ಬಿಸಿರೋಡ್ / ಕಾಸರಗೋಡು : ಡಿ 1 : ಯುವಕನೊಬ್ಬ ನಾಪತ್ತೆಯಾದ ಬಗ್ಗೆ ಆತನ ಸಹೋದರ ಬಂಟ್ವಾಳ ನಗರ ಠಾಣೆಯಲ್ಲಿ ನ .28 ರಂದು ಪ್ರಕರಣ ದಾಖಲಿಸಿದ್ದು ಸದ್ಯ ಅದು ಮಹತ್ವದ ತಿರುವು ಪಡೆದಿದೆ. ಆ ಯುವಕ ಕೆಲಸ ಮಾಡುತ್ತಿದ್ದ ಕಾಸರಗೋಡಿನ ಪ್ರತಿಷ್ಟಿತ ಚಿನ್ನದಂಗಡಿಯವರು ಈ ಯುವಕನ ವಿರುದ್ದ ಕೋಟ್ಯಾಂತರ ರೂಪಾಯಿ ವಂಚಿಸಿರುವ ಬಗ್ಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಬಿಸಿರೋಡ್ ಬಳಿಯ ಅಬ್ದುಲ್ ಖಾದರ್ ಎಂಬವರ ಪುತ್ರ ಮಹಮ್ಮದ್ ಫಾರೂಕ್ ನಾಪತ್ತೆಯಾಗಿರುವ ಹಾಗೂ ಕಾಸರಗೋಡು ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುವ ಯುವಕ . ಅಣ್ಣ ನಾಪತ್ತೆಯಾಗಿರುವ ಬಗ್ಗೆ ಆತನ ತಮ್ಮ ಇಮ್ರಾನ್ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಿದವರು
ಕಾಸರಗೋಡಿನ ಟೌನ್ ಠಾಣೆಯಲ್ಲಿ ಇದೇ ಮಹಮ್ಮದ್ ಫಾರೂಕ್ ವಿರುದ್ದ 2 ಕೋಟಿ 88 ಲಕ್ಷ ರೂಪಾಯಿಯ ವಜ್ರಾಭರಣ ಕಳವು ಗೈದು ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ವಂಚಿಸಿದ ಬಗ್ಗೆ ಕೇಸ್ ದಾಖಲಾಗಿದೆ. ಕೇರಳ, ಕರ್ನಾಟಕ ಸಹಿತ ದೇಶದ ವಿವಿದೆಡೆ ಮಳಿಗೆ ಹೊಂದಿರುವ ಪ್ರತಿಷ್ಟಿತ ಸುಲ್ತಾನ್ ಜ್ಯುವೆಲ್ಲರಿಯ ಕಾಸರಗೋಡು ಬ್ರ್ಯಾಂಚಿನಲ್ಲಿ ಈತ ಅಸಿಸ್ಟಂಟ್ ಮ್ಯಾನೇಜರ್ ಅಗಿ ಕಾರ್ಯ ನಿರ್ವ ಹಿಸುತ್ತಿದ್ದ ಎನ್ನಲಾಗಿದೆ.

ಶೂ ರೂಮ್ ಕೆಲಸ ಮಾಡುತ್ತಿದ್ದ ವೇಳೆ ಫಾರೂಕ್ 2 ಕೋಟಿ 88 ಲಕ್ಷದ 64, 153 ರೂ ಮೌಲ್ಯದ ಅಭರಣಗಳ್ಳನ್ನು ಕಳವು ಮಾಡಿದ್ದಾನೆ. ಆತ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು ಒಂದೂವರೆ ವರ್ಷ ಅವಧಿಯಲ್ಲಿ ಕೃತ್ಯ ಎಸಗಲಾಗಿದೆ. ಜುವೆಲ್ಲರಿಯ ಲೆಕ್ಕ ಪರಿಶೋಧನೆ ಮಾಡಿದ ಸಂದರ್ಭ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಉದ್ಯೋಗಿಯೊಬ್ಬರು ದೂರಿದ್ದಾರೆ.
ಚಿನ್ನದಂಗಡಿಯ ಮೂಲಗಳ ಪ್ರಕಾರ ಈ ಯುವಕ ಅಭರಣ ಲಪಟಾಯಿಸುತ್ತಿರುವ ದೃಶ್ಯಾವಳಿಗಳು ಶೂ ರೂಮ್ ನ ಸಿಸಿಟಿವಿಯಲ್ಲಿ ದಾಖಲಾಗಿದೆ. ಅದರೇ ಈ ಬಗ್ಗೆ ಪೊಲೀಸ್ ಇಲಾಖೆಯೂ ನಿಖರ ಮಾಹಿತಿ ಹೊರ ಹಾಕಿಲ್ಲ .
ದೂರು ನೀಡಿದ ಬಳಿಕ ಈ ಬಗ್ಗೆ ಸುಲ್ತಾನ್ ಜ್ಯುವೆಲ್ಲರಿಯೂ ಪ್ರಕಟನೆ ಹೊರಡಿಸಿದ್ದು ಅದರಲ್ಲಿ ಅಡಿಟ್ ಮಾಡಿದ ಮಾಹಿತಿ ತಿಳಿಯುತ್ತಲೇ , ತನ್ನ ಬಣ್ಣ ಬಯಲಾಗಿ ಬಂಧನವಾಗುವುದನ್ನು ತಪ್ಪಿಸಲು ಆತ ಓಡಿ ಹೋಗಿದ್ದು ಆತನ ಬಗ್ಗೆ ಮಾಹಿತಿ ಇದರೆ ತಿಳಿಸಿ ಬಹುಮಾನ ನೀಡಲಾಗುವುದು ಹಾಗೂ ಅತನ ಬಗ್ಗೆ ಎಚ್ಚರದಿಂದಿರಿ ಎಂದು ತಿಳಿಸಿದೆ.

ನಾಪತ್ತೆ ದೂರಿನಲ್ಲಿ ಏನಿದೆ ?
ನ. 28 ರಂದು ಬೆಳಿಗ್ಗೆ 7.30ರ ಸುಮಾರಿಗೆ ಕ್ರಿಕೆಟ್ ಆಡಲು ಹೋಗುತ್ತೇನೆಂದು ಪತ್ನಿಯ ಬಳಿ ತಿಳಿಸಿ ಫಾರೂಕ್ ಕೈ ಕಂಬದ ತನ್ನ ನಿಶ್ವ ಪ್ಲ್ಯಾಟ್ ನಿಂದ ಕಾರಿನಲ್ಲಿ ಹೊರಟಿದ್ದಾರೆ. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಫಾರೂಕ್ ಪತ್ನಿಯೂ ತನ್ನ ಮೈದುನ ಇಮ್ರಾನ್ ಶಾಫಿಗೆ ಕರೆ ಮಾಡಿ ಫಾರೂಕೂ ಕರೆ ಸ್ವೀಕರಿಸದಿರುವಾಗ ಬಗ್ಗೆ ತಿಳಿಸಿರುವುದಾಗಿಯೂ ಹಾಗೂ ಕ್ರಿಕೆಟ್ ಆಡಲು ಆತ ಬಂದಿರುವ ಬಗ್ಗೆ ವಿಚಾರಿಸಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.
ಫಾರೂಕ್ ಅಂದು ಕ್ರಿಕೆಟ್ ಆಡಲು ಬಾರದಿರುವುದನ್ನು ಖಚಿತ ಪಡಿಸಿರುವ ಆತನ ಸಹೋದರ ಇಮ್ರಾನನ್ನು ಫಾರೂಕ್ ನ ಮೊಬೈಲ್ ಗೆ ಕರೆ ಮಾಡಿದ್ದು ಆದರೆ ಆತ ಕರೆ ಸ್ವೀಕರಿಸುತ್ತಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಇಮ್ರಾನ್ ಅಣ್ಣನಿಗಾಗಿ ಶೋಧ ಮಾಡಿದ್ದು ಆಗ ಆತನ ಕಾರು ಬಿಸಿರೋಡಿನ ಕೃಷ್ಣಿಮಾ ಹೊಟೇಲ್ ಬಳಿ ಪತ್ತೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಫಾರೂಕ್ ಮೊಬೈಲ್ ಪೋನನ್ನು ತನ್ನ ಮನೆಯಲ್ಲಿಯೇ ಬಿಟ್ಟು ಕಾರನ್ನು ಬಿಸಿರೋಡ್ ನ ಕೃಷ್ಣಿಮಾ ಹೊಟೇಲ್ ಬಳಿ ಇಟ್ಟು ಬಳಿಕ ಬಸ್ಸು ಹತ್ತಿ ಹೋಗಿದ್ದಾನೆ ಎನ್ನಲಾಗಿದೆ. ಆತ ಬಸ್ಸು ಹತ್ತಿ ಹೋಗಿರುವ ಸಿಸಿಟಿವಿ ದೃಶ್ಯಗಳು ಇವೆ ಎಂದು ಹೇಳಲಾಗುತ್ತಿದೆ.