Connect with us

ಮಂಗಳೂರು

Dharmasthala-ಧರ್ಮಸ್ಥಳ: ಎಸ್ಐಟಿಯಿಂದ ಬಂಗ್ಲೆಗುಡ್ಡೆ ‘ರಹಸ್ಯ’ ಶೋಧ: ಎರಡನೇ ದಿನ ಎರಡು ಕಡೆ ಬುರುಡೆ ಸಮೇತ ಮಾನವ ಅಸ್ತಿಪಂಜರ ಪತ್ತೆ..!

Published

on



Ad Widget

Ad Widget

Ad Widget

Ad Widget

ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಅಸ್ಥಿಪಂಜರ ಹುಡುಕಾಟಕ್ಕೆ ಎಸ್ಐಟಿ ತಂಡ ಆಗಮಿಸಿದೆ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಅರಣ್ಯ ಇಲಾಖೆ, SOCO ತಂಡ, ಕಂದಾಯ, ಮತ್ತು ಫಾರೆನ್ಸಿಕ್ ತಜ್ಞರನ್ನೊಳಗೊಂಡ ತಂಡವು ಬಂಗ್ಲೆಗುಡ್ಡೆ ಕಾಡಿನ ಮೇಲ್ಭಾಗದಲ್ಲಿ ಶೋಧ ಕಾರ್ಯ ನಡೆಸುತ್ತಿದೆ.

Ad Widget

Ad Widget

Ad Widget

Ad Widget

ಮಂಗಳೂರು: ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಅಸ್ಥಿಪಂಜರ ಹುಡುಕಾಟಕ್ಕೆ ಎಸ್ಐಟಿ ತಂಡ ಆಗಮಿಸಿದೆ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಅರಣ್ಯ ಇಲಾಖೆ, SOCO ತಂಡ, ಕಂದಾಯ, ಮತ್ತು ಫಾರೆನ್ಸಿಕ್ ತಜ್ಞರನ್ನೊಳಗೊಂಡ ತಂಡವು ಬಂಗ್ಲೆಗುಡ್ಡೆ ಕಾಡಿನ ಮೇಲ್ಭಾಗದಲ್ಲಿ ಶೋಧ ಕಾರ್ಯ ನಡೆಸುತ್ತಿದೆ.

Ad Widget

Ad Widget

Ad Widget alt="Ad Widget"/>

Ad Widget

ನಿನ್ನೆ ಸುಮಾರು ಐದು ಎಕರೆ ಪ್ರದೇಶದಲ್ಲಿ ಶೋಧ ನಡೆಸಲಾಗಿತ್ತು. ಇಂದು ಮತ್ತೆ ಐದರಿಂದ ಆರು ಎಕರೆ ಜಾಗದಲ್ಲಿ ಶೋಧ ಕಾರ್ಯ ಮುಂದುವರಿಸುತ್ತಿದೆ.

Ad Widget

Ad Widget <> Ad Widget

ನಿನ್ನೆ ಎರಡು ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿರುವ ಅಸ್ಥಿಪಂಜರಕ್ಕೆ ಸಂಬಂಧಿಸಿದಂತೆ ಇಂದು ಮಹಜರು ಕಾರ್ಯ ನಡೆದಿದೆ.



Ad Widget

ನಿನ್ನೆ 5ಕ್ಕಿಂತ ಹೆಚ್ಚು ಕಡೆ ಕಳೆಬರಹ ಪತ್ತೆಯಾಗಿತ್ತು, ಇಂದು ಕೂಡ 2 ಕಡೆ ತಲೆಬುರುಡೆ ಸಮೇತ ಅಸ್ತಿಪಂಜರ ಪತ್ತೆಯಾಗಿದೆ ಎನ್ನಲಾಗುತ್ತಿದೆ.

Click to comment

Leave a Reply

ಮಂಗಳೂರು

Dakshina Kannada-ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಪ್ರಸ್ತಾವ: ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸಿದ ಸರ್ಕಾರ

Published

on



Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವಂತೆ ರಾಜಕಾರಣಿಗಳು, ಸಾಮಾಜಿಕ ಚಿಂತಕರು, ಸರ್ವಧರ್ಮಗಳ ಹಿರಿಯರು ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಸರ್ಕಾರಕ್ಕೆ ಹಲವು ಮನವಿಗಳು ಸಲ್ಲಿಕೆಯಾಗಿವೆ. ಸಾರ್ವಜನಿಕರ ಬೇಡಿಕೆ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಪರಿಗಣಿಸಿ ಈ ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ.
ಭಾರತ ಸರ್ಕಾರದ ಗೃಹ ಸಚಿವಾಲಯದ 1953ರ ಸೆಪ್ಟೆಂಬರ್ 11ರ ಮಾರ್ಗಸೂಚಿಗಳು ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಸೆಕ್ಷನ್ 4(4A) ಅಡಿಯಲ್ಲಿ ಲಭ್ಯವಿರುವ ಅಧಿಕಾರಗಳನ್ವಯ ಮರುನಾಮಕರಣ ಪ್ರಕ್ರಿಯೆ ಕೈಗೊಳ್ಳಲು ಉದ್ದೇಶಿಸಲಾಗಿದೆ.

Ad Widget

Ad Widget <> Ad Widget

ಈ ಸಂಬಂಧ ಸಾರ್ವಜನಿಕರು ತಮ್ಮ ಸಲಹೆ ಮತ್ತು ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ಅಥವಾ ಇ-ಮೇಲ್ ಮೂಲಕ ಸರ್ಕಾರಕ್ಕೆ ಸಲ್ಲಿಸಬಹುದು. ಸ್ವೀಕೃತವಾಗುವ ಅಭಿಪ್ರಾಯಗಳನ್ನು ಪರಿಶೀಲಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.



Ad Widget

ಅಭಿಪ್ರಾಯ ಸಲ್ಲಿಸಬೇಕಾದ ವಿಳಾಸಗಳು

Ad Widget

Ad Widget
  1. ಮುಖ್ಯಮಂತ್ರಿಯವರ ಸಚಿವಾಲಯ, ಕೊಠಡಿ ಸಂಖ್ಯೆ: 235, 2ನೇ ಮಹಡಿ, ವಿಧಾನಸೌಧ, ಬೆಂಗಳೂರು – 560001; ಇ-ಮೇಲ್: cm.kar@nic.in
  2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ, ಕೊಠಡಿ ಸಂಖ್ಯೆ: 711, 7ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು – 560001; ಇ-ಮೇಲ್: Prs.revenue@gmail.com
  3. ಗಮನಿಸಿ: ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಲ್ಲಿಸಬೇಕು.
Ad Widget
Continue Reading

ಮಂಗಳೂರು

Raghupti Bhat-2028ರ ಚುನಾವಣೆಯಲ್ಲಿ ಸ್ಪರ್ಧೆ ಖಚಿತ; ಕಾಂಗ್ರೆಸ್ ಸೇರ್ಪಡೆ ಬಗ್ಗೆ ಏನು ಹೇಳಿದ್ರು ರಘುಪತಿ ಭಟ್

Published

on



Ad Widget

Ad Widget

Ad Widget

Ad Widget

ಕಾಂಗ್ರೆಸ್ ಸೇರ್ಪಡೆಯ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ಕಾಂಗ್ರೆಸ್ ಸೇರ್ಪಡೆಯ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಈಗಾಗಲೇ ಆಹ್ವಾನ ಬಂದಿರುವುದು ನಿಜ. ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯ ಪಡೆದುಕೊಂಡ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

Ad Widget

Ad Widget <> Ad Widget

“ಬಿಜೆಪಿಯವರು ಕರೆಯುತ್ತಾರೆ ಎಂದು ಕಾಯುತ್ತಿದ್ದೇನೆ. ಬಿಜೆಪಿ ಸೇರುವ ಬಗ್ಗೆಯೂ ಯೋಚಿಸಬಹುದು. ಆದರೆ ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಬೆಳೆದು, ಬಿಜೆಪಿಯಲ್ಲಿ ಯುವ ಮೋರ್ಚಾ ಜಿಲ್ಲಾ ಘಟಕ ಹಾಗೂ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಮೂರು ಬಾರಿ ಶಾಸಕನಾಗಿದ್ದೇನೆ. ಹೀಗಿರುವಾಗ ಏಕಾಏಕಿ ಪಕ್ಷ ಬದಲಿಸುವ ನಿರ್ಧಾರ ಕೈಗೊಳ್ಳಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನನ್ನ ಬೆಂಬಲಿಗರ ವಿಶ್ವಾಸ ಪಡೆದುಕೊಂಡೇ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ತಿಳಿಸಿದರು.



Ad Widget

ಕಳೆದ ಚುನಾವಣೆಯ ಸಂದರ್ಭ ತಮಗೆ ಅನ್ಯಾಯವಾಗಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದ ರಘುಪತಿ ಭಟ್, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ತಪ್ಪಿದ್ದಕ್ಕಿಂತಲೂ ವಿಧಾನ ಪರಿಷತ್ ಸ್ಥಾನ ನೀಡುವುದಾಗಿ ಹೇಳಿ, ಕೊನೆಗೆ ಅವಕಾಶ ನೀಡದಿರುವುದು ನೋವು ತಂದಿದೆ ಎಂದರು.

Ad Widget

Ad Widget

ತಮ್ಮದೇ ಪಕ್ಷದ ಕೆಲವು ಶಾಸಕರಿಂದ ವೈಯಕ್ತಿಕ ದಬ್ಬಾಳಿಕೆ ಎದುರಿಸಬೇಕಾಯಿತು ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ಸಂಘದ ಹಿರಿಯರು ಹಾಗೂ ಬಿಜೆಪಿಯ ನಾಯಕರು ತಮ್ಮೊಂದಿಗೆ ಮಾತನಾಡದಿರುವುದು ಬೇಸರ ತಂದಿದೆ ಎಂದು ಹೇಳಿದರು.

“ನನ್ನ ಹತ್ತಿರದ ಕ್ಷೇತ್ರಗಳ ಮಾಜಿ ಶಾಸಕರನ್ನು ಗೌರವದಿಂದ ಕಾಣಲಾಗುತ್ತದೆ. ನನಗೆ ವಿಶೇಷ ಗೌರವ ಬೇಡ. ಕನಿಷ್ಠ ಬಹುವಚನದಲ್ಲಿ ಮಾತನಾಡಿದ್ದರೂ ಸಾಕಿತ್ತು. ಈ ಎಲ್ಲ ಘಟನೆಗಳು ಮಾನಸಿಕವಾಗಿ ನೋವುಂಟುಮಾಡಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ಕ್ಷೇತ್ರದ ಜನರು ನನ್ನನ್ನು ಸೋಲಿಸಿಲ್ಲ. ಪಕ್ಷವೇ ನನಗೆ ಟಿಕೆಟ್ ತಪ್ಪಿಸಿದೆ ಎಂಬ ಭಾವನೆ ಜನರಲ್ಲಿದೆ. ಜನರು ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಜನರು ಬೇಡ, ನೀವು ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದರೆ ಮನೆಯಲ್ಲೇ ಕುಳಿತುಕೊಳ್ಳುತ್ತೇನೆ. ಜನರ ಕೆಲಸ ಮಾಡಲು ಜನಪ್ರತಿನಿಧಿಯಾಗಲೇಬೇಕೆಂದಿಲ್ಲ. ಚುನಾವಣಾ ರಾಜಕೀಯದಿಂದ ದೂರವಿದ್ದರೂ ಜನರಿಗೆ ಸಹಾಯ ಮಾಡಬಹುದು ಎಂದು ರಘುಪತಿ ಭಟ್ ಹೇಳಿದರು

Ad Widget
Continue Reading

ಮಂಗಳೂರು

HYDGEN Innovation-HYDGEN ಇನ್ನೋವೇಶನ್ ಡೇ 2026

Published

on



Ad Widget

Ad Widget

Ad Widget

Ad Widget

2026ರ ಅಕ್ಟೋಬರ್ 15ರಂದು ಮಂಗಳೂರಿನ ಗಂಜಿಮಠದಲ್ಲಿರುವ HYDGEN ಘಟಕದಲ್ಲಿ HYDGEN ಇನ್ನೋವೇಶನ್ ಡೇ 2026 ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಇದು ವಾರ್ಷಿಕ 20 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ನಮ್ಮ ನೂತನ ತಯಾರಿಕಾ ಘಟಕ.

Ad Widget

Ad Widget

Ad Widget

Ad Widget

2026ರ ಅಕ್ಟೋಬರ್ 15ರಂದು ಮಂಗಳೂರಿನ ಗಂಜಿಮಠದಲ್ಲಿರುವ HYDGEN ಘಟಕದಲ್ಲಿ HYDGEN ಇನ್ನೋವೇಶನ್ ಡೇ 2026 ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಇದು ವಾರ್ಷಿಕ 20 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ನಮ್ಮ ನೂತನ ತಯಾರಿಕಾ ಘಟಕ.

Ad Widget

Ad Widget

Ad Widget alt="Ad Widget"/>

Ad Widget

ಭಾರತವು ಎಲೆಕ್ಟ್ರೋಲೈಸರ್ಗಳನ್ನು ನಿರ್ಮಿಸಬಲ್ಲದು ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದೆ. ಈಗಿನ ನಿಜವಾದ ಸವಾಲು ಅವುಗಳನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸುವುದು, ಅದೂ ಪ್ರತಿ ಬಾರಿಯೂ ಒಂದೇ ಗುಣಮಟ್ಟದಲ್ಲಿ ಮತ್ತು ಕಾರ್ಖಾನೆ ನಡೆಸುವವರಿಗೆ ಸೂಕ್ತವೆನಿಸುವ ಬೆಲೆಯಲ್ಲಿ. ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರ (ಲ್ಯಾಬ್-ಗ್ರೋನ್ ಡೈಮಂಡ್), ವಿಶೇಷ ರಾಸಾಯನಿಕಗಳು, ಔಷಧ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳ ಅನೇಕ ತಯಾರಕರು ಇಂದಿಗೂ ಹೈಡ್ರೋಜನ್ ಅನ್ನು ಸಿಲಿಂಡರ್ಗಳು ಮತ್ತು ಟ್ಯೂಬ್ ಟ್ರೇಲರ್ಗಳ ಮೂಲಕ ಖರೀದಿಸುತ್ತಿದ್ದಾರೆ. ಅವರು ಪಾವತಿಸುವ ಮೊತ್ತದಲ್ಲಿ ಶೇ. 70–85ರಷ್ಟು ಭಾಗ ಹೈಡ್ರೋಜನ್ಗಾಗಿ ಅಲ್ಲ, ಅದರ ಕಂಪ್ರೆಷನ್, ಸಾಗಣೆ ಮತ್ತು ಸಂಗ್ರಹಣೆಗೆ ಖರ್ಚಾಗುತ್ತದೆ. ಒಂದು ಲಾರಿ ತಡವಾದರೂ ಇಡೀ ಉತ್ಪಾದನಾ ಸಾಲು ನಿಲ್ಲುವ ಸಾಧ್ಯತೆ ಇದೆ. ಹೈಡ್ರೋಜನ್ ಅನ್ನು ಅದನ್ನು ಬಳಸುವ ಕಾರ್ಖಾನೆಯಲ್ಲೇ ಉತ್ಪಾದಿಸಿದರೆ ಈ ವೆಚ್ಚ ಇಲ್ಲವಾಗುತ್ತದೆ. ಭಾರತೀಯ ಉದ್ಯಮಕ್ಕೆ ಬೇಕಾದ ಪ್ರಮಾಣದಲ್ಲಿ ಈ ವ್ಯವಸ್ಥೆಗಳನ್ನು ತಯಾರಿಸುವುದು ನಮ್ಮ ಕೆಲಸ. ಅದಕ್ಕಾಗಿಯೇ ಮಂಗಳೂರಿನ ಗಂಜಿಮಠದಲ್ಲಿ HYDGEN ಘಟಕವನ್ನು ನಿರ್ಮಿಸಿದ್ದೇವೆ.

Ad Widget

Ad Widget <> Ad Widget

ದಿನದ ಕಾರ್ಯಕ್ರಮ ಮಂಗಳೂರಿನ ಗಂಜಿಮಠದಲ್ಲಿರುವ HYDGEN ಘಟಕದ ವೀಕ್ಷಣೆಯೊಂದಿಗೆ ಆರಂಭವಾಗಲಿದೆ. ಅತಿಥಿಗಳು ಸ್ಟ್ಯಾಕ್ ಜೋಡಣೆ, ಸಿಸ್ಟಮ್ ಇಂಟಿಗ್ರೇಷನ್, ಪರೀಕ್ಷೆ ಮತ್ತು ಹೈಡ್ರೋಜನ್ ಗುಣಮಟ್ಟ ತಪಾಸಣೆ ಪ್ರಕ್ರಿಯೆಗಳನ್ನು ಒಂದೇ ಆವರಣದಲ್ಲಿ ನೇರವಾಗಿ ನೋಡಲಿದ್ದಾರೆ. ನಂತರ ನಮ್ಮ 250 ಕಿಲೋವ್ಯಾಟ್ AEM ಮತ್ತು PEM ಎಲೆಕ್ಟ್ರೋಲೈಸರ್ಗಳನ್ನು ಅನಾವರಣಗೊಳಿಸಲಾಗುವುದು. ಪ್ರತಿದಿನ ಹೆಚ್ಚು ಹೈಡ್ರೋಜನ್ ಅಗತ್ಯವಿರುವ ಕಾರ್ಖಾನೆಗಳಿಗಾಗಿ ರೂಪಿಸಲಾದ ಇವುಗಳನ್ನು ಮಂಗಳೂರಿನಲ್ಲೇ ವಿನ್ಯಾಸಗೊಳಿಸಿ, ಜೋಡಿಸಿ, ಪರೀಕ್ಷಿಸಲಾಗಿದೆ.
ಪುಣೆಯ ಸಿಎಸ್ಐಆರ್–ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ (CSIR–NCL) ನಿರ್ದೇಶಕರಾದ ಡಾ. ಆಶಿಷ್ ಲೇಲೆ ಅವರು, ಭಾರತದಲ್ಲಿ ಹೈಡ್ರೋಜನ್ ತಂತ್ರಜ್ಞಾನಗಳು ಪ್ರಯೋಗಾಲಯದಿಂದ ವಾಣಿಜ್ಯ ಬಳಕೆಯ ಹಂತಕ್ಕೆ ಹೇಗೆ ತಲುಪುತ್ತವೆ ಎಂಬ ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ.



Ad Widget

ಬಳಿಕ ನಡೆಯುವ ತಜ್ಞರ ಉಪನ್ಯಾಸಗಳು ಮತ್ತು ಸಂವಾದ ಗೋಷ್ಠಿಗಳಲ್ಲಿ ಮೆಂಬ್ರೇನ್ ಎಲೆಕ್ಟ್ರೋಲೈಸರ್ಗಳನ್ನು ಪೈಲಟ್ ಘಟಕಗಳಿಂದ ಬಹು-ಮೆಗಾವ್ಯಾಟ್ ಸ್ಥಾವರಗಳ ಮಟ್ಟಕ್ಕೆ ಕೊಂಡೊಯ್ಯುವುದು, ಕಾರ್ಖಾನೆಯಲ್ಲೇ ಉತ್ಪಾದಿಸುವ ಹೈಡ್ರೋಜನ್ ಈಗಾಗಲೇ ಯಾವ ಉದ್ಯಮಗಳಿಗೆ ಲಾಭ ತರುತ್ತಿದೆ ಹಾಗೂ ಹೈಡ್ರೋಜನ್ ವೆಚ್ಚವನ್ನು ಇಳಿಸಲು ಬೇಕಾದ ಹೂಡಿಕೆಯನ್ನು ಹೇಗೆ ಒದಗಿಸುವುದು ಎಂಬ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

Ad Widget

Ad Widget

ಕರ್ನಾಟಕ ಸರ್ಕಾರದ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ. ಬಿ. ಪಾಟೀಲ್; ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು. ಟಿ. ಖಾದರ್; ಮಾನ್ಯ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ; ಹಾಗೂ ಮಂಗಳೂರು ನಗರ ಉತ್ತರ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವುದು ನಮಗೆ ಸಂತಸ ತಂದಿದೆ. ದೇಶದಾದ್ಯಂತದಿಂದ ನೀತಿ ನಿರೂಪಕರು, ಸರ್ಕಾರಿ ಅಧಿಕಾರಿಗಳು, ಸಂಶೋಧಕರು, ಶಿಕ್ಷಣ ತಜ್ಞರು, ಹೂಡಿಕೆದಾರರು ಮತ್ತು ಉದ್ಯಮಿಗಳು ಸಹ ಪಾಲ್ಗೊಳ್ಳಲಿದ್ದಾರೆ.

HYDGEN ಒಂದೇ ಗುರಿಯೊಂದಿಗೆ ಆರಂಭವಾಯಿತು:

ಉದ್ಯಮಗಳಿಗೆ ಅವಲಂಬಿಸಬಹುದಾದ ಹೈಡ್ರೋಜನ್ ಅನ್ನು, ಮುಂಚಿತವಾಗಿ ಲೆಕ್ಕ ಹಾಕಬಹುದಾದ ವೆಚ್ಚದಲ್ಲಿ ಒದಗಿಸುವುದು. ದೊಡ್ಡ ಸಾಮರ್ಥ್ಯದ ವ್ಯವಸ್ಥೆಗಳು ಹಾಗೂ ಮಂಗಳೂರಿನಲ್ಲೇ ಬಿಡಿಭಾಗ ಪೂರೈಕೆದಾರರ ಸ್ಥಳೀಯ ಜಾಲದ ಮೂಲಕ, ಗಂಜಿಮಠ ಘಟಕವು ಈ ಗುರಿಯನ್ನು ಇನ್ನಷ್ಟು ಗ್ರಾಹಕರಿಗೆ ತಲುಪಿಸಲು ನೆರವಾಗುತ್ತದೆ. ಇಲ್ಲಿಂದ ನಾವು ಭಾರತ ಮತ್ತು ವಿದೇಶಗಳ ಗ್ರಾಹಕರಿಗೆ ಸೇವೆ ಒದಗಿಸುತ್ತೇವೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading