ಬಿಗ್ ನ್ಯೂಸ್
ಪುತ್ತೂರಿನಲ್ಲಿ ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನ ತಯಾರಿ : ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಸಂಶೋಧಿಸಿರುವ ಮಧುಮೇಹಿಗಳು ಸೇವಿಸಬಹುದಾದ ‘ಜೋನಿ ಬೆಲ್ಲ’ ಶೀಘ್ರ ಮಾರುಕಟ್ಟೆಗೆ
ಪುತ್ತೂರು: ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನವೊಂದು ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಸಂಶೋಧಿಸಿರುವ, ರುಚಿಕರವಾಗಿರುವ ಉತ್ಪನ್ನ ಈ ಜೋನಿ (ಲಿಕ್ವಿಡ್) ಬೆಲ್ಲ. ಗೇರುಹಣ್ಣಿನ ರಸದಿಂದಲೇ ಈ ಬೆಲ್ಲ ತಯಾರಿಸಲಾಗಿದೆ.
ಸಾಮಾನ್ಯವಾಗಿ ಗೇರು ಬೆಳೆಗಾರರು ಗೇರು ಹಣ್ಣನ್ನು ಉಪಯೋಗಿಸುವುದೇ ಇಲ್ಲ. ಹಿಂದೆ ಜಾನುವಾರುಗಳಿಗೆ ತಿನ್ನಲು ಕೊಡುತ್ತಿದ್ದರು. ಕೆಲವರು ಇದನ್ನು ವೈನ್, ಸಾರಾಯಿ ತಯಾರಿಸಲು ಬಳಸುತ್ತಿದ್ದರು. ಆದರೆ, ಸಾರಾಯಿ ತಯಾರಿಕೆ ಅಕ್ರಮವಾಗಿರುವುದರಿಂದ ಗೇರು ಹಣ್ಣುಗಳು ಮರದ ಬುಡದಲ್ಲೇ ಕೊಳೆತುಹೋಗುತ್ತಿವೆ.
ಕಬ್ಬಿನಿಂದ ತಯಾರಿಸುವ ಬೆಲ್ಲಕ್ಕೆ ಹೋಲಿಸಿದರೆ ಗೇರುಹಣ್ಣಿನ ಬೆಲ್ಲದಲ್ಲಿ ‘ಗ್ಲೆಸೆಮಿಕ್’ ಅಂಶ ಅತಿ ಕಡಿಮೆ ಇದೆ. ಮಧುಮೇಹಿಗಳೂ ಸೇವಿಸಲು ಯೋಗ್ಯವಾದ ಜೋನಿ ಬೆಲ್ಲಕ್ಕೆ ಸಂಶೋಧನಾ ನಿರ್ದೇಶನಾಲಯ ‘ಪೇಟೆಂಟ್’ ಪಡೆದುಕೊಂಡಿದೆ.
ಗೇರಿನ ರಸ ಬಳಸಿ ಅದರಲ್ಲಿನ ಅಂಶವನ್ನು ಸಾಂದ್ರೀಕರಿಸಿ ಬೆಲ್ಲ ಸಿದ್ಧಪಡಿಸಲಾಗಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಈ ಬೆಲ್ಲದಲ್ಲಿ ಹೆಚ್ಚಿನ ಪ್ರೊಟೀನ್, ನಾರಿನ ಅಂಶಗಳಿವೆ ಎಂದು ನಿರ್ದೇಶನಾಲಯ ಹೇಳಿದೆ.
ಪೇಟೆಂಟ್ ಅನ್ನು ಸ್ವಸಹಾಯ ಗುಂಪುಗಳಿಗೆ ಅಥವಾ ಆಸಕ್ತ ಸ್ವ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಈ ಬೆಲ್ಲವನ್ನು ಸಿದ್ಧಪಡಿಸಲು ಬೇಕಾದ ಎಲ್ಲ ತಂತ್ರಜ್ಞಾನ ನೀಡಿ ಬೆಲ್ಲದ ಉತ್ಪಾದನೆಗೆ ಅವಕಾಶವನ್ನು ಕಲ್ಪಿಸಿಕೊಡಲು ನಿರ್ದೇಶನಾಲಯ ತೀರ್ಮಾನಿಸಿದೆ.
ಬಿಗ್ ನ್ಯೂಸ್
Renukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು: ಮಾಫಿ ಸಾಕ್ಷಿ ಅರ್ಜಿ ವಾಪಸ್ ಪಡೆದ ಎ10 ವಿನಯ್
ನಟ ದರ್ಶನ್ ಸೇರಿದಂತೆ ಹಲವರು ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ 10ನೇ ಆರೋಪಿ ವಿನಯ್, ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.
ಬೆಂಗಳೂರು: ನಟ ದರ್ಶನ್ ಸೇರಿದಂತೆ ಹಲವರು ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ 10ನೇ ಆರೋಪಿ ವಿನಯ್, ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.
ಈಗಾಗಲೇ ಪ್ರಕರಣದ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರುವ ಅವರು, ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಈ ಬೆಳವಣಿಗೆ ಪ್ರಕರಣದ ಮುಂದಿನ ವಿಚಾರಣೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
ಇನ್ನೊಂದೆಡೆ, ಪ್ರಕರಣದ ಆರೋಪಿಗಳಾದ ಅನುಕುಮಾರ್ ಮತ್ತು ಜಗದೀಶ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆದಿದೆ. ಜಾಮೀನು ಅರ್ಜಿಗಳ ಕುರಿತ ಆದೇಶವನ್ನು ನ್ಯಾಯಾಲಯ ಅಕ್ಟೋಬರ್ 17ಕ್ಕೆ ಕಾಯ್ದಿರಿಸಿದೆ.
ವಿನಯ್ ಮಾಫಿ ಸಾಕ್ಷಿಯಾಗುವ ಅರ್ಜಿಯನ್ನು ವಾಪಸ್ ಪಡೆದಿರುವುದು ಪ್ರಕರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಬೆಳವಣಿಗೆಯಿಂದ ಪ್ರಕರಣದ ಇತರ ಆರೋಪಿಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಲಿದೆ ಎಂಬುದು ಮುಂದಿನ ಕಾನೂನು ಪ್ರಕ್ರಿಯೆಯಿಂದ ಸ್ಪಷ್ಟವಾಗಬೇಕಿದೆ.
ಬಿಗ್ ನ್ಯೂಸ್
G.L. Acharya Jewellers-ವಿಜಯದಶಮಿ ಪ್ರಯುಕ್ತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನಿಂದ ವಿಶೇಷ ಕೊಡುಗೆ
ವಿಜಯದಶಮಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ವಿಶೇಷಗೊಳಿಸುವ ಉದ್ದೇಶದಿಂದ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಯಾದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಶುಲ್ಕದ ಮೇಲೆ ಗ್ರಾಹಕರಿಗೆ ಗರಿಷ್ಠ ರೂ.600ವರೆಗೆ ರಿಯಾಯಿತಿ ನೀಡಲಾಗುತ್ತಿದೆ.ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ಗೆ ಫ್ಲಾಟ್ ರೂ.8000 ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ಫ್ಲಾಟ್ ರೂ.8000 ರಿಯಾಯಿತಿ ನೀಡಲಾಗುತ್ತಿದೆ ಎಂದು ಸಂಸ್ಥೆ ಪ್ರಕಟಿಸಿದೆ.
ವಿಜಯದಶಮಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ವಿಶೇಷಗೊಳಿಸುವ ಉದ್ದೇಶದಿಂದ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಯಾದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಶುಲ್ಕದ ಮೇಲೆ ಗ್ರಾಹಕರಿಗೆ ಗರಿಷ್ಠ ರೂ.600ವರೆಗೆ ರಿಯಾಯಿತಿ ನೀಡಲಾಗುತ್ತಿದೆ.ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ಗೆ ಫ್ಲಾಟ್ ರೂ.8000 ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ಫ್ಲಾಟ್ ರೂ.8000 ರಿಯಾಯಿತಿ ನೀಡಲಾಗುತ್ತಿದೆ ಎಂದು ಸಂಸ್ಥೆ ಪ್ರಕಟಿಸಿದೆ.
ವಜ್ರಾಭರಣಗಳನ್ನು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲೇ ನೀಡುವುದರ ಜೊತೆಗೆ, ಪ್ರತಿ ಕ್ಯಾರೆಟ್ ಗೆ ರೂ.8000 ವಿಶೇಷ ರಿಯಾಯಿತಿ ನೀಡಲಾಗುವುದು ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಆಭರಣ ಖರೀದಿಗೆ ಈ ಕೊಡುಗೆ ವಿಶೇಷ ಅವಕಾಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಸಂದರ್ಭದಲ್ಲಿ ಗ್ರಾಹಕರು ಚಿನ್ನದ ಉಳಿತಾಯ ಯೋಜನೆಗೆ ಸೇರ್ಪಡೆಯಾಗುವ ಅವಕಾಶವೂ ಇದೆ.ಯೋಜನೆಗೆ ಸೇರ್ಪಡೆಯಾಗಿ ನಿಗದಿತ ಅವಧಿ ಪೂರ್ಣಗೊಳಿಸಿದ ಬಳಿಕ ಮುಂದಿನ ವರ್ಷ ಇದೇ ಹಬ್ಬದ ಸಂಭ್ರಮದ ಸಮಯದಲ್ಲಿ ಚಿನ್ನಾಭರಣ ಖರೀದಿಸಲು ಅವಕಾಶವಿದ್ದು, ಹಬ್ಬದ ಸಂದರ್ಭದಲ್ಲಿ ಉಳಿತಾಯದೊಂದಿಗೆ ಚಿನ್ನ ಖರೀದಿಸಲು ಗ್ರಾಹಕರಿಗೆ ಅನುಕೂಲ ಕಲ್ಪಿಸಲಾಗಿದೆ.
ಇತರೆ ಮಳಿಗೆಯ ಹಳೆಯ ಚಿನ್ನವನ್ನು 0% ರೇಟ್ ಡಿಡಕ್ಷನ್ನೊಂದಿಗೆ ಎಕ್ಸ್ಚೇಂಜ್ ಮಾಡಿಕೊಳ್ಳುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ.
ವಿಜಯದಶಮಿ ಹಾಗೂ ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಗ್ರಾಹಕರಿಗಾಗಿ ಆಕರ್ಷಕ ಚಿನ್ನಾಭರಣಗಳ ವೈವಿಧ್ಯಮಯ ಸಂಗ್ರಹವನ್ನು ಸಂಸ್ಥೆ ಸಿದ್ಧಪಡಿಸಿದೆ.ಸಾಂಪ್ರದಾಯಿಕ ವಿನ್ಯಾಸಗಳ ಜೊತೆಗೆ ಆಧುನಿಕ ಶೈಲಿಯ ಆಭರಣಗಳೂ ಲಭ್ಯವಿದ್ದು ಗ್ರಾಹಕರ ವಿವಿಧ ಅಭಿರುಚಿ ಹಾಗೂ ಅಗತ್ಯಗಳಿಗೆ ತಕ್ಕಂತೆ ಹಲವು ವಿನ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಹೆಚ್ಚಿನ ಉಳಿತಾಯದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಕೊಡುಗೆ ಚಿನ್ನದ ನಾಣ್ಯಗಳು, ಚಿನ್ನದ ಗಟ್ಟಿಗಳು ಹಾಗೂ ಎಲ್ಲೋ ಟ್ಯಾಗ್ ಹೊಂದಿರುವ ಆಭರಣಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ ಈ ಕೊಡುಗೆಯನ್ನು ಯಾವುದೇ ಚಿನ್ನದ ಉಳಿತಾಯ ಯೋಜನೆ ಅಥವಾ ಇತರ ಯಾವುದೇ ಯೋಜನೆಯೊಂದಿಗೆ ಸಂಯೋಜಿಸಲು ಸಾಧ್ಯವಿಲ್ಲ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಪುತ್ತೂರಿನಲ್ಲಿ ಆರಂಭಗೊಂಡಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಆರು ದಶಕಗಳಿಗೂ ಹೆಚ್ಚು ಕಾಲ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡು -ಮುನ್ನಡೆಯುತ್ತಿದೆ.ಗುಣಮಟ್ಟ,ಸೊಬಗು, ಪಾರದರ್ಶಕತೆ ಹಾಗೂ ಗ್ರಾಹಕರ ಹಿತಕ್ಕೆ ಆದ್ಯತೆ -ನೀಡುತ್ತಾ ಸಂಸ್ಥೆ ತನ್ನ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದೆ.
ಮಂಗಳೂರು
Dakshina Kannada-ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಪ್ರಸ್ತಾವ: ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸಿದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವಂತೆ ರಾಜಕಾರಣಿಗಳು, ಸಾಮಾಜಿಕ ಚಿಂತಕರು, ಸರ್ವಧರ್ಮಗಳ ಹಿರಿಯರು ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಸರ್ಕಾರಕ್ಕೆ ಹಲವು ಮನವಿಗಳು ಸಲ್ಲಿಕೆಯಾಗಿವೆ. ಸಾರ್ವಜನಿಕರ ಬೇಡಿಕೆ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಪರಿಗಣಿಸಿ ಈ ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ.
ಭಾರತ ಸರ್ಕಾರದ ಗೃಹ ಸಚಿವಾಲಯದ 1953ರ ಸೆಪ್ಟೆಂಬರ್ 11ರ ಮಾರ್ಗಸೂಚಿಗಳು ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಸೆಕ್ಷನ್ 4(4A) ಅಡಿಯಲ್ಲಿ ಲಭ್ಯವಿರುವ ಅಧಿಕಾರಗಳನ್ವಯ ಮರುನಾಮಕರಣ ಪ್ರಕ್ರಿಯೆ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಈ ಸಂಬಂಧ ಸಾರ್ವಜನಿಕರು ತಮ್ಮ ಸಲಹೆ ಮತ್ತು ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ಅಥವಾ ಇ-ಮೇಲ್ ಮೂಲಕ ಸರ್ಕಾರಕ್ಕೆ ಸಲ್ಲಿಸಬಹುದು. ಸ್ವೀಕೃತವಾಗುವ ಅಭಿಪ್ರಾಯಗಳನ್ನು ಪರಿಶೀಲಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಭಿಪ್ರಾಯ ಸಲ್ಲಿಸಬೇಕಾದ ವಿಳಾಸಗಳು
- ಮುಖ್ಯಮಂತ್ರಿಯವರ ಸಚಿವಾಲಯ, ಕೊಠಡಿ ಸಂಖ್ಯೆ: 235, 2ನೇ ಮಹಡಿ, ವಿಧಾನಸೌಧ, ಬೆಂಗಳೂರು – 560001; ಇ-ಮೇಲ್: cm.kar@nic.in
- ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ, ಕೊಠಡಿ ಸಂಖ್ಯೆ: 711, 7ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು – 560001; ಇ-ಮೇಲ್: Prs.revenue@gmail.com
- ಗಮನಿಸಿ: ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಲ್ಲಿಸಬೇಕು.
-
ಕಾರ್ಯಕ್ರಮಗಳು21 hours agoPuttur-ಪುತ್ತೂರು: ಅ.16ರಂದು ಪ್ರವೀಣ್ ಕ್ಯಾಪಿಟಲ್ನ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ
-
ಕಾರ್ಯಕ್ರಮಗಳು20 hours ago‘Havells Experience Center-ನಾಳೆ (ಅ. 15) ರಂದು ಮೈತ್ರಿ ಎಲೆಕ್ಟ್ರಿಕ್ನಲ್ಲಿ ʻಹ್ಯಾವೆಲ್ಸ್ ಎಕ್ಸ್ಪೀರಿಯನ್ಸ್ ಸೆಂಟರ್ʼ ಶುಭಾರಂಭ
-
ಕಾರ್ಯಕ್ರಮಗಳು21 hours agoPuttur-ಪುತ್ತೂರು: ಅ.15ರಂದು ‘ಮೈ ಡ್ರೆಸ್ ಕೋಡ್’ ನೂತನ ಮಳಿಗೆ ಗ್ರಾಂಡ್ ರೀ-ಓಪನಿಂಗ್
-
ಸ್ಥಳೀಯ3 hours agoNavoor clinic-ನಾವೂರು ಕ್ಲಿನಿಕ್ಗೆ ಬೆಂಕಿ ಪ್ರಕರಣ: ರವಿ ಪೂಜಾರಿ ಬಂಧನ, ಇಬ್ಬರು ಶಂಕಿತರ ವಿಚಾರಣೆ
-
Uncategorized21 hours agoAmbika Vidyalaya-ಅಂಬಿಕಾ ವಿದ್ಯಾಲಯ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಬಹುಮಾನ
-
ಶಿಕ್ಷಣ19 hours agoSanidhya S. Rao-ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ಸಾನಿಧ್ಯ ಎಸ್. ರಾವ್ಗೆ ಪ್ರಥಮ ಸ್ಥಾನ; SGFI ಸ್ಪರ್ಧೆಗೆ ಆಯ್ಕೆ
-
ಬಿಗ್ ನ್ಯೂಸ್3 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು: ಮಾಫಿ ಸಾಕ್ಷಿ ಅರ್ಜಿ ವಾಪಸ್ ಪಡೆದ ಎ10 ವಿನಯ್
-
ಅಂತರ ರಾಜ್ಯ3 hours agoMurder case-ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ಗೆ ಗಲ್ಲು ಶಿಕ್ಷೆ..!


















