Connect with us

ಕ್ರೀಡೆ

World Cup-ವಿಶ್ವಕಪ್ ಗೆದ್ದ ಮಹಿಳಾ ತಂಡಕ್ಕೆ ಭರ್ಜರಿ ಉಡುಗೊರೆ : ಬಿಸಿಸಿಐ ಘೋಷಿಸಿದ ಬಹುಮಾನವೆಷ್ಟು ಗೊತ್ತೇ..?

Published

on



Ad Widget

Ad Widget

Ad Widget

Ad Widget

ಭಾರತೀಯ ಮಹಿಳಾ ಕ್ರಿಕೆಟ್ ತಂಡವು ದೀರ್ಘಕಾಲದ ಕನಸನ್ನು ನನಸು ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 2005 ಮತ್ತು 2017ರ ವಿಶ್ವಕಪ್ ಫೈನಲ್‌ನಲ್ಲಿನ ಸೋಲಿನ ನೋವನ್ನು ಮರೆತು, ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡವು ಈ ಐತಿಹಾಸಿಕ ಸಾಧನೆ ಮಾಡಿದೆ. ಈ ಅದ್ಭುತ ಗೆಲುವನ್ನು ಸಂಭ್ರಮಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಜೇತ ತಂಡಕ್ಕೆ 51 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ದೀರ್ಘಕಾಲದ ಕನಸನ್ನು ನನಸು ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 2005 ಮತ್ತು 2017ರ ವಿಶ್ವಕಪ್ ಫೈನಲ್‌ನಲ್ಲಿನ ಸೋಲಿನ ನೋವನ್ನು ಮರೆತು, ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡವು ಈ ಐತಿಹಾಸಿಕ ಸಾಧನೆ ಮಾಡಿದೆ. ಈ ಅದ್ಭುತ ಗೆಲುವನ್ನು ಸಂಭ್ರಮಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಜೇತ ತಂಡಕ್ಕೆ 51 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಈ ಬಹುಮಾನವನ್ನು ಪ್ರಕಟಿಸಿದ್ದು, ಆಟಗಾರ್ತಿಯರು, ಕೋಚ್‌ಗಳು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಈ ಮೊತ್ತವನ್ನು ಹಂಚಲಾಗುವುದು ಎಂದು ತಿಳಿಸಿದ್ದಾರೆ. ಐಸಿಸಿ ಕಡೆಯಿಂದಲೂ ಟ್ರೋಫಿ ವಿಜೇತ ಭಾರತ ತಂಡಕ್ಕೆ 39 ಕೋಟಿ ರೂ. ನಗದು ಬಹುಮಾನ ದೊರೆತಿದ್ದು, ಒಟ್ಟು ನಗದು ಬಹುಮಾನದ ಮೊತ್ತ 90 ಕೋಟಿ ರೂ.ಗೆ ತಲುಪಿದೆ.

Ad Widget

Ad Widget <> Ad Widget

1983ರ ಕಪಿಲ್ ದೇವ್ ಗೆಲುವಿಗೆ ಹೋಲಿಸಿದ ಸೈಕಿಯಾ
“1983ರಲ್ಲಿ ಕಪಿಲ್ ದೇವ್ ಅವರು ವಿಶ್ವಕಪ್ ಗೆಲ್ಲುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದ್ದರು. ಇಂದು ನಮ್ಮ ಮಹಿಳಾ ತಂಡ ಅದೇ ರೀತಿಯ ಸಂಚಲನವನ್ನು ಸೃಷ್ಟಿಸಿದೆ” ಎಂದು ದೇವಾಜಿತ್ ಸೈಕಿಯಾ ಹೇಳಿದ್ದಾರೆ. “ಹರ್ಮನ್‌ಪ್ರೀತ್ ಕೌರ್ ಮತ್ತು ಅವರ ತಂಡ ಕೇವಲ ಟ್ರೋಫಿ ಗೆದ್ದಿಲ್ಲ, ಬದಲಾಗಿ ಎಲ್ಲಾ ಭಾರತೀಯರ ಹೃದಯವನ್ನು ಗೆದ್ದಿದ್ದಾರೆ. ಮುಂದಿನ ಪೀಳಿಗೆಯ ಮಹಿಳಾ ಕ್ರಿಕೆಟಿಗರಿಗೆ ಇವರು ಮಾದರಿ ನಿರ್ಮಿಸಿದ್ದಾರೆ” ಎಂದು ಅವರು ತಂಡವನ್ನು ಶ್ಲಾಘಿಸಿದರು.



Ad Widget

ಮಹಿಳಾ ಕ್ರಿಕೆಟ್‌ಗೆ ಜಯ್ ಶಾ ಕೊಡುಗೆ ಸ್ಮರಿಸಿದ ಸೈಕಿಯಾ
ಮಹಿಳಾ ಕ್ರಿಕೆಟ್‌ನ ಬೆಳವಣಿಗೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಕೊಡುಗೆಯನ್ನು ಸೈಕಿಯಾ ಸ್ಮರಿಸಿದರು. “2019 ರಿಂದ 2024 ರವರೆಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಅಧಿಕಾರ ವಹಿಸಿಕೊಂಡ ನಂತರ, ಅವರು ಮಹಿಳಾ ಕ್ರಿಕೆಟ್‌ನಲ್ಲಿ ಅನೇಕ ಪರಿವರ್ತನೆಗಳನ್ನು ತಂದಿದ್ದಾರೆ. ವೇತನ ಸಮಾನತೆಯನ್ನು ಜಾರಿಗೊಳಿಸಲಾಗಿದೆ. ಕಳೆದ ತಿಂಗಳು, ಐಸಿಸಿ ಅಧ್ಯಕ್ಷರಾಗಿ ಅವರು ಮಹಿಳಾ ಕ್ರಿಕೆಟ್‌ನ ಬಹುಮಾನದ ಮೊತ್ತವನ್ನು ಶೇ. 300ರಷ್ಟು ಹೆಚ್ಚಿಸಿದ್ದಾರೆ. ಈ ಮೊದಲು ಬಹುಮಾನದ ಮೊತ್ತ 2.88 ಮಿಲಿಯನ್ ಡಾಲರ್ ಇತ್ತು, ಈಗ ಅದನ್ನು 14 ಮಿಲಿಯನ್ ಡಾಲರ್‌ಗೆ ಏರಿಸಲಾಗಿದೆ. ಈ ಎಲ್ಲಾ ಕ್ರಮಗಳು ಮಹಿಳಾ ಕ್ರಿಕೆಟ್‌ಗೆ ಹೆಚ್ಚಿನ ಉತ್ತೇಜನ ನೀಡಿವೆ,” ಎಂದು ಅವರು ವಿವರಿಸಿದರು.

Ad Widget

Ad Widget

ಫೈನಲ್ ಪಂದ್ಯದಲ್ಲಿ ಶಫಾಲಿ, ದೀಪ್ತಿ ಶರ್ಮಾ ಮಿಂಚು
ಭಾನುವಾರ ರಾತ್ರಿ ನಡೆದ ಅಂತಿಮ ಪಂದ್ಯದಲ್ಲಿ, ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (58 ಎಸೆತಗಳಲ್ಲಿ 45 ರನ್) ಮತ್ತು ಶಫಾಲಿ ವರ್ಮಾ (78 ಎಸೆತಗಳಲ್ಲಿ 87 ರನ್) ಶತಕದ ಜೊತೆಯಾಟದಿಂದ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಜೆಮಿಮಾ ರಾಡ್ರಿಗಸ್ (37 ಎಸೆತಗಳಲ್ಲಿ 24 ರನ್), ನಾಯಕಿ ಹರ್ಮನ್‌ಪ್ರೀತ್ ಕೌರ್ (29 ಎಸೆತಗಳಲ್ಲಿ 20 ರನ್), ದೀಪ್ತಿ ಶರ್ಮಾ (58 ಎಸೆತಗಳಲ್ಲಿ 58 ರನ್) ಮತ್ತು ರಿಚಾ ಘೋಷ್ (24 ಎಸೆತಗಳಲ್ಲಿ 34 ರನ್) ಅವರ ಉಪಯುಕ್ತ ಕೊಡುಗೆಯಿಂದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 298 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.

ದಕ್ಷಿಣ ಆಫ್ರಿಕಾ ಪರ ಅಯಬೊಂಗಾ ಖಾಕಾ (3/58) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. 299 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕಿ ಲಾರಾ ವೋಲ್ವಾರ್ಡ್ಟ್ (98 ಎಸೆತಗಳಲ್ಲಿ 101 ರನ್) ಏಕಾಂಗಿ ಹೋರಾಟ ನಡೆಸಿ ಶತಕ ಸಿಡಿಸಿದರು. ಆದರೆ, ಭಾರತದ ಶಿಸ್ತಿನ ಬೌಲಿಂಗ್ ದಾಳಿಗೆ ಇತರ ಆಟಗಾರ್ತಿಯರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ನಿರ್ಣಾಯಕ ಹಂತದಲ್ಲಿ ಶಫಾಲಿ ವರ್ಮಾ (2/36) ಮತ್ತು ಶ್ರೀ ಚರಣಿ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಪಂದ್ಯಕ್ಕೆ ತಿರುವು ನೀಡಿದರು. ಅಂತಿಮವಾಗಿ, ದೀಪ್ತಿ ಶರ್ಮಾ (5/39) ಐದು ವಿಕೆಟ್ ಗೊಂಚಲು ಪಡೆದು ಮಿಂಚಿದರು. ವಿಶ್ವಕಪ್ ಫೈನಲ್‌ನಲ್ಲಿ ಐದು ವಿಕೆಟ್ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ದೀಪ್ತಿ ಪಾತ್ರರಾದರು. ದಕ್ಷಿಣ ಆಫ್ರಿಕಾ ತಂಡ 246 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ 52 ರನ್‌ಗಳ ಜಯ ಸಾಧಿಸಿ ಇತಿಹಾಸ ಪುಟ ಸೇರಿತು.

Ad Widget
Click to comment

Leave a Reply

ಕ್ರೀಡೆ

India-West Indies match-ಒಂದೇ ODI ಪಂದ್ಯದಲ್ಲಿ 5 ಶತಕ: ಗುವಾಹಟಿಯಲ್ಲಿ ವಿಶ್ವದಾಖಲೆ ಬರೆದ ಭಾರತ–ವೆಸ್ಟ್ ಇಂಡೀಸ್ ಕದನ

Published

on



Ad Widget

Ad Widget

Ad Widget

Ad Widget

ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.

Ad Widget

Ad Widget

Ad Widget

Ad Widget

ಗುವಾಹಟಿ: ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.

Ad Widget

Ad Widget

Ad Widget alt="Ad Widget"/>

Ad Widget

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಜಾನ್ ಕ್ಯಾಂಬೆಲ್ (101), ಶಾಯಿ ಹೋಪ್ (104) ಹಾಗೂ ಅಮಿರ್ ಜಾಂಗೋ (114) ಅವರ ಶತಕಗಳ ನೆರವಿನಿಂದ 405 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

Ad Widget

Ad Widget <> Ad Widget

ಇದಕ್ಕೆ ಉತ್ತರವಾಗಿ ಭಾರತ ತಂಡದ ಆರಂಭಿಕರಾದ ನಾಯಕ ಶುಭಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಶತಕ ಸಿಡಿಸಿದರು. ಗಿಲ್ ಅಜೇಯ 223 ರನ್ ಗಳಿಸಿದರೆ, ರೋಹಿತ್ ಶರ್ಮಾ 101 ರನ್ ಬಾರಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 255 ರನ್‌ಗಳ ಭರ್ಜರಿ ಜೊತೆಯಾಟವಾಡಿದರು.



Ad Widget

ಒಂದೇ ಪಂದ್ಯದಲ್ಲಿ 5 ಶತಕ
1971ರಲ್ಲಿ ಮೊದಲ ಏಕದಿನ ಪಂದ್ಯ ನಡೆದ ಬಳಿಕ ಇದುವರೆಗೆ 5,023 ODI ಪಂದ್ಯಗಳು ನಡೆದಿವೆ. ಆದರೆ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.

Ad Widget

Ad Widget

ಇದಕ್ಕೂ ಮೊದಲು ಒಂದೇ ODI ಪಂದ್ಯದಲ್ಲಿ ನಾಲ್ಕು ಶತಕಗಳು ದಾಖಲಾಗಿದ್ದೇ ಗರಿಷ್ಠ ಸಾಧನೆಯಾಗಿತ್ತು. 1998ರಲ್ಲಿ ಲಾಹೋರ್‌ನಲ್ಲಿ ಪಾಕಿಸ್ತಾನ–ಆಸ್ಟ್ರೇಲಿಯಾ ಪಂದ್ಯ, 2013ರಲ್ಲಿ ನಾಗ್ಪುರದಲ್ಲಿ ಭಾರತ–ಆಸ್ಟ್ರೇಲಿಯಾ ಪಂದ್ಯ ಹಾಗೂ 2023ರಲ್ಲಿ ಹೈದರಾಬಾದ್‌ನಲ್ಲಿ ಪಾಕಿಸ್ತಾನ–ಶ್ರೀಲಂಕಾ ಪಂದ್ಯಗಳಲ್ಲಿ ತಲಾ ನಾಲ್ಕು ಶತಕಗಳು ದಾಖಲಾಗಿದ್ದವು.

ವಿಶೇಷವೆಂದರೆ, ಈ ಹಿಂದೆ ನಾಲ್ಕು ಶತಕಗಳು ದಾಖಲಾಗಿದ್ದ ಪಂದ್ಯಗಳೂ ಏಷ್ಯಾ ಖಂಡದಲ್ಲೇ ನಡೆದಿದ್ದವು.

ಒಂದೇ ಇನ್ನಿಂಗ್ಸ್‌ನಲ್ಲಿ 3 ಶತಕ
ವೆಸ್ಟ್ ಇಂಡೀಸ್ ತಂಡದ ಪರ ಜಾನ್ ಕ್ಯಾಂಬೆಲ್, ಶಾಯಿ ಹೋಪ್ ಮತ್ತು ಅಮಿರ್ ಜಾಂಗೋ ಶತಕ ಸಿಡಿಸುವ ಮೂಲಕ ಮತ್ತೊಂದು ಅಪರೂಪದ ದಾಖಲೆಗೂ ಕಾರಣರಾದರು. ಏಕದಿನ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದು ಆರನೇ ಬಾರಿ.

ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್, 2015ರಲ್ಲಿ ದಕ್ಷಿಣ ಆಫ್ರಿಕಾ–ಭಾರತ, 2022ರಲ್ಲಿ ಇಂಗ್ಲೆಂಡ್–ನೆದರ್ಲ್ಯಾಂಡ್ಸ್, 2023ರಲ್ಲಿ ದಕ್ಷಿಣ ಆಫ್ರಿಕಾ–ಶ್ರೀಲಂಕಾ ಹಾಗೂ 2025ರಲ್ಲಿ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪಂದ್ಯಗಳಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿದ್ದರು.

ವೆಸ್ಟ್ ಇಂಡೀಸ್‌ಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದೇ ಮೊದಲ ಅನುಭವವಾಗಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡವೊಂದು ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕಗಳನ್ನು ದಾಖಲಿಸಿರುವುದು ಇದು ಎರಡನೇ ಬಾರಿ.

ಇದರೊಂದಿಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿದರೂ ಪಂದ್ಯ ಸೋತ ಮೊದಲ ತಂಡ ಎಂಬ ಅನಪೇಕ್ಷಿತ ದಾಖಲೆಯೂ ವೆಸ್ಟ್ ಇಂಡೀಸ್ ಪಾಲಾಗಿದೆ.

Ad Widget
Continue Reading

ಕ್ರೀಡೆ

Asian Games-ಏಷ್ಯನ್ ಗೇಮ್ಸ್ ನಲ್ಲಿ ಮಿಂಚಿದ ಭಾರತದ ಮಹಿಳೆಯರು; 4×400 ರಿಲೇಯಲ್ಲಿ ಚಿನ್ನ, ಹೈಜಂಪ್-ಮಿಶ್ರ ರಿಲೇಯಲ್ಲಿ ಕಂಚು

Published

on



Ad Widget

Ad Widget

Ad Widget

Ad Widget

ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಅಥ್ಲೆಟಿಕ್ಸ್‌ ತಂಡ ಪದಕಗಳ ಬೇಟೆ ಮುಂದುವರಿಸಿದೆ. ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದ್ದು, ಮಹಿಳೆಯರ ಹೈಜಂಪ್‌ನಲ್ಲಿ ಪೂಜಾ ಸಿಂಗ್ ಕಂಚಿನ ಪದಕ ಹಾಗೂ ಮಿಶ್ರ 4×100 ಮೀಟರ್ ರಿಲೇಯಲ್ಲಿ ಭಾರತ ಕಂಚಿನ ಪದಕ ಗೆದ್ದಿದೆ.

Ad Widget

Ad Widget

Ad Widget

Ad Widget

ನಗೋಯಾ: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಅಥ್ಲೆಟಿಕ್ಸ್‌ ತಂಡ ಪದಕಗಳ ಬೇಟೆ ಮುಂದುವರಿಸಿದೆ. ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದ್ದು, ಮಹಿಳೆಯರ ಹೈಜಂಪ್‌ನಲ್ಲಿ ಪೂಜಾ ಸಿಂಗ್ ಕಂಚಿನ ಪದಕ ಹಾಗೂ ಮಿಶ್ರ 4×100 ಮೀಟರ್ ರಿಲೇಯಲ್ಲಿ ಭಾರತ ಕಂಚಿನ ಪದಕ ಗೆದ್ದಿದೆ.

Ad Widget

Ad Widget

Ad Widget alt="Ad Widget"/>

Ad Widget

4×400 ಮೀಟರ್ ರಿಲೇಯಲ್ಲಿ ಬಂಗಾರದ ಓಟ
ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಕಿರಣ್ ಪಹಾಲ್, ಎಂ.ಆರ್. ಪೂವಮ್ಮ, ಪ್ರಾಚಿ ಚೌಧರಿ ಹಾಗೂ ವಿಥ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತ ತಂಡ 3:29.69 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಬಹ್ರೇನ್ 3:30.21 ಸಮಯದೊಂದಿಗೆ ಬೆಳ್ಳಿ ಹಾಗೂ ಚೀನಾ 3:31.02 ಸಮಯದೊಂದಿಗೆ ಕಂಚಿನ ಪದಕ ಗೆದ್ದವು.

Ad Widget

Ad Widget <> Ad Widget

ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ತನ್ನ ಮೊದಲ ಚಿನ್ನದ ಪದಕ ಗೆದ್ದಂತಾಗಿದೆ. ವಿಥ್ಯಾ ರಾಮರಾಜ್ ಅವರಿಗೆ ಇದು ಕೂಟದ ಮೂರನೇ ಪದಕವಾಗಿದೆ. ಅವರು ಈ ಹಿಂದೆ ಮಿಶ್ರ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಹಾಗೂ ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಕಂಚು ಗೆದ್ದಿದ್ದರು.



Ad Widget

ಹೈಜಂಪ್‌ನಲ್ಲಿ ಪೂಜಾಗೆ ಕಂಚು
ಮಹಿಳೆಯರ ಹೈಜಂಪ್ ಫೈನಲ್‌ನಲ್ಲಿ ಭಾರತದ ಪೂಜಾ ಸಿಂಗ್ 1.84 ಮೀಟರ್ ಎತ್ತರ ಜಿಗಿದು ಕಂಚಿನ ಪದಕ ಗೆದ್ದರು. 1.84 ಮೀಟರ್‌ವರೆಗಿನ ಎತ್ತರವನ್ನು ಅವರು ಯಶಸ್ವಿಯಾಗಿ ದಾಟಿದರೂ, 1.87 ಮೀಟರ್ ಎತ್ತರವನ್ನು ಮೂರು ಪ್ರಯತ್ನಗಳಲ್ಲೂ ದಾಟಲು ಸಾಧ್ಯವಾಗಲಿಲ್ಲ.

Ad Widget

Ad Widget

ಮಿಶ್ರ 4×100 ಮೀಟರ್ ರಿಲೇಯಲ್ಲಿ ಕಂಚು
ಗುರುಂದರ್‌ವೀರ್ ಸಿಂಗ್, ಸ್ನೇಹಾ ಸತ್ಯನಾರಾಯಣ, ಅನಿಮೇಶ್ ಕುಜುರ್ ಹಾಗೂ ಹರಿತಾ ಭದ್ರಾ ಅವರನ್ನೊಳಗೊಂಡ ಭಾರತ ತಂಡ ಮಿಶ್ರ 4×100 ಮೀಟರ್ ರಿಲೇಯಲ್ಲಿ 41.06 ಸೆಕೆಂಡ್‌ಗಳ ಋತುವಿನ ಅತ್ಯುತ್ತಮ ಸಮಯದೊಂದಿಗೆ ಕಂಚಿನ ಪದಕ ಗೆದ್ದಿತು.

ಚೀನಾ 40.78 ಸೆಕೆಂಡ್‌ಗಳಲ್ಲಿ ಚಿನ್ನ ಹಾಗೂ ಥೈಲ್ಯಾಂಡ್ 40.87 ಸೆಕೆಂಡ್‌ಗಳಲ್ಲಿ ಬೆಳ್ಳಿ ಪದಕ ಗೆದ್ದವು. ಭಾರತ 41.06 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆಯಿತು

Ad Widget
Continue Reading

ಕ್ರೀಡೆ

Fariba-ತಾಲಿಬಾನ್ ಆಡಳಿತದಲ್ಲಿ ಮಹಿಳೆಯರಿಗೆ ನಿರ್ಬಂಧ: ಪುರುಷರ ರೀತಿ ವೇಷ ಧರಿಸಿ ತರಬೇತಿ ಪಡೆದು ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಅಫ್ಘಾನಿಸ್ತಾನದ ಮೊದಲ ಮಹಿಳಾ ಕ್ರೀಡಾಪಟು ಫರೀಬಾ..!

Published

on



Ad Widget

Ad Widget

Ad Widget

Ad Widget

ತಾಲಿಬಾನ್ ಆಡಳಿತದ ಕಠಿಣ ನಿರ್ಬಂಧಗಳು, ಹಿಂಸಾಚಾರ ಹಾಗೂ ಜೀವಭಯದ ನಡುವೆಯೂ ಕ್ರೀಡಾ ಕನಸನ್ನು ಜೀವಂತವಾಗಿರಿಸಿಕೊಂಡಿದ್ದ ಅಫ್ಘಾನಿಸ್ತಾನದ ಯುವ ಸೈಕ್ಲಿಸ್ಟ್ ಫರೀಬಾ ಹಾಶಿಮಿ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.

Ad Widget

Ad Widget

Ad Widget

Ad Widget

ಐಚಿ-ನಗೋಯಾ: ತಾಲಿಬಾನ್ ಆಡಳಿತದ ಕಠಿಣ ನಿರ್ಬಂಧಗಳು, ಹಿಂಸಾಚಾರ ಹಾಗೂ ಜೀವಭಯದ ನಡುವೆಯೂ ಕ್ರೀಡಾ ಕನಸನ್ನು ಜೀವಂತವಾಗಿರಿಸಿಕೊಂಡಿದ್ದ ಅಫ್ಘಾನಿಸ್ತಾನದ ಯುವ ಸೈಕ್ಲಿಸ್ಟ್ ಫರೀಬಾ ಹಾಶಿಮಿ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಜಪಾನ್‌ನ ಐಚಿ ಪ್ರಾಂತ್ಯದ ಶಿನ್‌ಶಿರೋ ಸೈಕ್ಲಿಂಗ್ ರೋಡ್ ಕೋರ್ಸ್‌ನಲ್ಲಿ ಸೆ.22ರಂದು ನಡೆದ ಮಹಿಳೆಯರ 90.4 ಕಿ.ಮೀ. ವೈಯಕ್ತಿಕ ರೋಡ್ ರೇಸ್‌ನಲ್ಲಿ 23 ವರ್ಷದ ಫರೀಬಾ ಬೆಳ್ಳಿ ಪದಕ ಗೆದ್ದರು. ಇದರೊಂದಿಗೆ 2002ರ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಅಫ್ಘಾನಿಸ್ತಾನದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಪಾತ್ರರಾದರು.

Ad Widget

Ad Widget <> Ad Widget

ರೋಚಕವಾಗಿ ನಡೆದ ಫೈನಲ್‌ನಲ್ಲಿ ಫರೀಬಾ ಹಾಗೂ ಚಿನ್ನದ ಪದಕ ಗೆದ್ದ ಚೀನಾದ ಗುವೋ ಲಿ ಇಬ್ಬರೂ 2 ಗಂಟೆ 50 ನಿಮಿಷ 05 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮೊದಲ ಎರಡು ಲ್ಯಾಪ್‌ಗಳಲ್ಲಿ ಫರೀಬಾ ಮುನ್ನಡೆ ಸಾಧಿಸಿದ್ದರು. ಆದರೆ ಅಂತಿಮ 300–400 ಮೀಟರ್‌ಗಳಲ್ಲಿ ಗುವೋ ಲಿ ಅತ್ಯಲ್ಪ ಅಂತರದಲ್ಲಿ ಮುನ್ನಡೆ ಪಡೆದು ಸ್ವರ್ಣ ಪದಕ ಗೆದ್ದರು. ಹಾಂಗ್‌ಕಾಂಗ್‌ನ ಲಿಯಾಂಗ್ ವಿಂಗ್ ಯೀ ಕಂಚಿನ ಪದಕ ಪಡೆದರು.



Ad Widget

ಇದಕ್ಕೂ ಎರಡು ದಿನಗಳ ಮೊದಲು ನಡೆದ 24.2 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಫರೀಬಾ ಏಳನೇ ಸ್ಥಾನ ಪಡೆದಿದ್ದರು.

Ad Widget

Ad Widget

ವೇಷ ಬದಲಿಸಿ ಸೈಕ್ಲಿಂಗ್ ತರಬೇತಿ
ಉತ್ತರ ಅಫ್ಘಾನಿಸ್ತಾನದ ಫರ್ಯಾಬ್ ಪ್ರಾಂತ್ಯದ ಫರೀಬಾ ತಮ್ಮ 15ನೇ ವಯಸ್ಸಿನಲ್ಲಿ ಅಕ್ಕ ಯುಲ್ದುಜ್ ಹಾಶಿಮಿ ಅವರ ಪ್ರೇರಣೆಯಿಂದ ಸೈಕ್ಲಿಂಗ್ ಆರಂಭಿಸಿದ್ದರು. ಮಹಿಳೆಯರು ಸಾರ್ವಜನಿಕವಾಗಿ ಸೈಕಲ್ ಚಲಾಯಿಸುವುದಕ್ಕೆ ವಿರೋಧವಿದ್ದ ಸಾಂಪ್ರದಾಯಿಕ ವಾತಾವರಣದಲ್ಲಿ ಗುರುತು ಪತ್ತೆಯಾಗದಂತೆ ಪುರುಷರ ವೇಷ ಧರಿಸಿ ಅವರು ತರಬೇತಿ ಪಡೆಯುತ್ತಿದ್ದರು.

ಮುಖಕ್ಕೆ ಎರಡು-ಮೂರು ಮಾಸ್ಕ್‌ಗಳು, ಹೆಡ್‌ಸ್ಕಾರ್ಫ್ ಹಾಗೂ ಸನ್‌ಗ್ಲಾಸ್ ಧರಿಸಿ ಸೈಕ್ಲಿಂಗ್ ಮಾಡುತ್ತಿದ್ದ ಫರೀಬಾ ಮತ್ತು ಅವರ ಸಹೋದರಿಗೆ ತರಬೇತಿ ವೇಳೆ ಜನರು ಕಲ್ಲು, ಬಾಟಲಿ ಎಸೆದು ನಿಂದಿಸುತ್ತಿದ್ದರು. ಇದೇ ವೇಳೆ ನಡೆದ ರಿಕ್ಷಾ ಅಪಘಾತದಲ್ಲಿ ಯುಲ್ದುಜ್ ಅವರ ಮಣಿಕಟ್ಟು ಮುರಿದ ಘಟನೆಯೂ ನಡೆದಿದೆ.

ತಾಲಿಬಾನ್ ಆಡಳಿತದ ಬಳಿಕ ದೇಶತ್ಯಾಗ
2020ರಲ್ಲಿ ಫರೀಬಾ ಮತ್ತು ಯುಲ್ದುಜ್ ಅಫ್ಘಾನಿಸ್ತಾನದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಕ್ರೀಡೆಗಳ ಮೇಲಿನ ನಿರ್ಬಂಧದಿಂದಾಗಿ ಅವರ ಕ್ರೀಡಾ ಬದುಕಿಗೂ ಸಂಕಷ್ಟ ಎದುರಾಯಿತು.

ಮಾಜಿ ವಿಶ್ವ ಚಾಂಪಿಯನ್ ಅಲೆಸ್ಸಾಂಡ್ರಾ ಕ್ಯಾಪೆಲ್ಲೊಟ್ಟೊ ಅವರ ನೆರವಿನಿಂದ ಸಹೋದರಿಯರು ಇಟಲಿಗೆ ವಲಸೆ ಹೋದರು. ಅಲ್ಲಿ ತರಬೇತಿ ಮುಂದುವರಿಸಿದ ಫರೀಬಾ 2022ರಲ್ಲಿ ಅಫ್ಘಾನ್ ರಾಷ್ಟ್ರೀಯ ಚಾಂಪಿಯನ್ ಆದರು. ಅಲ್ಲದೆ, UCI ರೇಸ್ ಗೆದ್ದ ಮೊದಲ ಅಫ್ಘಾನ್ ಮಹಿಳಾ ಸೈಕ್ಲಿಸ್ಟ್ ಎಂಬ ಸಾಧನೆ ಮಾಡಿದರು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಅಫ್ಘಾನಿಸ್ತಾನವನ್ನು ಪ್ರತಿನಿಧಿಸಿದ್ದರು.

‘ಅಫ್ಘಾನ್ ಮಹಿಳೆಯರ ಶಕ್ತಿಯ ಸಂಕೇತ’
ಬೆಳ್ಳಿ ಪದಕ ಗೆದ್ದ ಬಳಿಕ ಮಾತನಾಡಿದ ಫರೀಬಾ, ಈ ಪದಕ ಅಫ್ಘಾನ್ ಮಹಿಳೆಯರ ಪ್ರತಿರೋಧ ಮತ್ತು ಶಕ್ತಿಯ ಸಂಕೇತವಾಗಿದೆ ಎಂದು ಹೇಳಿದರು.

“ನಾವು ಇಂದಿಗೂ ಬದುಕುಳಿದಿದ್ದೇವೆ ಮತ್ತು ಹೋರಾಡುತ್ತಿದ್ದೇವೆ ಎಂಬುದಕ್ಕೆ ಇದು ಸಾಕ್ಷಿ. ನನ್ನ ಮೇಲೆ ಬಿದ್ದ ಪ್ರತಿಯೊಂದು ಕಲ್ಲು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಶಕ್ತಿಯನ್ನು ನೀಡಿತು. ಮುಂದಿನ ಪೀಳಿಗೆಯ ಅಫ್ಘಾನ್ ಹೆಣ್ಣುಮಕ್ಕಳು ಯಾವುದೇ ಭಯವಿಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಾಗಲಿ” ಎಂದು ಅವರು ಆಶಯ ವ್ಯಕ್ತಪಡಿಸಿದರು.

ತಾಲಿಬಾನ್ ಆಡಳಿತದ ಬಳಿಕ ಅಫ್ಘಾನ್ ಮಹಿಳಾ ಕ್ರೀಡಾಪಟುಗಳ ಪರಿಸ್ಥಿತಿ ಜಾಗತಿಕ ಗಮನ ಸೆಳೆದಿದೆ. ನಿರಾಶ್ರಿತರಾಗಿರುವ ಅಫ್ಘಾನಿಸ್ತಾನದ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆಯುತ್ತಿರುವ ವರದಿಗಳೂ ಈ ಹಿಂದೆ ಪ್ರಕಟವಾಗಿದ್ದವು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading