ಬಿಗ್ ನ್ಯೂಸ್
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿರುವ ಖಾಸಗಿ ಮನೆಗಳ ತೆರವು – ನಾವು ಬಗ್ಗುವುದಿಲ್ಲ ಆರ್.ಎಸ್.ಎಸ್ ವಿಹಿಂಪಕ್ಕೆ ದೂರು ಕೊಟ್ಟಿದ್ದೇವೆ..! ನಮಗೆ ಮನೆಯ ವೆಚ್ಚ, ದೇವಸ್ಥಾನದಲ್ಲಿ ಬೇಕಾದಷ್ಟು ಜಾಗ ಇದೆ ಅಲ್ಲಿ ಜಾಗವೋ, ಹೊಸ ಸಮುಚ್ಚಯದಲ್ಲಿ ಮನೆಯೋ ಕೊಡಬೇಕು – ರಾಜೇಶ್ ಬನ್ನೂರು : ಮನೆ ತೆರವಿಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ತಬ್ಬಿಬ್ಬು..!
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀಮಹಾಲೀಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದಲ್ಲಿ ಹಿಂಬದಿಯ ಕೆರೆಯ ಆಸುಪಾಸಿನಲ್ಲಿದ್ದ 7 ಮನೆಗಳ ತೆರವು ಕಾರ್ಯಚರಣೆ ಭರದಿಂದ ಸಾಗುತ್ತಿದೆ. ಇದರಲ್ಲಿ 3 ಮನೆಗಳು ಈಗಾಗಲೆ ಬಿಟ್ಟುಕೊಟ್ಟಿದ್ದಾರೆ, ಇನ್ನುಳಿದ ಮನೆಗಳಲ್ಲಿ ಮೂರು ಮನೆಯವರು ಇಂದು ಬಿಜೆಪಿ ಮುಖಂಡ, ಅದೇ ಜಾಗದ ನಿವಾಸಿಗಳಾದ ರಾಜೇಶ್ ಬನ್ನೂರು ಹಾಗೂ ಉಳಿದ ಇಬ್ಬರು ಪತ್ರಿಕಾಗೋಷ್ಠಿ ನಡೆಸಿ ಮನೆ ತೆರವಿಗೆ ಕೆಲವೊಂದು ವಿರೋಧ ಕಾರಣವೊಡ್ಡಿ ವ್ಯಕ್ತಪಡಿಸಿದರು.
ದೇವಸ್ಥಾನದ ಸ್ಥಳವನ್ನು ಉಂಬಳಿಯಾಗಿ ನಮಗೆ ನೀಡಿದ್ದು, ಮನೆಯನ್ನು ನಾವು ನಿರ್ಮಾಣ ಮಾಡಿದ್ದೇವೆ. ದೇವಸ್ಥಾನದ ಚಾಕ್ರಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇವೆ. ಕೆಲವರು ಕೆಲಸವನ್ನು ಬಿಟ್ಟಿದ್ದಾರೆ. ದೇವಸ್ಥಾನದ ಅಭಿವೃದ್ಧಿಯನ್ನು ಪಡಿಸುತ್ತೇವೆಂದು ಹೇಳಿತ್ತಿದ್ದು, ಇದಕ್ಕೆ ನಮ್ಮ ಅಭ್ಯಂತರವಿಲ್ಲ. ವಾಸಮಾಡಿಕೊಂಡಿರುವವರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂಬ ಬೇಡಿಕೆ ನಮ್ಮದಾಗಿದೆ. ಮನೆಯ ವೆಚ್ಚ, ಪರ್ಯಾಯ ಜಾಗದ ವ್ಯವಸ್ಥೆ, ಹೊಸದಾಗಿ ನಿರ್ಮಾಣ ಮಾಡುವ ಸಮುಚ್ಚಯದಲ್ಲಿ ಮನೆಯನ್ನು ನೀಡಬೇಕು ಎಂದು ದೇವಸ್ಥಾನದ ಜಾಗದ ನಿವಾಸಿ ರಾಜೇಶ್ ಬನ್ನೂರು ಹೇಳಿದರು.
ಮಾಸ್ಟರ್ ಪ್ಲಾನ್ ಆಗಿದೆ ಎಂದು ಹೇಳಲಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಯಿಂದ ಅನುಮೋದನೆಯನ್ನು ಪಡೆದುಕೊಳ್ಳಬೇಕಾಗಿದೆ. ಇದು ಯಾವುದೂ ಆಗಿಲ್ಲ. ಧಾರ್ಮಿಕ ದತ್ತಿ ಇಲಾಖೆಗೆ ವಿಚಾರವೇ ತಿಳಿದಿಲ್ಲ. ಅಲ್ಲಿಂದ ಎಬ್ಬಿಸಬೇಕಾದರೆ ನೋಟೀಸ್ ನೀಡಬೇಕು. ಇದು ಸಮಿತಿಯಿಂದ ಆಗುವುದಿಲ್ಲ. ಧಾರ್ಮಿಕ ದತ್ತಿ ಇಲಾಖೆಯ ಕಮಿಷನರ್ ಆಗಲಿ, ಆಡಳಿತ ಮಂಡಳಿಯವರಾಗಲೀ ನೋಟೀಸ್ ನೀಡಿಲ್ಲ. ಅನಧಿಕೃತವಾಗಿ ವಾಸವಾಗಿದ್ದರೂ ಕೂಡಾ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸುಪ್ರಿಂ ಕೋರ್ಟ್ ಹೇಳಿದೆ.
ಹಾಗೇ ಮಾಡುತ್ತೇವೆ ಹೀಗೆ ಮಾಡುತ್ತೇವೆ, ಮನೆಯನ್ನು ಹುಡಿ ಮಾಡುತ್ತೇವೆ, ಪೊಲೀಸ್ ತರುತ್ತೇವೆ ಎಂಬ ಬೆದರಿಕೆಯನ್ನು ಹಾಕಿದ್ದಾರೆ. ಇದಕ್ಕೆ ಯಾವುದಕ್ಕೂ ನಾವು ಬಗ್ಗುವವರಲ್ಲ. ವಿಶ್ವ ಹಿಂದು ಪರಿಷತ್, ಆರ್ ಎಸ್ ಎಸ್ ಗೆ ಹಿಂದುಗಳ ಮೇಲೇ ಆಗುತ್ತಿರುವ ಅನ್ಯಾಯದ ಬಗ್ಗೆ ದೂರನ್ನು ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕುಂದಾಪುರ ಆಯುರ್ವೇದ ಕಾಲೇಜು ಪ್ರಾಂಶುಪಾಲ ಗಣೇಶ್ ಪ್ರಸನ್ನ ಮಾತನಾಡಿ 1920ರಿಂದ ನಾಲ್ಕು ತಲೆಮಾರುಗಳವರು ವಾಸವಿದ್ದು, ಶಾಶ್ವತ ಮನೆ ಎಂದು ದೇವಸ್ಥಾನದ ವತಿಯಿಂದ ಅನುಮತಿಯನ್ನು ಕೊಟ್ಟಿದ್ದಾರೆ. ೧೬ ಸೆಂಟ್ಸ್ ಜಾಗದಲ್ಲಿ ಕಟ್ಟಡಗಳನ್ನು ಕಟ್ಟಿಕೊಂಡು ಖಾತೆಯನ್ನು ಹೊಂದಿ 100 ವರ್ಷಗಳಿಂದ ತೆರಿಗೆಯನ್ನು ಪಾವತಿಸುತ್ತಿದ್ದೇವೆ.
ಏಕಾಏಕಿ ಏಳಿಸುತ್ತೇವೆ ಎನ್ನುವುದು ಸರಿಯಲ್ಲ. ವಕೀಲರ ಮೂಲಕ ನೋಟೀಸ್ ನೀಡಲಾಗಿದ್ದು, ಸಂಬಂಧಪಟ್ಟವರಿಗೆ ಈಗಾಗಲೇ ಲಭಿಸಿದೆ. ತೆರಿಗೆ ಕಟ್ಟುತ್ತಿರುವುದರಿಂದ ಶೇ.೫೦ರಷ್ಟು ಹಕ್ಕು ನಮಗೂ ಇದೆ ಎಂದು ತಿಳಿಸಿದರು.
ವಕೀಲ ವಿಜಯ ರಾಘವೇಂದ್ರ, ರಾಜಾರಾಮ ಭಟ್, ವಸಂತಿ ರಾಜರಾಮ ಭಟ್ ಉಪಸ್ಥಿತರಿದ್ದರು.
ಪ್ರಶ್ನೆಗೆ ತಬ್ಬಿಬ್ಬು ..!
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಹಾಗೂ ಸ್ಥಳೀಯ ಶಾಸಕರು ಪೊಲೀಸ್ ವ್ಯವಸ್ಥೆ ಬಳಸಿ ಜೆಸಿಬಿ ನುಗ್ಗಿಸಿ ಮನೆ ಕೆಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದರು. ಇದರ ಬಗ್ಗೆ ಸ್ಪಷ್ಟತೆಯನ್ನು ಮಾಧ್ಯಮವರು ಹೇಳಿದಾಗ ಮನೆಗೆ ಬಂದು ಮಾತಾಡಿಲ್ಲ ಹಾಗೂ ಬೆದರಿಕೆಯನ್ನು ಹಾಕಿಲ್ಲ. ಮಾಧ್ಯಮಗಳಿಗೆ ನೀಡಿದ ಹೇಳಿಯಲ್ಲಿ ಹೇಳಿದ್ದಾರೆ ಎಂದರು. ಮಾಧ್ಯಮದ ಮುಂದೆ ಅಂತಹ ಯಾವ ವಿಚಾರವನ್ನೂ ಪ್ರಸ್ತಾಪಿಸಿಲ್ಲ ಎನ್ನುತ್ತಿದ್ದಂತೆ ತಡಬಡಾಯಿಸಿ ಹೇಳಿಕೆಯನ್ನು ಹಿಂಪಡೆದುಕೊಂಡರು.
ಸ್ಥಳೀಯ
Uppinangadi-ಉಪ್ಪಿನಂಗಡಿ:ಕುಮಾರಧಾರಾ ಸೇತುವೆ ಮೇಲೆ ಬೈಕ್, ಮೊಬೈಲ್ ಪತ್ತೆ ಹಿನ್ನೆಲೆ; ನಾಪತ್ತೆಯಾದ ವ್ಯಕ್ತಿಗಾಗಿ ನದಿಯಲ್ಲಿ ಶೋಧ
ನಾಪತ್ತೆಯಾಗಿದ್ದ ವ್ಯಕ್ತಿಯ ಬೈಕ್ ಹಾಗೂ ಮೊಬೈಲ್ ಕುಮಾರಧಾರಾ ಸೇತುವೆ ಮೇಲೆ ಪತ್ತೆಯಾದ ಹಿನ್ನೆಲೆಯಲ್ಲಿ, ಅವರ ಕುಟುಂಬದ ಮನವಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕುಮಾರಧಾರಾ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.
ಉಪ್ಪಿನಂಗಡಿ, ಅ.4: ನಾಪತ್ತೆಯಾಗಿದ್ದ ವ್ಯಕ್ತಿಯ ಬೈಕ್ ಹಾಗೂ ಮೊಬೈಲ್ ಕುಮಾರಧಾರಾ ಸೇತುವೆ ಮೇಲೆ ಪತ್ತೆಯಾದ ಹಿನ್ನೆಲೆಯಲ್ಲಿ, ಅವರ ಕುಟುಂಬದ ಮನವಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕುಮಾರಧಾರಾ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.
ಹಿರೇಬಂಡಾಡಿ ಗ್ರಾಮದ ಮಾಧವ ಗೌಡ ಅವರು ನಾಲ್ಕೈದು ದಿನಗಳ ಹಿಂದೆ ಮನೆಯಿಂದ ಆತೂರಿನಲ್ಲಿರುವ ತಮ್ಮ ಅಂಗಡಿಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ಆದರೆ ಬಳಿಕ ಅವರು ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಕುಮಾರಧಾರಾ ಸೇತುವೆ ಮೇಲೆ ಅವರ ಬೈಕ್, ಮೊಬೈಲ್ ಸೇರಿದಂತೆ ಕೆಲವು ವಸ್ತುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.
ಕುಟುಂಬಸ್ಥರ ಮನವಿ ಮೇರೆಗೆ ಪುತ್ತೂರು ಅಗ್ನಿಶಾಮಕ ದಳದ ಶಂಕರ್ ಅವರ ನೇತೃತ್ವದ ತಂಡ ರವಿವಾರ ಕುಮಾರಧಾರಾ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಸುಮಾರು ನಾಲ್ಕು ಗಂಟೆಗಳ ಕಾಲ ಶೋಧ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಶೋಧ ಕಾರ್ಯಕ್ಕೆ ದೋಣಿ ಸಮಸ್ಯೆ
ಉಪ್ಪಿನಂಗಡಿಯಲ್ಲಿ ಈ ಹಿಂದೆ ಎಲ್ಲ ಸಮಯದಲ್ಲೂ ಲಭ್ಯವಿದ್ದ ದೋಣಿಯನ್ನು ಸೇವೆಯಿಂದ ಹಿಂಪಡೆದ ಬಳಿಕ, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನಾಲ್ಕು ತಿಂಗಳ ಅವಧಿಗೆ ಮಂಗಳೂರಿನಿಂದ ರಬ್ಬರ್ ದೋಣಿಯನ್ನು ತರಿಸಿ ಇರಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಅವಧಿ ಮುಗಿದ ಹಿನ್ನೆಲೆಯಲ್ಲಿ ರಬ್ಬರ್ ದೋಣಿಯನ್ನು ಮಂಗಳೂರಿಗೆ ವಾಪಸ್ ಕಳುಹಿಸಲಾಗಿತ್ತು.
ಬಿಗ್ ನ್ಯೂಸ್
Dr. Rajesh Rai Savanuru-ಸಹಕಾರ ರತ್ನ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು ಅವರ ಪುತ್ರ, ಇಂಗ್ಲೆಂಡ್ ನಾಟಿಂಗ್‌ಹ್ಯಾಮ್‌ಶೆರ್‌ನ ಕಿಂಗ್ಸ್ ಮಿಲ್ ಆಸ್ಪತ್ರೆಯ ಕನ್ಸಲ್ಟಾಂಟ್ ಫಿಶಿಷಿಯನ್ ಡಾ. ರಾಜೇಶ್ ರೈ ಸವಣೂರು ಅವರಿಗೆ ಪ್ರತಿಷ್ಠಿತ ಲಂಡನ್ ರಾಯಲ್ ಕಾಲೇಜ್ ಆಫ್ ಫಿಶಿಷಿಯನ್ಸ್‌ನ ಫೆಲೋ ( FRCP London) ಗೌರವ
ಸಹಕಾರ ರತ್ನ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು ಅವರ ಪುತ್ರ, ಇಂಗ್ಲೆಂಡ್ ನಾಟಿಂಗ್‌ಹ್ಯಾಮ್‌ಶೆರ್‌ನ ಕಿಂಗ್ಸ್ ಮಿಲ್ ಆಸ್ಪತ್ರೆಯಲ್ಲಿ ಕನ್ಸಲ್ಟಾಂಟ್ ಫಿಶಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜೇಶ್ ರೈ ಸವಣೂರು ಅವರು ಪ್ರತಿಷ್ಠಿತ ಲಂಡನ್ ರಾಯಲ್ ಕಾಲೇಜ್ ಆಫ್ ಫಿಶಿಷಿಯನ್ಸ್‌ನ ಫೆಲೋ ( FRCP London) ಗೌರವಕ್ಕೆ ಪಾತ್ರರಾಗಿದ್ದಾರೆ.
ಪುತ್ತೂರು: ಸಹಕಾರ ರತ್ನ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು ಅವರ ಪುತ್ರ, ಇಂಗ್ಲೆಂಡ್ ನಾಟಿಂಗ್‌ಹ್ಯಾಮ್‌ಶೆರ್‌ನ ಕಿಂಗ್ಸ್ ಮಿಲ್ ಆಸ್ಪತ್ರೆಯಲ್ಲಿ ಕನ್ಸಲ್ಟಾಂಟ್ ಫಿಶಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜೇಶ್ ರೈ ಸವಣೂರು ಅವರು ಪ್ರತಿಷ್ಠಿತ ಲಂಡನ್ ರಾಯಲ್ ಕಾಲೇಜ್ ಆಫ್ ಫಿಶಿಷಿಯನ್ಸ್‌ನ ಫೆಲೋ ( FRCP London) ಗೌರವಕ್ಕೆ ಪಾತ್ರರಾಗಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ, ವೃತ್ತಿಪರ ಸಾಧನೆ, ದೀರ್ಘಕಾಲದ ಅನುಭವ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ನೀಡಲಾಗುವ ಈ ಪ್ರತಿಷ್ಠಿತ ಫೆಲೋ ಗೌರವವು ಡಾ. ರಾಜೇಶ್ ರೈ ಅವರ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದೆ.
ಡಾ. ರಾಜೇಶ್ ರೈ ಅವರು ಪ್ರಾಥಮಿಕ ಶಿಕ್ಷಣವನ್ನು ಸುಳ್ಯದ ರೋಟರಿ ಆಂಗ್ಲಮಾಧ್ಯಮ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಉಡುಪಿ-ಮಣಿಪಾಲದ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಬಳಿಕ ತುಮಕೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಅವರು, ಮೈಸೂರಿನ ಜೆ.ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (MD) ಪಡೆದರು. ನಂತರ ನವದೆಹಲಿಯಲ್ಲಿ DNB ಪದವಿಯನ್ನೂ ಪೂರ್ಣಗೊಳಿಸಿದರು. ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಫಿಶಿಷಿಯನ್ಸ್‌ನ MRCP ಪದವಿಯನ್ನೂ ಪಡೆದಿರುವ ಅವರು, ಇದೀಗ ಅದೇ ಪ್ರತಿಷ್ಠಿತ ಸಂಸ್ಥೆಯ FRCP ಗೌರವಕ್ಕೆ ಆಯ್ಕೆಯಾಗಿದ್ದಾರೆ.
ತಾಯ್ನಾಡಿನಲ್ಲಿ 16 ವರ್ಷಗಳ ವೈದ್ಯಕೀಯ ಸೇವೆ
ಮಂಗಳೂರಿನಲ್ಲಿ ವೈದ್ಯಕೀಯ ವೃತ್ತಿಜೀವನ ಆರಂಭಿಸಿದ ಡಾ. ರಾಜೇಶ್ ರೈ ಅವರು ಸುಮಾರು 16 ವರ್ಷಗಳ ಕಾಲ ಎ.ಜೆ. ಆಸ್ಪತ್ರೆಯಲ್ಲಿ ಕನ್ಸಲ್ಯಾಂಟ್ ಫಿಶಿಷಿಯನ್ ಆಗಿ ಸೇವೆ ಸಲ್ಲಿಸಿದರು. ಇದೇ ಅವಧಿಯಲ್ಲಿ ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದರು. ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವೈದ್ಯರಿಗೆ ಬೋಧನೆ ಮತ್ತು ತರಬೇತಿ ನೀಡುವ ಮೂಲಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿಯೂ ಗಮನಾರ್ಹ ಕೊಡುಗೆ ನೀಡಿದರು.
NHSನಲ್ಲಿ ಕನ್ಸಲ್ಟಾಂಟ್ ವೈದ್ಯ
ಬಳಿಕ ಇಂಗ್ಲೆಂಡ್‌ಗೆ ತೆರಳಿದ ಅವರು ಅಲ್ಲಿನ National Health Service (NHS) ನಲ್ಲಿ ತಮ್ಮ ವೈದ್ಯಕೀಯ ವೃತ್ತಿಜೀವನವನ್ನು ಮುಂದುವರಿಸಿದರು. ಪ್ರಸ್ತುತ ನಾಟಿಂಗ್‌ಹ್ಯಾಮ್‌ಶೆರ್‌ನ ಕಿಂಗ್ಸ್ ಮಿಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಕನ್ಸಲ್ಟಾಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ಚಿಕಿತ್ಸೆಯ ಜತೆಗೆ ವೈದ್ಯಕೀಯ ಶಿಕ್ಷಣ, ವೈದ್ಯರ ತರಬೇತಿ ಹಾಗೂ ಆರೋಗ್ಯ ಸೇವೆಯ ವಿವಿಧ ಜವಾಬ್ದಾರಿಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.
ಡಾ. ರಾಜೇಶ್ ರೈ ಅವರು ‘ಸಹಕಾರ ರತ್ನ’ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು ಮತ್ತು ಶ್ರೀಮತಿ ಕಸ್ತೂರಿ ಕಲಾ ಎಸ್. ರೈ ಸವಣೂರು ಅವರ ಪುತ್ರ. ಅವರ ಪತ್ನಿ ಶ್ರೀಮತಿ ಅಶ್ವಿತ ರಾಜೇಶ್ ರೈ ಅವರು Human Nutrition and Dieteticsನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಲಂಡನ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವೃತ್ತಿಜೀವನ ನಡೆಸಿದ್ದಾರೆ.
ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು, ಮಂಗಳೂರಿನಲ್ಲಿ ಸುದೀರ್ಘ ಕಾಲ ವೈದ್ಯಕೀಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ, ಬಳಿಕ ಇಂಗ್ಲೆಂಡ್‌ನ NHSನಲ್ಲಿ ಕನ್ಸಲ್ಟಾಂಟ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜೇಶ್ ರೈ ಅವರ ವೃತ್ತಿಪರ ಪಯಣ ಗಮನಾರ್ಹವಾಗಿದೆ.
ಉಡುಪಿ
Malpe-ಮಲ್ಪೆ: ದಸರಾ ರಜೆಗೂ ಮುನ್ನವೇ ಬೀಚ್‌ನಲ್ಲಿ ಪ್ರವಾಸಿಗರ ಮಹಾಪೂರ : ಕಿಮೀ ಉದ್ದ ಟ್ರಾಫಿಕ್ ಜಾಮ್ – ಪಾರ್ಕಿಂಗ್ ಗಿಲ್ಲ ಸ್ಥಳ..!
ವಾರಾಂತ್ಯ ಹಾಗೂ ಮುಂಬರುವ ದಸರಾ ರಜೆ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಪ್ರವಾಸಿಗರು ಉಡುಪಿಯ ಪ್ರಸಿದ್ಧ ದೇವಾಲಯಗಳು ಮತ್ತು ಕಡಲತೀರಗಳಿಗೆ ಆಗಮಿಸುತ್ತಿದ್ದು, ಮಲ್ಪೆ ಬೀಚ್‌ನಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ.
ಮಲ್ಪೆ: ವಾರಾಂತ್ಯ ಹಾಗೂ ಮುಂಬರುವ ದಸರಾ ರಜೆ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಪ್ರವಾಸಿಗರು ಉಡುಪಿಯ ಪ್ರಸಿದ್ಧ ದೇವಾಲಯಗಳು ಮತ್ತು ಕಡಲತೀರಗಳಿಗೆ ಆಗಮಿಸುತ್ತಿದ್ದು, ಮಲ್ಪೆ ಬೀಚ್‌ನಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ.
ಬಿಸಿಲಿನ ತೀವ್ರತೆ ಹೆಚ್ಚಿದ್ದರೂ ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಿಂದ ಕುಟುಂಬ ಸಮೇತರಾಗಿ ಪ್ರವಾಸಿಗರು ಮಲ್ಪೆಗೆ ಆಗಮಿಸುತ್ತಿದ್ದಾರೆ. ಬೀಚ್‌ನ ಮುಖ್ಯ ಭಾಗದಿಂದ ಸೀವಾಕ್‌ವರೆಗೂ ಕಡಲತೀರದಲ್ಲಿ ಜನಜಂಗುಳಿ ಕಂಡುಬರುತ್ತಿದೆ.
ಶುಕ್ರವಾರ ಬೆಳಗ್ಗೆಯಿಂದಲೇ ಮಲ್ಪೆಯತ್ತ ಪ್ರವಾಸಿಗರ ಆಗಮನ ಹೆಚ್ಚಾಗಿದ್ದು, ಅಪರಾಹ್ನದ ವೇಳೆಗೆ ವಾಹನ ನಿಲುಗಡೆಗೂ ಜಾಗವಿಲ್ಲದಷ್ಟು ಒತ್ತಡ ನಿರ್ಮಾಣವಾಗಿತ್ತು. ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ದರಿಂದ ಸುಗಮ ಸಂಚಾರಕ್ಕೂ ಅಡ್ಡಿಯಾಯಿತು.
ಬೀಚ್‌ಗೆ ಆಗಮಿಸಿದ ಪ್ರವಾಸಿಗರು ಬನಾನಾ ರೈಡ್, ಸ್ಪೀಡ್ ಬೋಟ್ ಸೇರಿದಂತೆ ವಿವಿಧ ಜಲಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಪ್ರಸಿದ್ಧ ಸೈಂಟ್ ಮೇರಿಸ್ ದ್ವೀಪಕ್ಕೂ ದೋಣಿ ಮೂಲಕ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ.
ಆದಿ ಉಡುಪಿ-ಮಲ್ಪೆ ರಸ್ತೆಯಲ್ಲಿ ಸಂಚಾರ ಸಂಕಷ್ಟ
ಪ್ರವಾಸಿಗರ ವಾಹನಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಮಲ್ಪೆಗೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಆದಿಉಡುಪಿಯಿಂದ ಮಲ್ಪೆ ಬೀಚ್‌ವರೆಗಿನ ರಸ್ತೆಯಲ್ಲಿ ಶುಕ್ರವಾರ ಸಂಜೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಶನಿವಾರ ಕಲ್ಮಾಡಿ ಭಾಗದಲ್ಲೂ ಇದೇ ಪರಿಸ್ಥಿತಿ ಕಂಡುಬಂತು.
ಮಲ್ಪೆ ಭಾಗದ ಕಿರಿದಾದ ರಸ್ತೆಯಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಮಂಜುಗಡ್ಡೆ ಹಾಗೂ ಮೀನಿನ ಲಾರಿಗಳ ಸಂಚಾರವೂ ಹೆಚ್ಚಿದ್ದು, ಪ್ರವಾಸಿಗರ ವಾಹನಗಳ ಒತ್ತಡದೊಂದಿಗೆ ಸಂಚಾರ ಮತ್ತಷ್ಟು ನಿಧಾನಗೊಂಡಿದೆ. ಇದರ ಜೊತೆಗೆ ಕಲ್ಮಾಡಿ ಸೇತುವೆ ಬಳಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯೂ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ದಸರಾ ರಜೆಯಲ್ಲಿ ಮತ್ತಷ್ಟು ಪ್ರವಾಸಿಗರ ನಿರೀಕ್ಷೆ
ಶಾಲಾ-ಕಾಲೇಜುಗಳ ಪರೀಕ್ಷೆಗಳು ಮುಗಿದಿದ್ದು, ಅ.11ರಿಂದ ದಸರಾ ರಜೆ ಆರಂಭವಾಗಲಿದೆ. ಹೀಗಾಗಿ ರಜೆ ಅವಧಿಯಲ್ಲಿ ಮಲ್ಪೆ ಬೀಚ್‌ಗೆ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ.
ಪಾರ್ಕಿಂಗ್, ಸ್ವಚ್ಛತೆ, ಸುರಕ್ಷತೆಗೆ ಆದ್ಯತೆ ಅಗತ್ಯ
ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ವಾಹನ ಪಾರ್ಕಿಂಗ್ ಸ್ಥಳ ಸಾಕಾಗುತ್ತಿಲ್ಲ. ಕೆಲವರು ಪಾದಚಾರಿ ಮಾರ್ಗದಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ ಹೇಳಿದ್ದಾರೆ.
ಬೀಚ್ ಸುತ್ತಮುತ್ತ ಸ್ವಚ್ಛತೆ ಹಾಗೂ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಬೀಚ್ ಪ್ರದೇಶದಲ್ಲಿ ಕಸದ ರಾಶಿ ಕಂಡುಬರುತ್ತಿದ್ದು, ಇದು ಪ್ರವಾಸಿಗರಿಗೆ ಅಸಹ್ಯ ಉಂಟುಮಾಡುತ್ತಿದೆ. ಎಲ್ಲೆಂದರಲ್ಲಿ ಕಸ ಎಸೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
-
Uncategorized17 hours ago
ಚಿನ್ನಾಭರಣ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನ ಸರಾಫ ಮುಳಿಯ ಶ್ಯಾಮ ಭಟ್ ಇನ್ನಿಲ್ಲ
-
ದಕ್ಷಿಣ ಕನ್ನಡ19 hours ago
Raod Accident : ಮಂತ್ರಾಲಯ ಯಾತ್ರೆ ವೇಳೆ ಬಣಕಲ್ ನಲ್ಲಿ ಭೀಕರ ಅಪಘಾತ: ಗಂಭೀರ ಗಾಯಗೊಂಡಿದ್ದ ಶಿಶಿಲದ ಯುವಕ ಸಾವು
-
ಬಿಗ್ ನ್ಯೂಸ್5 hours agoBantwal-Big Breaking-ದ.ಕ. ಜಿಲ್ಲೆಯಲ್ಲಿ ಗುಡುಗು-ಮಿಂಚಿನ ಮಳೆ: ಸಿಡಿಲು ಬಡಿದು ಮನೆ ಜಖಂ-ಮಹಿಳೆ ಅಸ್ವಸ್ಥ
-
ಅಪರಾಧ6 hours agoPuttur-ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ 11 ಗೋವುಗಳ ಸಾಗಾಟ; ವಾಹನ ಪತ್ತೆ, ಇಬ್ಬರು ಪರಾರಿ
-
ಅಂತರ ರಾಜ್ಯ4 hours agoMurder-ಆಸ್ತಿಗಾಗಿ ಬೆಲ್ಟ್ನಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ: ಆಕಸ್ಮಿಕ ಸಾವೆಂದು ನಂಬಿಸಿದ್ದ ಪತ್ನಿ ಅರೆಸ್ಟ್
-
ಸ್ಥಳೀಯ5 hours agoCrop insurance-ಬೆಳೆ ವಿಮೆಯಲ್ಲಿ ಭಾರೀ ಇಳಿಕೆ – ದ.ಕ. ಜಿಲ್ಲೆಯ ಅಡಿಕೆ, ಕಾಳುಮೆಣಸು ಬೆಳೆಗಾರರು ಶಾಕ್..!; ಬೇಗನೆ ಜಮೆಯಾದರೂ ಪರಿಹಾರ ಮೊತ್ತದಲ್ಲಿ ಭಾರೀ ಇಳಿಕೆ; ಲೆಕ್ಕಾಚಾರ ಬಹಿರಂಗಕ್ಕೆ ಆಗ್ರಹ
-
ನಿಧನ ವಾರ್ತೆ5 hours agoLalitamma-ಸುಂಟರಗಾಳಿ’, ‘ಜಂಗ್ಲಿ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ
-
ಬಿಗ್ ನ್ಯೂಸ್4 hours agoDr. Rajesh Rai Savanuru-ಸಹಕಾರ ರತ್ನ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು ಅವರ ಪುತ್ರ, ಇಂಗ್ಲೆಂಡ್ ನಾಟಿಂಗ್‌ಹ್ಯಾಮ್‌ಶೆರ್‌ನ ಕಿಂಗ್ಸ್ ಮಿಲ್ ಆಸ್ಪತ್ರೆಯ ಕನ್ಸಲ್ಟಾಂಟ್ ಫಿಶಿಷಿಯನ್ ಡಾ. ರಾಜೇಶ್ ರೈ ಸವಣೂರು ಅವರಿಗೆ ಪ್ರತಿಷ್ಠಿತ ಲಂಡನ್ ರಾಯಲ್ ಕಾಲೇಜ್ ಆಫ್ ಫಿಶಿಷಿಯನ್ಸ್‌ನ ಫೆಲೋ ( FRCP London) ಗೌರವ


















