ಶಿಕ್ಷಣ
Ambika-ಪುತ್ತೂರಿನ ಅಂಬಿಕಾ ಶಿಕ್ಷಣ ಸಂಸ್ಥೆಯಲ್ಲೊಂದು ಕ್ರಾಂತಿಕಾರಕ ಉಪಕ್ರಮ; ಸೇನಾ ಮಾದರಿಯ ಸಮವಸ್ತ್ರದೊಂದಿಗೆ ಪುಳಕಿತರಾಗುತ್ತಿರುವ ವಿದ್ಯಾರ್ಥಿ ಸಮೂಹ
ಸಮವಸ್ತ್ರ ಕೇವಲ ಗುರುತಾಗಿದ್ದರಷ್ಟೇ ಸಾಲದು, ಅದು ಧರಿಸಿದವನ ಅಂತರಂಗದಲ್ಲಿ ದೇಶಭಕ್ತಿಯ ಪುಳಕವನ್ನು ಮೂಡಿಸಬೇಕೆಂಬ ವಿನೂತನ ಕಲ್ಪನೆಯೊಂದಿಗೆ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಇಂತಹ ಸಮವಸ್ತ್ರವನ್ನು ಜಾರಿಗೊಳಿಸಲಾಗಿದೆ.
ಪುತ್ತೂರು: ಶಾಲಾ ಕಾಲೇಜು ಅಂದ ಮೇಲೆ ಸಮವಸ್ತçಗಳು ಮಾಮೂಲಿ. ಒಂದೊಂದು ಶಿಕ್ಷಣ ಸಂಸ್ಥೆಯಲ್ಲಿ ಒಂದೊಂದು ಬಗೆಯ ಸಮವಸ್ತ್ರ. ಹಾಗಾಗಿ ಸಮವಸ್ತ್ರವನ್ನು ನೋಡಿಯೇ ವಿದ್ಯಾರ್ಥಿಗಳು ಯಾವ ಸಂಸ್ಥೆಗೆ ಸೇರಿದವರೆಂದು ಸುಲಭವಾಗಿಯೇ ಗುರುತಿಸಬಹುದು. ಒಟ್ಟಿನಲ್ಲಿ ನಿಗದಿತವಾದ ಬಣ್ಣ ನಿಗದಿತ ಸಂಸ್ಥೆಯನ್ನು ಪ್ರತಿನಿಧಿಸುತ್ತದೆ. ಆದರೆ ಸಮವಸ್ತ್ರಕೇವಲ ಗುರುತಾಗಿದ್ದರಷ್ಟೇ ಸಾಲದು, ಅದು ಧರಿಸಿದವನ ಅಂತರಂಗದಲ್ಲಿ ದೇಶಭಕ್ತಿಯ ಪುಳಕವನ್ನು ಮೂಡಿಸಬೇಕೆಂಬ ವಿನೂತನ ಕಲ್ಪನೆಯೊಂದಿಗೆ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಇಂತಹ ಸಮವಸ್ತ್ರವನ್ನು ಜಾರಿಗೊಳಿಸಲಾಗಿದೆ.
ಅದರ ಪರಿಣಾಮ ಅಂಬಿಕಾ ಮಕ್ಕಳನ್ನು ಸಮವಸ್ತçದಲ್ಲಿ ಕಾಣುವಾಗ ದೇಶದ ಗಡಿ ರಕ್ಷಣೆಯ ಮೂಲಕ ದೇಶದ ಸಮಸ್ತ ನಾಗರಿಕರನ್ನು ಪೊರೆಯುವ ವೀರ ಸೈನಿಕರೆಲ್ಲರೂ ಎದುರು ಬಂದು ನಿಂತಂತೆ ಭಾಸವಾಗುತ್ತದೆ,

ಅಂಬಿಕಾ ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ದೇಶಪ್ರೇಮ ತುಂಬುವ ಕಾಯಕವನ್ನು ಅತ್ಯಂತ ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿವೆ. ಪುತ್ತೂರಿನಲ್ಲಿ ದಕ್ಷಿಣ ಭಾರತದ ಏಕೈಕ ಖಾಸಗಿ ಅಮರ್ ಜವಾನ್ ಜ್ಯೋತಿ ಸ್ಮಾರಕ ನಿರ್ಮಿಸಿದ ಹೆಗ್ಗಳಿಕೆಯೂ ಅಂಬಿಕಾಕ್ಕಿದೆ. ಕಾರ್ಗಿಲ್ ಯುದ್ಧದಲ್ಲಿ ಭಾಗಿಗಳಾಗಿ ಭಾರತೀಯ ಸೇನೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ಪರಮ ವೀರ ಚಕ್ರ ಪುರಸ್ಕೃತ ಇಬ್ಬರು ಯೋಧರಾದ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಕ್ಯಾಪ್ಟನ್ ಸಂಜಯ್ ಕುಮಾರ್ ಅವರನ್ನು ಕ್ಯಾಂಪಸ್ ಗೆ ಕರೆಸಿ ವಿದ್ಯಾರ್ಥಿ ಸಮುದಾಯಕ್ಕೆ ಈ ದೇಶದ ನೈಜ ಹೀರೋಗಳನ್ನು ಪರಿಚಯಿಸಿದ ಹೆಮ್ಮೆಯೂ ಅಂಬಿಕಾಕ್ಕೆ ಸಲ್ಲುತ್ತದೆ. ಇದರೊಂದಿಗೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದುವರೆದು ಮಕ್ಕಳಲ್ಲಿ ಸದಾ ದೇಶಭಕ್ತಿ ಸ್ಫುರಿಸುವಂತೆ ಮಾಡುವ ಉದ್ದೇಶದೊಂದಿಗೆ ಸೇನಾ ಮಾದರಿಯ ಸಮವಸ್ತçವನ್ನು ಪ್ರಸ್ತುತ ವರ್ಷದಿಂದ ಪರಿಚಯಿಸಲಾಗಿದೆ.
ಸಾಮಾನ್ಯವಾಗಿ ಸಿಬಿಎಸ್‌ಇ ಅಥವ ರಾಜ್ಯ ಆಂಗ್ಲಮಾಧ್ಯಮ ಸಿಲೆಬಸ್‌ನ ಪ್ರತಿಯೊಂದು ಸಂಸ್ಥೆಯಲ್ಲೂ ಒಂದನೆಯಿಂದ ಹತ್ತನೆಯವರೆಗಿನ ವಿದ್ಯಾರ್ಥಿಗಳನ್ನು ನಾಲ್ಕು ಹೌಸ್‌ಗಳಾಗಿ ವಿಂಗಡಣೆ ಮಾಡಿ ಆ ನಾಲ್ಕು ಹೌಸ್‌ಗಳ ಮಧ್ಯೆ ವಿವಿಧ ಸ್ಪರ್ಧೆ, ಕ್ರೀಡೆ, ಚಟುವಟಿಕೆಗಳನ್ನು ನಡಸಲಾಗುತ್ತದೆ. ವಾರದಲ್ಲಿ ಒಂದು ದಿನ ಇಂತಹ ಚಟುವಟಿಕೆಗಳು ನಡೆಯುತ್ತವೆ. ಹಾಗೆ ಚಟುವಟಿಕೆ ನಡೆಸುವ ದಿನಕ್ಕೆಂದೇ ಈ ವಿಶೇಷ ಸೇನಾ ಮಾದರಿ ಸಮವಸ್ತ್ರವನ್ನು ತಯಾರು ಮಾಡಲಾಗಿದೆ.
ಏನಿದು ಸೇನಾ ಮಾದರಿ ಸಮವಸ್ತ್ರ? :
ಇದು ಭಾರತೀಯ ಸೇನೆಯ ಅಧಿಕಾರಿಗಳಾಗಲೀ, ಯೋಧರಾಗಲೀ ಬಳಸುವ ಬಣ್ಣದ ಸಮವಸ್ತ್ರವಲ್ಲ. ಅಂತಹದ್ದನ್ನು ಬಳಸುವುದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ. ಬದಲಾಗಿ ಇದು ಸೇನಾ ಮಾದರಿಯ ಸಮವಸ್ತ್ರ ಅರ್ಥಾತ್ ಭಾರತೀಯ ಸೇನೆ ತನ್ನ ಸೈನಿಕರಿಗೆ ಸಮವಸ್ತ್ರವನ್ನು ಯಾವ ಮಾದರಿಯಲ್ಲಿ ಹೊಲಿಸುತ್ತದೋ ಅದನ್ನೇ ಮಾದರಿಯಾಗಿರಿಸಿಕೊಂಡು ಈ ಸಮವಸ್ತ್ರಗಳನ್ನೂ ಹೊಲಿಸಲಾಗಿದೆ. ಪೂರ್ತಿ ಕೈ ಮುಚ್ಚುವ ಕ್ರಮವಿರಬಹುದು, ಎದುರು ಎರಡು ಕಿಸೆಗಳಿರುವ ಮಾದರಿ ಇರಬಹುದು, ಹೆಗಲ ಮೇಲೆ ಪಟ್ಟಿ ಬರುವ ಕ್ರಮ ಇರಬಹುದು, ಬೆಲ್ಟ್ ಧರಿಸುವ ವಿಧಾನ ಇರಬಹುದು… ಇವೆಲ್ಲದರಲ್ಲಿಯೂ ಸೇನಾ ಮಾದರಿಯನ್ನು ಅನುಸರಿಸಲಾಗಿದೆ.
ರೆಜಿಮೆಂಟ್‌ಗಳ ಹೆಸರು :
ಶಾಲೆಯಲ್ಲಿರುವ ನಾಲ್ಕು ಹೌಸ್‌ಗಳನ್ನು ಭಾರತೀಯ ಸೇನೆಯಲ್ಲಿನ ರೆಜಿಮೆಂಟ್‌ಗಳ ಹೆಸರಿನಡಿ ಗುರುತಿಸಲಾಗುತ್ತಿದೆ. ರಜಪೂತ್, ಮರಾಠಾ, ನಾಗಾ ಹಾಗೂ ಗೂರ್ಖಾ ಹೆಸರಿನಿಂದ ಆಯಾ ಹೌಸ್ ಅನ್ನು ಕರೆಯಲಾಗುತ್ತದೆ. ಅಂತೆಯೇ ಸೇನೆಯಲ್ಲಿ ಪ್ರತಿಯೊಂದು ರೆಜಿಮೆಂಟ್‌ಗೂ ಅದರದೇ ಆದ ಘೋಷ ವಾಕ್ಯ ಇರುವಂತೆ ಇಲ್ಲಿಯೂ ಒಂದೊಂದು ಹೌಸ್‌ಗೆ ಒಂದೊಂದು ಘೋಷವಾಕ್ಯ ನೀಡಲಾಗಿದೆ. ರಜಪೂತ್ ಗೆ ಬೋಲೋ ಭಜರಂಗ ಬಲಿ ಕಿ ಜೈ ಎಂಬ ಘೋಷ ವಾಕ್ಯವಾದರೆ ಮರಾಠಾಕ್ಕೆ ಹರಹರ ಮಹಾದೇವ್ ಘೋಷವಾಕ್ಯವಾಗಿದೆ. ಅಂತೆಯೇ ನಾಗಾಕ್ಕೆ ಜೈ ದುರ್ಗಾ ಹಾಗೂ ಗೂರ್ಖಾಕ್ಕೆ ಆಯುರ್ ಗೋರ್ಖಲಿ ಎಂಬ ವಾಕ್ಯವನ್ನು ಪ್ರದಾನಿಸಲಾಗಿದೆ.
ಆರಂಭದಲ್ಲಿ ಈ ಸಮವಸ್ತçದ ಯಶಸ್ಸಿನ ಬಗೆಗೆ ಪ್ರಶ್ನೆಗಳಿದ್ದವು. ಆದರೆ ಮಕ್ಕಳು ಈಗ ಈ ಸಮವಸ್ತ್ರವನ್ನು ಎಷ್ಟೊಂದು ಗಾಢವಾಗಿ ಪ್ರೀತಿಸುತ್ತಿದ್ದಾರೆ ಎಂದರೆ ಪ್ರತಿ ಶನಿವಾರ ಬರುವುದನ್ನೇ ಮಕ್ಕಳು ಕಾಯುತ್ತಿದ್ದಾರೆ. ಈಸಮವಸ್ತ್ರ ಧರಿಸಿ ತಮ್ಮ ತಮ್ಮ ಘೋಷಣೆಗಳನ್ನು ಕೂಗುವ ಸಂದರ್ಭದಲ್ಲಿ ಇಡಿಯ ಕ್ಯಾಂಪಸ್ ಗಡಿ ಭಾಗದಲ್ಲಿ ನಿಂತ ಸೇನೆಯ ಭಾವವನ್ನು ತರುತ್ತಿದೆ. ಮಕ್ಕಳು ಈ ಸಮವಸ್ತ್ರ ಧರಿಸುವುದಕ್ಕೆ ಅತೀವ ಹೆಮ್ಮೆ ಪಡುತ್ತಿದ್ದಾರೆ ಎನ್ನುವುದು ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ. ಅವರ ಮಾತು.
ಸಂಸ್ಥೆಯಲ್ಲಿ ಒಂದನೆಯಿಂದ ಹತ್ತನೆಯವರೆಗೆ ಸುಮಾರು 437 ಮಂದಿ ವಿದ್ಯಾರ್ಥಿಗಳಿದ್ದಾರೆ. ಶನಿವಾರ ಬಂತೆಂದರೆ ಈ ಎಲ್ಲಾ ಮಕ್ಕಳು ತಮಗೆ ನೀಡಲಾದ ಸಮವಸ್ತ್ರ ಧರಿಸಿ ಸಂಸ್ಥೆಗೆ ಆಗಮಿಸುತ್ತಿದ್ದಾರೆ. ಕೆಲವೊಮ್ಮೆ ಚಟುವಟಿಕೆಗಳು ಶನಿವಾರವಲ್ಲದೆ ಇನ್ನಿತರ ದಿನಗಳಿಗೂ ವಿಸ್ತಾರವಾದಾಗ ಮಕ್ಕಳು ಆ ದಿನಗಳಲ್ಲೂ ಈ ವಿಶೇಷ ಸಮವಸ್ತ್ರದಲ್ಲೇ ಆಗಮಿಸಿ ಪುಳಕಿತರಾಗುತ್ತಿದ್ದಾರೆ. ಮಕ್ಕಳನ್ನು ಸೇನಾ ಮಾದರಿ ಸಮವಸ್ತçದಲ್ಲಿ ಕಂಡು ಹೆತ್ತವರೂ ಧನ್ಯರಾಗುತ್ತಿದ್ದಾರೆ. ಇಂತಹ ಸಮವಸ್ತ್ರವನ್ನು ನೀಡಿ ಮಕ್ಕಳಲ್ಲಿ ಹೆಮ್ಮೆಯ ಭಾವ ಮೂಡಿಸಿದ್ದಕ್ಕಾಗಿ ಸಂಸ್ಥೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದಾರೆ.
ಕೇವಲ ಸಮವಸ್ತ್ರವಷ್ಟೇ ಅಲ್ಲ. ಮಕ್ಕಳು ಅದನ್ನು ಧರಿಸಿ ಬರುವ ಶನಿವಾರದಂದು ಯಾರಾದರೊಬ್ಬ ಸಂಪನ್ಮೂಲ ವ್ಯಕ್ತಿಗಳನ್ನು ಕರೆದು ಭಾರತೀಯ ಸೇನೆಯ ವೀರಯೋಧನೊಬ್ಬನ ಪರಾಕ್ರಮದ ಕಥಾನಕವನ್ನು ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ. ಹೇಗೆ ಭಾರತೀಯ ಸೇನೆ ಹಾಗೂ ಕ್ಷಾತ್ರ ತೇಜಸ್ಸಿನ ಯೋಧರು ನಮ್ಮ ದೇಶವನ್ನು ರಕ್ಷಿಸುತ್ತಿದ್ದಾರೆಂಬ ಮಾಹಿತಿಯನ್ನು ಮಕ್ಕಳಿಗೆ ನಿರಂತರವಾಗಿ ತಿಳಿಸಿಕೊಡಲಾಗುತ್ತದೆ.
ಈ ಸಮವಸ್ತ್ರವನ್ನು ಜಾರಿ ಮಾಡಿರುವುದರ ಹಿಂದೆ ಬಹುದೊಡ್ಡ ಕನಸಿದೆ. ಮೊದಲನೆಯದಾಗಿ ಮಕ್ಕಳು ಸೇನೆಯೆಡೆಗೆ ಆಸಕ್ತಿ ಬೆಳೆಸಿಕೊಳ್ಳುವಲ್ಲಿ ಇದೊಂದು ಪ್ರೇರಣೆಯಾಗಬೇಕು. ಅಷ್ಟು ಮಾತ್ರವಲ್ಲ, ಮಕ್ಕಳು ಮುಂದೆ ಇಂಜಿನಿಯರ್, ಮೆಡಿಕಲ್, ಸಿ.ಎ, ಹೀಗೆ ಯಾವುದೇ ಕ್ಷೇತ್ರದಲ್ಲಿ ಮುಂದುವರೆದರೂ ಅವರವರ ಕ್ಷೇತ್ರದಲ್ಲಿ ಈ ದೇಶದ ವೀರ ಸೈನಿಕರಂತೆ ಯಾವತ್ತೂ ಎದೆಗುಂದದೆ, ಆತ್ಮಸ್ಥೈರ್ಯ ಕಳೆದುಕೊಳ್ಳದೆ ದೇಶಭಕ್ತರಾಗಿ ಮುನ್ನಡೆಯುವಂತಾಗಬೇಕು. ಎಂತಹ ಸಂದರ್ಭದಲ್ಲೂ ಕೈಚೆಲ್ಲಿ ಸೋಲೊಪ್ಪುವಂತಹವರಾಗಬಾರದು. ಅಂತಹ ಕ್ಷಾತ್ರ ವರ್ಚಸ್ಸನ್ನು ಮಕ್ಕಳಲ್ಲಿ ತುಂಬುವ ಉದ್ದೇಶವೂ ಈ ಸಮವಸ್ತçದ ಹಿಂದಿದೆ.
- ಸುಬ್ರಮಣ್ಯ ನಟ್ಟೋಜ, ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು
ಶಿಕ್ಷಣ
Narendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಪುತ್ತೂರಿನ ನಿವಾಸಿಗಳಾದ ಪ್ರದೀಪ್ ಜೈನ್ ಮತ್ತು ಪ್ರೇಕ್ಷ ದಂಪತಿಗಳ ಪುತ್ರಿ.
ಹೈದರಾಬಾದ್ ನಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ಕ್ಷೇತ್ರಮಟ್ಟದ ಕ್ರೀಡಾಕೂಟದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಲಿಖಿತ್ ಎನ್. ಇವರು 1500ಮೀ., 3000ಮೀ ರೇಸ್ ನಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಇವರು ಪುಣಚ ನಿವಾಸಿಗಳಾದ ಮೋಹನ ನಾಯ್ಕ್ ಎನ್. ಮತ್ತು ಭವ್ಯ ದಂಪತಿಗಳ ಪುತ್ರ.
ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ, ಬಳ್ಳಾರಿಯಲ್ಲಿ ನಡೆದ ಪ್ರಾಂತೀಯ ಮಟ್ಟದ ಗಣಿತ ವಿಜ್ಞಾನ ಮೇಳ, ಸಂಸ್ಕೃತಿ ಮಹೋತ್ಸವದ ಸ್ಪರ್ಧೆಗಳಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಕುಶಿತ್ ಆರ್. ಗೌಡ ಇವರು ಫಿಸಿಕ್ಸ್ ಎಕ್ಸ್ ಪರಿಮೆಂಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಪುತ್ತೂರಿನ ನಿವಾಸಿಗಳಾದ ರಾಜೇಶ್ ಮತ್ತು ನಳಿನಿ ದಂಪತಿಗಳ ಪುತ್ರ.
ಶಿಕ್ಷಣ
Vivekananda-ವಿವೇಕಾನಂದ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ; ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಅಗತ್ಯ : ಪ್ರತಿಮಾ
ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿಯ ಸಹಯೋಗದೊಂದಿಗೆ ನಡೆದ ಐದು ದಿನಗಳ ‘ಯುಜಿಸಿ-ನೆಟ್/ಕೆ-ಸೆಟ್ ಪರೀಕ್ಷೆಗಳ ಪ್ರಿಪರೇಷನ್ ಟೂಲ್ಸ್’ ವಿಷಯದ ಕುರಿತಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಬೆಳ್ಳಾರೆಯ ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರಾ ಮಾತನಾಡಿದರು.
ಪುತ್ತೂರು,ಅ.1: ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಸರ್ಟಿಫಿಕೇಟ್ ಮಾತ್ರವಲ್ಲ, ಉಜ್ವಲ ಭವಿಷ್ಯ, ಒಳ್ಳೆಯ ವೇತನ ಹಾಗೂ ಹೆಸರು ಇತ್ಯಾದಿಗಳೆಲ್ಲವೂ ಲಭಿಸಲಿದೆ. ಇಂದಿನ ಕಾಲದಲ್ಲಿ ಕಲಿಕೆಗೆ ಬೇಕಾದ ಅನೇಕ ಸಂಪನ್ಮೂಲಗಳು ಲಭ್ಯವಿರುವಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಪೂರ್ವಸಿದ್ಧತೆ ಎಂಬುದು ನಾವು ಉತ್ತೀರ್ಣರಾಗಲು ಅತ್ಯಗತ್ಯ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಸಕ್ರಿಯರಾಗಿ ಅಧ್ಯಯನ ನಡೆಸಿ ಎಲ್ಲಾ ರೀತಿಯಿಂದಲೂ ಸಿದ್ಧರಾಗಿ ಪರೀಕ್ಷೆಯನ್ನು ಜಯಿಸಬೇಕು ಎಂದು ಬೆಳ್ಳಾರೆಯ ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರಾ ತಿಳಿಸಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿಯ ಸಹಯೋಗದೊಂದಿಗೆ ನಡೆದ ಐದು ದಿನಗಳ ‘ಯುಜಿಸಿ-ನೆಟ್/ಕೆ-ಸೆಟ್ ಪರೀಕ್ಷೆಗಳ ಪ್ರಿಪರೇಷನ್ ಟೂಲ್ಸ್’ ವಿಷಯದ ಕುರಿತಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿ ಅಧ್ಯಾಪಕ ವೃತ್ತಿಯನ್ನು ಬಯಸಿ ಹೋಗುವವರಿಗೆ, ಸಂಶೋಧನಾ ಕ್ಷೇತ್ರವನ್ನು ಆರಿಸುವವರಿಗೆ ನೆಟ್ ಹಾಗೂ ಕೆ-ಸೆಟ್ ಪರೀಕ್ಷೆಗಳನ್ನು ಪೂರ್ಣಗೊಳಿಸುವುದು ಅಗತ್ಯ. ಪರೀಕ್ಷೆಗೆ ಸಿದ್ಧರಾಗಲು ನಿರಂತರವಾಗಿ ಓದಿನಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಇವುಗಳ ಪಠ್ಯಕ್ರಮಗಳನ್ನು ಅಭ್ಯಾಸಿಸಿ ಪರಿಣತರಿಂದ ಮಾರ್ಗದರ್ಶನವನ್ನು ಪಡೆದು ಯಶಸ್ಸು ಗಳಿಸಬೇಕಿದೆ ಎಂದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ.ಬಿ ಸ್ವಾಗತಿಸಿ ಪ್ರಥಮ ಎಂಕಾಂ ವಿದ್ಯಾರ್ಥಿ ಧನರಾಜ್ ವಂದಿಸಿದರು. ಪ್ರಥಮ ಎಂಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಯು.ಕೆ ನಿರೂಪಿಸಿದರು.
ಶಿಕ್ಷಣ
Philomena-ಸಂತ ಫಿಲೋಮಿನಾ ಪ ಪೂ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಣೆಯು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಣೆಯು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು
ಫಾ. ಮರ್ವಿನ್ ಲೋಬೊ ಮಾತನಾಡಿ, ಗಾಂಧೀಜಿಯವರ ಜೀವನ ನಮಗೆ ದಾರಿದೀಪವಾಗಿದ್ದು, ಪ್ರತಿಯೊಬ್ಬರು ಅವರು ತೋರಿಸಿಕೊಟ್ಟ ಹಾದಿಯಲ್ಲಿ ಮುನ್ನಡೆಯಬೇಕು.
ಮುಖ್ಯವಾಗಿ ಸತ್ಯ ಮತ್ತು ಅಹಿಂಸೆ ಗಾಂಧೀಜಿಯವರು ತೋರಿಸಿದ ಎರಡು ಮಾರ್ಗಗಳು. ಇಂದು ಅಹಿಂಸೆ ಕೇವಲ ಭೌತಿಕವಾಗಿ ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣ ಗಳಲ್ಲಿ ಕೂಡ ಪಾಲನೆಯನ್ನು ಮಾಡಬೇಕಾಗಿದೆ. ಗಾಂಧೀಜಿಯ ಮರಣದ 78 ವರ್ಷಗಳ ನಂತರವೂ ಗಾಂಧೀಜಿಯವರ ಜೀವನ ಅತ್ಯಂತ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಮಹಾತ್ಮಾ ಗಾಂದೀಜಿಯವರ ಸರಳ ಜೀವನ ನಮಗೆ ಪಾಠವಾಗಬೇಕು. ಅವರಿಗೆ ಅತ್ಯಂತ ವಿಲಾಸಿ ಜೀವನವನ್ನು ನಡೆಸುವ ಅವಕಾಶ ಇದ್ದರೂ, ಕೂಡ ಭಾರತೀಯರಿಗಾಗಿ ಅವರು ಸರಳ ಮತ್ತು ನ್ಯಾಯ ಸಮ್ಮತ ಜೀವನವನ್ನು ಆಯ್ಕೆ ಮಾಡಿಕೊಂಡರು.

ಸತ್ಯದೊಂದಿಗಿನ ನನ್ನ ಪ್ರಯೋಗಗಳು ಎನ್ನುವ ಪುಸ್ತಕದಲ್ಲಿ ಅವರು ಅವರ ಜೀವನದಲ್ಲಿ ನಡೆದಂತಹ ಘಟನೆಗಳನ್ನು ವಿವರಿಸಿದ್ದು, ಇಂದಿನ ಯುವಕರು ಕಡ್ಡಾಯವಾಗಿ ಈ ಪುಸ್ತಕವನ್ನು ಓದಬೇಕೆಂದು ತಿಳಿಸಿದರು.
ಉಪನ್ಯಾಸಕರಾದ ಭರತ್ ಕುಮಾರ್ ಗಾಂಧೀಜಿಯವರ ತತ್ವ, ಸಿದ್ಧಾಂತಗಳ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಯಶವಂತ್ ಎಂ ಡಿ ಹಾಗೂ ಗೋವಿಂದ್ ಪ್ರಕಾಶ್ ಸಿ. ಏಚ್ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾಲೇಜಿನ ಬೋಧಕ/ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕರಾದ ಸುಮಾ ಡಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
-
ಪುತ್ತೂರು18 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್ಮ್ಯಾನ್ ಮೃತ್ಯು
-
ಬಿಗ್ ನ್ಯೂಸ್21 hours agoArshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
-
ಮಂಗಳೂರು21 hours agoCM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
-
ಬಿಗ್ ನ್ಯೂಸ್20 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ಶಿಕ್ಷಣ21 hours agoSpecial classes: ಮಳೆ ರಜೆ ಹೊಂದಾಣಿಕೆ: ಅ.3ರಿಂದ ಅ.7ರವರೆಗೆ ದಸರಾ ರಜೆಯಲ್ಲೂ ವಿಶೇಷ ತರಗತಿ
-
ರಾಜ್ಯ24 hours agoTemperature-ಹಿಂಗಾರು ಮಳೆ ಇಳಿಮುಖ, ಬಿಸಿಲು ಏರುಮುಖ; ಕರ್ನಾಟಕಕ್ಕೆ ಹವಾಮಾನ ಎಚ್ಚರಿಕೆ..!
-
ಅಪರಾಧ20 hours agoMangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ
-
ಶಿಕ್ಷಣ21 hours agoNarendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ


















