Connect with us

ಸುಳ್ಯ

ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಪ್ರತಿಷ್ಠಿತ ‘ರೈತ ರತ್ನ ಪ್ರಶಸ್ತಿ-2026’ಗೆ ಗ್ರಾಮಜನ್ಯ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಭಾಜನ

Published

on



Ad Widget

Ad Widget

Ad Widget

Ad Widget

ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ, ಪುತ್ತೂರಿನ ‘ಗ್ರಾಮಜನ್ಯ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್’ ಸಂಸ್ಥೆಯು ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ರೈತ ರತ್ನ ಪ್ರಶಸ್ತಿ-2026’ಗೆ ಆಯ್ಕೆಯಾಗಿದೆ.

Ad Widget

Ad Widget

Ad Widget

Ad Widget

ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿ ನಡೆಸಿಕೊಂಡು ಬರುತ್ತಿರುವ ನಿರಂತರ ಸಮಾಜಮುಖಿ ಕಾರ್ಯ ಹಾಗೂ ರೈತರ ಸಬಲೀಕರಣವನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಥೆ, “ಈ ಪ್ರಶಸ್ತಿಯು ಕೇವಲ ಒಂದು ಸಂಸ್ಥೆಯ ಸಾಧನೆಯಲ್ಲ; ಬದಲಾಗಿ ಸಂಸ್ಥೆಯೊಂದಿಗೆ ಕೈಜೋಡಿಸಿರುವ 1,000ಕ್ಕೂ ಅಧಿಕ ರೈತ ಷೇರುದಾರರು, ಜೇನು ಕೃಷಿಕರು, ಸಿಬ್ಬಂದಿವರ್ಗ, ನಿರ್ದೇಶಕರು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಸಹಭಾಗಿತ್ವ ಹೊಂದಿರುವ ಪ್ರತಿಯೊಬ್ಬರ ಹಗಲಿರುಳ ಪರಿಶ್ರಮಕ್ಕೆ ಸಿಕ್ಕ ಅರ್ಹ ಮಾನ್ಯತೆಯಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದೆ.

Ad Widget

Ad Widget <> Ad Widget

ಸುಸ್ಥಿರ ಕೃಷಿಗೆ ಉತ್ತೇಜನ:



Ad Widget

ರೈತರ ಆರ್ಥಿಕ ಸಬಲೀಕರಣ, ಗುಣಮಟ್ಟದ ಕೃಷಿ ಉತ್ಪನ್ನಗಳ ಉತ್ತೇಜನ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಪ್ರಚಾರದಲ್ಲಿ ಗ್ರಾಮಜನ್ಯ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸಂಸ್ಥೆಯ ಈ ಶ್ರಮವನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

Ad Widget

Ad Widget

“ಆಗಸ್ಟ್ 2ರ ಭಾನುವಾರ ನಡೆಯಲಿರುವ ಸಂಸ್ಥೆಯ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಪ್ರತಿಷ್ಠಿತ ಗೌರವವು ನಮ್ಮ ಸಂಸ್ಥೆಯ ಮೇಲಿರುವ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಬರುವ ದಿನಗಳಲ್ಲಿ ರೈತರ ಅಭಿವೃದ್ಧಿ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಉತ್ಪಾದನೆ ಹಾಗೂ ರೈತಪರ ಚಟುವಟಿಕೆಗಳಿಗೆ ಈ ಪ್ರಶಸ್ತಿ ದೊಡ್ಡ ಪ್ರೇರಣೆಯಾಗಿದೆ.”

  • ಗ್ರಾಮಜನ್ಯ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಆಡಳಿತ ಮಂಡಳಿ

ಆಯ್ಕೆ ಮಾಡಿದ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿರುವ ಆಡಳಿತ ಮಂಡಳಿ, “ಈ ಸಾಧನೆ ಸಂಸ್ಥೆಯದ್ದಲ್ಲ, ಪ್ರತಿಯೊಬ್ಬ ರೈತನದ್ದು. ರೈತರಿಂದ… ರೈತರಿಗಾಗಿ… ರೈತರ ಅಭಿವೃದ್ಧಿಗಾಗಿ…” ಎಂಬ ಧ್ಯೇಯವಾಕ್ಯದೊಂದಿಗೆ ಮುಂದೆಯೂ ನಿರಂತರವಾಗಿ ಶ್ರಮಿಸುವುದಾಗಿ ತಿಳಿಸಿದೆ.

Ad Widget
Click to comment

Leave a Reply

ಸುಳ್ಯ

Sevaratna-ಕಲ್ಪವೃಕ್ಷದ ಕಾಯಕಯೋಗಿಗೆ ‘ಸೇವಾರತ್ನ’ ಗೌರವ; 20 ವರ್ಷಗಳ ನಿರಂತರ ಕಾಯಕಕ್ಕೆ ಅಚ್ಚುತ ನಾಯಕ್ ಕಿಲಂಗೋಡಿಯವರಿಗೆ ಜಿಲ್ಲಾಮಟ್ಟದ ಪ್ರಶಸ್ತಿ

Published

on



Ad Widget

Ad Widget

Ad Widget

Ad Widget

ಕಲ್ಪವೃಕ್ಷವೆಂದೇ ಕರೆಯಲ್ಪಡುವ ತೆಂಗಿನ ಮರವನ್ನು ಏರಿ, ಕಳೆದ ಎರಡು ದಶಕಗಳಿಂದ ರೈತರು ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಕಳಂಜ ಗ್ರಾಮದ ಶ್ರೀ ಅಚ್ಚುತ ನಾಯಕ್ ಕಿಲಂಗೋಡಿಯವರು ತಮ್ಮ ಕಾಯಕನಿಷ್ಠೆ ಹಾಗೂ ಸೇವೆಯಿಂದ ಇದೀಗ ಜಿಲ್ಲಾಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.

Ad Widget

Ad Widget

Ad Widget

Ad Widget

ಸುಳ್ಯ: ಕಲ್ಪವೃಕ್ಷವೆಂದೇ ಕರೆಯಲ್ಪಡುವ ತೆಂಗಿನ ಮರವನ್ನು ಏರಿ, ಕಳೆದ ಎರಡು ದಶಕಗಳಿಂದ ರೈತರು ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಕಳಂಜ ಗ್ರಾಮದ ಶ್ರೀ ಅಚ್ಚುತ ನಾಯಕ್ ಕಿಲಂಗೋಡಿಯವರು ತಮ್ಮ ಕಾಯಕನಿಷ್ಠೆ ಹಾಗೂ ಸೇವೆಯಿಂದ ಇದೀಗ ಜಿಲ್ಲಾಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆಕ್ಸಿಸ್ ಬ್ಯಾಂಕ್ ಹಾಗೂ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ವತಿಯಿಂದ ಕೊಡಮಾಡುವ ಜಿಲ್ಲಾಮಟ್ಟದ ‘ಸೇವಾರತ್ನ ಪ್ರಶಸ್ತಿ’ಗೆ ಅಚ್ಚುತ ನಾಯಕ್ ಕಿಲಂಗೋಡಿಯವರನ್ನು ಆಯ್ಕೆ ಮಾಡಲಾಗಿದೆ.
ಒಕ್ಟೊಬರ್ 9ರಂದು ಸಂಜೆ 4.30ಕ್ಕೆ ಮoಗಳೂರಿನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Ad Widget

Ad Widget <> Ad Widget

ತೆಂಗಿನ ಮರವೇರುವುದು ಸುಲಭದ ಕೆಲಸವಲ್ಲ. ಮರದ ಎತ್ತರ, ಗಾಳಿಯ ವೇಗ, ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಮರದ ತುದಿಗೆ ಏರಿ ತೆಂಗಿನಕಾಯಿಗಳನ್ನು ಕೊಯ್ದು ಕೆಳಗಿಳಿಸುವ ಈ ಕಾಯಕಕ್ಕೆ ಧೈರ್ಯ, ದೈಹಿಕ ಸಾಮರ್ಥ್ಯ, ಕೌಶಲ್ಯ ಹಾಗೂ ಅಪಾರ ಅನುಭವದ ಅಗತ್ಯವಿದೆ. ಇಂತಹ ಅಪಾಯಭರಿತ ಕಾಯಕವನ್ನು ಅಚ್ಚುತ ನಾಯಕ್ ಅವರು ಕಳೆದ 20 ವರ್ಷಗಳಿಂದ ಅತ್ಯಂತ ಪ್ರಾಮಾಣಿಕತೆ ಮತ್ತು ಕಾಯಕನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದಾರೆ.
ಕಳಂಜ ಗ್ರಾಮಕ್ಕೆ ಮಾತ್ರ ಸೀಮಿತವಾಗದೆ ಸುಳ್ಯ ತಾಲೂಕು ಹಾಗೂ ಹೊರ ತಾಲೂಕುಗಳ ವಿವಿಧ ಪ್ರದೇಶಗಳಿಗೆ ತೆರಳಿ, ರೈತರು ಮತ್ತು ಸಾರ್ವಜನಿಕರ ತೆಂಗಿನ ಮರಗಳಿಂದ ತೆಂಗಿನಕಾಯಿಗಳನ್ನು ಕೊಯ್ದು ತೆಗೆದು ಕೊಡುವ ಸೇವೆಯನ್ನು ಅವರು ನಿರಂತರವಾಗಿ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅತ್ಯಗತ್ಯವಾಗಿರುವ ಈ ಸೇವೆಯನ್ನು ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ಮಾಡುತ್ತಿರುವುದು ಅವರ ಕಾಯಕದ ವಿಶೇಷತೆಯಾಗಿದೆ.



Ad Widget

ಮೌನ ಸಾಧಕರ ಸೇವೆಗೆ ಮತ್ತೊಂದು ಗೌರವ
ಅಚ್ಚುತ ನಾಯಕ್ ಅವರ ಸೇವೆಯನ್ನು ಈಗಾಗಲೇ ಹಲವು ಸಂಸ್ಥೆಗಳು ಗುರುತಿಸಿವೆ. ರೋಟರಿ ಕ್ಲಬ್ ಬೆಳ್ಳಾರೆ ಸಂಸ್ಥೆಯು 2018–19ನೇ ಸಾಲಿನಲ್ಲಿ ಅವರ ಸೇವೆಯನ್ನು ಗುರುತಿಸಿ ಗೌರವಿಸಿತ್ತು.
ಅದೇ ರೀತಿ ಜೆಸಿಐ ಬೆಳ್ಳಾರೆ ಸಂಸ್ಥೆಯು 2025ರಲ್ಲಿ ಅವರ ನಿರಂತರ ಹಾಗೂ ಶ್ರಮದಾಯಕ ಸೇವೆಯನ್ನು ಗುರುತಿಸಿ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿ ನೀಡಿ ಗೌರವಿಸಿತ್ತು.

Ad Widget

Ad Widget

ಯಾವುದೇ ಪ್ರಚಾರದ ಹಿಂದೆ ಹೋಗದೆ, ತನ್ನ ಶ್ರಮವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಪ್ರತಿದಿನವೂ ದುಡಿಯುತ್ತಿರುವ ಅಚ್ಚುತ ನಾಯಕ್ ಅವರು ನಿಜವಾದ ಮೌನ ಕಾಯಕಯೋಗಿ. ತೆಂಗಿನ ಮರದ ತುದಿಯಲ್ಲಿ ನಿಂತು ಅವರು ಮಾಡುವ ಪ್ರತಿಯೊಂದು ಕೆಲಸದ ಹಿಂದೆಯೂ ಧೈರ್ಯ, ಪರಿಶ್ರಮ, ಕೌಶಲ್ಯ ಮತ್ತು ಕುಟುಂಬದ ಬದುಕಿಗಾಗಿ ನಡೆಸುವ ಪ್ರಾಮಾಣಿಕ ಹೋರಾಟವಿದೆ.

ಕಲ್ಪವೃಕ್ಷದೊಂದಿಗೆ ಎರಡು ದಶಕಗಳ ಕಾಲ ನಂಟು ಬೆಳೆಸಿಕೊಂಡಿರುವ ಅಚ್ಚುತ ನಾಯಕ್ ಅವರ ಕಾಯಕವು ಗ್ರಾಮೀಣ ಶ್ರಮಜೀವಿಗಳ ಬದುಕಿನ ಪ್ರತೀಕವಾಗಿದೆ. ರೈತರ ಅಗತ್ಯಕ್ಕೆ ಸ್ಪಂದಿಸುತ್ತಾ, ಅಪಾಯವನ್ನು ಲೆಕ್ಕಿಸದೆ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುವ ಅವರ ಸೇವೆಗೆ ‘ಸೇವಾರತ್ನ’ ಪ್ರಶಸ್ತಿ ಮತ್ತೊಂದು ಸಾರ್ಥಕ ಗೌರವವಾಗಿದೆ.

ಕಾಯಕಕ್ಕೆ ಸಂದ ಸಾರ್ಥಕ ಗೌರವ
ಕಳೆದ 20 ವರ್ಷಗಳಿಂದ ತೆಂಗಿನ ಮರದ ತುದಿಯಲ್ಲಿ ಬೆವರು ಸುರಿಸಿ, ರೈತರು ಮತ್ತು ಸಾರ್ವಜನಿಕರಿಗೆ ಅಗತ್ಯವಾದ ಸೇವೆಯನ್ನು ಸಲ್ಲಿಸುತ್ತಿರುವ ಅಚ್ಚುತ ನಾಯಕ್ ಕಿಲಂಗೋಡಿಯವರಿಗೆ ದೊರೆಯುತ್ತಿರುವ ‘ಸೇವಾರತ್ನ’ ಪ್ರಶಸ್ತಿ, ಅವರ ಕಾಯಕನಿಷ್ಠೆಗೆ ಸಂದ ಗೌರವ ಮಾತ್ರವಲ್ಲದೆ, ಗ್ರಾಮೀಣ ಶ್ರಮಜೀವಿಗಳ ಪರಿಶ್ರಮಕ್ಕೂ ಸಂದ ಗೌರವವಾಗಿದೆ.

ಕಲ್ಪವೃಕ್ಷದ ಕಾಯಕಯೋಗಿಯ ಎರಡು ದಶಕಗಳ ನಿರಂತರ ಸೇವೆಗೆ ಇದೀಗ ‘ಸೇವಾರತ್ನ’ದ ಗೌರವದ ಕಿರೀಟ ದೊರೆತಿದೆ.

Ad Widget
Continue Reading

ಸುಳ್ಯ

ಸುಳ್ಯ :ಗ್ಯಾರೇಜ್‌ನಲ್ಲಿ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ

Published

on



Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆರೋಪಿಗಳನ್ನು ಸುಳ್ಯ ಐವರ್ನಾಡು ನಿವಾಸಿ ದಯಾನಂದ (30) ಹಾಗೂ ಸುಳ್ಯ ಕಸಬಾ ನಿವಾಸಿ ದರ್ಶನರಾಜು (23) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕದಲ್ಲಿ ಆ.26ರ ರಾತ್ರಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.120/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 326(g) ಅಡಿ ಪ್ರಕರಣ ದಾಖಲಾಗಿತ್ತು.



Ad Widget

ಪ್ರಕರಣದ ತನಿಖೆ ನಡೆಸಿದ ಸುಳ್ಯ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Continue Reading

ಸುಳ್ಯ

Dr. Deviprasad Kanattur-ಪಂಜ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮೇಲೆ ಅವ್ಯವಹಾರದ ಆರೋಪ; ಸತ್ಯ ಪ್ರಮಾಣಕ್ಕೆ ಡಾ. ದೇವಿಪ್ರಸಾದ್ ಕಾನತ್ತೂರ್ ನಿರ್ಧಾರ

Published

on



Ad Widget

Ad Widget

Ad Widget

Ad Widget

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.

Ad Widget

Ad Widget

Ad Widget

Ad Widget

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆಗಸ್ಟ್ 31 ರಂದು ಸೋಮವಾರ ಪೂರ್ವಾಹ್ನ ಶ್ರೀ ದೇವರು ಜಳಕ ಮಾಡುವ ಪವಿತ್ರ ನಾಗತೀರ್ಥ ನದಿಯಲ್ಲಿ ಸ್ನಾನಮಾಡಿ ದೇಗುಲದ ನಡೆಯಲ್ಲಿ ಬೆಳಗ್ಗಿನ ಮಹಾಪೂಜೆಯ ನಂತರ ನಾನು ಯಾವ ಅವ್ಯವಹಾರ ಮಾಡಿಲ್ಲ ಎಂದು ಸತ್ಯ ಪ್ರಮಾಣ ಮಾಡುತ್ತೇನೆ. ನನ್ನ ಮೇಲೆ ಸುಳ್ಳು ಆರೋಪ ಮಾಡಿದವರಿಗೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರು ಹಾಗೂ ಪರಿವಾರ ದೈವಗಳು ಉತ್ತರ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಯಾರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರೂ ಪ್ರಮಾಣಕ್ಕೆ ಬರಲಿ ಎಂದು ಅವರು ತಿಳಿಸಿದ್ದಾರೆ.

Ad Widget

Ad Widget <> Ad Widget

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading