Connect with us

Uncategorized

ಉಡುಪಿ : ಸುಲಿಗೆ, ಕಳ್ಳತನ, ವಾಹನ ಕಳತನ್ನ ನಡೆಸುತ್ತಿದ್ದ ಮಂಗಳೂರಿನ ಖತರ್ನಾಕ್‌ ಕಳ್ಳರ ಗ್ಯಾಂಗ್‌ ಅನ್ನು ಬೆನ್ನಟ್ಟಿ ಹಿಡಿದ ಕ್ರೈಂ ಬ್ರ್ಯಾಂಚ್‌ ಎಸೈ ಮತ್ತು ತಂಡ | ಬಂಧಿತ  ಆರೀಫ್  ವಿರುದ್ದ 18 ಹಾಗೂ ಮುನೀರ್‌ ಮೇಲಿದೆ 8 ಪ್ರಕರಣ

Published

on



Ad Widget

Ad Widget

Ad Widget

Ad Widget

ಉಡುಪಿ, ಆ.6: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ವಿವಿಧ ರೀತಿಯ ಕಳ್ಳತನ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದ  ಖತರ್ನಾಕ್‌ ಗ್ಯಾಂಗ್‌ ವೊಂದನ್ನು ಉಡುಪಿ ಜಿಲ್ಲೆಯ ಕಾಪು ಪೊಲೀಸರು ಬಲೆಗೆ ಕೆಡವಿದ್ದಾರೆ.  ಮೂರು ಜನರ ಗ್ಯಾಂಗ್‌  ಸುಲಿಗೆ, ಮನೆಗೆ ನುಗ್ಗಿ ಕಳವು ಹಾಗೂ ವಾಹನ ಕಳವಿನಲ್ಲಿ ತೊಡಗಿಸಿಕೊಂಡಿತ್ತು.   

Ad Widget

Ad Widget

Ad Widget

Ad Widget

ಮಂಗಳೂರು ಬಜ್ಪೆ ಕಳವಾರ ಕುರ್ಸುಗುಡ್ಡೆ ಮೂಲದ ತಾಳಿಪಾಡಿ ಗುತ್ತಕಾಡು ನಿವಾಸಿ ಮಹಮ್ಮದ್ ಆರೀಫ್ ಅಲಿಯಾಸ್ ಮುನ್ನ (37), ಮಂಗಳೂರು ಕೇಂಜಾರು ಗ್ರಾಮದ ಅಡ್ಮೈಗುಡ್ಡೆಯ ಮಹಮ್ಮದ್ ಮುನೀರ್ (24) ಹಾಗೂ ಕುರ್ಸುಗುಡ್ಡೆಯ ಅಕ್ಬರ್(36) ಬಂಧಿತ ಆರೋಪಿಗಳು. ಇದರಲ್ಲಿ ಮಹಮ್ಮದ್ ಆರೀಫ್ ಅಲಿಯಾಸ್ ಮುನ್ನ ಹಾಗೂ ಮಹಮ್ಮದ್ ಮುನೀರ್ ಸಹೋದರರು.

Ad Widget

Ad Widget

Ad Widget alt="Ad Widget"/>

Ad Widget

ಬಂಧಿತರಿಂದ ಎರಡೂವರೆ ಪವನ್ ತೂಕದ ಚಿನ್ನದ ಸರ, ಮೊಬೈಲ್ ಪೋನ್, 61 ಸಾವಿರ ರೂ. ನಗದು, ಕಳವು ಮಾಡಿದ 3 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ, ಮೋಟಾರು ಸೈಕಲ್ ಹಾಗೂ ಇತರ ಸೊತ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 2,99,190 ರೂ. ಎಂದು ಅಂದಾಜಿಸಲಾಗಿದೆ.

Ad Widget

Ad Widget <> Ad Widget

ಪುತ್ತೂರು : ವಸತಿ ಸಮುಚ್ಚಯದಿಂದ ವಿದ್ಯಾರ್ಥಿ ಬಿದ್ದು ಮೃತಪಟ್ಟ ಘಟನೆ – ಸಾವಿನ ನಿಗೂಢತೆ ಬೇಧಿಸಲು ತಂದೆಯಿಂದ ಠಾಣೆಗೆ ದೂರು



Ad Widget

ಅನುಮಾನಸ್ಪದ ರೀತಿಯಲ್ಲಿ  ರಿಕ್ಷಾದಲ್ಲಿ ತಿರುಗಾಡುತ್ತಿದ್ದ ಮೂವರನ್ನು ಪಡುಬಿದ್ರಿ ಕ್ರೈಂ ಬ್ರ್ಯಾಂಚ್‌ ಎಸೈ  ಪ್ರಕಾಶ್‌ ಸಾಲ್ಯಾನ್‌  ಮತ್ತವರ ತಂಡ ತಮ್ಮ ವಾಹನದಲ್ಲಿ  ನಂದಿಕೂರಿನಿಂದ ಬೆನ್ನಟಿಕೊಂಡು ಬಂದು ಪಡುಬಿದ್ರಿಯಲ್ಲಿ ತಡೆದು ನಿಲ್ಲಿಸಿ ವಶಕ್ಕೆ ಪಡೆದಿದ್ದಾರೆ

Ad Widget

Ad Widget

ಅರೀಪ್‌ ಮೇಲಿದೆ 18 ಪ್ರಕರಣ

ಬಂಧಿತ ಆರೋಪಿಗಳು

ಬಂಧಿತರ ಪೈಕಿ ಮಹಮ್ಮದ್ ಆರೀಫ್  ಒಟ್ಟು 18 ಪ್ರಕರಣಗಳಿವೆ. ಇದರಲ್ಲಿ   ಬ್ರಹ್ಮಾವರ, ಮುಲ್ಕಿ, ಬಜ್ಪೆ, ಮಂಗಳೂರು ಗ್ರಾಮಾಂತರ ಹಾಗೂ ಹಾಸನ ಸಿಟಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ.  ಮಹಮ್ಮದ್ ಮುನೀರ್ ಬ್ರಹ್ಮಾವರ ಹಾಗೂ ಹಾಸನ ಸಿಟಿ ಪೊಲೀಸ್ ಠಾಣೆಯ 2 ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದು ಈತನ ವಿರುದ್ಧ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಅಕ್ಬರ್ ವಿರುದ್ಧ ಒಟ್ಟು 2 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಟ್ಲ:  ಮುಖ್ಯ ರಸ್ತೆಯ ಬಾಯ್ತೆರೆದ ಪುಟ್‌ ಪಾತ್‌ ಗೆ ಬಿದ್ದು ವ್ಯಕ್ತಿ ಸಾವು – ಗುರುತು ಪತ್ತೆ

ಕಾಪು ಪೊಲೀಸ್ ಸರ್ಕಲ್ ವ್ಯಾಪ್ತಿಯ ನಂದಿಕೂರು ಯುಪಿಸಿಎಲ್ ಬಳಿಯ ಮನೆಯಲ್ಲಿದ್ದ ವೃದ್ದೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ, ಉಚ್ಚಿಲ ಪಣಿಯೂರು ಹೋಗುವ ದಾರಿಯಲ್ಲಿರುವ ಮನೆಯೊಂದರಿಂದ ಕಳವು, ಪಡುಬಿದ್ರಿ, ಉಚ್ಚಿಲ, ಕಟಪಾಡಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪಡುಬಿದ್ರಿ ಮತ್ತು ಕಾಪು ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ತಂಡ ಆರೋಪಿ ಗಳನ್ನು ಬಂಧಿಸಿದೆ.

T- 20 Cricket : ಮುಂದುವರಿದ ರೊಹೀತ್ ನಾಯಕತ್ವದಲ್ಲಿ ಗೆಲುವಿನ ನಾಗಲೋಟ – ಅರ್ಶದೀಪ್, ಪಂತ್ ಸೊಗಸಾದ ಆಟ | ವೆಸ್ಟ್ ಇಂಡೀಸ್ ಎದುರು ಭಾರತಕ್ಕೆ ಗೆಲುವು

ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ ಮತ್ತು ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ನಿರ್ದೇಶನದಂತೆ, ಕಾರ್ಕಳ ಡಿವೈಎಸ್ಪಿ ಎಸ್.ವಿಜಯ ಪ್ರಸಾದ್ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ನೇತೃತ್ವದಲ್ಲಿ ಪಡುಬಿದ್ರಿ ಎಸ್ಸೈ ಪ್ರಕಾಶ್ ಸಾಲ್ಯಾನ್, ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್, ರಾಜೇಶ್, ಹೇಮರಾಜ್, ಸಂದೇಶ, ಸುಕುಮಾರ್ ಈ ಕಾರ್ಯಾ ಚರಣೆ ನಡೆಸಿದ್ದಾರೆ.

ನಿತ್ಯ ಭವಿಷ್ಯ  ಭಾನುವಾರ (Sunday, August 7, 2022)  ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ   

Ad Widget
Click to comment

Leave a Reply

Uncategorized

Vivekananda-ವಿವೇಕಾನಂದ ಕಾಲೇಜಿನಲ್ಲಿ ಪ್ರೇರಣಾ 2026ನ ಸಮಾರೋಪ ಸಮಾರಂಭ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇದರ ಮಾತೃ ಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ನೇತೃತ್ವದಲ್ಲಿ ನಡೆದ ಭವಿಷ್ ಮತ್ತು ಯಶಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ‘ಪ್ರೇರಣಾ’ 2026 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಕಾರ್ಯವಾಹ ಪ್ರಕಾಶ್ ಪಿ. ಎಸ್. ಮಾತನಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಅಧ್ಯಾಪಕ ವೃತ್ತಿ ಕೇವಲ ಒಂದು ವೃತ್ತಿಯಾಗದೆ, ಅದು ನಮ್ಮ ಪ್ರವೃತ್ತಿಯಾಗಬೇಕು. ಆಗ ಮಾತ್ರ ಆ ಕ್ಷೇತ್ರದಲ್ಲಿ ನಾವು ಬೆಳೆಯಲು ಸಾಧ್ಯ. ಶಿಕ್ಷಣ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಆಂತರಿಕ ಶಕ್ತಿಯನ್ನು ಹೊರಗಿಡುವ ಒಂದು ಕೌಶಲ್ಯವಾಗಿದೆ. ಶಿಕ್ಷಣದ ಮೂಲಕ ಸಮಾಜವನ್ನು ಬದಲಾಯಿಸಲು ಸಾಧ್ಯ. ಇದರ ಮೂಲಕ ಭಾರತೀಯ ಸಮಾಜ ಶ್ರೇಷ್ಠವಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಕಾರ್ಯವಾಹ ಪ್ರಕಾಶ್ ಪಿ. ಎಸ್. ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇದರ ಮಾತೃ ಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ನೇತೃತ್ವದಲ್ಲಿ ನಡೆದ ಭವಿಷ್ ಮತ್ತು ಯಶಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ‘ಪ್ರೇರಣಾ’ 2026 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.

Ad Widget

Ad Widget <> Ad Widget

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯ ನಾರಾಯಣ ಕೆ ಎಂ ಮಾತನಾಡಿ, ಶಿಕ್ಷಕ ವೃತ್ತಿ ಎಂಬುದು ತುಂಬಾ ಪಾವಿತ್ರ‍್ಯದ ವೃತ್ತಿಯಾಗಿದೆ. ಸಮಾಜದಲ್ಲಿ ಡಾಕ್ಟರ್, ಇಂಜಿನಿಯರ್‌ಗಳು ವೃತ್ತಿಯಲ್ಲಿ ಸಾಧನೆ ಗೈದವರೆಲ್ಲರ ಬದುಕನ್ನು ರೂಪಿಸಲು ಶಿಕ್ಷಕಪಾತ್ರ ಮಹತ್ತರ ಎಂದು ನುಡಿದರು.



Ad Widget

ವೇದಿಕೆಯಲ್ಲಿ ಭವಿಷ್ ಘಟಕದ ಮಾರ್ಗದರ್ಶಕ ಗಣಪತಿ ಹೆಗಡೆ, ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಹಾಗೂ ಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ ಭಟ್. ಎಸ್ ಉಪಸ್ಥಿತರಿದ್ದರು.

Ad Widget

Ad Widget

ಕಾರ್ಯಕ್ರಮವನ್ನು ಭವಿಷ್ ಘಟಕದ ಸಂಯೋಜಕಿ ಲಕ್ಷ್ಮೀ ಎಸ್ ಭಟ್ ಸ್ವಾಗತಿಸಿ, ಭವಿಷ್ ಘಟಕದ ಸಂಯೋಜಕ ಡಾ.ಪ್ರಮೋದ್ ಎಂ. ಜಿ ವಂದಿಸಿ, ಶಿಬಿರಾರ್ಥಿ ಶಿವಾನಿ ನಿರೂಪಿಸಿದರು.

Ad Widget
Continue Reading

Uncategorized

ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ

Published

on



Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಉಳ್ಳಾಲ: ಸೋಮೇಶ್ವರದ ಪೆರಿಬೈಲ್ ಬೀಚ್‌ನಲ್ಲಿ ಸಮುದ್ರಪಾಲಾಗಿದ್ದ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ ಶೋಭಿತ್ ಎಂ. ಗೌಡ (18) ಅವರ ಮೃತದೇಹ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿಯಾಗಿದ್ದ ಶೋಭಿತ್, ಶನಿವಾರ ಸಂಜೆ ಸ್ನೇಹಿತರೊಂದಿಗೆ ಬೀಚ್‌ಗೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ನೀರುಪಾಲಾಗಿದ್ದರು.

Ad Widget

Ad Widget <> Ad Widget

ಉಜಿರೆ ಎಸ್‌ಡಿಎಂ ಕಾಲೇಜಿನ ಒಂಬತ್ತು ಮಂದಿ ವಿದ್ಯಾರ್ಥಿಗಳು ಶನಿವಾರ ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸೋಮೇಶ್ವರದ ಪೆರಿಬೈಲ್ ಬೀಚ್‌ಗೆ ತೆರಳಿದ್ದರು. ಈ ವೇಳೆ ಶೋಭಿತ್ ಮತ್ತು ಆಕಾಶ್ ಎಂಬವರು ಸಮುದ್ರಕ್ಕಿಳಿದಿದ್ದು, ಇಬ್ಬರೂ ಅಲೆಗಳ ಸೆಳೆತಕ್ಕೆ ಸಿಲುಕಿದ್ದರು. ಈಜು ತಿಳಿದಿದ್ದ ಆಕಾಶ್ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಶೋಭಿತ್ ನಾಪತ್ತೆಯಾಗಿದ್ದರು.



Ad Widget

ವಿದ್ಯಾರ್ಥಿಗಾಗಿ ಶನಿವಾರ ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಎಸ್‌ಡಿಆರ್‌ಎಫ್, ಕರಾವಳಿ ಕಾವಲು ಪಡೆ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Ad Widget

Ad Widget

ಭಾನುವಾರ ಮಧ್ಯಾಹ್ನ ಉಳ್ಳಾಲ ವಲಯದ ನಾಡದೋಣಿ ಹಾಗೂ ಗಿಲ್ನೆಟ್ ಮೀನುಗಾರರ ಸಂಘದ ಪ್ರಮುಖರಾದ ಆಸಿಫ್ ಎಂ.ಬಿ., ನಿಝಾಮ್ ಕೋಟೆಪುರ, ನಝೀರ್ ಕೋಡಿ, ರಝಾಕ್ ಕೋಟೆಪುರ, ಮುಸ್ತಾಫ ಕೋಟೆಪುರ ಮತ್ತು ಇರ್ಫಾನ್ ಕೋಟೆಪುರ ಅವರು ನಾಡದೋಣಿಯಲ್ಲಿ ಶೋಧ ನಡೆಸಿದರು. ಈ ವೇಳೆ ಉಚ್ಚಿಲ ಪೆರಿಬೈಲ್ ಸಮೀಪ ಸಮುದ್ರದಲ್ಲಿ ತೇಲುತ್ತಿದ್ದ ಶೋಭಿತ್ ಅವರ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ನಾಡದೋಣಿಯ ಮೂಲಕ ಕೋಟೆಪುರ ಸಮುದ್ರ ತೀರಕ್ಕೆ ತರಲಾಗಿದ್ದು, ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶೋಭಿತ್ ತನ್ನ ಪೋಷಕರ ಏಕೈಕ ಪುತ್ರನಾಗಿದ್ದ ಎಂದು ತಿಳಿದುಬಂದಿದೆ.

Ad Widget
Continue Reading

Uncategorized

ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್‌ಫುಲ್ |

Published

on



Ad Widget

Ad Widget

Ad Widget

Ad Widget

ಅ. 23ರಂದು ಚಿತ್ರ ಬಿಡುಗಡೆ

Ad Widget

Ad Widget

Ad Widget

Ad Widget

ಬಹು ನಿರೀಕ್ಷಿತ ತುಳು ಚಿತ್ರ ‘ಬನ’ ಮುಂಬೈನಲ್ಲಿ ನಡೆದ ಮೊದಲ ಎರಡು ಪ್ರೀಮಿಯರ್ ಪ್ರದರ್ಶನಗಳಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂಬೈನ ಮುಲುಂದ್ ಮತ್ತು ಕಲ್ಯಾಣ್‌ನಲ್ಲಿ ಶನಿವಾರ ನಡೆದ ಪ್ರದರ್ಶನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡೂ ಕಡೆ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡಿದೆ ಎಂದು ಚಿತ್ರತಂಡ ತಿಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ನಾಗನ ಹಿನ್ನೆಲೆಯನ್ನು ಆಧರಿಸಿದ ಮೊದಲ ತುಳು ಚಿತ್ರ ಎಂಬ ವಿಶೇಷತೆಯೊಂದಿಗೆ ಗಮನ ಸೆಳೆದಿರುವ ‘ಬನ’, ತನ್ನ ಕಥೆ ಮತ್ತು ಕಲಾವಿದರ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಕಥಾಹಂದರ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದು, ಯುವ ಕಲಾವಿದರ ಅಭಿನಯದ ಜತೆಗೆ ಹಿರಿಯ ಕಲಾವಿದರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಪ್ರದರ್ಶನದ ಬಳಿಕ ಕೇಳಿಬಂದಿವೆ.

Ad Widget

Ad Widget <> Ad Widget

ಚಿತ್ರದಲ್ಲಿ ಯುವ ಕಲಾವಿದರು ಅದ್ಭುತವಾಗಿ ನಟಿಸಿದ್ದು, ಕಥೆಯ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಭಿನ್ನ ಕಥಾವಸ್ತು ಹಾಗೂ ಕಲಾವಿದರ ಸಹಜ ಅಭಿನಯ ಚಿತ್ರಕ್ಕೆ ಮೆರುಗು ನೀಡಿದೆ. ತುಳು ಚಿತ್ರರಂಗದಲ್ಲಿ ನಾಗನ ಹಿನ್ನೆಲೆಯನ್ನು ಆಧರಿಸಿದ ಕಥಾವಸ್ತುವಿನೊಂದಿಗೆ ಮೂಡಿಬಂದಿರುವ ‘ಬನ’, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಮುಂಬೈ ತುಳು ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆ ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ.



Ad Widget

ಮುಂಬೈನಲ್ಲಿ ಚಿತ್ರದ ಪ್ರೀಮಿಯರ್ ಪ್ರದರ್ಶನಗಳ ಆಯೋಜನೆಯನ್ನು ಬಾಬಪ್ರಸಾದ್ ಅರಸ ಮತ್ತು ನಾಗಕಿರಣ್ ಶೆಟ್ಟಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಶನಿವಾರ ನಡೆದ ಎರಡೂ ಪ್ರದರ್ಶನಗಳಿಗೆ ಪ್ರೇಕ್ಷಕರ ಉತ್ತಮ ಸ್ಪಂದನೆ ದೊರೆತಿದ್ದು, ಹೌಸ್‌ಫುಲ್ ಪ್ರದರ್ಶನ ಚಿತ್ರತಂಡಕ್ಕೆ ಸಂತಸ ತಂದಿದೆ.

Ad Widget

Ad Widget

ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ತುಳುವರು ತುಳು ಭಾಷೆ ಮತ್ತು ಚಿತ್ರರಂಗದ ಬೆಳವಣಿಗೆಗೆ ನಿರಂತರ ಬೆಂಬಲ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಬನ’ ಚಿತ್ರಕ್ಕೆ ಮುಂಬೈನಲ್ಲಿ ದೊರೆತಿರುವ ಪ್ರತಿಕ್ರಿಯೆ ಚಿತ್ರ ಬಿಡುಗಡೆಗೂ ಮುನ್ನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಅ. 23ರಂದು ಚಿತ್ರ ಬಿಡುಗಡೆ

‘ಬನ’ ಚಿತ್ರವು ಇದೇ ತಿಂಗಳ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮುಂಬೈನ ಪ್ರೀಮಿಯರ್ ಪ್ರದರ್ಶನಗಳಲ್ಲಿ ದೊರೆತಿರುವ ಮೆಚ್ಚುಗೆ, ಚಿತ್ರದ ಅಧಿಕೃತ ಬಿಡುಗಡೆಗೆ ಮುನ್ನ ಸಕಾರಾತ್ಮಕ ವಾತಾವರಣ ನಿರ್ಮಿಸಿದೆ. ವಿಭಿನ್ನ ಕಥಾಹಂದರ ಮತ್ತು ಕಲಾವಿದರ ಅಭಿನಯದ ಮೂಲಕ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿರುವ ‘ಬನ’ ಚಿತ್ರಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಪ್ರತಿಕ್ರಿಯೆ ದೊರೆಯಲಿದೆ ಎಂಬ ಕುತೂಹಲ ತುಳು ಚಿತ್ರಪ್ರೇಮಿಗಳಲ್ಲಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading