ಕ್ರೀಡೆ
India pakistan cricket match : ಹಾರ್ದಿಕ್ ಅಲ್ ರೌಂಡ್ ಆಟ – ಕೊನೆ ಒವರ್ ನಲ್ಲಿ ರೋಚಕವಾಗಿ ಪಾಕ್ ಮಣಿಸಿದ ಭಾರತ
ದುಬೈ: ಏಷ್ಯಾ ಕಪ್ ಟಿ- 20 ಕ್ರಿಕೆಟ್ ಟೂರ್ನಿಯ Asia cup 2022) ಎರಡನೇ ಪಂದ್ಯದಲ್ಲಿ ಭಾರತ (India) ತನ್ನ ಬದ್ದ ಎದುರಾಳಿ ಪಾಕಿಸ್ತಾನನ್ನು( Pakistan) ರೋಚಕವಾಗಿ ಸೋಲಿಸಿದ್ದಾರೆ. ಕೊನೆಯ ಒವರ್ ನಲ್ಲಿ ಪಂದ್ಯದ ಫಲಿತಾಂಶ ನಿರ್ಣಯಗೊಂಡ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ( Hardik Pandya) ತನ್ನ ಅಲ್ ರೌಂಡ್ ಆಟದಿಂದ ಪಂದ್ಯದ ಹೀರೊ ಎನಿಸಿದರು.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ಮೊದಲಿಗೆ ಬೌಲಿಂಗ್‌ನಲ್ಲಿ ಮೂರು ವಿಕೆಟ್ ಪಡೆದು ಪಾಕಿಸ್ತಾನ ತಂಡ ದೊಡ್ಡ ಮೊತ್ತ ಗಳಿಸುವುದನ್ನು ತಡೆಯುವಲ್ಲಿ ಸಫಲರಾದರು. ಬಳಿಕ ಬ್ಯಾಟಿಂಗ್‌ನಲ್ಲಿಯೂ ಮಿಂಚು ಹರಿಸಿದ ಅವರು ಭಾರತದ ಕೊರಳಿಗೆ ವಿಜಯಲಕ್ಷ್ಮಿ ತೊಡಿಸಿದರು. ಅಂತಿಮ ಮೂರು ಎಸೆತಗಳಲ್ಲಿ ಆರು ರನ್‌ಗಳಿಸುವ ಅಗತ್ಯವಿದ್ದ ಒತ್ತಡದ ಸಂದರ್ಭ ಸಿಕ್ಸರ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಗೆಲುವು ಸಾರಿದರು.
ಇನ್ನು ಬೌಲಿಂಗ್ ನಲ್ಲಿ ಸಾಥ್ ನೀಡಿದ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಕೂಡ ಗೆಲುವಿಗೆ ಮಹತ್ತರ ಕಾಣಿಕೆ ನೀಡಿದರು.
ಇವರಿಬ್ಬರ ಅಮೋಘ ಆಟದ ನೆರವಿನಿಂದ ಭಾರತಕ್ಕೆ ಪಾಕಿಸ್ತಾನ ಎದುರು ಐದು ವಿಕೆಟ್‌ಗಳ ಜಯ ಲಭಿಸಿತು. ಇದರೊಂದಿಗೆ ರೋಹಿತ್ ಶರ್ಮ ಬಳಗ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿತು.
ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ನೇರ ಹಾಗೂ ಲೈವ್ ನಲ್ಲಿ ವೀಕ್ಷಿಸಿದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ಭಾರತ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 148 ರನ್ ಗಳಿಸಿ ಜಯ ಸಾಧಿಸಿತು.
Asia Cup 2002 : ಭುವಿ, ಪಾಂಡ್ಯ ದಾಳಿಗೆ ಬೆದರಿದ ಪಾಕಿಸ್ತಾನ – ಭಾರತಕ್ಕೆ 148 ರನ್ ಗುರಿ
ವಿರಾಟ್ ಕೊಹ್ಲಿ (35), ರವೀಂದ್ರ ಜಡೇಜ (35) ಮತ್ತು ಕೊನೆಯಲ್ಲಿ ಅಬ್ಬರದ ಅಟವಾಡಿದ ಹಾರ್ದಿಕ್ ಪಾಂಡ್ಯ (ಔಟಾಗದೆ 33, 17 ಎ., 4X4, 6X1) ಭಾರತದ ಗೆಲುವನ್ನು ಸುಗಮಗೊಳಿಸಿದರು.
ಪಂದ್ಯದ ಕೊನೆಯ ಓವರ್‌ನಲ್ಲಿ ಭಾರತಕ್ಕೆ ಗೆಲುವಿಗೆ ಏಳು ರನ್‌ಗಳ ಅಗತ್ಯವಿತ್ತು. ಮೊಹಮ್ಮದ್ ನವಾಜ್ ಬೌಲ್ ಮಾಡಿದ ಓವರ್‌ನ ಮೊದಲ ಎಸೆತದಲ್ಲಿ ರವೀಂದ್ರ ಜಡೇಜ ಔಟಾದರು. ಇದು ಭಾರತದ ಅಭಿಮಾನಿಗಳ ಎದೆ ಬಡಿತ ಹೆಚ್ಚುವಂತೆ ಮಾಡಿತ್ತು. ಆದರೆ ಹಾರ್ದಿಕ್ ಅವರು ಆ ಓವತ್ ನ ನಾಲ್ಕನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಗೆಲುವು ತಂದು ಕೊಟ್ಟರು.
ಪಾಕಿಸ್ತಾನ ಬ್ಯಾಟಿಂಗ್ ;
ಟಾಸ್ ಗೆದ್ದ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಭಾರತದ ಬೌಲಿಂಗ್ ನ ಸಾರಥ್ಯ ವಹಿಸಿದ್ದ ಭುವನೇಶ್ವರ್ (26ಕ್ಕೆ 4) ಅತ್ಯುತ್ಕೃಷ್ಟ ಬೌಲಿಂಗ್ ಪ್ರದರ್ಶಿಸಿದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ಅಪಾಯಕಾರಿ ಬಾಬರ್ ಆಜಂ ವಿಕೆಟ್ ಗಳಿಸಿದರು.
ಹಾರ್ದಿಕ್ ಪಾಂಡ್ಯ ಹಾಗೂ ಆವೇಶ್ ಖಾನ್ ಜೊತೆಗೂಡಿ ಮಧ್ಯಮಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ಕ್ರೀಸ್‌ನಲ್ಲಿದ್ದ ರಿಜ್ವಾನ್ ಜೊತೆಗೂಡಿದ ಫಖ್ರ್ ಜಮಾನ್ (10; 6ಎ) ಆರನೇ ಓವರ್‌ನಲ್ಲಿ ಆವೇಶ್ ಖಾನ್ ಎಸೆತದಲ್ಲಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್‌ಗೆ ಕ್ಯಾಚಿತ್ತ ಜಮಾನ್ ನಿರ್ಗಮಿಸಿದರು.
ರಿಜ್ವಾನ್ ಹಾಗೂ ಇಫ್ತಿಕಾರ್ ಅಹಮದ್ (28; 22ಎ) ಮೂರನೇ ವಿಕೆಟ್ ಜೊತೆಯಾಟದಲ್ಲಿ 45 ರನ್ ಸೇರಿಸಿದರು. ಚೇತರಿಕೆಯ ಹಾದಿಯಲ್ಲಿದ ಪಾಕ್ ಗೆ ಈ ಹಂತದಲ್ಲಿ ಹಾರ್ದಿಕ್ ತಮ್ಮ ಸ್ವಿಂಗ್ ಅಸ್ತ್ರಗಳ ಮೂಲಕ ಘಾತಕವಾಗಿ ಕಾಡಿದರು.
13ನೇ ಓವರ್‌ನಲ್ಲಿ ಹಾರ್ದಿಕ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ಇಫ್ತಿಕಾರ್ ವಿಕೆಟ್‌ಕೀಪರ್ ದಿನೇಶ್‌ಗೆ ಕ್ಯಾಚಿತ್ತರು.ಪಾಂಡ್ಯ ಇನ್ನೊಂದು ಓವರ್‌ನಲ್ಲಿ ರಿಜ್ವಾನ್ (43; 42ಎ) ವಿಕೆಟ್ ಗಳಿಸಿದರು.

ಎರಡನೇ ಸ್ಪೆಲ್ ಆರಂಭಿಸಿದ ಭುವನೇಶ್ವರ್ ಎಸೆತದಲ್ಲಿ ಶಾದಾಬ್ ಖಾನ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ನಂತರದ ಎಸೆತದಲ್ಲಿ ಆಸಿಫ್ ಅಲಿ ಕೂಡ ಔಟಾದರು. ಕೊನೆಯ ಓವರ್‌ನಲ್ಲಿ ನಸೀಂ ಶಾ ಕೂಡ ಭುವಿಯ ವಿಕೆಟ್ ಖಾತೆ ಸೇರಿದರು. ಶಾನವಾಜ್ ದಹಾನಿ ಮಾತ್ರ ಎರಡು ಸಿಕ್ಸರ್ ಹೊಡೆದರು.
ಭಾರತದ ಇನ್ನಿಂಗ್ಸ್
ಭಾರತದ ಆರಂಭ ಆಘಾತಕಾರಿಯಾಗಿತ್ತು. ಕೆ.ಎಲ್.ರಾಹುಲ್ (0) ಇನಿಂಗ್ಸ್‌ನ ನಾಲ್ಕನೇ ಎಸೆತದಲ್ಲಿ ನಸೀಂ ಶಾ ಅವರಿಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮ (12, 18 ಎಸೆತ) ಮತ್ತು ಕೊಹ್ಲಿ ಎರಡನೇ ವಿಕೆಟ್‌ಗೆ 49 ರನ್ ಸೇರಿಸಿದರು. ಆದರೆ ತಡಕಾಡುತ್ತಲೇ ಇದ್ದ ಇವರಿಬ್ಬರು ಮೂರು ರನ್‌ಗಳ ಅಂತರದಲ್ಲಿ ನವಾಜ್‌ಗೆ (33ಕ್ಕೆ 3) ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ಸೂರ್ಯಕುಮಾರ್ ಯಾದವ್ (18) ಔಟಾದಾಗ ಸ್ಕೋರ್ 89 ಆಗಿತ್ತು. ಈ ಹಂತದಲ್ಲಿ ಜತೆಯಾದ ಅನುಭವಿ ಜಡೇಜ ಮತ್ತು ಹಾರ್ದಿಕ್ ಐದನೇ ವಿಕೆಟ್‌ಗೆ 52 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಸ್ಕೋರ್ ಕಾರ್ಡ್
ಪಾಕಿಸ್ತಾನ 147 (19.5 ಓವರ್)
ರಿಜ್ವಾನ್ ಸಿ ಆವೇಶ್ ಬಿ ಪಾಂಡ್ಯ 43 (42 ಎ., 4X4, 6X1), ಬಾಬರ್ ಸಿ ಅರ್ಷದೀಪ್ ಬಿ ಭುವನೇಶ್ವರ್ 10 (9 ಎ., 4X2), ಫಖ್ರ್ ಸಿ ಕಾರ್ತಿಕ್ ಬಿ ಆವೇಶ್ 10 (6 ಎ., 4X2), ಇಫ್ತಿಕಾರ್ ಸಿ ಕಾರ್ತಿಕ್ ಬಿ ಪಾಂಡ್ಯ 28 (22 ಎ., 4X2, 6X1), ಖುಷ್‌ದಿಲ್ ಸಿ ಜಡೇಜ ಬಿ ಪಾಂಡ್ಯ 2 (7 ಎ), ಶಾದಾಬ್ ಎಲ್‌ಬಿಡಬ್ಲ್ಯು ಬಿ ಭುವನೇಶ್ವರ್ 10 (9 ಎ., 4X1), ಆಸಿಫ್ ಸಿ ಯಾದವ್ ಬಿ ಭುವನೇಶ್ವರ್ 9 (7 ಎ), ನವಾಜ್ ಸಿ ಕಾರ್ತಿಕ್ ಬಿ ಅರ್ಷದೀಪ್ 1 (3 ಎ), ರವೂಫ್ ಔಟಾಗದೆ 13 (7 ಎ., 4X2), ನಸೀಂ ಎಲ್‌ಬಿಡಬ್ಲ್ಯು ಬಿ ಭುವನೇಶ್ವರ್ 0 (1 ಎ), ದಹಾನಿ ಬಿ ಅರ್ಷದೀಪ್ 16 (6 ಎ., 6X2)
ಇತರೆ 5 (ಬೈ 1, ವೈಡ್ 4)
ವಿಕೆಟ್ ಪತನ:
1-15 (ಬಾಬರ್ ಅಜಂ; 2.4), 2-42 (ಫಖ್ರ್ ಜಮಾನ್; 5.5), 3-87 (ಇಫ್ತಿಕಾರ್ ಅಹಮದ್; 12.1), 4-96 (ಮೊಹಮ್ಮದ್ ರಿಜ್ವಾನ್; 14.1), 5-97 (ಖುಷ್‌ದಿಲ್ ಶಾ; 14.3), 6-112 (ಆಸಿಫ್ ಅಲಿ; 16.3), 7-114 (ಮೊಹಮ್ಮದ್ ನವಾಜ್; 17.1), 8-128 (ಶಾದಾಬ್ ಖಾನ್; 18.2), 9-128 (ನಸೀಂ ಶಾ; 18.3), 10-147 (ಶಾನವಾಜ್ ದಹಾನಿ; 19.5)
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-26-4, ಅರ್ಷದೀಪ್ ಸಿಂಗ್ 3.5-0-33-2, ಹಾರ್ದಿಕ್ ಪಾಂಡ್ಯ 4-0-25-3, ಆವೇಶ್ ಖಾನ್ 2-0-19-1, ಯಜುವೇಂದ್ರ ಚಾಹಲ್ 4-0-32-1, ರವೀಂದ್ರ ಜಡೇಜ 2-0-11-0

ಭಾರತ 5ಕ್ಕೆ 148 (19.4 ಓವರ್)
ರೋಹಿತ್ ಸಿ ಇಫ್ತಿಕಾರ್ ಬಿ ನವಾಜ್ 12 (18 ಎ., 6X1), ರಾಹುಲ್ ಬಿ ನಸೀಂ 0 (1 ಎ), ಕೊಹ್ಲಿ ಸಿ ಇಫ್ತಿಕಾರ್ ಬಿ ನವಾಜ್ 35 (34 ಎ., 4X3, 6X1), ಜಡೇಜ ಬಿ ನವಾಜ್ 35 (29 ಎ., 4X2, 6X2), ಸೂರ್ಯಕುಮಾರ್ ಬಿ ನಸೀಂ 18 (18 ಎ., 4X1) ಹಾರ್ದಿಕ್ ಔಟಾಗದೆ 33 (17 ಎ., 4X4, 6X1), ಕಾರ್ತಿಕ್ ಔಟಾಗದೆ 1 (1 ಎ)
ಇತರೆ 14 (ಲೆಗ್‌ಬೈ5, ವೈಡ್ 9)
ವಿಕೆಟ್ ಪತನ:
1-1 (ಕೆ.ಎಲ್.ರಾಹುಲ್; 0.2), 2-50 (ರೋಹಿತ್ ಶರ್ಮ; 7.6), 3-53 (ವಿರಾಟ್ ಕೊಹ್ಲಿ; 9.1), 4-89 (ಸೂರ್ಯಕುಮಾರ್ ಯಾದವ್; 14.2), 5-141 (ರವೀಂದ್ರ ಜಡೇಜ; 19.1)
ಬೌಲಿಂಗ್:
ನಸೀಂ ಶಾ 4-0-27-2, ಶಾನವಾಜ್ ದಹಾನಿ 4-0-29-0, ಹ್ಯಾರಿಸ್ ರವೂಫ್ 4-0-35-0, ಶಾದಾಬ್ ಖಾನ್ 4-0-19-0, ಮೊಹಮ್ಮದ್ ನವಾಜ್ 3.4-0-33-3
ಕ್ರೀಡೆ
India-West Indies match-ಒಂದೇ ODI ಪಂದ್ಯದಲ್ಲಿ 5 ಶತಕ: ಗುವಾಹಟಿಯಲ್ಲಿ ವಿಶ್ವದಾಖಲೆ ಬರೆದ ಭಾರತ–ವೆಸ್ಟ್ ಇಂಡೀಸ್ ಕದನ
ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಗುವಾಹಟಿ: ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಜಾನ್ ಕ್ಯಾಂಬೆಲ್ (101), ಶಾಯಿ ಹೋಪ್ (104) ಹಾಗೂ ಅಮಿರ್ ಜಾಂಗೋ (114) ಅವರ ಶತಕಗಳ ನೆರವಿನಿಂದ 405 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಇದಕ್ಕೆ ಉತ್ತರವಾಗಿ ಭಾರತ ತಂಡದ ಆರಂಭಿಕರಾದ ನಾಯಕ ಶುಭಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಶತಕ ಸಿಡಿಸಿದರು. ಗಿಲ್ ಅಜೇಯ 223 ರನ್ ಗಳಿಸಿದರೆ, ರೋಹಿತ್ ಶರ್ಮಾ 101 ರನ್ ಬಾರಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 255 ರನ್‌ಗಳ ಭರ್ಜರಿ ಜೊತೆಯಾಟವಾಡಿದರು.
ಒಂದೇ ಪಂದ್ಯದಲ್ಲಿ 5 ಶತಕ
1971ರಲ್ಲಿ ಮೊದಲ ಏಕದಿನ ಪಂದ್ಯ ನಡೆದ ಬಳಿಕ ಇದುವರೆಗೆ 5,023 ODI ಪಂದ್ಯಗಳು ನಡೆದಿವೆ. ಆದರೆ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಇದಕ್ಕೂ ಮೊದಲು ಒಂದೇ ODI ಪಂದ್ಯದಲ್ಲಿ ನಾಲ್ಕು ಶತಕಗಳು ದಾಖಲಾಗಿದ್ದೇ ಗರಿಷ್ಠ ಸಾಧನೆಯಾಗಿತ್ತು. 1998ರಲ್ಲಿ ಲಾಹೋರ್‌ನಲ್ಲಿ ಪಾಕಿಸ್ತಾನ–ಆಸ್ಟ್ರೇಲಿಯಾ ಪಂದ್ಯ, 2013ರಲ್ಲಿ ನಾಗ್ಪುರದಲ್ಲಿ ಭಾರತ–ಆಸ್ಟ್ರೇಲಿಯಾ ಪಂದ್ಯ ಹಾಗೂ 2023ರಲ್ಲಿ ಹೈದರಾಬಾದ್‌ನಲ್ಲಿ ಪಾಕಿಸ್ತಾನ–ಶ್ರೀಲಂಕಾ ಪಂದ್ಯಗಳಲ್ಲಿ ತಲಾ ನಾಲ್ಕು ಶತಕಗಳು ದಾಖಲಾಗಿದ್ದವು.
ವಿಶೇಷವೆಂದರೆ, ಈ ಹಿಂದೆ ನಾಲ್ಕು ಶತಕಗಳು ದಾಖಲಾಗಿದ್ದ ಪಂದ್ಯಗಳೂ ಏಷ್ಯಾ ಖಂಡದಲ್ಲೇ ನಡೆದಿದ್ದವು.
ಒಂದೇ ಇನ್ನಿಂಗ್ಸ್‌ನಲ್ಲಿ 3 ಶತಕ
ವೆಸ್ಟ್ ಇಂಡೀಸ್ ತಂಡದ ಪರ ಜಾನ್ ಕ್ಯಾಂಬೆಲ್, ಶಾಯಿ ಹೋಪ್ ಮತ್ತು ಅಮಿರ್ ಜಾಂಗೋ ಶತಕ ಸಿಡಿಸುವ ಮೂಲಕ ಮತ್ತೊಂದು ಅಪರೂಪದ ದಾಖಲೆಗೂ ಕಾರಣರಾದರು. ಏಕದಿನ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದು ಆರನೇ ಬಾರಿ.
ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್, 2015ರಲ್ಲಿ ದಕ್ಷಿಣ ಆಫ್ರಿಕಾ–ಭಾರತ, 2022ರಲ್ಲಿ ಇಂಗ್ಲೆಂಡ್–ನೆದರ್ಲ್ಯಾಂಡ್ಸ್, 2023ರಲ್ಲಿ ದಕ್ಷಿಣ ಆಫ್ರಿಕಾ–ಶ್ರೀಲಂಕಾ ಹಾಗೂ 2025ರಲ್ಲಿ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪಂದ್ಯಗಳಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿದ್ದರು.
ವೆಸ್ಟ್ ಇಂಡೀಸ್‌ಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದೇ ಮೊದಲ ಅನುಭವವಾಗಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡವೊಂದು ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕಗಳನ್ನು ದಾಖಲಿಸಿರುವುದು ಇದು ಎರಡನೇ ಬಾರಿ.
ಇದರೊಂದಿಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿದರೂ ಪಂದ್ಯ ಸೋತ ಮೊದಲ ತಂಡ ಎಂಬ ಅನಪೇಕ್ಷಿತ ದಾಖಲೆಯೂ ವೆಸ್ಟ್ ಇಂಡೀಸ್ ಪಾಲಾಗಿದೆ.
ಕ್ರೀಡೆ
Asian Games-ಏಷ್ಯನ್ ಗೇಮ್ಸ್ ನಲ್ಲಿ ಮಿಂಚಿದ ಭಾರತದ ಮಹಿಳೆಯರು; 4×400 ರಿಲೇಯಲ್ಲಿ ಚಿನ್ನ, ಹೈಜಂಪ್-ಮಿಶ್ರ ರಿಲೇಯಲ್ಲಿ ಕಂಚು
ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಅಥ್ಲೆಟಿಕ್ಸ್ ತಂಡ ಪದಕಗಳ ಬೇಟೆ ಮುಂದುವರಿಸಿದೆ. ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದ್ದು, ಮಹಿಳೆಯರ ಹೈಜಂಪ್‌ನಲ್ಲಿ ಪೂಜಾ ಸಿಂಗ್ ಕಂಚಿನ ಪದಕ ಹಾಗೂ ಮಿಶ್ರ 4×100 ಮೀಟರ್ ರಿಲೇಯಲ್ಲಿ ಭಾರತ ಕಂಚಿನ ಪದಕ ಗೆದ್ದಿದೆ.
ನಗೋಯಾ: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಅಥ್ಲೆಟಿಕ್ಸ್ ತಂಡ ಪದಕಗಳ ಬೇಟೆ ಮುಂದುವರಿಸಿದೆ. ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದ್ದು, ಮಹಿಳೆಯರ ಹೈಜಂಪ್‌ನಲ್ಲಿ ಪೂಜಾ ಸಿಂಗ್ ಕಂಚಿನ ಪದಕ ಹಾಗೂ ಮಿಶ್ರ 4×100 ಮೀಟರ್ ರಿಲೇಯಲ್ಲಿ ಭಾರತ ಕಂಚಿನ ಪದಕ ಗೆದ್ದಿದೆ.
4×400 ಮೀಟರ್ ರಿಲೇಯಲ್ಲಿ ಬಂಗಾರದ ಓಟ
ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಕಿರಣ್ ಪಹಾಲ್, ಎಂ.ಆರ್. ಪೂವಮ್ಮ, ಪ್ರಾಚಿ ಚೌಧರಿ ಹಾಗೂ ವಿಥ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತ ತಂಡ 3:29.69 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಬಹ್ರೇನ್ 3:30.21 ಸಮಯದೊಂದಿಗೆ ಬೆಳ್ಳಿ ಹಾಗೂ ಚೀನಾ 3:31.02 ಸಮಯದೊಂದಿಗೆ ಕಂಚಿನ ಪದಕ ಗೆದ್ದವು.
ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ತನ್ನ ಮೊದಲ ಚಿನ್ನದ ಪದಕ ಗೆದ್ದಂತಾಗಿದೆ. ವಿಥ್ಯಾ ರಾಮರಾಜ್ ಅವರಿಗೆ ಇದು ಕೂಟದ ಮೂರನೇ ಪದಕವಾಗಿದೆ. ಅವರು ಈ ಹಿಂದೆ ಮಿಶ್ರ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಹಾಗೂ ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಕಂಚು ಗೆದ್ದಿದ್ದರು.
ಹೈಜಂಪ್‌ನಲ್ಲಿ ಪೂಜಾಗೆ ಕಂಚು
ಮಹಿಳೆಯರ ಹೈಜಂಪ್ ಫೈನಲ್‌ನಲ್ಲಿ ಭಾರತದ ಪೂಜಾ ಸಿಂಗ್ 1.84 ಮೀಟರ್ ಎತ್ತರ ಜಿಗಿದು ಕಂಚಿನ ಪದಕ ಗೆದ್ದರು. 1.84 ಮೀಟರ್‌ವರೆಗಿನ ಎತ್ತರವನ್ನು ಅವರು ಯಶಸ್ವಿಯಾಗಿ ದಾಟಿದರೂ, 1.87 ಮೀಟರ್ ಎತ್ತರವನ್ನು ಮೂರು ಪ್ರಯತ್ನಗಳಲ್ಲೂ ದಾಟಲು ಸಾಧ್ಯವಾಗಲಿಲ್ಲ.
ಮಿಶ್ರ 4×100 ಮೀಟರ್ ರಿಲೇಯಲ್ಲಿ ಕಂಚು
ಗುರುಂದರ್‌ವೀರ್ ಸಿಂಗ್, ಸ್ನೇಹಾ ಸತ್ಯನಾರಾಯಣ, ಅನಿಮೇಶ್ ಕುಜುರ್ ಹಾಗೂ ಹರಿತಾ ಭದ್ರಾ ಅವರನ್ನೊಳಗೊಂಡ ಭಾರತ ತಂಡ ಮಿಶ್ರ 4×100 ಮೀಟರ್ ರಿಲೇಯಲ್ಲಿ 41.06 ಸೆಕೆಂಡ್‌ಗಳ ಋತುವಿನ ಅತ್ಯುತ್ತಮ ಸಮಯದೊಂದಿಗೆ ಕಂಚಿನ ಪದಕ ಗೆದ್ದಿತು.
ಚೀನಾ 40.78 ಸೆಕೆಂಡ್‌ಗಳಲ್ಲಿ ಚಿನ್ನ ಹಾಗೂ ಥೈಲ್ಯಾಂಡ್ 40.87 ಸೆಕೆಂಡ್‌ಗಳಲ್ಲಿ ಬೆಳ್ಳಿ ಪದಕ ಗೆದ್ದವು. ಭಾರತ 41.06 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆಯಿತು
ಕ್ರೀಡೆ
Fariba-ತಾಲಿಬಾನ್ ಆಡಳಿತದಲ್ಲಿ ಮಹಿಳೆಯರಿಗೆ ನಿರ್ಬಂಧ: ಪುರುಷರ ರೀತಿ ವೇಷ ಧರಿಸಿ ತರಬೇತಿ ಪಡೆದು ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಅಫ್ಘಾನಿಸ್ತಾನದ ಮೊದಲ ಮಹಿಳಾ ಕ್ರೀಡಾಪಟು ಫರೀಬಾ..!
ತಾಲಿಬಾನ್ ಆಡಳಿತದ ಕಠಿಣ ನಿರ್ಬಂಧಗಳು, ಹಿಂಸಾಚಾರ ಹಾಗೂ ಜೀವಭಯದ ನಡುವೆಯೂ ಕ್ರೀಡಾ ಕನಸನ್ನು ಜೀವಂತವಾಗಿರಿಸಿಕೊಂಡಿದ್ದ ಅಫ್ಘಾನಿಸ್ತಾನದ ಯುವ ಸೈಕ್ಲಿಸ್ಟ್ ಫರೀಬಾ ಹಾಶಿಮಿ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಐಚಿ-ನಗೋಯಾ: ತಾಲಿಬಾನ್ ಆಡಳಿತದ ಕಠಿಣ ನಿರ್ಬಂಧಗಳು, ಹಿಂಸಾಚಾರ ಹಾಗೂ ಜೀವಭಯದ ನಡುವೆಯೂ ಕ್ರೀಡಾ ಕನಸನ್ನು ಜೀವಂತವಾಗಿರಿಸಿಕೊಂಡಿದ್ದ ಅಫ್ಘಾನಿಸ್ತಾನದ ಯುವ ಸೈಕ್ಲಿಸ್ಟ್ ಫರೀಬಾ ಹಾಶಿಮಿ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಜಪಾನ್‌ನ ಐಚಿ ಪ್ರಾಂತ್ಯದ ಶಿನ್‌ಶಿರೋ ಸೈಕ್ಲಿಂಗ್ ರೋಡ್ ಕೋರ್ಸ್‌ನಲ್ಲಿ ಸೆ.22ರಂದು ನಡೆದ ಮಹಿಳೆಯರ 90.4 ಕಿ.ಮೀ. ವೈಯಕ್ತಿಕ ರೋಡ್ ರೇಸ್‌ನಲ್ಲಿ 23 ವರ್ಷದ ಫರೀಬಾ ಬೆಳ್ಳಿ ಪದಕ ಗೆದ್ದರು. ಇದರೊಂದಿಗೆ 2002ರ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಅಫ್ಘಾನಿಸ್ತಾನದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ರೋಚಕವಾಗಿ ನಡೆದ ಫೈನಲ್‌ನಲ್ಲಿ ಫರೀಬಾ ಹಾಗೂ ಚಿನ್ನದ ಪದಕ ಗೆದ್ದ ಚೀನಾದ ಗುವೋ ಲಿ ಇಬ್ಬರೂ 2 ಗಂಟೆ 50 ನಿಮಿಷ 05 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮೊದಲ ಎರಡು ಲ್ಯಾಪ್‌ಗಳಲ್ಲಿ ಫರೀಬಾ ಮುನ್ನಡೆ ಸಾಧಿಸಿದ್ದರು. ಆದರೆ ಅಂತಿಮ 300–400 ಮೀಟರ್‌ಗಳಲ್ಲಿ ಗುವೋ ಲಿ ಅತ್ಯಲ್ಪ ಅಂತರದಲ್ಲಿ ಮುನ್ನಡೆ ಪಡೆದು ಸ್ವರ್ಣ ಪದಕ ಗೆದ್ದರು. ಹಾಂಗ್‌ಕಾಂಗ್‌ನ ಲಿಯಾಂಗ್ ವಿಂಗ್ ಯೀ ಕಂಚಿನ ಪದಕ ಪಡೆದರು.
ಇದಕ್ಕೂ ಎರಡು ದಿನಗಳ ಮೊದಲು ನಡೆದ 24.2 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಫರೀಬಾ ಏಳನೇ ಸ್ಥಾನ ಪಡೆದಿದ್ದರು.
ವೇಷ ಬದಲಿಸಿ ಸೈಕ್ಲಿಂಗ್ ತರಬೇತಿ
ಉತ್ತರ ಅಫ್ಘಾನಿಸ್ತಾನದ ಫರ್ಯಾಬ್ ಪ್ರಾಂತ್ಯದ ಫರೀಬಾ ತಮ್ಮ 15ನೇ ವಯಸ್ಸಿನಲ್ಲಿ ಅಕ್ಕ ಯುಲ್ದುಜ್ ಹಾಶಿಮಿ ಅವರ ಪ್ರೇರಣೆಯಿಂದ ಸೈಕ್ಲಿಂಗ್ ಆರಂಭಿಸಿದ್ದರು. ಮಹಿಳೆಯರು ಸಾರ್ವಜನಿಕವಾಗಿ ಸೈಕಲ್ ಚಲಾಯಿಸುವುದಕ್ಕೆ ವಿರೋಧವಿದ್ದ ಸಾಂಪ್ರದಾಯಿಕ ವಾತಾವರಣದಲ್ಲಿ ಗುರುತು ಪತ್ತೆಯಾಗದಂತೆ ಪುರುಷರ ವೇಷ ಧರಿಸಿ ಅವರು ತರಬೇತಿ ಪಡೆಯುತ್ತಿದ್ದರು.
ಮುಖಕ್ಕೆ ಎರಡು-ಮೂರು ಮಾಸ್ಕ್‌ಗಳು, ಹೆಡ್‌ಸ್ಕಾರ್ಫ್ ಹಾಗೂ ಸನ್‌ಗ್ಲಾಸ್ ಧರಿಸಿ ಸೈಕ್ಲಿಂಗ್ ಮಾಡುತ್ತಿದ್ದ ಫರೀಬಾ ಮತ್ತು ಅವರ ಸಹೋದರಿಗೆ ತರಬೇತಿ ವೇಳೆ ಜನರು ಕಲ್ಲು, ಬಾಟಲಿ ಎಸೆದು ನಿಂದಿಸುತ್ತಿದ್ದರು. ಇದೇ ವೇಳೆ ನಡೆದ ರಿಕ್ಷಾ ಅಪಘಾತದಲ್ಲಿ ಯುಲ್ದುಜ್ ಅವರ ಮಣಿಕಟ್ಟು ಮುರಿದ ಘಟನೆಯೂ ನಡೆದಿದೆ.
ತಾಲಿಬಾನ್ ಆಡಳಿತದ ಬಳಿಕ ದೇಶತ್ಯಾಗ
2020ರಲ್ಲಿ ಫರೀಬಾ ಮತ್ತು ಯುಲ್ದುಜ್ ಅಫ್ಘಾನಿಸ್ತಾನದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಕ್ರೀಡೆಗಳ ಮೇಲಿನ ನಿರ್ಬಂಧದಿಂದಾಗಿ ಅವರ ಕ್ರೀಡಾ ಬದುಕಿಗೂ ಸಂಕಷ್ಟ ಎದುರಾಯಿತು.
ಮಾಜಿ ವಿಶ್ವ ಚಾಂಪಿಯನ್ ಅಲೆಸ್ಸಾಂಡ್ರಾ ಕ್ಯಾಪೆಲ್ಲೊಟ್ಟೊ ಅವರ ನೆರವಿನಿಂದ ಸಹೋದರಿಯರು ಇಟಲಿಗೆ ವಲಸೆ ಹೋದರು. ಅಲ್ಲಿ ತರಬೇತಿ ಮುಂದುವರಿಸಿದ ಫರೀಬಾ 2022ರಲ್ಲಿ ಅಫ್ಘಾನ್ ರಾಷ್ಟ್ರೀಯ ಚಾಂಪಿಯನ್ ಆದರು. ಅಲ್ಲದೆ, UCI ರೇಸ್ ಗೆದ್ದ ಮೊದಲ ಅಫ್ಘಾನ್ ಮಹಿಳಾ ಸೈಕ್ಲಿಸ್ಟ್ ಎಂಬ ಸಾಧನೆ ಮಾಡಿದರು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಅಫ್ಘಾನಿಸ್ತಾನವನ್ನು ಪ್ರತಿನಿಧಿಸಿದ್ದರು.
‘ಅಫ್ಘಾನ್ ಮಹಿಳೆಯರ ಶಕ್ತಿಯ ಸಂಕೇತ’
ಬೆಳ್ಳಿ ಪದಕ ಗೆದ್ದ ಬಳಿಕ ಮಾತನಾಡಿದ ಫರೀಬಾ, ಈ ಪದಕ ಅಫ್ಘಾನ್ ಮಹಿಳೆಯರ ಪ್ರತಿರೋಧ ಮತ್ತು ಶಕ್ತಿಯ ಸಂಕೇತವಾಗಿದೆ ಎಂದು ಹೇಳಿದರು.
“ನಾವು ಇಂದಿಗೂ ಬದುಕುಳಿದಿದ್ದೇವೆ ಮತ್ತು ಹೋರಾಡುತ್ತಿದ್ದೇವೆ ಎಂಬುದಕ್ಕೆ ಇದು ಸಾಕ್ಷಿ. ನನ್ನ ಮೇಲೆ ಬಿದ್ದ ಪ್ರತಿಯೊಂದು ಕಲ್ಲು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಶಕ್ತಿಯನ್ನು ನೀಡಿತು. ಮುಂದಿನ ಪೀಳಿಗೆಯ ಅಫ್ಘಾನ್ ಹೆಣ್ಣುಮಕ್ಕಳು ಯಾವುದೇ ಭಯವಿಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಾಗಲಿ” ಎಂದು ಅವರು ಆಶಯ ವ್ಯಕ್ತಪಡಿಸಿದರು.
ತಾಲಿಬಾನ್ ಆಡಳಿತದ ಬಳಿಕ ಅಫ್ಘಾನ್ ಮಹಿಳಾ ಕ್ರೀಡಾಪಟುಗಳ ಪರಿಸ್ಥಿತಿ ಜಾಗತಿಕ ಗಮನ ಸೆಳೆದಿದೆ. ನಿರಾಶ್ರಿತರಾಗಿರುವ ಅಫ್ಘಾನಿಸ್ತಾನದ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆಯುತ್ತಿರುವ ವರದಿಗಳೂ ಈ ಹಿಂದೆ ಪ್ರಕಟವಾಗಿದ್ದವು.
-
ಬಿಗ್ ನ್ಯೂಸ್24 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಬಿಗ್ ನ್ಯೂಸ್23 hours agoSDPI-ಮಕ್ಕಳ ಆಟದ ಉಪಕರಣಗಳೇ ಹಾಳು: ಕಾರಂತರ ಬಾಲವನದ ದುಸ್ಥಿತಿಗೆ ಎಸ್ಡಿಪಿಐ ಅಸಮಾಧಾನ
-
ಬಿಗ್ ನ್ಯೂಸ್22 hours agoReservation-ದ.ಕ. ಜಿ.ಪಂ., ತಾ.ಪಂ. ಮೀಸಲಾತಿ ಪ್ರಕಟ: ಮಹಿಳೆಯರಿಗೆ ತಾ.ಪಂ. 65, ಜಿ.ಪಂ. 18 ಸ್ಥಾನ ಮೀಸಲು
-
ಅಪರಾಧ22 hours agoDigital Arrest-‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 75 ವರ್ಷದ ಮಹಿಳೆಗೆ ₹2 ಕೋಟಿ ವಂಚನೆ
-
ಅಂತರ ರಾಜ್ಯ21 hours agoNana Patekar-ಕಾರ್ಗಿಲ್ ಯುದ್ಧದ ವೇಳೆ ಸೈನಿಕನಾಗಿಯೂ ದೇಶ ಸೇವೆ ಮಾಡಿದ್ದ ನಾನಾ ಪಾಟೇಕರ್
-
ಅಂತರ ರಾಜ್ಯ21 hours agoDK Shivakumar-‘ಸ್ಟಿಂಗ್ ಆಪರೇಷನ್’ ಬಗ್ಗೆ ಎಲ್ಲಾ ಮಾಹಿತಿ ಇದೆ..! ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ : ಇದರ ಪಿತಾಮಹ ಯಾರೆಂದೂ ತಿಳಿದಿದೆ : ಡಿಕೆಶಿ ಸ್ಫೋಟಕ ಹೇಳಿಕೆ
-
ಅಂತರ ರಾಜ್ಯ23 hours agoCEC Jnanesh Kumar-ವಿಪಕ್ಷಗಳ ಪ್ರತಿಭಟನೆ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ನಿವಾಸಕ್ಕೆ ತೀವ್ರ ಭದ್ರತೆ
-
ಮಂಗಳೂರು20 hours agoMangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ


















