Connect with us

Uncategorized

ಬೆಳ್ತಂಗಡಿಯಲ್ಲಿ ತಡ ರಾತ್ರಿ ಕದ್ದು ಮುಚ್ಚಿ ಬಾಲಕಿಯ ಮನೆಗೆ ಬರುತ್ತಿದ್ದ ಬಾಲಕ – ಊರವರ ಹದ್ದಿನ ಕಣ್ಣಿಗೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದ

Published

on



Ad Widget

Ad Widget

Ad Widget

Ad Widget

ಬೆಳ್ತಂಗಡಿ Belthangady ಸೆ 4: 16 ರ ಬಾಲಕಿಗೆ ಲೈಂಗಿಕ ದೌರ್ಜನ್ಯ (Sexual Harasment) ಎಸಗಿದ ಆರೋಪದ ಮೇಲೆ 17ರ ಹರೆಯದ ಅಪ್ರಾಪ್ತ ಬಾಲಕನ ವಿರುದ್ದ ಪೊಕ್ಸೋ ಪಕ್ರರಣ (Pocso) ದಾಖಲಾದ ಘಟನೆ ಬೆಳ್ತಂಗಡಿಯಲ್ಲಿ ಸೆ 3 ರಂದು ನಡೆದಿದೆ. ಬೆಳ್ತಂಗಡಿ ತಾಲೂಕಿನ ನಿಡ್ಲೆ ಸಮೀಪದ ಕುದ್ರಾಯ ಬಳಿ ಕೃತ್ಯ ನಡೆದಿರುವುದಾಗಿ ತಿಳಿದು ಬಂದಿದೆ.

Ad Widget

Ad Widget

Ad Widget

Ad Widget

ಖಾಸಗಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 16 ವರ್ಷದ ಬಾಲಕಿ ಸಂತ್ರಸ್ತೆ. ಧರ್ಮಸ್ಥಳ ಸಮೀಪದ ನಿವಾಸಿ 17 ವರ್ಷದ ಬಾಲಕ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ (A boy in conflict with the law). ಸಂತ್ರಸ್ತ ಬಾಲಕಿ ನೀಡಿದ ದೂರಿನಂತೆ ಐಪಿಸಿ  ಕಲಂ: 376,506  ಐ ಪಿ ಸಿ ಕಲಂ 5(L),6 ಪೋಕ್ಸೋ ಕಾಯ್ದೆ 2012 ಐಪಿಸಿಯಂತೆ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಏನಿದು ಪ್ರಕರಣ :

ನಿಡ್ಲೆ ಸಮೀಪದ ಕುದ್ರಾಯ ಬಳಿ ತಡ ರಾತ್ರಿ ವೇಳೆ ಅಲ್ಲಲ್ಲಿ ಕೆಂಪು ಬಣ್ಣದ ಬೈಕ್‌ ಹಲವು ದಿನಗಳಿಂದ ಕಾಣಿಸುತಿತ್ತು. ನಸುಕಿನ ವೇಳೆ ಮರೆಯಾಗುತಿತ್ತು ಎನ್ನಲಾಗಿದೆ. ಇದನ್ನು ಕೆಲ ದಿನಗಳಿಂದ ಸ್ಥಳೀಯರು ಗಮನಿಸುತ್ತಿದ್ದು, ಇದರ ಹಿಂದೆ ಅಕ್ರಮ ಸಂಬಂಧದ ಛಾಯೆ ಸಾರ್ವಜನಿಕರಿಗೆ ಕಾಣಿಸಿದೆ. ಹೀಗಾಗಿ ಇದನ್ನು ಇನ್ನಷ್ಟು ಸೂಕ್ಷ್ಮವಾಗಿ ಪರಿಶೀಲಿಸಲು ಅವರು ನಿರ್ಧರಿಸಿದ್ದಾರೆ.

Ad Widget

Ad Widget <> Ad Widget

Young Woan suspicious death : ಅಪೂರ್ವ ಶೆಟ್ಟಿ ಅನುಮಾನಸ್ಪದ ಸಾವು : ಇನ್ನೊಬ್ಬನ ಜತೆ ಸಲುಗೆ – ಕಾರಣ ಕೊಲೆಗೆ : 2 ದಿನ ಲಾಡ್ಜ್ ನಲ್ಲಿದ್ದರು ಯುವತಿ ಮತ್ತು ಹಂತಕ ಸ್ನೇಹಿತ



Ad Widget

ಅದರಂತೆ, ಸೆ.2 ರಂದು ರಾತ್ರಿ ಕೂಡ ಅದೇ ಪರಿಸರದಲ್ಲಿ ಶಂಕಿತ ಬೈಕ್‌ ಕಾಣಿಸಿಕೊಂಡಿದೆ. ಹೀಗಾಗಿ ಸ್ಥಳೀಯರು ರಾತ್ರಿಯಿಡಿ ಬೈಕ್‌ ನ ಮಾಲಕ ವಾಪಸ್ಸು ಬರುವುದನ್ನು ಕಾದಿದ್ದಾರೆ. ಬೆಳಗ್ಗಿನ ಜಾವ 5ಗಂಟೆ ಸುಮಾರಿಗೆ ಬಾಲಕ ಬೈಕ್‌ ಬಳಿ ಬರುತ್ತಲೇ ಆತನನ್ನು ಹಿಡಿದು ವಿಚಾರಿಸಿದ್ದಾರೆ ಎನ್ನಲಾಗಿದೆ . ಈ ವೇಳೇ  ಈತ ಸಂತ್ರಸ್ತ ಯುವತಿಯ ಮನೆಗೆ ಕದ್ದು ಮುಚ್ಚಿ ಬರುತ್ತಿರುವ ವಿಚಾರ ತಿಳಿಸಿದ್ದಾನೆ.  ಬಳಿಕ ಬಾಲಕಿಯ ಮನೆಯವರಿಗೆ ಈ ವಿಚಾರವನ್ನು ಸ್ಥಳೀಯರು  ತಿಳಿಸಿದ್ದಾರೆ. ಮುಂದಿನ ಬೆಳವಣಿಗೆಯಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ವಿರುದ್ದ ಪ್ರಕರಣ ದಾಖಲಾಗಿದೆ.

Ad Widget

Ad Widget
ದೂರಿನಲ್ಲಿ ಏನಿದೆ?

ಸಂತ್ರಸ್ತ ಬಾಲಕಿಗೆ  ವರ್ಷಗಳ ಹಿಂದೆ ಇನ್‌ ಸ್ಟಾಗ್ರಾಂ ಮೂಲಕ ಕಾನೂನು ಬಾಲಕನ ಪರಿಚಯವಾಗಿದೆ. ಬಳಿಕ  ಇಬ್ಬರೂ ಪರಸ್ಪರ ಪ್ರೀತಿಸಲು (Love) ಅರಂಭಿಸಿದ್ದಾರೆ.  ಕಾನೂನು ಸಂಘರ್ಷಕ್ಕೊಳಗಾದ ಬಾಲಕ  ಮೇಸೇಜ್ ಮಾಡಿ ದಿನಾಲೂ ದೂರುದಾರರ  ಮನೆಗೆ ಬರುವುದಾಗಿ ತಿಳಿಸುತ್ತಿದ್ದ. ಆ 13 ರಂದು ರಾತ್ರಿ ದೂರುದಾರರು ಮನೆಯಲ್ಲಿದ್ದ ಸಮಯ  ಬಾಲಕ ಅಕೆಗೆ ಮೆಸೇಜ್‌  ಮಾಡಿ “ ತಾನು ಮನೆಗೆ  ಬರುತ್ತಿದ್ದೇನೆ ನೀನು ಬಾಗಿಲು ತೆಗೆಯಬೇಕು ತೆಗೆಯದಿದ್ದರೆ ಮನೆಯವರ ಮುಂದೆ ಗಲಾಟೆ ಮಾಡುತ್ತೇನೆಂದು ಹೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.

Shilpa Shetty : ಗಣೇಶ ವಿಸರ್ಜನೆಯ ವೇಳೆ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ, ಶಮಿತಾ ಶೆಟ್ಟಿ ಸಹೋದರಿಯರ ಸಕ್ಕತ್ ಡ್ಯಾನ್ಸ್ – ಗಾಲಿ ಕುರ್ಚಿಯಲ್ಲಿದ್ದ ಶಿಲ್ಪಾಳ ನೃತ್ಯಕ್ಕೆ ಪಿಧಾ ಆದ ನೆಟ್ಟಿಗರು – ಇಲ್ಲಿದೆ ವಿಡಿಯೋ

 ರಾತ್ರಿ ಎಲ್ಲರೂ ಮಲಗಿದ ಬಳಿಕ ರಾತ್ರಿ 12.00 ಗಂಟೆಯ  ಸುಮಾರಿಗೆ ಬಾಲಕ  ಮನೆಯ ಬಳಿ ಬಂದು,  ಮನೆಯ ಬಳಿ ಬಂದಿರುತ್ತೇನೆಂದು ಮೇಸೇಜ್ ಮಾಡಿದ್ದಾನೆ.  ಈ ವೇಳೆ ಸಂತ್ರಸ್ತೆಯೂ  ಹೆದರಿ ಮನೆಯಲ್ಲಿ ಎಲ್ಲರೂ ಮಲಗಿರುವುದನ್ನು ಖಚಿತ ಪಡಿಸಿಕೊಂಡು ಮನೆಯ ಎದುರಿನ ಬಾಗಿಲಿನ ಚಿಲಕವನ್ನು ತೆಗೆದಿದ್ದಾಳೆ. ಬಳಿಕ ಆಕೆ ತಾನು ಒಬ್ಬಳೇ ಮಲಗಿದ್ದ ರೂಂ ಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ  ಕಾನೂನು ಸಂಘರ್ಷಕ್ಕೊಳಗಾದ ಬಾಲಕ  ಆಕೆಯನ್ನು  ಬಿಗಿದಪ್ಪಿ ವಿರೋಧಿಸಿದರು  ಒತ್ತಾಯ ಪೂರ್ವಕವಾಗಿ  ಸಂಭೋಗ (Intercourse) ನಡೆಸಿದ್ದಾನೆ. ಇದೇ ರೀತಿ ರಾತ್ರಿ ಸಮಯ ಬಂದು 4-5 ಸಲ ಬಂದು ಲೈಂಗಿಕ ಸಂಪರ್ಕ ಮಾಡಿದ್ದಾನೆ. ಈ ಕುರಿತು ಯಾರ ಬಳಿಯಾದರೂ  ಹೇಳಿದರೆ  ಕೊಲ್ಲುವುದಾಗಿ  ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಸೆ 2 ರಂದು ರಾತ್ರಿ  12 ಗಂಟೆ ಸುಮಾರಿಗೂ ಬಾಲಕ ಸಂತ್ರಸ್ತೆಯ ಮನೆಗೆ ಬಂದು ಲೈಂಗಿಕ ಸಂಪರ್ಕ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

Hindu Leader Sucide: ಮಂಗಳೂರು : ಹಿಂದೂ ಮುಖಂಡ ಜಯಂತ್‌ ಕುಂಪಲ ಆತ್ಮಹತ್ಯೆ

Ad Widget
Click to comment

Leave a Reply

Uncategorized

ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್‌ಫುಲ್ |

Published

on



Ad Widget

Ad Widget

Ad Widget

Ad Widget

ಅ. 23ರಂದು ಚಿತ್ರ ಬಿಡುಗಡೆ

Ad Widget

Ad Widget

Ad Widget

Ad Widget

ಬಹು ನಿರೀಕ್ಷಿತ ತುಳು ಚಿತ್ರ ‘ಬನ’ ಮುಂಬೈನಲ್ಲಿ ನಡೆದ ಮೊದಲ ಎರಡು ಪ್ರೀಮಿಯರ್ ಪ್ರದರ್ಶನಗಳಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂಬೈನ ಮುಲುಂದ್ ಮತ್ತು ಕಲ್ಯಾಣ್‌ನಲ್ಲಿ ಶನಿವಾರ ನಡೆದ ಪ್ರದರ್ಶನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡೂ ಕಡೆ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡಿದೆ ಎಂದು ಚಿತ್ರತಂಡ ತಿಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ನಾಗನ ಹಿನ್ನೆಲೆಯನ್ನು ಆಧರಿಸಿದ ಮೊದಲ ತುಳು ಚಿತ್ರ ಎಂಬ ವಿಶೇಷತೆಯೊಂದಿಗೆ ಗಮನ ಸೆಳೆದಿರುವ ‘ಬನ’, ತನ್ನ ಕಥೆ ಮತ್ತು ಕಲಾವಿದರ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಕಥಾಹಂದರ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದು, ಯುವ ಕಲಾವಿದರ ಅಭಿನಯದ ಜತೆಗೆ ಹಿರಿಯ ಕಲಾವಿದರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಪ್ರದರ್ಶನದ ಬಳಿಕ ಕೇಳಿಬಂದಿವೆ.

Ad Widget

Ad Widget <> Ad Widget

ಚಿತ್ರದಲ್ಲಿ ಯುವ ಕಲಾವಿದರು ಅದ್ಭುತವಾಗಿ ನಟಿಸಿದ್ದು, ಕಥೆಯ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಭಿನ್ನ ಕಥಾವಸ್ತು ಹಾಗೂ ಕಲಾವಿದರ ಸಹಜ ಅಭಿನಯ ಚಿತ್ರಕ್ಕೆ ಮೆರುಗು ನೀಡಿದೆ. ತುಳು ಚಿತ್ರರಂಗದಲ್ಲಿ ನಾಗನ ಹಿನ್ನೆಲೆಯನ್ನು ಆಧರಿಸಿದ ಕಥಾವಸ್ತುವಿನೊಂದಿಗೆ ಮೂಡಿಬಂದಿರುವ ‘ಬನ’, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಮುಂಬೈ ತುಳು ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆ ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ.



Ad Widget

ಮುಂಬೈನಲ್ಲಿ ಚಿತ್ರದ ಪ್ರೀಮಿಯರ್ ಪ್ರದರ್ಶನಗಳ ಆಯೋಜನೆಯನ್ನು ಬಾಬಪ್ರಸಾದ್ ಅರಸ ಮತ್ತು ನಾಗಕಿರಣ್ ಶೆಟ್ಟಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಶನಿವಾರ ನಡೆದ ಎರಡೂ ಪ್ರದರ್ಶನಗಳಿಗೆ ಪ್ರೇಕ್ಷಕರ ಉತ್ತಮ ಸ್ಪಂದನೆ ದೊರೆತಿದ್ದು, ಹೌಸ್‌ಫುಲ್ ಪ್ರದರ್ಶನ ಚಿತ್ರತಂಡಕ್ಕೆ ಸಂತಸ ತಂದಿದೆ.

Ad Widget

Ad Widget

ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ತುಳುವರು ತುಳು ಭಾಷೆ ಮತ್ತು ಚಿತ್ರರಂಗದ ಬೆಳವಣಿಗೆಗೆ ನಿರಂತರ ಬೆಂಬಲ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಬನ’ ಚಿತ್ರಕ್ಕೆ ಮುಂಬೈನಲ್ಲಿ ದೊರೆತಿರುವ ಪ್ರತಿಕ್ರಿಯೆ ಚಿತ್ರ ಬಿಡುಗಡೆಗೂ ಮುನ್ನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಅ. 23ರಂದು ಚಿತ್ರ ಬಿಡುಗಡೆ

‘ಬನ’ ಚಿತ್ರವು ಇದೇ ತಿಂಗಳ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮುಂಬೈನ ಪ್ರೀಮಿಯರ್ ಪ್ರದರ್ಶನಗಳಲ್ಲಿ ದೊರೆತಿರುವ ಮೆಚ್ಚುಗೆ, ಚಿತ್ರದ ಅಧಿಕೃತ ಬಿಡುಗಡೆಗೆ ಮುನ್ನ ಸಕಾರಾತ್ಮಕ ವಾತಾವರಣ ನಿರ್ಮಿಸಿದೆ. ವಿಭಿನ್ನ ಕಥಾಹಂದರ ಮತ್ತು ಕಲಾವಿದರ ಅಭಿನಯದ ಮೂಲಕ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿರುವ ‘ಬನ’ ಚಿತ್ರಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಪ್ರತಿಕ್ರಿಯೆ ದೊರೆಯಲಿದೆ ಎಂಬ ಕುತೂಹಲ ತುಳು ಚಿತ್ರಪ್ರೇಮಿಗಳಲ್ಲಿದೆ.

Ad Widget
Continue Reading

Uncategorized

ರಬ್ಬರ್‌ ಗೆ ಭರ್ಜರಿ  ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ

Published

on



Ad Widget

Ad Widget

Ad Widget

Ad Widget

 

Ad Widget

Ad Widget

Ad Widget

Ad Widget

ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್ ಹಾಲು (ಲ್ಯಾಟೆಕ್ಸ್) ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ರಬ್ಬರ್ ಶೀಟ್ ದರದಲ್ಲೂ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪೂರೈಕೆ ಕೊರತೆ, ಹವಾಮಾನ ವೈಪರೀತ್ಯ ಹಾಗೂ ಕೈಗಾರಿಕಾ ವಲಯದ ಹೆಚ್ಚಿದ ಬೇಡಿಕೆಯಿಂದ ರಬ್ಬರ್ ಬೆಲೆ ಚೇತರಿಕೆ ಕಂಡಿದ್ದು, ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ದೇಶೀಯ ಮಾರುಕಟ್ಟೆಯಲ್ಲಿ ಆರ್‌ಎಸ್‌ಎಸ್-4 ದರ್ಜೆಯ ರಬ್ಬರ್ ಶೀಟ್ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು ₹281ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳ ಮೊದಲ ವಾರದಲ್ಲಿ ₹272ಕ್ಕೆ ಇಳಿದಿದ್ದ ದರ, ಬಳಿಕ ಹಂತಹಂತವಾಗಿ ಚೇತರಿಸಿಕೊಂಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹295ರ ಅಧಿಕೃತ ದರ ದಾಖಲಾಗಿದ್ದು, ಕೆಲವು ವಹಿವಾಟುಗಳು ₹300ರ ಮಟ್ಟದಲ್ಲೂ ನಡೆದಿವೆ ಎಂದು ರಬ್ಬರ್ ಉತ್ಪಾದಕರ ಸಂಘಗಳು ತಿಳಿಸಿವೆ. ಇದಕ್ಕೂ ಮೊದಲು ಆಗಸ್ಟ್ 4ರಂದು ದಾಖಲಾಗಿದ್ದ ₹298ರ ಗರಿಷ್ಠ ದರವನ್ನು ಪ್ರಸ್ತುತ ಬೆಲೆ ಮೀರಿದೆ.

Ad Widget

Ad Widget <> Ad Widget

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ರಬ್ಬರ್ ಬೆಲೆ ಏರಿಕೆಯ ಹಾದಿಯಲ್ಲಿದೆ. ಕಳೆದ ತಿಂಗಳ ಮೊದಲ ವಾರದಲ್ಲಿ ಕೆ.ಜಿ.ಗೆ ₹261ಕ್ಕೆ ಇಳಿದಿದ್ದ ಆರ್‌ಎಸ್‌ಎಸ್ ಶೀಟ್ ದರ, ಇದೀಗ ₹275ಕ್ಕೆ ಏರಿಕೆಯಾಗಿದೆ.



Ad Widget

ಪೂರೈಕೆ ಕೊರತೆ, ರೋಗಬಾಧೆ ಪರಿಣಾಮ

Ad Widget

Ad Widget

ಭಾರತ ಸೇರಿದಂತೆ ಪ್ರಮುಖ ರಬ್ಬರ್ ಉತ್ಪಾದಕ ರಾಷ್ಟ್ರಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ರಬ್ಬರ್ ಎಲೆ ಉದುರುವ ರೋಗದ ಬಾಧೆಯಿಂದ ಉತ್ಪಾದನೆ ಕುಸಿದಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಮುಂದುವರಿದಿದ್ದರೂ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಉತ್ಪಾದನೆ ಮತ್ತು ಬೇಡಿಕೆಯ ನಡುವಿನ ಅಂತರವೂ ಬೆಲೆ ಏರಿಕೆಗೆ ಕಾರಣವಾಗಿದೆ.

ಕೃತಕ ರಬ್ಬರ್ ಉತ್ಪಾದನಾ ವೆಚ್ಚ ಹೆಚ್ಚಳ

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಹಾಗೂ ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತಗಳು ಕೃತಕ ರಬ್ಬರ್ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿವೆ. ಕೃತಕ ರಬ್ಬರ್ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕೆಗಳು ನೈಸರ್ಗಿಕ ರಬ್ಬರ್ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ವಾಹನ ಮತ್ತು ಟಯರ್ ತಯಾರಿಕಾ ವಲಯದಿಂದಲೂ ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಮತ್ತಷ್ಟು ಬಲ ನೀಡಿದೆ.

ಆದರೆ ಕಚ್ಚಾ ರಬ್ಬರ್ ಬೆಲೆ ಏರಿಕೆಯಿಂದ ರಬ್ಬರ್ ಆಧಾರಿತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪಾದನಾ ವೆಚ್ಚವೂ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಟಯರ್, ವೈದ್ಯಕೀಯ ಕೈಗವಸು ಹಾಗೂ ಕ್ರೀಡಾ ಪರಿಕರಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಉದ್ಯಮ ವಲಯದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ವಿವಿಧ ದರ್ಜೆಯ ರಬ್ಬರ್ ದರ (ಪ್ರತಿ ಕೆ.ಜಿ.ಗೆ)

ರಬ್ಬರ್ ದರ್ಜೆದೇಶೀಯ ಮಾರುಕಟ್ಟೆಅಂತರರಾಷ್ಟ್ರೀಯ ಮಾರುಕಟ್ಟೆ
ಆರ್‌ಎಸ್‌ಎಸ್-4₹282₹275
ಆರ್‌ಎಸ್‌ಎಸ್-5₹277₹271
ಲ್ಯಾಟೆಕ್ಸ್ (ಶೇ. 60 ಒಣ ರಬ್ಬರ್)₹203₹184
Ad Widget
Continue Reading

Uncategorized

ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ

Published

on



Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರು ಮುಖ್ಯರಸ್ತೆಯ ಸೋಜಾ ಅಲ್ಯೂಮಿನಿಯಂ ಸಂಸ್ಥೆಯ ಎದುರಿನ ವಾಸ್ತವ್ಯವಿಲ್ಲದ ಹಳೆಯ ಕಟ್ಟಡವೊಂದರಲ್ಲಿ ಶನಿವಾರ ನಸುಕಿನ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

Ad Widget

Ad Widget

Ad Widget

Ad Widget

ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದುದನ್ನು ಬೆಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿರ್ದೇಶಕ ರವಿಕುಮಾರ್ ರೈ ಕೆದಂಬಾಡಿ ಮಠ ಅವರು ಗಮನಿಸಿದ್ದಾರೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಅವರು, ಪುತ್ತೂರು ನಗರ ಪೊಲೀಸ್ ಠಾಣೆಗೂ ತೆರಳಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಮಾಹಿತಿ ತಿಳಿದ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸಮಯಕ್ಕೆ ಸರಿಯಾಗಿ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೆಂಕಿ ವ್ಯಾಪಕವಾಗಿ ಹರಡುವುದನ್ನು ತಡೆಯಲು ಸಾಧ್ಯವಾಯಿತು.

Ad Widget

Ad Widget <> Ad Widget

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading