ಸುಳ್ಯ
Praveen Nettar Murder : ಮತ್ತೋರ್ವ ಆರೋಪಿ ಬಂಧನ – ಹತ್ಯೆಯಲ್ಲಿ ಮತೀಯ ಸಂಘಟನೆಯ ಕೈವಾಡ ?
ಪುತ್ತೂರು : ಅ 9 : ಬಿಜೆಪಿ ಯುವ ನಾಯಕ ( Bjp Youth Leader) ಪ್ರವೀಣ್ ನೆಟ್ಟಾರ್ ಹತ್ಯೆ ( Praveen Nettar Murder ) ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ದಕ್ಷಿಣಕನ್ನಡದ ( Dakshina Kannada) ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಒಟ್ಟು ಬಂಧಿತರ ಸಂಖ್ಯೆ 7ಕ್ಕೆ ಏರಿದೆ. ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಅಬ್ದುಲ್ ಕಬೀರ್ ಸಿ.ಎ ಬಂಧಿತ ಆರೋಪಿ. ಆದರೇ ಈ ಹತ್ಯೆಯ ಸೂತ್ರದಾರ ಹಾಗೂ ಮಚ್ಚು ಬೀಸಿ ಹತ್ಯೆ ಮಾಡಿದವರ ಬಂಧನ ಇನ್ನಷ್ಟೇ ಆಗಬೇಕಿದೆ. ಪ್ರವೀಣ್ ಹತ್ಯೆ ನಡೆದು ಇಂದಿಗೆ ಭರ್ತಿ ಎರಡು ವಾರಗಳು ಪೂರ್ತಿಯಾಗಿದೆ.
ಅಬ್ದುಲ್ ಕಬೀರ್ ಬಂಧನ ಯಾಕಾಗಿ?
ಅಬ್ದುಲ್ ಕಬೀರ್ ಪ್ರವೀಣ್ ಹತ್ಯೆಯ ಸಂಚು ರೂಪಿಸಿದ ಹಾಗೂ ಅದರ ಯೋಜನೆಗಳನ್ನು ಸಿದ್ದ ಪಡಿಸುವ ಕಾರ್ಯದ ಭಾಗವಾಗಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಣೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಈ ಹತ್ಯೆಯನ್ನು 15 ಜನರ ತಂಡ ಮಾಡಿದೆ. ಈಗಾಗಲೇ 7 ಜನರ ಬಂಧನವಾಗಿದ್ದು, ಇನ್ನು ಅರ್ಧಕ್ಕಿಂತ ಹೆಚ್ಚು ಜನರ ಬಂಧನವಾಗಲು ಬಾಕಿಯಿದೆ ಎನ್ನಲಾಗುತ್ತಿದೆ. ಇದರಲ್ಲಿ ಬೈಕ್ ನಲ್ಲಿ ಬಂದು ಮೂವರು ಹಂತಕರು ಹಾಗೂ ಅವರನ್ನು ಹತ್ಯೆಗೆ ಸಿದ್ದಪಡಿಸಿದ್ದ ಮಾಸ್ಟರ್ ಮೈಂಡ್ ಕೂಡ ಸೇರಿದ್ದಾನೆ ಎಂದು ಹೇಳಲಾಗುತ್ತಿದೆ.
ಉಳಿದವರ ಬಂಧನ ಯಾವಾಗ ?
ಈಗಾಗಲೇ ಕೃತ್ಯದಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲ ಆರೋಪಿಗಳ ಗುರುತು ಪತ್ತೆ ಹಚ್ಚಲಾಗಿದೆ. ಅವರ ಪತ್ತೆಗಾಗಿ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ. ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಸೋನಾವಣೆಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾದ ಎಲ್ಲ ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು ಸುಳ್ಯ ಹಾಗೂ ಕಡಬ ತಾಲೂಕಿಗೆ ಸೇರಿದವರು ಎಂದು ಹೇಳಲಾಗುತ್ತಿದೆ . ಅದರಲ್ಲೂ ಬಹುಪಾಲು ಆರೋಪಿಗಳು ಪ್ರವೀಣ್ ವಾಸಿಸುತ್ತಿದ್ದ ಬೆಳ್ಳಾರೆ ಠಾಣಾ ವ್ಯಾಪ್ತಿಯವರು ಎಂದು ಹೇಳಲಾಗುತ್ತಿದೆ.
ಮತೀಯ ಸಂಘಟನೆಯ ಕೈವಾಡ ?
ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಮತೀಯ ಸಂಘಟನೆಯೊಂದರ ( communally provocative organization) ಸಂಪರ್ಕವಿದೆ ಎಂದು ಮೂಲಗಳು ತಿಳಿಸಿವೆ. ಬೆಳ್ಳಾರೆಯಲ್ಲಿ ರಾಜ್ಯ ಮಟ್ಟದ ನಾಯಕರನ್ನು ಹೊಂದಿರುವ ಮತೀಯ ಸಂಘಟನೆಯೊಂದು ಈ ಹತ್ಯೆಯನ್ನು ತನ್ನ ಕಾರ್ಯಕರ್ತರ ಮೂಲಕ ಪ್ರಾಯೋಜಿಸಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದಕ್ಕೆ ಪಕ್ಷವೊಂದರ ಕಛೇರಿಯನ್ನು ಬಳಸಲಾಗಿದೆ ಎನ್ನುವ ಗುಮಾನಿ ಇದ್ದು, ಇದಕ್ಕೆ ಬೇಕಾದ ಸಾಕ್ಷ್ಯಗಳ ಸಂಗ್ರಹದಲ್ಲಿ ಪೊಲೀಸರು ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಎಸ್ಡಿಪಿಐ ಕಛೇರಿಯಲ್ಲಿ ಪೊಲೀಸರಿಂದ ಮಹಜರು
ಪ್ರವೀಣ್ ಹತ್ಯೆಯಲ್ಲಿ ಬಂಧಿತರಾದ 5ನೇ ಹಾಗೂ 6 ನೇ ಆರೋಪಿಗಳನ್ನು ಬುಧವಾರ ಸುಳ್ಯ ಹಾಗೂ ಬೆಳ್ಳಾರೆಯ ಎಸ್ಡಿಪಿಐ (SDPI) ಕಛೇರಿಗೆ ಕರೆದುಕೊಂಡು ಹೋಗಿ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಇದೇ ಕಛೇರಿಯಲ್ಲಿ ಕೂತು ಆರೋಪಿಗಳು ಕೃತ್ಯದ ಸಂಚು ಹಾಗೂ ಅದರ ಸಿದ್ದತೆಯ ಚರ್ಚೆ ನಡೆಸಿದ್ದರು ಎಂಬ ಅನುಮಾನಗಳು ದಟ್ಟವಾಗಿದೆ.
ತರಬೇತಿ ?
ಯುವಕರಲ್ಲಿ ಧರ್ಮದ ಉನ್ಮಾದವನ್ನು ಸೃಷ್ಟಿಸಿ ಅದರ ಮೂಲಕ ಅವರನ್ನು ಹತ್ಯೆಗೆ ಪ್ರೇರೆಪಿಸಲಾಗಿದೆ . ಅದಕ್ಕಾಗಿ ವಾಟ್ಸಪ್ ಟೆಲಿಗ್ರಾಮ್ ಇತ್ಯಾದಿ ಗುಪ್ತಚಾರ ಇಲಾಖೆಗೆ ಸುಲಭದಲ್ಲಿ ಟ್ರೇಸ್ ಮಾಡಲಾಗದ ಸಂಹವನ ವ್ಯವಸ್ಥೆಯನ್ನು ಬಳಸಿಕೊಂಡಿದ್ದಾರೆ ಅದರ ಮೂಲಕ ಚಾಟ್ , ಕಾಲ್ ಮಾಡಿ ಯುವಕರನ್ನು ಹತ್ಯೆಗೆ ಪ್ರೇರೆಪಿಸಲಾಗಿದೆ.ಅವರನ್ನು ಬ್ರೈನ್ ವಾಶ್ ಮಾಡುವ ತರಭೇತಿಗಳನ್ನು ಇಲ್ಲಿನ ಅಯಕಟ್ಟಿನ ಜಾಗವೊಂದರಲ್ಲಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಾಕ್ಷ್ಯ ಸಿಗದಿರುವ ರೀತಿ ಸಾಕಷ್ಟು ಎಚ್ಚರ ವಹಿಸಲಾಗಿದು ಇದೇ ವಿಚಾರ ಪೊಲೀಸರಿಗೆ ತನಿಖೆಯಲ್ಲಿ ಭಾರೀ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ
ಸುಳ್ಯ
ಸುಳ್ಯ :ಗ್ಯಾರೇಜ್‌ನಲ್ಲಿ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಸುಳ್ಯ ಐವರ್ನಾಡು ನಿವಾಸಿ ದಯಾನಂದ (30) ಹಾಗೂ ಸುಳ್ಯ ಕಸಬಾ ನಿವಾಸಿ ದರ್ಶನರಾಜು (23) ಎಂದು ಗುರುತಿಸಲಾಗಿದೆ.
ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕದಲ್ಲಿ ಆ.26ರ ರಾತ್ರಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.120/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 326(g) ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಸುಳ್ಯ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಸುಳ್ಯ
Dr. Deviprasad Kanattur-ಪಂಜ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮೇಲೆ ಅವ್ಯವಹಾರದ ಆರೋಪ; ಸತ್ಯ ಪ್ರಮಾಣಕ್ಕೆ ಡಾ. ದೇವಿಪ್ರಸಾದ್ ಕಾನತ್ತೂರ್ ನಿರ್ಧಾರ
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.
ಆಗಸ್ಟ್ 31 ರಂದು ಸೋಮವಾರ ಪೂರ್ವಾಹ್ನ ಶ್ರೀ ದೇವರು ಜಳಕ ಮಾಡುವ ಪವಿತ್ರ ನಾಗತೀರ್ಥ ನದಿಯಲ್ಲಿ ಸ್ನಾನಮಾಡಿ ದೇಗುಲದ ನಡೆಯಲ್ಲಿ ಬೆಳಗ್ಗಿನ ಮಹಾಪೂಜೆಯ ನಂತರ ನಾನು ಯಾವ ಅವ್ಯವಹಾರ ಮಾಡಿಲ್ಲ ಎಂದು ಸತ್ಯ ಪ್ರಮಾಣ ಮಾಡುತ್ತೇನೆ. ನನ್ನ ಮೇಲೆ ಸುಳ್ಳು ಆರೋಪ ಮಾಡಿದವರಿಗೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರು ಹಾಗೂ ಪರಿವಾರ ದೈವಗಳು ಉತ್ತರ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಯಾರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರೂ ಪ್ರಮಾಣಕ್ಕೆ ಬರಲಿ ಎಂದು ಅವರು ತಿಳಿಸಿದ್ದಾರೆ.
ಸುಳ್ಯ
B.C. Road-ಬಿ.ಸಿ.ರೋಡು: ಸೆ.13ರಂದು ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ನಿ. ಇದರ ಸುಳ್ಯ ಶಾಖೆಯ ಉದ್ಘಾಟನಾ ಸಮಾರಂಭ
ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ನಿ. ಬಿ.ಸಿ.ರೋಡು ಇದರ ಸುಳ್ಯ ಶಾಖೆಯ ಉದ್ಘಾಟನಾ ಸಮಾರಂಭ ಸೆ.13ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಸುಳ್ಯದ ಗಾಂಧೀನಗರದಲ್ಲಿರುವ ಆರ್.ಕೆ. ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಬಂಟ್ವಾಳ: ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ನಿ. ಬಿ.ಸಿ.ರೋಡು ಇದರ ಸುಳ್ಯ ಶಾಖೆಯ ಉದ್ಘಾಟನಾ ಸಮಾರಂಭ ಸೆ.13ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಸುಳ್ಯದ ಗಾಂಧೀನಗರದಲ್ಲಿರುವ ಆರ್.ಕೆ. ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥೀ ಮುರುಳ್ಯ ನೂತನ ಶಾಖೆ ಉದ್ಘಾಟಿಸುವರು. ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಮಡಲ ನಿ. ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ ಭದ್ರತಾ ಕೋಶ ಉದ್ಘಾಟಿಸುವರು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಕಂಪ್ಯೂಟರ್ ಉದ್ಘಾಟಿಸುವರು, ಸುಳ್ಯ ಕೆವಿಜೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕೆ.ವಿ. ಚಿದಾನಂದ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕ ಕೆ.ಪಿ.ಜೋನಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಾಫ, ಸುಳ್ಯ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್, ಅಜ್ಜಾವರ ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ರಾಮಣ್ಣ ಪೂಜಾರಿ ಪಿ.ಕೆ., ಸುಳ್ಯ ತಾಲೂಕು ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ. ಸುಧಾಕರ ರೈ, ಸುಳ್ಯ ತಾಲೂಕು ಬಿಎಂಎಸ್ ಅಧ್ಯಕ್ಷ ಪ್ರಕಾಶ್ ಎಂ.ಎಸ್., ಆರ್.ಕೆ. ಕಾಂಪ್ಲೆಕ್ಸ್ ಮಾಲಕ ರಾಮಕೃಷ್ಣ ರೈ ವಿಶೇಷ ಅಭ್ಯಾಗತರಾಗಿ ಭಾಗವಹಿಸುವರು.

ಮಹಾಮಂಡಲ ಸ್ಥಾಪನೆಯ ಹಿನ್ನೆಲೆ:
ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲವು 1953ರಲ್ಲಿ ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ವ್ಯಾಪ್ತಿಯನ್ನು ಹೊಂದಿಕೊಂಡು ದ.ಕ. ಜಿಲ್ಲಾ ತಾಳೆ ಮತ್ತು ತೆಂಗು ಬೆಲ್ಲ ಮಾರಾಟ ಸಂಯುಕ್ತ ಸಂಘ ಹೆಸರಿನಲ್ಲಿ, ದಿ.ದಾಮೋದರ ಆರ್. ಸುವರ್ಣ ನಾಯಕತ್ವದಲ್ಲಿ 130 ತಾಳೆಬೆಲ್ಲ ಪ್ರಾಥಮಿಕ ಸಹಕಾರಿ ಸಂಘಗಳ ಸದಸ್ಯತ್ವದಿಂದ 9 ಜನ ನಿರ್ದೇಶಕರ ಆಡಳಿತ ಮಂಡಳಿಯೊಂದಿಗೆ ಸ್ಥಾಪನೆಯಾಯಿತು. ಆರಂಭದಲ್ಲಿ ಮಂಗಳೂರು ಕೊಡಿಯಾಲ್ ಬೈಲ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಟ್ಟಡದಲ್ಲಿ ಕಛೇರಿ ಹೊಂದಿ ನಂತರ ಮಂಗಳೂರು ಪಂಪ್‌ವೆಲ್‌ಗೆ ಸ್ಥಳಾಂತರಗೊಂಡಿತು. ಮೂರ್ತೆದಾರಿಕೆಯನ್ನು ನಿಷೇಧಿಸುವ ಸಂದರ್ಭ ಬಂದಾಗ ಕೋಟ ಶ್ರೀನಿವಾಸ ಪೂಜಾರಿ, ಶ್ರೀಧರ್ ಕಲ್ಯಾಡಿ, ರಾಜಕೀಯ ಹಾಗೂ ಬಿಲ್ಲವ ಪ್ರಮುಖರ ನೇತೃತ್ವದಲ್ಲಿ ಮೂರ್ತೆದಾರರರು ನಡೆಸಿದ ಹೋರಾಟದ ಫಲವಾಗಿ 1991ರಲ್ಲಿ ಹಾಲು ಉತ್ಪಾದನಾ ಸಹಕಾರಿ ಸಂಘ ಮಾದರಿಯಲ್ಲಿ ಶೇಂದಿ ಉತ್ಪಾದನೆ-ಮಾರಾಟಕ್ಕೆ ಸಹಕಾರಿ ಸಂಘದ ಮೂಲಕ ಬಂಗಾರಪ್ಪ ಸರಕಾರ ಅವಕಾಶ ನೀಡಿದ್ದು 2007-08 ಸಾಲಿನಲ್ಲಿ ಅಬಕಾರಿ ಕಾಯ್ದೆಯಂತೆ ಅನುಮತಿ ನೀಡಲಾಯಿತು. ಮುಂದೆ ಪಿ.ಕೆ ಸದಾನಂದ ಅಧ್ಯಕ್ಷತೆಯಲ್ಲಿ ಮೂರ್ತೆದಾರರ ಸಹಕಾರಿ ಸಂಘಕ್ಕೆ ಚಾಲನೆ ದೊರೆತು ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲವಾಗಿ ಪರಿವರ್ತನೆಗೊಂಡು ಉಡುಪಿ ಜಿಲ್ಲೆಯಲ್ಲಿ 16 ಮತ್ತು ದ.ಕ.ಜಿಲ್ಲೆಯಲ್ಲಿ 27 ಸಹಿತ ಒಟ್ಟು 43 ಮೂರ್ತೆದಾರರ ಪ್ರಾಥಮಿಕ ಸಹಕಾರಿ ಸಂಘಗಳ ಸ್ಥಾಪನೆಯಾಯಿತು, ಉಡುಪಿ, ದ.ಕ ಜಿಲ್ಲೆ ವಿಭಜನೆಯಾದಾಗ ಪ್ರತ್ಯೇಕ ಮಹಾಮಂಡಲಗಳು ಅಸ್ಥಿತ್ವಗೊಂಡು ಬಳಿಕದ ಜಿಲ್ಲೆಯ ಪ್ರಥಮ ಅಧ್ಯಕ್ಷರಾಗಿ ಕೆ.ನಾರಾಯಣ, ನಂತರ ವಿಜಯ್ ಕುಮಾರ್ ಸೊರಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಹಾಮಂಡಲದ ಅಧ್ಯಕ್ಷರಾಗಿ ದಾಮೋದರ ಆರ್. ಸುವರ್ಣ, ಗಂಗಾಧರ ವಾಸ್, ಕೆ.ನಾರಾಯಣ, ನವೀನ್ ಡಿ. ಸುವರ್ಣ, ಪ್ರಭಾಕರ ಬಂಗೇರ, ಪಿ.ಕೆ.ಸದಾನಂದ, ವಿಜಯ ಕುಮಾರ್ ಸೊರಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ಹಂತ ಹಂತವಾಗಿ ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ್ದಾರೆ.
ಕಳೆದ ವರದಿ ವರ್ಷದ ಅಂತ್ಯಕ್ಕೆ ಮಹಾಮಂಡಲದಲ್ಲಿ ಈವರೆಗೆ 31 ‘ಎ’ ವರ್ಗದ ಮೂರ್ತೆದಾರರ ಸಹಕಾರ ಸಂಘ ಗಳು. 1,800 ‘ಏ’ ವರ್ಗದ ಸದಸ್ಯರು, ‘ಸಿ’ ಮತ್ತು ‘ಇ’ ವರ್ಗದ 1197 ಸದಸ್ಯರು ಇದ್ದಾರೆ. ವರದಿ ಸಾಲಿನಲ್ಲಿ 45 ಕೋಟಿ ವ್ಯವಹಾರ ನಡೆಸಿ ರೂ 11.44 ಲಕ್ಷ ಲಾಭವನ್ನು ಗಳಿಸಿದೆ. 13 ಕೋಟಿ ಠೇವಣೆ ಹೊಂದಿದ್ದು ಒಟ್ಟು 7,00,31,874 ರೂ. ಸಾಲವನ್ನು ನೀಡಿದೆ.
ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿಯವರು ಸಂಘದ ಯಶಸ್ಸಿನ ಹಿಂದಿರುವ ಪ್ರೇರಕ ಶಕ್ತಿ, ಉದ್ಯಮಿಯಾಗಿ, ಜನಸ್ನೇಹಿ ರಾಜಕಾರಣಿಯಾಗಿ, ಧಾರ್ಮಿಕ ಮುಂದಾಳುವಾಗಿ, ಸಾಮಾಜಿಕ ನೇತಾರನಾಗಿ, ಶೈಕ್ಷಣಿಕ ಪ್ರೋತ್ಸಾಹಕರಾಗಿ, ಸಹಕಾರಿ ಧುರೀಣರಾಗಿ ವಿವಿಧ ಕ್ಷೇತ್ರಗಳಲ್ಲಿ ಇವರ ಸೇವೆ ಹಾಗೂ ಸಾಧನೆ ವಿಶಿಷ್ಟವಾದುದು. ಮೆಲ್ಕಾರ್ ಹಾಗೂ ನೆಲ್ಯಾಡಿಯ ಬಿರ್ವ ಸೆಂಟರ್ ಹಾಗೂ ಉಪ್ಪಿನಂಗಡಿಯ ಬಿರ್ವ ಉಬಾರ್ ಬಾರ್ ಎಂಡ್ ರೆಸ್ಟೋರೆಂಟ್ ಸಂಸ್ಥಾಪಕರಾಗಿ, ಸುರಭಿ ಹಾಗೂ ಸಾಥೀ ಬೀಡಿ ಉದ್ಯಮ ಸ್ಥಾಪಿಸಿ ಹಲವು ಮಂದಿಗೆ ಉದ್ಯೋಗದಾತರಾಗಿದ್ದಾರೆ. ಇವರು ಬಂಟ್ವಾಳ ತಾಲೂಕು. ಪಂಚಾಯತಿ ಸದಸ್ಯರಾಗಿ, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದ ಮಾಜಿ ಮೊಕೇಸರರಾಗಿ, ನಗ್ರಿ ಯುವಕ ಮಂಡಲದ ಅಧ್ಯಕ್ಷರಾಗಿ, ಸಜೀಪಮೂಡ ಗ್ರಾಪಂನ ಪೂರ್ವಾಧ್ಯಕ್ಷರಾಗಿ, 20 ವರ್ಷಗಳಿಂದ ಗ್ರಾ.ಪಂ.ಸದಸ್ಯರಾಗಿ, ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯ ಎರಡು ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಾದ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ, ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷರಾಗಿ ಇದರ ಸಮಗ್ರ ಪ್ರಗತಿಯ ರುವಾರಿಯಾಗಿದ್ದಾರೆ.
ಉದ್ದೇಶಗಳು
ಸಂಘದ ಕಾರ್ಯವ್ಯಾಪ್ತಿಯು ದ.ಕ.ಜಿಲ್ಲೆಗೆ ಸೀಮಿತಗೊಂಡಿದ್ದು, ಎಲ್ಲಾ ಮೂರ್ತೆದಾರರನ್ನು ಒಗ್ಗೂಡಿಸಿ, ಮೂರ್ತೆಗಾರಿಕೆಗೆ ಕಡಿಮೆ ಸಾಲ ಸೌಲಭ್ಯ, ಮೂರ್ತೆದಾರರ ಶ್ರೇಯೋಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸಂಘದ ಮೂಲ ಉದ್ದೇಶವಾಗಿದೆ.
ಮೂರ್ತೆದಾರರ ಎಲ್ಲಾ ಸಂಘಗಳನ್ನು ಬ್ಯಾಂಕಿಂಗ್ ವ್ಯವಹಾರಿಕ ಸಂಘಗಳಾಗಿ ಪರಿವರ್ತಿಸುವುದು, ಹಿಂದೆ ಶೇಂದಿ ಮಾರಾಟ ಸಹಕಾರಿ ಸಂಘಗಳಿಗೆ ಗ್ರಾಮ ಮಟ್ಟದಲ್ಲಿ ಸರಕಾರವು ಜಮೀನು ಕಾದಿರಿಸಿದ್ದು ಅವುಗಳನ್ನು ಸಂಘದ ಸುಪರ್ದಿಯಲ್ಲಿ ಪಡೆದು ಪುನರ್ ಸಕ್ರಿಯಗೊಳಿಸುವ ಚಿಂತನೆಯನ್ನು ಕೂಡಾ ಇದೆ ಎಂದು ಅಧ್ಯಕ್ಷ ಸಂಜೀವ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















