Connect with us

Uncategorized

ಹಿಂದೂ ಯುವಕನನ್ನು ಮದುವೆಯಾದ ಗರ್ಭೀಣಿ ಮಗಳ ಮೇಲೆ ಆಟೋ ರಿಕ್ಷಾ ಹತ್ತಿಸಿ ಕೊಲ್ಲಲು ಯತ್ನಿಸಿದ ಮುಸ್ಲಿಂ ತಂದೆ | ಬೆಚ್ಚಿಬೀಳಿಸುವ ವಿಡಿಯೋ ವೈರಲ್

Published

on



Ad Widget

Ad Widget

Ad Widget

Ad Widget

ತನ್ನ ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದಳೆಂಬ ಕಾರಣಕ್ಕೆ ಮುಸ್ಲಿಂ ಧರ್ಮಕ್ಕೆ ಸೇರಿದ ತಂದೆ ತನ್ನ ಗರ್ಭಿಣಿ  ಮಗಳಿಗೆ ಆಟೋ ಡಿಕ್ಕಿ ಹೊಡೆಸಿ ಹತ್ಯೆ ಮಾಡಲು ಮುಂದಾದ ಘಟನೆ ನಡೆದಿದ್ದು, ಇದರ ಶಾಕಿಂಗ್ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Ad Widget

Ad Widget

Ad Widget

Ad Widget

ರಾಜಸ್ಥಾನದಲ್ಲಿ  ಭರತ್ಪುರದಲ್ಲಿ ಈ ಘಟನೆ ನಡೆದಿದ್ದು, ಯುವತಿ ತನ್ನ ಪತಿಯೊಂದಿಗೆ ನಡೆದು ಹೋಗುತ್ತಿದ್ದ ವೇಳೆ ಆಟೋದಲ್ಲಿ ಹಿಂಬಾಲಿಸಿಕೊಂಡು ಬಂದ ಆಕೆಯ ತಂದೆ ಡಿಕ್ಕಿ ಹೊಡೆಸಲು ಯತ್ನಿಸಿದ್ದಾನೆ. ಇದರಿಂದ ಗಾಬರಿಗೊಂಡ ಅವರಿಬ್ಬರೂ ದಿಕ್ಕಾಪಾಲಾಗಿ ಓಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

 ನಗ್ಮಾ ಎಂಬ ಮುಸ್ಲಿಂ  ಭರತ್‌ಪುರದ ಪ್ರದೇಶದ ನರೇಂದ್ರ ಸೈನಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇಬ್ಬರೂ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರಿಂದ ಅವರ ಸಂಬಂಧವನ್ನು ಹುಡುಗಿಯ ಮನೆಯವರು ಒಪ್ಪಲಿಲ್ಲ, ಹೀಗಾಗಿ  ನಗ್ಮಾ ನರೇಂದ್ರನೊಂದಿಗೆ ಮನೆಯಿಂದ ಓಡಿ ಹೋಗಿದ್ದಾರೆ. ಬಳಿಕ   ಫೆಬ್ರವರಿ 22 ರಂದು ನರೇಂದ್ರ ಹಾಗೂ ನಗ್ಮಾ  ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿದ್ದಾರೆ .  

Ad Widget

Ad Widget <> Ad Widget

ಆಗ  ನಗ್ಮಾ ಅವರ ತಂದೆ ಇಸ್ಲಾಂ ಖಾನ್ ಬಾಲಕಿಯನ್ನು ಅಪಹರಿಸಿ ಆಮಿಷ ಒಡ್ಡಿ ಬಲವಂತವಾಗಿ ಮದುವೆಯಾಗಿರುವುದಾಗಿ  ನರೇಂದ್ರನ  ವಿರುದ್ಧ ಪ್ರಕರಣ ದಾಖಲಿಸಿದ್ದರು.ಇವರ ಮದುವೆಗೆ  ವಿರೋಧ ವ್ಯಕ್ತಪಡಿಸಿದ್ದ ಯುವತಿ ತಂದೆ  ಹಲ್ಲೆಗೂ  ಯತ್ನಿಸಿದ್ದರು  ಎನ್ನಲಾಗಿದೆ. ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದ್ದು ದಂಪತಿ ರಕ್ಷಣೆ ಕೋರಿದ್ದರು.



Ad Widget

ಪೊಲೀಸ್ ಕೇಸ್ ಮತ್ತು ಕುಟುಂಬ ಸದಸ್ಯರಿಗೆ ಹೆದರಿದ ಯುವಕ  ನಗ್ಮಾಳನ್ನು ಮಧ್ಯಪ್ರದೇಶದ ಕಟ್ನಿಗೆ ಕರೆದೊಯಿದ್ದಾರೆ.  ಬಳಿಕ ಎರಡು ತಿಂಗಳುಗಳ  ಕಾಲ  ಅವರಿಬ್ಬರು ಮಥುರಾದಲ್ಲಿ ವಾಸಿಸಿದ್ದಾರೆ.  ಈ ಸಮಯದಲ್ಲಿ ನಗ್ಮಾ ಗರ್ಭಿಣಿಯಾದರು.ಬಳಿಕ  ದಂಪತಿಗಳು ಭರತ್‌ಪುರಕ್ಕೆ ಮರಳಿದ್ದಾರೆ.    ನಗರದ ರಂಜಿತ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಗುರುವಾರ ಮಧ್ಯಾಹ್ನ ನರೇಂದ್ರ ತನ್ನ ಪತ್ನಿ ನಗ್ಮಾಳನ್ನು ಸಾಮಾನ್ಯ ತಪಾಸಣೆಗಾಗಿ ಜನನಾ ಆಸ್ಪತ್ರೆಗೆ ಕರೆದೊಯ್ದಾಗ, ನಗ್ಮಾಳ ತಂದೆ ಇಸ್ಲಾಂ ತನ್ನ ಮಗಳನ್ನು ಆಟೋ ಢಿಕ್ಕಿ ಹೊಡೆಸಿ  ಕೊಲ್ಲಲು ಯತ್ನಿಸಿದ್ದಾನೆ.

Ad Widget

Ad Widget

  ಕೊಲೆ ಮಾಡಲು ಯತ್ನಿಸಿದ್ದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಪೊಲೀಸರು ಆರೋಪಿಯ ಬಂಧನಕ್ಕೆ ಮುಂದಾಗಿದ್ದಾರೆ.

ಈಗಾಗಲೇ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಈಗಾಗಲೇ ನ್ಯಾಯಾಲಯದಲ್ಲಿ ಸೆಕ್ಷನ್ 122 ಸಿಆರ್‌ಪಿಸಿ ಅಡಿಯಲ್ಲಿ ಕ್ರಮ ನಡೆಯುತ್ತಿದೆ. ಅವರ ಸುರಕ್ಷತೆಗಾಗಿ ಎಸ್‌ಎಚ್‌ಒಗೂ ಪತ್ರ ಬರೆಯಲಾಗಿದೆ. ಆದರೆ, ಅವರು ಮತ್ತೊಮ್ಮೆ ಬಂದಿರುವುದರಿಂದ, ಎಸ್ಪಿ ಮತ್ತು ಸಂಬಂಧಪಟ್ಟ ಎಸ್ಎಚ್ಒಗೆ ಅಗತ್ಯ ಕ್ರಮಕ್ಕಾಗಿ ಪತ್ರ ಬರೆಯಲಾಗಿದೆ ಎಂದು ಬೀನಾ ಮಹಾವರ್ (ಎಡಿಎಂ ಎಡಿಎಂ) ಭರತ್ಪುರ್ ತಿಳಿಸಿದ್ದಾರೆ.

( Source : ANI ಮತ್ತು India.com)

Ad Widget
Click to comment

Leave a Reply

Uncategorized

ಪುತ್ತೂರು : ಬಾಡಿಗೆ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಯುವಕ ಸಾವು

Published

on



Ad Widget

Ad Widget

Ad Widget

Ad Widget

ಪುತ್ತೂರು: ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಯುವಕನೊಬ್ಬ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.

Ad Widget

Ad Widget

Ad Widget

Ad Widget

ಪಡುಬಿದ್ರಿ ನಿವಾಸಿ ಸುಂದರ ಪೂಜಾರಿ ಎಂಬವರ ಪುತ್ರ ವಿನೇಶ್ ಮೃತಪಟ್ಟವರು.ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ
ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ ಅವರು ಪುತ್ತೂರಿನ ದರ್ಬೆ ಜಿನಸು ಸಾಮಗ್ರಿಗಳ ಮಳಿಗೆಯೊಂದರಲ್ಲಿ ಕಳೆದ ಕೆಲ ತಿಂಗಳಿಂದ ಆಡಿಟಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಅವರು ಮಂಗಳೂರಿನ ಆಡಿಟಿಂಗ್ ಕಂಪೆನಿಯೊಂದು ಅವರನ್ನು ಇಲ್ಲಿಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿತ್ತು ಎನ್ನಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಮಂಗಳವಾರ (ಅ.6) ಸಂಜೆ ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳಿದ್ದ ವಿನೇಶ್, ಬುಧವಾರ (ಅ.7) ಕೆಲಸಕ್ಕೆ ಬಂದಿರಲಿಲ್ಲ. ಸಹೋದ್ಯೋಗಿಗಳು ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿರಲಿಲ್ಲ. ಮಧ್ಯಾಹ್ನ ಊಟಕ್ಕೆ ತೆರಳುವ ವೇಳೆ ಕೂಡ ಸಹೋದ್ಯೋಗಿಗಳು ಕರೆ ಮಾಡಿದ್ದು, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

Ad Widget

Ad Widget <> Ad Widget

ಅನುಮಾನಗೊಂಡ ಸಹೋದ್ಯೋಗಿಗಳು ಬಾಡಿಗೆ ಮನೆಗೆ ತೆರಳಿ ಪರಿಶೀಲಿಸಿದಾಗ, ಮನೆಯ ಬಾಗಿಲು ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಬಳಿಕ ಮೊಬೈಲ್‌ಗೆ ಕರೆ ಮಾಡಿದಾಗ ಮನೆಯೊಳಗಿನಿಂದ ರಿಂಗ್ ಆಗುವ ಶಬ್ದ ಕೇಳಿಸಿತ್ತು. ಮನೆಯ ಸ್ಲ್ಯಾಬ್‌ನ ಇನ್‌ಫ್ಲೇಟರ್ ಮೂಲಕ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿ ಪರಿಶೀಲಿಸಿದಾಗ ವಿನೇಶ್ ನಿಸ್ತೇಜ ಸ್ಥಿತಿಯಲ್ಲಿ ಮಲಗಿರುವುದು ಕಾಣಿಸಿದೆ ಎನ್ನಲಾಗಿದೆ.



Ad Widget

ನಂತರ ಪೊಲೀಸರು ಹಾಗೂ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಅವರ ಸಹೋದರ ಸಹಿತ ಸಂಬಂಧಿಕರು ಪುತ್ತೂರಿಗೆ ಆಗಮಿಸಿದ್ದಾರೆ.ಅವರು ಸ್ಥಳಕ್ಕೆ ಬಂದ ಬಳಿಕ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ವಿನೇಶ್ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಆತ ಈ ಹಿಂದೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರಲ್ಲಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದು ಬಂದಿದೆ. ನಿನ್ನೆ ರಾತ್ರಿ ವೇಳೆ ಮತ್ತೆ ಉಸಿರಾಟ ಸಮಸ್ಯೆ ಉಲ್ಬಣಿಸಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad Widget

Ad Widget

ಮೃತದೇಹವನ್ನು ಪುತ್ತೂರಿನ ಸರಕಾರಿ ಆಸ್ಫತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Ad Widget
Continue Reading

Uncategorized

Puttur Court retaining wall collapse : ಹತ್ತು ತಿಂಗಳ ಹಿಂದಷ್ಟೇ ಉದ್ಘಾಟನೆ; ಪುತ್ತೂರು ಹೊಸ ನ್ಯಾಯಾಲಯದ ತಡೆಗೋಡೆ ಕುಸಿತ- ಕಾಮಗಾರಿಯ ಗುಣಮಟ್ಟದ ಬಗ್ಗೆ ಚರ್ಚೆ

Published

on



Ad Widget

Ad Widget

Ad Widget

Ad Widget

ಪುತ್ತೂರು: ನಗರದ ಆನೆಮಜಲು–ನ್ಯಾಯಾಲಯ ಸಂಕೀರ್ಣ–ಕಾಲನಿ ಸಂಪರ್ಕ ರಸ್ತೆ ಬದಿಯಲ್ಲಿರುವ ಹೊಸ ನ್ಯಾಯಾಲಯ ಸಂಕೀರ್ಣದ ತಡೆಗೋಡೆಯ ಒಂದು ಭಾಗ ಬುಧವಾರ ಸಂಜೆ ಸುರಿದ ಮಳೆಗೆ ಕುಸಿದು ಬಿದ್ದಿದೆ.

Ad Widget

Ad Widget

Ad Widget

Ad Widget

ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಹತ್ತು ತಿಂಗಳಷ್ಟೇ ಕಳೆದಿದ್ದು, ಅಷ್ಟರಲ್ಲೇ ಗೋಡೆ ಕುಸಿದಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಮಗಾರಿಯ ಗುಣಮಟ್ಟವನ್ನು ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗಳು ಹರಿದಾಡುತ್ತಿವೆ. ಸಂಜೆ ಸುರಿದ ಮಳೆಯ ಸಂದರ್ಭದಲ್ಲಿ ತಡೆಗೋಡೆಯ ಒಂದು ಭಾಗ ಕುಸಿದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Ad Widget

Ad Widget

Ad Widget alt="Ad Widget"/>

Ad Widget

ಘಟನೆ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಡೆ ಕುಸಿಯಲು ಕಾರಣ ಹಾಗೂ ಕಾಮಗಾರಿಯ ಗುಣಮಟ್ಟದ ಕುರಿತು ಪರಿಶೀಲನೆ ನಡೆಯುತ್ತಿದೆ.

Ad Widget

Ad Widget <> Ad Widget

ಇದೇ ವೇಳೆ ನ್ಯಾಯಾಲಯದ ಕ್ಯಾಂಟೀನ್‌ನ ಗೋಡೆಯಲ್ಲೂ ಬಿರುಕುಗಳು ಕಾಣಿಸಿಕೊಂಡಿವೆ ಎಂಬ ಆರೋಪ ಕೇಳಿಬಂದಿದೆ. ಹೊಸದಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಸಂಕೀರ್ಣದ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಈ ಘಟನೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.



Ad Widget

Continue Reading

Uncategorized

Maharashtra-ಮಹಾರಾಷ್ಟ್ರದಲ್ಲಿ ಭ್ರೂಣ ಲಿಂಗ ಪತ್ತೆ ಜಾಲ: ಗರ್ಭಿಣಿಯ ವೇಷದಲ್ಲಿ ಬಾಗಲಕೋಟೆಯ ಮಹಿಳಾ ಅಧಿಕಾರಿಗಳ ರಹಸ್ಯ ಕಾರ್ಯಾಚರಣೆ; ಇಬ್ಬರ ಬಂಧನ – ಸ್ಕ್ಯಾನಿಂಗ್ ಯಂತ್ರ ಜಪ್ತಿ

Published

on



Ad Widget

Ad Widget

Ad Widget

Ad Widget

ಮಹಾರಾಷ್ಟ್ರದಲ್ಲಿ ಭ್ರೂಣ ಲಿಂಗ ಪತ್ತೆ ನಡೆಸಿ, ಬಳಿಕ ಕರ್ನಾಟಕದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಬಾಗಲಕೋಟೆ ಜಿಲ್ಲೆಯ ಮಹಿಳಾ ಅಧಿಕಾರಿಗಳ ತಂಡ ರಹಸ್ಯ ಕಾರ್ಯಾಚರಣೆ ನಡೆಸಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಜಾಡರ ಬಬಲಾದ ಗ್ರಾಮದಲ್ಲಿ ಅ.5ರಂದು ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಭ್ರೂಣ ಲಿಂಗ ಪತ್ತೆಗೆ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರವನ್ನು ಜಪ್ತಿ ಮಾಡಲಾಗಿದೆ.

Ad Widget

Ad Widget

Ad Widget

Ad Widget

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಭ್ರೂಣ ಲಿಂಗ ಪತ್ತೆ ನಡೆಸಿ, ಬಳಿಕ ಕರ್ನಾಟಕದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಬಾಗಲಕೋಟೆ ಜಿಲ್ಲೆಯ ಮಹಿಳಾ ಅಧಿಕಾರಿಗಳ ತಂಡ ರಹಸ್ಯ ಕಾರ್ಯಾಚರಣೆ ನಡೆಸಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಜಾಡರ ಬಬಲಾದ ಗ್ರಾಮದಲ್ಲಿ ಅ.5ರಂದು ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಭ್ರೂಣ ಲಿಂಗ ಪತ್ತೆಗೆ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರವನ್ನು ಜಪ್ತಿ ಮಾಡಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ್ ಗರ್ಭಿಣಿಯ ವೇಷದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶೋಭಾ ನಾದಿನಿ ಗರ್ಭಿಣಿಯ ಸಂಬಂಧಿಯಂತೆ ಹಾಗೂ ಡಿಎಚ್‌ಒ ಡಾ. ಸುವರ್ಣ ಕುಲಕರ್ಣಿ ಗರ್ಭಿಣಿಯ ತಾಯಿಯ ವೇಷದಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Ad Widget

Ad Widget <> Ad Widget

ಮಹಾರಾಷ್ಟ್ರದಲ್ಲಿ ಲಿಂಗ ಪತ್ತೆ, ಕರ್ನಾಟಕದಲ್ಲಿ ಹತ್ಯೆ ಆರೋಪ
ಮಹಾರಾಷ್ಟ್ರದ ಜತ್ತ ತಾಲೂಕಿನ ಜಾಡರ ಬಬಲಾದ ಗ್ರಾಮದಲ್ಲಿ ಭ್ರೂಣದ ಲಿಂಗ ಪತ್ತೆ ಮಾಡಿ, ಬಳಿಕ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಈ ಜಾಲದ ಕುರಿತು ತನಿಖೆ ನಡೆಸಿದಾಗ ಮಹಾಲಿಂಗಪುರದಲ್ಲಿ ಈ ಹಿಂದೆ ಭ್ರೂಣ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕವಿತಾ ಬಾಡನವರ ಅವರ ಹೆಸರು ಕೂಡ ಕೇಳಿಬಂದಿತ್ತು.



Ad Widget

ಈ ಹಿನ್ನೆಲೆಯಲ್ಲಿ ಮಹಿಳಾ ಅಧಿಕಾರಿಗಳ ತಂಡ ಗರ್ಭಿಣಿಯರಂತೆ ವೇಷ ಧರಿಸಿ ಕಾರ್ಯಾಚರಣೆಗೆ ಇಳಿದಿತ್ತು.

Ad Widget

Ad Widget

ರಹಸ್ಯ ಕಾರ್ಯಾಚರಣೆ ನಡೆದದ್ದು ಹೇಗೆ?
ಅ.5ರ ರಾತ್ರಿ ಜಾಡರ ಬಬಲಾದ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು, ಭ್ರೂಣದ ಲಿಂಗ ಪತ್ತೆಗಾಗಿ ಮಧ್ಯವರ್ತಿ ನಿಖಿಲ್‌ ತೇಲಿ ಅವರನ್ನು ಸಂಪರ್ಕಿಸಿದರು. ಆತ ಅಧಿಕಾರಿಗಳನ್ನು ತೋಟದ ಮನೆಯೊಂದಕ್ಕೆ ಕರೆದೊಯ್ದಿದ್ದಾನೆ. ಬಳಿಕ ನಿಖಿಲ್‌ನ ತಾಯಿ ದಾನಕ್ಕ ತೇಲಿ ಅವರು ಸ್ಕ್ಯಾನಿಂಗ್ ಯಂತ್ರವು ಕರ್ಜಗಿ ಗ್ರಾಮದ ಕವಿತಾ ಗೋಡೆಕರ ಅವರ ಮನೆಯಲ್ಲಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು ಕವಿತಾ ಅವರ ಮನೆಗೆ ತೆರಳಿದಾಗ ಸ್ಕ್ಯಾನಿಂಗ್‌ಗೆ ಯಂತ್ರ ಸಿದ್ಧಪಡಿಸಲಾಗುತ್ತಿತ್ತು. ಈ ವೇಳೆ ಪೊಲೀಸರು ಆರೋಪಿಗಳನ್ನು ಹಾಗೂ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ.

ಈ ಜಾಲದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ನಕಲಿ ವೈದ್ಯ ಸಂಜಯ್ ವಾಘ್ಮೋಡೆ ಅವರನ್ನು ಬಂಧಿಸಲು ಅಧಿಕಾರಿಗಳು ಮುಂದಾದಾಗ, ಆತ ಸ್ಥಳದಿಂದ ಪರಾರಿಯಾಗಿದ್ದಾನೆ.

ಕಾರ್ಯಾಚರಣೆಯಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ತಹಸೀಲ್ದಾರ್ ಗಿರೀಶ ಸ್ವಾದಿ ಹಾಗೂ ಆರೋಗ್ಯ ಇಲಾಖೆಯ ಮನು ಕೂಡ ಭಾಗವಹಿಸಿದ್ದರು.

ಇಬ್ಬರ ಬಂಧನ; ಸ್ಕ್ಯಾನಿಂಗ್ ಯಂತ್ರ ಜಪ್ತಿ
ಭ್ರೂಣ ಲಿಂಗ ಪತ್ತೆ ಆರೋಪದಡಿ ನಿಖಿಲ್ ತೇಲಿ, ದಾನಕ್ಕ ತೇಲಿ, ಕವಿತಾ ಗೋಡೆಕರ ಹಾಗೂ ನಕಲಿ ವೈದ್ಯ ಸಂಜಯ್ ವಾಘ್ಮೋಡೆ ವಿರುದ್ಧ ಮಹಾರಾಷ್ಟ್ರದ ಉಮದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಈ ಪೈಕಿ ನಿಖಿಲ್ ತೇಲಿ ಹಾಗೂ ದಾನಕ್ಕ ತೇಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಜಯ್ ವಾಘ್ಮೋಡೆ ಪರಾರಿಯಾಗಿದ್ದಾನೆ. ಭ್ರೂಣ ಲಿಂಗ ಪತ್ತೆಗೆ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರವನ್ನು ಪಿಸಿಪಿಎನ್‌ಡಿಟಿ ಕಾಯ್ದೆಯಡಿ ವಶಪಡಿಸಿಕೊಂಡು ಮಹಾರಾಷ್ಟ್ರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಹಿಂದಿನ ಪ್ರಕರಣದ ಬೆನ್ನಲ್ಲೇ ಮತ್ತೊಂದು ಆರೋಪ
ಮಹಾಲಿಂಗಪುರದಲ್ಲಿ 2020 ಹಾಗೂ 2024ರಲ್ಲಿ ಕವಿತಾ ಬಾಡನವರ ವಿರುದ್ಧ ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಆರೋಪ ಕೇಳಿಬಂದಿತ್ತು. ಈ ಪೈಕಿ ಗರ್ಭಪಾತದ ವೇಳೆ ಮಹಾರಾಷ್ಟ್ರ ಮೂಲದ ಗರ್ಭಿಣಿಯೊಬ್ಬರು ಮೃತಪಟ್ಟ ಪ್ರಕರಣದಲ್ಲೂ ಕವಿತಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಂಧನದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅವರ ವಿರುದ್ಧ ಮತ್ತೆ ಇದೇ ರೀತಿಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ರಹಸ್ಯ ಕಾರ್ಯಾಚರಣೆ ನಡೆಸಲಾಗಿದೆ.

ಈ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದಡಿ ಆರೋಗ್ಯ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇತ್ತೀಚೆಗೆ ಕವಿತಾ ಅವರಿಗೆ ಪೊಲೀಸರು ನೋಟಿಸ್‌ ಕೂಡ ಜಾರಿ ಮಾಡಿದ್ದರು.

ಮಹಿಳಾ ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ ವಿಜಯಪುರ ಹಾಗೂ ಸಾಂಗ್ಲಿ ಪೊಲೀಸರಿಗೆ ಕಾರ್ಯಾಚರಣೆಯ ಮಾಹಿತಿ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading