Connect with us

ಕೊಡಗು

ಇವತ್ತು ನ್ಯೂಸ್ ಗೆ ಕ್ಲಾರಿಟಿನೂ ಇಲ್ಲ ಕ್ಲಾರಿಫೀಕೇಶನೂ ಇಲ್ಲ..! ಮಾಧ್ಯಮ ಲೋಕದ ಈಗಿನ ಪರಿಸ್ಥಿತಿ ಬಗ್ಗೆ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

Published

on



Ad Widget

Ad Widget

Ad Widget

Ad Widget

ಕೊಡಗು: ನಾವು ಸಮಾಜವನ್ನು ನೋಡುವ ದೃಷ್ಟಿಯನ್ನು ಕಳೆದುಕೊಂಡರೆ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸುತ್ತೇವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯ ಪಟ್ಟರು.

Ad Widget

Ad Widget

Ad Widget

Ad Widget

ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

Ad Widget

Ad Widget

Ad Widget alt="Ad Widget"/>

Ad Widget

ಪತ್ರಕರ್ತರಿಗೆ ಮತ್ತು ಪತ್ರಕರ್ತರ ಕುಟುಂಬಗಳಿಗೆ ಸಮಾಜ ವಿಶೇಷ ಗೌರವ ನೀಡುತ್ತದೆ ಮತ್ತು ಸರ್ಕಾರ ವಿಶೇಷ ಸವಲತ್ತುಗಳನ್ನು ಕಲ್ಪಿಸುತ್ತದೆ. ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಗಳಾಗಿ ಕೆಲಸ ಮಾಡುತ್ತಾರೆ ಮತ್ತು ಸಮಾಜದ ನೋವುಗಳಿಗೆ ಕನ್ನಡಿ ಹಿಡಿಯುತ್ತಾರೆ ಎನ್ನುವ ಕಾರಣದಿಂದ ಈ ವಿಶೇಷ ಗೌರವ ಮತ್ತು ಸವಲತ್ತು ಸಿಗುತ್ತಿದೆ ಎಂದು ವಿವರಿಸಿದರು.

Ad Widget

Ad Widget <> Ad Widget

ಈ ಒಳ ದೃಷ್ಟಿ ಪತ್ರಕರ್ತರಿಗೆ ಇರಬೇಕು. ಈ ಸಮಾಜಮುಖಿ ದೃಷ್ಟಿಯನ್ನು ನಾವು ಕಳೆದುಕೊಂಡರೆ ನಾವು ಸಮಾಜದಲ್ಲಿ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸುವ ಜೊತೆಗೆ ನಾವೂ ಹಾಗೇ ಬಿಡುವ ಅಪಾಯವಿದೆ ಎಂದರು.



Ad Widget

ಇಂದು ಪತ್ರಿಕಾ ವೃತ್ತಿಯ ಬಗ್ಗೆ ಎರಡು ರೀತಿಯ ಬೇಸರದ ಮಾತುಗಳನ್ನು ಸ್ನೇಹಿತರು ನನ್ನ ಜೊತೆ ಹಂಚಿಕೊಳ್ಳುತ್ತಾರೆ. ಒಂದು, ಈ ವೃತ್ತಿ ಬದುಕು ಸಾಕಾಗಿದೆ ಸರ್. ಬ್ರೇಕಿಂಗ್ ನ್ಯೂಸ್, ಬ್ರೇಕಿಂಗ್ ನ್ಯೂಸ್ ಅಂತ ನಮ್ಮ ಉಸಿರು ಕಟ್ಟುತಾ ಇದೆ ಎನ್ನುವ ಬೇಸರ ಒಂದು ಕಡೆಗಿದೆ. ಮತ್ತೊಂದು ಕಡೆ ಬ್ರೇಕಿಂಗ್ ನ್ಯೂಸ್ ನೆಪದಲ್ಲಿ ಬರುತ್ತಿರುವ ಅಸತ್ಯ ಮತ್ತು ಅರ್ಧ ಸತ್ಯದ ಸುದ್ದಿಗಳಿಂದ ಸಮಾಜದ ಉಸಿರು ಕಟ್ಟುತ್ತಿದೆ ಎನ್ನುವ ಬೇಸರವೂ ಮತ್ತೊಂದು ಕಡೆಗಿದೆ. ಈ ಎರಡೂ ಬೇಸರಕ್ಕೂ ಬೇರೆ ಯಾರೂ ಕಾರಣರಲ್ಲ. ಪತ್ರಿಕೋದ್ಯಮದ ತೇರನ್ನು ಎಳೆಯುತ್ತಿರುವ ನಾವೇ ಕಾರಣಕರ್ತರು ಎನ್ನುವುದನ್ನು ನಾವು ಮರೆಯಬಾರದು ಎಂದರು.

Ad Widget

Ad Widget

ನೊಂದವರ ಕೈಗನ್ನಡಿಯಾಗಬೇಕಾದ ಪತ್ರಕರ್ತ ಮಡಿಕೇರಿಯಲ್ಲಿ ಭೂಕುಸಿತ ಆದರೆ ಅದನ್ನು ತರೋದಿಲ್ಲ ಮುಂದಕ್ಕೆ ಯಾವಾನೋ ಚಿತ್ರ ನಟ ಜೈಲಿಗೋದ ಆತನಿಗೆ ಬಿರಿಯಾನಿ ಕೊಟ್ಟರೆ ಇದನ್ನೇ ಇಡೀ ದಿನ ತೋರಿಸ್ತಿರ್ತಿವಿ.

ಏಕೆಂದರೆ ಸಮಾಜದ ಕಷ್ಟಗಳಿಗೆ ಕನ್ನಡಿ ಹಿಡಿಯುತ್ತಿದ್ದ ಪತ್ರಿಕೋದ್ಯಮ, ಈಗ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಮತ್ತು ಕಾರ್ಪೋರೇಟ್ ಉದ್ಯಮಿಗಳಿಗೆ ಪರವಾಗಿ ಕನ್ನಡಿ ಹಿಡಿಯುತ್ತಿದೆ. ಇಂದು ವ್ಯಕ್ತಿಗತ ದ್ವೇಷ ಮತ್ತು ವೈಯುಕ್ತಿಕ ಬದುಕಿನ ಖಾಸಗಿತನವನ್ನು ಕೆದಕಿ ಕೆದಕಿ ಕಸವನ್ನೇ ಬ್ರೇಕಿಂಗ್ ಸುದ್ದಿಗಳನ್ನಾಗಿಸುತ್ತಿದ್ದೇವೆ.

ನಾವು ಕಸವನ್ನು ಕೆದಕುವಾಗ ನಮಗೆ ಕಸವೇ ಸಿಗುತ್ತದೆ. ನಾವು ಏನನ್ನು ಹುಡುಕುತ್ತೀವೋ ಅದೇ ನಮಗೆ ಸಿಗುತ್ತದೆ. ಇದೇ ಕಸ ಕಣ್ಣಿಗೆ, ಕಿವಿಗೆ ಬಿದ್ದರೆ ಸಮಾಜದಲ್ಲಿ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸಿದಂತಾಗುವುದಿಲ್ಲವೇ ಎನ್ನುವ ಪ್ರಶ್ನೆಯನ್ನು ಪತ್ರಕರ್ತರು ಮಾತ್ರವಲ್ಲ, ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಮಕ್ಕಳೂ ಕೇಳಿಕೊಳ್ಳಬೇಕಿದೆ ಎಂದರು.

ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಮಕ್ಕಳು ಒಂದು ಮಾತನ್ನು ನೆನಪಿಡಬೇಕು. ನಿಮ್ಮಷ್ಟೇ ಪ್ರತಿಭೆ ಇರುವ, ನಿಮಗಿಂತ ಪ್ರತಿಭೆ ಇರುವ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಮಕ್ಕಳು ಹೊರಗಿದ್ದಾರೆ. ಹೆಚ್ಚಿನವರಿಗೆ ಈ ಅವಕಾಶ ಮತ್ತು ಗೌರವ ಪ್ರಾಪ್ತಿ ಆಗುವುದಿಲ್ಲ. ಇಂಥಾ ಅವಕಾಶ ವಂಚಿತ ಮಕ್ಕಳ, ಅವಕಾಶ ವಂಚಿತ ಸಮಾಜದ ರಾಯಭಾರಿಗಳಾಗಿ ನೀವುಗಳು ಬೆಳೆಯಬೇಕಿದೆ ಎಂದು ಕರೆ ನೀಡಿದರು.

ಈ ರೀತಿಯ ಸಮಾಜಮುಖಿ ದೃಷ್ಟಿಕೋನವನ್ನು ನಾವು ಬೆಳೆಸಿಕೊಂಡಾಗ ನಮ್ಮ ಸಾಮಾಜಿಕ ಪ್ರಜ್ಞೆ ಬೆಳಯುತ್ತದೆ. ಈ ಪ್ರಜ್ಞೆ ಬೆಳೆದಾಗ ನೀವು ಸಮಾಜದ ಆಸ್ತಿ ಆಗುತ್ತೀರಿ. ಆಗ ಈ ಸಮಾಜದ ಋಣ ತೀರಿಸಿದಂತಾಗುತ್ತದೆ ಎಂದರು.

ಅಮ್ಮನ‌ ಮಡಿಲು-ಮನುಷ್ಯ ಸಂಬಂಧ ಅಳಿಯಬಾರದು

ತಂತ್ರಜ್ಞಾನ ಬೆಳೆದಂತೆ, ಅವಕಾಶಗಳು ದೊರೆತಂತೆ ಮನುಷ್ಯ ಸಂಬಂಧಗಳು ದುರ್ಬಲವಾಗುತ್ತಿವೆ. ತಾಯಿಯ ಮಡಿಲು, ಅಮ್ಮನ‌ ಕೈ ತುತ್ತು, ಹಳ್ಳಿ ಮನೆ, ಹಸು-ಕುರಿ-ಕೋಳಿ ಸಾಕಾಣೆ ಎಲ್ಲವೂ ದೂರವಾಗುತ್ತಿದೆ. ಮೊದಲು ಸಣ್ಣ ಮಕ್ಕಳಿಗೆ ಚಂದ್ರನನ್ನು ತೋರಿಸಿ ಊಟ ಮಾಡಿಸಲಾಗುತ್ತಿತ್ತು. ಈಗ ಮೊಬೈಲ್ ಇಲ್ಲದೆ ಊಟವೇ ಇಲ್ಲ. ಕೊನೆಗೆ ಪೋಷಕರ ಜೊತೆಯ ಒಡನಾಟವೂ ಮೊಬೈಲ್ ಗೆ ಸೀಮಿತವಾಗಿ ಮಕ್ಕಳು ವಿದೇಶಕ್ಕೆ ಹೋಗಿ ಕುಳಿತಿರುವ ಪರಿಣಾಮ ಇಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಇವೆಲ್ಲಾ ಆರೋಗ್ಯಕರ ಸಮಾಜದ ಲಕ್ಷಣವೇ ಯೋಚಿಸಿ ಎಂದು ಕರೆ ನೀಡಿದರು.

ಪತ್ರಕರ್ತರ ವಸತಿಗೆ ಯೋಜನೆ

ಈಗಾಗಲೇ ರಾಜ್ಯದ ಪತ್ರಕರ್ತರಿಗೆ ವಸತಿ ಸವಲತ್ತು ಕಲ್ಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಯೋಜನೆ ರೂಪಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ವಸತಿ ಸಚಿವರ ಮಾಧ್ಯಮ ಸಂಯೋಜಕರಾದ ಲಕ್ಷ್ಮೀನಾರಾಯಣ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಸಂಘದ ರಾಜ್ಯ ಉಪಾಧ್ಯಕ್ಷರಾದ ರಮೇಶ್ ಕುಟ್ಟಪ್ಪ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Ad Widget

ಕೊಡಗು

Madikeri-ಮಡಿಕೇರಿ: ಅಡಿಕೆ ಹಾಳೆ ತಟ್ಟೆ, ಪೇಪರ್ ಕಪ್‌ ನಿಷೇಧ: ನಗರಸಭೆ ಆದೇಶಕ್ಕೆ ವ್ಯಾಪಾರಸ್ಥರು ಶಾಕ್..!

Published

on



Ad Widget

Ad Widget

Ad Widget

Ad Widget

ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ಕಸ ವಿಲೇವಾರಿ ಸುಧಾರಿಸುವ ನಿಟ್ಟಿನಲ್ಲಿ ನಗರಸಭೆಯು ಮತ್ತೊಂದು ಕಠಿಣ ಕ್ರಮ ಕೈಗೊಂಡಿದೆ. ನಗರಸಭೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ಅಡಿಕೆ ಹಾಳೆ ತಟ್ಟೆಗಳು, ಪೇಪರ್ ಕಪ್ ಹಾಗೂ ಪೇಪರ್ ಪ್ಲೇಟ್‌ಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ನಗರಸಭೆ ಆಡಳಿತ ಮಂಡಳಿ ಮತ್ತು ಪೌರಾಯುಕ್ತರು ಆದೇಶ ಹೊರಡಿಸಿದ್ದಾರೆ.

Ad Widget

Ad Widget

Ad Widget

Ad Widget

ಮಡಿಕೇರಿ: ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ಕಸ ವಿಲೇವಾರಿ ಸುಧಾರಿಸುವ ನಿಟ್ಟಿನಲ್ಲಿ ನಗರಸಭೆಯು ಮತ್ತೊಂದು ಕಠಿಣ ಕ್ರಮ ಕೈಗೊಂಡಿದೆ. ನಗರಸಭೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ಅಡಿಕೆ ಹಾಳೆ ತಟ್ಟೆಗಳು, ಪೇಪರ್ ಕಪ್ ಹಾಗೂ ಪೇಪರ್ ಪ್ಲೇಟ್‌ಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ನಗರಸಭೆ ಆಡಳಿತ ಮಂಡಳಿ ಮತ್ತು ಪೌರಾಯುಕ್ತರು ಆದೇಶ ಹೊರಡಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ನಿಷೇಧಕ್ಕೆ ಕಾರಣವೇನು?:
ನಗರಸಭೆಯ ಮಾಹಿತಿ ಪ್ರಕಾರ, ಪೇಪರ್ ಕಪ್ ಮತ್ತು ಅಡಿಕೆ ಹಾಳೆ ತಟ್ಟೆಗಳು ನೈಸರ್ಗಿಕವಾಗಿ ಕರಗುವ ವಸ್ತುಗಳೇ ಆದರೂ, ಅವುಗಳು ಸಂಪೂರ್ಣವಾಗಿ ಮಣ್ಣಿನಲ್ಲಿ ವಿಲೀನವಾಗಲು ದೀರ್ಘ ಸಮಯ ತೆಗೆದುಕೊಳ್ಳುತ್ತವೆ. ಇದರಿಂದ ನಗರದ ಕಸ ವಿಲೇವಾರಿ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಗರಸಭೆಯ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡು ಈ ನಿಷೇಧ ಜಾರಿಗೊಳಿಸಲಾಗಿದೆ. ಇತ್ತೀಚೆಗಷ್ಟೇ ನಗರಸಭೆಯು ಒಂದು ಮತ್ತು ಅರ್ಧ ಲೀಟರ್ ನೀರಿನ ಬಾಟಲಿಗಳನ್ನು ನಿಷೇಧಿಸಿ ಗಮನ ಸೆಳೆದಿತ್ತು.

Ad Widget

Ad Widget <> Ad Widget

ಸಾರ್ವಜನಿಕರ ಮತ್ತು ವ್ಯಾಪಾರಸ್ಥರ ಆಕ್ರೋಶ:
ನಗರಸಭೆಯ ಈ ಹೊಸ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ನೀರಿನ ಬಾಟಲಿ ನಿಷೇಧಕ್ಕೆ ಬೆಂಬಲ ನೀಡಿದ್ದ ಜನತೆ, ಅಡಿಕೆ ಹಾಳೆ ಮತ್ತು ಪೇಪರ್ ತಟ್ಟೆಗಳ ನಿಷೇಧವನ್ನು ಖಂಡಿಸಿದ್ದಾರೆ.



Ad Widget

“ಅಡಿಕೆ ಹಾಳೆ ಮತ್ತು ಪೇಪರ್ ಉತ್ಪನ್ನಗಳು ನೈಸರ್ಗಿಕವಾಗಿದ್ದು, ಮಣ್ಣಿನಲ್ಲಿ ಸುಲಭವಾಗಿ ಕರಗುತ್ತವೆ. ಮದುವೆ, ದೇವಸ್ಥಾನಗಳ ಉತ್ಸವ, ಕ್ರೀಡಾಕೂಟ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಇವುಗಳ ಬಳಕೆಯೇ ಹೆಚ್ಚು. ಇವುಗಳನ್ನು ನಿಷೇಧಿಸುವುದು ಎಷ್ಟರ ಮಟ್ಟಿಗೆ ಸರಿ?” ಎಂದು ವ್ಯಾಪಾರಸ್ಥರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, “ಸ್ಥಳೀಯವಾಗಿ ಮಾರಾಟ ನಿಷೇಧಿಸಿದರೂ ಪ್ರವಾಸಿಗರು ಹೊರಗಿನಿಂದ ಅಡಿಕೆ ತಟ್ಟೆ, ಪೇಪರ್ ಕಪ್‌ಗಳನ್ನು ತರುತ್ತಾರೆ, ಅವರನ್ನು ತಡೆಯುವುದು ಹೇಗೆ?” ಎಂದು ಜನರು ನಗರಸಭೆಯನ್ನು ಪ್ರಶ್ನಿಸುತ್ತಿದ್ದಾರೆ.

Ad Widget

Ad Widget

ನೈಸರ್ಗಿಕ ಉತ್ಪನ್ನಗಳ ಮೇಲಿನ ಈ ನಿಷೇಧವು ಸಣ್ಣ ವ್ಯಾಪಾರಸ್ಥರಿಗೆ ಆರ್ಥಿಕ ಹೊಡೆತ ನೀಡಲಿದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ.

Ad Widget
Continue Reading

ಉಡುಪಿ

Helpline-ನೇಪಾಲ ಜಲಪ್ರಳಯ: ಉಡುಪಿ, ಕೊಡಗು ಯಾತ್ರಿಕರ ರಕ್ಷಣೆಗೆ ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭ

Published

on



Ad Widget

Ad Widget

Ad Widget

Ad Widget

ನೇಪಾಲ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿರುವ ಭೀಕರ ಜಲಪ್ರಳಯದಿಂದಾಗಿ ಉಡುಪಿ ಮತ್ತು ಕೊಡಗು ಜಿಲ್ಲೆಯ ಹಲವು ಪ್ರವಾಸಿಗರು ಹಾಗೂ ಯಾತ್ರಿಕರು ಅಲ್ಲಿ ಸಿಲುಕಿಕೊಂಡಿದ್ದಾರೆ. ಇವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಜಿಲ್ಲಾಡಳಿತಗಳು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ತುರ್ತು ಸಹಾಯವಾಣಿಗಳನ್ನು ಆರಂಭಿಸಿವೆ.

Ad Widget

Ad Widget

Ad Widget

Ad Widget

ಉಡುಪಿ/ಮಡಿಕೇರಿ: ನೇಪಾಲ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿರುವ ಭೀಕರ ಜಲಪ್ರಳಯದಿಂದಾಗಿ ಉಡುಪಿ ಮತ್ತು ಕೊಡಗು ಜಿಲ್ಲೆಯ ಹಲವು ಪ್ರವಾಸಿಗರು ಹಾಗೂ ಯಾತ್ರಿಕರು ಅಲ್ಲಿ ಸಿಲುಕಿಕೊಂಡಿದ್ದಾರೆ. ಇವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಜಿಲ್ಲಾಡಳಿತಗಳು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ತುರ್ತು ಸಹಾಯವಾಣಿಗಳನ್ನು ಆರಂಭಿಸಿವೆ.

Ad Widget

Ad Widget

Ad Widget alt="Ad Widget"/>

Ad Widget

ಉಡುಪಿ ಜಿಲ್ಲೆಯವರಿಗೆ ಸೂಚನೆ:
ಉಡುಪಿ ಜಿಲ್ಲೆಯಿಂದ ಪ್ರವಾಸ ಅಥವಾ ಯಾತ್ರೆಗೆ ತೆರಳಿ ನೇಪಾಲದ ನೆರೆ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವವರ ವಿವರಗಳನ್ನು ತಕ್ಷಣವೇ ಜಿಲ್ಲಾಡಳಿತಕ್ಕೆ ನೀಡಲು ಕೋರಲಾಗಿದೆ. ಸಂಕಷ್ಟದಲ್ಲಿರುವವರ ಹೆಸರು, ವಿಳಾಸ, ಪ್ರಸ್ತುತ ಇರುವ ನಿಖರ ಸ್ಥಳ ಮತ್ತು ಮೊಬೈಲ್ ಸಂಖ್ಯೆಯನ್ನು ಕೆಳಗಿನ ಸಂಖ್ಯೆಗಳಿಗೆ ತಿಳಿಸಬಹುದು:
ಸಹಾಯವಾಣಿ: 1077
ದೂರವಾಣಿ: 0820-2574802

Ad Widget

Ad Widget <> Ad Widget

ಕೊಡಗು ಜಿಲ್ಲೆಯವರಿಗೆ ಸೂಚನೆ:
ಕೊಡಗು ಜಿಲ್ಲೆಯ ಯಾರಾದರೂ ಯಾತ್ರಿಕರು ನೇಪಾಲದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದರೆ, ಅವರ ಕುಟುಂಬದವರು ತಕ್ಷಣವೇ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಬೇಕು. ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ:
ದೂರವಾಣಿ ಸಂಖ್ಯೆಗಳು: 08272-221077, 08272-221099
ಮೊಬೈಲ್/ವಾಟ್ಸಾಪ್ ಸಂಖ್ಯೆ: 8550001077



Ad Widget

ಸಂಕಷ್ಟದಲ್ಲಿರುವವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಕೊಡಗು

Kodagu-ಕೊಡಗಿನಲ್ಲಿ ವರುಣನ ಅಬ್ಬರ: ಮರಳಿ ಮೈದುಂಬಿದ ಭಾಗಮಂಡಲದ ತ್ರಿವೇಣಿ ಸಂಗಮ..!

Published

on



Ad Widget

Ad Widget

Ad Widget

Ad Widget

ಕೊಡಗು ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ವರುಣನ ಆರ್ಭಟ ಮರುಕಳಿಸಿದ್ದು, ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪವಿತ್ರ ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಮೈದುಂಬಿ ಭರ್ತಿಯಾಗಿದೆ.

Ad Widget

Ad Widget

Ad Widget

Ad Widget

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ವರುಣನ ಆರ್ಭಟ ಮರುಕಳಿಸಿದ್ದು, ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪವಿತ್ರ ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಮೈದುಂಬಿ ಭರ್ತಿಯಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಜಲಾವೃತಗೊಂಡ ತಟದ ಪ್ರದೇಶಗಳು:
ನದಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ತಟದಲ್ಲಿರುವ ಪ್ರವಾಸಿ ಉದ್ಯಾನವನ ಹಾಗೂ ಸುತ್ತಮುತ್ತಲಿನ ಕೃಷಿ ಗದ್ದೆಗಳಿಗೆ ನೀರು ನುಗ್ಗಿದೆ. ನದಿ ಪಾತ್ರದ ನಿವಾಸಿಗಳು ಮತ್ತು ರೈತರಲ್ಲಿ ಪ್ರವಾಹದ ಭೀತಿ ಎದುರಾಗಿದೆ.

Ad Widget

Ad Widget <> Ad Widget

ಮಡಿಕೇರಿ, ವಿರಾಜಪೇಟೆ, ಬಿರುನಾಣಿ ಭಾಗದಲ್ಲಿ ಮಳೆ ಬಿರುಸಾಗಿದ್ದರೆ ಸೋಮವಾರಪೇಟೆ ಭಾಗದಲ್ಲಿ ನಿರಂತರ ಸಾಧಾರಣ ಮಳೆ ಸುರಿಯುತ್ತಿದೆ.



Ad Widget
Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading