ರಾಜಕೀಯ
Puttur-ಭ್ರಷ್ಟಚಾರದ ಕೂಪವಾಗಿದೆ ಪುತ್ತೂರಿನ ಭೂಮಾಪನ ಇಲಾಖೆ : ಡಿಡಿಎಲ್ಆರ್ ಮತ್ತು ಎಡಿಎಲ್ಆರ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ ಮಹಮ್ಮದ್ ಆಲಿ
ಸರಕಾರ ಪ್ಲಾಟಿಂಗ್ ನಿಯಮಗಳನ್ನು ಸರಳೀಕರಿಸಿ ಆದೇಶಿಸಿದ್ದರೂ, ಭೂ ಮಾಪನ ಇಲಾಖೆಯ ಡಿಡಿಎಲ್ಆರ್ ಮತ್ತು ಎಡಿಎಲ್ಆರ್ ಅಧಿಕಾರಿಗಳು ಅದನ್ನು ಗಾಳಿಗೆ ತೂರಿ, ಹಣಕ್ಕಾಗಿ ಜನರನ್ನು ಅನಗತ್ಯವಾಗಿ ಪೀಡಿಸುತ್ತಿದ್ದಾರೆ ಎಂದು ನಗರಸಭಾ ಮಾಜಿ ವಿಪಕ್ಷ ನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಲೋಕಾಯುಕ್ತಕ್ಕೆ ಲಿಖಿತ ದೂರು ಸಲ್ಲಿಸಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪುತ್ತೂರು: ಸರಕಾರ ಪ್ಲಾಟಿಂಗ್ ನಿಯಮಗಳನ್ನು ಸರಳೀಕರಿಸಿ ಆದೇಶಿಸಿದ್ದರೂ, ಭೂ ಮಾಪನ ಇಲಾಖೆಯ ಡಿಡಿಎಲ್ಆರ್ ಮತ್ತು ಎಡಿಎಲ್ಆರ್ ಅಧಿಕಾರಿಗಳು ಅದನ್ನು ಗಾಳಿಗೆ ತೂರಿ, ಹಣಕ್ಕಾಗಿ ಜನರನ್ನು ಅನಗತ್ಯವಾಗಿ ಪೀಡಿಸುತ್ತಿದ್ದಾರೆ ಎಂದು ನಗರಸಭಾ ಮಾಜಿ ವಿಪಕ್ಷ ನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಲೋಕಾಯುಕ್ತಕ್ಕೆ ಲಿಖಿತ ದೂರು ಸಲ್ಲಿಸಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸರಕಾರದ ಆದೇಶಕ್ಕೂ ಸೊಪ್ಪು ಹಾಕದ ಅಧಿಕಾರಿಗಳು:
ಭೂಮಿಗಳ ಪ್ಲಾಟಿಂಗ್ (ಪೋಡಿ ದುರಸ್ತಿ) ಸಮಸ್ಯೆ ದಶಕಗಳಿಂದ ಜನರನ್ನು ಕಾಡುತ್ತಿದ್ದು, ಅರ್ಜಿ ಸಲ್ಲಿಸಿದರೂ ವರ್ಷಗಟ್ಟಲೆ ಕೆಲಸ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪ್ಲಾಟಿಂಗ್ ನಿಯಮಗಳನ್ನು ಸರಳೀಕರಿಸಿ ಆದೇಶ ಹೊರಡಿಸಿತ್ತು. ದ.ಕ. ಜಿಲ್ಲೆಯಲ್ಲಿ ಪ್ಲಾಟಿಂಗ್ಗೆ ಸಂಬಂಧಿಸಿದಂತೆ ಅಭಿಯಾನ ನಡೆಸಿ, ಮುಖ್ಯಮಂತ್ರಿಗಳ ಭೇಟಿಗೂ ಮುನ್ನ ಡಿಡಿಎಲ್ಆರ್ ಪ್ರಸಾದಿನಿ ಅವರು 8727 ಕಡತಗಳಲ್ಲಿ 5855 ಕಡತಗಳನ್ನು ಮಂಜೂರು ಮಾಡಿ ಪಹಣಿ ಇಂಡೀಕರಣ ಮಾಡಿಸಿದ್ದರು. ಆದರೆ, ಮುಖ್ಯಮಂತ್ರಿಗಳು ನಿರ್ಗಮಿಸಿದ ನಂತರ ಪ್ರಸಾದಿನಿಯವರು ತಮ್ಮ ಕಚೇರಿಗೆ ಸಲ್ಲಿಸಲಾದ ಕಡತಗಳಿಗೆ ಮಂಜೂರಾತಿ ನೀಡದೆ ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಮಹಮ್ಮದ್ ಆಲಿ ಸ್ಫೋಟಕ ಮಾಹಿತಿ ನೀಡಿದ್ದಾರೆ. ಲಂಚ ನೀಡಿದವರ ಕಡತಗಳಿಗೆ ಮಾತ್ರ ಮಂಜೂರಾತಿ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಎಡಿಎಲ್ಆರ್, ಸೂಪರ್ವೈಸರ್ನಿಂದ ಕಿರುಕುಳ:
ಪ್ಲಾಟಿಂಗ್ ಸರಳೀಕರಣ ಆದೇಶದ ಪ್ರಕಾರ, ಭೂ ಮಂಜೂರಾತಿ ಪ್ರಕರಣಗಳಿಗೆ ಭೂ ಮಂಜೂರಾತಿ ನಡಾವಳಿ, ಸಾಗುವಳಿ ಚೀಟಿ, ಚಾಲ್ತಿ ಪಹಣಿ ಮತ್ತು ಭೂ ಸುಧಾರಣಾ ಪ್ರಕರಣಗಳಿಗೆ ಭೂ ನ್ಯಾಯ ಮಂಡಳಿಯ ಆದೇಶ, ನಮೂನೆ-10, ಚಾಲ್ತಿ ಪಹಣಿ ಮಾತ್ರ ಸಲ್ಲಿಸಬೇಕು. ಆದರೆ ಪುತ್ತೂರಿನ ಎಡಿಎಲ್ಆರ್ ಕಚೇರಿಯಲ್ಲಿ ಈ ಮೂರು ದಾಖಲೆಗಳ ಹೊರತಾಗಿ “ಐ ಸ್ಕೆಚ್” ದಾಖಲೆಯನ್ನು ಕೇಳಲಾಗುತ್ತಿದೆ. ಭೂಮಾಪಕರು ಮಾಡಿಕೊಟ್ಟ ಪ್ಲಾಟಿಂಗ್ ನಕ್ಷೆಗೂ, ಭೂ ಮಂಜೂರಾತಿ ಕಡತದಲ್ಲಿರುವ ಐ ಸ್ಕೆಚ್ಗೂ ತಾಳೆ ಬರುವುದಿಲ್ಲ ಎಂಬ ನೆಪವೊಡ್ಡಿ ಕಡತಗಳನ್ನು ತಹಶೀಲ್ದಾರ್ ಕಚೇರಿಗೆ ಹಿಂದಿರುಗಿಸುವ ಪ್ರಕರಣಗಳು ನಡೆಯುತ್ತಿವೆ. ಸೂಪರ್ ವೈಸರ್ ಪ್ರಕಾಶ ಮತ್ತು ಎಡಿಎಲ್ ಆರ್ ಶ್ರೀನಿವಾಸಮೂರ್ತಿ ಈ ರೀತಿಯಾಗಿ ಕಡತಗಳನ್ನು ಹಿಂತಿರುಗಿಸಿ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಮಧ್ಯವರ್ತಿಗಳ ಮೂಲಕ ಹೋದ ಕಡತಗಳಿಗೆ ಮಾತ್ರ ಯಾವುದೇ ಹೆಚ್ಚುವರಿ ದಾಖಲೆ ಕೇಳದೆ ವಿಲೇವಾರಿ ಮಾಡಿ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ತಮ್ಮಲ್ಲಿ ದೂರಿರುವುದಾಗಿ ಮಹಮ್ಮದ್ ಆಲಿ ತಿಳಿಸಿದ್ದಾರೆ.
ಶಾಸಕರ ಎಚ್ಚರಿಕೆಗೂ ಕ್ಯಾರೆ ಎನ್ನದ ಅಧಿಕಾರಿಗಳು:
ಶಾಸಕ ಅಶೋಕ್ ಕುಮಾರ್ ರೈ ಅವರು ಎಡಿಎಲ್ಆರ್ ಮತ್ತು ಸೂಪರ್ವೈಸರ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಅವರ ವರ್ತನೆಯಲ್ಲಿ ಬದಲಾವಣೆಯಾಗಿಲ್ಲ. ಪ್ಲಾಟಿಂಗ್ ಸಮಸ್ಯೆ ಬಗೆಹರಿಸಲು ಶಾಸಕರು ಸರಕಾರದ ಮೇಲೆ ಒತ್ತಡ ಹೇರಿ, ಸರಳೀಕರಣ ಆದೇಶ ಹೊರಡಿಸಿದ್ದರೂ, ಅಧಿಕಾರಿಗಳು ಅದನ್ನು ಸರಿಯಾಗಿ ಪಾಲಿಸದೆ, ಭ್ರಷ್ಟಾಚಾರದ ದುರುದ್ದೇಶದಿಂದ ಕಠಿಣಗೊಳಿಸುತ್ತಿದ್ದಾರೆ ಎಂದು ಆಲಿ ಆರೋಪಿಸಿದ್ದಾರೆ.
“ಹಣ ಪಡೆದರೆ ಜನರ ಶಾಪ ತಟ್ಟಲಿದೆ, ರೋಗಗಳಿಗೆ ಬಲಿಯಾಗುತ್ತಾರೆ!”:
“ಅಧಿಕಾರಿಗಳು ಮರ್ಯಾದೆಯಲ್ಲಿ ಕೆಲಸಮಾಡಬೇಕು. ಬಡವರಿಂದ ಹಣ ಪಡೆದು ಸುಲಿಗೆ ಮಾಡಿದರೆ ಒಳ್ಳೆಯದಲ್ಲ. ಜನರ ಶಾಪ ನಿಮಗೆ ತಟ್ಟಲಿದೆ. ಅವರು ರೋಗಗಳಿಗೆ ಬಲಿಯಾಗಿ ಸಾಯಲಿದ್ದಾರೆ. ರಾಜಾರೋಷವಾಗಿ ಹಣ ಪಡೆಯುವುದಾದರೆ ಅವರಿಗೆ ಭಯವೇ ಇಲ್ಲದಾಗಿದೆ. ಇನ್ನು ಜನರೇ ಹೋಗಿ ಹೊಡೆಯಬೇಕಷ್ಟೆ. ಮಾಡಿದ ಕರ್ಮ ಅನುಭವಿಸಲಿದ್ದಾರೆ. ಪುತ್ತೂರಿನಲ್ಲಿ ಮಾಡಿದ ಕರ್ಮ ಅವರ ಉಸಿರು ಇರುವ ತನಕ ನೆನಪಿನಲ್ಲಿಡುವಂತೆ ನಾವು ಮಾಡುತ್ತೇವೆ” ಎಂದು ಮಹಮ್ಮದ್ ಆಲಿ ಆಕ್ರೋಶಭರಿತವಾಗಿ ಹೇಳಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಜನರು ಧ್ವನಿ ಎತ್ತಬೇಕು:
ಭ್ರಷ್ಟಾಚಾರದ ಬಗ್ಗೆ ಜನರು ಧ್ವನಿ ಎತ್ತಿದರೆ ಅಧಿಕಾರಿಗಳು ಹಣ ಕೇಳಲು ಸಾಧ್ಯವಿಲ್ಲ. ಜನರು ಸ್ವಾರ್ಥ ಬಿಡಬೇಕು. ಬುದ್ಧಿವಂತರು, ವಿದ್ಯಾವಂತರ ಜಿಲ್ಲೆಯಲ್ಲಿಯೇ ಅಧಿಕ ಭ್ರಷ್ಟಾಚಾರ ಆಗುತ್ತಿದೆ. ಅಧಿಕಾರಿಗಳು ಜನರಿಂದ ಹಣ ಪಡೆಯುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಿಲ್ಲಿಸುವ ಕೆಲಸ ನಾವು ಮಾಡುತ್ತೇವೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜನರು ಯಾವುದೇ ಕಚೇರಿಯಲ್ಲಿ ಲಂಚ ಕೊಡಬಾರದು. ಲಂಚ ಕೇಳುವವರ ವಾಯ್ಸ್ ರೆಕಾರ್ಡ್ ಮಾಡಿ ಲೋಕಾಯುಕ್ತಕ್ಕೆ ದೂರು ನೀಡಬೇಕು. ಲೋಕಾಯುಕ್ತಕ್ಕೆ ದೂರು ಕೊಡಲು ಇಚ್ಛಿಸುವವರಿಗೆ ಎಲ್ಲಾ ಸಹಕಾರ ನೀಡಲಾಗುವುದು ಎಂದು ಆಲಿ ಕರೆ ನೀಡಿದರು.
ಬೆದ್ರಾಳದಲ್ಲಿ ಮಲತ್ಯಾಜ್ಯ ಘಟಕ ಆಗಿಯೇ ಆಗುತ್ತದೆ:
ಬೆದ್ರಾಳದ ಬಡಾವಣೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಹಮ್ಮದ್ ಆಲಿ, ಬೆದ್ರಾಳದಲ್ಲಿ ಮಲತ್ಯಾಜ್ಯ ಘಟಕ ಆಗಿಯೇ ಆಗುತ್ತದೆ. ಯಾರು ಏನು ಬೇಕಾದರೂ ಮಾಡಲಿ. ಆದರೆ ಸರಕಾರದ ವಿರುದ್ಧ ಹೋಗಲು ಯಾರಿಗೂ ಸಾಧ್ಯವಿಲ್ಲ. ಮಲತ್ಯಾಜ್ಯ ಘಟಕಕ್ಕೆ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನಕ್ಕೆ ನಗರಸಭೆಗೆ ಆದೇಶವಾಗಿದ್ದು, ಅದರ ಪ್ರಕ್ರಿಯೆ ಆರಂಭವಾಗಿದೆ. ಕಾನೂನು ಬಾಹಿರ ಬಡಾವಣೆ ನಿರ್ಮಾಣಕ್ಕೆ ಮಾತ್ರ ನನ್ನ ವಿರೋಧವಿದೆ ಎಂದರು.
.
ಪುತ್ತೂರಿನಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿದೆ: ಭ್ರಷ್ಟ ಅಧಿಕಾರಿಗಳಿಗೆ ಬುದ್ಧಿ ಬಂದಿಲ್ಲ!
ಪುತ್ತೂರಿನಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿದ್ದು, ಕೆಲ ತಿಂಗಳ ಹಿಂದೆ ತಾಲೂಕು ಕಚೇರಿಗೆ ಲೋಕಾಯುಕ್ತರು ದಾಳಿ ಮಾಡಿ ವಿಷಯ ನಿರ್ವಾಹಕ ಸುನೀಲ್ನನ್ನು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿದು ಜೈಲಿಗೆ ಅಟ್ಟಿದ್ದರು. ಸುನೀಲ್ ತಹಶೀಲ್ದಾರ್ ಹೆಸರು ಹೇಳಿದ ಕಾರಣಕ್ಕಾಗಿ ತಹಶೀಲ್ದಾರ್ ಲೋಕಾಯುಕ್ತದಿಂದ ತಪ್ಪಿಸಲು ಪರಾರಿಯಾದ ಪ್ರಕರಣ ನಡೆದಿದ್ದರೂ, ಸಿಬ್ಬಂದಿಗಳಿಗೆ ಇನ್ನೂ ಬುದ್ಧಿ ಬಂದಿಲ್ಲ. ಇವರಿಗೆ ಭಯವೇ ಇಲ್ಲದಂತಾಗಿದೆ. ತಾಲೂಕು ಕಚೇರಿಯ ಸಿಬ್ಬಂದಿಗಳು ಇನ್ನೂ ಕೂಡಾ ಲಂಚಾವತಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ತಾಲೂಕು ಕಚೇರಿಯ ಕನ್ವರ್ಷನ್ ಕೇಸ್ ವರ್ಕರ್ ಆಗಿರುವ ದಯಾನಂದ ಪ್ರತಿ ಕಡತವನ್ನು ವಿಲೇವಾರಿ ಮಾಡಲು ದೊಡ್ಡ ಮೊತ್ತದ ಲಂಚ ಕೇಳುತ್ತಿದ್ದಾರೆ. ದಯಾನಂದ ಅವರು ಈ ಹಿಂದೆ ಪಂಜ ಹೋಬಳಿಯ ಆರ್.ಐ. ಆಗಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹದಳದವರಿಂದ ಬಂಧನಕ್ಕೆ ಒಳಗಾಗಿದ್ದರು. ಈತ ಜೈಲಿಗೆ ಹೋಗಿ ಬಂದಿದ್ದರೂ ಭ್ರಷ್ಟಾಚಾರದ ಚಾಳಿ ನಿಲ್ಲಿಸಿಲ್ಲ. ನೇರವಾಗಿ ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದಾರೆ. ಸಾರ್ವಜನಿಕರಿಂದ ಹಣ ಪಡೆಯುವುದಕ್ಕಾಗಿಯೇ ದಯಾನಂದರಿಗೆ ಈ ಹುದ್ದೆ ನೀಡಿದ್ದಿರಬೇಕು. ಸಿಬ್ಬಂದಿಗಳನ್ನು ನಿಯಂತ್ರಿಸದೇ ಇದ್ದರೆ ಅಧಿಕಾರಿಗಳು ಆಗಾಗ ‘ಎಸ್ಕೆಪ್’ ಆಗಬೇಕಾಗಬಹುದು ಎಂದು ಮಹಮ್ಮದ್ ಆಲಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಪೂಜಾರಿ, ಮಾಜಿ ಕಾರ್ಯದರ್ಶಿಗಳಾದ ರೋಷನ್ ಡಯಾಸ್, ಕಮರುದ್ದೀನ್ ಕೂರ್ನಡ್ಕ ಉಪಸ್ಥಿತರಿದ್ದರು
ಮಂಗಳೂರು
D.K. Shivakumar-ಅ.15ರಂದು ಮಂಗಳೂರು, ಉಡುಪಿ ಜಿಲ್ಲೆಗೆ ಡಿ.ಕೆ. ಶಿವಕುಮಾರ್ ಭೇಟಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 15ರ ಗುರುವಾರ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಗುರುವಾರ ಮಧ್ಯಾಹ್ನ 4.10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು, ಸಂಜೆ 4.40ಕ್ಕೆ ಕಾಪು ಉಚ್ಚಿಲದಲ್ಲಿ ನಡೆಯುವ ದಸರಾ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಮಹಿಳಾ ದಸರಾವನ್ನು ಉದ್ಘಾಟಿಸಲಿದ್ದಾರೆ.
ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 15ರ ಗುರುವಾರ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಗುರುವಾರ ಮಧ್ಯಾಹ್ನ 4.10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು, ಸಂಜೆ 4.40ಕ್ಕೆ ಕಾಪು ಉಚ್ಚಿಲದಲ್ಲಿ ನಡೆಯುವ ದಸರಾ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಮಹಿಳಾ ದಸರಾವನ್ನು ಉದ್ಘಾಟಿಸಲಿದ್ದಾರೆ.
ಬಳಿಕ ಸಂಜೆ 6.30ಕ್ಕೆ ಮಂಗಳೂರಿನಲ್ಲಿ ನಡೆಯುವ ಮಂಗಳೂರು ದಸರಾ ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 8 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿರುವ ಅವರು, ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಜಕೀಯ
Siddaramaiah-ಸ್ಟಿಂಗ್ ವಿಡಿಯೋ ಪ್ರಸಾರಕ್ಕೆ ಬ್ರೇಕ್ ಹಾಕಲು ಸಿದ್ದರಾಮಯ್ಯ ಕೋರ್ಟ್ ಮೊರೆ
ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದ ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ 18ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಾಳೆ ನಡೆಯಲಿದ್ದು, ನ್ಯಾಯಾಲಯದ ನಿರ್ಧಾರದ ಬಗ್ಗೆ ಕುತೂಹಲ ಮೂಡಿದೆ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದ ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ 18ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಾಳೆ ನಡೆಯಲಿದ್ದು, ನ್ಯಾಯಾಲಯದ ನಿರ್ಧಾರದ ಬಗ್ಗೆ ಕುತೂಹಲ ಮೂಡಿದೆ.
ಸ್ಟಿಂಗ್ ಆಪರೇಷನ್ ವಿಡಿಯೋ ಪ್ರಸಾರಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿರುವ ಅರ್ಜಿಯಲ್ಲಿ ಖಾಸಗಿ ಸುದ್ದಿ ವಾಹಿನಿಗಳು ಹಾಗೂ ಪತ್ರಿಕೆಗಳು ಸೇರಿದಂತೆ ಒಟ್ಟು 42 ಮಾಧ್ಯಮ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಸ್ಟಿಂಗ್ ಆಪರೇಷನ್ ನಡೆಯುತ್ತಿರುವುದು ನಿಜ. ಆದರೆ ಇದನ್ನು ಮಾಡಿಸುತ್ತಿರುವವರು ಯಾರು ಎಂಬುದು ಬಹಿರಂಗವಾಗಬೇಕು ಎಂದು ಹೇಳಿದ್ದರು.
ಇದೀಗ ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದ ವಿಡಿಯೋ ಪ್ರಸಾರಕ್ಕೆ ತಡೆಯಾಜ್ಞೆ ಕೋರಿ ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೋಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
‘ಸುಳ್ಳು ಪ್ರಚಾರ ತಡೆಯಲು ತಡೆಯಾಜ್ಞೆ ಕೋರುತ್ತಿದ್ದೇವೆ’: ಸಿದ್ದರಾಮಯ್ಯ
ಸಾಮಾಜಿಕ ಜಾಲತಾಣಗಳಲ್ಲಿ ಸ್ಟಿಂಗ್ ಆಪರೇಷನ್ ಕುರಿತು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯಲು ಮುಂದಾಗಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ತಾವು ಭಾಗವಹಿಸಬೇಕಿತ್ತು, ಆದರೆ ಹೋಗಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆ ಹಾಗೂ ಮುಂದಿನ ಆದೇಶದತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.
ಮಂಗಳೂರು
Raghupti Bhat-2028ರ ಚುನಾವಣೆಯಲ್ಲಿ ಸ್ಪರ್ಧೆ ಖಚಿತ; ಕಾಂಗ್ರೆಸ್ ಸೇರ್ಪಡೆ ಬಗ್ಗೆ ಏನು ಹೇಳಿದ್ರು ರಘುಪತಿ ಭಟ್
ಕಾಂಗ್ರೆಸ್ ಸೇರ್ಪಡೆಯ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳೂರು: ಕಾಂಗ್ರೆಸ್ ಸೇರ್ಪಡೆಯ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಈಗಾಗಲೇ ಆಹ್ವಾನ ಬಂದಿರುವುದು ನಿಜ. ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯ ಪಡೆದುಕೊಂಡ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.
“ಬಿಜೆಪಿಯವರು ಕರೆಯುತ್ತಾರೆ ಎಂದು ಕಾಯುತ್ತಿದ್ದೇನೆ. ಬಿಜೆಪಿ ಸೇರುವ ಬಗ್ಗೆಯೂ ಯೋಚಿಸಬಹುದು. ಆದರೆ ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಬೆಳೆದು, ಬಿಜೆಪಿಯಲ್ಲಿ ಯುವ ಮೋರ್ಚಾ ಜಿಲ್ಲಾ ಘಟಕ ಹಾಗೂ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಮೂರು ಬಾರಿ ಶಾಸಕನಾಗಿದ್ದೇನೆ. ಹೀಗಿರುವಾಗ ಏಕಾಏಕಿ ಪಕ್ಷ ಬದಲಿಸುವ ನಿರ್ಧಾರ ಕೈಗೊಳ್ಳಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನನ್ನ ಬೆಂಬಲಿಗರ ವಿಶ್ವಾಸ ಪಡೆದುಕೊಂಡೇ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ತಿಳಿಸಿದರು.
ಕಳೆದ ಚುನಾವಣೆಯ ಸಂದರ್ಭ ತಮಗೆ ಅನ್ಯಾಯವಾಗಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದ ರಘುಪತಿ ಭಟ್, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ತಪ್ಪಿದ್ದಕ್ಕಿಂತಲೂ ವಿಧಾನ ಪರಿಷತ್ ಸ್ಥಾನ ನೀಡುವುದಾಗಿ ಹೇಳಿ, ಕೊನೆಗೆ ಅವಕಾಶ ನೀಡದಿರುವುದು ನೋವು ತಂದಿದೆ ಎಂದರು.
ತಮ್ಮದೇ ಪಕ್ಷದ ಕೆಲವು ಶಾಸಕರಿಂದ ವೈಯಕ್ತಿಕ ದಬ್ಬಾಳಿಕೆ ಎದುರಿಸಬೇಕಾಯಿತು ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ಸಂಘದ ಹಿರಿಯರು ಹಾಗೂ ಬಿಜೆಪಿಯ ನಾಯಕರು ತಮ್ಮೊಂದಿಗೆ ಮಾತನಾಡದಿರುವುದು ಬೇಸರ ತಂದಿದೆ ಎಂದು ಹೇಳಿದರು.
“ನನ್ನ ಹತ್ತಿರದ ಕ್ಷೇತ್ರಗಳ ಮಾಜಿ ಶಾಸಕರನ್ನು ಗೌರವದಿಂದ ಕಾಣಲಾಗುತ್ತದೆ. ನನಗೆ ವಿಶೇಷ ಗೌರವ ಬೇಡ. ಕನಿಷ್ಠ ಬಹುವಚನದಲ್ಲಿ ಮಾತನಾಡಿದ್ದರೂ ಸಾಕಿತ್ತು. ಈ ಎಲ್ಲ ಘಟನೆಗಳು ಮಾನಸಿಕವಾಗಿ ನೋವುಂಟುಮಾಡಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ಕ್ಷೇತ್ರದ ಜನರು ನನ್ನನ್ನು ಸೋಲಿಸಿಲ್ಲ. ಪಕ್ಷವೇ ನನಗೆ ಟಿಕೆಟ್ ತಪ್ಪಿಸಿದೆ ಎಂಬ ಭಾವನೆ ಜನರಲ್ಲಿದೆ. ಜನರು ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಜನರು ಬೇಡ, ನೀವು ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದರೆ ಮನೆಯಲ್ಲೇ ಕುಳಿತುಕೊಳ್ಳುತ್ತೇನೆ. ಜನರ ಕೆಲಸ ಮಾಡಲು ಜನಪ್ರತಿನಿಧಿಯಾಗಲೇಬೇಕೆಂದಿಲ್ಲ. ಚುನಾವಣಾ ರಾಜಕೀಯದಿಂದ ದೂರವಿದ್ದರೂ ಜನರಿಗೆ ಸಹಾಯ ಮಾಡಬಹುದು ಎಂದು ರಘುಪತಿ ಭಟ್ ಹೇಳಿದರು
-
ದಕ್ಷಿಣ ಕನ್ನಡ21 hours ago
ಕಳವು ಮಾಡಿ ಮನೆಗೆ ಬೆಂಕಿ ಹಚ್ಚಿದ ಶಂಕೆ: ಪುತ್ತೂರಿನಲ್ಲಿ ಪ್ರಕರಣ ದಾಖಲು
-
ಅಂತರ ರಾಜ್ಯ19 hours agoRestaurant-ನೀರಿನ ಬಾಟ್ಲಿಗೆ ₹2 ಹೆಚ್ಚುವರಿ ವಸೂಲಿ; ರೆಸ್ಟೋರೆಂಟ್ಗೆ ₹1 ಲಕ್ಷ ದಂಡ..!
-
ಕಾರ್ಯಕ್ರಮಗಳು14 hours agoPuttur-ಪುತ್ತೂರು: ಅ.16ರಂದು ಪ್ರವೀಣ್ ಕ್ಯಾಪಿಟಲ್ನ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ
-
ಸುಳ್ಯ21 hours ago
ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಬಂಧನ, ತಿಹಾರ್ ಜೈಲಿಗೆ ಶಿಫ್ಟ್ ಸಾಧ್ಯತೆ
-
Uncategorized20 hours agoKumaraswamy-ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯ ಮೌನವಾಗಿರಬಾರದು – ಸಿಬಿಐ ತನಿಖೆಗೆ ಕುಮಾರಸ್ವಾಮಿ ಆಗ್ರಹ
-
ನಿಧನ ವಾರ್ತೆ20 hours agoBoat Sink-ಹಾಜಿಪುರ: ಗಂಗಾ ನದಿಯಲ್ಲಿ ದೋಣಿ ಮುಳುಗಿ 11 ಮಂದಿ ಸಾವು
-
ಕಾರ್ಯಕ್ರಮಗಳು13 hours ago‘Havells Experience Center-ನಾಳೆ (ಅ. 15) ರಂದು ಮೈತ್ರಿ ಎಲೆಕ್ಟ್ರಿಕ್ನಲ್ಲಿ ʻಹ್ಯಾವೆಲ್ಸ್ ಎಕ್ಸ್ಪೀರಿಯನ್ಸ್ ಸೆಂಟರ್ʼ ಶುಭಾರಂಭ
-
ಕಾರ್ಯಕ್ರಮಗಳು13 hours agoPuttur-ಪುತ್ತೂರು: ಅ.15ರಂದು ‘ಮೈ ಡ್ರೆಸ್ ಕೋಡ್’ ನೂತನ ಮಳಿಗೆ ಗ್ರಾಂಡ್ ರೀ-ಓಪನಿಂಗ್


















