Connect with us

ದಕ್ಷಿಣ ಕನ್ನಡ

Deforestation ಪುತ್ತೂರು : ರಸ್ತೆ ಬದಿಯಲ್ಲಿದ್ದ ಮರದ ರೆಂಬೆ ಕೊಂಬೆಗಳನ್ನು ಅಕ್ರಮವಾಗಿ ಕಡಿದ ಆರೋಪ – ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಂ ಸಹಿತ ನಾಲ್ವರ ವಿರುದ್ದ ಸುಮೋಟೊ ಪ್ರಕರಣ ದಾಖಲಿಸಿದ ಅರಣ್ಯ ಇಲಾಖೆ

Published

on



Ad Widget

Ad Widget

Ad Widget

Ad Widget

ಪುತ್ತೂರು :  Puttur ಸೆ 12 :  ರಸ್ತೆ ಬದಿಯಲ್ಲಿದ್ದ ಮರದ ರೆಂಬೆ ಕೊಂಬೆಗಳನ್ನು ಅಕ್ರಮವಾಗಿ ಕಡಿದಿದ್ದಾರೆ  ಎಂದು ಆರೋಫಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ  ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ಸಹಿತ ನಾಲ್ವರ ವಿರುದ್ದ ಸೆ 12 ರಂದು  ಪ್ರಕರಣ ದಾಖಲಾಗಿದೆ. ಪುತ್ತೂರು ಉಪವಿಭಾಗದ ಪುತ್ತೂರು ಅರಣ್ಯ ವಲಯವು ( Puttur Forest Zone ) ಪ್ರಕರಣ ದಾಖಲಿಸಿಕೊಂಡಿದೆ.

Ad Widget

Ad Widget

Ad Widget

Ad Widget

ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯ ನಿರ್ವಹಣಾ ಅಧಿಕಾರಿ  ಲಕ್ಷ್ಮಣ ಹಾಗೂ ನಿರ್ದೇಶಕರಾದ ರವೀಂದ್ರ ಭಂಡಾರಿ,ಚಂದ್ರ ಮತ್ತು ಪ್ರಕಾಶ್ ಎಂಬುವರ ವಿರುದ್ದ  ಅಕ್ರಮ ಮರ ಕಡಿದಿರುಳಿಸಿದ ಬಗ್ಗೆ  ಅರಣ್ಯ ಇಲಾಖೆಯ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಪುತ್ತೂರಿನಿಂದ ಪಾಣಾಜೆಗೆ ಸೆಂಟ್ಯಾರ್‌ ಮೂಲಕ  ಹಾದು ಹೋಗುವ ರಸ್ತೆಯಲ್ಲಿ ಆರ್ಲಪದವು ಜಂಕ್ಷನ್ನಲ್ಲಿ ನಿಂತಿರುವ ಗೊಳಿ ಮರದ ರೆಂಬೆ ಕೊಂಬೆಗಳನ್ನು ಭಾನುವಾರ (ಸೆ 11 ರಂದು )  ಕಡಿದುರುಳಿಸಲಾಗಿತ್ತು.  ಹೀಗಾಗಿ ಬಗ್ಗೆ ಸ್ವಯಂ ಪ್ರೇರಣೆಯಿಂದ ತನಿಖೆ ಆರಂಭಿಸಿದ ಅರಣ್ಯ ಇಲಾಖೆಯು ಪ್ರಕರಣ ದಾಖಲಿಸಿಕೊಂಡಿದೆ ಎಂದು ತಿಳಿದು ಬಂದಿದೆ.  

Ad Widget

Ad Widget <> Ad Widget

Kotak kanya Scholarship : ಕೋಟಕ್ ಕನ್ಯಾ ಸ್ಕಾಲರ್ ಶಿಪ್ 2022ಕ್ಕೆ ಅರ್ಜಿ ಆಹ್ವಾನ – ವಾರ್ಷಿಕ 1.5 ಲಕ್ಷದಷ್ಟು ಆರ್ಥಿಕ ನೆರವು



Ad Widget

 ಸದರಿ ಪ್ರಕರಣದ ತನಿಖೆಯನ್ನು  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಾದ V P ಕಾರ್ಯಪ್ಪ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿಗಳಾದ ಕಿರಣ್ ಬಿ ಎಂ ರವರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಪಾಣಾಜೆ ಶಾಖಾ ಉಪ ವಲಯ ಅರಣ್ಯ ಅಧಿಕಾರಿ ಪ್ರಕಾಶ್ B T ,ಅರಣ್ಯ ರಕ್ಷಕರಾದ ನಿಂಗರಾಜ್ ,ಅರಣ್ಯ ವೀಕ್ಷಕರಾದ ದೇವಪ್ಪನಾಯ್ಕ ತನಿಖೆಯ ಭಾಗವಾಗಿದ್ದರು.

Ad Widget

Ad Widget

ವಾತಾವರಣ ಹಾಗು ಪರಿಸರದ ಸ್ವಾಸ್ಥ್ಯವನ್ನು ಕಾಪಾಡಲು ಮರ ಗಿಡಗಳು ಅನಿವಾರ್ಯವಾಗಿದ್ದು ಜಾಗತಿಕ ತಾಪಮಾನ ಏರಿಕೆ ಕಾಣುತ್ತಿರುವ ಈ ಸಂದರ್ಭದಲ್ಲಿ ಇದನ್ನು ಉಳಿಸುವುದು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಜ್ಞಾವಂತರೆನಿಸಿಕೊಂಡವರೇ ಮರ ನಾಶ ಮಾಡುವ ಪ್ರಯತ್ನ ಮಾಡುವುದು ಅಕ್ಷಮ್ಯ . ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸೊ ಮೋಟೋ ಪ್ರಕರಣ ದಾಖಲಿಸಿಕೊಂಡಿರುವುದು ಸ್ವಾಗಾತರ್ಹ ನಡೆ ಎನ್ನುತ್ತಾರೆ ಸಾರ್ವಜನಿಕರು.

AAI Recruitment : ಎಎಐ ನೇಮಕಾತಿಗೆ ಅರ್ಜಿ ಆಹ್ವಾನ : sslc , Puc, Diploma Degee ವಿದ್ಯಾರ್ಹತೆ

Ad Widget
Click to comment

Leave a Reply

ಬಿಗ್ ನ್ಯೂಸ್

Master Anand-ಕಾರಂತರ ಬಾಲವನ ಪ್ರಶಸ್ತಿಗೆ ಆಯ್ಕೆಯಾದ ಮಾಸ್ಟರ್ ಪ್ಲಾನರಿಯ ಮಾಸ್ಟರ್ ಆನಂದ್

Published

on



Ad Widget

Ad Widget

Ad Widget

Ad Widget

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರಿನ ಬಾಲವನದಲ್ಲಿ ಪ್ರದಾನ ಮಾಡಲಾಗುವ ಪ್ರತಿಷ್ಠಿತ ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026’ಕ್ಕೆ ಪುತ್ತೂರಿನ ಶ್ರೇಷ್ಠ ಸಿವಿಲ್ ಇಂಜಿನಿಯರಿಂಗ್ ಸಾಧಕ ಹಾಗೂ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಮುಖ್ಯಸ್ಥ ಎಸ್.ಕೆ. ಆನಂದ್ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರಿನ ಬಾಲವನದಲ್ಲಿ ಪ್ರದಾನ ಮಾಡಲಾಗುವ ಪ್ರತಿಷ್ಠಿತ ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026’ಕ್ಕೆ ಪುತ್ತೂರಿನ ಶ್ರೇಷ್ಠ ಸಿವಿಲ್ ಇಂಜಿನಿಯರಿಂಗ್ ಸಾಧಕ ಹಾಗೂ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಮುಖ್ಯಸ್ಥ ಎಸ್.ಕೆ. ಆನಂದ್ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ವೈಜ್ಞಾನಿಕ ಮನೋಭಾವ, ಪರಿಸರ ಕಾಳಜಿ ಹಾಗೂ ಸುಸ್ಥಿರ ಜೀವನಶೈಲಿಯನ್ನು ತಮ್ಮ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡಿರುವ ಎಸ್.ಕೆ. ಆನಂದ್ ಅವರು, ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಮೂಲಕ ಮರಕ್ಕೆ ಪರ್ಯಾಯವಾದ ‘ಕಾಂಕೂಡ್’ (Concood™) ಎಂಬ ಉತ್ಪನ್ನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆವಿಷ್ಕಾರದ ಮೂಲಕ ಕಳೆದ ಹಲವು ದಶಕಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮರಮುಟ್ಟುಗಳ ಬಳಕೆಯನ್ನು ತಪ್ಪಿಸಿ, ಲಕ್ಷಾಂತರ ಮರಗಳನ್ನು ಕೊಡಲಿಗೆ ಬಲಿಯಾಗದಂತೆ ಸಂರಕ್ಷಿಸಿದ ಸಾಧನೆ ಅವರದ್ದಾಗಿದೆ.

Ad Widget

Ad Widget <> Ad Widget

1951ರಲ್ಲಿ ಪುತ್ತೂರಿನಲ್ಲಿ ಜನಿಸಿದ ಎಸ್.ಕೆ. ಆನಂದ್ ಅವರು ದಿವಂಗತ ಎಸ್.ಕೆ. ಈಶ್ವರ ಭಟ್ ಹಾಗೂ ಶಾರದಾ ಭಟ್ ದಂಪತಿಯ ಪುತ್ರ. ಮಂಗಳೂರಿನ ಕೆ.ಆರ್.ಇ.ಸಿ. (ಪ್ರಸ್ತುತ NITK, ಸುರತ್ಕಲ್)ಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಹಾಗೂ ಎಂ.ಟೆಕ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದ ಅವರು, 1975ರಲ್ಲಿ ತಂದೆಯವರು ಸ್ಥಾಪಿಸಿದ್ದ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡರು. ಉನ್ನತ ಅವಕಾಶಗಳಿದ್ದರೂ ದೊಡ್ಡ ನಗರಗಳತ್ತ ತೆರಳದೆ ಪುತ್ತೂರಿನಲ್ಲೇ ನೆಲೆಸಿ, ಸುಸ್ಥಿರ ನಿರ್ಮಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.



Ad Widget

‘ಕಾಂಕೂಡ್’ ಮೂಲಕ ಮರಕ್ಕೆ ಪರ್ಯಾಯ
ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮನೆ, ಕಚೇರಿ, ಶಾಲಾ-ಕಾಲೇಜುಗಳ ನಿರ್ಮಾಣಕ್ಕೆ ದಾರಂದ, ಕಿಟಕಿ, ಮೇಲ್ಛಾವಣಿಯ ತೊಲೆ, ಬೆಂಚ್-ಡೆಸ್ಕ್ ಸೇರಿದಂತೆ ವಿವಿಧ ಕಾರ್ಯಗಳಿಗೆ ಅಪಾರ ಪ್ರಮಾಣದ ಮರಮುಟ್ಟುಗಳನ್ನು ಬಳಸಲಾಗುತ್ತಿತ್ತು. ಈ ಸಮಸ್ಯೆಗೆ ಪರಿಸರಸ್ನೇಹಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಆನಂದ್ ಅವರು ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಕುರಿತು ಸುದೀರ್ಘ ಸಂಶೋಧನೆ ನಡೆಸಿ, ಮರದ ಬಲಕ್ಕೆ ಪರ್ಯಾಯವಾಗಬಲ್ಲ ಕಾಂಕ್ರೀಟ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದರು.

Ad Widget

Ad Widget

‘ಕಾಂಕೂಡ್’ ಹೆಸರಿನ ಈ ಉತ್ಪನ್ನಗಳಿಗೆ 2007ರಲ್ಲಿ ಭಾರತ ಸರ್ಕಾರದಿಂದ ಅಧಿಕೃತ ಟ್ರೇಡ್‌ಮಾರ್ಕ್ ನೋಂದಣಿಯೂ ದೊರೆತಿದೆ. ಇಂದು ವಿವಿಧ ಅಗತ್ಯಗಳಿಗೆ ಬಳಸಬಹುದಾದ 250ಕ್ಕೂ ಅಧಿಕ ಕಾಂಕ್ರೀಟ್ ಪರಿಕರಗಳು ‘ಮಾಸ್ಟರ್ ಪ್ಲಾನರಿ’ಯಲ್ಲಿ ಲಭ್ಯವಿವೆ.

36.5 ಲಕ್ಷಕ್ಕೂ ಅಧಿಕ ಮರಗಳ ಸಂರಕ್ಷಣೆ
‘ಮಾಸ್ಟರ್ ಪ್ಲಾನರಿ’ ಸಂಸ್ಥೆಯಲ್ಲಿ ಪ್ರತಿದಿನ ಸರಾಸರಿ 200 CFTಗೂ ಅಧಿಕ ಕಾಂಕ್ರೀಟ್ ಪರಿಕರಗಳನ್ನು ಉತ್ಪಾದಿಸಲಾಗುತ್ತಿದ್ದು, ಈ ಪರಿಕರಗಳ ಬಳಕೆಯಿಂದ ಪ್ರತಿದಿನ ಸರಾಸರಿ 20 ಬೃಹತ್ ಮರಗಳು ಕಡಿಯುವುದನ್ನು ತಪ್ಪಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಕಳೆದ 50 ವರ್ಷಗಳ ಈ ಸೇವೆಯ ಲೆಕ್ಕಾಚಾರದಂತೆ, ಇದುವರೆಗೆ ಸುಮಾರು 36.5 ಲಕ್ಷಕ್ಕೂ ಅಧಿಕ ಬೃಹತ್ ಮರಗಳು ಕೊಡಲಿಗೆ ಬಲಿಯಾಗುವುದನ್ನು ತಪ್ಪಿಸಿ ಸಂರಕ್ಷಿಸಲಾಗಿದೆ. ಶಾಲಾ-ಕಾಲೇಜುಗಳು, ಸರ್ಕಾರಿ ಸಂಸ್ಥೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಮರದ ಪರ್ಯಾಯವಾಗಿ ‘ಕಾಂಕೂಡ್’ ಉತ್ಪನ್ನಗಳನ್ನು ಬಳಸಲಾಗುತ್ತಿದೆ.

ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಅವರು ದೇಶಾದ್ಯಂತ ನಿರ್ಮಿಸಿರುವ 30ಕ್ಕೂ ಅಧಿಕ ತೂಗು ಸೇತುವೆಗಳಲ್ಲೂ ಮರದ ಹಲಗೆಗಳ ಬದಲಿಗೆ ‘ಕಾಂಕೂಡ್’ ಪರಿಕರಗಳನ್ನು ಬಳಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ಅರಣ್ಯ ಇಲಾಖೆ ಸೇರಿದಂತೆ ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲೂ ಈ ತಂತ್ರಜ್ಞಾನ ಬಳಕೆಯಾಗಿದೆ.

50 ಎಕರೆಗೂ ಅಧಿಕ ಹಸಿರು ಕಾಡು
ಮರಗಳ ಸಂರಕ್ಷಣೆಯ ಜತೆಗೆ ವೈಯಕ್ತಿಕವಾಗಿಯೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿರುವ ಎಸ್.ಕೆ. ಆನಂದ್ ಅವರು ಸೊರಕೆ ಹಾಗೂ ಕುಡಿಪಾಡಿಯಲ್ಲಿ ‘ಕುಡಿಕಾಡು’ ಹೆಸರಿನಲ್ಲಿ 50 ಎಕರೆಗೂ ಅಧಿಕ ಪ್ರದೇಶದಲ್ಲಿ ಸಾವಿರಾರು ಗಿಡ-ಮರಗಳನ್ನು ಬೆಳೆಸಿ ಹಸಿರು ಕಾಡು ನಿರ್ಮಿಸಿದ್ದಾರೆ.

‘ಮಾಸ್ಟರ್ ಪ್ಲಾನರಿ’ ಸಂಸ್ಥೆಯಡಿ 9 ಕೇಂದ್ರಗಳಲ್ಲಿ 24 ಸಂಸ್ಥೆಗಳ ಮೂಲಕ 800ಕ್ಕೂ ಅಧಿಕ ಮಂದಿಗೆ ನೇರ ಉದ್ಯೋಗ ಕಲ್ಪಿಸಲಾಗಿದೆ. ಇವರಲ್ಲಿ 200ಕ್ಕೂ ಅಧಿಕ ಮಹಿಳೆಯರು ಹಾಗೂ 20ಕ್ಕೂ ಅಧಿಕ ಭಿನ್ನಸಾಮರ್ಥ್ಯ ಹೊಂದಿರುವವರು ಸೇರಿದ್ದಾರೆ. ಪರೋಕ್ಷವಾಗಿ 3,000ಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಿರುವುದಾಗಿ ತಿಳಿಸಲಾಗಿದೆ.

ಸಂಸ್ಥೆಯ ಸಿಬ್ಬಂದಿಯ ಮಕ್ಕಳ ಆರೈಕೆ ಹಾಗೂ ಶಿಕ್ಷಣಕ್ಕಾಗಿ ಆವರಣದಲ್ಲೇ ಅಂಗನವಾಡಿ ಮಾದರಿಯ ಪ್ಲೇ ಸ್ಕೂಲ್ ಆರಂಭಿಸಿರುವುದು ಅವರ ಸಾಮಾಜಿಕ ಕಾಳಜಿಗೆ ಮತ್ತೊಂದು ಉದಾಹರಣೆಯಾಗಿದೆ.

ಚಾಮರಾಜನಗರ ಹಾಗೂ ನಾಗರಹೊಳೆ ಭಾಗದ ಅರಣ್ಯವಾಸಿ ಗಿರಿಜನರಿಗೆ 8,000ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿರುವ ಅವರು, ಸುಳ್ಯದಲ್ಲಿ ಕಳೆದ 20 ವರ್ಷಗಳಿಂದ ‘ಸ್ನೇಹ ಶಿಕ್ಷಣ ಸಂಸ್ಥೆ’ ಮೂಲಕ ಗ್ರಾಮೀಣ ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ನೀಡುತ್ತಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಆನಂದ್ ಅವರು ‘ಭಾವಲೋಕ’ ಎಂಬ ಕವನ ಸಂಕಲನ ಸೇರಿದಂತೆ ಹಲವು ಭಾವಗೀತೆಗಳನ್ನು ರಚಿಸಿ ಪ್ರಕಟಿಸಿದ್ದಾರೆ.

ಎಸ್.ಕೆ. ಆನಂದ್ ಹಾಗೂ ರೇಖಾ ಆನಂದ್ ದಂಪತಿಯ ನಾಲ್ವರು ಮಕ್ಕಳಾದ ಅಕ್ಷಯ್, ಅರ್ಜುನ್, ಆಕಾಶ್ ಹಾಗೂ ಆರತಿ ಅವರು ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಕುಟುಂಬದ ಸುಸ್ಥಿರ ಹಾಗೂ ಪರಿಸರಸ್ನೇಹಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಹಲವು ಪ್ರಶಸ್ತಿಗಳ ಗರಿ
ಪರಿಸರ ಸೇವೆಗಾಗಿ 2003ರಲ್ಲಿ ‘ಪರಿಸರಪ್ರೇಮಿ’ ಪ್ರಶಸ್ತಿ, 2008ರಲ್ಲಿ ICI ವತಿಯಿಂದ ‘ಕರ್ನಾಟಕದ ಅತ್ಯುತ್ತಮ ಕಾಂಕ್ರೀಟ್ ಇಂಜಿನಿಯರ್’ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಜೆಸಿಐ ‘TOBIP’ ಹಾಗೂ ACCE-UltraTech ಪ್ರಶಸ್ತಿಗಳು ಎಸ್.ಕೆ. ಆನಂದ್ ಅವರಿಗೆ ಸಂದಿವೆ.

ಬಾಲವನ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ, ಉಪವಿಭಾಗಾಧಿಕಾರಿ ಹಾಗೂ ಬಾಲವನ ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಸ್ಟೆಲ್ಲಾ ವರ್ಗೀಸ್, ತಾಲೂಕು ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಹಿರಿಯ ಸಾಹಿತಿಗಳಾದ ವಿ.ಬಿ. ಆರ್ತಿಕಜೆ ಹಾಗೂ ರೆ. ವಿಜಯ್ ಹಾರ್ವಿನ್ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಎಸ್.ಕೆ. ಆನಂದ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಅಕ್ಟೋಬರ್ 10, 2026ರಂದು ಪುತ್ತೂರಿನ ಐತಿಹಾಸಿಕ ಬಾಲವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026’ ಪ್ರದಾನ ಮಾಡಿ ಎಸ್.ಕೆ. ಆನಂದ್ ಅವರನ್ನು ಗೌರವಿಸಲಾಗುವುದು.

Ad Widget
Continue Reading

ಬಿಗ್ ನ್ಯೂಸ್

Dr. Rajesh Rai Savanuru-ಸಹಕಾರ ರತ್ನ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು ಅವರ ಪುತ್ರ, ಇಂಗ್ಲೆಂಡ್‌ ನಾಟಿಂಗ್‌ಹ್ಯಾಮ್‌ಶೆರ್‌ನ ಕಿಂಗ್ಸ್ ಮಿಲ್ ಆಸ್ಪತ್ರೆಯ ಕನ್ಸಲ್ಟಾಂಟ್ ಫಿಶಿಷಿಯನ್ ಡಾ. ರಾಜೇಶ್ ರೈ ಸವಣೂರು ಅವರಿಗೆ ಪ್ರತಿಷ್ಠಿತ ಲಂಡನ್‌ ರಾಯಲ್ ಕಾಲೇಜ್ ಆಫ್ ಫಿಶಿಷಿಯನ್ಸ್‌ನ ಫೆಲೋ ( FRCP London) ಗೌರವ

Published

on



Ad Widget

Ad Widget

Ad Widget

Ad Widget

ಸಹಕಾರ ರತ್ನ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು ಅವರ ಪುತ್ರ, ಇಂಗ್ಲೆಂಡ್‌ ನಾಟಿಂಗ್‌ಹ್ಯಾಮ್‌ಶೆರ್‌ನ ಕಿಂಗ್ಸ್ ಮಿಲ್ ಆಸ್ಪತ್ರೆಯಲ್ಲಿ ಕನ್ಸಲ್ಟಾಂಟ್ ಫಿಶಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜೇಶ್ ರೈ ಸವಣೂರು ಅವರು ಪ್ರತಿಷ್ಠಿತ ಲಂಡನ್‌ ರಾಯಲ್ ಕಾಲೇಜ್ ಆಫ್ ಫಿಶಿಷಿಯನ್ಸ್‌ನ ಫೆಲೋ ( FRCP London) ಗೌರವಕ್ಕೆ ಪಾತ್ರರಾಗಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಸಹಕಾರ ರತ್ನ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು ಅವರ ಪುತ್ರ, ಇಂಗ್ಲೆಂಡ್‌ ನಾಟಿಂಗ್‌ಹ್ಯಾಮ್‌ಶೆರ್‌ನ ಕಿಂಗ್ಸ್ ಮಿಲ್ ಆಸ್ಪತ್ರೆಯಲ್ಲಿ ಕನ್ಸಲ್ಟಾಂಟ್ ಫಿಶಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜೇಶ್ ರೈ ಸವಣೂರು ಅವರು ಪ್ರತಿಷ್ಠಿತ ಲಂಡನ್‌ ರಾಯಲ್ ಕಾಲೇಜ್ ಆಫ್ ಫಿಶಿಷಿಯನ್ಸ್‌ನ ಫೆಲೋ ( FRCP London) ಗೌರವಕ್ಕೆ ಪಾತ್ರರಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ, ವೃತ್ತಿಪರ ಸಾಧನೆ, ದೀರ್ಘಕಾಲದ ಅನುಭವ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ನೀಡಲಾಗುವ ಈ ಪ್ರತಿಷ್ಠಿತ ಫೆಲೋ ಗೌರವವು ಡಾ. ರಾಜೇಶ್ ರೈ ಅವರ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದೆ.

Ad Widget

Ad Widget <> Ad Widget

ಡಾ. ರಾಜೇಶ್ ರೈ ಅವರು ಪ್ರಾಥಮಿಕ ಶಿಕ್ಷಣವನ್ನು ಸುಳ್ಯದ ರೋಟರಿ ಆಂಗ್ಲಮಾಧ್ಯಮ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಉಡುಪಿ-ಮಣಿಪಾಲದ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಬಳಿಕ ತುಮಕೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಅವರು, ಮೈಸೂರಿನ ಜೆ.ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (MD) ಪಡೆದರು. ನಂತರ ನವದೆಹಲಿಯಲ್ಲಿ DNB ಪದವಿಯನ್ನೂ ಪೂರ್ಣಗೊಳಿಸಿದರು. ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಫಿಶಿಷಿಯನ್ಸ್‌ನ MRCP ಪದವಿಯನ್ನೂ ಪಡೆದಿರುವ ಅವರು, ಇದೀಗ ಅದೇ ಪ್ರತಿಷ್ಠಿತ ಸಂಸ್ಥೆಯ FRCP ಗೌರವಕ್ಕೆ ಆಯ್ಕೆಯಾಗಿದ್ದಾರೆ.



Ad Widget

ತಾಯ್ನಾಡಿನಲ್ಲಿ 16 ವರ್ಷಗಳ ವೈದ್ಯಕೀಯ ಸೇವೆ
ಮಂಗಳೂರಿನಲ್ಲಿ ವೈದ್ಯಕೀಯ ವೃತ್ತಿಜೀವನ ಆರಂಭಿಸಿದ ಡಾ. ರಾಜೇಶ್ ರೈ ಅವರು ಸುಮಾರು 16 ವರ್ಷಗಳ ಕಾಲ ಎ.ಜೆ. ಆಸ್ಪತ್ರೆಯಲ್ಲಿ ಕನ್ಸಲ್ಯಾಂಟ್ ಫಿಶಿಷಿಯನ್ ಆಗಿ ಸೇವೆ ಸಲ್ಲಿಸಿದರು. ಇದೇ ಅವಧಿಯಲ್ಲಿ ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದರು. ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವೈದ್ಯರಿಗೆ ಬೋಧನೆ ಮತ್ತು ತರಬೇತಿ ನೀಡುವ ಮೂಲಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿಯೂ ಗಮನಾರ್ಹ ಕೊಡುಗೆ ನೀಡಿದರು.

Ad Widget

Ad Widget

NHSನಲ್ಲಿ ಕನ್ಸಲ್ಟಾಂಟ್ ವೈದ್ಯ
ಬಳಿಕ ಇಂಗ್ಲೆಂಡ್‌ಗೆ ತೆರಳಿದ ಅವರು ಅಲ್ಲಿನ National Health Service (NHS) ನಲ್ಲಿ ತಮ್ಮ ವೈದ್ಯಕೀಯ ವೃತ್ತಿಜೀವನವನ್ನು ಮುಂದುವರಿಸಿದರು. ಪ್ರಸ್ತುತ ನಾಟಿಂಗ್‌ಹ್ಯಾಮ್‌ಶೆರ್‌ನ ಕಿಂಗ್ಸ್ ಮಿಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಕನ್ಸಲ್ಟಾಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ಚಿಕಿತ್ಸೆಯ ಜತೆಗೆ ವೈದ್ಯಕೀಯ ಶಿಕ್ಷಣ, ವೈದ್ಯರ ತರಬೇತಿ ಹಾಗೂ ಆರೋಗ್ಯ ಸೇವೆಯ ವಿವಿಧ ಜವಾಬ್ದಾರಿಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.

ಡಾ. ರಾಜೇಶ್ ರೈ ಅವರು ‘ಸಹಕಾರ ರತ್ನ’ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು ಮತ್ತು ಶ್ರೀಮತಿ ಕಸ್ತೂರಿ ಕಲಾ ಎಸ್. ರೈ ಸವಣೂರು ಅವರ ಪುತ್ರ. ಅವರ ಪತ್ನಿ ಶ್ರೀಮತಿ ಅಶ್ವಿತ ರಾಜೇಶ್ ರೈ ಅವರು Human Nutrition and Dieteticsನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಲಂಡನ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವೃತ್ತಿಜೀವನ ನಡೆಸಿದ್ದಾರೆ.

ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು, ಮಂಗಳೂರಿನಲ್ಲಿ ಸುದೀರ್ಘ ಕಾಲ ವೈದ್ಯಕೀಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ, ಬಳಿಕ ಇಂಗ್ಲೆಂಡ್‌ನ NHSನಲ್ಲಿ ಕನ್ಸಲ್ಟಾಂಟ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜೇಶ್ ರೈ ಅವರ ವೃತ್ತಿಪರ ಪಯಣ ಗಮನಾರ್ಹವಾಗಿದೆ.

Ad Widget
Continue Reading

ಅಪರಾಧ

Puttur-ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ 11 ಗೋವುಗಳ ಸಾಗಾಟ; ವಾಹನ ಪತ್ತೆ, ಇಬ್ಬರು ಪರಾರಿ

Published

on



Ad Widget

Ad Widget

Ad Widget

Ad Widget

ಅಕ್ರಮವಾಗಿ ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ ವಾಹನವನ್ನು ಸಂಪ್ಯ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿದ್ದು, 11 ಗೋವುಗಳನ್ನು ರಕ್ಷಿಸಿದ್ದಾರೆ ಹಾಗೂ ಒರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಅಕ್ರಮವಾಗಿ ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ ವಾಹನವನ್ನು ಸಂಪ್ಯ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿದ್ದು, 11 ಗೋವುಗಳನ್ನು ರಕ್ಷಿಸಿದ್ದಾರೆ ಹಾಗೂ ಒರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Ad Widget

Ad Widget

Ad Widget alt="Ad Widget"/>

Ad Widget

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರಿಂದ ಪೊಲೀಸರಿಗೆ ದೊರೆತ ಮಾಹಿತಿಯ ಆಧಾರದ ಮೇಲೆ ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.

Ad Widget

Ad Widget <> Ad Widget

ಪುತ್ತೂರು ತಾಲೂಕಿನ ಕುಂಜೂರುಪಂಜ ದೇವಶ್ಯದ ಮಯ್ಯ ಫಾರ್ಮ್ಸ್ನಿಂದ ಮುಂಜಾನೆ ಸುಮಾರು 3 ಗಂಟೆಗೆ ಬುಳೇರಿಕಟ್ಟೆ ಮಾರ್ಗವಾಗಿ ಗೋವುಗಳನ್ನು ಕೇರಳದತ್ತ ಸಾಗಿಸಲಾಗುತ್ತಿತ್ತು. ಗೋವುಗಳ ಕೈಕಾಲುಗಳನ್ನು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ತುಂಬಿಸಿಕೊಂಡು ಸಾಗಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.



Ad Widget

ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪತ್ತೆಹಚ್ಚಿ 11 ಗೋವುಗಳನ್ನು ರಕ್ಷಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

Ad Widget

Ad Widget

ಈ ಸಂಬಂಧ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading