Connect with us

ಮಂಗಳೂರು

Rolls Royce-ಪ್ರತಿಷ್ಠಿತ ಅಮೇರಿಕಾದ ‘ರೋಲ್ಸ್ ರಾಯ್ಸ್’ ನಲ್ಲಿ ಇಂಟರ್ನ್ ಶಿಪ್ ಗಾಗಿ ಸತತ 8 ತಿಂಗಳು ಪ್ರಯತ್ನ ಪಟ್ಟ ಮಂಗಳೂರಿನ ‘ರಿತುಪರ್ಣ’ ಗೆ ನೇರ ಉದ್ಯೋಗ ಆಫರ್ – 20ರ ಹರೆಯದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿಗೆ ಬರೋಬ್ಬರಿ 72 ಲಕ್ಷ ಸಂಬಳ..! ರಾಲ್ಸ್ ರಾಯ್ಸ್ ಗೆ ಚಾಲೆಂಜ್ ಹಾಕಿ ಈಕೆ ಉದ್ಯೋಗ ಗಿಟ್ಟಿಸಿಕೊಂಡು ಸಂಬಳವನ್ನೂ ಹೆಚ್ಚಿಸಿಕೊಂಡ Inspirational Story ಓದಿ

Published

on



Ad Widget

Ad Widget

Ad Widget

Ad Widget

ಅಮೆರಿಕಾದ ಪ್ರತಿಷ್ಟಿತ ಕಂಪನಿಗಳಲ್ಲಿ ಒಂದಾದ ರೋಲ್ಸ್ ರೋಯ್ಸನಲ್ಲಿ ಇಂಟರ್ನ್‌ಶಿಪ್ ಬಯಸಿ 8 ತಿಂಗಳ ಕಾಲ ಸಂದರ್ಶನ ನೀಡಿದ್ದ ಮಂಗಳೂರಿನ 20ರ ಹರೆಯದ ರಿತುಪರ್ಣ ಆ ಸಂಸ್ಥೆಯಲ್ಲಿ ನೇರವಾಗಿ ಉದ್ಯೋಗವನ್ನೇ ಗಿಟ್ಟಿಸಿಕೊಂಡಿದ್ದಾರೆ. ರಾಜ್ಯದಿಂದ ರೋಲ್ಸ್ ರೋಯ್ಸ್ ನಲ್ಲಿ ಉದ್ಯೋಗ ಪಡೆದ ಮೊದಲಿಗರಾಗಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು ಜು. 12: ಹಠ ಹಿಡಿದರೆ ಏನೂ ಬೇಕಾದರೂ ಸಾಧಿಸಬಹುದೆಂಬುದಕ್ಕೆ ಮಂಗಳೂರಿನ ವಿದ್ಯಾರ್ಥಿನಿ ರಿತುಪರ್ಣನೇ ಸಾಕ್ಷಿ. ಅಮೆರಿಕಾದ ಪ್ರತಿಷ್ಟಿತ ಕಂಪನಿಗಳಲ್ಲಿ ಒಂದಾದ ರೋಲ್ಸ್ ರೋಯ್ಸನಲ್ಲಿ ಇಂಟರ್ನ್‌ಶಿಪ್ ಬಯಸಿ 8 ತಿಂಗಳ ಕಾಲ ಸಂದರ್ಶನ ನೀಡಿದ್ದ ಮಂಗಳೂರಿನ 20ರ ಹರೆಯದ ರಿತುಪರ್ಣ ಆ ಸಂಸ್ಥೆಯಲ್ಲಿ ನೇರವಾಗಿ ಉದ್ಯೋಗವನ್ನೇ ಗಿಟ್ಟಿಸಿಕೊಂಡಿದ್ದಾರೆ. ರಾಜ್ಯದಿಂದ ರೋಲ್ಸ್ ರೋಯ್ಸ್ ನಲ್ಲಿ ಉದ್ಯೋಗ ಪಡೆದ ಮೊದಲಿಗರಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ರೋಬೋಟಿಕ್ ಆ್ಯಂಡ್ ಅಟೋಮೇಶನ್ ಕೋರ್ಸ್‌ನ 6ನೇ ಸೆಮಿಸ್ಟರ್‌ನ ವಿದ್ಯಾರ್ಥಿನಿಯಾಗಿರುವ ರಿತುಪರ್ಣ ರೋಲ್ಸ್ ರಾಯ್ಸ್ ಸಂಸ್ಥೆಯ ಜೆಟ್ ಇಂಜಿನ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಕಂಪನಿಯಲ್ಲಿ ವಾರ್ಷಿಕ 72.3 ಲಕ್ಷ ರೂ.ಗಳ ವೇತನದ ಆಫರನ್ನು ಗಿಟ್ಟಿಸಿಕೊಂಡಿರುವ ರಿತುಪರ್ಣ ಅವರು ಸಂಸ್ಥೆಯ ಅತ್ಯಂತ ಕಿರಿಯ ಉದ್ಯೋಗಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.

Ad Widget

Ad Widget <> Ad Widget

ಮೂಲತಃ ತೀರ್ಥಹಳ್ಳಿಯವರಾದ ಸರೇಶ್ ಹಾಗೂ ಗೀತಾ ದಂಪತಿಯ ಪುತ್ರಿ ರಿತುಪರ್ಣ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಗ್ರಾ.ಪಂ. ವ್ಯಾಪ್ತಿ. ಯಮರವಳ್ಳಿ ಗ್ರಾಮದ ಕೊದೂರಿನಲ್ಲಿ ಹುಟ್ಟಿದ್ದು.



Ad Widget

ಮಂಗಳೂರಿನ ಸೈಂಟ್ ಆಗ್ನೆಸ್‌ನ ಬಳಿಕ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೊಬೆಟಿಕ್ ಆ್ಯಂಡ್ ಅಟೋಮಿಷನ್ ಕೋರ್ಸ್‌ನ ವಿದ್ಯಾರ್ಥಿನಿ. ಇಂಜಿನಿಯರಿಂಗ್ ಶಿಕ್ಷಣದ ಪ್ರಥಮ ವರ್ಷದಲ್ಲಿ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಇನ್ನೋವೇಶನ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಆಕೆ ಹಾರ್ವೆಸ್ಟಿಂಗ್ ಆ್ಯಂಡ್ ಸ್ಪೇಯರ್ ಎಂಬ ವಿಷಯದ ಅವಿಷ್ಕಾರಕ್ಕೆ ಆಕೆ ಚಿನ್ನ ಮತ್ತು ಕಂಚಿನ ಪದಕ ಪಡೆಯುತ್ತಾರೆ. ಈ ರೀತಿ ಆರಂಭಗೊಂಡ ಅನ್ವೇಷಣೆಯೊಂದಿಗೆ ಆಕೆ ತನ್ನ ಸಹಪಾಠಿಗಳ ತಂಡ ಕಟ್ಟಿಕೊಂಡು ಮಧ್ಯ ಪ್ರದೇಶದ ಇಂದೋರ್ ಐಐಟಿಗೆ, ಮಂಗಳೂರಿನ ಎನ್‌ಐಟಿಕೆಗೆ ತರಳಿ ಅನ್ವೇಷಣೆಗಳಲ್ಲಿ ಭಾಗಿಯಾಗುತ್ತಾರೆ. ನಂತರ ಡಾಕ್ಟರ್‌ಗಳನ್ನು ಸಂಪರ್ಕಿಸಿ ರೊಬೋಟಿಕ್ ಸರ್ಜರಿಯನ್ನು ಗಮನಿಸಿ ಅಲ್ಲಿಯೂ ಅನ್ವೇಷಣೆಯ ಪ್ರಯತ್ನ ಮಾಡಿದ್ದಾರೆ. ಮಂಗಳೂರಿ ಕಸ ವಿಲೇವಾರಿಗೆ ಸಂಬಂಧಿಸಿ ಆ್ಯಪ್ ಅಭಿವೃದ್ಧಿ ಪಡಿಸುವ ಕೆಲಸದಲ್ಲಿ ಸಹಪಾಠಿಗಳೊಂದಿಗೆ ತೊಡಗಿಸಿಕೊಂಡಿದ್ದಾರೆ.

Ad Widget

Ad Widget

ಪುತ್ರಿಯ ಸಾಧನೆಯ ಬಗ್ಗೆ ತಂದೆ ಸರೇಶ್ ಹೇಳಿದ್ದೇನೂ..?
ತಮ್ಮ ಮಗಳು ಕಳೆದ ಎಂಟು ತಿಂಗಳಿನಿಂದ ರಾತ್ರಿ ಹಗಲು ಕಂಪ್ಯೂಟ‌ರ್ ಎದುರು ಕುಳಿತು ಒತ್ತಡದಲ್ಲಿದ್ದಾಗ ನಾವೂ ಆತಂಕಕ್ಕೆ ಒಳಗಾಗಿದ್ದೆವು. ಅದೇನೋ ಓದಿನ ಒತ್ತಡಕ್ಕೆ ಸಿಲುಕಿದ್ದಾಳೆಯೇ ಎಂಬ ಅಳುಕೂ ನಮ್ಮದಾಗಿತ್ತು. ಆದರೆ ಕೆಲ ಸಮಯ ಹಿಂದೆ ಆಕೆ 8 ತಿಂಗಳ ಶ್ರಮವನ್ನು ನಮ್ಮ ಮುಂದಿರಿಸಿ ‘ರೋಲ್ಸ್ ರೋಯ್ಸ್’ನಂತಹ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿದ್ದನ್ನು ಹೇಳಿ ನಮಗೆ ಸರ್‌ಪ್ರೈಸ್ ನೀಡಿದ್ದಾಳೆ’ ಎನ್ನುತ್ತಾರೆ.

ಕಂಪನಿ ಜತೆಗಿನ ರಿತುಪರ್ಣರ 8 ತಿಂಗಳ ರೋಚಕ ಪಯಣ..!
ರಿತುಪರ್ಣರ ರೋಲ್ಸ್‌ರೋಯ್ಸ್ ಕಂಪನಿ ಜತೆಗಿನ 8 ತಿಂಗಳ ಪಯಣದ ಬಗ್ಗೆ ಸರೇಶ್‌ರವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

‘ಇಂಜಿನಿಯರಿಂಗ್‌ ಕಲಿಕೆಯ ವೇಳೆ ಇಂಟರ್ನ್‌ಶಿಪ್ ಮಾಡುವ ಹಂಬಲದೊಂದಿಗೆ ರಿತುಪರ್ಣ ವಿಶ್ವದ 10 ಮಹಾನ್ ಕಂಪನಿಗಳಲ್ಲಿ ಒಂದಾದ ರೋಲ್ಸ್ ರೋಯ್ಸ್ ಕಂಪನಿಯ ಕದ ತಟ್ಟುತ್ತಾರೆ. ಆದರೆ ಆ ಸಂದರ್ಭ ಕಂಪನಿಯಿಂದ ಬಂದ ಪ್ರತಿಕ್ರಿಯೆ ನಿರಾಸದಾಯಕವಾಗಿತ್ತು. ‘ ಈ ಕಂಪನಿ ಎಷ್ಟು ದೊಡ್ಡದು ಗೊತ್ತಾ? ಕಂಪನಿಯ ಒಳ ಬರಲು ನಿನ್ನ ಅರ್ಹತೆ ಏನು ಎಂಬ ಪ್ರಶ್ನೆಗೆ ಸುಮ್ಮನಾಗದ ರಿತುಪರ್ಣ, ನಿಮ್ಮ ಕಂಪನಿಗೆ ಏನು ಅರ್ಹತೆ ಬೇಕು ಎಂದು ಪ್ರಶ್ನಿಸಿದಾಗ, ಕಂಪನಿ ಕೋಪಗೊಂಡು, ನಮ್ಮ ಒಂದು ಟಾಸ್ಕ್ ನಿನಗೆ ತಿಂಗಳಾದರೂ ಮುಗಿಸಲು ಸಾಧ್ಯವಿಲ್ಲ ಎಂಬ ಉತ್ತರ ಬರುತ್ತದೆ.

ಟಾಸ್ಕ್‌ ಕೊಡಿ ನಾನು ಕಂಪ್ಲೀಟ್ ಮಾಡುತ್ತೇನೆ ಎಂದು ಕಂಪನಿಗೆ ದಂಬಾಲು ಬೀಳುವ ರಿತುಪರ್ಣಗೆ, ಕಂಪನಿಯಿಂದ ಟಾಸ್ಕ್ ನೀಡಲಾಗಿ ತಿಂಗಳೊಳಗೆ ನೀಡುವಂತೆ ಗಡುವು ವಿಧಿಸಲಾಗುತ್ತದೆ. ಒಂದು ತಿಂಗಳೊಳಗೆ ಟಾಸ್ಕ್ ಮುಗಿಸದಿದ್ದರೆ ಮತ್ತೆ ಕಂಪನಿ ಸಂಪರ್ಕಕ್ಕೆ ಬರಬೇಡಿ ಎಂದು ನಿರ್ದಾಕ್ಷಿಣ್ಯ ಮೇಲ್ ಆದಾಗಿತ್ತು. ಟಾಸ್ಕ್ ಪಡೆದಾಗ ರಿತುಪರ್ಣಗೆ ಅದರ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಸೋಲೊಪ್ಪದ ರಿತುಪರ್ಣ, ರಾತ್ರಿ ಹಗಲೆನ್ನದೆ, ಇಂಟರ್‌ನೆಟ್‌ನಲ್ಲಿ ಹುಡುಕಾಡಿ, ವಿಷಯ ತಿಳಿದು ತಿಂಗಳ ಟಾಸ್ಕ್ ವಾರದಲ್ಲೇ ಕಳುಹಿಸುತ್ತಾಳೆ. ಕಂಪನಿಯಿಂದ ಇನ್ನೊಂದು ಟಾಸ್ಕ್ ಎಂಬ ಉತ್ತರ ಬಂದಾಗ ಅದಕ್ಕೂ ಒಪ್ಪಿ ಸರಿ ಸುಮಾರು 8 ತಿಂಗಳ ಕಾಲ ಕಂಪನಿ ನೀಡಿದ ಟಾಸ್ಕ್‌ಗಳನ್ನು ರಾತ್ರಿ ಹಗಲು ಒತ್ತಡ, ಕಣ್ಣೀರಿನೊಂದಿಗೆಯೇ ಎದುರಿಸಿದ್ದಾಳೆ. ಕೊನೆಯ ನಾಲೈದು ಸುತ್ತಿನ ಸಂದರ್ಶನ ಕಬ್ಬಿಣದ ಕಡಲೆಯಾಗಿ ಇನ್ನೇನೂ ತನಗೆ ಸಾಧ್ಯ ಇಲ್ಲ ಎನ್ನುವ ಸ್ಥಿತಿಗೆ ಬಂದಾಗ ಕಂಪನಿಯು ಆಕೆಗೆ ನೀಡಿದ ಆಫರ್ ಆಕೆಯಲ್ಲಿ ಆಶಾಭಾವನೆಯನ್ನು ಹುಟ್ಟಿಸಿತು. ಡಿಸೆಂಬರ್ 2024ರ ವೇಳೆಗೆ ಕಂಪನಿಯಿಂದ ಆಕೆಗೆ ಬಂದ ಮೇಲ್‌ನಲ್ಲಿ ಇಂಟರ್ನ್‌ಶಿಪ್‌ಗೆ ನಿಮಗೆ ಅವಕಾಶವಿಲ್ಲ. ಬದಲಾಗಿ ನೀವು ನೇರವಾಗಿ ಉದ್ಯೋಗಿಯಾಗಿ ಬರಲು ತಯಾರಿದ್ದೀರಾ ಎಂಬ ಸಂದೇಶವಿತ್ತು.

ಇದಾದ ನಂತರ ಕಂಪನಿ ತಕ್ಷಣದಿಂದ ಅಂದರೆ 2025ರ ಜನವರಿ 2ರಿಂದ ಕೆಲಸ ಮಾಡಲು ನಿರ್ದೇಶನ ನೀಡುತ್ತದೆ. ಮಧ್ಯರಾತ್ರಿ 12 ರಿಂದ ಬೆಳಗ್ಗೆ 6ವರೆಗೆ ಕಂಪನಿಗೆ ಒಂದು ವರ್ಷ ಮನೆಯಿಂದಲೇ ಕೆಲಸ ಮಾಡಬೇಕಾಗಿತ್ತು.

ಇಂಜಿನಿಯರಿಂಗ್‌ನ 7ನೆ ಸೆಮ್ ಮುಗಿದ ತಕ್ಷಣ ಅಮೆರಕಿದ ಟೆಕ್ಸಾಸ್‌ನಲ್ಲಿ ಕಂಪನಿಗೆ ಸೇರಿಕೊಳ್ಳಲು ಒಪ್ಪಂದವಾಗುತ್ತದೆ. ಈ ಮೂಲಕ ಜನವರಿ 2ರಿಂದ ತರಬೇತಿ ಜತೆಗೆ ಕಂಪನಿ ಕೆಲಸವನ್ನು ಸರಿದೂಗಿಸಿಕೊಂಡು ಸಾಗುತ್ತಿರುವ ರಿತುಪರ್ಣಗೆ ಏಪ್ರಿಲ್‌ನಲ್ಲಿ ಬಂದ ಕಂಪನಿಯಿಂದ ಇನ್ನೊಂದು ಸಂದೇಶ ಬರುತ್ತದೆ. ಅದರಂತೆ ನಿಮ್ಮ ಕೆಲಸ ಮತ್ತು ಏಕಾಗ್ರತೆಯನ್ನು ಮೆಚ್ಚಿ ಕಂಪನಿ ನಿಮಗೆ ವಾರ್ಷಿಕವಾಗಿ ನಿಗದಿಪಡಿಸಿದ್ದ ವೇತನ 39.58 ಲಕ್ಷ ರೂನಿಂದ 72.3 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂಬುದು ಆ ಸಂದೇಶವಾಗಿತ್ತು’ ಎಂದು ತನ್ನ ಮಗಳ ಕಠಿಣ ಪರಿಶ್ರಮದ ಬಗ್ಗೆ ಸರೇಶ್‌ರವರು ವಿವರ ನೀಡಿದ್ದಾರೆ.

‘ಯಾವುದೇ ವಿಷಯ ಕೊಟ್ಟರೂ ಗಂಟೆಗಟ್ಟಲೆ ಮಾತನಾಡಬಲ್ಲ ಚಾಕಚಕ್ಯತೆ ಹೊಂದಿರುವ ರಿತುಪರ್ಣಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ವಿಪರೀತ ಹಿಡಿತವಿದೆ. ಇದಕ್ಕೆ ಕಾರಣ ಆಕೆ ಕಲಿತ ಸೈಂಟ್ ಆ್ಯಗ್ನೆಸ್ ಶಾಲೆ. ಪಿಯುಸಿ ನಂತರ ವೈದ್ಯಕೀಯ ಶಿಕ್ಷಣ ಆಕೆಯ ಇಚ್ಚೆಯಾಗಿತ್ತು. ನೀಟ್‌ನಲ್ಲಿ ಸರಕಾರಿ ಸೀಟು ಸಿಗಾದ ಇಷ್ಟವಿಲ್ಲದೆ ಇಂಜಿನಿಯರಿಂಗ್ ಕೋರ್ಸ್‌ನ್ನು ಆಯ್ಕೆ ಮಾಡಿಕೊಂಡಿದ್ದಳು. 2022ರ ಸಿಇಟಿಯಲ್ಲಿ ಸರಕಾರಿ ಸೀಟ್‌ನೊಂದಿಗೆ ಮಂಗಳೂರಿನ ಸಹ್ಯಾದ್ರಿ ಕಾಲೇಜಿಗೆ ಸೇರಿದ ಆಕೆ ಆರಂಭದಿಂದಲೇ ಹಠಕ್ಕೆ ಬಿದ್ದು ಹೊಸ ಆಲೋಚನೆಗಳೊಂದಿಗೆ ಅನ್ವೇಷಣೆಗೆ ಗಮನ ಹರಿಸಿದಳು. ಆಕೆಗೆ ರೋಲ್ಡ್‌ರೋಯ್‌ನಿಂದ ಮೊದಲ ಆಫರ್ ಬರುವವರೆಗೂ ನಮಗೆ ಯಾವುದೇ ಮಾಹಿತಿಯೇ ಇರಲಿಲ್ಲ. ಅದೃಷ್ಟ ಎನ್ನುವುದಕ್ಕಿಂತ ಆಕೆಯ ಪ್ರತಿಭೆ, ಸಹನೆ, ತಾಳ್ಮೆಯೇ ಆಕೆಗೆ ಈ ಅವಕಾಶ ನೀಡಿದೆ.

Ad Widget
Click to comment

Leave a Reply

ಶಿಕ್ಷಣ

Sahyadri College-ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಹದಿನಾರನೇ ಎಂಜಿನಿಯರಿಂಗ್ ಪದವಿ ಪ್ರದಾನ ಸಮಾರಂಭ

Published

on



Ad Widget

Ad Widget

Ad Widget

Ad Widget

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್, 2026ರ ಅಕ್ಟೋಬರ್ 10 ರಂದು ತನ್ನ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ (ಸ್ವಾಯತ್ತತೆಯ ಎರಡನೇ ಬ್ಯಾಚ್) 16ನೇ ಘಟಿಕೋತ್ಸವ ಸಮಾರಂಭವನ್ನು ಆಚರಿಸಿತು.

Ad Widget

Ad Widget

Ad Widget

Ad Widget

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್, 2026ರ ಅಕ್ಟೋಬರ್ 10 ರಂದು ತನ್ನ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ (ಸ್ವಾಯತ್ತತೆಯ ಎರಡನೇ ಬ್ಯಾಚ್) 16ನೇ ಘಟಿಕೋತ್ಸವ ಸಮಾರಂಭವನ್ನು ಆಚರಿಸಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪಯಣದ ಪ್ರಮುಖ ಮೈಲಿಗಲ್ಲನ್ನು ಗುರುತಿಸುವ ಈ ಸಮಾರಂಭದಲ್ಲಿ ಆಡಳಿತ ಮಂಡಳಿ, ಬೋಧಕವರ್ಗ, ಪದವೀಧರರು ಮತ್ತು ಅವರ ಹಿತೈಷಿಗಳು ಪಾಲ್ಗೊಂಡಿದ್ದರು.

Ad Widget

Ad Widget

Ad Widget alt="Ad Widget"/>

Ad Widget

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು, ನಂತರ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ಅವರು ಸ್ವಾಗತ ಭಾಷಣದ ಮೂಲಕ ಸಭಿಕರನ್ನು ಸ್ವಾಗತಿಸಿದರು. ಎಲ್‌ಟಿಎಂ (LTM)ನ ಚೀಫ್ ಡೆಲಿವರಿ ಆಫೀಸರ್ ಆಗಿರುವ ಶ್ರೀ ಗುರುರಾಜ್ ದೇಶಪಾಂಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಘಟಿಕೋತ್ಸವ ಸಮಾರಂಭವನ್ನು ಅಧಿಕೃತವಾಗಿ ಉದ್ಘಾಟಿಸಿದರು.

Ad Widget

Ad Widget <> Ad Widget

ಉಪ ಪ್ರಾಂಶುಪಾಲರಾದ ಡಾ. ಸುಧೀರ್ ಶೆಟ್ಟಿ, ಮುಖ್ಯ ಅತಿಥಿ ಮತ್ತು ಪ್ರಾಂಶುಪಾಲರಿಂದ ಸನ್ಮಾನಿಸಲ್ಪಟ್ಟ ಚಿನ್ನದ ಪದಕ ವಿಜೇತರು ಮತ್ತು ಶ್ರೇಯಾಂಕ ಪಡೆದವರನ್ನು ಘೋಷಿಸಿದರು. ವಿದ್ಯಾರ್ಥಿಗಳ ಸಮರ್ಪಣೆ, ಪರಿಶ್ರಮ ಮತ್ತು ಶೈಕ್ಷಣಿಕ ಶ್ರೇಷ್ಠತೆಗೆ ಬದ್ಧತೆಯನ್ನು ಸನ್ಮಾನವು ಗುರುತಿಸಿತು.



Ad Widget

ಮುಖ್ಯ ಅತಿಥಿಗಳಾದ ಶ್ರೀ ಗುರುರಾಜ್ ದೇಶಪಾಂಡೆ ಅವರು ಕೃತಕ ಬುದ್ಧಿಮತ್ತೆಯ (AI) ಪ್ರಭಾವವನ್ನು ಎತ್ತಿ ತೋರಿಸುವ ಸ್ಪೂರ್ತಿದಾಯಕ ಭಾಷಣ ಮಾಡಿದರು ಮತ್ತು ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ಪ್ರಸ್ತುತವಾಗಿರಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಹೇಳಿದರು. ಅವರು ಪದವೀಧರರು ಪ್ರತಿದಿನ ಹೊಸದನ್ನು ಕಲಿಯಲು ಪ್ರೋತ್ಸಾಹಿಸಿದರು ಮತ್ತು ಬದಲಾಗುತ್ತಿರುವ ಸಂದರ್ಭಗಳಿಗೆ ಹೊಂದಿಕೊಳ್ಳಲು ಕಲಿಯುವುದನ್ನು ಬಿಟ್ಟು ಮತ್ತೆ ಕಲಿಯುವ ಅಗತ್ಯವನ್ನು ಹೇಳಿದರು.

Ad Widget

Ad Widget

ಪ್ರಸ್ತುತ ತಂತ್ರಜ್ಞಾನ-ಚಾಲಿತ ಜಗತ್ತಿನಲ್ಲಿ ಸಂವಹನ ಕೌಶಲ್ಯಗಳ ಮಹತ್ವವನ್ನು ಅವರು ಎತ್ತಿ ತೋರಿಸಿದರು ಮತ್ತು ಬ್ಯಾಂಕಿಂಗ್ ವಲಯದ ಬೆಳವಣಿಗೆಗೆ ಮಂಗಳೂರು ನೀಡಿದ ಕೊಡುಗೆಯನ್ನು ಗುರುತಿಸಿದರು.

ಅಲ್ಲದೆ, ಸಣ್ಣ ಹಾಗೂ ನಿರಂತರ ಅಭ್ಯಾಸಗಳು ಸಮಾಜದ ಮೇಲೆ ದೊಡ್ಡ ಪ್ರಭಾವವನ್ನು ಬೀರಬಲ್ಲವು ಎಂದು ಅವರು ಪ್ರತಿಪಾದಿಸಿದರು. ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲದಿರುವುದರಿಂದ, ಯಶಸ್ಸನ್ನು ಪಡೆಯಲು ಪರಿಶ್ರಮ, ಬದ್ಧತೆ ಮತ್ತು ತಾಳ್ಮೆ ಅತ್ಯಗತ್ಯ ಎಂಬುದನ್ನು ಅವರು ನೆನಪಿಸಿದರು. ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಮತ್ತು ದೃಢವಾದ ಮೌಲ್ಯಗಳನ್ನು ಎತ್ತಿಹಿಡಿಯುವುದು ಎಷ್ಟು ಮುಖ್ಯ ಎಂಬುದನ್ನೂ ಅವರು ಒತ್ತಿ ಹೇಳಿದರು. ಅಂತಿಮವಾಗಿ, ಪ್ರತಿಯೊಬ್ಬರೂ ಜೀವನಪರ್ಯಂತ ಕಲಿಯುವ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಮತ್ತು ತಮ್ಮ ಗುರಿಗಳನ್ನು ಸಾಧಿಸಲು ಪರಿಣಾಮಕಾರಿಯಾಗಿ ಶ್ರಮಿಸುವಂತೆ ಅವರು ಪ್ರೋತ್ಸಾಹಿಸಿದರು.

ಟ್ರಸ್ಟಿ ಮತ್ತು ಆಡಳಿತಾಧಿಕಾರಿ ಶ್ರೀ ಕೃಷ್ಣ ಹೆಗ್ಡೆ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ,  ಪದವೀಧರರು ತಮ್ಮ ಶಿಕ್ಷಣದ ಈ ಮಹತ್ವದ ಹಂತವನ್ನು ತಲುಪಿದ್ದಕ್ಕಾಗಿ ಅಭಿನಂದಿಸಿದರು. ಅವರು  ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಮಹತ್ವವನ್ನು ಹೇಳಿದರು ಮತ್ತು ವ್ಯಕ್ತಿಗಳನ್ನು ಜವಾಬ್ದಾರಿಯುತ ಮತ್ತು ನೈತಿಕ ನಾಗರಿಕರನ್ನಾಗಿ ರೂಪಿಸುವಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸಿದರು. ತಾಂತ್ರಿಕ ಪ್ರಗತಿಯ ಪ್ರಭಾವವನ್ನು ಅವರು ಚರ್ಚಿಸಿದರು ಮತ್ತು ನಿರಂತರ ಕಲಿಕೆ, ನಾವೀನ್ಯತೆ ಮತ್ತು ಸೃಜನಶೀಲತೆಯ ಮೂಲಕ ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳುವ ಅಗತ್ಯವನ್ನು ಹೇಳಿದರು. ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸುವಾಗ ಜವಾಬ್ದಾರಿಯನ್ನು ನಿರ್ವಹಿಸುವ ಮಹತ್ವವನ್ನು ಸಹ ಅವರು ಎತ್ತಿ ತೋರಿಸಿದರು.

ತಮ್ಮ ಮುಕ್ತಾಯದ ಮಾತುಗಳಲ್ಲಿ, ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಿಕ್ಷಕರ ನಿರಂತರ ಬೆಂಬಲ, ಮಾರ್ಗದರ್ಶನ ಮತ್ತು ಸಮರ್ಪಣೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು ಎಂದು ಶ್ರೀ ಕೃಷ್ಣ ಹೆಗ್ಡೆ ಹೇಳಿದರು.

ಗಣ್ಯರು ಮತ್ತು ಆಯಾ ವಿಭಾಗಗಳ ಮುಖ್ಯಸ್ಥರು ಈ ಕೆಳಗಿನ ವಿಭಾಗಗಳ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿ, ಅವರ ಪದವಿಪೂರ್ವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಔಪಚಾರಿಕವಾಗಿ ಗುರುತಿಸಿದರು: ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಸಿಎಸ್), ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ – ಸೈಬರ್ ಸೆಕ್ಯುರಿಟಿ/ಕಂಪ್ಯೂಟರ್ ಇಂಟಿಗ್ರೇಟೆಡ್ (ಸಿಐ), ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ – ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್ (ಸಿಡಿ), ಇನ್ಫರ್ಮೇಷನ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಐಎಸ್), ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ (ಇಸಿ), ಮೆಕ್ಯಾನಿಕಲ್ ಎಂಜಿನಿಯರಿಂಗ್ (ಎಂಇ), ಮತ್ತು ರೊಬೊಟಿಕ್ಸ್ ಮತ್ತು ಆಟೊಮೇಷನ್ ಎಂಜಿನಿಯರಿಂಗ್ (ಆಎಂ).

ಸಮಾರಂಭದ ನಂತರ ಉಪ ಪ್ರಾಂಶುಪಾಲರಾದ ಡಾ. ಸುಧೀರ್ ಶೆಟ್ಟಿ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕರಿಸಲಾಯಿತು, ಈ ಸಂದರ್ಭದಲ್ಲಿ ಪದವೀಧರರು ಪದವಿ ಪ್ರಕ್ರಿಯೆಯ ಭಾಗವಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಶ್ರೀ ಸ್ಕಂದ ಗಣೇಶ್ ಪಿ. ವಿ. ಮತ್ತು ಕುಮಾರಿ ಆಶಿಕಾ ನಾಯರ್ ಅವರು ಪದವೀಧರರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು ಹಾಗೂ ಸಹ್ಯಾದ್ರಿಯಲ್ಲಿನ ತಮ್ಮ ಶೈಕ್ಷಣಿಕ ಪಯಣವನ್ನು ಮೆಲುಕು ಹಾಕಿದರು. ಅವರ ಈ ಅನಿಸಿಕೆಗಳು ಸಮಾರಂಭಕ್ಕೆ ವೈಯಕ್ತಿಕ ಆಯಾಮವನ್ನು ನೀಡಿದವು ಮತ್ತು ಸಂಸ್ಥೆಯಲ್ಲಿನ ಅವಧಿಯಲ್ಲಿ ಪಡೆದ ಕಲಿಕೆಯ ಅನುಭವಗಳ ಮಹತ್ವವನ್ನು ಎತ್ತಿ ತೋರಿಸಿದವು.

ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಸಲಹಾ ವಿಭಾಗದ ನಿರ್ದೇಶಕರಾದ ಡಾ. ಮಂಜಪ್ಪ ಸಾರಥಿ ಅವರು ವಂದನಾರ್ಪಣೆ ನೆರವೇರಿಸಿದರು; ಅವರು ಗಣ್ಯರು, ಆಡಳಿತ ಮಂಡಳಿ, ಬೋಧಕವರ್ಗ, ಸಂಘಟಕರು ಹಾಗೂ ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಮಾಪ್ತಿಯಾಯಿತು. ಸಹ್ಯಾದ್ರಿ 16ನೇ ಘಟಿಕೋತ್ಸವ ಸಮಾರಂಭವು ಪದವೀಧರರಿಗೆ ಒಂದು ಸ್ಮರಣೀಯ ಸಂದರ್ಭವಾಗಿತ್ತು; ಅವರು ತಮ್ಮ ಸಾಧನೆಗಳನ್ನು ಸಂಭ್ರಮಿಸುತ್ತಾ, ತಮ್ಮ ಜೀವನದ ಮುಂದಿನ ಹಂತದತ್ತ ದೃಷ್ಟಿಹರಿಸಿದರು.

Ad Widget
Continue Reading

ಮಂಗಳೂರು

Mangalore-ಮಂಗಳೂರು: ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ

Published

on



Ad Widget

Ad Widget

Ad Widget

Ad Widget

ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಉರುಂದಾಡಿಗುಡ್ಡೆಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಪತಿಯೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಪತ್ನಿಗೆ ಪರಪುರುಷನೊಂದಿಗೆ ಸಂಬಂಧವಿದೆ ಎಂಬ ಸಂಶಯವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಉರುಂದಾಡಿಗುಡ್ಡೆಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಪತಿಯೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಪತ್ನಿಗೆ ಪರಪುರುಷನೊಂದಿಗೆ ಸಂಬಂಧವಿದೆ ಎಂಬ ಸಂಶಯವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಕೊಲೆಯಾದ ಮಹಿಳೆಯನ್ನು ವಿಜಯಪುರ ಜಿಲ್ಲೆಯ ಸೊನಾಲಿ (30) ಎಂದು ಗುರುತಿಸಲಾಗಿದೆ. ಆಕೆಯ ಪತಿ ಶಿವಲಿಂಗಪ್ಪ ಮಾದರ (40) ಕೊಲೆ ಆರೋಪಿಯಾಗಿದ್ದಾನೆ.

Ad Widget

Ad Widget <> Ad Widget

ದಂಪತಿ ಕಾವೂರು ಉರುಂದಾಡಿಗುಡ್ಡೆಯ ಹರೀಶ್ ಕುಮಾರ್ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



Ad Widget

ಸೊನಾಲಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂಬ ಅನುಮಾನ ಶಿವಲಿಂಗಪ್ಪನಿಗೆ ಇತ್ತು ಎನ್ನಲಾಗಿದೆ. ಈ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಭಾನುವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಆಕ್ರೋಶಗೊಂಡ ಶಿವಲಿಂಗಪ್ಪ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಮಂಗಳೂರು

Mangalore Dasara-ಮಂಗಳೂರು ದಸರಾಕ್ಕೆ ಚಾಲನೆ: ಸಿಎಂ ಆಗಮನ ಮುಂದೂಡಿಕೆ

Published

on



Ad Widget

Ad Widget

Ad Widget

Ad Widget

ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವಕ್ಕೆ ರವಿವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ದರ್ಬಾರು ಮಂಟಪದಲ್ಲಿ ವಿವಿಧ ದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮೂಲಕ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

Ad Widget

Ad Widget

Ad Widget

Ad Widget

ಮಂಗಳೂರು: ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವಕ್ಕೆ ರವಿವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ದರ್ಬಾರು ಮಂಟಪದಲ್ಲಿ ವಿವಿಧ ದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮೂಲಕ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

Ad Widget

Ad Widget

Ad Widget alt="Ad Widget"/>

Ad Widget

ಬೆಳಗ್ಗೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ ಹಾಗೂ ನವಕಲಶಾಭಿಷೇಕ ನೆರವೇರಿತು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿ ಹಾಗೂ ಸ್ಕಂದಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ ಮತ್ತು ಕೂಷ್ಮಾಂಡಿನಿ ದೇವಿಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.

Ad Widget

Ad Widget <> Ad Widget

ರವಿವಾರದ ರಜೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯರ ವಿಗ್ರಹಗಳ ಪ್ರತಿಷ್ಠಾಪನೆಯ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.



Ad Widget

ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Ad Widget

Ad Widget

ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕ್ಷೇತ್ರಾಡಳಿತ ಮಂಡಳಿಯ ಟ್ರಸ್ಟಿಗಳು, ಕ್ಷೇತ್ರ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ಬಾರಿ ಮಹಿಳಾ ದಸರಾ ವಿಶೇಷ ಆಕರ್ಷಣೆ
ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಸಮಿತಿಯ ಸಹಯೋಗದೊಂದಿಗೆ ಈ ಬಾರಿಯ ಮಂಗಳೂರು ದಸರಾ ನಡೆಯುತ್ತಿದೆ ಎಂದು ತಿಳಿಸಿದರು.

ಕಳೆದ ವರ್ಷ ಆರಂಭಿಸಿದ್ದ ಮಕ್ಕಳ ದಸರಾ ಮತ್ತು ಕಿನ್ನಿಪಿಲಿ ಕಾರ್ಯಕ್ರಮಗಳನ್ನು ಈ ಬಾರಿಯೂ ಮುಂದುವರಿಸಲಾಗುವುದು. ಇದೇ ಮೊದಲ ಬಾರಿಗೆ ಮಹಿಳಾ ದಸರಾ ಆಯೋಜಿಸಲಾಗುತ್ತಿದ್ದು, ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಭಕ್ತರ ಬೇಡಿಕೆಯಂತೆ ಅಕ್ಟೋಬರ್ 20ರಂದು ಅಕ್ಷರಾಭ್ಯಾಸ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಈ ಬಾರಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಶೇ. 25ರಿಂದ 30ರಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ವ್ಯವಸ್ಥಿತ ನಿರ್ವಹಣೆಗಾಗಿ ಒಂದು ಸಾವಿರಕ್ಕೂ ಹೆಚ್ಚು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಆಗಮನ ಮುಂದೂಡಿಕೆ
ಸೋಮವಾರ ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳೂರು ದಸರಾ ಮಹೋತ್ಸವವನ್ನು ಉದ್ಘಾಟಿಸಬೇಕಿತ್ತು. ಆದರೆ ತುರ್ತು ಕಾರಣದಿಂದ ದೆಹಲಿಗೆ ತೆರಳಬೇಕಾದ ಹಿನ್ನೆಲೆಯಲ್ಲಿ ಅವರ ಪ್ರವಾಸ ರದ್ದಾಗಿದೆ. ಅಕ್ಟೋಬರ್ 15 ಅಥವಾ 16ರಂದು ಮುಖ್ಯಮಂತ್ರಿ ಕ್ಷೇತ್ರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಪದ್ಮರಾಜ್ ಆರ್. ಪೂಜಾರಿ ತಿಳಿಸಿದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading