Connect with us

ಬಿಗ್ ನ್ಯೂಸ್

Anantkumar Hegde-ಹಿಂದುತ್ವದ ಫೈರ್ ಬ್ರ್ಯಾಂಡ್ ಅನಂತಕುಮಾರ್ ಹೆಗಡೆ ಈಗ ನ್ಯಾನೋ ತಂತ್ರಜ್ಞಾನ ಉದ್ಯಮಿ : ರಾಜಕೀಯದಲ್ಲಿ ನನಗೇನೂ ಸಿಕ್ಕಿಲ್ಲ ಇನ್ನು ಜನರ ಜೀವ ಉಳಿಸುವ ಕಾರ್ಯ ಮಾಡುತ್ತೇನೆ -ಹೆಗಡೆ

Published

on



Ad Widget

Ad Widget

Ad Widget

Ad Widget

ಹಿಂದುತ್ವದ ಫೈರ್‌ ಬ್ರ್ಯಾಂಡ್‌ ಎಂದೇ ಖ್ಯಾತರಾದ ಆರು ಬಾರಿ ಸಂಸರಾಗಿರುವ ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ಹೆಗಡೆ ರಾಜಕೀಯದಿಂದ ದೂರವಾಗಿ ಇದೀಗ ಗ್ರೀನ್‌ ನ್ಯಾನೋ ಟೆಕ್‌ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡುತ್ತಿದ್ದಾರೆ!

Ad Widget

Ad Widget

Ad Widget

Ad Widget

ಬೆಂಗಳೂರು, ಜ.6: ಹಿಂದುತ್ವದ ಫೈರ್‌ ಬ್ರ್ಯಾಂಡ್‌ ಎಂದೇ ಖ್ಯಾತರಾದ ಆರು ಬಾರಿ ಸಂಸರಾಗಿರುವ ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ಹೆಗಡೆ ರಾಜಕೀಯದಿಂದ ದೂರವಾಗಿ ಇದೀಗ ಗ್ರೀನ್‌ ನ್ಯಾನೋ ಟೆಕ್‌ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡುತ್ತಿದ್ದಾರೆ!

Ad Widget

Ad Widget

Ad Widget alt="Ad Widget"/>

Ad Widget

ಕದಂಬ ಸಂಸ್ಥೆಯಡಿ ಗ್ರೀನ್‌ ನ್ಯಾನೋ ಪಿತಾಮಹ ಎಂದೇ ಹೆಸರಾಗಿರುವ ಡಾ.ಕಟ್ಟೇಶ್‌ ಕಟ್ಟಿ ಅವರೊಂದಿಗೆ ಕೈ ಜೋಡಿಸಿ ಗ್ರೀನ್‌ ನ್ಯಾನೋ ಕೇರ್‌ ಔಷಧಗಳು, ಗ್ರೀನ್‌ ನ್ಯಾನೋ ಸೌಂದರ್ಯ ವರ್ಧಕಗಳು, ಬಿಸ್ಕತ್ತು, ಚಾಕೊಲೆಟ್ ಸೇರಿ ಗ್ರೀನ್‌ ನ್ಯಾನೋ ತಿನಿಸುಗಳು ಮುಂತಾದ ಗ್ರೀನ್‌ ನ್ಯಾನೊ ಉತ್ಪನ್ನಗಳನ್ನು ಉತ್ಪಾದಿಸಿ ಹಲವು ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ.

Ad Widget

Ad Widget <> Ad Widget

ಅತ್ಯಾಧುನಿಕ ನ್ಯಾನೋ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಆವಿಷ್ಕಾರಗಳ ನೆರವಿನಿಂದ ವೇದಿಕ್‌ ಜ್ಞಾನವನ್ನು 21ನೇ ಶತಮಾನದ ತಂತ್ರಜ್ಞಾನಕ್ಕೆ ಹೊಂದಿಸಲು ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಗ್ರೀನ್‌ ನ್ಯಾನೋ ರಿಯಾಕ್ಟರ್‌ ಸ್ಥಾಪಿಸಿದ್ದಾರೆ. ನ್ಯಾನೋರ್ವೇದದ (ನ್ಯಾನೋ ಆಯುರ್ವೇದ) ಪೇಟೆಂಟ್‌ ಸೇರಿ ತಮ್ಮ ಎಲ್ಲಾ ಗ್ರೀನ್‌ ನ್ಯಾನೋ ಉತ್ಪನ್ನಗಳಿಗೂ ಪೇಟೆಂಟ್‌ ಪಡೆದಿದ್ದಾರೆ. ಗ್ರೀನ್‌ ನ್ಯಾನೋ ತಂತ್ರಜ್ಞಾನ ಮೂಲಕ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳಿಂದ ಮಾಲಿಕ್ಯೂಲ್ಸ್‌ (ಕಣ) ತೆಗೆದು ಔಷಧಗಳನ್ನು ತಯಾರಿಸಿದ್ದಾರೆ.



Ad Widget

ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಈ ಔಷಧ ಕಾಯಿಲೆಗಳ ಮೇಲೆ ಖಚಿತ ಪ್ರಭಾವ ಬೀರುವುದನ್ನು ಸಾಬೀತುಪಡಿಸುವ ಬಗ್ಗೆ ಆಧಾರಗಳನ್ನು ಕೊಡುವಂಥ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

Ad Widget

Ad Widget

ಡಾ.ಕಟ್ಟೇಶ್‌ ಕಟ್ಟಿ ಹಾಗೂ ಅನಂತಕುಮಾರ್‌ ಅವರು ಅಭಿವೃದ್ಧಿಪಡಿಸಿರುವ ಈ ನ್ಯಾನೋಕೇರ್‌ ಔಷಧಗಳು ಭಾರತದ ಆಯುರ್ವೇದ ಹಾಗೂ ಪಾಶ್ಚಿಮಾತ್ಯ ಅಲೋಪತಿ ಔಷಧಗಳ ನಡುವಿನ ಸೇತುವೆಯಾಗಿದೆ. ಈ ನ್ಯಾನೋ ಆರೋಗ್ಯ ವಿಜ್ಞಾನವು ಕಾಯಿಲೆಗಳ ಚಿಕಿತ್ಸೆ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಕ್ರಾಂತಿಯನ್ನು ಉಂಟು ಮಾಡಲಿದೆ.

ಹಸಿರು ನ್ಯಾನೋ ರಿಯಾಕ್ಟರ್‌ ಸ್ಥಾಪನೆ
ಆರೋಗ್ಯ ಜಾಗೃತಿಗೆ ಗ್ರೀನ್‌ ನ್ಯಾನೋ ಮೂಲಕ ಹಸಿರು ಆಯಾಮ ನೀಡುತ್ತಿರುವ ಹೆಗಡೆ, ನ್ಯಾನೋ ಕ್ಷೇತ್ರವನ್ನು ಸಂಶೋಧಿಸುವ ಅನಂತ ಕೆಲಸಕ್ಕೆ ಕೈ ಹಾಕಿದ್ದಾರೆ. ಭವಿಷ್ಯದ ತಂತ್ರಜ್ಞಾನ ಎಂದೇ ಹೆಸರಾಗಿರುವ ‘ಎಐ’ನಂತೆ ಗ್ರೀನ್‌ ನ್ಯಾನೋ ಕೇರ್‌ನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ವಿಶ್ವದ ಮೊದಲ ‘ಹಸಿರು ನ್ಯಾನೋ ರಿಯಾಕ್ಟರ್‌’ ಸ್ಥಾಪನೆ ಮಾಡಿದ್ದು, ನೆಗೆಟಿವ್‌ ಕಾರ್ಬನ್‌ ಎಮಿಷನ್‌ ತಂತ್ರಜ್ಞಾನ ಹೊಂದಿರುವ ರಿಯಾಕ್ಟರ್‌ನಲ್ಲಿ ಗಿಡಮೂಲಿಕೆಗಳನ್ನು ಹಾಕಿ ಅದರಿಂದ ನ್ಯಾನೋ ಮಾಲಿಕ್ಯೂಲ್ಸ್‌ (ಕಣ) ಹೊರ ತೆಗೆಯಲಾಗುತ್ತದೆ. ಇದರ ಮೂಲಕ ಪರಿಣಾಮಕಾರಿ ಔಷಧಗಳನ್ನು ತಯಾರಿಸಲಾಗುತ್ತಿದೆ. ಇದು ಗಂಭೀರ ಹಾಗೂ ಸಂಕೀರ್ಣ ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡಲಿದೆ ಎಂದು ಗ್ರೀನ್‌ ನ್ಯಾನೋ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಕಟ್ಟೇಶ್‌ ಕಟ್ಟಿ ಹೇಳಿದ್ದಾರೆ.

ಕ್ಯಾನ್ಸರ್, ಮಧುಮೇಹಕ್ಕೆ ನ್ಯಾನೋದಿಂದ ಖಚಿತ ಚಿಕಿತ್ಸೆ:
ಗ್ರೀನ್‌ ನ್ಯಾನೋ ಔಷಧಗಳ ಬಗ್ಗೆ ವಿವರಣೆ ನೀಡಿರುವ ಡಾ.ಕಟ್ಟೇಶ್‌ ಕಟ್ಟಿ, ಕಳೆದ 50 ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ರೋಗಗಳ ಪತ್ತೆ (ಡಯಾಗ್ನೈಸ್‌) ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಆಗಿದೆ. ಆದರೆ ಚಿಕಿತ್ಸೆ ಹಾಗೂ ಕಾಯಿಲೆ ನಿವಾರಣೆ ಮಟ್ಟದಲ್ಲಿ ಸಾಧನೆಯಾಗಿದ್ದರೂ ಅದು ಸಾಲದು. ಇದೀಗ ನ್ಯಾನೋ ಔಷಧಗಳ ಮೂಲಕ ಕ್ಯಾನ್ಸರ್, ಮಧುಮೇಹ ಹಾಗೂ ಸೋಂಕು ಸಂಬಂಧಿತ ಸಮಸ್ಯೆಗಳಿಗೆ ಖಚಿತ ಚಿಕಿತ್ಸೆ ನೀಡಬಹುದು. ಇದನ್ನು ಈಗಾಗಲೇ ಕೆಲ ಪ್ರಾಣಿಗಳು, ರೋಗಿಗಳ ಮೇಲೆ ಪ್ರಯೋಗ ಮಾಡಿದ್ದು ಖಚಿತ ಫಲಿತಾಂಶ ಪಡೆದಿದ್ದೇವೆ ಎಂದು ಹೇಳಿದರು.

ಉಳಿದ ಔಷಧಗಳಿಗಿಂತ ಭಿನ್ನ ಹಾಗೂ ಪರಿಣಾಮಕಾರಿ
ಗ್ರೀನ್‌ ನ್ಯಾನೋ ತಂತ್ರಜ್ಞಾನದ ನೆರವಿನಿಂದ ನ್ಯಾನೋ ಗಾತ್ರದಲ್ಲಿ ಔಷಧಗಳನ್ನು ಮಾಡಬಹುದು. ಇದೊಂದು ಶುದ್ಧ ವಿಜ್ಞಾನ. ಮನುಷ್ಯನ ಜೀವ ಕಣಗಳು 12 ರಿಂದ 18ರಷ್ಟು ಮೈಕ್ರಾನ್‌ನಷ್ಟು ಸೂಕ್ಷ್ಮ ಗಾತ್ರ ಹೊಂದಿರುತ್ತದೆ. ಕ್ಯಾನ್ಸರ್‌ ಟ್ಯೂಮರ್‌ ಕಣಗಳು ಅಷ್ಟೇ ಗಾತ್ರ ಹೊಂದಿರುತ್ತವೆ. ಈಗಿನ ಔಷಧಗಳು ಈ ಕಣಗಳಿಗಿಂತ ದೊಡ್ಡ ಗಾತ್ರ ಹೊಂದಿರುವುದರಿಂದ ಜೀವಕಣಗಳ ಒಳ ನುಸುಳಿ ಪ್ರಭಾವ ಬೀರಬಲ್ಲಷ್ಟು ಶಕ್ತಿಶಾಲಿ ಆಗಿಲ್ಲ. ಆದರೆ ನ್ಯಾನೋ ಔಷಧೀಯ ಕಣಗಳು ಜೀವಕಣಗಳಿಗಿಂತ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಜೀವ ಕಣಗಳ ಒಳಗೆ ನುಸುಳಿ ಹೆಚ್ಚು ಪ್ರಭಾವ ಬೀರಬಲ್ಲವಂಥವಾಗಿವೆ.

ಆದ್ದರಿಂದ ಸಾಧಾರಣ ಔಷಧೀಯ ಕಣಗಳಿಗಿಂತ ನ್ಯಾನೋ ಔಷಧೀಯ ಕಣಗಳು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂದು ಡಾ.ಕಟ್ಟೇಶ್‌ ಕಟ್ಟಿ ಹೇಳಿದರು. ಈಗಿರುವ ಪದ್ಧತಿಯಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆ ಕಿಮೋಥೆರಪಿ, ರೇಡಿಯೋಥೆರಪಿ ಮಾಡಿದಾಗ ಇಡೀ ದೇಹದ ಇಮ್ಯುನಿಟಿ ಕುಗ್ಗುತ್ತದೆ. ಔಷಧಗಳು ಟ್ಯೂಮರ್‌ ಸೆಲ್‌ ಬದಲಿಗೆ ರಕ್ತ, ಆರೋಗ್ಯವಂತ ಜೀವ ಕಣಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು ನ್ಯಾನೋ ಮೆಡಿಸಿನ್‌ ನೆರವಾಗುತ್ತದೆ ವಿವರಣೆ ನೀಡಿದರು.

ಬಂಗಾರ, ಬೆಳ್ಳಿಯಂಥ ಲೋಹದ ಕಣಗಳನ್ನು ಔಷಧದಲ್ಲಿ ಬಳಕೆ ಮಾಡುವ ಪರಂಪರೆ ಎಲ್ಲಾ ಔಷಧೀಯ ಪದ್ಧತಿಗಳಲ್ಲೂ ಇದೆ. ಭಾರತ, ಚೀನಾ, ಈಜಿಪ್ಟ್‌, ಗ್ರೀಕ್‌ ಎಲ್ಲಾ ಆಯುರ್ವೇದ ಪದ್ಧತಿಗಳಲ್ಲೂ ಚಿನ್ನವನ್ನು ಭಸ್ಮದ ರೂಪದಲ್ಲಿ ಚಿಕಿತ್ಸೆಗೆ ಬಳಸುತ್ತಿದ್ದರು. ಅದಕ್ಕೆ ರಜತ ಭಸ್ಮ, ಸ್ವರ್ಣಭಸ್ಮ ಎಂಬ ಹೆಸರುಗಳೂ ಇವೆ. ಇದೀಗ ನಾವು ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಚಿನ್ನ ಮತ್ತು ನ್ಯಾನೋ ಕಣಗಳನ್ನು ನ್ಯಾನೋ ಕೇರ್‌ ಔಷಧಗಳಲ್ಲಿ ಹದಗೊಳಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇವೆ ಡಾ. ಕಟ್ಟೇಶ್‌ ಕಟ್ಟಿ ತಿಳಿಸಿದರು.

ವಿಶ್ವದ ಮೊದಲ ಗ್ರೀನ್‌ ನ್ಯಾನೋ ವೈದ್ಯಕೀಯ ಕೇಂದ್ರ:
ಬೆಂಗಳೂರಿನ ಜಯನಗರ 4ನೇ ಬ್ಲಾಕ್‌ನಲ್ಲಿ ವಿಶ್ವದ ಮೊದಲ ಗ್ರೀನ್‌ ನ್ಯಾನೋ ವೈದ್ಯಕೀಯ ಕೇಂದ್ರವನ್ನು ಅನಂತಕುಮಾರ್ ಹೆಗಡೆ ಅವರು ಕದಂಬ ಸಂಸ್ಥೆಯಡಿ ಸ್ಥಾಪಿಸಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಔಷಧ ಅಭಿವೃದ್ಧಿಪಡಿಸಿದ್ದು, ಆಯುರ್ವೇದದಲ್ಲಿ ತಿಳಿಸಿರುವ ಗಿಡಮೂಲಿಕೆಗಳನ್ನು ಬಳಸಿಕೊಂಡು ವಿಶ್ವ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲು ಮುಂದಾಗಿದ್ದಾರೆ.

ವೈದ್ಯರಿಗೆ ತರಬೇತಿ:
ಯಾವುದೇ ವೈದ್ಯರಾಗಲಿ ನ್ಯಾನೋ ಮೆಡಿಸಿನ್ ಮೂಲಕ ರೋಗಿಗಳನ್ನು ಉಪಚರಿಸಲು ತರಬೇತಿ ಪಡೆಯಬಹುದು. ಸೂಕ್ತ ಸಂಖ್ಯೆಯ ವೈದ್ಯರು ಬಂದರೆ 3 ಅಥವಾ 6 ತಿಂಗಳ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಮಾಡಲು ಯೋಚಿಸಿದ್ದೇವೆ ಎಂದು ಡಾ.ಕಟ್ಟೇಶ್‌ ಕಟ್ಟಿ ಹೇಳಿದರು.

ಗ್ರೀನ್‌ ನ್ಯಾನೋ ಪಿತಾಮಹ ಡಾ.ಕಟ್ಟೇಶ್‌ ಕಟ್ಟಿ ಕುರಿತು..
ಧಾರವಾಡ ಮೂಲದವರಾದ ಡಾ.ಕಟ್ಟೇಶ್‌ ಕಟ್ಟಿ ಐಐಎಸ್ಸಿಯಲ್ಲಿ ಪದವಿ ಪಡೆದವರು. ಮೂಲತಃ ನ್ಯೂಕ್ಲಿಯರ್ ಮೆಡಿಸಿನ್‌ ತಜ್ಞರಾದ ಅವರು ಇದೀಗ ಅಮೆರಿಕದ ಮಿಸೌರಿ ವಿಶ್ವವಿದ್ಯಾಲಯದಲ್ಲಿ ಕ್ಯಾನ್ಸರ್‌ ನ್ಯಾನೋ ತಂತ್ರಜ್ಞಾನದ ನಿರ್ದೇಶಕರಾಗಿದ್ದಾರೆ. ಗ್ರೀನ್‌ ನ್ಯಾನೋ ಟೆಕ್ನಾಲಜಿ ಪರಿಚಯಿಸುವ ಮೂಲಕ ಗ್ರೀನ್‌ ನ್ಯಾನೋ ತಂತ್ರಜ್ಞಾನದ ಪಿತಾಮಹರಾಗಿ ಹೆಸರು ಮಾಡಿದ್ದಾರೆ. ಗ್ರೀನ್‌ ನ್ಯಾನೋತಂತ್ರಜ್ಞಾನದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆಣ್ವಿಕ ರಚನೆಯಲ್ಲಿ ಅಗಾಧ ಸಾಧನೆ ಮಾಡಿದ್ದಾರೆ. ಪೆಪ್ಟೈಡ್‌ ಒಂದಕ್ಕೆ ಕಟ್ಟೇಶ್‌ ಪೆಪ್ಟೈಡ್‌ ಎಂದೇ ಹೆಸರು ಇಡಲಾಗಿದೆ. ಅಲ್ಲದೆ ಗ್ರೀನ್‌ ನ್ಯಾನೋ ಕೇರ್‌ನಲ್ಲಿ ಸ್ಥಾಪಿಸಿರುವ ನ್ಯಾನೋ ರಿಯಾಕ್ಟರ್‌ಗೆ ಕಟ್ಟಿ ರಿಯಾಕ್ಟರ್‌ ಎಂದು ಹೆಸರು ಇಡಲಾಗಿದೆ.

ಹಲವು ಉತ್ಪನ್ನಗಳ ರಫ್ತು
ಸೌಂದರ್ಯ ವರ್ಧಕ, ಕುಕ್ಕೀಸ್‌, ಪಾನೀಯಗಳ ಪ್ರಿಮಿಕ್ಸ್‌ ಕ್ಯಾಪ್ಸುಲ್‌, ಹರ್ಬಲ್‌ ಟೀ ಕ್ಯಾಪ್ಸುಲ್‌, ಐಸ್‌ಕ್ರೀಂ ಮುಕ್ಸ್‌, ಹರ್ಬಲ್‌ ವಾಟರ್‌, ನ್ಯಾನೋ ಹರ್ಬಲ್‌ ಚಾಕೊಲೇಟ್, ಎನರ್ಜಿ ಬಾರ್, ವಿವಿಧ ರೀತಿಯ ಎಣ್ಣೆ, ತುಪ್ಪ, ಸ್ಯಾನಿಟೈಸರ್, ಕೇಶ ಆರೈಕೆ ಉತ್ಪನ್ನ, ಮಾಲಿನ್ಯವನ್ನು ಹೀರಿಕೊಳ್ಳುವ ಬಣ್ಣ ಸೇರಿ ಹಲವು ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದಾರೆ.

ರಾಜಕೀಯ ಜೀವನದಲ್ಲಿ ದಿನದಾಂತ್ಯಕ್ಕೆ ಬ್ಯಾಲೆನ್ಸ್‌ ಶೀಟ್‌ ನೋಡಿದರೆ ಎಷ್ಟು ಜನ ಭಾಷಣಕ್ಕೆ ಸೇರಿದ್ದರು, ಎಷ್ಟು ಜನ ಚಪ್ಪಾಳೆ ತಟ್ಟಿದರು ಎಂಬುದು ಮಾತ್ರ ಇತ್ತು. ಇದೀಗ ನನ್ನ ಜೀವನದಲ್ಲಿ ಎಷ್ಟು ಜೀವ ಉಳಿಸಿದ್ದೇನೆ ಎಂಬುದು ನನ್ನ ಬ್ಯಾಲೆನ್ಸ್‌ ಶೀಟ್‌ ಆಗಲಿದೆ. ನ್ಯಾನೋ ಎಂಬ ವೇದಿಕೆ ಒಂದು ಕ್ಷೇತ್ರಕ್ಕೆ, ಉತ್ಪನ್ನಕ್ಕೆ ಸೀಮಿತವಾಗಿಲ್ಲ. ನೆಲದಿಂದ ಆಂತರಿಕ್ಷದವರೆಗೆ ಎಲ್ಲದರಲ್ಲೂ ಬಳಕೆ ಮಾಡಬಹುದು. – ಅನಂತಕುಮಾರ್‌ ಹೆಗಡೆ, ಕೇಂದ್ರದ ಮಾಜಿ ಸಚಿವ, ಕದಂಬ ಗ್ರೀನ್‌ ನ್ಯಾನೋ ಕೇರ್ ಸಂಸ್ಥಾಪಕರು

Ad Widget

ಬಿಗ್ ನ್ಯೂಸ್

Puttur Dasara-92ನೇ ವರ್ಷದ ಶಾರದೋತ್ಸವಕ್ಕೆ ಹೊಸ ರೂಪ; ‘ಪುತ್ತೂರು ದಸರಾ’ ನಾಮಾಂಕಿತದಲ್ಲಿ ನವರಾತ್ರಿಯ ವೈಭವದ ಆಚರಣೆ

Published

on



Ad Widget

Ad Widget

Ad Widget

Ad Widget

ಮೈಸೂರು, ಮಡಿಕೇರಿ ಹಾಗೂ ಕುದ್ರೋಳಿಯಂತೆ ಪುತ್ತೂರಿನಲ್ಲೂ ಹಿಂದೆ ವೈಭವದಿಂದ ದಸರಾ ಉತ್ಸವಗಳು ನಡೆಯುತ್ತಿದ್ದವು. ಕಾಲಕ್ರಮೇಣ ಆ ಪರಂಪರೆಯ ವೈಭವ ಕಡಿಮೆಯಾಗಿದ್ದರೂ, ಕಳೆದ ಮೂರು ವರ್ಷಗಳಿಂದ ಶ್ರೀ ಶಾರದೋತ್ಸವದ ಮೂಲಕ ಪುತ್ತೂರಿನ ದಸರಾ ಪರಂಪರೆಯನ್ನು ಮರುಕಳಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಈ ಉತ್ಸವಕ್ಕೆ ಮತ್ತಷ್ಟು ವಿಶಾಲ ರೂಪ ನೀಡುವ ಉದ್ದೇಶದಿಂದ ಈ ವರ್ಷದಿಂದ ಪುತ್ತೂರು ಶಾರದೋತ್ಸವವನ್ನು ‘ಪುತ್ತೂರು ದಸರಾ’ ಎಂಬ ನಾಮಾಂಕಿತದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಮೈಸೂರು, ಮಡಿಕೇರಿ ಹಾಗೂ ಕುದ್ರೋಳಿಯಂತೆ ಪುತ್ತೂರಿನಲ್ಲೂ ಹಿಂದೆ ವೈಭವದಿಂದ ದಸರಾ ಉತ್ಸವಗಳು ನಡೆಯುತ್ತಿದ್ದವು. ಕಾಲಕ್ರಮೇಣ ಆ ಪರಂಪರೆಯ ವೈಭವ ಕಡಿಮೆಯಾಗಿದ್ದರೂ, ಕಳೆದ ಮೂರು ವರ್ಷಗಳಿಂದ ಶ್ರೀ ಶಾರದೋತ್ಸವದ ಮೂಲಕ ಪುತ್ತೂರಿನ ದಸರಾ ಪರಂಪರೆಯನ್ನು ಮರುಕಳಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಈ ಉತ್ಸವಕ್ಕೆ ಮತ್ತಷ್ಟು ವಿಶಾಲ ರೂಪ ನೀಡುವ ಉದ್ದೇಶದಿಂದ ಈ ವರ್ಷದಿಂದ ಪುತ್ತೂರು ಶಾರದೋತ್ಸವವನ್ನು ‘ಪುತ್ತೂರು ದಸರಾ’ ಎಂಬ ನಾಮಾಂಕಿತದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.11ರಿಂದ 21ರವರೆಗೆ 92ನೇ ವರ್ಷದ ನವರಾತ್ರಿ ಪೂಜೆ ಹಾಗೂ ಶ್ರೀ ಶಾರದೋತ್ಸವ ವೈಭವದಿಂದ ನಡೆಯಲಿದೆ.

Ad Widget

Ad Widget <> Ad Widget

ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.21ರಂದು 20ಕ್ಕೂ ಅಧಿಕ ಕಲಾತಂಡಗಳು, ಸಾವಿರಾರು ಕುಣಿತ ಭಜನಾ ತಂಡಗಳು ಹಾಗೂ ವಿವಿಧ ವಾದ್ಯಘೋಷಗಳೊಂದಿಗೆ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಇದರೊಂದಿಗೆ ‘ಪುತ್ತೂರು ದಸರಾ’ ಸಂಪನ್ನಗೊಳ್ಳಲಿದೆ.



Ad Widget

ದಸರಾ ಪರಂಪರೆಗೆ ಹೊಸ ರೂಪ
ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಮಾತನಾಡಿ, ಹಲವು ಪವಾಡಗಳಿಗೆ ಸಾಕ್ಷಿಯಾಗಿರುವ ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ ಕಳೆದ ಮೂರು ವರ್ಷಗಳಿಂದ ಶಾರದೋತ್ಸವವನ್ನು ಗತಕಾಲದ ವೈಭವವನ್ನು ಮರುಕಳಿಸುವ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದರು.

Ad Widget

Ad Widget

ಈ ಬಾರಿ ಶಾರದೋತ್ಸವಕ್ಕೆ ‘ಪುತ್ತೂರು ದಸರಾ’ ಎಂಬ ನಾಮಾಂಕಿತ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಪುತ್ತೂರು ತಾಲೂಕಿನ ದಸರಾ ಮಹೋತ್ಸವವಾಗಿ ರೂಪಿಸುವ ಉದ್ದೇಶವಿದೆ. ಈ ಕುರಿತು ಮೂರು ವರ್ಷಗಳ ಹಿಂದೆಯೇ ಸಮಿತಿಯಲ್ಲಿ ಚಿಂತನೆ ನಡೆದಿತ್ತು ಎಂದು ಅವರು ತಿಳಿಸಿದರು.

ಪುತ್ತೂರಿನಲ್ಲೇ ದಸರಾ ವೈಭವ
ಹಿಂದೆ ದಸರಾ ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಳ್ಳಲು ಪುತ್ತೂರಿನ ಜನರು ಮಂಗಳೂರು ಹಾಗೂ ಮಡಿಕೇರಿಗೆ ತೆರಳುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಪುತ್ತೂರು ಶಾರದೆಯ ವೈಭವದ ಶೋಭಾಯಾತ್ರೆ ಜನರ ಗಮನ ಸೆಳೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಹೊಸತನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಸೀತಾರಾಮ ರೈ ಹೇಳಿದರು.

ಪುತ್ತೂರಿನಲ್ಲೇ ಜನರು ದಸರಾ ವೈಭವವನ್ನು ಕಣ್ತುಂಬಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ ಶಾರದೋತ್ಸವಕ್ಕೆ ‘ಪುತ್ತೂರು ದಸರಾ’ ಎಂಬ ವಿಶಾಲ ರೂಪ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದು ಪುತ್ತೂರು ತಾಲೂಕಿನ ಜನತೆಯ ದಸರಾ ಮಹೋತ್ಸವವಾಗಿ ಬೆಳೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹತ್ತು ದಿನ ಧಾರ್ಮಿಕ-ಸಾಂಸ್ಕೃತಿಕ ಸಂಭ್ರಮ
ಅ.11ರಿಂದ ಆರಂಭವಾಗುವ ಉತ್ಸವದಲ್ಲಿ ನವರಾತ್ರಿ ಪೂಜೆ, ಶ್ರೀ ಶಾರದಾ ಆರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಚಂಡಿಕಾ ಹೋಮ ಸೇರಿದಂತೆ ವಿಶೇಷ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರು ಹಾಗೂ ಸಾರ್ವಜನಿಕರನ್ನು ರಂಜಿಸಲಿವೆ.

ಅ.21ರಂದು ನಡೆಯುವ ಸಮಾರೋಪದಂದು 20ಕ್ಕೂ ಅಧಿಕ ಪ್ರಸಿದ್ಧ ಕಲಾತಂಡಗಳು, ಸಾವಿರಾರು ಕುಣಿತ ಭಜನಾ ತಂಡಗಳು ಹಾಗೂ ವಿವಿಧ ವಾದ್ಯಘೋಷಗಳು ಶೋಭಾಯಾತ್ರೆಗೆ ಮೆರುಗು ನೀಡಲಿವೆ. ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆಯೊಂದಿಗೆ ಈ ಬಾರಿಯ ‘ಪುತ್ತೂರು ದಸರಾ’ ವೈಭವಕ್ಕೆ ತೆರೆ ಬೀಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ದಸರಾ ಸಮಿತಿಯ ಗೌರವ ಮಾರ್ಗದರ್ಶಕ ಡಾ. ಸುರೇಶ್ ಪುತ್ತೂರಾಯ, ಉಪಾಧ್ಯಕ್ಷ ದಯಾನಂದ ಪಿ., ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ವಸಂತ್ ಕುಮಾರ್ ಹಾಗೂ ಶೋಭಾಯಾತ್ರೆಯ ಸಂಚಾಲಕರಾದ ಕೃಷ್ಣ ಎಂ. ಅಳಿಕೆ ಮತ್ತು ನವೀನ್ ಕುಲಾಲ್ ಪುತ್ತೂರು ಉಪಸ್ಥಿತರಿದ್ದರು.

Ad Widget
Continue Reading

ಸ್ಥಳೀಯ

Manila-ಮಾಣಿಲದಲ್ಲಿ ಸ್ವಯಂಪ್ರೇರಿತ ಶ್ರಮದಾನ

Published

on



Ad Widget

Ad Widget

Ad Widget

Ad Widget

ಮಾಣಿಲ ಗ್ರಾಮದ ಮುರುವ ಕೊಮ್ಮುಂಜೆ ರಸ್ತೆಯಲ್ಲಿ ಮುರುವ ಬಸ್ ನಿಲ್ದಾಣದಿಂದ ಅಂಗನವಾಡಿ ಬಳಿವರೆಗೆ ”ಸ್ವಚ್ಛತೆಯೇ ಸೇವೆ-2026” ಅಭಿಯಾನದಡಿ ಗುರುವಾರದಂದು ಸ್ವಯಂಪ್ರೇರಿತ ಶ್ರಮದಾನ ಕಾರ್ಯಕ್ರಮ ನಡೆಯಿತು.

Ad Widget

Ad Widget

Ad Widget

Ad Widget

ಮಾಣಿಲ : ಮಾಣಿಲ ಗ್ರಾಮದ ಮುರುವ ಕೊಮ್ಮುಂಜೆ ರಸ್ತೆಯಲ್ಲಿ ಮುರುವ ಬಸ್ ನಿಲ್ದಾಣದಿಂದ ಅಂಗನವಾಡಿ ಬಳಿವರೆಗೆ ”ಸ್ವಚ್ಛತೆಯೇ ಸೇವೆ-2026” ಅಭಿಯಾನದಡಿ ಗುರುವಾರದಂದು ಸ್ವಯಂಪ್ರೇರಿತ ಶ್ರಮದಾನ ಕಾರ್ಯಕ್ರಮ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ಶ್ರಮದಾನದಲ್ಲಿ ಗ್ರಾಮಸ್ಥರಾದ ಚಂದ್ರಶೇಖರ ರಾವ್ ಕೊಮ್ಮುಂಜೆ, ರಾಜಾರಾಮ ನಾಯಕ್ ಮುರುವ, ಬಾಬು ಮೂಲ್ಯ ಮುರುವ, ಭರತ್ ಕುಮಾರ್ ಬೈಕುಂಜ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ಕುಮಾರ ಕಮ್ಮಜೆ, ಗ್ರಾ.ಪಂ ಕಾರ್ಯದರ್ಶಿ ರಾಮ ನಾಯ್ಕ ಎಮ್, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಜಗದೀಶ್ ನಾಯಕ್, ಭವಾನಿ.ಪಿ, ಮಮತಾ ಎಸ್, ಅವಿನಾಶ್ ಯಂ, ನೇತ್ರಾವತಿ ಒಕ್ಕೂಟದ ಪೂರ್ಣಿಮ ಬಿ, ಕೃಷಿ ಸಖಿ ಪಾರ್ವತಿ, ಪಶು ಸಖಿ ಬಾಲಮಣಿ, ದಿಶಾ ಕೊಂದಲಕೋಡಿ ಭಾಗವಹಿಸಿದರು.

Ad Widget

Ad Widget <> Ad Widget

Ad Widget
Continue Reading

ಬಿಗ್ ನ್ಯೂಸ್

Master Anand-ಕಾರಂತರ ಬಾಲವನ ಪ್ರಶಸ್ತಿಗೆ ಆಯ್ಕೆಯಾದ ಮಾಸ್ಟರ್ ಪ್ಲಾನರಿಯ ಮಾಸ್ಟರ್ ಆನಂದ್

Published

on



Ad Widget

Ad Widget

Ad Widget

Ad Widget

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರಿನ ಬಾಲವನದಲ್ಲಿ ಪ್ರದಾನ ಮಾಡಲಾಗುವ ಪ್ರತಿಷ್ಠಿತ ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026’ಕ್ಕೆ ಪುತ್ತೂರಿನ ಶ್ರೇಷ್ಠ ಸಿವಿಲ್ ಇಂಜಿನಿಯರಿಂಗ್ ಸಾಧಕ ಹಾಗೂ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಮುಖ್ಯಸ್ಥ ಎಸ್.ಕೆ. ಆನಂದ್ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರಿನ ಬಾಲವನದಲ್ಲಿ ಪ್ರದಾನ ಮಾಡಲಾಗುವ ಪ್ರತಿಷ್ಠಿತ ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026’ಕ್ಕೆ ಪುತ್ತೂರಿನ ಶ್ರೇಷ್ಠ ಸಿವಿಲ್ ಇಂಜಿನಿಯರಿಂಗ್ ಸಾಧಕ ಹಾಗೂ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಮುಖ್ಯಸ್ಥ ಎಸ್.ಕೆ. ಆನಂದ್ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ವೈಜ್ಞಾನಿಕ ಮನೋಭಾವ, ಪರಿಸರ ಕಾಳಜಿ ಹಾಗೂ ಸುಸ್ಥಿರ ಜೀವನಶೈಲಿಯನ್ನು ತಮ್ಮ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡಿರುವ ಎಸ್.ಕೆ. ಆನಂದ್ ಅವರು, ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಮೂಲಕ ಮರಕ್ಕೆ ಪರ್ಯಾಯವಾದ ‘ಕಾಂಕೂಡ್’ (Concood™) ಎಂಬ ಉತ್ಪನ್ನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆವಿಷ್ಕಾರದ ಮೂಲಕ ಕಳೆದ ಹಲವು ದಶಕಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮರಮುಟ್ಟುಗಳ ಬಳಕೆಯನ್ನು ತಪ್ಪಿಸಿ, ಲಕ್ಷಾಂತರ ಮರಗಳನ್ನು ಕೊಡಲಿಗೆ ಬಲಿಯಾಗದಂತೆ ಸಂರಕ್ಷಿಸಿದ ಸಾಧನೆ ಅವರದ್ದಾಗಿದೆ.

Ad Widget

Ad Widget <> Ad Widget

1951ರಲ್ಲಿ ಪುತ್ತೂರಿನಲ್ಲಿ ಜನಿಸಿದ ಎಸ್.ಕೆ. ಆನಂದ್ ಅವರು ದಿವಂಗತ ಎಸ್.ಕೆ. ಈಶ್ವರ ಭಟ್ ಹಾಗೂ ಶಾರದಾ ಭಟ್ ದಂಪತಿಯ ಪುತ್ರ. ಮಂಗಳೂರಿನ ಕೆ.ಆರ್.ಇ.ಸಿ. (ಪ್ರಸ್ತುತ NITK, ಸುರತ್ಕಲ್)ಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಹಾಗೂ ಎಂ.ಟೆಕ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದ ಅವರು, 1975ರಲ್ಲಿ ತಂದೆಯವರು ಸ್ಥಾಪಿಸಿದ್ದ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡರು. ಉನ್ನತ ಅವಕಾಶಗಳಿದ್ದರೂ ದೊಡ್ಡ ನಗರಗಳತ್ತ ತೆರಳದೆ ಪುತ್ತೂರಿನಲ್ಲೇ ನೆಲೆಸಿ, ಸುಸ್ಥಿರ ನಿರ್ಮಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.



Ad Widget

‘ಕಾಂಕೂಡ್’ ಮೂಲಕ ಮರಕ್ಕೆ ಪರ್ಯಾಯ
ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮನೆ, ಕಚೇರಿ, ಶಾಲಾ-ಕಾಲೇಜುಗಳ ನಿರ್ಮಾಣಕ್ಕೆ ದಾರಂದ, ಕಿಟಕಿ, ಮೇಲ್ಛಾವಣಿಯ ತೊಲೆ, ಬೆಂಚ್-ಡೆಸ್ಕ್ ಸೇರಿದಂತೆ ವಿವಿಧ ಕಾರ್ಯಗಳಿಗೆ ಅಪಾರ ಪ್ರಮಾಣದ ಮರಮುಟ್ಟುಗಳನ್ನು ಬಳಸಲಾಗುತ್ತಿತ್ತು. ಈ ಸಮಸ್ಯೆಗೆ ಪರಿಸರಸ್ನೇಹಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಆನಂದ್ ಅವರು ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಕುರಿತು ಸುದೀರ್ಘ ಸಂಶೋಧನೆ ನಡೆಸಿ, ಮರದ ಬಲಕ್ಕೆ ಪರ್ಯಾಯವಾಗಬಲ್ಲ ಕಾಂಕ್ರೀಟ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದರು.

Ad Widget

Ad Widget

‘ಕಾಂಕೂಡ್’ ಹೆಸರಿನ ಈ ಉತ್ಪನ್ನಗಳಿಗೆ 2007ರಲ್ಲಿ ಭಾರತ ಸರ್ಕಾರದಿಂದ ಅಧಿಕೃತ ಟ್ರೇಡ್‌ಮಾರ್ಕ್ ನೋಂದಣಿಯೂ ದೊರೆತಿದೆ. ಇಂದು ವಿವಿಧ ಅಗತ್ಯಗಳಿಗೆ ಬಳಸಬಹುದಾದ 250ಕ್ಕೂ ಅಧಿಕ ಕಾಂಕ್ರೀಟ್ ಪರಿಕರಗಳು ‘ಮಾಸ್ಟರ್ ಪ್ಲಾನರಿ’ಯಲ್ಲಿ ಲಭ್ಯವಿವೆ.

36.5 ಲಕ್ಷಕ್ಕೂ ಅಧಿಕ ಮರಗಳ ಸಂರಕ್ಷಣೆ
‘ಮಾಸ್ಟರ್ ಪ್ಲಾನರಿ’ ಸಂಸ್ಥೆಯಲ್ಲಿ ಪ್ರತಿದಿನ ಸರಾಸರಿ 200 CFTಗೂ ಅಧಿಕ ಕಾಂಕ್ರೀಟ್ ಪರಿಕರಗಳನ್ನು ಉತ್ಪಾದಿಸಲಾಗುತ್ತಿದ್ದು, ಈ ಪರಿಕರಗಳ ಬಳಕೆಯಿಂದ ಪ್ರತಿದಿನ ಸರಾಸರಿ 20 ಬೃಹತ್ ಮರಗಳು ಕಡಿಯುವುದನ್ನು ತಪ್ಪಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಕಳೆದ 50 ವರ್ಷಗಳ ಈ ಸೇವೆಯ ಲೆಕ್ಕಾಚಾರದಂತೆ, ಇದುವರೆಗೆ ಸುಮಾರು 36.5 ಲಕ್ಷಕ್ಕೂ ಅಧಿಕ ಬೃಹತ್ ಮರಗಳು ಕೊಡಲಿಗೆ ಬಲಿಯಾಗುವುದನ್ನು ತಪ್ಪಿಸಿ ಸಂರಕ್ಷಿಸಲಾಗಿದೆ. ಶಾಲಾ-ಕಾಲೇಜುಗಳು, ಸರ್ಕಾರಿ ಸಂಸ್ಥೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಮರದ ಪರ್ಯಾಯವಾಗಿ ‘ಕಾಂಕೂಡ್’ ಉತ್ಪನ್ನಗಳನ್ನು ಬಳಸಲಾಗುತ್ತಿದೆ.

ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಅವರು ದೇಶಾದ್ಯಂತ ನಿರ್ಮಿಸಿರುವ 30ಕ್ಕೂ ಅಧಿಕ ತೂಗು ಸೇತುವೆಗಳಲ್ಲೂ ಮರದ ಹಲಗೆಗಳ ಬದಲಿಗೆ ‘ಕಾಂಕೂಡ್’ ಪರಿಕರಗಳನ್ನು ಬಳಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ಅರಣ್ಯ ಇಲಾಖೆ ಸೇರಿದಂತೆ ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲೂ ಈ ತಂತ್ರಜ್ಞಾನ ಬಳಕೆಯಾಗಿದೆ.

50 ಎಕರೆಗೂ ಅಧಿಕ ಹಸಿರು ಕಾಡು
ಮರಗಳ ಸಂರಕ್ಷಣೆಯ ಜತೆಗೆ ವೈಯಕ್ತಿಕವಾಗಿಯೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿರುವ ಎಸ್.ಕೆ. ಆನಂದ್ ಅವರು ಸೊರಕೆ ಹಾಗೂ ಕುಡಿಪಾಡಿಯಲ್ಲಿ ‘ಕುಡಿಕಾಡು’ ಹೆಸರಿನಲ್ಲಿ 50 ಎಕರೆಗೂ ಅಧಿಕ ಪ್ರದೇಶದಲ್ಲಿ ಸಾವಿರಾರು ಗಿಡ-ಮರಗಳನ್ನು ಬೆಳೆಸಿ ಹಸಿರು ಕಾಡು ನಿರ್ಮಿಸಿದ್ದಾರೆ.

‘ಮಾಸ್ಟರ್ ಪ್ಲಾನರಿ’ ಸಂಸ್ಥೆಯಡಿ 9 ಕೇಂದ್ರಗಳಲ್ಲಿ 24 ಸಂಸ್ಥೆಗಳ ಮೂಲಕ 800ಕ್ಕೂ ಅಧಿಕ ಮಂದಿಗೆ ನೇರ ಉದ್ಯೋಗ ಕಲ್ಪಿಸಲಾಗಿದೆ. ಇವರಲ್ಲಿ 200ಕ್ಕೂ ಅಧಿಕ ಮಹಿಳೆಯರು ಹಾಗೂ 20ಕ್ಕೂ ಅಧಿಕ ಭಿನ್ನಸಾಮರ್ಥ್ಯ ಹೊಂದಿರುವವರು ಸೇರಿದ್ದಾರೆ. ಪರೋಕ್ಷವಾಗಿ 3,000ಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಿರುವುದಾಗಿ ತಿಳಿಸಲಾಗಿದೆ.

ಸಂಸ್ಥೆಯ ಸಿಬ್ಬಂದಿಯ ಮಕ್ಕಳ ಆರೈಕೆ ಹಾಗೂ ಶಿಕ್ಷಣಕ್ಕಾಗಿ ಆವರಣದಲ್ಲೇ ಅಂಗನವಾಡಿ ಮಾದರಿಯ ಪ್ಲೇ ಸ್ಕೂಲ್ ಆರಂಭಿಸಿರುವುದು ಅವರ ಸಾಮಾಜಿಕ ಕಾಳಜಿಗೆ ಮತ್ತೊಂದು ಉದಾಹರಣೆಯಾಗಿದೆ.

ಚಾಮರಾಜನಗರ ಹಾಗೂ ನಾಗರಹೊಳೆ ಭಾಗದ ಅರಣ್ಯವಾಸಿ ಗಿರಿಜನರಿಗೆ 8,000ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿರುವ ಅವರು, ಸುಳ್ಯದಲ್ಲಿ ಕಳೆದ 20 ವರ್ಷಗಳಿಂದ ‘ಸ್ನೇಹ ಶಿಕ್ಷಣ ಸಂಸ್ಥೆ’ ಮೂಲಕ ಗ್ರಾಮೀಣ ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ನೀಡುತ್ತಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಆನಂದ್ ಅವರು ‘ಭಾವಲೋಕ’ ಎಂಬ ಕವನ ಸಂಕಲನ ಸೇರಿದಂತೆ ಹಲವು ಭಾವಗೀತೆಗಳನ್ನು ರಚಿಸಿ ಪ್ರಕಟಿಸಿದ್ದಾರೆ.

ಎಸ್.ಕೆ. ಆನಂದ್ ಹಾಗೂ ರೇಖಾ ಆನಂದ್ ದಂಪತಿಯ ನಾಲ್ವರು ಮಕ್ಕಳಾದ ಅಕ್ಷಯ್, ಅರ್ಜುನ್, ಆಕಾಶ್ ಹಾಗೂ ಆರತಿ ಅವರು ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಕುಟುಂಬದ ಸುಸ್ಥಿರ ಹಾಗೂ ಪರಿಸರಸ್ನೇಹಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಹಲವು ಪ್ರಶಸ್ತಿಗಳ ಗರಿ
ಪರಿಸರ ಸೇವೆಗಾಗಿ 2003ರಲ್ಲಿ ‘ಪರಿಸರಪ್ರೇಮಿ’ ಪ್ರಶಸ್ತಿ, 2008ರಲ್ಲಿ ICI ವತಿಯಿಂದ ‘ಕರ್ನಾಟಕದ ಅತ್ಯುತ್ತಮ ಕಾಂಕ್ರೀಟ್ ಇಂಜಿನಿಯರ್’ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಜೆಸಿಐ ‘TOBIP’ ಹಾಗೂ ACCE-UltraTech ಪ್ರಶಸ್ತಿಗಳು ಎಸ್.ಕೆ. ಆನಂದ್ ಅವರಿಗೆ ಸಂದಿವೆ.

ಬಾಲವನ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ, ಉಪವಿಭಾಗಾಧಿಕಾರಿ ಹಾಗೂ ಬಾಲವನ ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಸ್ಟೆಲ್ಲಾ ವರ್ಗೀಸ್, ತಾಲೂಕು ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಹಿರಿಯ ಸಾಹಿತಿಗಳಾದ ವಿ.ಬಿ. ಆರ್ತಿಕಜೆ ಹಾಗೂ ರೆ. ವಿಜಯ್ ಹಾರ್ವಿನ್ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಎಸ್.ಕೆ. ಆನಂದ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಅಕ್ಟೋಬರ್ 10, 2026ರಂದು ಪುತ್ತೂರಿನ ಐತಿಹಾಸಿಕ ಬಾಲವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026’ ಪ್ರದಾನ ಮಾಡಿ ಎಸ್.ಕೆ. ಆನಂದ್ ಅವರನ್ನು ಗೌರವಿಸಲಾಗುವುದು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading