ಅಪರಾಧ
ಯುವತಿ ಜತೆ ಮೈಸೂರಿನ ಲಾಡ್ಜ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಂಗಳೂರಿನ ಬಿಜೆಪಿ ಮುಖಂಡ – ವಿಡಿಯೋ ವೈರಲ್ | ಹನಿ ಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಬೆಂಗಳೂರು: ಮಂಗಳೂರು ಮೂಲದ ಮಂಡ್ಯ ಬಿಜೆಪಿ ಮುಖಂಡನ (Bjp Leader) ಹನಿಟ್ರ್ಯಾಪ್ (Honey Trap) ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದೆ. ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯ ಮಂಡ್ಯದ ಶ್ರೀನಿಧಿ ಗೋಲ್ಡ್ ಮಾಲೀಕ (Sri Nidhi Gold Owner) ದಕ್ಷಿಣ ಕನ್ನಡ ಜಿಲ್ಲೆಯ ಜಗನ್ನಾಥ ಶೆಟ್ಟಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಉದ್ಯಮಿ .
ಎರಡು ವಾರಗಳ ಹಿಂದೆ ಈತ ತನ್ನನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಸಲ್ಮಾ ಭಾನು ಹಾಗೂ ಇತರ ಮೂವರ ವಿರುದ್ದ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಹನಿಟ್ರ್ಯಾಪ್ ದೂರು ನೀಡಿದ್ದರು. ಈ ನಾಲ್ವರು ಡ್ರಾಪ್ ಮಾಡುವ ನೆಪದಲ್ಲಿ ಕಾರಿನಲ್ಲಿ ಕರೆದು ಕೊಂಡು ಹೋಗಿ ಬೆದರಿಸಿದ್ದಾರೆ. 4 ಕೋ ರೂಪಾಯಿ ಡಿಮ್ಯಾಂಡ್ ಮಾಡಿ 50 ಲಕ್ಷ ರೂಪಾಯಿ ಹಣ ನನ್ನಿಂದ ಪೀಕಿಸಿದ್ದಾರೆ ಎಂದು ದೂರು ನೀಡಿದ್ದರು . ಅದರಂತೆ ಸಲ್ಮಾ ಭಾನು ಸಹಿತ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.
ಜಗದೀಶ್ ಶೆಟ್ಟಿ ಮೈಸೂರಿನ ದರ್ಶನ್ ಲಾಡ್ಜ್ನಲ್ಲಿ ಯುವತಿ ಜತೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಸಂಬಂಧಿಸಿದಂತೆ ಅವರು ಹನಿಟ್ರ್ಯಾಪ್ ಕೇಸ್ ದಾಖಲಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೇ ಎಫ್ಐಆರ್ ನಲ್ಲಿರುವ ಅಂಶಕ್ಕೂ, ವೈರಲ್ ಆಗಿರುವ ವಿಡಿಯೋಗೂ ಭಾರೀ ವತ್ಯಾಸವಿದೆ.
ವಿಡಿಯೋದಲ್ಲಿ ಏನಿದೆ?:
ಮೈಸೂರಿನ ದರ್ಶನ್ ಲಾಡ್ಜ್ ನ ಕೊಠಡಿಯೊಂದರಲ್ಲಿ ಜಗನ್ನಾಥ್ ಶೆಟ್ಟಿ ಹಾಗು ಕಾಲೇಜ್ ವಿದ್ಯಾರ್ಥಿನಿ ಎನ್ನಲಾದ ಯುವತಿ ಕೂತಿರುತ್ತಾರೆ. ಜಗನ್ನಾಥ ಶೆಟ್ಟಿ ಅಂಗಿ ಕಳಚಿ ಬನೀಯನ್ ನಲ್ಲಿ ಮಾತ್ರ ಇರುತ್ತಾರೆ . ಈ ವೇಳೆ ಸಲ್ಮಾ ಎಂಬ ಮಹಿಳೆ ಸಹಿತ ನಾಲ್ವರು ಲಾಡ್ಜ್ ಗೆ ನುಗ್ಗುತ್ತಾರೆ. ಅದೇ ಕೋಣೆಯಲ್ಲಿ ಜಗನ್ನಾಥ್ ಶೆಟ್ಟಿ ಹೆರಸಲ್ಲಿ ನಕಲಿ ಐಡಿ ಕಾರ್ಡ್ ಕೂಡ ಸಿಗುತ್ತೆ. ಅದರಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಜಗನ್ನಾಥ್ ಶೆಟ್ಟಿ ಎಂದಿರುತ್ತೆ. ಇದನ್ನು ಸಲ್ಮಾ ವಿಡಿಯೋದಲ್ಲಿ ತೋರಿಸುತ್ತಾರೆ.
ಇಬ್ಬರಿಗೂ ಇಲ್ಲಿ ಏನು ಕೆಲಸ ಎಂದು ಸಲ್ಮಾರ ತಂಡ ಪ್ರಶ್ನಿಸಿದೆ, ಇವರು ನಮ್ಮ ಪ್ರಿನ್ಸಿಪಾಲ್. ಟ್ಯೂಷನ್ ಹೇಳಿಸಿಕೊಳ್ಳೋಕೆ ಅಂತ ಇಲ್ಲಿಗೆ ಬಂದೆ, ಅವರಿಗೇನು ಮಾಡಬೇಡಿ ಪ್ಲೀಸ್… ಎಂದು ಯುವತಿ ಗೋಗರೆಯುತ್ತಾರೆ. ಆಗ ತಂಡದವರು ಇದು ಟ್ಯೂಷನ್ ಹೇಳಿಕೊಡುವ ಸ್ಥಳವೇ ಎಂದು ಜೋರು ಮಾಡಿದ್ದಾರೆ.
ಬಳಿಕ ಯುವತಿ ಮತ್ತು ಜಗನ್ನಾಥ್ ಶೆಟ್ಟಿ ಇಬ್ಬರಿಗೂ ಸಲ್ಮಾ ಗ್ಯಾಂಗ್ ಥಳಿಸಿದ್ದು, ತಪ್ಪಾಯ್ತು ಬಿಟ್ಬಿಡಿ ಎಂದು ಜಗನ್ನಾಥ್ ಕೈಮುಗಿದು ಬೇಡಿದರೂ ಈ ತಂಡ ಬಿಟ್ಟಿಲ್ಲ. ಈ ಎಲ್ಲವನ್ನೂ ಸಲ್ಮಾ ಕಡೆಯವರು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.
ಹನಿಟ್ರ್ಯಾಪ್ ಕೇಸ್ :
ವಿಡಿಯೋ ವೈರಲ್ ಆಗುವ ಮುನ್ನವೇ ಜಗನ್ನಾಥ್ ಶೆಟ್ಟಿ ಅವರು ಸ್ಮಲಾ ತಂಡದ ವಿರುದ್ಧ ದಾಖಲಿಸಿದ ದೂರಿನ ವಿವರ ಇಲ್ಲಿದೆ. ‘ಮಂಗಳೂರಿಗೆ ಹೋಗಲೆಂದ ಮಂಡ್ಯದಲ್ಲಿ ಬಸ್ಗಾಗಿ ಕಾಯುತ್ತಿದ್ದ ಜಗನ್ನಾಥ್ ಅವರನ್ನು ಮೈಸೂರಿಗೆ ಡ್ರಾಪ್ ಕೊಡುವುದಾಗಿ ನಾಲ್ವರು ಕಾರಿನಲ್ಲಿ ಕರೆದೊಯ್ದರು. ನಂತರ ಚಿನ್ನದ ಪರೀಕ್ಷೆಗೆಂದು ಅಪಹರಿಸಿ, ಲಾಡ್ಜ್ನಲ್ಲಿ ರೋಮ್ಗೆ ಕರೆದೊಯ್ದು ಯುವತಿ ಜತೆ ವಿಡಿಯೋ ಚಿತ್ರೀಕರಿಸಿಕೊಂಡು 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟರು. ಅಂತಿಮವಾಗಿ 50 ಲಕ್ಷ ರೂ. ಕೊಡಲಾಯಿತು. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ, ಬೇಸತ್ತ ಜಗನ್ನಾಥ್ ಶೆಟ್ಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ದೂರಿನನ್ವಯ ಸಲ್ಮಾಬಾನು ಎಂಬಾಕೆಯನ್ನು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುವ ಮೊದಲು ಇನ್ನೊಂದು ಆಡಿಯೋ ಕೂಡ ವೈರಲ್ ಆಗಿತ್ತು . ಲಾಡ್ಜ್ಗೆ ಹೋಗುವ ಮುನ್ನ ಯುವತಿ ಮತ್ತು ಜಗನ್ನಾಥ್ ಶೆಟ್ಟಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಅದಾಗಿತ್ತು.
ಅಂತರ ರಾಜ್ಯ
YouTuber-89 ವರ್ಷದ ವೃದ್ಧನ 5 ಸವರನ್ ಚಿನ್ನದ ಸರ ಕಳವು ಆರೋಪ; 118 ಸವರನ್ ಚಿನ್ನ ಕಳವು ಪ್ರಕರಣದ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲು
ತಮ್ಮ ಮನೆಯಲ್ಲಿ 118 ಸವರನ್ ಚಿನ್ನಾಭರಣ ಕಳುವಾಗಿದ್ದ ಬಗ್ಗೆ ದೂರು ನೀಡಿ ಸುದ್ದಿಯಾಗಿದ್ದ ಪ್ರಸಿದ್ಧ ಯೂಟ್ಯೂಬರ್ ಮಧುಮಿತಾ ಅವರ ಪ್ರಕರಣಕ್ಕೆ ಇದೀಗ ಅನಿರೀಕ್ಷಿತ ತಿರುವು ಸಿಕ್ಕಿದೆ. 2022ರಲ್ಲಿ 89 ವರ್ಷದ ವೃದ್ಧ ಕಟ್ಟಡ ಗುತ್ತಿಗೆದಾರರ 5 ಸವರನ್ ತೂಕದ ಚಿನ್ನದ ಸರ ಕಳವು ಮಾಡಿದ ಆರೋಪದಲ್ಲಿ ರಾಜಕ್ಕಮಂಗಲಂ ಪೊಲೀಸರು ಮಧುಮಿತಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನಾಗರಕೋಯಿಲ್, ಅ.6: ತಮ್ಮ ಮನೆಯಲ್ಲಿ 118 ಸವರನ್ ಚಿನ್ನಾಭರಣ ಕಳುವಾಗಿದ್ದ ಬಗ್ಗೆ ದೂರು ನೀಡಿ ಸುದ್ದಿಯಾಗಿದ್ದ ಪ್ರಸಿದ್ಧ ಯೂಟ್ಯೂಬರ್ ಮಧುಮಿತಾ ಅವರ ಪ್ರಕರಣಕ್ಕೆ ಇದೀಗ ಅನಿರೀಕ್ಷಿತ ತಿರುವು ಸಿಕ್ಕಿದೆ. 2022ರಲ್ಲಿ 89 ವರ್ಷದ ವೃದ್ಧ ಕಟ್ಟಡ ಗುತ್ತಿಗೆದಾರರ 5 ಸವರನ್ ತೂಕದ ಚಿನ್ನದ ಸರ ಕಳವು ಮಾಡಿದ ಆರೋಪದಲ್ಲಿ ರಾಜಕ್ಕಮಂಗಲಂ ಪೊಲೀಸರು ಮಧುಮಿತಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಿರುನಲ್ವೇಲಿ ಮೂಲದ 89 ವರ್ಷದ ಗುತ್ತಿಗೆದಾರರೊಬ್ಬರು ಈ ಕುರಿತು ದೂರು ನೀಡಿದ್ದಾರೆ. ಬೆನ್ನುನೋವಿನ ಸಮಸ್ಯೆಗೆ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮಧುಮಿತಾ ಅವರ ಪರಿಚಯವಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
2022ರಲ್ಲಿ ಮಧುಮಿತಾ ಕರೆ ಮಾಡಿ ತಿರುನಲ್ವೇಲಿ ನ್ಯಾಯಾಲಯದ ಬಳಿ ಕರೆದುಕೊಂಡು ಹೋಗಿ ಬಸ್ ನಿಲ್ದಾಣದಲ್ಲಿ ಬಿಡುವಂತೆ ಮನವಿ ಮಾಡಿದ್ದರು. ಅದರಂತೆ ಗುತ್ತಿಗೆದಾರರು ತಮ್ಮ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ಬಿಟ್ಟಿದ್ದರು. ಆದರೆ, ಮಧುಮಿತಾ ಕಾರಿನಿಂದ ಇಳಿದು ಹೋದ ಬಳಿಕ ತಮ್ಮ ಕತ್ತಿನಲ್ಲಿದ್ದ 5 ಸವರನ್ ತೂಕದ ಚಿನ್ನದ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಧುಮಿತಾ ಅವರನ್ನು ಪ್ರಶ್ನಿಸಿದಾಗ ಸರವನ್ನು ಹಿಂದಿರುಗಿಸದೆ ಜೀವ ಬೆದರಿಕೆ ಹಾಕಿದ್ದರು ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಮಾನಹಾನಿ ಹಾಗೂ ಅವಮಾನಕ್ಕೆ ಹೆದರಿ ಅಂದು ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ರಾಜಕ್ಕಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಘಟನೆ ನಡೆದ ಸ್ಥಳ ತಿರುನಲ್ವೇಲಿ ಪೊಲೀಸ್ ವ್ಯಾಪ್ತಿಗೆ ಬರುವುದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ತಿರುನಲ್ವೇಲಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿದೆ. ಮಧುಮಿತಾ ವಿರುದ್ಧದ ಆರೋಪಗಳು ಸದ್ಯಕ್ಕೆ ಸಾಬೀತಾಗಿಲ್ಲ.
118 ಸವರನ್ ಚಿನ್ನ ಕಳವು ಪ್ರಕರಣದಲ್ಲಿ ಸಂತ್ರಸ್ತೆಯಾಗಿದ್ದ ಯೂಟ್ಯೂಬರ್
ನಾಗರಕೋಯಿಲ್ ಬಳಿಯ ತಂಬತುಕೋಣಂನಲ್ಲಿರುವ ಮಧುಮಿತಾ ಅವರ ಮನೆಯಲ್ಲಿ ಇತ್ತೀಚೆಗೆ ಕಳ್ಳತನ ನಡೆದಿತ್ತು. ಸುಮಾರು 118 ಸವರನ್ ಚಿನ್ನಾಭರಣ ಕಳವಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿ 98 ಸವರನ್ ಚಿನ್ನವನ್ನು ವಶಪಡಿಸಿಕೊಂಡಿದ್ದರು.
ಮಧುಮಿತಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿನ್ನಾಭರಣ ಹಾಗೂ ಹಣವನ್ನು ಪ್ರದರ್ಶಿಸುತ್ತಿದ್ದ ವೀಡಿಯೊಗಳನ್ನು ಗಮನಿಸಿದ್ದ ಕಳ್ಳರು, ಅದರಿಂದ ಪ್ರೇರಿತರಾಗಿ ಕಳ್ಳತನ ನಡೆಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿತ್ತು ಎನ್ನಲಾಗಿದೆ.
ತಮ್ಮ ಮನೆಯಲ್ಲಿನ ಭಾರೀ ಕಳ್ಳತನದ ಪ್ರಕರಣದಲ್ಲಿ ಸಂತ್ರಸ್ತೆಯಾಗಿ ಸುದ್ದಿಯಾಗಿದ್ದ ಮಧುಮಿತಾ ವಿರುದ್ಧವೇ ಇದೀಗ 2022ರ ಹಳೆಯ ಕಳವು ಆರೋಪದಡಿ ದೂರು ದಾಖಲಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಅಪರಾಧ
Somasekhar-ನಕಲಿ ದಾಖಲೆ ಸೃಷ್ಟಿಸಿ ಕೈದಿಯ ಬಿಡುಗಡೆ..! ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಡಿಐಜಿ ಎಂ. ಸೋಮಶೇಖರ್
ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಬಳಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆಯ ಡಿಐಜಿ ಎಂ. ಸೋಮಶೇಖರ್ (50) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೈದಿಯ ಬಿಡುಗಡೆಗೆ ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರು ಎಂಬ ಆರೋಪವೂ ಸೋಮಶೇಖರ್ ವಿರುದ್ಧ ಕೇಳಿಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಬಳಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆಯ ಡಿಐಜಿ ಎಂ. ಸೋಮಶೇಖರ್ (50) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೈದಿಯ ಬಿಡುಗಡೆಗೆ ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರು ಎಂಬ ಆರೋಪವೂ ಸೋಮಶೇಖರ್ ವಿರುದ್ಧ ಕೇಳಿಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಬೆಳಗಾವಿಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಉತ್ತರ ವಲಯದ ಉಪ ಮಹಾನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸೋಮಶೇಖರ್ ಅವರನ್ನು ಅಕ್ಟೋಬರ್ 4ರಂದು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ಅವರನ್ನು ಅಕ್ಟೋಬರ್ 9ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2004ರ ಜುಲೈ 12ರಂದು ಚಿಕ್ಕಪೇಟೆ ಪೊಲೀಸರು ದಾಖಲಿಸಿದ್ದ ಹಣಕ್ಕಾಗಿ ಅಪಹರಣ ಪ್ರಕರಣದಲ್ಲಿ ಶಂಕರ್ ಆರ್ಮುಗಂಗೆ ಫಾಸ್ಟ್‌ಟ್ರ್ಯಾಕ್ ಕೋರ್ಟ್-1 ಜೀವಾವಧಿ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿತ್ತು. ಶಿಕ್ಷೆಯನ್ನು ಪ್ರಶ್ನಿಸಿ ಅವರು ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಗಳು ತಿರಸ್ಕೃತವಾಗಿದ್ದವು.
ಆದರೆ, 2018ರ ನವೆಂಬರ್ 13ರಂದು ಶಂಕರ್‌ನನ್ನು ಪರಪ್ಪನ ಅಗ್ರಹಾರದ ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಶಂಕರ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದ್ದು, 2018ರ ನವೆಂಬರ್ 2ರಂದು ಆತನನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ ಎಂಬ ರೀತಿಯಲ್ಲಿ ನಕಲಿ ನ್ಯಾಯಾಂಗ ಆದೇಶವನ್ನು ಸಿದ್ಧಪಡಿಸಲಾಗಿತ್ತು. ಇದೇ ನಕಲಿ ದಾಖಲೆಯ ಆಧಾರದ ಮೇಲೆ ಆತನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ಕಾರಾಗೃಹ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ (SDA) ಕಾರ್ಯನಿರ್ವಹಿಸುತ್ತಿದ್ದ ಹಾಗೂ ಪ್ರಸ್ತುತ ಕೈದಿಗಳ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ (FDA) ಕೆಲಸ ಮಾಡುತ್ತಿರುವ ಶ್ರೀಕಾಂತ್ ಎಸ್. ಅವರು ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ನಕಲಿ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ವೇಳೆ ಸೋಮಶೇಖರ್ ಅವರು ಬೆಂಗಳೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿದ್ದರು.
ಶಂಕರ್‌ನ ಬಿಡುಗಡೆಗೆ ಬಳಸಲಾದ ದಾಖಲೆಗಳ ಸತ್ಯಾಸತ್ಯತೆ ಕುರಿತು ಪ್ರಕರಣ ದಾಖಲಾಗಿದ ಬಳಿಕ ಅಕ್ರಮ ಜಾಲ ಬೆಳಕಿಗೆ ಬಂದಿದೆ. ಈ ಪ್ರಕರಣದ ಕುರಿತು ಈಗಾಗಲೇ ತನಿಖೆ ನಡೆದಿದ್ದು, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಶಂಕರ್ ಹೇಳಿಕೊಂಡಿದ್ದಾನೆ. ತನ್ನನ್ನು ಪದೇಪದೇ ವಿವಾದಕ್ಕೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದೂ ಆತ ಆರೋಪಿಸಿದ್ದಾನೆ.
ನಕಲಿ ನ್ಯಾಯಾಂಗ ದಾಖಲೆಗಳನ್ನು ಬಳಸಿ ಶಂಕರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರು ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕರು ಮೇ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ನಕಲಿ ದಾಖಲೆ ಸಿದ್ಧಪಡಿಸಿದ ಆರೋಪದ ಮೇಲೆ ಪೊಲೀಸರು ಶಂಕರ್ ಹಾಗೂ ಶ್ರೀಕಾಂತ್ ಇಬ್ಬರನ್ನೂ ಬಂಧಿಸಿದ್ದರು.
ವಿಚಾರಣೆ ವೇಳೆ, ತಮ್ಮ ಪತಿಯ ಬಿಡುಗಡೆಗೆ ಅಂದಿನ ಮುಖ್ಯ ಅಧೀಕ್ಷಕ ಸೋಮಶೇಖರ್ ನೆರವಾಗಿದ್ದರು ಎಂದು ಶಂಕರ್‌ನ ಪತ್ನಿ ಆರೋಪಿಸಿದ್ದಾರೆ. ಅಲ್ಲದೆ, ಪತಿಯ ಬಿಡುಗಡೆಗೆ ಪ್ರತಿಯಾಗಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ರೀತಿಯ ‘ಒಪ್ಪಂದ’ವನ್ನು ಸೋಮಶೇಖರ್ ಮಾಡಿಕೊಂಡಿದ್ದರು ಎಂದು ಅವರು ಆರೋಪಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖೆ ಮುಂದುವರಿದಂತೆ ಸೋಮಶೇಖರ್ ಅವರು ತನಿಖೆಗೆ ಸಹಕರಿಸದೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂಬುದು ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಅಪರಾಧ
Arrested-ಸುಪ್ರೀಂ ಕೋರ್ಟ್ ಆದೇಶ ನಕಲು ಮಾಡಿ ಕೈದಿ ಬಿಡುಗಡೆ; ಜೈಲು ಡಿಐಜಿ ಸೋಮಶೇಖರ್ ಬಂಧನ
ಸುಪ್ರೀಂ ಕೋರ್ಟ್ ಆದೇಶವನ್ನು ನಕಲು ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಾರಾಗೃಹಗಳ ಉತ್ತರ ವಲಯ ಡಿಐಜಿ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶವನ್ನು ನಕಲು ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಾರಾಗೃಹಗಳ ಉತ್ತರ ವಲಯ ಡಿಐಜಿ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
2018ರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಶಂಕರ್ ಎಂಬಾತನನ್ನು ಬಿಡುಗಡೆ ಮಾಡಲಾಗಿತ್ತು. ಈ ವೇಳೆ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಶ್ರೀಕಾಂತ್ ಎಂಬಾತ, ಶಂಕರ್‌ನ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವಂತೆ ಬಿಂಬಿಸುವ ನಕಲಿ ಆದೇಶವನ್ನು ಸಿದ್ಧಪಡಿಸಿದ್ದ ಎನ್ನಲಾಗಿದೆ.
ಇತ್ತೀಚೆಗೆ ಜೈಲು ದಾಖಲೆಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಜೈಲು ಅಧಿಕಾರಿಗಳು ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಂಕರ್ ಹಾಗೂ ಶ್ರೀಕಾಂತ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ತನಿಖೆ ಮುಂದುವರಿಸಿದ ಪೊಲೀಸರಿಗೆ 2018ರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಆಗಿದ್ದ ಹಾಗೂ ಸದ್ಯ ಕಾರಾಗೃಹ ಇಲಾಖೆಯ ಉತ್ತರ ವಲಯದ ಡಿಐಜಿಯಾಗಿರುವ ಸೋಮಶೇಖರ್ ಅವರ ಪಾತ್ರವೂ ಕೈದಿ ಬಿಡುಗಡೆಯಲ್ಲಿ ಇದೆ ಎಂಬುದು ತಿಳಿದುಬಂದಿದೆ.
-
ದಕ್ಷಿಣ ಕನ್ನಡ18 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
ಅಪರಾಧ18 hours agoSomasekhar-ನಕಲಿ ದಾಖಲೆ ಸೃಷ್ಟಿಸಿ ಕೈದಿಯ ಬಿಡುಗಡೆ..! ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಡಿಐಜಿ ಎಂ. ಸೋಮಶೇಖರ್
-
ಬಿಗ್ ನ್ಯೂಸ್23 hours agoPuttur-ಪುತ್ತೂರಿನಲ್ಲಿ ಆಸರೆ ಇಲ್ಲದೆ ಭಿಕ್ಷಾಟನೆ ಮಾಡುತ್ತಿದ್ದ 60ರ ವ್ಯಕ್ತಿಗೆ ನೆರವು; ಪಚ್ಚನಾಡಿ ಪುನರ್ವಸತಿ ಕೇಂದ್ರಕ್ಕೆ ದಾಖಲು
-
ನಿಧನ ವಾರ್ತೆ17 hours agoPuttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು
-
ಅಪರಾಧ23 hours agoArrested-ಸುಪ್ರೀಂ ಕೋರ್ಟ್ ಆದೇಶ ನಕಲು ಮಾಡಿ ಕೈದಿ ಬಿಡುಗಡೆ; ಜೈಲು ಡಿಐಜಿ ಸೋಮಶೇಖರ್ ಬಂಧನ
-
ಶಿಕ್ಷಣ16 hours agoPhilomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
-
ನಿಧನ ವಾರ್ತೆ17 hours agoDead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ
-
ಬಿಗ್ ನ್ಯೂಸ್17 hours agoPuttur-ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ‘ಭಕ್ತರನ್ನು ಕಡೆಗಣಿಸಿ ಜೀರ್ಣೋದ್ಧಾರ ಸಮಿತಿ ರಚನೆ’ – ವಿಹಿಂಪ ಆಕ್ಷೇಪ


















