ್ಮುಖದಲ್ಲೆ ಸಂಭೋಗಿಸಿದ್ದಾನೆ ಎಂದು ಹಲವು ಮಲಯಾಳಂ ಮಾಧ್ಯಮಗಳು ವರದಿ ಮಾಡಿವೆ.

Ad Widget
Click to comment

Leave a Reply

ಅಂತರ ರಾಜ್ಯ

Blackmail-ದೋಸೆಯಲ್ಲಿ ಸತ್ತ ಇಲಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಹಿಳೆಯಿಂದಲೇ ₹25 ಲಕ್ಷಕ್ಕೆ ಬ್ಲ್ಯಾಕ್‌ಮೇಲ್..!

Published

on



Ad Widget

Ad Widget

Ad Widget

Ad Widget

ಮುಂಬೈನ ಬೊರಿವಲಿ ಪ್ರದೇಶದ ಹೋಟೆಲ್‌ವೊಂದರಲ್ಲಿ ಮೈಸೂರು ಮಸಾಲೆ ದೋಸೆಯಲ್ಲಿ ಸತ್ತ ಇಲಿ ಪತ್ತೆಯಾದ ಪ್ರಕರಣಕ್ಕೆ ಇದೀಗ ಅಚ್ಚರಿಯ ತಿರುವು ಸಿಕ್ಕಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ವೈರಲ್ ಮಾಡುವುದಾಗಿ ಬೆದರಿಸಿ ಹೋಟೆಲ್ ಮಾಲೀಕರಿಂದ ₹25 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ, ದೂರು ನೀಡಿದ್ದ ಮಹಿಳೆಯನ್ನೇ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ಮುಂಬೈ: ಮುಂಬೈನ ಬೊರಿವಲಿ ಪ್ರದೇಶದ ಹೋಟೆಲ್‌ವೊಂದರಲ್ಲಿ ಮೈಸೂರು ಮಸಾಲೆ ದೋಸೆಯಲ್ಲಿ ಸತ್ತ ಇಲಿ ಪತ್ತೆಯಾದ ಪ್ರಕರಣಕ್ಕೆ ಇದೀಗ ಅಚ್ಚರಿಯ ತಿರುವು ಸಿಕ್ಕಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ವೈರಲ್ ಮಾಡುವುದಾಗಿ ಬೆದರಿಸಿ ಹೋಟೆಲ್ ಮಾಲೀಕರಿಂದ ₹25 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ, ದೂರು ನೀಡಿದ್ದ ಮಹಿಳೆಯನ್ನೇ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಸೆ.24ರಂದು ಮಾನ್ಸಿ ಎಂಬ ಮಹಿಳೆ ತನ್ನ ಮಗುವಿನೊಂದಿಗೆ ಇಬ್ಬರು ಪುರುಷರ ಜತೆ ಬೊರಿವಲಿಯ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಮೈಸೂರು ಮಸಾಲೆ ದೋಸೆ ಆರ್ಡರ್ ಮಾಡಿದ್ದರು. ದೋಸೆ ತಿನ್ನುವ ಸಂದರ್ಭದಲ್ಲಿ ಅದರೊಳಗೆ ಸತ್ತ ಸಣ್ಣ ಇಲಿ ಪತ್ತೆಯಾಗಿದೆ ಎಂದು ಅವರು ಆರೋಪಿಸಿದ್ದರು.

Ad Widget

Ad Widget <> Ad Widget

ಮಾನ್ಸಿ ಅವರ ಹೇಳಿಕೆಯಂತೆ, ಅವರ ಸಹೋದರ ದೋಸೆಯ ಕೆಲವು ಭಾಗಗಳನ್ನು ಸೇವಿಸಿದ ಬಳಿಕ ಅದರೊಳಗೆ ಸತ್ತ ಇಲಿ ಇರುವುದನ್ನು ಗಮನಿಸಿದ್ದರು. ಇದರಿಂದ ಆಘಾತಗೊಂಡ ಅವರು ವಾಂತಿ ಮಾಡಿಕೊಂಡಿದ್ದರು. ಬಳಿಕ ಮಾನ್ಸಿ ಬೊರಿವಲಿ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆ ಕುರಿತು ದೂರು ನೀಡಿದ್ದರು.



Ad Widget

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ಸೆ.28ರಂದು ಹೋಟೆಲ್‌ನ ಪರವಾನಗಿಯನ್ನು ಅಮಾನತುಗೊಳಿಸಿತ್ತು. ಇದರಿಂದ ಹೋಟೆಲ್ ಮುಚ್ಚುವ ಪರಿಸ್ಥಿತಿ ಎದುರಾಗಿತ್ತು.

Ad Widget

Ad Widget

₹25 ಲಕ್ಷಕ್ಕೆ ಬ್ಲ್ಯಾಕ್‌ಮೇಲ್
ವಿಡಿಯೋ ವೈರಲ್ ಆದ ಬಳಿಕ ಹೋಟೆಲ್ ಮಾಲೀಕರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. ವಿಡಿಯೋವನ್ನು ಮತ್ತಷ್ಟು ವೈರಲ್ ಮಾಡುವುದಾಗಿ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಸಿ ₹25 ಲಕ್ಷ ನೀಡುವಂತೆ ಒತ್ತಾಯಿಸಲಾಗಿತ್ತು ಎನ್ನಲಾಗಿದೆ.

ನಿರಂತರ ಬೆದರಿಕೆ ಮತ್ತು ಮಾನಸಿಕ ಕಿರುಕುಳದಿಂದಾಗಿ ಹೋಟೆಲ್ ಮಾಲೀಕರು ₹6 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ₹1 ಲಕ್ಷವನ್ನು ಮುಂಗಡವಾಗಿ ನಗದು ರೂಪದಲ್ಲಿ ನೀಡಿದ್ದರು.

ಹಣ ಪಡೆಯುವ ವೇಳೆ ರೆಡ್‌ಹ್ಯಾಂಡ್ ಆಗಿ ಬಂಧನ
ಸೆ.29ರಂದು ಹೋಟೆಲ್ ಮಾಲೀಕರು ಬೊರಿವಲಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಬಲೆ ಬೀಸಿ, ಮತ್ತಷ್ಟು ಹಣ ಪಡೆಯಲು ಮಹಿಳೆಯನ್ನು ಕರೆಸಿಕೊಂಡಿದ್ದರು. ಹಣ ಸ್ವೀಕರಿಸುತ್ತಿದ್ದ ವೇಳೆ ಪೊಲೀಸರು ಆಕೆಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ತನಿಖೆ ವೇಳೆ ಬಂಧಿತ ಮಹಿಳೆ ಬೇರೆ ಯಾರೂ ಅಲ್ಲ, ದೋಸೆಯಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂದು ದೂರು ನೀಡಿದ್ದ ಮಾನ್ಸಿ ಅಮಿತ್ ಎಂಬುದು ಬೆಳಕಿಗೆ ಬಂದಿದೆ. ಅವರು ಬೊರಿವಲಿಯ ಗೋರೆಗಾಂವ್ ಪ್ರದೇಶದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದು, ಬ್ಲ್ಯಾಕ್‌ಮೇಲ್‌ನಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ.

Ad Widget
Continue Reading

ಅಂತರ ರಾಜ್ಯ

Premananda Ashram-ಪ್ರೇಮಾನಂದ ಆಶ್ರಮದ ಶಿಷ್ಯನ ಸಾವು ಪ್ರಕರಣಕ್ಕೆ ಟ್ವಿಸ್ಟ್: ರಕ್ತದ ಕಲೆ, ಸಿಸಿಟಿವಿ ದೃಶ್ಯಗಳ ಪರಿಶೀಲನೆ

Published

on



Ad Widget

Ad Widget

Ad Widget

Ad Widget

ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ಶಿಷ್ಯ ರಸಿಕ್ ದುಲಾರಿ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಪ್ರಕರಣದ ತನಿಖೆಯನ್ನು ಮಥುರಾ ಪೊಲೀಸರು ಚುರುಕುಗೊಳಿಸಿದ್ದಾರೆ. ಸೆ.25ರಂದು ನಡೆದ ಈ ಘಟನೆ ಆರಂಭದಲ್ಲಿ ಆತ್ಮಹತ್ಯೆ ಎಂದು ಪೊಲೀಸರು ಪರಿಗಣಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಗಳು ಹಾಗೂ ತನಿಖೆಯಲ್ಲಿ ಸಿಕ್ಕಿರುವ ಕೆಲವು ಮಾಹಿತಿಗಳಿಂದ ಪ್ರಕರಣವು ಅನೂಹ್ಯ ತಿರುವು ಪಡೆದಿದೆ.

Ad Widget

Ad Widget

Ad Widget

Ad Widget

ಮಥುರಾ: ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ಶಿಷ್ಯ ರಸಿಕ್ ದುಲಾರಿ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಪ್ರಕರಣದ ತನಿಖೆಯನ್ನು ಮಥುರಾ ಪೊಲೀಸರು ಚುರುಕುಗೊಳಿಸಿದ್ದಾರೆ. ಸೆ.25ರಂದು ನಡೆದ ಈ ಘಟನೆ ಆರಂಭದಲ್ಲಿ ಆತ್ಮಹತ್ಯೆ ಎಂದು ಪೊಲೀಸರು ಪರಿಗಣಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಗಳು ಹಾಗೂ ತನಿಖೆಯಲ್ಲಿ ಸಿಕ್ಕಿರುವ ಕೆಲವು ಮಾಹಿತಿಗಳಿಂದ ಪ್ರಕರಣವು ಅನೂಹ್ಯ ತಿರುವು ಪಡೆದಿದೆ.

Ad Widget

Ad Widget

Ad Widget alt="Ad Widget"/>

Ad Widget

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 85 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ರಸಿಕ್ ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಹಳೆಯ ಪರಿಚಯಸ್ಥರಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ಆಶ್ರಮಕ್ಕೆ ಸೇರುವ ಮುನ್ನ ಅವರ ಜೀವನ ಹೇಗಿತ್ತು, ಬಳಿಕ ಅವರ ನಡೆ-ನುಡಿಯಲ್ಲಿ ಯಾವುದೇ ಬದಲಾವಣೆಯಾಗಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Ad Widget

Ad Widget <> Ad Widget

ಆಶ್ರಮಕ್ಕೆ ಸೇರುವವರ ವೈಯಕ್ತಿಕ ಮೊಬೈಲ್‌ಗಳನ್ನು ಪಡೆದುಕೊಂಡು, ಬದಲಿಗೆ ಆಶ್ರಮದ ವ್ಯವಸ್ಥೆಯಲ್ಲಿರುವ ಮೊಬೈಲ್ ಮತ್ತು ಸಿಮ್ ನೀಡಲಾಗುತ್ತಿತ್ತು ಎನ್ನಲಾಗಿದೆ. ಹೀಗೆ ಮೊಬೈಲ್ ಬದಲಾಯಿಸುವ ಅಗತ್ಯ ಏನಿತ್ತು, ಆ ಮೊಬೈಲ್‌ಗಳ ಬಳಕೆಯ ಮೇಲೆ ಯಾರಾದರೂ ನಿಗಾ ಇಡುತ್ತಿದ್ದರೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.



Ad Widget

ಆಶ್ರಮದಲ್ಲಿದ್ದವರು ಕುಟುಂಬದವರು ಹಾಗೂ ಸ್ನೇಹಿತರನ್ನು ಎಷ್ಟು ಬಾರಿ ಸಂಪರ್ಕಿಸುತ್ತಿದ್ದರು ಎಂಬುದನ್ನೂ ತನಿಖೆ ನಡೆಸಲಾಗುತ್ತಿದೆ. ರಸಿಕ್ ಅವರ ಹಳೆಯ ಮೊಬೈಲ್, ಹೊಸ ಸಿಮ್, ಕರೆಗಳ ವಿವರ ಹಾಗೂ ಸಂದೇಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Ad Widget

Ad Widget

ಸಾವಿಗೂ ಮುನ್ನ ಏನಾಗಿತ್ತು?

ರಸಿಕ್ ಕೊಠಡಿಯಿಂದ ಹೊರಬಂದಾಗಲೇ ಅವರ ಬಟ್ಟೆಯಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದವು ಎಂದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ ಎನ್ನಲಾಗಿದೆ. ನಂತರ ಅವರು ನಾಲ್ಕನೇ ಮಹಡಿಯ ಮೇಲ್ಛಾವಣಿಗೆ ತೆರಳಿದ್ದಾರೆ. ಅಲ್ಲಿ ಕೆಲಕಾಲ ಕುಳಿತುಕೊಂಡು, ಬಳಿಕ ಮಲಗಿದ್ದರು. ನಂತರ ಎದ್ದು ನಿಂತ ಕೆಲವೇ ಕ್ಷಣಗಳಲ್ಲಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.

ರಸಿಕ್ ಅವರ ದೇಹದಲ್ಲಿ, ವಿಶೇಷವಾಗಿ ತೊಡೆಸಂಧಿ ಭಾಗದಲ್ಲಿ ಗಂಭೀರ ಗಾಯವಾಗಿರುವುದು ತನಿಖೆಯಲ್ಲಿ ಗಮನಕ್ಕೆ ಬಂದಿದೆ. ಈ ಗಾಯ ಹೇಗೆ ಉಂಟಾಯಿತು ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಯಾವುದೇ ಮಾನಸಿಕ ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಕುರಿತು ಅವರು ಕುಟುಂಬದವರು ಅಥವಾ ಸ್ನೇಹಿತರ ಬಳಿ ಏನಾದರೂ ಹೇಳಿಕೊಂಡಿದ್ದರೇ ಎಂಬುದನ್ನು ಪೊಲೀಸರು ತಿಳಿದುಕೊಳ್ಳುತ್ತಿದ್ದಾರೆ.

ಇದಲ್ಲದೆ, ಸಾವಿಗೂ ಮುನ್ನ ಅವರು ಮದ್ಯ, ಮಾದಕ ವಸ್ತು ಅಥವಾ ಇತರ ಯಾವುದೇ ಮನಸ್ಸಿನ ಮೇಲೆ ಪರಿಣಾಮ ಬೀರುವ ವಸ್ತು ಸೇವಿಸಿದ್ದರೇ ಎಂಬುದನ್ನು ತಿಳಿಯಲು ಅವರ ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸಿಸಿಟಿವಿ ದೃಶ್ಯಗಳು, ಮೊಬೈಲ್ ದಾಖಲೆ, ವೈದ್ಯಕೀಯ ವರದಿ ಹಾಗೂ ವಿಚಾರಣೆ ವೇಳೆ ಸಿಕ್ಕ ಮಾಹಿತಿಗಳನ್ನು ಆಧರಿಸಿ ರಸಿಕ್ ಅವರ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ಪತ್ತೆಹಚ್ಚಲು ಮುಂದಾಗಿದ್ದಾರೆ.

Ad Widget
Continue Reading

ಅಂತರ ರಾಜ್ಯ

Fire truck-ಬಿಜೆಪಿ ಶಾಸಕನ ಬಂಗಲೆ ತೊಳೆಯಲು ಅಗ್ನಿಶಾಮಕ ವಾಹನ ಬಳಕೆ; ವಿಡಿಯೋ ವೈರಲ್ ಬಳಿಕ ₹2,700 ದಂಡ

Published

on



Ad Widget

Ad Widget

Ad Widget

Ad Widget

ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಬಂಗಲೆಯನ್ನು ಸ್ವಚ್ಛಗೊಳಿಸಲು ಅಗ್ನಿಶಾಮಕ ದಳದ ವಾಹನ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.

Ad Widget

Ad Widget

Ad Widget

Ad Widget

ದಾಹೋದ್: ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಬಂಗಲೆಯನ್ನು ಸ್ವಚ್ಛಗೊಳಿಸಲು ಅಗ್ನಿಶಾಮಕ ದಳದ ವಾಹನ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ದೇವಗಢ್ ಬಾರಿಯಾ ಪುರಸಭೆಯ ಅಗ್ನಿಶಾಮಕ ವಾಹನವು ಧನ್‌ಪುರ್ ತಾಲೂಕಿನಲ್ಲಿರುವ ಬಿಜೆಪಿ ಶಾಸಕ ಬಚುಭಾಯ್ ಖಬಾದ್ ಅವರ ನಿವಾಸದ ಬಳಿ ನಿಂತಿದ್ದು, ಸಿಬ್ಬಂದಿ ಬಂಗಲೆಯ ಆವರಣ ಹಾಗೂ ಗೋಡೆಗಳಿಗೆ ಪೈಪ್ ಮೂಲಕ ನೀರು ಸಿಂಪಡಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

Ad Widget

Ad Widget <> Ad Widget

ವಿಡಿಯೋ ವೈರಲ್ ಆದ ಬಳಿಕ ತುರ್ತು ಸೇವೆಗೆ ಮೀಸಲಾಗಿರುವ ಅಗ್ನಿಶಾಮಕ ವಾಹನವನ್ನು ವೈಯಕ್ತಿಕ ಬಳಕೆಗೆ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಖಬಾದ್ ಅವರಿಂದ ₹2,700 ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Ad Widget

ಈ ಕುರಿತು ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದೇವಗಢ್ ಬಾರಿಯಾ ಪುರಸಭೆ ಅಧ್ಯಕ್ಷ ಘಮೇಶ್ ಕಲಾಲ್, ಅಗ್ನಿಶಾಮಕ ವಾಹನ ಕಳುಹಿಸುವಂತೆ ಶಾಸಕರು ಕರೆ ಮಾಡಿದ್ದರು. ಯಾವುದಾದರೂ ಗಂಭೀರ ಘಟನೆ ಸಂಭವಿಸಿರಬಹುದು ಎಂದು ಭಾವಿಸಿ ತಕ್ಷಣ ಅಗ್ನಿಶಾಮಕ ದಳವನ್ನು ಸಂಪರ್ಕಿಸಿ ವಾಹನ ಕಳುಹಿಸಿದ್ದಾಗಿ ತಿಳಿಸಿದ್ದಾರೆ.

Ad Widget

Ad Widget

ಆದರೆ, ಬಂಗಲೆ ಸ್ವಚ್ಛಗೊಳಿಸುವ ಉದ್ದೇಶಕ್ಕಾಗಿ ಅಗ್ನಿಶಾಮಕ ವಾಹನವನ್ನು ಬಳಸಲಾಗುತ್ತಿದೆ ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಬಂಗಲೆ ತೊಳೆಯಲು ವಾಹನ ಬಳಸಲಾಗುತ್ತದೆ ಎಂಬ ಮಾಹಿತಿ ಮುಂಚಿತವಾಗಿ ನೀಡಲಾಗಿರಲಿಲ್ಲ. ಈ ಕಾರಣದಿಂದ ಅಚಾತುರ್ಯ ಸಂಭವಿಸಿದೆ. ಇದೀಗ ತಪ್ಪಿತಸ್ಥರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೃಹತ್ ಬಂಗಲೆಯೊಂದರ ಮುಂಭಾಗ ಅಗ್ನಿಶಾಮಕ ವಾಹನ ನಿಂತಿರುವುದು ಕಾಣಿಸುತ್ತದೆ. ಅಗ್ನಿಶಾಮಕ ಸಿಬ್ಬಂದಿ ಪೈಪ್‌ಗಳ ಮೂಲಕ ಬಂಗಲೆಯ ಕಂಪೌಂಡ್ ಹಾಗೂ ಗೋಡೆಗಳಿಗೆ ನೀರು ಸಿಂಪಡಿಸಿ ಸ್ವಚ್ಛಗೊಳಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading