ಮಂಗಳೂರು
Vision problems-ಕರಾವಳಿಯ 17 ಸಾವಿರ ಶಾಲಾ ಮಕ್ಕಳಿಗೆ ದೃಷ್ಟಿದೋಷ: ಮೊಬೈಲ್ ಗೀಳಿನಿಂದ ಕಣ್ಣುಗಳಿಗೆ ಕುತ್ತು..!
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಶಾಲಾ ಮಕ್ಕಳಲ್ಲಿ ದೃಷ್ಟಿದೋಷದ ಸಮಸ್ಯೆ ಗಂಭೀರವಾಗಿ ಕಾಡುತ್ತಿರುವುದು ಪತ್ತೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಡೆಸಲಾದ ಆರೋಗ್ಯ ತಪಾಸಣೆಯಲ್ಲಿ ಬರೋಬ್ಬರಿ 17,869 ಮಕ್ಕಳಲ್ಲಿ ಕಣ್ಣಿನ ದೋಷ ಕಂಡುಬಂದಿದ್ದು, ಇವರೆಲ್ಲರೂ ಪ್ರತಿನಿತ್ಯ ಕನ್ನಡಕ ಧರಿಸುವುದು ಅನಿವಾರ್ಯವಾಗಿದೆ.
ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಶಾಲಾ ಮಕ್ಕಳಲ್ಲಿ ದೃಷ್ಟಿದೋಷದ ಸಮಸ್ಯೆ ಗಂಭೀರವಾಗಿ ಕಾಡುತ್ತಿರುವುದು ಪತ್ತೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಡೆಸಲಾದ ಆರೋಗ್ಯ ತಪಾಸಣೆಯಲ್ಲಿ ಬರೋಬ್ಬರಿ 17,869 ಮಕ್ಕಳಲ್ಲಿ ಕಣ್ಣಿನ ದೋಷ ಕಂಡುಬಂದಿದ್ದು, ಇವರೆಲ್ಲರೂ ಪ್ರತಿನಿತ್ಯ ಕನ್ನಡಕ ಧರಿಸುವುದು ಅನಿವಾರ್ಯವಾಗಿದೆ.
ಬೃಹತ್ ಆರೋಗ್ಯ ತಪಾಸಣೆ:
ರಾಷ್ಟ್ರೀಯ ಬಾಲ ಸುರಕ್ಷಾ ಕಾರ್ಯಕ್ರಮದಡಿ ಸರಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ಒಟ್ಟು 8,70,912 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಸಾವಿರಾರು ಮಕ್ಕಳಲ್ಲಿ ದೃಷ್ಟಿ ದೋಷ ಇರುವುದು ದೃಢಪಟ್ಟಿದೆ. ಜುಲೈ ತಿಂಗಳಿನಿಂದ ಡಿಸೆಂಬರ್‌ವರೆಗೆ ನಡೆಯುವ ‘ಆಶಾಕಿರಣ’ ಕಾರ್ಯಕ್ರಮದ ಮೂಲಕ ವೈದ್ಯರ ತಂಡಗಳು ಶಾಲೆಗಳಿಗೆ ಭೇಟಿ ನೀಡಿ ಉಚಿತ ತಪಾಸಣೆ ನಡೆಸುತ್ತಿವೆ. ಕಣ್ಣಿನ ದೋಷವಿರುವ ಮಕ್ಕಳಿಗೆ ಶಾಲೆಯಲ್ಲೇ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗುತ್ತಿದೆ.
ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಾಗಲು ಕಾರಣಗಳೇನು?
ಕರಾವಳಿ ಭಾಗದ 6 ರಿಂದ 16 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಸಮೀಪ ದೃಷ್ಟಿ (Myopia) ಅಥವಾ ದೂರದೃಷ್ಟಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ:
ಮೊಬೈಲ್ ಮತ್ತು ಗ್ಯಾಜೆಟ್ ಹವ್ಯಾಸ: ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳು ಅತಿಯಾಗಿ ಮೊಬೈಲ್ ಮತ್ತು ಟಿವಿ ಪರದೆಗಳಿಗೆ ಅಂಟಿಕೊಂಡಿದ್ದಾರೆ. ಆನ್‌ಲೈನ್ ಗೇಮ್‌ಗಳ ಚಟ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಕಣ್ಣಿನ ಮೇಲೆ ತೀವ್ರ ಒತ್ತಡ ಬೀಳುತ್ತಿದೆ.
ಹೊರಾಂಗಣ ಆಟಗಳ ಕೊರತೆ: ಮಕ್ಕಳು ಮನೆಯಿಂದ ಹೊರಬಂದು ಮೈದಾನದಲ್ಲಿ ಆಡುವ ಬದಲು ನಾಲ್ಕು ಗೋಡೆಗಳ ಮಧ್ಯೆ ಮೊಬೈಲ್ ಹಿಡಿದು ಕುಳಿತುಕೊಳ್ಳುತ್ತಿರುವುದು ದೃಷ್ಟಿ ಸಾಮರ್ಥ್ಯ ಕುಂದಲು ಕಾರಣವಾಗಿದೆ.
ಪೋಷಕರ ನಿರ್ಲಕ್ಷ್ಯ: ಚಿಕ್ಕ ಮಕ್ಕಳನ್ನು ಸಮಾಧಾನಪಡಿಸಲು ಅಥವಾ ಊಟ ಮಾಡಿಸಲು ಪೋಷಕರು ಮೊಬೈಲ್ ನೀಡುತ್ತಿದ್ದಾರೆ. ಮೊಬೈಲ್‌ನಿಂದ ಹೊರಬರುವ ವಿಕಿರಣಗಳು ಮಕ್ಕಳ ಸೂಕ್ಷ್ಮ ಕಣ್ಣುಗಳಿಗೆ ಹಾನಿ ಉಂಟುಮಾಡುತ್ತಿವೆ.
ಓದುವ ಕ್ರಮ ಮತ್ತು ಪೋಷಕಾಂಶದ ಕೊರತೆ: ಕಣ್ಣಿಗೆ ಅತೀ ಸಮೀಪವಾಗಿ ಇಟ್ಟುಕೊಂಡು ಓದುವುದು ಮತ್ತು ಆಹಾರದಲ್ಲಿ ವಿಟಮಿನ್ ಅಂಶಗಳ ಕೊರತೆಯೂ ಈ ಸಮಸ್ಯೆಗೆ ಕಾರಣ ಎನ್ನುತ್ತಾರೆ ವೆನ್ಲಾಕ್ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಅನಿತಾ.
ತಜ್ಞರ ಎಚ್ಚರಿಕೆ:
ಒಂದು ವೇಳೆ ದೃಷ್ಟಿದೋಷವಿದ್ದರೂ ಕನ್ನಡಕ ಧರಿಸದೆ ನಿರ್ಲಕ್ಷ್ಯ ವಹಿಸಿದರೆ ಭವಿಷ್ಯದಲ್ಲಿ ದೃಷ್ಟಿ ಕಳೆದುಕೊಳ್ಳುವ ಅಥವಾ ಸಮಸ್ಯೆ ಉಲ್ಬಣಿಸುವ ಅಪಾಯವಿರುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಮೊಬೈಲ್ ಬಳಕೆಯ ಮೇಲೆ ನಿಯಂತ್ರಣ ಹೇರಬೇಕು ಮತ್ತು ಮಕ್ಕಳ ದೃಷ್ಟಿಯಲ್ಲಿ ಸಣ್ಣ ವ್ಯತ್ಯಾಸ ಕಂಡುಬಂದರೂ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕನ್ನಡಕ ಹಾಕಲು ಹಿಂಜರಿಕೆ
ಮಕ್ಕಳಲ್ಲಿ ಕಣ್ಣಿನ ದೃಷ್ಟಿ ದೋಷ ಇದ್ದಾಗಲೂ ಅವರಿಗೆ ಕನ್ನಡಕ ಹಾಕಿಸಲು ಪೋಷಕರು ಪ್ರೋತ್ಸಾಹ ನೀಡುತ್ತಿಲ್ಲ. ಒಂದು ವೇಳೆ ಕನ್ನಡಕ ಹಾಕಿದರೆ ಸಮಾಜ ನಮ್ಮ ಮಕ್ಕಳನ್ನು ಯಾವ ರೀತಿ ನೋಡುತ್ತದೆಯೋ ಎಂಬ ದೃಷ್ಟಿಯಿಂದ ಕೆಲವರು ಕನ್ನಡಕ ಹಾಕಲು ಹಿಂಜರಿಯುತ್ತಾರೆ ಎನ್ನುತ್ತಾರೆ ವೈದ್ಯರು.
ದಕ್ಷಿಣ ಕನ್ನಡ ಜಿಲ್ಲೆ
ವರ್ಷ ಮಕ್ಕಳ ತಪಾಸಣೆ ಕನ್ನಡಕ ವಿತರಣೆ
2022-202 1,74,211 2,142
2023-202 1,30,811 2,445
2024-2025 1,50,361 2,066
2025-2026 1,30,945 1,742
ಉಡುಪಿ ಜಿಲ್ಲೆ
ವರ್ಷ ಮಕ್ಕಳ ತಪಾಸಣೆ ಕನ್ನಡಕ ವಿತರಣೆ
2022-2023 81,437 3,850
2023-2024 66,255 2,926
2024-2025 74,738 2,197
2025-2026 62,154 501
ರಾಷ್ಟ್ರೀಯ ಬಾಲ ಸುರಕ್ಷಾ ಕಾರ್ಯಕ್ರಮದಡಿ ಸರಕಾರಿ, ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಲಾಗುತ್ತಿದೆ. ಈ ವೇಳೆ ಕೆಲವು ಮಕ್ಕಳಲ್ಲಿ ಸಮೀಪ ದೃಷ್ಟಿ, ದೂರ ದೃಷ್ಟಿ ಸಮಸ್ಯೆ ಕಂಡುಬರುತ್ತಿದೆ. ಅಂತಹ ಮಕ್ಕಳಿಗೆ ಉಚಿತ ಕನ್ನಡ ನೀಡಲಾಗುತ್ತದೆ. ಪ್ರತೀ ವರ್ಷವೂ ಜಿಲ್ಲೆಯಲ್ಲಿ ಶಾಲೆಗಳಲ್ಲಿ ತಪಾಸಣೆ ಮುಂದುವರಿಯುತ್ತದೆ. – ಡಾ. ಸುದರ್ಶನ್, ಕಾರ್ಯಕ್ರಮ ಅನುಷ್ಟಾನಾಧಿಕಾರಿ, ಜಿಲ್ಲಾ ಅಂಧತ್ವ ನಿವಾರಣ ಕಾರ್ಯಕ್ರಮ
ಮಂಗಳೂರು
Mulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್‌ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ
ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು: ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಲಕ್ಷ್ಮಿ ಗಣೇಶ್ ಹೆಸರಿನ ಎಕ್ಸ್‌ಪ್ರೆಸ್ ಬಸ್ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಗಿಡುಗ ಬಸ್‌ನ ಮುಂಭಾಗದ ಗಾಜಿಗೆ ಬಡಿದಿದೆ. ಇದರಿಂದ ಗಾಜು ಒಡೆದು ಚೂರುಚೂರಾಗಿದೆ.
ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾದರೂ, ಚಾಲಕ ಹರೀಶ್ ಪೂಜಾರಿ ಅವರು ವಿಚಲಿತರಾಗದೆ ಸಮಯಪ್ರಜ್ಞೆಯಿಂದ ಬಸ್ ನಿಲ್ಲಿಸಿದ್ದಾರೆ. ಅವರ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬಸ್ ಚಾಲಕ ಪುತ್ತೂರಿನ ಸಂಟ್ಯಾರು ಕೂರೇಲು ನಿವಾಸಿ ಹರೀಶ್ ಪೂಜಾರಿ ಮೇಲೆ ಗಾಜಿನ ಚೂರುಗಳು ಬಿದ್ದು ಗಾಯಗೊಂಡಿದ್ದರು ಅವರು ವೇಗವಾಗಿ ಹೋಗುತ್ತಿದ್ದ ಬಸ್ ನ್ನು ತಕ್ಷಣ ನಿಯಂತ್ರಿಸಿದ್ದಾರೆ. ಅವಘಡ ಸಂದರ್ಭ ಡ್ರೈವರ್ ಸ್ಟೇರೀಂಗ್ ಕೈಬಿಟ್ಟದ್ದರೂ ಬಸ್ ಡಿವೈಡರ್ ಹಾರಿ ಭಾರೀ ಅವಘಡ ಸಂಭವಿಸುತ್ತಿತ್ತು ಎನ್ನಲಾಗಿದೆ.
ಮಂಗಳೂರು
Ujire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.
ಉಜಿರೆಯಿಂದ ಆರಂಭವಾದ ಬೃಹತ್ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಮೌನ ಮೆರವಣಿಗೆಯ ಮೂಲಕ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಲಾಯಿತು. ಸುಮಾರು ಐದು ಕಿಲೋಮೀಟರ್ ದೂರದವರೆಗೆ ಹೋರಾಟಗಾರರು ನಡಿಗೆಯಲ್ಲಿ ಸಾಗಲಿದ್ದಾರೆ.
ನ್ಯಾಯದ ನಡಿಗೆಯ ಬಳಿಕ ಬೆಳ್ತಂಗಡಿಯ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾವೇಶ ನಡೆಯಲಿದೆ. ಸೌಜನ್ಯ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲರ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಕೀಲರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು
MRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
MRPL ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO), ಮಂಗಳೂರು ಪ್ರಾದೇಶಿಕ ಕಚೇರಿಯು, 30.09.2026 ರಂದು ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಸಂಭವಿಸಿದ ಕೈಗಾರಿಕಾ ಅಪಘಾತದಲ್ಲಿ ಮರಣ ಹೊಂದಿದ ಭವಿಷ್ಯ ನಿಧಿ ಚಂದಾದಾರರಾದ ದಿವಂಗತ ಮನೀಶ್ ಕರ್ಕಡ ಅವರ ಕುಟುಂಬದ ಅವಲಂಬಿತರ ಸಾಮಾಜಿಕ ಭದ್ರತಾ ಸೌಲಭ್ಯಗಳ ಕ್ಷೇಮುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗಿದೆ.
ಮಂಗಳೂರು : MRPL ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO), ಮಂಗಳೂರು ಪ್ರಾದೇಶಿಕ ಕಚೇರಿಯು, 30.09.2026 ರಂದು ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಸಂಭವಿಸಿದ ಕೈಗಾರಿಕಾ ಅಪಘಾತದಲ್ಲಿ ಮರಣ ಹೊಂದಿದ ಭವಿಷ್ಯ ನಿಧಿ ಚಂದಾದಾರರಾದ ದಿವಂಗತ ಮನೀಶ್ ಕರ್ಕಡ ಅವರ ಕುಟುಂಬದ ಅವಲಂಬಿತರ ಸಾಮಾಜಿಕ ಭದ್ರತಾ ಸೌಲಭ್ಯಗಳ ಕ್ಷೇಮುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗಿದೆ.
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ವತಿಯಿಂದ ಕುಟುಂಬಕ್ಕೆ ಪಾವತಿಸಬೇಕಾದ ಉದ್ಯೋಗಿಗಳ ಭವಿಷ್ಯ ನಿಧಿ ಹಾಗೂ ಉದ್ಯೋಗಿಗಳ ಠೇವಣಿ ಆಧಾರಿತ ವಿಮಾ ಸೌಲಭ್ಯಗಳ ಕ್ಷೇಮುಗಳನ್ನು ಇತ್ಯರ್ಥಪಡಿಸಲಾಗಿದೆ.
ಇದರೊಂದಿಗೆ ಉದ್ಯೋಗಿಗಳ ಪಿಂಚಣಿ ಯೋಜನೆ 2026ರ ಅಡಿಯಲ್ಲಿ, ಮಾಸಿಕ ಪಿಂಚಣಿಯನ್ನೂ ಮಂಜೂರು ಮಾಡಿ ಪಾವತಿ ಪ್ರಾರಂಭಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು 08.10.2026 ರಂದು ಇತ್ಯರ್ಥಪಡಿಸಿ ಜಾರಿಗೊಳಿಸಲಾಗಿದೆ ಹಾಗೂ ಮೊತ್ತವನ್ನು ಪಾವತಿಸಲಾಗಿದೆ.
ದುಃಖತಪ್ತ ಕುಟುಂಬಕ್ಕೆ ಸಂತಾಪ ಹಾಗೂ ಸಾಂತ್ವನ ಸಲ್ಲಿಸುವ ಉದ್ದೇಶದಿಂದ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಸಂದೀಪ್ ಬಿಸ್ವಾಸ್ ಅವರು, ಸಹಾಯಕ ಭವಿಷ್ಯ ನಿಧಿ ಆಯುಕ್ತರಾದ ಅಂಕಿತ್ ಸಿಂಗ್ ಹಾಗೂ ಪ್ರವರ್ತನಾಧಿಕಾರಿಯಾದ ಶ್ರೀಮತಿ ಅನಿತಾ ಆರ್ ಅವರೊಂದಿಗೆ 09.10.2026 ರಂದು ದಿವಂಗತ ಶ್ರೀ ಮನೀಶ್ ಕರ್ಕಡ ಅವರ ನಿವಾಸಕ್ಕೆ ಭೇಟಿ ನೀಡಿ, ಫಲಾನುಭವಿಗೆ ಪಿಂಚಣಿ ಪಾವತಿ ಆದೇಶವನ್ನು (PPO) ಹಸ್ತಾಂತರಿಸಿದರು. ಈ ಭೇಟಿಯು ಸಂಕಷ್ಟದ ಸಂದರ್ಭದಲ್ಲಿ ತನ್ನ ಸದಸ್ಯರ ಕುಟುಂಬಗಳೊಂದಿಗೆ ನಿಲ್ಲುವ EPFO ಸಂಸ್ಥೆಯ ಮಾನವೀಯ ಕಾಳಜಿ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಅನಿರೀಕ್ಷಿತ ದುರಂತಗಳ ಸಂದರ್ಭದಲ್ಲಿ ತನ್ನ ಸದಸ್ಯರ ಕುಟುಂಬಗಳಿಗೆ ಸಲ್ಲಬೇಕಾದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವುದು EPFO ಸಂಸ್ಥೆಯ ಬದ್ಧತೆಯಾಗಿದೆ ಎಂಬುದನ್ನು ಈ ತ್ವರಿತ ಇತ್ಯರ್ಥವು ಮತ್ತೊಮ್ಮೆ ದೃಢಪಡಿಸಿದೆ.
EPFO ಸಂಸ್ಥೆಯು ಮೃತ ಸದಸ್ಯರ ಕುಟುಂಬಕ್ಕೆ ತನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದು, ಈ ಕಷ್ಟದ ಸಮಯದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಬದ್ಧವಾಗಿದೆ.
-
ಬಿಗ್ ನ್ಯೂಸ್24 hours agoKaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
-
ನಿಧನ ವಾರ್ತೆ7 hours agoMumbai-ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ? ಸರಪಳಿಯಿಂದ ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ
-
ಮಂಗಳೂರು5 hours agoUjire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
-
ಅಂತರ ರಾಜ್ಯ6 hours agoArrested-ಕಾಸರಗೋಡು: ಮದುವೆಯ ನೆಪದಲ್ಲಿ ಹತ್ತಾರು ಯುವತಿಯರಿಗೆ ವಂಚನೆ: ಮದುವೆಯಾದ ಮೂರೇ ದಿನಕ್ಕೆ ಚಿನ್ನ, ಹಣದೊಂದಿಗೆ ಪರಾರಿ; ಆರೋಪಿ ಬಿಜು ಆಂಟನಿ ಬಂಧನ
-
ಅಂತರ ರಾಜ್ಯ6 hours agoJantar Mantar-ಸಿಜೆಪಿ ಪ್ರತಿಭಟನೆಗೆ ದೆಹಲಿಯಲ್ಲಿ ಬಿಗಿ ಭದ್ರತೆ – ಪಂಚರ್ ಆಗಲು ರಸ್ತೆಗಳಿಗೆ ತಡೆಬೇಲಿ..! ವಿಮಾನದಲ್ಲೇ ಅಭಿಜಿತ್ ದಿಪ್ಕೆ ಪೊಲೀಸ್ ವಶಕ್ಕೆ..! ಸಾವಿರಕ್ಕೂ ಮಿಕ್ಕಿ ಪ್ರತಿಭಟನಾಕಾರರೂ ವಶಕ್ಕೆ-ಸುಪ್ರೀಂ ಕೋರ್ಟ್ ವಕೀಲರಿಗೆ ತಡೆ..! ತೀವ್ರ ಅಡೆತಡೆಗಳ ನಡುವೆ ಜಂತರ್ ಮಂತರ್ ಗೆ ಹರಿದು ಬರುತ್ತಿರುವ ಜನಸಾಗರ
-
ರಾಜ್ಯ6 hours agoRobotic technology-ರೋಬೋಟಿಕ್ ತಂತ್ರಜ್ಞಾನದ ಅದ್ಭುತ: ಸ್ಪೇನ್ನಲ್ಲಿ ಕುಳಿತು ಕರ್ನಾಟಕದ ಮಹಿಳೆಗೆ ಹೃದಯ ಶಸ್ತ್ರಚಿಕಿತ್ಸೆ
-
ಅಂತರ ರಾಜ್ಯ7 hours agoDhruv Rati-BIG BREAKING: ದೆಹಲಿಯ ಜಂತರ್ ಮಂತರ್ ನಲ್ಲಿ ಸಿಜೆಪಿ ಪ್ರತಿಭಟನೆ ಹಿನ್ನಲೆ – ಯೂಟ್ಯೂಬರ್ ಧ್ರುವ್ ರಾಠಿ ಪೊಲೀಸ್ ವಶಕ್ಕೆ?
-
Uncategorized8 hours agoCJP protest-ಇಂದು CJP ಪ್ರತಿಭಟನೆ : ದೆಹಲಿಗೆ ಬರಬೇಕಾಗಿದ್ದ 250 ರೈಲು ರದ್ದು, ಹಲವು ರೈಲಿನ ವೇಳಾಪಟ್ಟಿ ಬದಲಾವಣೆ : ಮೆಟ್ರೋ ಸಂಚಾರ ಸ್ಥಗಿತ – ಇಂಟರ್ ನೆಟ್ ಬಂದ್..! ‘ಹೆದರಿದ್ರಾ ಮೋದಿಜೀ..?’ ಎಂದ CJP


















