Connect with us

ಅಪರಾಧ

Mangaluru-ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; ಆರೋಪಿಗೆ 20 ವರ್ಷ ಜೈಲು ಶಿಕ್ಷೆ

Published

on



Ad Widget

Ad Widget

Ad Widget

Ad Widget

16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಬೆದರಿಕೆ ಹಾಕಿ ವಿಡಿಯೋ ಚಿತ್ರೀಕರಿಸಿದ ಆರೋಪದಡಿಯಲ್ಲಿ ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಬೆದರಿಕೆ ಹಾಕಿ ವಿಡಿಯೋ ಚಿತ್ರೀಕರಿಸಿದ ಆರೋಪದಡಿಯಲ್ಲಿ ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ದಿನಾಂಕ 30-05-2023 ರಂದು ಸಜಿಪನಡು ನಿವಾಸಿ ಅಬ್ದುಲ್‌ ಅಝೀಜ್‌ರವರ ಮಗ ಆರೋಪಿತ ಮನ್ಸೂರ್ @ ಮೊಹಮ್ಮದ್ ಮನ್ಸೂರ್ @ ಜಾಬೀರ್ (30 ವ) ಈ ಕೃತ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿತ್ತು.

Ad Widget

Ad Widget <> Ad Widget

ಈ ಸಂಬಂಧ ದಿನಾಂಕ 23-12-2023 ರಂದು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 363, 376(2)(ಎನ್), 376(3), 506 ಐಪಿಸಿ ಮತ್ತು ಕಲಂ 6 ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.



Ad Widget

ತನಿಖೆ ಮತ್ತು ಬಂಧನ
ಆರೋಪಿತನು ಎಂಟು ತಿಂಗಳ ಕಾಲ ತಲೆಮರೆಸಿಕೊಂಡಿದ್ದು, ದಿನಾಂಕ 02-07-2024 ರಂದು ಪೊಲೀಸರು ಆತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿತು. ತನಿಖೆಯನ್ನು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗುರುರಾಜ್ ಆರಂಭಿಸಿ, ಭಾಗಶಃ ತನಿಖೆಯನ್ನು ಪೂರೈಸಿದರು. ನಂತರ ರಾಜೇಂದ್ರ ಬಿ. ಅವರು ತನಿಖೆಯನ್ನು ಮುಂದುವರೆಸಿ, ಪೂರಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ದೋಷಾರೋಪಣಾ ಪತ್ರವನ್ನು ನಿಗದಿತ ಸಮಯದಲ್ಲಿ ಸಲ್ಲಿಸಿದರು.

Ad Widget

Ad Widget

ವಿಚಾರಣೆ ಮತ್ತು ತೀರ್ಪು
ಪ್ರಕರಣದ ವಿಚಾರಣೆಯನ್ನು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-2 (ಪೋಕ್ಸೋ) ನ್ಯಾಯಾಲಯದಲ್ಲಿ ನಡೆಸಲಾಯಿತು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಬದ್ರಿನಾಥ್ ಮತ್ತು ವಿಶೇಷ ಸರಕಾರಿ ಅಭಿಯೋಜಕ ಸಹನಾದೇವಿ ಬೋಳೂರು ವಾದ ಮಂಡಿಸಿದರು.

ಜು. 30ರಂದು ನ್ಯಾಯಾಧೀಶ ಮಾನು ಕೆ.ಎಸ್. ಅವರು ಅತ್ಯಾಚಾರ ಆರೋಪಿತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50,000 ರೂ. ದಂಡವನ್ನು ವಿಧಿಸಿದರು. ಜೊತೆಗೆ ಬೆದರಿಕೆ ಆರೋಪದಡಿ 1 ವರ್ಷ ಶಿಕ್ಷೆ ಮತ್ತು 5,000 ರೂ. ದಂಡವನ್ನು ವಿಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Ad Widget
Click to comment

Leave a Reply

ಅಂತರ ರಾಜ್ಯ

Premananda Ashram-ಪ್ರೇಮಾನಂದ ಆಶ್ರಮದ ಶಿಷ್ಯನ ಸಾವು ಪ್ರಕರಣಕ್ಕೆ ಟ್ವಿಸ್ಟ್: ರಕ್ತದ ಕಲೆ, ಸಿಸಿಟಿವಿ ದೃಶ್ಯಗಳ ಪರಿಶೀಲನೆ

Published

on



Ad Widget

Ad Widget

Ad Widget

Ad Widget

ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ಶಿಷ್ಯ ರಸಿಕ್ ದುಲಾರಿ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಪ್ರಕರಣದ ತನಿಖೆಯನ್ನು ಮಥುರಾ ಪೊಲೀಸರು ಚುರುಕುಗೊಳಿಸಿದ್ದಾರೆ. ಸೆ.25ರಂದು ನಡೆದ ಈ ಘಟನೆ ಆರಂಭದಲ್ಲಿ ಆತ್ಮಹತ್ಯೆ ಎಂದು ಪೊಲೀಸರು ಪರಿಗಣಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಗಳು ಹಾಗೂ ತನಿಖೆಯಲ್ಲಿ ಸಿಕ್ಕಿರುವ ಕೆಲವು ಮಾಹಿತಿಗಳಿಂದ ಪ್ರಕರಣವು ಅನೂಹ್ಯ ತಿರುವು ಪಡೆದಿದೆ.

Ad Widget

Ad Widget

Ad Widget

Ad Widget

ಮಥುರಾ: ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ಶಿಷ್ಯ ರಸಿಕ್ ದುಲಾರಿ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಪ್ರಕರಣದ ತನಿಖೆಯನ್ನು ಮಥುರಾ ಪೊಲೀಸರು ಚುರುಕುಗೊಳಿಸಿದ್ದಾರೆ. ಸೆ.25ರಂದು ನಡೆದ ಈ ಘಟನೆ ಆರಂಭದಲ್ಲಿ ಆತ್ಮಹತ್ಯೆ ಎಂದು ಪೊಲೀಸರು ಪರಿಗಣಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಗಳು ಹಾಗೂ ತನಿಖೆಯಲ್ಲಿ ಸಿಕ್ಕಿರುವ ಕೆಲವು ಮಾಹಿತಿಗಳಿಂದ ಪ್ರಕರಣವು ಅನೂಹ್ಯ ತಿರುವು ಪಡೆದಿದೆ.

Ad Widget

Ad Widget

Ad Widget alt="Ad Widget"/>

Ad Widget

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 85 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ರಸಿಕ್ ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಹಳೆಯ ಪರಿಚಯಸ್ಥರಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ಆಶ್ರಮಕ್ಕೆ ಸೇರುವ ಮುನ್ನ ಅವರ ಜೀವನ ಹೇಗಿತ್ತು, ಬಳಿಕ ಅವರ ನಡೆ-ನುಡಿಯಲ್ಲಿ ಯಾವುದೇ ಬದಲಾವಣೆಯಾಗಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Ad Widget

Ad Widget <> Ad Widget

ಆಶ್ರಮಕ್ಕೆ ಸೇರುವವರ ವೈಯಕ್ತಿಕ ಮೊಬೈಲ್‌ಗಳನ್ನು ಪಡೆದುಕೊಂಡು, ಬದಲಿಗೆ ಆಶ್ರಮದ ವ್ಯವಸ್ಥೆಯಲ್ಲಿರುವ ಮೊಬೈಲ್ ಮತ್ತು ಸಿಮ್ ನೀಡಲಾಗುತ್ತಿತ್ತು ಎನ್ನಲಾಗಿದೆ. ಹೀಗೆ ಮೊಬೈಲ್ ಬದಲಾಯಿಸುವ ಅಗತ್ಯ ಏನಿತ್ತು, ಆ ಮೊಬೈಲ್‌ಗಳ ಬಳಕೆಯ ಮೇಲೆ ಯಾರಾದರೂ ನಿಗಾ ಇಡುತ್ತಿದ್ದರೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.



Ad Widget

ಆಶ್ರಮದಲ್ಲಿದ್ದವರು ಕುಟುಂಬದವರು ಹಾಗೂ ಸ್ನೇಹಿತರನ್ನು ಎಷ್ಟು ಬಾರಿ ಸಂಪರ್ಕಿಸುತ್ತಿದ್ದರು ಎಂಬುದನ್ನೂ ತನಿಖೆ ನಡೆಸಲಾಗುತ್ತಿದೆ. ರಸಿಕ್ ಅವರ ಹಳೆಯ ಮೊಬೈಲ್, ಹೊಸ ಸಿಮ್, ಕರೆಗಳ ವಿವರ ಹಾಗೂ ಸಂದೇಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Ad Widget

Ad Widget

ಸಾವಿಗೂ ಮುನ್ನ ಏನಾಗಿತ್ತು?

ರಸಿಕ್ ಕೊಠಡಿಯಿಂದ ಹೊರಬಂದಾಗಲೇ ಅವರ ಬಟ್ಟೆಯಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದವು ಎಂದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ ಎನ್ನಲಾಗಿದೆ. ನಂತರ ಅವರು ನಾಲ್ಕನೇ ಮಹಡಿಯ ಮೇಲ್ಛಾವಣಿಗೆ ತೆರಳಿದ್ದಾರೆ. ಅಲ್ಲಿ ಕೆಲಕಾಲ ಕುಳಿತುಕೊಂಡು, ಬಳಿಕ ಮಲಗಿದ್ದರು. ನಂತರ ಎದ್ದು ನಿಂತ ಕೆಲವೇ ಕ್ಷಣಗಳಲ್ಲಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.

ರಸಿಕ್ ಅವರ ದೇಹದಲ್ಲಿ, ವಿಶೇಷವಾಗಿ ತೊಡೆಸಂಧಿ ಭಾಗದಲ್ಲಿ ಗಂಭೀರ ಗಾಯವಾಗಿರುವುದು ತನಿಖೆಯಲ್ಲಿ ಗಮನಕ್ಕೆ ಬಂದಿದೆ. ಈ ಗಾಯ ಹೇಗೆ ಉಂಟಾಯಿತು ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಯಾವುದೇ ಮಾನಸಿಕ ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಕುರಿತು ಅವರು ಕುಟುಂಬದವರು ಅಥವಾ ಸ್ನೇಹಿತರ ಬಳಿ ಏನಾದರೂ ಹೇಳಿಕೊಂಡಿದ್ದರೇ ಎಂಬುದನ್ನು ಪೊಲೀಸರು ತಿಳಿದುಕೊಳ್ಳುತ್ತಿದ್ದಾರೆ.

ಇದಲ್ಲದೆ, ಸಾವಿಗೂ ಮುನ್ನ ಅವರು ಮದ್ಯ, ಮಾದಕ ವಸ್ತು ಅಥವಾ ಇತರ ಯಾವುದೇ ಮನಸ್ಸಿನ ಮೇಲೆ ಪರಿಣಾಮ ಬೀರುವ ವಸ್ತು ಸೇವಿಸಿದ್ದರೇ ಎಂಬುದನ್ನು ತಿಳಿಯಲು ಅವರ ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸಿಸಿಟಿವಿ ದೃಶ್ಯಗಳು, ಮೊಬೈಲ್ ದಾಖಲೆ, ವೈದ್ಯಕೀಯ ವರದಿ ಹಾಗೂ ವಿಚಾರಣೆ ವೇಳೆ ಸಿಕ್ಕ ಮಾಹಿತಿಗಳನ್ನು ಆಧರಿಸಿ ರಸಿಕ್ ಅವರ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ಪತ್ತೆಹಚ್ಚಲು ಮುಂದಾಗಿದ್ದಾರೆ.

Ad Widget
Continue Reading

ಅಂತರ ರಾಜ್ಯ

Fire truck-ಬಿಜೆಪಿ ಶಾಸಕನ ಬಂಗಲೆ ತೊಳೆಯಲು ಅಗ್ನಿಶಾಮಕ ವಾಹನ ಬಳಕೆ; ವಿಡಿಯೋ ವೈರಲ್ ಬಳಿಕ ₹2,700 ದಂಡ

Published

on



Ad Widget

Ad Widget

Ad Widget

Ad Widget

ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಬಂಗಲೆಯನ್ನು ಸ್ವಚ್ಛಗೊಳಿಸಲು ಅಗ್ನಿಶಾಮಕ ದಳದ ವಾಹನ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.

Ad Widget

Ad Widget

Ad Widget

Ad Widget

ದಾಹೋದ್: ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಬಂಗಲೆಯನ್ನು ಸ್ವಚ್ಛಗೊಳಿಸಲು ಅಗ್ನಿಶಾಮಕ ದಳದ ವಾಹನ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ದೇವಗಢ್ ಬಾರಿಯಾ ಪುರಸಭೆಯ ಅಗ್ನಿಶಾಮಕ ವಾಹನವು ಧನ್‌ಪುರ್ ತಾಲೂಕಿನಲ್ಲಿರುವ ಬಿಜೆಪಿ ಶಾಸಕ ಬಚುಭಾಯ್ ಖಬಾದ್ ಅವರ ನಿವಾಸದ ಬಳಿ ನಿಂತಿದ್ದು, ಸಿಬ್ಬಂದಿ ಬಂಗಲೆಯ ಆವರಣ ಹಾಗೂ ಗೋಡೆಗಳಿಗೆ ಪೈಪ್ ಮೂಲಕ ನೀರು ಸಿಂಪಡಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

Ad Widget

Ad Widget <> Ad Widget

ವಿಡಿಯೋ ವೈರಲ್ ಆದ ಬಳಿಕ ತುರ್ತು ಸೇವೆಗೆ ಮೀಸಲಾಗಿರುವ ಅಗ್ನಿಶಾಮಕ ವಾಹನವನ್ನು ವೈಯಕ್ತಿಕ ಬಳಕೆಗೆ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಖಬಾದ್ ಅವರಿಂದ ₹2,700 ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Ad Widget

ಈ ಕುರಿತು ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದೇವಗಢ್ ಬಾರಿಯಾ ಪುರಸಭೆ ಅಧ್ಯಕ್ಷ ಘಮೇಶ್ ಕಲಾಲ್, ಅಗ್ನಿಶಾಮಕ ವಾಹನ ಕಳುಹಿಸುವಂತೆ ಶಾಸಕರು ಕರೆ ಮಾಡಿದ್ದರು. ಯಾವುದಾದರೂ ಗಂಭೀರ ಘಟನೆ ಸಂಭವಿಸಿರಬಹುದು ಎಂದು ಭಾವಿಸಿ ತಕ್ಷಣ ಅಗ್ನಿಶಾಮಕ ದಳವನ್ನು ಸಂಪರ್ಕಿಸಿ ವಾಹನ ಕಳುಹಿಸಿದ್ದಾಗಿ ತಿಳಿಸಿದ್ದಾರೆ.

Ad Widget

Ad Widget

ಆದರೆ, ಬಂಗಲೆ ಸ್ವಚ್ಛಗೊಳಿಸುವ ಉದ್ದೇಶಕ್ಕಾಗಿ ಅಗ್ನಿಶಾಮಕ ವಾಹನವನ್ನು ಬಳಸಲಾಗುತ್ತಿದೆ ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಬಂಗಲೆ ತೊಳೆಯಲು ವಾಹನ ಬಳಸಲಾಗುತ್ತದೆ ಎಂಬ ಮಾಹಿತಿ ಮುಂಚಿತವಾಗಿ ನೀಡಲಾಗಿರಲಿಲ್ಲ. ಈ ಕಾರಣದಿಂದ ಅಚಾತುರ್ಯ ಸಂಭವಿಸಿದೆ. ಇದೀಗ ತಪ್ಪಿತಸ್ಥರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೃಹತ್ ಬಂಗಲೆಯೊಂದರ ಮುಂಭಾಗ ಅಗ್ನಿಶಾಮಕ ವಾಹನ ನಿಂತಿರುವುದು ಕಾಣಿಸುತ್ತದೆ. ಅಗ್ನಿಶಾಮಕ ಸಿಬ್ಬಂದಿ ಪೈಪ್‌ಗಳ ಮೂಲಕ ಬಂಗಲೆಯ ಕಂಪೌಂಡ್ ಹಾಗೂ ಗೋಡೆಗಳಿಗೆ ನೀರು ಸಿಂಪಡಿಸಿ ಸ್ವಚ್ಛಗೊಳಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.

Ad Widget
Continue Reading

ಅಪರಾಧ

FIR-ಮತದಾರರ ಹೆಸರು ಅಳಿಸಲು ಫಾರಂ-7 ಅರ್ಜಿ ದುರ್ಬಳಕೆ; ಬೆಂಗಳೂರಿನಲ್ಲಿ ಐವರ ವಿರುದ್ಧ FIR

Published

on



Ad Widget

Ad Widget

Ad Widget

Ad Widget

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು 5,698 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪದಡಿ ಜಯನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು 5,698 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪದಡಿ ಜಯನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಯನಗರ ಕ್ಷೇತ್ರದ ವಿವಿಧ ಭಾಗಗಳಲ್ಲಿನ 5,698 ಮತದಾರರ ಹೆಸರುಗಳನ್ನು ಅಳಿಸುವಂತೆ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

Ad Widget

Ad Widget <> Ad Widget

ಪ್ರಕರಣದಲ್ಲಿ ಬಿಜೆಪಿ ಸಂಪರ್ಕ ಹೊಂದಿರುವ ಬೂತ್‌ ಮಟ್ಟದ ಏಜೆಂಟ್‌ಗಳಾದ ರಾಮಕೃಷ್ಣ ಹಾಗೂ ಯೋಗೇಶ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಅರ್ಜಿಗಳಲ್ಲಿ ಕೆಲವರ ವೈಯಕ್ತಿಕ ವಿವರಗಳನ್ನು ಅವರ ಅನುಮತಿಯಿಲ್ಲದೆ ಬಳಸಲಾಗಿದೆ ಹಾಗೂ ಕೆಲವು ಅರ್ಜಿಗಳಲ್ಲಿನ ಸಹಿಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.



Ad Widget

ಫಾರಂ-7 ಅರ್ಜಿಗಳನ್ನು ಯಾರು ಸಲ್ಲಿಸಿದ್ದಾರೆ, ಅರ್ಜಿಗಳಲ್ಲಿನ ಸಹಿಗಳು ನಕಲಿಯಾಗಿವೆಯೇ ಹಾಗೂ ಮತದಾರರ ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಲಾಗಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಗಳು ತನಿಖೆಯ ಹಂತದಲ್ಲಿದ್ದು, ಪ್ರಕರಣದ ಸತ್ಯಾಸತ್ಯತೆ ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading